UN NETWORKS
ಉಳ್ಳಾಲ: ಒರಿಮಪ್ಪಾಡ್ ಚಂಙಾಯಿಮಾರ್ WhatsApp ಗ್ರೂಪ್ ಕಾರ್ಯಕ್ರಮದಲ್ಲಿ ಪುರುಷಂಗೋಡಿ ಬದ್ರಿಯಾ ಜುಮಾ ಮಸೀದಿಯ ವತಿಯಿಂದ ಒರಿಮಪ್ಪಾಡ್ ಚಂಙಾಯಿಮ್ಮಾರ್ ಇದರ ಸಹಕಾರದೊಂದಿಗೆ ಬದ್ರಿಯಾ ಮಸೀದಿ ವಠಾರದಲ್ಲಿ ಅನುಸ್ಮರಣೆ ಕಾರ್ಯಕ್ರಮ ಕುಂಬೋಳ್ ತಂಙಳವರ ನೇತ್ರತ್ವದಲ್ಲಿ ನಡೆಯಿತು.
ಅಧುನಿಕ ಯುಗದಲ್ಲಿ ಯುವ ಸಮೂಹ ತಪ್ಪು ದಾರಿಗೆ ಚಲಿಸುವ ಈ ಸಮಯದಲ್ಲಿ ಒರಿಮಪ್ಪಾಡ್ ಚಂಙಾಯಿಮಾರ್ WhatsApp ಗ್ರೂಪ್ ಇತರ ಯುವಕರಿಗೆ ಉತ್ತಮ ಸಲಹೆ ನೀಡುತ್ತಿದ್ದು ವಿವಿಧ ಸಾಮಾಜಿಕ ಸೇವೆಯು ಕಾಲದ ಬೇಡಿಕೆಯಾಗಿದ್ದು ತಮ್ಮ ಪರಿಶ್ರಮ ಅಲ್ಲಾಹನ ಸನ್ನಿಧಿಯಲ್ಲಿ ಪ್ರತಿಫಲ ಗಳಿಸುವ ಕಾರ್ಯಕ್ರಮ ವಾಗಿದೆ ಎಂದರು.WhatsApp groupಗಳು ಸಮುದಾಯದ ಒಳಿತಿಗಾಗಿರಬೇಕು ಎಂದು ಕರೆ ನೀಡಿದರು.ಬದ್ರಿಯಾ ಮಸೀದಿ ಖತೀಬ್ ಶರೀಪ್ ಸಹದಿ ಮಾತನಾಡಿ ಮರಣ ಹೊಂದಿದ ವ್ಯಕ್ತಿಗಳ ಸ್ಮರಣೆ ಪುಣ್ಯ ಕರ್ಮವಾಗಿದೆ ಎಂದರು.
ಒರಿಮಪ್ಪಾಡ್ ಚಂಙಾಯಿಮಾರ್ WhatsApp groupಸದಸ್ಯರಾದ ಸಾಲೆತ್ತೂರ್ ಖತೀಬ್ ಕೆ.ವಿ ದಾರಿಮಿ ಕುಂಬ್ರ ಮಾತನಾಡಿ ಸಹಾಯ ಸಹಕಾರ ಕೇವಲ ಸಂಘಟನೆ ಹೆಸರಿಗೆಬೇಕಾಗಿ ಸೀಮಿತಗೊಳ್ಳದೆ ಅಲ್ಲಾಹನ ಪ್ರತಿಫಲಗಳಿಸುವ ಪುಣ್ಯ ಕರ್ಮಗಳಾಗಿರಬೇಕು ಎಂದರು. ಒರಿಮಪ್ಪಾಡ್ ಚಂಙಾಯಿಮಾರ್ ಗ್ರೂಪ್ ಗೆ ಎಲ್ಲರ ಸಹಾಯ ಅತ್ಯವಶ್ಯಕವಾಗಿದೆ. ಈ ಪುಣ್ಯ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಕರೆನೀಡಿದರು.
ಅಬ್ಬಾಸ್ ಹಾಜಿ ಕಲ್ಲೂರ್, ಸಿದ್ದೀಕ್ ಪಾಡಿ ಅಬ್ಬು ದಾಹಿದಾಳ ,ಮಮ್ಮದ್ ಅಕ್ಕರೆ ,ಅಸೈನಾರ್ ಮುಸ್ಲಿಯಾರ್, ನಾಸೀರ್ ಅಝ್ಹರಿ ಕುಂಜತ್ತೂರ್, ಉಮರುಲ್ ಪಾರೂಖ್ ,ಹನೀಪಿ ಅನೆಕಲ್ಲು,ಒರಿಮಪ್ಪಾಡ್, ಚಂಙಾಯಿಮಾರ್ ಗ್ರೂಪ್, ಸದಸ್ಯರಾದ ನಬೀರ್ ದಾಯಿದಾಲ, ಲತೀಪ್ ಪುರುಷಂಗೊಡಿ, ನೌಪಲ್ ಪಾಡಿ, ಅಸ್ರಪ್ ನಚ್ಚಪದವು ,ಸವಾನ್ ನಚ್ಚಪದವು, ಸಿದ್ದೀಕ್ ಪುರುಸಂಗೋಡಿ ,ಅಝಿಝ್ ಕೆ.ಪಿ, ಮೊಯ್ದಿ ಬಾಕಿಮಾರ್ ,ಸಮೀರ್ ತೊಟ್ಟಿ ,ಹಾರಿಸ್ ಬಾಕಿಮಾರ್ ,ರಝಾಕ್ ಮೂರುಗೋಳಿ ,ಮತ್ತಿತರರು ಉಪಸ್ಥಿತಿ ಇದ್ದರು.


