UN NETWORKS ಕುತ್ತಾರು: ಕುತ್ತಾರು ಎಂಬುದು ಪುಣ್ಯಭೂಮಿ. ರಕ್ತೇಶ್ವರೀ ಕಾರಣಿಕ ಶಕ್ತಿಯಾಗಿದ್ದು ಪ್ರಶ್ನೆ ಚಿಂತನೆಯಲ್ಲಿ ಕಂಡುಬಂದಂತೆ ಕುತ್ತಾರು ಕನ್ನಡಿಕೆರೆ ಋಷಿಮುನಿಗಳೇ ತಪಸ್ಸು ಮಾಡುತ್ತಿದ್ದ ಅತಿ ಪವಿತ್ರವಾದ ತಪೋ ಭೂಮಿ. ಹಾಗಾಗಿ ಇಲ್ಲಿ ಕ್ಷೇತ್ರ ನಿರ್ಮಾಣ ಅತಿ ಶೀಘ್ರದಲ್ಲಿ ನಡೆಯುವುದರಿಂದ ಸಮಾಜದ ಎಲ್ಲರಿಗೂ ಒಳಿತಾಗಲಿದೆ ಎಂದು ಉಳ್ಳಾಲ ಉಳಿಯ ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರದ ಧರ್ಮದರ್ಶಿ ದೇವು ಮೂಲ್ಯಣ್ಣ ಆಶೀರ್ವಚನದ ಮಾತುಗಳನ್ನಾಡಿದರು. ಕುತ್ತಾರು ಕನ್ನಡಿಕೆರೆಯಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಕನ್ನಡಿಕೆರೆ ಆದಿಸ್ಥಳ ಶ್ರೀ ರಕ್ತೇಶ್ವರೀ ಎಳ್ವೆರ್ ಸಿರಿಗಳು ಕೊರಗಜ್ಜ ಕ್ಷೇತ್ರಕ್ಕೆ ಭಾನುವಾರ ನಡೆದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಅಧ್ಯಕ್ಷತೆ ವಹಿಸಿದ ಉಳ್ಳಾಲ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಕರ ಕಿಣಿ ಮಾತನಾಡಿ ಇಂದಿನ ಪೀಳಿಗೆಯ ಭಾಗ್ಯ ಎಂಬಂತೆ ಪ್ರಸ್ತುತ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಕ್ಷೇತ್ರಗಳು ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವ ನಡೆಯುವುದನ್ನು ಕಾಣುವುದೇ ನಮ್ಮ ಪುಣ್ಯ, ನಮ್ಮ ಭಾಗ್ಯ ಎಂದು ನುಡಿದರು.ಧಾರ್ಮಿಕ ಕಾರ್ಯಗಳನ್ನು ದೇವರು ಅವರಿಗೆ ಬೇಕಾದಾಗ ನಮ್ಮಿಂದ…
Author: UllalaVani
UN NETWORKS ಉಳ್ಳಾಲ: ಎಸ್ ವೈಎಸ್, ಎಸ್ಸೆಸ್ಸೆಫ್ ಹಾಗೂ ಎಸ್ ಬಿಎಸ್ ಕುತುಬಿ ನಗರ ಕಿನ್ಯ ಶಾಖೆವತಿಯಿಂದ ತಾಜುಲ್ ಉಲಮಾ ಅನುಸ್ಮರಣಾ ಸಂಗಮ ಕುತುಬಿ ನಗರ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಿತು. ಸಯ್ಯದ್ ಅಲವಿ ತಂಙಳ್ ಕಿನ್ಯ ದುಅ ನೇತೃತ್ವ ವಹಿಸಿ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು. ಮೂಸ ಹಾಜಿ ಕುತುಬಿನಗರ ಧ್ವಜಾರೋಹಣ ಗೈದರು. ಎಸ್ ವೈಎಸ್ ಕುತುಬಿ ನಗರ ಶಾಖೆಯ ಅಧ್ಯಕ್ಷ ಮುಹಮ್ಮದ್ ಹನೀಫ್ ಸಖಾಫಿ ಕಾರ್ಯಕ್ರಮ ಅಧ್ಯಕ್ಷತೆವಹಿಸಿದರು.ಎಸ್ ವೈಎಸ್ ಮಂಗಳೂರು ವಲಯ ಅಧ್ಯಕ್ಷ ಮುಹಮ್ಮದಾಲಿ ಸಖಾಫಿ ಅಶ್-ಅರಿಯ್ಯಾ ಸುರಿಬೈಲ್, ಡಾ.ಫಾರೂಕ್ ನ ಈಮಿ ಅಲ್- ಬುಖಾರಿ ಕೊಲ್ಲಂ ಮುಖ್ಯ ಪ್ರಭಾಷಣಗೈದರು.ಕಾರ್ಯಕ್ರಮದಲ್ಲಿ ದ.ಕ ಉಸ್ತುವಾರಿ ಸಚಿವ ಯು.ಟಿ ಖಾದರ್ ರಿಗೆ ಸನ್ಮಾನಿಸಲಾಯಿತು. ಅಸ್ಸಯ್ಯಿದ್ ಶಿಹಾಬುದ್ದೀನ್ ಅಲ್-ಹೈದ್ರೂಸಿ ತಂಙಳ್ ಕಿಲ್ಲೂರು, ಕುತುಬಿನಗರ ಬದ್ರಿಯ ಜುಮಾ ಮಸೀದಿಯ ಅಧ್ಯಕ್ಷ ಅರಬಿ ಕುಂಞ, ಖತೀಬ್ ಮುಹಮ್ಮದ್ ಶಫೀಕ್ ಸ ಅದಿ, ಪಿಲಿಕೂರು ಮುಹ್ಯಿದ್ದೀನ್ ಜುಮಾ ಮಸೀದಿ ಖತೀಬ್ ಅಬ್ದುಲ್ ಬಾರಿ ಸ ಅದಿ, ಪಂಜಳ…
UN NETWORKS ಮುಂಬಯಿ: ಬಂಟ್ವಾಳ ಜೋಡುಮಾರ್ಗ (ಬಿ.ಸಿ ರೋಡು)ದ ಸಂಚಯಗಿರಿ ಅಲ್ಲಿನ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯಕ್ಕೆ ಇಂದಿಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಹಾಗೂ ಭಾರತ್ ಬ್ಯಾಂಕ್‍ನ ಮಾಜಿ ನಿರ್ದೇಶಕ ಚಂದ್ರಶೇಖರ್ ಎಸ್.ಪೂಜಾರಿ, ಲೋನಾವಲ ಮುನ್ಸಿಪಾಲ್ ಕೌನ್ಸಿಲ್‍ನ ನಗರ ಅಧ್ಯಕ್ಷೆ ಸುರೇಖಾ ಜಾಧವ್, ನಗರ ಉಪಾಧ್ಯಕ್ಷ ಮತ್ತು ಬಿಲ್ಲವರ ಅಸೋಸಿಯೇಶನ್ ಮುಂಬಯಿ, ಲೋನಾವಲ ಸ್ಥಳೀಯ ಕಚೇರಿಯ ಗೌರವಾಧ್ಯಕ್ಷ ನಿಟ್ಟೆ ನಡಿಮನೆ ಶ್ರೀಧರ್ ಎಸ್.ಪೂಜಾರಿ ಭೇಟಿ ನೀಡಿದರು. ಭಾರತ ರಾಷ್ಟ್ರದ ಕರ್ನಾಟಕದ ಕರಾವಳಿ ಕಾಸರಗೋಡುನಿಂದ ಉಡುಪಿಯ ಬಾರ್ಕೂರು ತನಕ ಪರಶುರಾಮನ ಸೃಷ್ಠಿಯ ಒಂದು ಭಾಗವಾಗಿ ಮಹಾ ದಾರ್ಶನಿಕರಿಗೆ ಮತ್ತು ಸಂತ ಮಹಾಂತರಿರಿಗೆ ಜನ್ಮ ನೀಡಿದ, ಹತ್ತುಹಲವಾರು ಸಂಪ್ರದಾಯ, ಕೂಡು ಕಟ್ಟುಕಟ್ಟಾಲೆಗಳನ್ನು ಬೆಳೆಸಿ ಉಳಿಸಿ ತುಳು ಭಾಷೆಯೊಂದಿಗೆ ಸ್ವಂತಿಕೆಯ ನಾಡುವಾಗಿ ಸಾವಿರ ಸಾವಿರ ವರ್ಷಗಳ ಇತಿಹಾಸವುಳ್ಳ ಪುಣ್ಯಭೂಮಿ ಪ್ರಸಿದ್ಧಿಯ ತುಳುನಾಡು ಬಗ್ಗೆ ತಿಳಿದು ತುಳು ಬದುಕು ಹಾಗೂ ತೌಳವರ ಪರಂಪರೆ, ಬದುಕು ರೂಪಿಸುವಲ್ಲಿ ಉಪಯೋಗಿಸಲ್ಪಡುವ…
UN NETWORKS ನರಿಂಗಾನ: ಮಂಜನಾಡಿಯ ಅಲ್ ಮದೀನಾ ಸಂಸ್ಥೆಯಲ್ಲಿಂದು ಬೆಳಗ್ಗೆ 70ನೇ ಗಣರಾಜೋತ್ಸವವನ್ನು ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಶೈಖುನಾ ಅಬ್ಬಾಸ್ ಉಸ್ತಾದ್ ಅವರ ಆರ್ಶೀವಾದದೊಂದಿಗೆ ಜನರಲ್ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಧ್ವಜರೋಹಣಗೈದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಅ್ ವಾ ಕಾಲೇಜು ಮುದರ್ರಿಸ್ ಅಬ್ದುಲ್ ಅಝೀಝ್ ಅಹ್ಸನಿ ವಹಿಸಿದ್ದರು.ಅಶ್ರಫ್ ಸಖಾಫಿ ಪ್ರಾಸ್ತಾವಿಕ ಭಾಷಣವನ್ನು ಮಂಡಿಸಿದರು.ದಅ್ ವಾ ಕಾಲೇಜು ಮುದರ್ರಿಸ್ ಅಬ್ದುರ್ರಹ್ಮಾನ್ ಅಹ್ಸನಿ, ರಿಸಾಲ ಅಕಾಡಮಿ ಪ್ರಾಧ್ಯಾಪಕ ಕಬೀರ್ ಸಅದಿ, ಹಿಫ್ಳುಲ್ ಕುರ್ ಆನ್ ಕಾಲೇಜಿನ ಪ್ರಾಧ್ಯಾಪಕರಾದ ಹಾಫಿಳ್ ಮರ್ಶದ್ ಹುಮೈದಿ, ಹಾಫಿಳ್ ಇಸ್ಮಾಯೀಲ್ ಹನೀಫಿ, ನಾರ್ತ್ ಕರ್ನಾಟಕ ಹೋಮ್ ನ ಬದ್ರುದ್ದೀನ್ ಹಿಮಮಿ, ಅಬ್ರಾರ್ ಫಾಝಿಲಿ ಬಿಹಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಅದ್ ಮೊಂಟುಗೋಳಿ ಕಾರ್ಯಕ್ರಮ ನಿರೂಪಿಸಿದರು. ಬಿಶಾರತುಲ್ ಮದೀನಾ ಅಧ್ಯಕ್ಷ ಅನೀಸ್ ಸುರತ್ಕಲ್ ಸ್ವಾಗತಿಸಿದರು. ನೌಫಲ್ ಮಲಾರ್ ವಂದಿಸಿದರು.
UN NETWORKS ಉಳ್ಳಾಲ: ಶ್ರೀ ಗೋಕರ್ಣಾಥೇಶ್ವರ ಕ್ಷೇತ್ರ ಕುದ್ರೋಳಿ ಇದರ ಬ್ರಹ್ಮಕಲಶೋತ್ಸವ ಹಾಗೂ ಹೊರೆಕಾಣಿಕೆ ಮೆರವಣಿಗೆಗೆ ಸಂಬಂಧಿಸಿದಂತೆ ಉಳ್ಳಾಲ ವಲಯಮಟ್ಟದ ಸಭೆಯು ಗುರುವಾರ ನಡೆಯಿತು. ಶ್ರೀ ಗೋಕಾರ್ಣಾಥೇಶ್ವರ ಕ್ಷೇತ್ರದ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ಸಾಯಿರಾಂ ಮತ್ತು ಕೊಶಾಧಿಕಾರಿ ಪದ್ಮರಾಜ್ ಅವರು ಸಭೆಯ ನೇತೃತ್ವವನ್ನು ವಹಿಸಿದ್ದರು. ಸಭೆಯ ಅಧ್ಯಕ್ಷತೆಯನ್ನು ಕೊಲ್ಯ ಬಿಲ್ಲವ ಸೇವಾ ಸಮಾಜದ ಅಧ್ಯಕ್ಷರಾದ ಆನಂದ್ ಎಸ್. ಕೊಂಡಾಣ ಅವರು ವಹಿಸಿದ್ದರು.ಗೌರವಾಧ್ಯಕ್ಷರಾದ ಡಾ.ರಾಮಾನುಜಂ, ಕಾರ್ಯದರ್ಶಿ ರಾಘವ ಡಿ.ಎನ್, ಕೋಶಾಧಿಕಾರಿ ಜಯಂತ್ ಪಿ.ಎಸ್, ಉಪಾಧ್ಯಕ್ಷರಾದ ಶಶಿಕಾಂತ್, ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ಅಧ್ಯಕ್ಷರಾದ ಕೆ.ಟಿ.ಸುವರ್ಣ,ಬಿಲ್ಲವ ಪ್ರಮುಖರಾದ ಚಂದ್ರಶೇಖರ್ ಉಚ್ಚಿಲ್, ನಮಿತಾ ಶ್ಯಾಂ, ಸತೀಶ್ ಕುಂಪಲ. ಮೋಹನ್ ರಾಜ್ ಕನೀರುತೋಟ, ಗ್ರಾಮಚಾವಡಿ ಬ್ರಹ್ಮಶ್ರೀ ನಾರಾಯಣ ಗುರುಸೇವಾ ಸಂಘದ ಅಧ್ಯಕ್ಷ ಗಂಗಾಧರ ಪೂಜಾರಿ, ತಲಪಾಡಿ ಬಿಲ್ಲವ ಸಂಘದ ಚಂದ್ರಹಾಸ್, ಪ್ರಮುಖರಾದ ನಾರಾಯಣ ಪೂಜಾರಿ, ಚಂದ್ರಹಾಸ್ ಸಾಲ್ಯಾನ್, ಸುರೇಶ್ ಭಂಡಾರಮನೆ, ಜಯಂತ್ ಕಿನ್ಯ, ಜಗನ್ನಾಥ ಪೂಜಾರಿ, ಕುಸುಮಾಕರ ಕುಂಪಲ ಮೊದಲಾದವರು ಉಪಸ್ಥಿತರಿದ್ದರು. ಹೊರೆಕಾಣಿಕೆ ಮತ್ತು ಬ್ರಹ್ಮಕಲಶೋತ್ಸವದ ಉಳ್ಳಾಲ ವಲಯ…
UN NETWORKS ತೊಕ್ಕೊಟ್ಟು: ಆದಿ ಕ್ರಿಯೇಷನ್ಸ್ ಪ್ರಸ್ತುತ ಪಡಿಸಿದ ಅಬ್ಬಕ್ಕ ಟಿ.ವಿ ಪ್ರಸಾರದ ಲಿಟ್ಲ್ ಚ್ಯಾಂಪ್ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಮತ್ತು ಅಬ್ಬಕ್ಕ ಟಿವಿ ಪ್ರಶಸ್ತಿ ಹಾಗೂ ಪುರಸ್ಕಾರ ಪ್ರಧಾನ ಸಮಾರಂಭ ಜ.27 ಭಾನುವಾರ ಸಂಜೆ 5.30 ಕ್ಕೆ ತೊಕ್ಕೊಟ್ಟು ಅಂಬೇಡ್ಕರ್ ರಂಗ ಮಂದಿರದಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮದ ನಿರ್ದೇಶಕ ಪ್ರಕಾಶ್ ಸಿಂಫೋನಿ ತಿಳಿಸಿದ್ದಾರೆ. ದೇರಳಕಟ್ಟೆ ಅಬ್ಬಕ್ಕ ಟಿ.ವಿ ಕಚೇರಿಯಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದರು. 2018 ಜನವರಿಯಲ್ಲಿ ಆರಂಭಗೊಂಡ ಆಡಿಶನ್ ಮೂರು ಸುತ್ತುಗಳನ್ನು ದಾಟಿ ಇದೀಗ ನೃತ್ಯ ಸ್ಪರ್ಧೆಯ ಅಂತಿಮ ಹಣಾಹಣಿ ನಡೆಯಲಿದೆ. 46 ಸ್ಪರ್ಧಿಗಳ ಪೈಕಿ 17 ಪ್ರತಿಭೆಗಳು ಫೈನಲ್ ನಲ್ಲಿ ಭಾಗವಹಿಸುತ್ತಿವೆ ಎಂದರು. ಅಬ್ಬಕ್ಕ ಟಿ.ವಿ ನಿರ್ದೇಶಕ , ಶಶಿಧರ್ ಪೊಯ್ಯತ್ತಬೈಲ್ ಮಾತನಾಡಿ 6ನೇ ವಾರ್ಷಿಕೋತ್ಸವದ ಸಂದರ್ಭ ಹೆಸರಾಂತ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ ಇವರಿಗೆ ಅಬ್ಬಕ್ಕ ಟಿ.ವಿ ಪ್ರಶಸ್ತಿ, ಸ್ವಾವಲಂಬಿ ಮಹಿಳೆ ಕುಸುಮಾ ಹೆಚ್.ದೇವಾಡಿಗ, ಪಾರಂಪರಿಕ ವೈದ್ಯರಾದ ಬ್ರ.ಎಲ್ಡೋ, ಯಕ್ಷಗಾನ ಕಲಾವಿದೆ ವಸುಂಧರಾ ಹರೀಶ್,…
UN NETWORKS ಉಳ್ಳಾಲ: ಮಂಗಳೂರು/ಕಾಸರಗೋಡು ಆರ್ಯ ಯಾನೆ ಮರಾಠ ಸಮಾಜ ಸಂಘದ ವಾರ್ಷಿಕ ಕ್ರೀಡಾ ಕೂಟ ಇತ್ತೀಚೆಗೆ ಬೋಂದೆಲ್ ಮೈದಾನ ಹಾಗೂ ಪೊಲೀಸ್ ಕವಾಯತು ಮೈದಾನದಲ್ಲಿ ಜರಗಿತು. 4 x 100 ಮೀಟರ್ ರಿಲೇ ಓಟ ದಲ್ಲಿ ಮೂಕಾಂಬಿಕಾ ತಂಡ ಪ್ರಥಮ ಸ್ಥಾನ ಗಳಿಸಿದರೆ ಛತ್ರಪತಿ ತಂಡ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದರು.ತಂಡ ಕ್ರೀಡೆಗಳಲ್ಲಿ ಪುರುಷರ ಕ್ರಿಕೆಟ್ ನಲ್ಲಿ ಮೂಕಾಂಬಿಕಾ ತಂಡ ಗ್ರೇಟ್ ಮರಾಠ ತಂಡವನ್ನು ಸೋಲಿಸಿ ವಿಜಯಿ ತಂಡವಾಗಿ ಹೊರ ಹೊಮ್ಮಿತು.ಮಹಿಳಾ ಕ್ರಿಕೆಟ್ ನಲ್ಲಿ ಕ್ವೀನ್ಸ್ ಎಲೆವೆನ್ ಕುಡ್ಲ ಎ ಮತ್ತು ಬಿ ತಂಡ ಗಳು ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದರು.ಮಹಿಳೆಯರ ತ್ರೋ ಬಾಲ್ ನಲ್ಲಿ ಛತ್ರಪತಿ ಪಡೀಲ್ ತಂಡ ಪ್ರಥಮ ಸ್ಥಾನ ಪಡೆದರೆ ಯುವ ಮರಾಠ ಕುಂಪಳ ದ್ವಿತೀಯ ಸ್ಥಾನ ಗೆದ್ದುಕೊಂಡರು.ಪುರುಷರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳೆರಡೂ ಕಾಸರಗೋಡು ಮರಾಠ ಟೈಗರ್ ಪಾಲಾದರೆ ಮಹಿಳೆಯರ ವಿಭಾಗದಲ್ಲಿ ವೆಸ್ಟ್ ಆರ್ಯನ್ಸ್ ಪ್ರಥಮ ಹಾಗೂ…
UN NETWORKS ಉಳ್ಳಾಲ: ಬೆಳ್ಮ ಗ್ರಾ.ಪಂ. ವ್ಯಾಪ್ತಿಯ ಕಾನಕರೆಯಲ್ಲಿ ಸೃಷ್ಟಿಯಾಗಿರುವ ಕುಡಿಯುವ ನೀರಿನ ಸಮಸ್ಯೆ ವಿಚಾರಕ್ಕೆ ಸಂಬಂದಿಸಿ ಗುರುವಾರ ಬೆಳ್ಮ ಗ್ರಾ.ಪಂ. ಕಚೇರಿಯಲ್ಲಿ ನಡೆದ ಗಾಮ ಸಭೆಯಲ್ಲಿ ಭಾರೀ ಚರ್ಚೆ ನಡೆದು ಗ್ರಾಮಸ್ಥರು ಅಧ್ಯಕ್ಷರು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಸಭೆ ಆರಂಭವಾವಾದಾಗಲೇ ಗ್ರಾಮಸ್ಥರು ಗ್ರಾಮಸಭೆಗೆ ಪರಿಸರ ಇಲಾಖೆಯ ಅಧಿಕಾರಿಗಳು ಬಾರದಿರುವ ಬಗ್ಗೆ ತರಾಟೆಗೆ ತೆಗೆದುಕೊಂಡರು. ಕಾನಕರೆಯಲ್ಲಿ ಕಲುಷಿತ ನೀರು ತುಂಬಿ ಸೊಳ್ಳೆ ಉತ್ಪತಿಯಾಗಿದ್ದು, ಪರಿಸರ ಹಾಳಾಗಿದೆ ಅಧಿಕಾರಿಗಳು ಇಲ್ಲದ ಕಾರಣ ಈ ಬಗ್ಗೆ ನಾವು ಯಾರಲ್ಲಿ ಕೇಳಬೇಕು ಎಂಬ ಗ್ರಾಮಸ್ಥರ ಪ್ರಶ್ನೆಗೆ ನೋಡಲ್ ಅಧಿಕಾರಿಯವರು ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಗಮನ ಸೆಳೆದು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಪೆಟ್ರೋಲ್ ಬಂಕ್ ನಿಂದಾಗಿ ಬಾವಿ ನೀರು ಕಲುಷಿತಗೊಂಡು ಕಾನಕೆರೆ ನಿವಾಸಿಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ. ಇದಕ್ಕೆ ಪರ್ಯಾಯವಾಗಿ ಪೈಪ್‍ಲೈನ್ ವ್ಯವಸ್ಥೆ ಮಾಡಿದರೂ ಸರಿಯಾಗಿ ನೀರು ಸರಬರಾಜಾಗುತ್ತಿಲ್ಲ. ಪರಿಸರದಲ್ಲಿ ಕೊಳಚೆ ನೀರು ತುಂಬಿ ಸೊಳ್ಳೆಗಳು ಉತ್ಪತ್ತಿಯಾಗಿದೆ. ಈ ಬಗ್ಗೆ ಮನವಿಗಳನ್ನು ಸಲ್ಲಿಸಿ…
UN NETWORKS ಉಳ್ಳಾಲ: ಸೋಮೇಶ್ವರ ಗ್ರಾಮದ ಕುತ್ತಾರು ಆದಿಸ್ಥಳ ಶ್ರೀ ರಕ್ತೇಶ್ವರೀ ಎಳುವೆರ್ ಸಿರಿಕುಲು ಕೊರಗಜ್ಜ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಶ್ರೀ ರಕ್ತೇಶ್ವರೀ ಹಾಗೂ ಕೊರಗಜ್ಜ ಕ್ಷೇತ್ರದ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮ ಜ. 27ರಂದು ನಡೆಯಲಿದೆ. ಕ್ಷೇತ್ರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಶ್ರೀ ಕ್ಷೇತ್ರದ ನಿರ್ಮಾಣ ಸಮಿತಿಯ ಪ್ರಮುಖರಾದ ಹರೀಶ್ ಕುತ್ತಾರ್ ಮಾಹಿತಿ ನೀಡಿ ಈ ಈ ಪ್ರದೇಶದಲ್ಲಿ ಜನರು ಕಷ್ಟ ನಷ್ಟ ಅನುಭವಿಸಿ, ರೋಗ ರುಜಿನಗಳಿಂದ ಬಳಲಿದ್ದು, ಹಲವಾರು ದುರ್ಮರಣಗಳು ನಡೆದ ಹಿನ್ನಲೆಯಲ್ಲಿ ಊರಿನ ಹಿರಿಯರು ಮತ್ತು ಆಸ್ತಿಕ ಬಂಧುಗಳಅಷ್ಟಮಂಗಳ ಮತ್ತು ತಾಂಬೂಲ ಪ್ರಶ್ನೆಗಳ ಚಿಂತೆ ನಡೆಸಿದಾಗ ಈ ಸ್ಥಳವು ರುಷಿ ಮುನಿಗಳಿದ್ದ ತಪೋಭೂಮಿಯೆಂದು ತಿಳಿದು ಬಂದಿದ್ದು, ಶ್ರೀ ಆದಿಮಾಯೆ ರಕ್ತೇಶ್ವರೀ ಮಾತೆಯ ಆದಿಸ್ಥಳವಾಗಿದ್ದು, ಕೊರಗಜ್ಜ ದೈವದ ಮೂಲ ನೆಲೆಯಾಗಿದ್ದು, ಶ್ರೀ ಕ್ಷೇತ್ರ ನಿರ್ಮಾಣ ನಡೆಸುವ ನಿಟ್ಟಿನಲ್ಲಿ ಕಳೆದ ಎರಡು ವರ್ಷಗಳಿಂದ ವಿವಿಧ ಧಾರ್ಮಿಕ ವಿ„ ವಿಧಾನಗಳನ್ನು ಪೂರೈಸಿದ್ದು, ಶ್ರೀ ಕ್ಷೇತ್ರದಲ್ಲಿ ಮವಂತೂರು ಶ್ರೀ ರಾಜಾರಾಮ ಭಟ್ ಅವರ ಪೌರೋಹಿತ್ಯದಲ್ಲಿ…
UN NETWORKS ಉಳ್ಳಾಲ: ಕೌಶಲ್ಯಾಭಿವೃದ್ಧಿ ಉದ್ಯಮ ಶೀಲತೆ ಹಾಗೂ ಜೀವನೋಪಾಯ ಇಲಾಖೆ ಬೆಂಗಳೂರು, ಸಿಡಾಕ್ಧಾರವಾಡ, ವೀರಾಂಜನೇಯ ವ್ಯಾಯಾಮ ಶಾಲೆ ಹಾಗೂ ವೈದ್ಯನಾಥ, ನಾಗಬ್ರಹ್ಮಶ್ರೀ ಮಹಾಗಣಪತಿ ದೇವಸ್ಥಾನ, ಬೈದೆರೆ ಪಾಲು ಸುಂದರಿಬಾಗ್ ಉಳ್ಳಾಲ ಇವರ ಸಂಯುಕ್ತಾಶ್ರಯದಲ್ಲಿ ದೇವಳದ ವಠಾರದಲ್ಲಿ ಸ್ಥಳೀಯ ಹಾಗೂ ಆಸುಪಾಸಿನ ವಿವಿಧ ಸ್ವಸಹಾಯ ಸಂಘದ ಸದಸ್ಯರುಗಳಿಗೆ ಉಚಿತ “ದಿಶಾ ” ಉದ್ಯಮ ಶೀಲತಾ ಜಾಗೃತಿ ಶಿಬಿರ ವ್ಯಾಯಾಮ ಶಾಲೆಯ ದೈಹಿಕ ಶಿಕ್ಷಕರಾದ ವಿಜಯ ಅಮೀನ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಇಲಾಖೆಯ ಜಂಟಿ ನಿರ್ದೇಶಕರಾದ ಅರವಿಂದ ಬಾಲೇರಿಯವರು ಮುಖ್ಯಅತಿಥಿಗಳಾಗಿ ಭಾಗವಹಿಸಿದರು.ದೇವಳದ ಪ್ರಧಾನ ಅರ್ಚಕರಾದ ಶ್ರೀಲಕ್ಷ್ಮೀಶ ಪುತ್ತೂರಾಯ ಶಿಬಿರಕ್ಕೆ ಚಾಲನೆ ನೀಡಿದರು.ಉಳ್ಳಾಲ ನಗರಸಭೆಯ ಮಾಜಿ ಕೌನ್ಸಿಲರ್ ಮಹಾಲಕ್ಷ್ಮಿ, ಹರಿಶ್ಚಂದ್ರ ಅಡ್ಕ, ಕೌಶಲ್ಯ ತರಬೇತಿದಾರರು ಹಾಗೂ ಸ್ಥಳೀಯ ಉದ್ಯಮಿ ಶ್ರೀಧರ್ ಕುಂಬ್ಳೆ ಭಾಗವಹಿಸಿ ಮಾತನಾಡಿದರು.ಸಿಡಾಕ್ ನ ಸಂಪನ್ಮೂಲ ವ್ಯಕ್ತಿ ಸತೀಶ್ ಮಾಬೆನ್ ಹಾಗೂ ಸಿಡಾಕ್ ಕೇಂದ್ರ ವ್ಯವಸ್ಥಾಪಕ ವಿನಾಯಕ ಪ್ರಭು ಇವರು ಉದ್ಯಮ ಶೀಲತೆ ಹಾಗೂ ದಿಶಾ ಯೋಜನೆಯ ಬಗ್ಗೆ ಸಮಗ್ರ ಮಾಹಿತಿ ನೀಡಿದರು.…

