UN NETWORKS
ಹರೇಕಳ: ಮಾನವನ ಅಂತಿನ ತಾಣವಾಗಿರುವ ಹಿಂದು ರುದ್ರಭೂಮಿ ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಗ್ರಾಮಸ್ಥರು ಹಮ್ಮಿಕೊಂಡಿರುವ ಕಾರ್ಯಕ್ರಮ ಅತ್ಯಂತ ಔಚಿತ್ಯಪೂರ್ಣ ಎಂದು ದೇರಳಕಟ್ಟೆ ವಿದ್ಯಾರತ್ನ ಶಾಲೆಯ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಅಭಿಪ್ರಾಯಪಟ್ಟರು.
ಹಿಂದು ಧಾರ್ಮಿಕ ಸೇವಾ ಸಮಿತಿ ಆಶ್ರಯದಲ್ಲಿ ಮೂರು ಗ್ರಾಮಸ್ಥರ ಸಹಕಾರದಲ್ಲಿ ಭಾನುವಾರ ಹರೇಕಳ ಹಿಂದು ರುದ್ರಭೂಮಿಯಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹರೇಕಳದಲ್ಲಿರುವ ರುದ್ರಭೂಮಿ ಪಾವೂರು, ಅಂಬ್ಲಮೊಗರು ಮತ್ತು ಹರೇಕಳ ಗ್ರಾಮಕ್ಕೆ ಸಂಬಂಧಪಟ್ಟಿದ್ದು, ಇದರ ನಿರ್ವಹಣೆ ಮುಖ್ಯ. ಪ್ರಧಾನಮಂತ್ರಿಯ ಸ್ವಚ್ಛ ಭಾರತ್ ಅಭಿಯಾನದಡಿ ರ್ಸಾಜನಿಕ ಸ್ಥಳದಲ್ಲೂ ಸ್ವಚ್ಛತಾ ಕಾರ್ಯ ನಡೆಸಿದಾಗ ಜನರಲ್ಲಿ ಇನ್ನಷ್ಟು ಜಾಗೃತಿ ಮೂಡಿಸಲು ಸಾಧ್ಯ ಎಂದು ಹೇಳಿದರು.
ಪಾವೂರು ಗ್ರಾ.ಪಂ. ವಾಮನ್‍ರಾಜ್ ಮಾತನಾಡಿ, ಮೋಕ್ಷ ಪ್ರಾಪ್ತಿ ನೀಡುವ ಹಿಂದು ರುದ್ರಭೂಮಿಗಳು ಎಲ್ಲ ಗ್ರಾಮಗಳಲ್ಲಿ ಇಲ್ಲದಿದ್ದರೂ ಹರೇಕಳದಲ್ಲಿದ್ದು ಅಭಿವೃದ್ಧಿಪಡಿಸಿ ಉಳಿಸುವ ನಿಟ್ಟಿನಲ್ಲಿ ಯುವಕರು ಪಣ ತೊಟ್ಟಿರುವುದು ಶ್ಲಾಘನೀಯ, ಇಂತಹ ಕಾರ್ಯಗಳಲ್ಲಿ ಹಿಂದು ಸಮುದಾಯ ಕೈಜೋಡಿಸುವ ಅವಶ್ಯಕತೆಯಿದೆ’ ರುದ್ರಭೂಮಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗಣಪ ಮಾಸ್ಟರ್, ಕಾರ್ಯದರ್ಶಿಗಳಾದ ಪುರುಷೋತ್ತಮ ಮಾಣೈ ಹರೀಶ್ ಆಚಾರ್ಯ, ಶ್ರೀಧರ್ ಆಳ್ವ, ಕೋಶಾಧಿಕಾರಿ ಜನಾರ್ದನ ಆಚಾರ್ಯ, ಪಾವೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಾಮನ್‍ರಾಜ್, ಪ್ರಮುಖರಾದ ಪ್ರಸಾದ್ ರೈ ಕಲ್ಲಾಯಿ, ಸುರೇಶ್ ಶೆಟ್ಟಿ ಅಂಬ್ಲಮೊಗರು, ಶಿವರಾಮ ಶೆಟ್ಟಿ ಕೊಳ್ಕೆ, ಶಿಬಿರ ಸಂಯೋಜಕ ಬಾಸ್ಕರ ರೈ ದೆಬ್ಬೇಲಿ, ಹಿಂದೂ ಧಾರ್ಮಿಕ ಸೇವಾ ಸಮಿತಿ ಅಧ್ಯಕ್ಷ ಜನಾರ್ದನ ಹರಿದೋಟ, ಕಾರ್ಯದರ್ಶಿ ನಿತಿನ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.


