UN NETWORKS ತಲಪಾಡಿ: ತಲಪಾಡಿಯ ಮೆಟ್ರೋ ಫರ್ನಿಚರ್ ವಲ್ರ್ಡ್ ಶೋರೂಮ್‍ನಲ್ಲಿ `ಮೆಟ್ರೋ ಸೋಫಾ ಎಕ್ಸ್‍ಚೇಂಜ್ ಮೇಳ’ ಆಯೋಜಿಸಿದ್ದು, ಗ್ರಾಹಕರನ್ನು ಆಕರ್ಷಿಸುತ್ತಿದೆ. ಮನೆಯಲ್ಲಿರುವ ಹಳೇ ಸೋಫಾವನ್ನು ಹೊಸ ಸೋಫಕ್ಕೆ ಬದಲಾಯಿಸಲು ಗ್ರಾಹಕರಿಗೆ ಉತ್ತಮ ಅವಕಾಶವಿದ್ದು, ಹಳೇಯ ಸೋಫಾವನ್ನು ಎಕ್ಸ್ ಚೇಂಜ್ ಮಾಡುವವರಿಗೆ 10 ಶೇಕಡಾ ಹೆಚ್ಚುವರಿ ರಿಯಾಯಿತಿಯೊಂದಿಗೆ ಫ್ರಿಪಿಕ್ ಆಂಡ್ ಡೆಲಿವರಿ ಸೌಕರ್ಯವನ್ನು ಮೆಟ್ರೋದಲ್ಲಿ ಏರ್ಪಡಿಸಲಾಗಿದೆ. ಬೆಲೆ ಕಡಿಮೆಯಲ್ಲಿ ಹಾಗೂ ಗುಣಮಟ್ಟದಲ್ಲಿ ಉತ್ತರ ಕೇರಳದ ಮತ್ತು ದಕ್ಷಿಣ ಕನ್ನಡದ ಗ್ರಾಹಕರ ಪ್ರಶಂಸೆಗಳಿಸಿದ ಸಂಸ್ಥೆಯಾಗಿದೆ. ಮೆಟ್ರೋ ಫರ್ನಿಚರ್ ವಲ್ರ್ಡ್ ಸೋಫಾಸೆಟ್, ಡೈನಿಂಗ್ ಸೆಟ್, ಬೆಡ್ ರೂಂ ಸೆಟ್ ಮುಂತಾದುವುಗಳ ವಿಶಾಲವಾದ ಕಲೆಕ್ಷನ್ ಇಲ್ಲಿ ಲಭ್ಯವಿದ್ದು, ತಲಪಾಡಿ ಟೋಲ್ ಗೇಟ್‍ನ ಸಮೀಪ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ನಾಲ್ಕು ಮಹಡಿಗಳಲ್ಲಿ 30,000 ಚದರ ವಿಸ್ತೀರ್ಣದ ಶೋರೂಂನಲ್ಲಿ ಗ್ರಾಹಕರಿಗೆ ಮಿತ ದರದಲ್ಲಿ ಸೋಫಾ ಸೇರಿದಂತೆ ಫರ್ನೀಚರ್ ಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
Author: UllalaVani
UN NETWORKS ಕೊಣಾಜೆ : ಕೊಣಾಜೆ ಸಪ್ತಸ್ವರ ಕಲಾ ತಂಡದ ನೂತನ ಅಧ್ಯಕ್ಷರಾಗಿ ರಾಮಚಂದ್ರ ಎಂ. ಆಯ್ಕೆಯಾಗಿದ್ದಾರೆ.ಸುರೇಂದ್ರ ಪೂಜಾರಿ ಬೊಳ್ಳೆಕುಮೇರು ಇವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾ ಸಭೆಯಲ್ಲಿ 2018- 2019ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಉಪಾಧ್ಯಕ್ಷರಾಗಿ ಹರಿದಾಸ್ ಬಿ, ಪ್ರಧಾನ ಕಾರ್ಯದರ್ಶಿಯಾಗಿ ಶರತ್ ಆಚಾರ್ಯ, ಜೊತೆ ಕಾರ್ಯದರ್ಶಿಯಾಗಿ ಕೃಷ್ಣಪ್ಪ ಬಿ, ಕೋಶಾಧಿಕಾರಿಯಾಗಿ ಶೇಖರ್ ಕೊಪ್ಪಳ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರಿತೇಶ್ ಶೆಟ್ಟಿ ಹೊಸಮನೆ, ಕ್ರೀಡಾ ಕಾರ್ಯದರ್ಶಿಯಾಗಿ ಮಂಜುನಾಥ ಕಲ್ಲಿಮಾರು ಹಾಗೂ ಭಜನಾ ಸಂಚಾಲಕರಾಗಿ ಮಂಜುನಾಥ ಪುಳಿಂಚಾಡಿ ಆಯ್ಕೆಮಾಡಲಾಯಿತು.
UN NETWORKS ಯೇನೆಪೊಯ : ಯೇನೆಪೊಯ ವಿಶ್ವವಿದ್ಯಾನಿಲಯದ ಯೇನೆಪೊಯ ದಂತ ಮಹಾವಿದ್ಯಾಲಯದ ಪ್ರೊಸ್ತೊಡೊಂಟಿಕ್ಸ್ ವಿಭಾಗದ ಆಶ್ರಯದಲ್ಲಿ ಪ್ರೊಸ್ಥೊಡೊಂಟಿಕ್ಸ್ ಡೇ (ಕೃತಕ ದಂತ ವೈದ್ಯಕೀಯ ದಿನ)ವನ್ನು ಆಚರಿಸಲಾಯಿತು. ಯೇನೆಪೊಯ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ| ಬಿ. ಹೆಚ್. ಶ್ರೀಪತಿರಾವ್ ಮತ್ತು ಪ್ರೊಸ್ತೊಡೊಂಟಿಕ್ಸ್ ವಿಭಾಗದ ಮುಖ್ಯಸ್ಥ ಡಾ| ಸನತ್ ಶೆಟ್ಟಿ, ಪ್ರಾಧ್ಯಾಪಕರು ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು, ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ಪ್ರೊಸ್ಥೋಡೊಂಟಿಕ್ಸ್ ಡೇ ಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಹಲವಾರು ಬಡರೋಗಿಗಳಿಗೆ ಹಲವು ಬಗೆಯ ಕೃತಕದಂತ ಉಚಿತವಾಗಿ ಚಿಕಿತ್ಸೆಯನ್ನು ನೀಡಲಾಯಿತು.
UN NETWORKS ತೊಕ್ಕೊಟ್ಟು: ಮಂಗಳೂರು ವಿಧಾನ ಸಭಾ ಕ್ಷೇತ್ರದ ಬಿ.ಜೆ.ಪಿ ಮಹಿಳಾ ಮೋರ್ಚಾದ ಕ್ಷೇತ್ರ ಕಾರ್ಯಕಾರಿಣಿ ಸಭೆ ತೊಕ್ಕೊಟಿನ ಬಿ.ಜೆ.ಪಿ ಕಚೇರಿಯಲ್ಲಿ ನಡೆಯಿತು. ಮಹಿಳಾ ಮೋರ್ಚಾದ ಅಧ್ಯಕ್ಷ ರಮಣಿ ಸೋಮೇಶ್ವರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷ ಪೂಜಾ ಪೈ, ಮುಂದಿನ ದಿನಗಳಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಸಂಘಟನೆಯಲ್ಲಿ ಮಹಿಳೆಯರ ಪಾತ್ರದ ಬಗ್ಗೆ, ಬೂತ್ ಮಟ್ಟದಲ್ಲಿ ಸಕ್ರೀಯ ಸದಸ್ಯರನ್ನು ಗುರುತಿಸುವ ಬಗ್ಗೆ ಮತ್ತು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಮಹಿಳಾ ಪರ ಯೋಜನೆ ಮತ್ತು ಇನ್ನಿತರ ಕಾರ್ಯಕ್ರಮದ ಬಗ್ಗೆ ಜನಸಾಮಾನ್ಯರಿಗೆ ಮುಟ್ಟಿಸುವ ಕೆಲಸ ಮಹಿಳಾ ಮೋರ್ಚಾದಿಂದ ಆಗಬೇಕೆಂದು ಎಂದು ಸಲಹೆ ನೀಡಿದರು. ಕ್ಷೇತ್ರ ಬಿ.ಜೆ.ಪಿ. ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್ ಕೆ.ಆರ್. ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ರಾಜೀವಿ ಕೆಂಪುಮಣ್ಣು, ಕಾರ್ಯದರ್ಶಿ ವೀಣಾ ಮಂಗಳ, ಕ್ಷೇತ್ರ ಉಪಾಧ್ಯಕ್ಷ ಜಯಶ್ರೀ ಕರ್ಕೇರಾ, ಕೋಟೆಕಾರು ಪಟ್ಟಣ ಪಂಚಯಿತಿ ಉಪಾಧ್ಯಕ್ಷ ಭಾರತಿ ಗಟ್ಟಿ, ಪೂರ್ಣಿಮಾ ಪ್ರಶಾಂತ್, ಉಳ್ಳಾಲ ನಗರಸಭೆ ಸದಸ್ಯರುಗಳಾದ…
UN NETWORKS ಬಗಂಬಿಲ : ಬಗಂಬಿಲ ಶ್ರೀ ವೈದ್ಯನಾಥೇಶ್ವರ ಭಜನಾ ಮಂದಿರದ ವಾರ್ಷಿಕೋತ್ಸವದ ಮೂಲಕ ವೈದ್ಯನಾಥನಗರದಲ್ಲಿ ಯುವಶಕ್ತಿ ಜಾಗೃತವಾಗಿದ್ದು, ಹೀಗೆ ಎಲ್ಲೆಡೆಯಲ್ಲಿಯೂ ಧರ್ಮ ಸಂಘಟನೆಯಲ್ಲಿ ತೊಡಗಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದು ಶ್ರೀ ಕ್ಷೇತ್ರ ಒಡಿಯೂರಿನ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು. ಬಗಂಬಿಲ ಶ್ರೀ ವೈದ್ಯನಾಥೇಶ್ವರ ಭಜನಾ ಮಂದಿರದ ಹನ್ನೊಂದನೇ ವಾರ್ಷಿಕೋತ್ಸವ ಪ್ರಯುಕ್ತ ನಡೆದ ಧಾರ್ಮಿಕ ಸಭೆಗೆ ಚಾಲನೆ ನೀಡಿ ಮಾತನಾಡಿ ಭಜನೆಯಲ್ಲಿ ಸಾತ್ವಿಕ ಭಾವ ಇದೆ. ಭಜನಾ ಮಂದಿರಗಳಿಂದ ಧರ್ಮದ ಅನುಷ್ಠಾನ ಸಾಧ್ಯವಾಗುತ್ತದೆ ಎಂದು ನುಡಿದರು. ಮಂಗಳೂರಿನ ನ್ಯಾಯವಾದಿ ಶಿವರಾಮ್ ಮಣಿಯಾಣಿ ಸುಸಂಸ್ಕೃತ ಸಮಾಜಕ್ಕೆ ಧಾರ್ಮಿಕ ನೆಲೆಗಟ್ಟು ಅವಶ್ಯಕ. ನಮ್ಮ ಸಂಸ್ಕೃತಿ-ಸಂಪ್ರದಾಯಗಳಿಗೆ ದಾಳಿಯಾಗಲು ಆಸ್ಪದ ನೀಡಬಾರದು ಎಂದು ತಿಳಿಸಿದರು.ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವಿಶ್ರಾಂತ ಮುಖ್ಯ ವ್ಯವಸ್ಥಾಪಕ ಕೆ. ರಾಜಾರಾಮ್ ಭಟ್, ಕೆ. ಗೀತಾಲಕ್ಷ್ಮಿ ಬಗಂಬಿಲ, ದೇರಳಕಟ್ಟೆ ಕರ್ಣಾಟಕ ಬ್ಯಾಂಕಿನ ಶಾಖಾ ಪ್ರಬಂಧಕ ಸಂದೀಪ್ ಕುಮಾರ್ ಪಿ, ಸಾರ್ವಜನಿಕ ಶ್ರೀ ಕೃಷ್ಣ ಜಯಂತ್ಯುತ್ಸವ ಸಮಿತಿ ಅತ್ತಾವರ ಉಪಾಧ್ಯಕ್ಷ ಚಂದ್ರನಾಥ್…
UN NETWORKS ಉಳ್ಳಾಲ: ನಾವು ಕೆಲಸಕ್ಕೆ ಜಾಸ್ತಿ ಒತ್ತುಕೊಡಬೇಕಾಗಿದೆಯೇ ಹೊರತು ಮಾತಿಗಲ್ಲ. ಆ ಕೆಲಸ ಉಳ್ಳಾಲ ಹಳೆಕೋಟೆ ಶಾಲೆಯಲ್ಲಿ ಆಗಿದೆ. ತಾಜ್ಯವನ್ನು ಸಂಗ್ರಹಣೆ ಮಾಡುವ ಮೂಲಕ ದೇಶದ ಗಮನ ಸೆಳೆಯುವಂತಹ ಕೆಲಸ ನಡೆದಿದೆ. ಯಾರೂ ಮಾಡದ ಕೆಲಸ ಹಳೆಕೋಟೆಯಲ್ಲಿ ವಿದ್ಯಾರ್ಥಿ ಗಳಿಂದ ಆಗಿದೆ. ಇಂತಹ ಕೆಲಸ ಎಲ್ಲೂ ಆಗಿಲ್ಲ. ಈ ಕೆಲಸ ದೇಶದ ಗಮನ ಸೆಳೆಯುತ್ತದೆ. ಇದರ ಎದುರು ನಮಗೆ ಮಾತನಾಡುವಂತಹ ಶಕ್ತಿ ಇಲ್ಲ. ರಾಜ್ಯಕ್ಕೆ ಗೌರವ ತರುವಂತಹ ಕೆಲಸ ಇದಾಗಿದೆ. ಇದನ್ನು ನಾವು ಸದಾ ಗೌರವಿಸುತ್ತೇವೆ ಎಂದು ದ.ಕ. ಜಿಲ್ಲಾ ಸ್ವಚ್ಛತಾ ರಾಯಬಾರಿ ಶೀನ ಶೆಟ್ಟಿ ಹೇಳಿದರು. ಅವರು ಹಳೆಕೋಟೆ ಶಾಲೆಯಲ್ಲಿ ಸಯ್ಯದ್ ಮದನಿ ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ತ್ಯಾಜ್ಯ ಸಂಗ್ರಹ ಮತ್ತು ಜಿಲ್ಲಾಧಿಕಾರಿಯವರೊಂದಿಗೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.ಉಳ್ಳಾಲ ದರ್ಗಾ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ತ್ವಾಹಾ ಮಾತನಾಡಿ, ಪ್ರಸಕ್ತ ತ್ಯಾಜ್ಯ ಸಂಪೂರ್ಣ ನಿವಾರಣೆ ಮತ್ತು ಸ್ವಚ್ಛತೆ ಕಾಪಾಡುವ ಕೆಲಸ ಉಳ್ಳಾಲದಲ್ಲಿ ಆಗುತ್ತಿದೆ. ಇಲ್ಲಿನ ವಿದ್ಯಾರ್ಥಿಗಳು ತ್ಯಾಜ್ಯ ಸಂಗ್ರಹ ಮಾಡಿ…
UN NETWORKS ಉಳ್ಳಾಲ: ದೊಡ್ಡ ಕೆಲಸವಾದರೂ, ಸಣ್ಣ ಕೆಲಸವಾದರೂ ಸರಿ, ಅದನ್ನು ಪ್ರೀತಿಯಿಂದ ಮಾಡಬೇಕು. ಆಗ ಮಾತ್ರ ಯಶಸ್ಸು ನಮಗೆ ಸಿಗಲು ಸಾಧ್ಯ. ಇದನ್ನು ನೋಡಿ ಮತ್ತೊಬ್ಬರು ಕಲಿಯುತ್ತಾರೆ. ಇದರಿಂದ ಸ್ವಚ್ಛತೆ ಉಳಿಯುತ್ತದೆ. ಶಾಲೆಯ ಸುತ್ತ ಮೀನು ವಾಸನೆ ಬಂದರೂ ಟಿಪ್ಪು ಸುಲ್ತಾನ್ ಶಾಲೆ ಸ್ವಚ್ಛವಾಗಿದೆ. ಇಂತಹ ಕೆಲಸಗಳನ್ನು ಮಾಡುವ ಮೂಲಕ ಭಾವೀ ಪ್ರಜೆಗಳಾಗಿ ಉನ್ನತ ಹಂತಕ್ಕೆ ವಿದ್ಯಾರ್ಥಿಗಳು ಬೆಳೆಯಲಿ ಎಂದು ದ.ಕ. ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಹೇಳಿದರು. ಅವರು ಉಳ್ಳಾಲದ ಟಿಪ್ಪು ಸುಲ್ತಾನ್ ಶಾಲೆಯಲ್ಲಿ ಬುಧವಾರ ನಡೆದ ಜಿಲ್ಲಾಧಿಕಾರಿಯೊಂದಿಗೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮಾಡಿದ ಸ್ವಚ್ಛತೆಯ ಕಾರ್ಯಕ್ರಮವನ್ನು ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು.ಉಳ್ಳಾಲ ಪೌರಾಯುಕ್ತೆ ವಾಣಿ ಆಳ್ವ ಮಾತನಾಡಿ, ಉಳ್ಳಾಲ ನಗರ ಸಭೆ ಬಹಳಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆದರೆ ಮುಂದಿನ ಪೀಳಿಗೆಗೆ ಯಾವ ರೀತಿಯ ಯೋಜನೆಗಳನ್ನು ಹಾಕಿಕೊಳ್ಳಬೇಕು ಎಂಬುದಕ್ಕೆ ವಿದ್ಯಾರ್ಥಿಗಳಿಂದಲೇ ಬೆಂಬಲ ಸಿಕ್ಕಿದೆ. ಉಳ್ಳಾಲದಲ್ಲಿರುವ 48 ಶಾಲೆಗಳಿಗೆ ಕೋಟೆಪುರ ಮಾದರಿ ಶಾಲೆಯಾಗಿ ಬಿಟ್ಟಿದೆ. ಸ್ವಚ್ಚತೆ ಹೇಗಿರಬೇಕೆಂದು ವಿದ್ಯಾರ್ಥಿಗಳೇ ತೋರಿಸಿಕೊಟ್ಟಿದ್ದಾರೆ. ಅವರನ್ನು…
UN NETWORKS ಕಿನ್ಯ: ನಮ್ಮ ಸಂಸ್ಕೃತಿ ಉಳಿಯಬೇಕಾದರೆ ನಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕೃತಿ ಕಲಿಸಬೇಕು. ಅವರು ಸಣ್ಣ ಪ್ರಾಯದಲ್ಲಿ ಒಳ್ಳೆಯ ಸಂಸ್ಕೃತಿ ಕಲಿತರೆ ಮುಂದಿನ ನಮ್ಮ ಸಮಾಜದಲ್ಲಿ ಉತ್ತಮ ಪ್ರಜೆಗಳಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಕಾಸರಗೋಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಆನೆಮಜಲು ವಿಷ್ಣು ಭಟ್ ಅಭಿಪ್ರಾಯಪಟ್ಟರು. ಕಿನ್ಯ ಕೇಶವ ಶಿಶು ಮಂದಿರದ 30ನೇ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮ ಶನಿವಾರ ಉದ್ಘಾಟಿಸಿ ಮಾತನಾಡಿದರು . ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸೋಮಯಾಜಿ ಎಸ್ಟೇಟ್ ಪ್ರೈವೇಟ್ ಲಿಮಿಟೆಡ್‍ನ ಮೆನೆಜಿಂಗ್ ಡೈರೆಕ್ಟರ್ ಬಿ. ರಘುನಾಥ ಸೋಮಯಾಜಿ ಮಾತನಾಡಿ ಈಗಿನ ಯುವಕರು, ಮಕ್ಕಳು ಬೇರೆ ದೇಶಕ್ಕೆ ಹೋಗಿ ಕಲಿಯುತ್ತಿದ್ದಾರೆ. ನಮ್ಮ ದೇಶದಲ್ಲೇ ಒಳ್ಳೆಯ ಕೆಲಸಗಳಿವೆ. ಇಲ್ಲಿಯೇ ಶಿಕ್ಷಣ ಪಡೆದರೆ ಇಲ್ಲಿಯೇ ಒಳ್ಳೆಯ ಕೆಲಸ ಮಾಡಬಹುದು ಎಂದರು.ಮಂಗಳೂರು ವಿಭಾಗ ಕುಟುಂಬ ಪ್ರಭೋದನ ಪ್ರಮುಖ್ ಗಜಾನನ ಪೆ` ಮುಖ್ಯ ಪ್ರಭಾಷಣ ಮಾಡಿದರು. ನರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಉತ್ತಮ ಸಂದೇಶ ನೀಡಿದರು. ಮಂಗಳೂರು ಭ್ರಷ್ಟಾಚಾರ…
UN NETWORKS ಕುಂಪಲ: ಕುಂಪಲ ನಿಸರ್ಗ ಲೇಔಟ್ ಯಕ್ಷಗಾನ ಬಯಲಾಟ ಸಮಿತಿ ವತಿಯಿಂದ ಯಕ್ಷಗಾನ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಶ್ರೀ ಮಯೂರ ವಾಹನ ಯಕ್ಷಗಾನ ನಾಟಕ ಸಭಾ ಸೂಡ ಕಾರ್ಕಳದ ಭಾಗವತ ಹಾಗೂ ಮೇಳದ ಸಂಚಾಲಕ ಹರೀಶ್ ಶೆಟ್ಟಿ ಸೂಡ, ರಂಗನಟ ವಿಜಯ ಕುಮಾರ್ ಶೆಟ್ಟಿ ಮೈಲೋಟ್ಟು ಮತ್ತು ಯಕ್ಷಗಾನ ಹಾಸ್ಯ ಕಲಾವಿದರನ್ನು ಸನ್ಮಾನಿಸಲಾಯಿತು. ಬಯಲಾಟ ಸಮಿತಿಯ ಗೌರವ ಅಧ್ಯಕ್ಷ ಕೇಶವದಾಸ್ ಬಗಂಬಿಲ, ಸಮಿತಿಯ ಅಧ್ಯಕ್ಷ ಹರೀಶ್ ಕೊಲೆಪಾಡಿ, ಪ್ರಸನ್ನ ಭಟ್, ಜೀವನ್ ಪೂಜಾರಿ, ರಮನಾಥ ಪೂಂಜಾ, ಪ್ರಶಾಂತ್, ರಾಮಚಂದ್ರ ಬಲ್ಲಾಳ್, ಹರೀಶ್ ಪೂಜಾರಿ, ಚಂದ್ರಶೇಖರ್ ಗೌಡ, ದೇವ್‍ದಾಸ್, ಲಕ್ಷ್ಮೀ ನಾರಾಯಣ ಕೆ, ನಿತೇಶ್, ದೀಕ್ಷಿತ್, ನಂದನ್, ಪ್ರವೀಣ್ ಪೂಜಾರಿ ಹಾಗೂ ಪ್ರದೀಪ್ ಹೆಗ್ಡೆ ಉಪಸ್ಥಿತರಿದ್ದರು.
UN NETWORKS ಕುಂಪಲ: ಕುಂಪಲ ಗೆಳೆಯರ ವತಿಯಿಂದ ದ.ಕ. ಜಿಲ್ಲಾ ಅಮೆಚೂರ್ ಕಬ್ಬಡ್ಡಿ ಎಸೋಸಿಯೇಶನ್‍ನ ಸಹಯೋಗದಲ್ಲಿ 21ವರ್ಷದ ವಯೋಮಾನದ ಒಳಗಿನ ಪುರುಷರ ಜಿಲ್ಲಾ ಮಟ್ಟದ ಪ್ರೊ ಮಾದರಿಯ ಮ್ಯಾಟ್ ಕಬ್ಬಡ್ಡಿ ಪಂದ್ಯಾಟ ಕುಂಪಲ ಮೂರುಕಟ್ಟದಲ್ಲಿ ನಡೆಯಿತು. ಕ್ರೀಡಾಕೂಟವನ್ನು ಬಾಲಕೃಷ್ಣ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ ಉದ್ಘಾಟಿಸಿದರು. ಉದ್ಯಮಿ ಜಯಂತ್ ಕೊಂಡಾಣ, ಹಿಂದೂ ಜಾಗರಣ ವೇದಿಕೆಯ ಸಂಚಾಲಕ ಪ್ರಕಾಶ್ ಕುಂಪಲ, ವಿನೋದ್ ಕುಂಪಲ, ಉದ್ಯಮಿ ಹರೀಶ್ ಮೂರುಕಟ್ಟ, ಶರತ್ ಕುಮಾರ್, ಸುರೇಶ್ ಸಾಲಿಯಾನ್, ಚಂದ್ರಹಾಸ್ ಮೂರುಕಟ್ಟ, ಅಶೋಕ್ ಕುಂಪಲ, ವೆಂಕಟಗಿರೀಶ್ ಕುಂಪಲ, ಪುರಸಭೆ ಸದಸ್ಯ ರವಿಚಂದ್ರ ಗಟ್ಟಿ, ವಿನೋದ್ ಗಟ್ಟಿ ಕುಂಪಲ, ಸಾಗರ್ ಕುಂಪಲ, ಕಿಶೋರ್ ಡಿ.ಕೆ, ಲಿಖಿತ್ ಕುಂಪಲ, ಚೇತನ್ ಸನಿಲ್, ಚಂದ್ರಹಾಸ್ ಮಿತ್ರನಗರ, ನವಾಝ್ ಮೊಂಟುಗೋಳಿ ಉಪಸ್ಥಿತರಿದ್ದರು.40ತಂಡಗಳು ಭಾಗವಹಿಸಿದ ಈ ಕಬ್ಬಡ್ಡಿ ಪಂದ್ಯಾಟದಲ್ಲಿ ವಿಕಾಸ್ ಪದವಿಪೂರ್ವ ಕಾಲೇಜು ಪ್ರಥಮ, ಆಝಾದ್ ಕಿನ್ಯ ದ್ವಿತೀಯ, ಆಳ್ವ ಫ್ರೆಂಡ್ ಪಿಲಾರ್ ತೃತೀಯ, ದುರ್ಗಾಪರಮೇಶ್ವರೀ ತಲಪಾಡಿ ಚತುರ್ಥ ಸ್ಥಾನ ಪಡೆಯಿತು. ವಿಕಾಸ್ ಕಾಲೇಜಿನ ಶ್ರೇಯಸ್…

