UN NETWORKS ದೇರಳಕಟ್ಟೆ: ವಿದ್ಯಾಲಯ ಎಂಬುದು ಜ್ಞಾನ ಭಂಡಾರ. ಜ್ಞಾನ ಸಂಪಾದನೆಗೆ ಓದಿದಷ್ಟು ಮುಗಿಯದು. ವಿದ್ಯಾಲಯದಲ್ಲಿ ಜ್ಞಾನ ಕೊಡಲು ಕೊಡಲು ಪ್ರಾರ್ಥಿಸಿದರೆ ದೇವಾಲಯದಲ್ಲಿ ನಮ್ಮ ಇಷ್ಟಾರ್ಥ ನೆರವೇರಿಸುವಂತೆ ಪ್ರಾರ್ಥಿಸುತ್ತೇವೆ ಎಂದು ದೇರಳಕಟ್ಟೆ ಅಯ್ಯಪ್ಪಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ಚಂದ್ರಹಾಸ ಅಡ್ಯಂತಾಯ ಹೇಳಿದರು. ದೇರಳಕಟ್ಟೆಯ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆ ಹಳೆ ವಿದ್ಯಾರ್ಥಿ ಸಂಘದ ಸಹಯೋಗದೊಂದಿಗೆ ನಡೆದ ಶಾಲಾ ಪ್ರತಿಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ದೇರಳಕಟ್ಟೆಯ ಶಾಲೆಯನ್ನು ನಿರ್ಮಿಸಲು ಸ್ಥಳದಾನ ಮಾಡಿದ ದಾನಿಗಳನ್ನು ವಿದ್ಯಾರ್ಥಿಗಳು ಹಾಗೂ ಪೋಷಕರು ಸದಾ ಸ್ಮರಣೆಯಲ್ಲಿ ಇಡಬೇಕು ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು ಹೇಳಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಎ. ಅಬ್ದುಲ್ ಖಾದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಆರ್ ಲೋಕೇಶ್, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸದಸ್ಯೆ ರಶೀದಾ ಬಾನು, ಬೆಳ್ಮ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಜಯ ಕೃಷ್ಣಪ್ಪ ಪೂಜಾರಿ, ಉಪಾಧ್ಯಕ್ಷ ಬಿ.ಎಂ. ಅಬ್ದುಲ್ ಸತ್ತಾರ್,…
Author: UllalaVani
UN NETWORKS ತಲಪಾಡಿ: ನಗರದ ಪ್ರಥಮ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಉದ್ಘಾಟನಾ ಕಾರ್ಯಕ್ರಮ ಜ. 13ರಂದು ತಲಪಾಡಿ ದೇವಿನಗರದಲ್ಲಿರುವ ಶಾರದಾ ಆಯುರ್ಧಾಮ ಕ್ಯಾಂಪಸ್‍ನಲ್ಲಿ ನಡೆಯಲಿದೆ ಎಂದು ಶಾರದಾ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಹೇಳಿದರು. ತಲಪಾಡಿ ದೇವಿನಗರದ ಶಾರದಾ ಆಯುರ್ಧಾಮದಲ್ಲಿ ಶುಕ್ರವಾರ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದರು. ಮಾಹೆ ಮಾಜಿ ಉಪಕುಲಪತಿ ಪದ್ಮಭೂಷಣ ಡಾ.ಬಿ.ಎಂ.ಹೆಗ್ಡೆ ಉದ್ಘಾಟಿಸಲಿದ್ದಾರೆ. . ಮಂಗಳೂರು ಕೆಎಂಸಿಯ ಮಾಜಿ ಪ್ರಾಚಾರ್ಯ ಡಾ.ಕೆ.ಆರ್.ಶೆಟ್ಟಿ ಮುಖ್ಯಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು. ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ರಾಜೇಶ್ ಪಾದೇಕಲ್ ಮಾತನಾಡಿ, ಭಾರತೀಯ ವೈದ್ಯಪದ್ಧತಿಯ ಸಮಗ್ರ ಚಿಕಿತ್ಸಾ ಸೌಲಭ್ಯವನ್ನು ಒದಗಿಸುವ ಸುಸಜ್ಜಿತ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಕೊರತೆ ಇರುವುದನ್ನು ಮನಗಂಡ ತುಳುನಾಡು ಎಜ್ಯುಕೇಶನ್ ಟ್ರಸ್ಟ್ ಈ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ ಎಂದು ವಿವರಿಸಿದರು. ಪ್ರಕೃತಿ ಚಿಕಿತ್ಸೆಯು ಆಧುನಿಕ ವೈದ್ಯವಿಧಾನದ ಹಲವು ದೃಷ್ಟಿಕೋನ ಮತ್ತು ಸಾಂಪ್ರದಾಯಿಕ ಚಿಕಿತ್ಸಾ ಕ್ರಮಗಳನ್ನು ಸೇರಿಸಿಕೊಂಡಿದ್ದು, ಸೂಜಿಚಿಕಿತ್ಸೆಯಿಂದ ಹಿಡಿದು ಗಿಡಮೂಲಿಕೆ, ಪೌಷ್ಟಿಕತೆಯಂಥ ಅಂಶಗಳನ್ನೂ ಸಮಗ್ರವಾಗಿ ಒಳಗೊಂಡಿದೆ.…
UN NETWORKS ಮಂಜನಾಡಿ: ಮಂಜನಾಡಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಸದಾ ನಡೆಯುತ್ತಿದೆ. ಹಳೇ ಸಂಪ್ರದಾಯಗಳ ಪ್ರಕಾರ ಕಾರ್ಯಕ್ರಮಗಳು ಮಂಜನಾಡಿಯಲ್ಲಿ ನಡೆಯುತ್ತಿರುವುದು ಸ್ವಾಗತಾರ್ಹ. ಇದೀಗ ಹಮ್ಮಿಕೊಂಡಿರುವ ಉರೂಸ್ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಎಪಿ ಅಬೂಬಕರ್ ಮುಸ್ಲಿಯಾರ್ ಹೇಳಿದರು. ಅವರು ಮಂಜನಾಡಿಯಲ್ಲಿ ಹಝ್ರತ್‍ಅಸ್ಸಯ್ಯದ್ ಇಸ್ಮಾಯಿಲ್ ಮುಸ್ಲಿಯಾರ್ ರವರ ಹೆಸರಿನಲ್ಲಿ ಆರಂಭಗೊಂಡ ಉರೂಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಉರೂಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅಸ್ಸಯ್ಯದ್ ಮಹಮ್ಮದ್ ಶಮೀಮ್ ತಂಙಳ್ ಅವರು ಪ್ರವಾದಿಯವರ ಮೇಲೆ ನಂಬಿಕೆ ವಿಶ್ವಾಸ ಸದಾ ಇರಬೇಕು. ಔಲಿಯಾಗಳನ್ನು ಗೌರವಿಸುವ ಜತೆಗೆ ಇಸ್ಲಾಂನ ಚೌಕಟ್ಟು ಮೀರದಂತೆ ಕಾರ್ಯಕ್ರಮ ನಡೆಸಬೇಕಾಗಿದೆ. ಧಾರ್ಮಿಕ ಶ್ರದ್ಧೆ, ಭಕ್ತಿ ನಮ್ಮಲ್ಲಿದ್ದರೆ ಇದ್ದರೆ ಮಾತ್ರ ಧರ್ಮದ ಬಗ್ಗೆ ಅರಿವು ಮೂಡಲು ಸಾಧ್ಯ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಎಂ. ಅಬ್ಬಾಸ್ ಮುಸ್ಲಿಯಾರ್ ವಹಿಸಿದ್ದರು. ಇಸ್ಮಾಯಿಲ್ ಮಿಸ್ಬಾಯಿ ಚೆರ್ಮೋತು, ಮತ್ತು ಅಹ್ಮದ್ ಬಾಖವಿ ಮುಖ್ಯ ಭಾಷಣ ಮಾಡಿದರು. ಜಮಾಅತ್ ಕಾರ್ಯದರ್ಶಿ ಅಝೀಝ್ ಪರ್ತಿಪ್ಪಾಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ನುಡಿದರು. ಕಾರ್ಯಕ್ರಮದಲ್ಲಿ ಮಹಮ್ಮದ್ ಮಸೂದ್ ಸಅದಿ, ಕರೀಂ ಫೈಝಿ, ಕುಂಞಬಾವಾ…
UN NETWORKS ಉಳ್ಳಾಲ: ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಡಿ.13 ರಂದು ಆಳ ಸಮುದ್ರದ ಮೀನುಗಾರಿಕೆಗೆ ತೆರಳಿದ ಸುವರ್ಣ ತ್ರಿಭುಜ ಬೋಟ್ ಹಾಗೂ 7 ಜನ ಬೆಸ್ತರು ನಾಪತ್ತೆಯಾಗಿದ್ದು, ಅವರು ಶೀಘ್ರವಾಗಿ ಕ್ಷೇಮವಾಗಿ ಕುಟುಂಬಸ್ಥರನ್ನು ಸೇರಲಿ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ ನೇತೃತ್ವದಲ್ಲಿ ಸೋಮೇಶ್ವರ ಸೋಮನಾಥ ದೇವಾಲಯ, ತೊಕ್ಕೊಟ್ಟು ಸಂತ ಸಬೆಸ್ಟಿಯನ್ ಚರ್ಚ್, ಉಳ್ಳಾಲ ಸಯ್ಯದ್ ಮದನಿ ದರ್ಗಾ ದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಮುಸ್ತಫ ಹರೇಕಳ, ಸುರೇಶ್ ಭಟ್ನಗರ, ಪ್ರಧಾನ ಕಾರ್ಯದರ್ಶಿ ರಹ್ಮಾನ್ ಕೋಡಿಜಾಲ್, ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಆಲ್ವಿನ್ ಡಿಸೋಜ, ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷ ದಿನೇಶ್ ಕುಂಪಲ, ಉಳ್ಲಾಲ ಬ್ಲಾಕ್ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಸಲೀಮ್ ಮೆಗಾ, ಇಕ್ಬಾಲ್ ಸಾಮನಿಗೆ, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ದೇವಕಿ ಉಳ್ಳಾಲ್, ತಾಲೂಕು ಪಂಚಾಯತ್ ಸದಸ್ಯೆ ಸುರೇಖಾ ಚಂದ್ರಹಾಸ್, ಕೋಟೆಕಾರ್ ಗ್ರಾಮ ಸಮಿತಿ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ಗಾಂಬೀರ್,…
UN NETWORKS ಕೊಣಾಜೆ: ಬಿಜೆಪಿ ಮುಖಂಡರೇ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತಿದ್ದಾರೆ. ದೇಶದ ಸಮಸ್ಯೆ ಬಗೆ ಹರಿಸಬೇಕಿದ್ದ ಪ್ರಧಾನಿ ವಿದೇಶ ಸುತ್ತಿ ಖಜಾನೆ ಖಾಲಿ ಮಾಡಿದ್ದಾರೆ. ಇದರ ನಡುವೆ ಆರ್ಥಿಕವಾಗಿ ಸದೃಢವಾಗಿ ಕಾರ್ಯಾಚರಿಸುತ್ತಿರುವ ನಮ್ಮ ಜಿಲ್ಲೆಯ ಹೆಮ್ಮೆಯ ವಿಜಯಾ ಬ್ಯಾಂಕನ್ನು ಬರೋಡ ಬ್ಯಾಂಕ್‍ನೊಂದಿಗೆ ವಿಲೀನಗೊಳಿಸುತ್ತಿರುವುದು ನಾಚಿಗೆಗೇಡಿನ ವಿಷಯ. ಯಾವುದೇ ಕಾರಣಕ್ಕೂ ನಾವು ವಿಲೀನಕ್ಕೆ ಬಿಡಲಾರೆವು ಎಂದು ಮೂಡಾದ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಅಭಿಪ್ರಾಯಪಟ್ಟರು. ಕೇಂದ್ರ ಸರ್ಕಾರದ ವಿಜಯಾ ಬ್ಯಾಂಕ್ ವಿಲೀನ ಪ್ರಕ್ರಿಯೆ ವಿರೋಧಿಸಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗುರುವಾರ ಕೊಣಾಜೆ ವಿಜಯಾ ಬ್ಯಾಂಕ್ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಸಭೆ ಉದ್ಘಾಟಿಸಿ ಮಾತನಾಡಿದರು.ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ ಅಧ್ಯಕ್ಷತೆ ವಹಿಸಿ, ಮುಂದಿನ ಮೂರು ತಿಂಗಳಲ್ಲಿ ವಿಜಯಾ ಬ್ಯಾಂಕ್ ವಿಲೀನ ಆಗುತ್ತದೆ. ಸುಂದರ ರಾಮ ಶೆಟ್ಟಿ ಹೆಸರು ರಸ್ತೆಗೆ ಇಡಲು ಅಡ್ಡಿಯಾಗಿದ್ದಾರೆ ಎಂದು ಪ್ರಚಾರ ಮಾಡಿ ಜೆ.ಆರ್.ಲೋಬೋ ಅವರ ಸೋಲಿಗೆ ಕಾರಣರಾದ ಬಿಜೆಪಿ, ಇದೀಗ ವಿಜಯಾ ಬ್ಯಾಂಕ್…
UN NETWORKS ತಲಪಾಡಿ:ಸನಾತನ ಭಾರತೀಯ ಸಂಸ್ಕೃತಿಯಲ್ಲಿ ದಾನಕ್ಕೊಂದು ವಿಶೇಷತೆಯಿದೆ. ಭೂದಾನ, ವಿದ್ಯಾದಾನ, ಕನ್ಯಾದಾನಗಳು ಪ್ರಾಚೀನ ಪರಂಪರೆಯಲ್ಲಿ ವಿಶೇಷತೆಯನ್ನು ಪಡೆದಿದ್ದರೆ, ವಾಸ್ತವದಲ್ಲಿ ರಕ್ತ ದಾನವೆನ್ನುವಂತಹುದು ಮನುಕುಲದ ಸಮಾನ ಸಾಮರಸ್ಯವನ್ನು ಸ್ಥಾಪಿಸಿ, ಸೌಹಾರ್ದತೆಯನ್ನು ಕಾಪಾಡುತ್ತದೆ. ಈ ನೆಲೆಯಲ್ಲಿ ತಲಪಾಡಿಯ ಶಾರದಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಅಭಿನಂದನಾರ್ಹರು ಎಂದು ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ.ಬಿ.ಪುರಾಣಿಕ್ ಶ್ಲಾಘಿಸಿದರು. ಅವರು ಮಂಗಳೂರಿನ ಲಯನ್ಸ್ ಕ್ಲಬ್ ಹಾಗೂ ತಲಪಾಡಿಯ ಶಾರದಾ ಪ್ರಥಮ ದರ್ಜೆ ಕಾಲೇಜು ಸಹಯೋಗದೊಂದಿಗೆ ನಡೆದ ‘ರಕ್ತದಾನ ಶಿಬಿರ’ವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಲಯನ್ಸ್ ನ ಜಿಲ್ಲಾ ಗವರ್ನರ್ ಲಯನ್ ಕೆ. ದೇವದಾಸ್ ಭಂಡಾರಿ ವಿದ್ಯಾರ್ಥಿಗಳ ರಕ್ತದಾನದ ಮನೋಸ್ಥೈರ್ಯ ಹಾಗೂ ಸಾಮಾಜಿಕ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಲಯನ್ಸ್ ನ ಜಿಲ್ಲಾ ಕಾರ್ಯನಿರ್ವಹಣಾಧಿಕಾರಿಗಳಾದ ಲಯನ್ಸ್ ನಾಗೇಶ್ ಕುಮಾರ್ ಅವರು ತಲಪಾಡಿಯ ಶಾರದಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಇತರ ಶಿಕ್ಷಣ ಸಂಸ್ಥೆಗಳಿಗೆ ಮಾದರಿ ಎಂದು ಅಭಿನಂದಿಸಿದರು. ವೇದಿಕೆಯಲ್ಲಿ ವಿದ್ಯಾನಿಕೇತನದ ಆಡಳಿತಾಧಿಕಾರಿ ವಿವೇಕ ತಂತ್ರಿ,…
UN NETWORKS ಉಳ್ಳಾಲ: ದೇಶದಾದ್ಯಂತ ಲಾಭ ಗಳಿಸಿ ಸೇವೆ ನಡೆಸುತ್ತಿದ್ದಂತಹ ವಿಜಯ ಬ್ಯಾಂಕ್ ತುಳುನಾಡಿಗೆ ಕೀರ್ತಿಯನ್ನು ತಂದು ಕೊಟ್ಟಿತ್ತು. ಆದರೆ ಆರ್ಥಿಕ ನೀತಿ ಗೊತ್ತಿಲ್ಲದ ಪ್ರಧಾನಿ ಮೋದಿಯವರಿಂದಾಗಿ ದೇಶ ಆರ್ಥಿಕತೆಯಲ್ಲಿ 10 ವರ್ಷ ಹಿಂದೆ ಹೋಗಿದೆ ಎಂದು ಮೂಡ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಹೇಳಿದ್ದಾರೆ. ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳು ಮತ್ತು ವಿಜಯಬ್ಯಾಂಕ್ ವಿಲೀನ ಕುರಿತು ಕಾಂಗ್ರೆಸ್ ಮಂಜನಾಡಿ ವಲಯ ವತಿಯಿಂದ ವಿಜಯ ಬ್ಯಾಂಕ್ ಕಲ್ಕಟ್ಟ ಶಾಖೆ ಮುಂಭಾಗದಲ್ಲಿ ಗುರುವಾರ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಹೊಟೇಲ್, ಅಂಗಡಿಗಳಲ್ಲಿ ಶೇ.75 ವ್ಯಾಪಾರ ಕಡಿಮೆಯಾಗಿದೆ ಅನ್ನುತ್ತಿದ್ದಾರೆ ವ್ಯಾಪಾರಸ್ಥರು. ಯೋಜನೆಯನ್ನು ಜಾರಿಗೆ ತರಬೇಕಾದಲ್ಲಿ ಪ್ರಧಾನಿ ಯೋಚಿಸಬೇಕಿತ್ತು. ಸರ್ವಾಧಿಕಾರದ ನಿರ್ಧಾರದಿಂದಾಗಿ ದೇಶದ ಜನ ಕಂಗಾಲಾಗುವಂತಾಗಿದೆ. ಹಿದಿನ ಪ್ರಧಾನಿ ಮನಮೋಹನ್ ಸಿಂಗ್ ತಂದಂತಹ ಸ್ಥಾನಮಾನ ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಐದು ರಾಜ್ಯದ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ಎನ್ ಡಿಎ ಸರಕಾರದ ವೈಫಲ್ಯ ಜನರಿಗೆ ಮನವರಿಕೆಯಾಗಿದೆ ಎಂದರು. ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್…
UN NETWORKS ಮಂಜನಾಡಿ: ಮಂಜನಾಡಿ ಸೈಯದ್ ಇಸ್ಮಾಯಿಲ್ ವಲಿಯುಲ್ಲಾಹಿ ದರ್ಗಾ ಶರೀಫ್ ಉರೂಸಿನ ಪ್ರಥಮ ದಿನವಾದ ಜ.10ರಂದು ಮಗ್ರಿಬ್ ನಮಾಝ್ ಬಳಿಕ ನಡೆಯುವ ಕಾರ್ಯಕ್ರಮದಲ್ಲಿ ಸುಲ್ತಾನುಲ್ ಉಲಮಾ ಶೈಖುನಾ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಭಾಗವಹಿಸಿ, ದುಆ ಆಶೀರ್ವಚನ ನೀಡಲಿದ್ದಾರೆ ಎಂದು ಮಂಜನಾಡಿ ಜಮಾಅತ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಪರ್ತಿಪ್ಪಾಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
UN NETWORKS ದೇರಳಕಟ್ಟೆ : ಬದ್ರಿಯ ಜುಮಾ ಮಸೀದಿ ಅಧೀನದ ದೇರಳಕಟ್ಟೆ ಪಬ್ಲಿಕ್ ಸ್ಕೂಲ್ ಇದರ 7ನೇ ವಾರ್ಷಿಕೋತ್ಸವ ದೇರಳಕಟ್ಟೆಯ ಖಾಸಗಿ ಹಾಲ್ ನಲ್ಲಿ ನಡೆಯಿತು.ದೇರಳಕಟ್ಟೆ ಪಬ್ಲಿಕ್ ಸ್ಕೂಲ್ ಮದರಸ ಅಧ್ಯಾಪಕ ಕೆ.ಯು ಅಬ್ದುಲ್ ಜಬ್ಬಾರ್ ದುಅ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ ಖಾದರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭಹಾರೈಸಿದರು.ದೇರಳಕಟ್ಟೆ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಹಾಜಿ ಅಬೂಬಕ್ಕರ್ ನಾಟೆಕಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.ಅತಿಥಿಗಳಾಗಿ ದೇರಳಕಟ್ಟೆ ಬದ್ರಿಯ ಜುಮಾ ಮಸೀದಿ ಅಧ್ಯಕ್ಷ ಹಾಜಿ ಡಿ. ಅಬ್ಬಾಸ್, ಮದರಸ ಮ್ಯಾನೇಜ್ ಮೆಂಟ್ ದೇರಳಕಟ್ಟೆ ರೇಂಜ್ ಅಧ್ಯಕ್ಷ ಹಾಜಿ ಡಿ. ಇಸ್ಮಾಯಿಲ್, ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ದೇರಳಕಟ್ಟೆ ಇದರ ಅಧ್ಯಕ್ಷ ಹಾಜಿ ಡಿ. ಇಲ್ಯಾಸ್, ಬೆಳ್ಮ ಗ್ರಾ.ಪಂ ಅಧ್ಯಕ್ಷ ವಿಜಯ ಕೃಷ್ಣ ಪ್ಪ ಪೂಜಾರಿ, ಉಪಾಧ್ಯಕ್ಷ ಬಿ.ಎಂ ಅಬ್ದುಲ್ ಸತ್ತಾರ್, ಸದಸ್ಯ ಕಬೀರ್.ಡಿ, ದ.ಕ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್, ಜಿ.ಪಂ ಮಾಜಿ ಸದಸ್ಯ…
UN NETWORKS ಉಳ್ಳಾಲ: ರಾಜ್ಯದ ಅಭಿವೃದ್ಧಿ ಝೀರೋ ಆಗಿದೆ. ವಿಧಾನಸೌಧದಲ್ಲಿ ಸಚಿವರುಗಳ ಆಪ್ತರ ಜತೆಗೆ ನಿರಂತರ ಲಕ್ಷ ಹಣದ ಕಂತೆಗಳು ಸಾಗುತ್ತಲೇ ಇದೆ. ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಜ್ಯದ ಸಮ್ಮಿಶ್ರ ಸರಕಾರ ಮುಖ್ಯಮಂತ್ರಿ ಹಾಗೂ ಸಚಿವರುಗಳು ಶೀಘ್ರವೇ ರಾಜೀನಾಮೆ ನೀಡಬೇಕು ಎಂದು ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಹೇಳಿದರು. ರಾಜ್ಯ ಸರಕಾರದ ವೈಫಲ್ಯ ಖಂಡಿಸಿ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಮಂಗಳೂರು ಕ್ಷೇತ್ರ ಬಿಜೆಪಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.ಕೇಂದ್ರ ಸರಕಾರ ತೈಲ ದರ ಇಳಿಸಿದರೂ, ರಾಜ್ಯ ಸರಕಾರ ಬೆಲೆ ಏರಿಸಿದರೂ ಯಾವುದೇ ಸುದ್ಧಿಗೋಷ್ಠಿಯೂ ಇಲ್ಲ. ಮಂಗಳೂರು ಭೇಟಿ ಸಂದರ್ಭ ಪಿಣರಾಯಿ ವಿಜಯನ್ ಮಂಗಳೂರು ಪ್ರವೇಶಿಸುವ ಸಂದರ್ಭ ಹಿಂದೂಗಳು ವಿರೋಧಿಸಿದಾಗ, ಅದೇ ಹಿಂದೂಗಳಿಗೆ ಉಸ್ತುವಾರಿ ಸಚಿವ ಯು.ಟಿ.ಖಾದರ್ ಚಪ್ಪಲಿಯಲ್ಲಿ ಹೊಡೆಯುವುದಾಗಿ ಅವಮಾನಿಸಿದ್ದರು. ಇದೀಗ ಶಬರಿಮಲೆ ವಿಚಾರದಲ್ಲಿ ಅದೇ ಪಿಣರಾಯಿ ವಿಜಯನ್ ಅವರನ್ನು ವಿರೋಧಿಸುವ ನಾಟಕವಾಡುತ್ತಿದ್ದಾರೆ. ಮಂಗಳೂರು ಕ್ಷೇತ್ರ ಅಭಿವೃದ್ಧಿಯಲ್ಲಿ ಬಹಳಷ್ಟು ಹಿಂದುಳಿದಿದೆ. ಆದರೂ ಫ್ಲೈಓವರ್ ಕಾಮಗಾರಿ ವಿರುದ್ಧ ಮಾತನಾಡುವ ಸಚಿವ ಖಾದರ್…

