UN NETWORKS ಉಳ್ಳಾಲ: ಮನೆಯೊಂದರ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಲಕ್ಷಾಂತರ ರೂ ಬೆಲೆಬಾಳುವ ಚಿನ್ನಾಭರಣ ಹಾಗೂ ನಗದನ್ನು ಕಳ್ಳತನ ನಡೆಸಿದ ಘಟನೆ ಶುಕ್ರವಾರ ರಾತ್ರಿ ಉಳ್ಳಾಲ ಹಳೆಕೋಟೆಯಲ್ಲಿ ನಡೆದಿದೆ. ಕಳ್ಳತನ ನಡೆಸಿ ಪರಾರಿಯಾಗುತ್ತಿದ್ದ ಮೂವರಲ್ಲಿ ಒಬ್ಬಾತನನ್ನು ಸ್ಥಳೀಯರು ಹಿಡಿದಿದ್ದು, ಜೊತೆಗಿದ್ದ ಇನ್ನಿಬ್ಬರು ಪರಾರಿಯಾಗಿದ್ದಾರೆ. ತಮಿಳುನಾಡು ಮೂಲದ ಷಣ್ಮುಗಂ(43) ಎಂಬಾತನೇ ಕಳ್ಳತನ ನಡೆಸಿ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿರುವ ಆರೋಪಿಯಾಗಿದ್ದಾನೆ. ಉಳ್ಳಾಲದ ಹಳೆಕೋಟೆ ದಿ.ಮಹಮ್ಮದ್ ಅವರ ಜಸ್ಮಿಲ್ ಮಂಜಿಲ್‍ನಲ್ಲಿ ಶುಕ್ರವಾರ ರಾತ್ರಿ ಈ ಕಳ್ಳತನ ಕೃತ್ಯ ನಡೆದಿದೆ. ಮನೆ ಮಂದಿ ಶನಿವಾರ ಸಂಜೆ ಕೌಟುಂಬಿಕ ಕಾರ್ಯಕ್ಕೆಂದು ತೆರಳಿದ್ದರು ಎನ್ನಲಾಗಿದೆ. ಈ ಸಂದರ್ಭವನ್ನು ಬಳಸಿಕೊಂಡ ಕಳ್ಳರು ಮನೆಯ ಬೀಗ ಮುರಿದು ಒಳನುಗ್ಗಿ ಕಪಾಟಿನಲ್ಲಿದ್ದ 17 ಪವನ್ ಚಿನ್ನ ಹಾಗೂ 3.70 ಲಕ್ಷ ರೂ ನಗದನ್ನು ದೋಚಿ ಪರಾರಿಯಾಗುತ್ತಿದ್ದರು. ಇದೇ ಸಂದರ್ಭದಲ್ಲಿ ಷಣ್ಮುಗಂ ಎಂಬಾತ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದು ಸ್ಥಳೀಯರು ಥಳಿಸಿದ್ದಾರೆ. ಸ್ಥಳಕ್ಕೆ ಬಂದ ಉಳ್ಳಾಲ ಪೊಲೀಸರು ಆರೋಪಿ ಷಣ್ಮುಗಂನನ್ನು ವಶಕ್ಕೆ ಪಡೆದುಕೊಂಡು ಚಿಕಿತ್ಸೆಗಾಗಿ…
Author: UllalaVani
UN NETWORKS ಮಂಗಳೂರು: ಹಿಂದೂಗಳ ಶ್ರದ್ಧಾ ಕೇಂದ್ರ ಅಯೋದ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರರ ಭವ್ಯವಾದ ಮಂದಿರ ನಿರ್ಮಾಣದ ಆಗ್ರಹಕ್ಕಾಗಿ ವಿಶ್ವಹಿಂದೂ ಪರಿಷತ್ ನವೆಂಬರ್ 25 ರಂದು ಮಂಗಳೂರಿನಲ್ಲಿ ಹಮ್ಮಿಕೊಂಡ ಬೃಹತ್ ಜನಾಗ್ರಹ ಸಭೆಗೆ ಹಿಂದೂ ಯುವ ಸೇನೆ ಕೇಂದ್ರೀಯ ಮಂಡಳಿ ಸಂಪೂರ್ಣ ಬೆಂಬಲ ಘೋಷಿಸಿದೆ. ಹಿಂದೂ ಯುವ ಸೇನಾ ಎಲ್ಲಾ ಶಾಖೆಗಳ ಕಾರ್ಯಕರ್ತರು ಪಾಲ್ಗೊಳ್ಳಲಿದ್ದು, ಆದಿನ ಶೋಭಯಾತ್ರೆಯಲ್ಲಿ ಆಗಮಿಸುವ ರಾಮಭಕ್ತರಿಗೆ ಜ್ಯೋತಿ ವೃತ್ತದಲ್ಲಿ ಮಜ್ಜಿಗೆ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಹಿಂದೂ ಯುವ ಸೇನೆಯಿಂದ ಮಾಡಲಾಗುವುದು ಎಂದು ಹಿಂದೂ ಯುವ ಸೇನೆ ಕೇಂದ್ರೀಯ ಮಂಡಳಿಯ ಗೌರವಾದ್ಯಕ್ಷ ಭಾಸ್ಕರಚಂದ್ರ ಶೆಟ್ಟಿ, ಅದ್ಯಕ್ಷ ಯಶೋಧರ ಚೌಟ, ಜಿಲ್ಲಾದ್ಯಕ್ಷ ವೀರಪ್ಪ ಮೂಡುಶೆಡ್ಡೆ, ಕಾರ್ಯದರ್ಶಿ ರವಿಚಂದ್ರ ಎಕ್ಕೂರು ತಿಳಿಸಿದ್ದಾರೆ.
UN NETWORKS ಪಜೀರು : ಈದ್ ಮಿಲಾದ್ ಪ್ರಯುಕ್ತ ಪಜೀರು ರಹ್‍ಮಾನಿಯ ಜುಮಾ ಮಸೀದಿ ಮತ್ತು ಜಮಿಯತ್ತುತುಲ್ ಫ್ರೆಂಡ್ಸ್ ಎಸೋಸಿಯೇಶನ್‍ನ ಸಂಯುಕ್ತ ಆಶ್ರಯದಲ್ಲಿ ಮೀಲಾದುನ್ನಬಿ ಮತ್ತು ಮದ್ರಸ ಮಕ್ಕಳ ಮೀಲಾದ್ ಫೆಸ್ಟ್ ಕಾರ್ಯಕ್ರಮ ಮಸೀದಿಯ ವಠಾರದಲ್ಲಿ ಮಂಗಳವಾರ ನಡೆಯಿತು. ಪಜೀರು ರಹ್‍ಮಾನಿಯ ಜುಮಾ ಮಸೀದಿ ಖತೀಬ್ ಮೌಲಾನ ಇಬ್ರಾಹಿಂ ದಾರಿಮಿ ದುವಾ ನೆರ ನೆರವೇರಿಸಿ ಮೀಲಾದುನ್ನಬಿ ಕಾರ್ಯಕ್ರಮ ಉದ್ಘಾಟಿಸಿ ಪ್ರವಾದಿಯವರ ಆದರ್ಶ ಬದುಕಿನ ಬಗ್ಗೆ ಸಂದೇಶ ನೀಡಿದರು. ಮಂಗಳೂರು ವಿವಿ ಕುಲಸಚಿವ ಡಾ. ಎಂ. ಎಂ. ಖಾನ್ ಅವರನ್ನು ಸನ್ಮಾನಿಸಲಾಯಿತು.ಸನ್ಮಾನಕ್ಕೆ ಉತ್ತರಿಸಿ ಮಾತನಾಡಿದ ಪ್ರವಾದಿಯವರ ಹುಟ್ಟುಹಬ್ಬ ಆಚರಣೆ ಮಾತ್ರ ಮಾಡುವುದಲ್ಲ. ಅವರ ಸುನ್ನತ್‍ಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ಸಮುದಾಯದ ಅಭಿವೃದ್ಧಿಗೂ ಸೇವೆ ಮಾಡಬೇಕು ಎಂದು ಕರೆ ನೀಡಿದರು. ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯ ಉಮರ್ ಪಜೀರು ಮಾತನಾಡಿ, ಮಕ್ಕಳು ತನ್ನ ಪ್ರತಿಭೆಯನ್ನು ಪೋಷಕರ ಎದುರು ಅನಾವರಣ ಮಾಡುವ ಈ ದಿನದ ವಿಶೇಷ ಕಾರ್ಯಕ್ರಮ. ಇಂತಹ ದಿನಗಳಲ್ಲಿ ಸಮಾಜಮುಖಿ ಕೆಲಸ…
UN NETWORKS ದೇರಳಕಟ್ಟೆ: ದೇರಳಕಟ್ಟೆಯ ನರ್ಸಿಂಗ್ ಕಾಲೇಜಿನ ಮಕ್ಕಳ ಶುಶ್ರುಷಾ ವಿಭಾಗದ ವತಿಯಿಂದ ಮಕ್ಕಳ ದಿನಾಚರಣೆ ದಿ ಮರ್ಸಿ ದೆ ಅನಾಥಾಶ್ರಮದಲ್ಲಿ ಆಚರಿಸಲಾಯಿತು. ಯೇನೆಪೊಯ ನರ್ಸಿಂಗ್ ಕಾಲೇಜಿನ ಮೂರನೇ ವರ್ಷದ ಬಿ.ಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳು ಕಾರ್ಯಕ್ರಮ ನಡೆಸಿಕೊಟ್ಟರು. ಆಶ್ರಮದ 121 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕಾರ್ಯಕ್ರಮದ ಅಂಗವಾಗಿ ದಂತ ಶುಚಿತ್ವದ ಬಗ್ಗೆ ಆರೋಗ್ಯ ಶಿಕ್ಷಣವನ್ನು ನೀಡಲಾಯಿತು. ಮಕ್ಕಳ ಮನೋರಂಜನಾ ಅಂಗವಾಗಿ ನೃತ್ಯ ಪ್ರದರ್ಶನ ಹಾಗು ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು. ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಕಾಲೇಜಿನ ವಿದ್ಯಾರ್ಥಿಗಳು ಮಕ್ಕಳಿಗೆ ದೈನಂದಿನ ಬಳಕೆಗೆ ಬೇಕಾದ ಸಾಮಗ್ರಿಗಳನ್ನು ಹಾಗೂ ತಿಂಡಿತಿನಿಸುಗಳನ್ನು ವಿತರಿಸಿದರು.
UN NETWORKS ಉಳ್ಳಾಲ: ಡಿ. 3ರಂದು ನೆಹರೂ ಮೈದಾನದಲ್ಲಿ ನಡೆಯುವ ಆದರ್ಶ ವಿವಾಹ, ಮೀಲಾದ್ ಜಾಥಾ, ಗ್ರಾಂಡ್ ಹುಬ್ಬುರಸೂಲ್ ಕಾನ್ಫರೆನ್ಸ್ ಗಳನ್ನೊಂಡ ಸಾಮುದಾಯಿಕ ಸಮ್ಮಿಲನ ಕಾರ್ಯಕ್ರಮ ಯಶಸ್ವಿಗೊಳಿಸಲು ಎಸ್ಸೆಸ್ಸೆಫ್ ದ.ಕ. ಜಿಲ್ಲಾಧ್ಯಕ್ಷ ಕೆ.ಪಿ. ಸಿರಾಜುದ್ದೀನ್ ಸಖಾಫಿ ಕನ್ಯಾನ ಅವರ ಆಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಸಭೆಯಲ್ಲಿ ಕರೆ ನೀಡಲಾಯಿತು. ಪ್ರತೀ ಡಿವಿಷನ್‍ಗಳಲ್ಲಿ ಸಾಮುದಾಯಿಕ ಸಮ್ಮಿಳನದ ಪ್ರಚಾರಾರ್ಥ ಡಿವಿಷನ್ ಕನ್ವೆನ್ಷನ್, ಬೈಕ್ ರ್ಯಾಲಿ ಹಾಗೂ ಡಿವಿಷನ್ ವ್ಯಾಪ್ತಿಯಲ್ಲಿ ವಾಹನ ಪ್ರಚಾರ ಮತ್ತು ಸೆಕ್ಟರ್, ಯೂನಿಟ್‍ಗಳಲ್ಲಿ ಪ್ಲೆಕ್ಸ್ ಅಳವಡಿಸಿ ಪ್ರಚಾರ ನಡೆಸಲು ಸೂಚಿಸಲಾಯಿತು. ಬಳಿಕ ಸಾಮುದಾಯಿಕ ಸಮ್ಮಿಲನ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಸಭೆಯಲ್ಲಿ ಎಸ್.ವೈ.ಎಸ್ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ, ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಲಂದರ್ ಪದ್ಮುಂಜ, ಕೋಶಾಧಿಕಾರಿ ಅಬ್ದುಲ್ ರಝಾಕ್ ಸಖಾಫಿ ಮಡಂತ್ಯಾರ್, ಕ್ಯಾಂಪಸ್ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು, ಉಪಾಧ್ಯಕ್ಷ ಇಬ್ರಾಹಿಂ ಸಖಾಫಿ ಸೆರ್ಕಳ, ಕೆ.ಎಂ.ಎಚ್ ಝುಹ್ರಿ ಕೊಂಬಾಳಿ, ಕಾರ್ಯದರ್ಶಿ ಸಲೀಂ ಹಾಜಿ ಬೈರಿಕಟ್ಟೆ, ಸದಸ್ಯರಾದ ಸಯ್ಯದ್…
UN NETWORKS ಉಳ್ಳಾಲ: ಔಷಧ ವಿಜ್ಞಾನ ಕ್ಷೇತ್ರದ ವೃತ್ತಿಯಲ್ಲಿರುವ ಔಷಧ ತಜ್ಞರು ಔಷಧ ಸಂಶೋಧನೆ ಮಾಡಿ ನಿಖರ ಔಷಧ ವಿತರಿಸುವ ಇವರು ವೈದ್ಯ ಮತ್ತು ರೋಗಿಯ ಮಧ್ಯೆ ಕೊಂಡಿಯಾಗಿ ಕರ್ತವ್ಯ ಮಾಡುತ್ತಿದ್ದಾರೆ ಎಂದು ನಡುಪದವಿನ ಪಿ.ಎ. ಕಾಲೇಜ್ ಆಫ್ ಎಂಜಿನಿಯರಿಂಗ್ ಪ್ರಾಂಶುಪಾಲ ಡಾ. ಅಬ್ದುಲ್ ಶರೀಫ್ ಹೇಳಿದರು. ಪಿ.ಎ. ಕಾಲೇಜ್ ಆಫ್ ಫಾರ್ಮಸಿಯಲ್ಲಿ ಜರುಗಿದ ರಾಷ್ಟ್ರೀಯ ಫಾರ್ಮಸಿ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಔಷಧ ತಜ್ಞ ಆಗಿ ತಮ್ಮ ಸೇವೆ ಮತ್ತು ಕರ್ತವ್ಯದ ಬಗ್ಗೆ ಹೆಮ್ಮೆ ಪಡಬೇಕು ಹಾಗೂ ಔಷಧ ತಜ್ಞರ ಸೇವೆ ಅತ್ಯಮೂಲ್ಯವಾದುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪಿ.ಎ. ಸೆಂಟರ್ ಫಾರ್ ಮ್ಯಾನೇಜ್‍ಮೆಂಟ್ ಸ್ಟಡೀಸ್‍ನ ಪ್ರಾಂಶುಪಾಲೆ ಡಾ. ಲತಾಕೃಷ್ಣನ್ ಮಾತನಾಡಿ ‘ಔಷಧ ತಜ್ಞರ ಕರ್ತವ್ಯಗಳು ಮೌಲ್ಯಯುತವಾದ ಸೇವೆಗಳ’ ಬಗ್ಗೆ ತಿಳಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು.ವಿಶೇಷ ಉಪನ್ಯಾಸ ನೀಡಿದ ಮಂಗಳೂರಿನ ಎ.ಜೆ. ಇನ್ಸ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನ ಅಸಿಸ್ಟೆಂಟ್ ಪ್ರೊಫೆಸರ್ ಹಾಗೂ ಫಾರ್ಮಕೋವಿಜಿಲನ್ಸ್ ಆಫ್ ಇಂಡಿಯಾದ ಸಂಯೋಜಕ ಡಾ. ಶರತ್,…
UN NETWORKS ತೊಕ್ಕೊಟ್ಟು: 57ನೇ ರಾಷ್ಟ್ರೀಯ ಫಾರ್ಮಸಿ ದಿನದ ಪ್ರಯುಕ್ತ ಕೊಣಾಜೆ ನಡುಪದವಿನ ಪಿ.ಎ. ಕಾಲೇಜ್ ಆಫ್ ಫಾರ್ಮಸಿ ವತಿಯಿಂದ ಆರೋಗ್ಯ ಜಾಗೃತಿ ಜಾಥಾ ತೊಕ್ಕೊಟ್ಟು ಜಂಕ್ಷನ್‍ನಲ್ಲಿ ಬುಧವಾರ ನಡೆಯಿತು. ಪಿ.ಎ. ಕಾಲೇಜ್ ಆಫ್ ಫಾರ್ಮಸಿಯ ಪ್ರಾಂಶುಪಾಲ ಡಾ. ಸಲೀಮುಲ್ಲಾ ಖಾನ್ ವಿದ್ಯಾರ್ಥಿಗಳಿಗೆ ಫಲಕ ನೀಡುವ ಮೂಲಕ ಜಾಥಾ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಆರೋಗ್ಯ ಎನ್ನುವುದು ದೇವರು ಕೊಟ್ಟ ದೊಡ್ಡ ಸೌಭಾಗ್ಯ. ಈ ಆರೋಗ್ಯವನ್ನು ಕಾಪಾಡುವುದು ಎಲ್ಲರ ಕರ್ತವ್ಯ. ಯಾವುದೇ ರೋಗ ಇದ್ದರೂ ಉದಾಸಿನ ಮಾಡದೇ ವೈದ್ಯರನ್ನು ಕಾಣಬೇಕು ಎಂದು ಹೇಳಿದರು. ಎಲ್ಲರ ಆರೋಗ್ಯದ ಬಗೆ ಕಾಳಜಿ ವಹಿಸಿ ಮದ್ಯಪಾನ, ಧೂಮಪಾನದಿಂದ ಆಗುವ ದುಷ್ಪರಿಣಾಮದ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಜಾಥಾವನ್ನು ನಡೆಸಲಾಗಿದೆ ಎಂದು ಪಿ.ಎ ಕಾಲೇಜ್ ಆಫ್ ಫಾರ್ಮಸಿಯ ಪ್ರೊ. ಡಾ ಮೊಹಮ್ಮದ್ ಮುಬೀನ್ ಹೇಳಿದರು. ಬಳಿಕ ಆರೋಗ್ಯ ಜಾಗೃತಿ ಜಾಥಾ ತೊಕ್ಕೊಟ್ಟು ಜಂಕ್ಷನ್‍ನಲ್ಲಿ ನಡೆಯಿತು.
UN NETWORKS ಉಳ್ಳಾಲ: ದಾರುಲ್ ಆಶ್‍ಅರಿಯ್ಯ ಸುರಿಬೈಲ್ ಇದರ ಆಶ್ರಯದಲ್ಲಿ ಈದ್ ಮೀಲಾದ್ ಮತ್ತು ದಾರುಲ್ ಅಶ್ ಅರಿಯದ ಶೈಖುನಾ ಸುರಿಬೈಲು ಉಸ್ತಾದರ 17ನೇ ಆಂಡ್ ನೇರ್ಚೆ ಪ್ರಯುಕ್ತ ಹಣ್ಣು ಹಂಪಲು ವಿತರಣೆ ದೇರಳಕಟ್ಟೆಯ ಎನೆಪೋಯ ಆಸ್ಪತ್ರೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಎಸ್ಸೆಸ್ಸೆಫ್ ರಾಷ್ಟ್ರೀಯ ಪ್ರ. ಕಾರ್ಯದರ್ಶಿ ಸಿದ್ದೀಕ್ ಮೋಂಟುಗೋಳಿಯವರು ಹಣ್ಣುಹಂಪಲು ವಿತರಣೆ ಬಹಳ ಉತ್ತಮ ಯೋಜನೆ. ಹಸಿದವರ ಹೊಟ್ಟೆ ತುಂಬಿಸಿದವನೇ ನಿಜವಾದ ಮನುಷ್ಯ. ಪರಸ್ಪರ ಸ್ನೇಹ ಸಂಪರ್ಕ ಬೆಳೆಯಬೇಕಾದರೆ ಹಸಿವು ಮುಕ್ತವಾಗಿ ಸಂತೋಷದಿಂದ ಇದ್ದರೆ ಮಾತ್ರ ಸಾಧ್ಯ ಎಂದರು. ಈ ಸಂದರ್ಭ ದಾರ್‍ಲ್ ಅಶ್‍ಅರಿಯ ಮೇನೇಜರ್ ಮಹಮ್ಮದ್ ಆಲಿ ಸಖಾಫಿ, ವಾಜಿದ್ ಹನೀಫಿ, ರಶೀದ್ ಹನೀಫಿ, ಅಬ್ದುಲ್ ಅಝೀಝ್ ಮದನಿ, ಇಸ್ಮಾಯಿಲ್ ಕಿನ್ಯ, ಕರೀಂ ಕದ್ಕಾರ್, ಶರೀಫ್ ಕೋಕಳ, ಅಕ್ಬರ್ ಅಲಿ ಮದನಿ, ಝಕರಿಯ ನಾರ್ಶ , ಗೌಸ್ ಅಶ್‍ಅರಿಯಾ ಉಪಸ್ಥಿತರಿದ್ದರು
UN NETWORKS ಉಳ್ಳಾಲ: ಒರಿಮಪ್ಪಾಡ್ ಚಂಙಾಯಿಮಾರ್ WhatsApp ಗ್ರೂಪ್ ಕಾರ್ಯಕ್ರಮದಲ್ಲಿ ಪುರುಷಂಗೋಡಿ ಬದ್ರಿಯಾ ಜುಮಾ ಮಸೀದಿಯ ವತಿಯಿಂದ ಒರಿಮಪ್ಪಾಡ್ ಚಂಙಾಯಿಮ್ಮಾರ್ ಇದರ ಸಹಕಾರದೊಂದಿಗೆ ಬದ್ರಿಯಾ ಮಸೀದಿ ವಠಾರದಲ್ಲಿ ಅನುಸ್ಮರಣೆ ಕಾರ್ಯಕ್ರಮ ಕುಂಬೋಳ್ ತಂಙಳವರ ನೇತ್ರತ್ವದಲ್ಲಿ ನಡೆಯಿತು. ಅಧುನಿಕ ಯುಗದಲ್ಲಿ ಯುವ ಸಮೂಹ ತಪ್ಪು ದಾರಿಗೆ ಚಲಿಸುವ ಈ ಸಮಯದಲ್ಲಿ ಒರಿಮಪ್ಪಾಡ್ ಚಂಙಾಯಿಮಾರ್ WhatsApp ಗ್ರೂಪ್ ಇತರ ಯುವಕರಿಗೆ ಉತ್ತಮ ಸಲಹೆ ನೀಡುತ್ತಿದ್ದು ವಿವಿಧ ಸಾಮಾಜಿಕ ಸೇವೆಯು ಕಾಲದ ಬೇಡಿಕೆಯಾಗಿದ್ದು ತಮ್ಮ ಪರಿಶ್ರಮ ಅಲ್ಲಾಹನ ಸನ್ನಿಧಿಯಲ್ಲಿ ಪ್ರತಿಫಲ ಗಳಿಸುವ ಕಾರ್ಯಕ್ರಮ ವಾಗಿದೆ ಎಂದರು.WhatsApp groupಗಳು ಸಮುದಾಯದ ಒಳಿತಿಗಾಗಿರಬೇಕು ಎಂದು ಕರೆ ನೀಡಿದರು.ಬದ್ರಿಯಾ ಮಸೀದಿ ಖತೀಬ್ ಶರೀಪ್ ಸಹದಿ ಮಾತನಾಡಿ ಮರಣ ಹೊಂದಿದ ವ್ಯಕ್ತಿಗಳ ಸ್ಮರಣೆ ಪುಣ್ಯ ಕರ್ಮವಾಗಿದೆ ಎಂದರು. ಒರಿಮಪ್ಪಾಡ್ ಚಂಙಾಯಿಮಾರ್ WhatsApp groupಸದಸ್ಯರಾದ ಸಾಲೆತ್ತೂರ್ ಖತೀಬ್ ಕೆ.ವಿ ದಾರಿಮಿ ಕುಂಬ್ರ ಮಾತನಾಡಿ ಸಹಾಯ ಸಹಕಾರ ಕೇವಲ ಸಂಘಟನೆ ಹೆಸರಿಗೆಬೇಕಾಗಿ ಸೀಮಿತಗೊಳ್ಳದೆ ಅಲ್ಲಾಹನ ಪ್ರತಿಫಲಗಳಿಸುವ ಪುಣ್ಯ ಕರ್ಮಗಳಾಗಿರಬೇಕು ಎಂದರು. ಒರಿಮಪ್ಪಾಡ್ ಚಂಙಾಯಿಮಾರ್ ಗ್ರೂಪ್ ಗೆ…
UN NETWORKS ಉಳ್ಳಾಲ: ಮೊಂಟೆಪದವಿನಲ್ಲಿ ಮೀಲಾದುನ್ನಬಿ ಜಾಥಾದಲ್ಲಿ ಸಾಗಿದವರಿಗೆ ಇಲ್ಲಿನ ಶ್ರೀ ಶಾರದಾಂಭ ಭಜನಾ ಮಂದಿರದ ಸದಸ್ಯರು ಸಿಹಿತಿಂಡಿ, ಪಾನೀಯವನ್ನು ನೀಡಿ ಕೋಮು ಸೌಹಾರ್ದ ಮೆರೆದರು. ಕಳೆದ ಹಲವು ವರ್ಷಗಳಿಂದ ಇಲ್ಲಿ ನಡೆಯುವ ಮೊಸರು ಕುಡಿಕೆ ಉತ್ಸವದ ಸಂದರ್ಭದಲ್ಲಿ ನಡೆಯುವ ರ್ಯಾಲಿಗೆ ಮುಸ್ಲಿಮರು ಸಿಹಿತಿಂಡಿ ಪಾನೀಯ ನೀಡಿದರೆ, ಮೀಲಾದುನ್ನಬಿ ಸಂದರ್ಭ ಹಿಂದೂ ಸಹೋದರರು ಒಟ್ಟಾಗಿ ಸಿಹಿತಿಂಡಿಯನ್ನು ನೀಡುತ್ತಾ ಬಂದಿದ್ದಾರೆ. ಅದೇ ರೀತಿ ಮಂಗಳವಾರ ಮೀಲಾದ್ ರ್ಯಾಲಿಯಲ್ಲಿ ಸಾಗಿ ಬಂದ ಮುಸ್ಲಿಮರನ್ನು ಶಾರದಾ ಭಜನಾ ಮಂದಿರದ ಸದಸ್ಯರು ಸ್ವಾಗತಿಸಿ ಪಾನೀಯ, ಸಿಹಿತಿಂಡಿ ವಿತರಿಸಿದರು.

