UN NETWORKS ಉಳ್ಳಾಲ: SKSSF ದೇರಳಕಟ್ಟೆ ಶಾಖೆಯ ವತಿಯಿಂದ ಗ್ರೀನ್ ಗ್ರೌಂಡ್ ಮದರಸ ವಠಾರದಲ್ಲಿ ಸಂಶುಲ್ ಉಲಮಾ ಮೌಲಿದ್ ವಾರ್ಷಿಕ ಹಾಗೂ ಮಿತ್ತಬೈಲ್ ಉಸ್ತಾದರ ಅನುಸ್ಮರಣಾ ಸಂಗಮ ನಡೆಯಿತು. ಸಯ್ಯದ್ ಮದನಿ ಅರಬಿಕ್ ಕಾಲೇಜು ಪ್ರಿನ್ಸಿಪಾಲ್,ಶೈಖುನಾ ಉಸ್ಮಾನ್ ಫೈಝಿ ರವರ ಆದ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಯ್ಯದ್ ಅಮೀರ್ ತಂಗಳ್ ಮೌಲಿದ್ ಮಜ್ಲಿಸ್ ನೇತೃತ್ವ ವಹಿಸಿದರು.ದೇರಳಕಟ್ಟೆ ಬದ್ರಿಯಾ ಜುಮಾ ಮಸ್ಜಿದ್ ಮುದರ್ರಿಸ್ ಬಹು ಶರೀಫ್ ಅರ್ಶದಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಹು ಇಬ್ರಾಹಿಂ ಬಾಖಾವಿ ಉಸ್ತಾದ್ ಕೆ.ಸಿ ರೋಡ್, ಎಸ್ ಕೆ.ಎಸ್.ಎಸ್.ಎಫ್ ಜಿಲ್ಲಾಧ್ಯಕ್ಷರಾದ ಬಹು ಖಾಸಿಂ ದಾರಿಮಿ, ಮಿತ್ತಬೈಲ್ ಉಸ್ತಾದರ ಸುಪುತ್ರ ಬಹು ಇರ್ಷಾದ್ ದಾರಿಮಿ. ಹಾಫಿಲ್ ಝೈನ್ ಸಖಾಫಿ. ಅನುಸ್ಮರಣಾ ಪ್ರಭಾಷಣವನ್ನು ನಡೆಸಿದರು.ಹಾಗೂ ಕೀಚೇರಿ ಅಬ್ದುಲ್ ಗಫೂರ್ ಮೌಲವಿ ಮುಖ್ಯ ಪ್ರಭಾಷಣಗೈದರು.ತಹ್ಲೀಲ್ ಹಾಗೂ ದುಆ ಮಜ್ಲಿಸ್ ಗೆ ಬಹು ಸಯ್ಯದ್ ಹಾರಿಸಲಿ ಶಿಹಾಬ್ ತಂಗಳ್ ಪಾಣಕ್ಕಾಡ್ ನೇತೃತ್ವ ವಹಿಸಿದರು.ಕಾರ್ಯಕ್ರಮದಲ್ಲಿ ದೇರಳಕಟ್ಟೆ ಮದರಸ ಮ್ಯಾನೇಜ್ಮೆಂಟ್ ಅಧ್ಯಕ್ಷರಾದ ಡಿ. ಇಸ್ಮಾಯಿಲ್ ಹಾಜಿ.ದೇರಳಕಟ್ಟೆ ಎಜುಕೇಷನಲ್ & ಚಾರೀಟೇಬಲ್ ಟ್ರಸ್ಟ್…
Author: UllalaVani
UN NETWORKS ದೇರಳಕಟ್ಟೆ: ನಿಟ್ಟೆ ಉಷಾ ಇನ್ಸಿಟ್ಯೂಟ್ ಆಫ್ ನರ್ಸಿಂಗ್ ಸಾಯನ್ಸ್, ನಿಟ್ಟೆ ಮಕ್ಕಳ ಶುಶ್ರೂಷ ವಿಭಾಗದ ವತಿಯಿಂದ ಎಸಿಸ್‍ಮೆಂಟ್ ರಿಸಸಿಟೇಷನ್ ಆ್ಯಂಡ್ ಸ್ಟೆಬಿಲೈಜೇಷನ್ ಎಂಬ ರಾಜ್ಯಮಟ್ಟದ ಕಾರ್ಯಗಾರ ಜಸ್ಟಿಸ್ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಚಿಂತನ ಸೆಮಿನಾರ್ ಹಾಲ್‍ನಲ್ಲಿ ನಡೆಯಿತು. ಡಾ. ಸಂದೀಪ್ ರೈ ಕಾರ್ಯಕ್ರಮ ಉದ್ಘಾಟಿಸಿದರು.ಮಕ್ಕಳ ಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಪ್ರೊ. ಡಾ. ಸಂದೀಪ್ ರೈ, ಕೆ.ಎಂ.ಸಿ ವೀಕ್ಷಕರಾದ ಪ್ರೊ. ಶಾಂತಿ ಎಸ್., ಕಾರ್ಯಗಾರ ಸಂಯೋಜಕಿ ಸುಜಾತ ಆರ್., ಕಾರ್ಯದರ್ಶಿ ಜೀವಿತಾ ಆಳ್ವ, ಉಪನ್ಯಾಸಕಿ ಹರ್ಷಾ ತೋಮಸ್, ಸಂಪನ್ಮೂಲ ವ್ಯಕ್ತಿಗಳಾಗಿ ನಿಟ್ಟೆ ಮಕ್ಕಳ ಶುಶ್ರೂಷ ವಿಭಾಗದವರು ಉಪಸ್ಥಿತರಿದ್ದರು.ಬೆನಿಟಾ ಸನ್ನಿ ಕಾರ್ಯಕ್ರಮ ನಿರೂಪಿಸಿದರು.
UN NETWORKS ಉಳ್ಳಾಲ: ಉಳ್ಳಾಲ ನಗರದ ವಿವಿಧ ರಸ್ತೆ ಕಾಮಗಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಉಳ್ಳಾಲ ಒಳಪೇಟಿಯಿಂದ ನೇರವಾಗಿ ಮಂಚಿಲಕ್ಕೆ ಸಂಪರ್ಕಿಸುವ ರಸ್ತೆ ಹಾಗೂ ವಿವಿಧ ರಸ್ತೆ ಕಾಮಗಾರಿ ಕುರಿತು ಗುತ್ತಿಗೆದಾರರೊಂದಿಗೆ ಚರ್ಚಿಸಿದರು. ಲೋಕೋಪಯೋಗಿ ಸಹಾಯಕ ಎಂಜಿನಿಯರ್ ರವಿ ಕುಮಾರ್, ನಗರಸಭೆ ಮಾಜಿ ಸದಸ್ಯ ಮುಸ್ತಾಫ ಅಬ್ದುಲ್ಲಾ, ದಿನೇಶ್ ರೈ ನಗರಸಭೆ ಕೌನ್ಸಿಲರ್ ಯು.ಎ ಇಸ್ಮಾಯಿಲ್, ಅಶ್ರಫ್ ಮಾಸ್ತಿಕಟ್ಟೆ, ಸ್ವಪ್ನಾ ಹರೀಶ್, ವೀಣಾ ಡಿಸೋಜಾ, ಬಾಝಿಲ್ ಡಿಸೋಜ, ಅಯೂಬ್ ಮಂಚಿಲ, ಸ್ಥಳೀಯರಾದ ಯು.ಎಂ. ಜಬ್ಬಾರ್, ಗುತ್ತಿಗೆದಾರ ಅಹಮ್ಮದ್ ಬಾವಾ ಕೊಟ್ಟಾರ, ಅಯೂಬ್ ಮಂಚಿಲ, ರಾಜು ಬಂಡಸಾಲೆ, ಇಸ್ಮಾಯಿಲ್ ಸೀದಿಯಬ್ಬ, ದೀಪಕ್ ಪಿಲಾರ್, ಇಬ್ರಾಹಿಂ ಹೆಜಮಾಡಿ, ಎಂಜಿನಿಯರುಗಳಾದ ಅನ್ಸಾರ್, ಮಜೀದ್ ಹಾಗೂ ಅಫ್ರೀದ್ ಹುಸೈನ್ ಉಪಸ್ಥಿತರಿದ್ದರು.
UN NETWORKS ದೇರಳಕಟ್ಟೆ: ದೇರಳಕಟ್ಟೆಯ ನಿಟ್ಟೆ ಪರಿಗಣಿಸಲಾಗಿರುವ ವಿವಿ ಔಷಧೀಯ ವಿಭಾಗಕ್ಕೆ ಸಂಬಂಧಿಸಿದಂತೆ ಮೆಡಿಟೆಕ್ ಇಂಡಿಯಾದ ಅಂಗ ಸಂಸ್ಥೆಯಾದ ಮೆಡಾರ್ಗೊನಿಕ್ಸ್ ಪ್ರೈ. ಲಿ. ಸಂಸ್ಥೆಯ ಜೊತೆಗೆ ಮಂಗಳವಾರ ಒಡಂಬಡಿಕೆ ಮಾಡಿಕೊಂಡಿದ್ದು ಉಭಯ ಸಂಸ್ಥೆಗಳ ಪ್ರಮುಖರು ಸಹಿ ಹಾಕಿದರು. ಮಂಗಳೂರಿನ ಉದ್ಯಮಿ ಪ್ರಮೋದ್ ಹೆಗ್ಡೆ ಅವರು ಮೆಡಿಟೆಕ್ ಇಂಡಿಯಾದ ಅಂಗಸಂಸ್ಥೆಯಾಗಿ 2018ರಲ್ಲಿ ಮೆಡೋರ್ಗೊನಿಕ್ಸ್ ಪ್ರೈ.ಲಿ. ಸಂಸ್ಥೆ ಆರಂಭಿಸಿದ್ದು ಆಯುರ್ವೇದಕ್ಕೆ ಸಂಬಂಧಪಟ್ಟಂತೆ ಸಂಸ್ಥೆಯು ಎಲ್ಲ ಔಷಧ ತಯಾರು ಮಾಡುತ್ತಿದೆ. ಬೈಕಂಪಾಡಿಯಲ್ಲಿ ಅತ್ಯಾಧುನಿಕ ಉತ್ಪಾದನೆ ಘಟಕ ಹೊಂದಿದೆ. ಒಪ್ಪಂದದ ಪ್ರಕಾರ ನಿಟ್ಟೆ ಫಾರ್ಮಸಿ ವಿಭಾಗದ ವಿದ್ಯಾರ್ಥಿಗಳಿಗೆ ಪೂರ್ವ ತರಬೇತಿ ಹಾಗೂ ಪೂರ್ವ ಕ್ಲಿನಿಕಲ್ ಅಧ್ಯಯನ ತರಬೇತಿ ಮತ್ತು ಔಷಧೀಯ ಅಭಿವೃದ್ಧಿ ಕ್ಷೇತ್ರದಲ್ಲಿ ಸಹಕಾರ ನೀಡಲಿದ್ದು ನಿಟ್ಟೆ ಹಾಗೂ ಮೆಡೋರ್ಗನಿಕ್ಸ್ ಸಂಸ್ಥೆ ಸಂಯೋಜನೆಯೊಂದಿಗೆ ಸಂಶೋಧನೆಯನ್ನು ನಡೆಸಲಿದೆ. ಮೆಡೋರ್ಗನಿಕ್ಸ್‍ನ ವ್ಯವಸ್ಥಾಪಕ ನಿರ್ದೇಶಕ ಪ್ರಮೋದ್ ಹೆಗ್ಡೆ ಹಾಗೂ ನಿಟ್ಟೆ ಪರಿಗಣಿಸಲಾಗಿರುವ ವಿವಿಯ ಕುಲಪತಿ ಪ್ರೊ. ಡಾ. ಸತೀಶ್ ಕುಮಾರ್ ಭಂಡಾರಿ ಒಪ್ಪಂದಕ್ಕೆ ಸಹಿ ಹಾಕಿದರು. ಮೆಡೋರ್ಗನಿಕ್ಸ್‍ನ ಗುಣಮಟ್ಟ ಪರಿಶೀಲನಾ ಮುಖ್ಯಸ್ಥ…
UN NETWORKS ಮಂಗಳೂರು: ಜಮಾಅತ್ ಪರಿಸರದಲ್ಲಿ ಇರುವ ಬಡ ಹೆಣ್ಣು ಮಕ್ಕಳನ್ನು ಗುರುತಿಸಿ ಅವರಿಗೆ ಮದುವೆಯಾಗಲು ಸಹಾಯ ಮಾಡುವುದು ಪ್ರತಿಯೊಬ್ಬ ಮುಸ್ಲಿಮನ ಕರ್ತವ್ಯವಾಗಿದೆ. ಇಂತಹ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ದ.ಕ ಜಿಲ್ಲಾ ಸಂಯುಕ್ತ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಹೇಳಿದರು. ಅವರು ರಿಫಾಯಿಯ್ಯಾ ದಫ್ಫ್ ಕಮಿಟಿ ಪಕ್ಕಲಡ್ಕ ಇದರ 14ನೇ ವಾರ್ಷಿಕೋತ್ಸವದ ಪ್ರಯುಕ್ತ ಬಜಾಲ್ ಮಿತ್ತಬೈಲ್ ಉಸ್ತಾದ್ ವೇದಿಕೆಯಲ್ಲಿ ಅಯೋಜಿಸಿದ 2 ಜೋಡಿಯ ಸರಳ ವಿವಾಹ ಕಾರ್ಯಕ್ರಮದ ನಿಖಾಹ್ ನೆರವೇರಿಸಿ ಮಾತನಾಡಿದರು.ಪ್ರತಿಯೊಂದು ಜಮಾಅತ್‍ಗಳಲ್ಲಿ ಸಂಘ ಸಂಸ್ಥೆಗಳ ಸಹಕಾರದಿಂದ ಬಡ ಹೆಣ್ಣು ಮಕ್ಕಳ ವಿವಾಹ ಮಾಡುವ ಜವಾಬ್ದಾರಿ ವಹಿಸಿದಾಗ , ಬಡ ಹೆತ್ತವರು ಮದುವೆ ಸಹಾಯಕ್ಕಾಗಿ ಬೇಡುವ ಪರಿಸ್ಥಿತಿ ದೂರವಾಗುತ್ತದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಇಹ್ಸಾನ್ ಕರ್ನಾಟಕ ಕನ್‍ವೀನರ್ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಮಾತನಾಡಿ, ರಿಫಾಯಿಯ್ಯಾ ದಫ್ಫ್ ಕಮಿಟಿ 14 ವರ್ಷಗಳಿಂದ ಉತ್ತಮ ಸಮಾಜಸೇವೆ ಮಾಡುತ್ತಾ ಬಂದಿದೆ. ಇಂತಹ ಸಮಾಜಮುಖಿ ಸಂಘಟನೆಗಳು ಪ್ರತಿ ಊರಿನಲ್ಲಿ ಅಗತ್ಯವಿದೆ. ಇಂತಹ ಸಮಾಜಮುಖಿ ಕಾರ್ಯಗಳ ಮೂಲಕ ಕಮಿಟಿ…
UN NETWORKS ಉಳ್ಳಾಲ: ಬಡ ನಿರ್ಗತಿಕ, ಅನಾರೋಗ್ಯ ಪೀಡಿತರಿಗೆ ಸಹಾಯ ಮಾಡುವ ಮತ್ತು ಉಳ್ಳಾಲ ಪರಿಸರದವರಿಗೆ ಆಂಬ್ಯುಲೆನ್ಸ್ ಸೇವೆ ಒದಗಿಸುವ ಸಲುವಾಗಿ ಕ್ರಿಕೆಟ್ ಪಂದ್ಯಾಟವನ್ನು ನಡೆಸಿದ ಬಿ,ಬಾಯ್ಸ್ ಸ್ಪೋಟ್ರ್ಸ್ ಮತ್ತು ಕಲ್ಚರಲ್ ಅಸೋಸಿಯೇಶನ್ ಅವರ ಸಾಮಾಜಿಕ ಕಾರ್ಯ ನಿರಂತರವಾಗಿ ನಡೆಯಲಿ ಎಂದು ಉಳ್ಳಾಲ ನಗರ ಸಭಾ ಸದಸ್ಯ ಯು.ಪಿ.ಅಯ್ಯೂಬ್ ಮಂಚಿಲ ಹೇಳಿದರು. ಅವರು ಮದನಿ ಜೂನಿಯರ್ ಕಾಲೇಜಿನ ವಠಾರದಲ್ಲಿ ಇತ್ತೀಚೆಗೆ ಜರಗಿದ ಅಳೇಕಲ ಬಿ,ಬಾಯ್ಸ್ ಸ್ಪೋಟ್ರ್ಸ್ ಮತ್ತು ಕಲ್ಚರಲ್ ಅಸೋಸಿಯೇಶನ್‍ನ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ನೆರವೇರಿಸಿ ಮಾತನಾಡಿದರು.ಈ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಹಝ್ರತ್ ಶಾಲೆಯ ನಫೀಸ, ಮರಿಯ ಬೀವಿ, ಮತ್ತು ಮದನಿ ಹಿರಿಯ ಪ್ರಾಥಮಿಕ ಶಾಲೆಯ ಶಾಹುಲ್ ಹಮೀದ್, ಕುರಾನ್ ಕಂಠ ಪಾಠ ಮಾಡಿ ಹಾಫಿಳ್ ಸಾಧನೆ ಮಾಡಿದ ಸಂಶುದ್ದೀನ್ ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಅಲೆಕಳ ಮದನಿ ಶಿಕ್ಷಣ ಸಂಸ್ಥೆಯಲ್ಲಿ ಕಳೆದ…
UN NETWORKS ತಲಪಾಡಿ: ತಾ.ಪಂ.ಸದಸ್ಯ ಸಿದ್ದೀಕ್ ಕೊಳಂಗೆರೆ ಅವರು ಲಕ್ಷ ಅನುದಾನ ನೀಡುವ ಭರವಸೆ ಮೇರೆಗೆ ಎಪಿಎಂಸಿ ಹಾಗೂ ಶಾಸಕರ ವಿಶೇಷ ಅನುದಾನದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ ಅಭಿಪ್ರಾಯಪಟ್ಟರು. ತಲಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಂಜಳದಲ್ಲಿ ತಾಲೂಕು ಪಂಚಾಯಿತಿ ಹಾಗೂ ಶಾಸಕರ ವಿಶೇಷ ಅನುದಾನದಲ್ಲಿ ನಡೆಯಲಿರುವ ಒಳಚರಂಡಿ ಮತ್ತು ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.ತಲಪಾಡಿ ಕಾಂಗ್ರೆಸ್ ಭದ್ರ ಕೋಟೆಯಾದರೂ ಕೆಲವೊಂದು ಕಾರಣಗಳಿಂದ ಪಂಚಾಯಿತಿ ಆಡಳಿತ ಕೈತಪ್ಪಿದೆ. ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ಮತ್ತೆ ಕಾಂಗ್ರೆಸ್ ಗೆ ಬೆಂಬಲ ನೀಡುವ ಮೂಲಕ ಹೆಚ್ಚಿನ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಹೇಳಿದರು.ತಾಲೂಕು ಪಂಚಾಯಿತಿ ಅಧ್ಯಕ್ಷ ಮೊಹಮ್ಮದ್ ಮೋನು ಮಾತನಾಡಿ, ಗಡಿಭಾಗ ತಲಪಾಡಿ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶವಾಗಿದ್ದು ಶಾಸಕರು ಅನುದಾನ ನೀಡಿದರೂ ಸ್ಥಳೀಯ ಜನಪ್ರತಿನಿದಿಗಳ ಅನುದಾನ ಮೀಸಲಿಡಬೇಕು ಎಂದರು.ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮುಸ್ತಫಾ ಮಲಾರ್, ಮುಖಂಡರಾದ ಶ್ರೀನಿವಾಸ ಶೆಟ್ಟಿ ಪುಲ್ಲು ಹಾಗೂ ಗಣೇಶ್…
UN NETWORKS ದುಬೈ: ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಇತ್ತೀಚೆಗೆ ದುಬೈ ಭೇಟಿ ನೀಡಿದ್ದ ವೇಳೆ ಮಂಗಳೂರು ಮೂಲದ ಅನಿವಾಸಿ ಉದ್ಯಮಿ ಅಬ್ದುಲ್ ಹಮೀದ್ ಅವರು ಪೈಲಟ್ ( ಪ್ರಮುಖರಾಗಿ) ಪ್ರದೇಶ ವೀಕ್ಷೆಣೆಗೆ ಸಹಕರಿಸಿದ್ದು, ಇದೇ ವೇಳೆ ಅನಿವಾಸಿ ಉದ್ಯಮಿಯಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ ನಾದ್ಯಂತ ಪ್ರಖ್ಯಾತಿ ಪಡೆದಿರುವ ಅಬ್ದುಲ್ ಹಮೀದ್ ರವರನ್ನು ರಾಹುಲ್ ಗಾಂಧಿ ಪ್ರಶಂಸಿದ್ದಾರೆ. ಅಬ್ದುಲ್ ಹಮೀದ್ ಓರ್ವ ಯಶಸ್ವಿ ಉದ್ಯಮಿಯಾಗಿ ಅನಿವಾಸಿಯಾಗಿದ್ದುಕೊಂಡು ಭಾರತ ದೇಶಕ್ಕೆ ನೀಡುತ್ತಿರುವ ಕೊಡುಗೆಗಳ ಕುರಿತು ರಾಹುಲ್ ಗಾಂಧಿ ಪ್ರಶಂಸೆಯ ಮಾತುಗಳನ್ನಾಡಿದರು. ಅಬ್ದುಲ್ ಹಮೀದ್ ಕರಾವಳಿ ಮೂಲದವರಾಗಿದ್ದಾರೆ. ಸದ್ಯ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ತಂತ್ರಜ್ಞಾನದಲ್ಲಿ ಹಾಗೂ ನೂತನ ಆವಿಷ್ಕಾರ ವಿಭಾಗದ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ.
UN NETWORKS ಕುರ್ನಾಡು: ಅಧ್ಯಕ್ಷರು, ಉಪಾಧ್ಯಕ್ಷರು , ಪಂಚಾಯತ್ ಸದಸ್ಯರು, ತಾಲೂಕು ಪಂಚಾಯತ್ ಸದಸ್ಯರು ಎಲ್ಲರ ಒಮ್ಮತದ ಅಭಿಪ್ರಾಯದಂತೆ ಕುರ್ನಾಡುವಿನ ಪ್ರತಿ ಮೂಲೆಗಳಲ್ಲಿ ರಸ್ತೆ ಕಾಂಕ್ರೀಟಿಕರಣ ಕಾಮಗಾರಿ ನಡೆಯುತ್ತಿದೆ. ಇದೊಂದು ಜಿಲ್ಲೆಗೆ ಮಾದರಿಯಾದ ಪಂಚಾಯತ್ ಎಂದು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಹೇಳಿದರು. ಅವರು ಕುರ್ನಾಡು ಗ್ರಾಮ ಪಂಚಾಯತ್ ವತಿಯಿಂದ ಕಟ್ಟೆಮಾರು ಕಿನ್ನಾಜೆ ರಸ್ತೆ ಕಾಂಕ್ರೀಟಿಕರಣಕ್ಕೆ ಸೋಮವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.ಹಲವು ವರ್ಷಗಳಿಂದ ಕಟ್ಟೆಮಾರು ಪ್ರದೇಶದಲ್ಲಿ ರಸ್ತೆ ನಿರ್ಮಾಣ ಸಾಧ್ಯವಾಗಿರಲಿಲ್ಲ. ಈ ಬಾರಿ ಸ್ಥಳೀಯರ ಬೆಂಬಲದಿಂದ ರಸ್ತೆ ಕಾಮಗಾರಿ ಸಾಧ್ಯವಾಗಿದೆ. ರಸ್ತೆಯ ಅಭಿವೃದ್ಧಿಗೆ ಹೆಚ್ಚಿನ ಸ್ಥಳಾವಕಾಶ ಬೇಕಾದಲ್ಲಿ ತನ್ನ ವೈಯಕ್ತಿಕ ಜಾಗವನ್ನು ಬಿಟ್ಟುಕೊಡುವುದಾಗಿ ತಿಳಿಸಿದರು. ಬಿಜೆಪಿ ಕುರ್ನಾಡು ಶಕ್ತಿಕೇಂದ್ರದ ಅಧ್ಯಕ್ಷ ಟಿ.ಜಿ ರಾಜಾರಾಂ ಭಟ್ ಮಾತನಾಡಿ ಗ್ರಾ.ಪಂ ಜನರ ಸಮಸ್ಯೆಗಳನ್ನು ನಿಯಂತ್ರಿಸಲು ಸಾಧ್ಯವಾದಲ್ಲಿ ಮಾತ್ರ ಗಾಂಧಿಯ ರಾಮರಾಜ್ಯದ ಕನಸು ನನಸಾಗುವುದು. ಇದಕ್ಕೆ ಕುರ್ನಾಡು ಗ್ರಾ.ಪಂ ಸಾಕ್ಷಿಯಾಗಿದೆ ಎಂದರು. ಸ್ಥಳೀಯರಾದ ನಾಗರಾಜ್ ಭಟ್ ಮಾತನಾಡಿ ಹಿಂದೆ ನೀರು…
UN NETWORKS ಮುಡಿಪು : ಕೇಂದ್ರ ಸರ್ಕಾರ ರಾಜ್ಯಕ್ಕೆ ಏನೂ ಕೊಟ್ಟಿಲ್ಲ ಎಂದು ಹೇಳುತ್ತಿರುವವರು ಪ್ರಧಾನಿ ಮೋದಿ ರಾಜ್ಯಕ್ಕೆ ಎರಡು ಲಕ್ಷ ಕೋಟಿ ರೂ. ಅನುದಾನ ಕೊಟ್ಟಿದ್ದು, ಮಂಗಳೂರು ಕ್ಷೇತ್ರದಲ್ಲಿ ತೆಂಗಿನಕಾಯಿ ಒಡೆದವರು ಖಾದರ್ ಆಗಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಲೇವಡಿ ಮಾಡಿದರು. ಮುಡಿಪುವಿನಲ್ಲಿ ಭಾನುವಾರ ನಡೆದ ಬೈಕ್ ರ್ಯಾಲಿ, ಬಿಜೆಪಿ ಚುನಾವಣಾ ಕಚೇರಿ ಉದ್ಘಾಟನೆ ಹಾಗೂ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಖಾದರ್ ಅವರಂತೆ ಸಾರಾಯಿ ಕೊಡುತ್ತೇವೆ, ಅಕ್ಕಿ ಕೊಡುತ್ತೇವೆ ಎಂದು ಭರವಸೆ ನೀಡದೆ ಕೇವಲ ಮೂರು ವಿಚಾರಗಳಲ್ಲಿ ಚುನಾವಣೆ ಎದುರಿಸಿ ಅಧಿಕಾರಕ್ಕೆ ಬಂದಿದೆ. ಮೋದಿ ಎದೆಯ ಇಂಚು ತೋರಿಸಲಿಲ್ಲ, ವಿಶ್ವಕ್ಕೆ ಎದೆಗಾರಿಕೆ ತೋರಿಸಿದರು. ಆಮಿಷ, ಅವೇಶ ಇಲ್ಲದೆ ಭಯೋತ್ಪಾದನೆ ನಿಗ್ರಹ, ಸಬ್‍ಕಾ ಸಾಥ್ ಸಬ್‍ಕಾ ವಿಕಾಸ್ ಹಾಗೂ ಕಪ್ಪು ಹಣ ನಿಯಂತ್ರಿಸುತ್ತೇವೆ ಎಂದು ಮಾತು ಕಟ್ಟಂತೆ ಸರ್ಜಿಕಲ್ ಸ್ಟ್ರೈಕ್, ಭಯೋತ್ಪಾದನೆ ನಿಗ್ರಹವಾಗಿದೆ. 2014ರಿಂದ 2018ರ ತನಕ ಈ ದೇಶದಲ್ಲಿ ಯಾವ…

