UN NETWORKS
ಉಳ್ಳಾಲ: ಎಸ್ಕೆ ಎಸ್ಸೆಸ್ಸೆಫ್ ಸಂಘಟನೆ ಕೊಡಗು ಪ್ರದೇಶದಲ್ಲಿ ಪ್ರಕೃತಿ ವಿಕೋಪವಾದಾಗ ಅಲ್ಲಿಗೆ ದಾವಿಸಿ ನೇರೆ ಸಂತ್ರಸ್ತ 400 ಮಂದಿಯನ್ನು ರಕ್ಷಿಸಿಸಿದೆವೆ. ಇಂತಹ ಜನ ಸ್ನೇಹಿ ಸೇವೆ ಮಾಡುವ ಮೂಲಕ ಎಸ್ಕೆಎಸ್ಸೆಸ್ಸೆಫ್ ಸಂಘಟನೆ ಯಶಸ್ವಿಯಾಗಿ ಮುಂದುವರಿಯುತ್ತಿದೆ ಎಂದು ಎಸ್ಕೆ ಎಸ್ಸೆಸ್ಸೆಫ್ ಮಂಗಳೂರು ವಲಯ ಅಧ್ಯಕ್ಷ ರಿಯಾಝ್ ರಹ್ಮಾನಿ ಹೇಳಿದರು.
ಅವರು ಎಸ್ಕೆಎಸ್ಸೆಸ್ಸೆಫ್ ಮಂಗಳೂರು ವಲಯ ವತಿಯಿಂದ ವಿಖಾಯ ಸ್ಥಾಪಕ ದಿನದ ಪ್ರಯುಕ್ತ ದೇರಳಕಟ್ಟೆಯ ಕಣಚೂರು ಆಸ್ಪತ್ರೆಯ ರೋಗಿಗಳಿಗೆ ಹಣ್ಣುಹಂಪಲು ವಿತರಿಸಿ ಮಾತನಾಡಿದರು.ಎಸ್ಕೆ ಎಸ್ಸೆಸ್ಸೆಫ್ ವಿಖಾಯ ವಿಭಾಗ ಊರಿನಿಂದ ಬಂದ ಹಾಜ್ಜಾಜಿಗಳ ಸೇವೆ ಮಾಡುವ ಮೂಲಕ ವಿದೇಶದಲ್ಲೂ ಸಕ್ರಿಯವಾಗಿದೆ. ಅಸೈಯದ್ ಅಬೂಬಕ್ಕರ್ ಸಿದ್ದೀಕ್ ತಂಞಳ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ದೇರಳಕಟ್ಟೆ ಮದರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಇಸ್ಮಾಯಿಲ್ ಹಾಜಿ, ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಕೋಶಾಧಿಕಾರಿ ಅಮೀರ್ ತಂಞಳ್ ಕಿನ್ಯ, ದೇರಳಕಟ್ಟೆ ಬದ್ರಿಯ ಜುಮಾ ಮಸೀದಿ ಖತೀಬ್ ಶರೀಷ್ , ಕ್ಲಸ್ಟರ್ ಅಧ್ಯಕ್ಷ ಸೈಯದ್ ಅಲಿ ದೇರಳಕಟ್ಟೆ , ಅನ್ಸಾರುಲ್ ಮುಸ್ಲಿಮಿನ್ ಅಸೋಸಿಯೇಷನ್ ಅಧ್ಯಕ್ಷ ಇಲ್ಯಾಸ್ ಹಾಜಿ, ಮಂಗಳೂರು ವಲಯ ಪ್ರ.ಕಾರ್ಯದರ್ಶಿ ಹಾಫಿಲ್ ಝೈನ್ ಸಖಾಫಿ , ಎಸ್ಕೆ ಎಸ್ಸೆಸ್ಸೆಫ್ ಕೇಂದ್ರ ಸಮಿತಿ ಸದಸ್ಯ ತಬೂಕ್ ಅಬ್ದುರ್ರಹ್ಮಾನ್ ದಾರಿಮಿ, ವಿಖಾಯ ಮಂಗಳೂರು ವಲಯ ಅಧ್ಯಕ್ಷ ಸ್ವಾಲಿ ಕಣ್ಣೂರು, ವಿಖಾಯ ಕನ್ವೀನರ್ ಹಸೈನಾರ್ ಉರುಮನೆ, ಎಸ್ಕೆ ಎಸ್ಸೆಸ್ಸೆಫ್ ದೇರಳಕಟ್ಟೆ ರೇಂಜ್ ಅಧ್ಯಕ್ಷ ನೌಫಾಲ್ ಬಿ. ಕಸ್ಟರ್ ಪ್ರ.ಕಾರ್ಯದರ್ಶಿ ನೌಷಾದ್ ಬದ್ಯಾರ್ ಮುಂತಾದವರು ಉಪಸ್ಥಿತರಿದ್ದರು.


