UN NETWORKS
ಬಜ್ಪೆ: ಬಜ್ಪೆ ಮೇಲ್ಸಾಲು ಮೊಗವೀರ ಸಂಘ ಹಿರಿಯಡಕ (17 ಗ್ರಾಮ ಸಭೆಗಳ ಒಕ್ಕೂಟ) ಇದರ ಆಶ್ರಯದಲ್ಲಿ ಬಾರಕೂರು ಮೊಗವೀರ ಸಂಯುಕ್ತ ಸಭಾ, ಬೆಣ್ಣೆ ಕುದ್ರು ಇದರ ಸಹಯೋಗದೊಂದಿಗೆ ಮಾಧವ ಮಂಗಲ ಸಭಾಭವನ – ಹಿರಿಯಡಕದಲ್ಲಿ ಮೊಗವೀರ ಗುರಿಕಾರರಿಗೆ ಗೌರವಧನ ವಿತರಣೆ ಹಾಗೂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ ನಡೆಯಿತು.
ಈ ಸಂಧರ್ಭದಲ್ಲಿ ಸಂಘದ ವಾರ್ಷಿಕ ಸಭೆ ನಡೆಸಲಾಯಿತು. ನಾಡೋಜ ಜಿ ಶಂಕರ್ ರವರು ಕಾರ್ಯಕ್ರಮ ಉಧ್ಘಾಟಿಸಿ, ಮೊಗವೀರ ಸಮಾಜವು ಮುಂದಿನ ಮುಂದಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಮುಂದೆಬರುವಂತೆ ಕರೆ ನೀಡಿದರು. ಈ ಶೈಕ್ಷಣಿಕ ವರ್ಷದಿಂದಲೇ ಇಂಜಿನೀರಿಂಗ್ ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ ಧನ ಸಹಾಯ ನೀಡಲಾಗುವುದೆಂದು ಘೋಷಿಸಿದರು.ಉದಯ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿನಯ ಕರ್ಕೇರ, ಸುಂದರ ಕಾಂಚನ್, ವಿಠಲ ಶ್ರೀಯಾನ್, ಪ್ರಮೋದ್ ಸುವರ್ಣ, ರವೀಂದ್ರ ಪುತ್ರನ್ ಮೊದಲಾದವರು ಉಪಸ್ಥಿತರಿದ್ದರು. ಪುರಂದರ ಕೋಟ್ಯಾನ್ ವರದಿ ವಾಚಿಸಿದರು, ರಾಜೇಂದ್ರ ಸುವರ್ಣ ಲೆಕ್ಕಾಚಾರ ಮಂಡಿಸಿದರು.
ಸುಮಾರು 6ಲಕ್ಷ ಮೌಲ್ಯದ ವಿದ್ಯಾರ್ಥಿ ವೇತನ ಹಾಗು ಗೌರವಧನ ವಿತರಿಸಲಾಯಿತು. ಜಯ ಸಿ ಕೋಟ್ಯಾನ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನವೀನ ಕೆ ವಂದಿಸಿದರು. ಬಾಲಕೃಷ್ಣ ಬಿ ಕೆ ಕಾರ್ಯಕ್ರಮ ನಿರೂಪಿಸಿದರು.


