UN NETWORKS
ಉಳ್ಳಾಲ: ವ್ಯಸನಿಗಳಾಗಲು ಹಲವು ಕಾರಣಗಳಿವೆ. ನೋವು, ಖುಷಿ ಸಂದರ್ಭ ಅಮಲಿಗೆ ಮೊರೆ ಹೋಗುತ್ತಾರೆ. ಆದರೆ ಇಂತಹ ಸಂದರ್ಭ ದುಷ್ಚಟಕ್ಕೆ ಬಲಿಯಾಗುವುದು ಸಲ್ಲದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಲ್ಲನ್ನ ಗೌಡ ಅಭಿಪ್ರಾಯಪಟ್ಟರು.ಕೊಲ್ಯ ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲಿ ನಡೆದ 1363ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಯಾವುದೋ ಕಾರಣಕ್ಕೆ ಅಮಲು ವ್ಯಸನ ನ್ಯಾಯಾಲಯಕ್ಕೆ ಬರುವ ಅಪರಾಧಿಗಳಲ್ಲಿ ಶೇ.70-80 ಅಪರಾಧಿಗಳು ದುಶ್ಚಟಕ್ಕೆ ಬಲಿಬಿದ್ದವರು. ಕೊಲ್ಯ ಶಿಬಿರದಲ್ಲಿದ್ದವರು ಅಪರಾಧಕ್ಕೆ ಬಲಿಯಾಗಿಲ್ಲ. ಶಿಬಿರದಲ್ಲಿ ಭಾಗಿಯಾದವರು ಮುಂದಿನ ದಿನಗಳಲ್ಲಿ ಸ್ನೇತರನ್ನೂ ದುಶ್ಚಟದಿಂದ ಹೊರತರುವ ಪ್ರಯತ್ನದ ಮೂಲಕ ರಾಯಭಾರಿಗಳಾಗಿ ಕಾರ್ಯ ನಿರ್ವಹಿಸಬೇಕಾಗಿದೆ ಎಂದು ತಿಳಿಸಿದರು.ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಮಹಾಬಲ ಚೌಟ ಅಧ್ಯಕ್ಷತೆ ವಹಿಸಿದ್ದರು.
ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಹಾಸ ಪಂಡಿತ್ ಹೌಸ್, ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಶ್ರೀ ಮೂಕಾಂಬಿಕಾ ಕ್ಷೇತ್ರದ ಟ್ರಸ್ಟಿ ಮಧುಸೂದನ್ ನಾಯರ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮಾಜಿ ಜಿಲ್ಲಾಧ್ಯಕ್ಷ ಇಸ್ಮಾಯಿಲ್, ಸಮಿತಿಯ ಪದಾಧಿಕಾರಿಗಳಾದ ಚಂದ್ರಶೇಖರ ಉಚ್ಚಿಲ್, ಉಮೇಶ್ ಗಾಂಭೀರ್, ನಮಿತಾ ಶ್ಯಾಮ್, ಜಯಶ್ರೀ ಪ್ರಪುಲ್ಲದಾಸ್, ಒಕ್ಕೂಟ ಅಧ್ಯಕ್ಷ ಮಾಧವ, ಜನಜಾಗೃತಿ ವೇದಿಕೆ ಅಧ್ಯಕ್ಷ ಕಿಶೋರ್ ಕುಮಾರ್, ರಾಜೇಶ್ ಶೆಟ್ಟಿ ಪಜೀರುಗುತ್ತು, ಉಷಾ, ಪ್ರಕಾಶ್, ನಾರಾಯಣ್ ಬಿ., ಒಕ್ಕೂಟ ಅಧ್ಯಕ್ಷ ಸತೀಶ್ ದೀಪಂ ಸೋಮೇಶ್ವರ, ರವಿಶಂಕರ್, ಶಿಭಿರಾಧಿಕಾರಿ ದೇವಿ ಪ್ರಸಾದ್, ಶಂಕರ್ ಮೊದಲಾದವರು ಉಪಸ್ಥಿತರಿದ್ದರು.ಕೊಣಾಜೆ ವಲಯ ಮೇಲ್ವಿಚಾರಕಿ ರೇಶ್ಮಾ ಜಿ. ಸ್ವಾಗತಿಸಿದರು. ತಾಲೂಕು ಯೋಜನಾಧಿಕಾರಿ ಉಮರಬ್ಬ ಪ್ರಾಸ್ತಾವಿಕವಾಗಿ ಮಾತನಾಡಿದರು. ಆನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು
‘ಅಮಲು ವ್ಯಸನದ ಹಿಂದೆ ಒಂದೊಂದು ಕಾರಣ ಇರುತ್ತದೆ, ಇದರಿಂದ ಹೊರಬರಲು ಮದ್ಯವರ್ಜನ ಶಿಬಿರ ಸಹಕಾರಿಯಾಗಿದೆ, ಮುಂದಿನ ದಿನಗಳಲ್ಲಿ ಅಮಲು ವ್ಯಸನದಿಂದ ಹೊರಬಂದು ಸುಂದರ ಜೀವನ ನಡೆಸಲು ದೇವರು ಅನುಗ್ರಹಿಸಲಿ’
ರವೀಂದ್ರ ಶೆಟ್ಟಿ ಉಳಿದೊಟ್ಟು, ವಿದ್ಯಾರತ್ನ ಶಾಲೆಯ ಅಧ್ಯಕ್ಷ
‘ಕಳೆದ ಮೂರು ತಿಂಗಳಿಂದ ಶಿಬಿರಕ್ಕಾಗಿ ಹಲವು ಜನ ಶ್ರಮಿಸಿದ್ದಾರೆ, ಇದರಿಂದ ಯಾರಿಗೂ ಲಾಭವಿಲ್ಲ, ನಿಮ್ಮ ಕುಟುಂಬ ಉತ್ತಮವಾಗಬೇಕು ಎನ್ನುವ ಉದ್ದೇಶ ನಮ್ಮದು. ಮುಂದಿನ ದಿನಗಳಲ್ಲಿ ಮದ್ಯವರ್ಜನೆ ಮಾಡುವುದಿಲ್ಲ ಎನ್ನುವ ದೃಢ ನಿರ್ಧಾರ ಕೈಗೊಂಡರೆ ಅದುವೇ ನಮಗೆ ನೀಡುವ ಬಹುಮಾನವಾಗಿದೆ’
ಉಮರಬ್ಬ, ತಾಲೂಕು ಯೋಜನಾಧಿಕಾರಿ, ಶ್ರೀ ಕ್ಷೇ.ಧ.ಗ್ರಾ.ಯೋ.


