UN NETWORKS ಅಲೇಕಳ: ಇಸ್ಲಾಂ ಧರ್ಮ ಯಾರೋ ಸ್ಥಾಪಿಸಿದ್ದಲ್ಲ, ಇಸ್ಲಾಂ ಹೆಸರನ್ನು ಹೇಳಿಕೊಂಡು ದುರಾಚಾರ ನಡೆಸುವ ಹಕ್ಕು ಯಾರಿಗೂ ಇಲ್ಲ. ಅಲ್ಲಾಹನ ವಿರುದ್ಧ, ಪ್ರವಾದಿ(ಸ) ಸಂದೇಶದ ವಿರುದ್ಧ ಮಾಡಿದ ಕೃತ್ಯ ಎಸಗಿರುವ ಉಗ್ರರ ಮೇಲೆ ದೇವನ ಶಾಪವಿದೆ ಎಂದು ಉಳ್ಳಾಲ ನಗರಸಭೆಯ ಸದಸ್ಯ ಅಯೂಬ್ ಮಂಚಿಲ ಅಭಿಪ್ರಾಯಪಟ್ಟರು. ಅಲೇಕಳ ನುಸ್ರತುಲ್ ಮಸಾಕೀನ್ ಟ್ರಸ್ಟ್, ಸಫರ್ ಮಂಚಿಲ, ಅಲೇಕಳ ಸ್ಪೋಟಿಂಗ್, ಬಿ ಬಾಯ್ಸ್, ಮಾರ್ಗತ್ತಲೆ ಯುನೈಟೆಡ್ ಚಾರಿಟೇಬಲ್ ಟ್ರಸ್ಟ್, ಸೆವೆನ್ ಸ್ಟಾರ್, ನಜತ್ ಕ್ರಿಕೆಟರ್ಸ್ ಅಲೇಕಳ, ಯಂಗ್ ಬಾಯ್ಸ್, ಯಂಗ್ ಫ್ರೆಂಡ್ಸ್, ಮೆಹಫಿಲ್ ಗಯ್ಸ್, ಗಡಗಡ ಗಯ್ಸ್ ಅಲೇಕಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಪುಲ್ವಾಮಾದಲ್ಲಿ ಉಗ್ರರು ನಡೆಸಿದ ಯೋಧರ ಹತ್ಯೆಯನ್ನು ಖಂಡಿಸಿ ಅಲೇಕಳದಲ್ಲಿ ಗುರುವಾರ ನಡೆದ ಸಂತಾಪ ಸಭೆಯಲ್ಲಿ ಮಾತನಾಡಿದರು. ಕಾಶ್ಮೀರ ಭಾರತ ಸ್ವರ್ಗ, ಇಲ್ಲಿ ಇಸ್ಲಾಮಿನ ಹೆಸರು ಹೇಳಿಕೊಂಡು ನಡೆಸಿರುವ ದಾಳ ಅತ್ಯಂತ ಹೇಯ ಕೃತ್ಯವಾಗಿದೆ. ಆಧುನಿಕ ವಸ್ತ್ರಗಳನ್ನು ಸರ್ಕಾರ ದೊರಕಿಸಿ ಕೊಡಲು ಮುಂದಾಗಬೇಕು ಎಂದು ಹೇಳಿದರು. ಮುಖಂಡ ಯು.ಕೆ.ಮುಸ್ತಫ ಮಾತನಾಡಿ,…
Author: UllalaVani
UN NETWORKS ಉಳ್ಳಾಲ: ಗಡಿಯಲ್ಲಿ ನಿತ್ಯವೂ ಸೈನಿಕರು ಸಾವನ್ನಪ್ಪುವ ಮೂಲಕ ದೇಶದ ಅಭದ್ರತೆಯಲ್ಲಿದೆ ಎಂದು ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥನ್ ಆರೋಪಿಸಿದರು. ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಆದೇಶದ ಮೇರೆಗೆ ನಗರಾಭಿವೃದ್ಧಿ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವರ ಯು.ಟಿ. ಖಾದರ್ ಅವರ ನೇತೃತ್ವದಲ್ಲಿ ಮಂಗಳೂರು ಕ್ಷೇತ್ರದ ಕಾಂಗ್ರೆಸ್ ಕಾರ್ಯ ಕರ್ತರಿಗೆ ಮಂಗಳವಾರ ಎಲಿಯಾರ್ ಪದವಿನ ಖಾಸಗಿ ರೆಸಾರ್ಟ್‍ನಲ್ಲಿ ನಡೆದ ಕಾರ್ಯಗಾರದಲ್ಲಿ ಅವರು ಸಲಹೆ ನೀಡಿದರು.ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಸ್ಥಾನವನ್ನು ಅಲಂಕರಿಸಿದರೆ ಮುಂದಿನ ದಿನಗಳಲ್ಲಿ ಚುನಾವಣೆ ಪ್ರಕ್ರಿಯೆಯೇ ಇರುವುದಿಲ್ಲ. ಯಾಕೆಂದರೆ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಾರೆ. ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತ ಕೇಳುವಾಗ ನರೇಂದ್ರ ಮೋದಿ ಅವರು ಪರಾಜಯಗೊಂಡ, ಮಾತು ಪಾಲಿಸದ ನಾಯಕ. ರಾಹುಲ್ ಗಾಂಧಿ ಅವರು ಮಧ್ಯಪ್ರದೇಶ, ರಾಜಸ್ಥಾನ, ಛತ್ತ್ತೀಸ್‍ಗಡ ವಿಧಾನಸಭೆಯಲ್ಲಿ ಗೆದ್ದಾಗ ಕೇವಲ 24ಗಂಟೆಯೊಳಗಡೆ ರೈತರ ಸಾಲ ಮನ್ನಾ ಮಾಡುವ ಮೂಲಕ ಸತ್ಯಪರಿಪಾಲಕ ಎಂಬುದನ್ನು ಸಾಬೀತು ಪಡಿಸಿದರು.ಒಂದು ತಲೆ ತೆಗೆದರೆ ಹತ್ತು ತಲೆ ತೆಗೆಯುತ್ತೇನೆ ಎಂದು…
UN NETWORKS ಬೆಂಗಳೂರು : ಮಲಬಾರ್ ಮುಸ್ಲಿಂ ಅಸೋಸಿಯೇಷನ್ ಬೆಂಗಳೂರಿನ ಹೃದಯ ಭಾಗದಲ್ಲಿ ನಿರ್ಗತಿಕರಿಗಾಗಿ ನಿರ್ಮಿಸಿರುವ 8 ವಸತಿಗಳ ಕೀಲಿಕೈ ವಿತರಣೆ ಮತ್ತು ಕುಟುಂಬ ಸಂಗಮವು ಇಂದು ಸಂಜೆ 5 ರಿಂದ ರಾತ್ರಿ 11 ರವರೆಗೆ ಬೆಂಗಳೂರು ಟೌನ್ ಹಾಲ್ ನಲ್ಲಿ ನಡೆಯಲಿದೆ. ಮಲಬಾರ್ ಮುಸ್ಲಿಂ ಅಸೋಸಿಯೇಷನ್ ಇದರ ಅಧ್ಯಕ್ಷರಾದ ಡಾಕ್ಟರ್ N.A ಮೋಹಮ್ಮದ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕೇರಳ ಮುಸ್ಲಿಂ ಯೂತ್ ಲೀಗ್ ಇದರ ಅಧ್ಯಕ್ಷರಾದ ಪಾಣಕ್ಕಾಡ್ ಸಯ್ಯಿದ್ ಮುನವ್ವರಲಿ ಶಿಹಾಬ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಜಗದ್ವಿಖ್ಯಾತ ವಾಗ್ಮಿಯೂ ಧಾರ್ಮಿಕ ವಿದ್ವಾಂಸರೂ ಆಗಿರುವ ಉಸ್ತಾದ್ ಮುಸ್ತಫಾ ಹುದವಿ ಆಕೋಡ್ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.ಕಾರ್ಯಕ್ರಮದಲ್ಲಿ ಕರ್ನಾಟಕ ವಕ್ಫ್ ಸಚಿವರಾದ ಜನಾಬ್ ಜಮೀರ್ ಅಹ್ಮದ್ ಖಾನ್, ರಾಜ್ಯ ನಗರಾಭಿವೃದ್ಧಿ ಸಚಿವ ಜನಾಬ್ ಯುಟಿ ಖಾದರ್, ಶಾಸಕರಾದ ಆರ್ ರಾಮಲಿಂಗ ರೆಡ್ಡಿ, ಎನ್ ಎ ಹಾರಿಸ್, ವಿಧಾನಸಭಾ ಸದಸ್ಯರಾದ ಬಿ ಎಂ ಫಾರೂಕ್ ರಿಜ್ವಾನ್ ಅರ್ಷದ್ ಹಾಗೂ ಜಿಸಿಸಿ ಉದ್ಯಮಿಯಾದ ಎಂ ಸಿ ಲಫೀರ್…
UN NETWORKS ದೇರಳಕಟ್ಟೆ: ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ದಾಂಜಲಿ , ಹಾಗೂ ಉಗ್ರರ ಕೃತ್ಯ ಖಂಡಿಸಿ ದೇರಳಕಟ್ಟೆ ನಿಟ್ಟೆ ವಿಶ್ವವಿದ್ಯಾಲಯ ವತಿಯಿಂದ ದೇರಳಕಟ್ಟೆಯಿಂದ ತೊಕ್ಕೊಟ್ಟು ವರೆಗೆ ಮೌನ ಮೆರವಣಿಗೆ ಇಂದು ನಡೆಯಿತು.ನಿಟ್ಟೆ ವಿ.ವಿಯ ಸುಮಾರು 1,000 ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಮೌನ ಮೆರವಣಿಗೆಯಲ್ಲಿ ಪಾಲ್ಗೊಂಡರು. ನಿಟ್ಟೆ ವಿ.ವಿ ಕುಲಸಚಿವೆ ಅಲ್ಕಾ ಕುಲಕರ್ಣಿ ಮಾತನಾಡಿ, ದೇಶದ ವಾಸಿಗಳು ನೆಮ್ಮದಿಯಿಂದ ಬದುಕಲು ಗಡಿ ಕಾಯುವ ಯೋಧರೇ ಕಾರಣ. ಅವರ ಹುತಾತ್ಮರಾದ ಹಿನ್ನೆಲೆಯಲ್ಲಿ ಗೌರವ ಸಲ್ಲಿಸುವುದು ದೇಶದ ಕರ್ತವ್ಯ. ಈ ನಿಟ್ಟಿನಲ್ಲಿ ದೇಶದ ಕುರಿತು ಜಾಗೃತಿ ಹಾಗೂ ದೇಶಭಕ್ತಿಯೂ ವಿದ್ಯಾರ್ಥಿಗಳಲ್ಲಿ ಜಾಗೃತಿಯಾಗಲಿ ಎಂದರು.
UN NETWORKS ಕೊಣಾಜೆ : ಕೆಡ್ಡಸ ಸಂದರ್ಭದಲ್ಲಿ ತುಳುವರ ಆಹಾರ ಕ್ರಮಗಳು, ಆಚರಣೆಗಳು ವೈಶಿಷ್ಟ್ಯ ಪೂರ್ಣವಾದುದು. ಈ ಕೆಡ್ಡಸ ಆಚರಣೆಯು ತುಳುನಾಡು ಮಾತ್ರವಲ್ಲ ಉತ್ತರಕನ್ನಡ, ಕೇರಳ, ಅಸ್ಸಾಂ, ಬಂಗಾಲದಲ್ಲಿಯೂ ಇದ್ದು ವೈಶಿಷ್ಟ್ಯಪೂರ್ಣವಾಗಿ ಆಚರಿಸುತ್ತಾರೆ. ಪ್ರಮುಖವಾಗಿ ಇಂದಿನ ಯುವ ಜನಾಂಗಕ್ಕೆ ಇಂತಹ ಆಚರಣೆಗಳ ಮಹತ್ವದ ಬಗ್ಗೆ ತಿಳಿಸುವ ಕಾರ್ಯ ಆಗಬೇಕು ಎಂದು ಜಾನಪದ ವಿದ್ವಾಂಸ ಡಾ. ಗಣೇಶ್ ಅಮೀನ್ ಸಂಕಮಾರ್ ಅವರು ಹೇಳಿದರು. ಅವರು ಮಂಗಳೂರು ವಿವಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಅಧ್ಯಯನ ಪೀಠ, ವಿದ್ಯಾರ್ಥಿ ಕ್ಷೇಮ ಪಾಲನಾ ನಿರ್ದೇಶನಾಲಯ ಹಾಗೂ ಸ್ನಾತಕೋತ್ತರ ತುಳು ಅಧ್ಯಯನ ವಿಭಾಗ, ವಿಶ್ವವಿದ್ಯಾಲಯ ಸಂದ್ಯಾ ಕಾಲೇಜು ಮಂಗಳೂರು ಇದರ ಆಶ್ರಯದಲ್ಲಿ ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ಬುಧವಾರ ನಡೆದ `ಕೆಡ್ಡಸ ಪರ್ಬ’ ಕಾರ್ಯಕ್ರಮದಲ್ಲಿ `ತುಳು ಸಂಸ್ಕೃತಿ ಮತ್ತು ಕೆಡ್ಡಸ’ ವಿಷಯದಲ್ಲಿ ಉಪನ್ಯಾಸ ನೀಡಿದರು. ತುಳುನಾಡಿನ ಸಂಸ್ಕೃತಿ ಅರ್ಥಪೂರ್ಣ ಸಂಸ್ಕೃತಿಯಾಗಿದೆ. ಕೆಡ್ಡಸದಂತಹ ತುಳುವರ ಆಚರಣೆಗಳು ಮೂಡನಂಬಿಕೆಯಲ್ಲ, ಅದು ತುಳುವರ ಬದುಕಾಗಿದೆ. ಇಂದು ಬ್ರಹ್ಮಕಲಶದಂತಹ ಹೊಸ ಹೊಸ ಆಚರಣೆಗಳು…
UN NETWORKS ಮುಡಿಪು : ಸೈನಿಕರನ್ನು ಕೊಂದ ಪಾಕ್ ವಿರುದ್ಧ ವಿಶ್ವವೇ ತಿರುಗಿ ಬಿದ್ದಿರುವುದರಿಂದ ಮುಂದಿನ ದಿನಗಳಲ್ಲಿ ಎಲ್ಲಿ ಮಿಸೈಲ್ ಬೀಳ್ತದೋ, ಏನಾಗುತ್ತದೋ ಗೊತ್ತಿಲ್ಲ. ಈ ಹಿನ್ನೆಲೆಯಲ್ಲಿ ದೇಶ ಕಾಯುವ ಸೈನಿಕರಿಗಾಗಿ ಪ್ರತಿಯೊಬ್ಬರೂ ಒಂದು ಹೊತ್ತಿನ ಅನ್ನತ್ಯಾಗ ಮಾಡುವ ಪ್ರತಿಜ್ಞೆ ಮಾಡಬೇಕಾಗಿದೆ ಎಂದು ಮುಖಂಡ ಟಿ.ಜಿ.ರಾಜಾರಾಮ್ ಭಟ್ ಕರೆ ನೀಡಿದರು. ಮುಡಿಪುವಿನಲ್ಲಿ ಮಂಗಳವಾರ ನಡೆದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ, ನಿವೃತ್ತ ಯೋಧರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.ನಮ್ಮ ದೇಶ ತ್ಯಾಗಕ್ಕೆ ಹೆಸರಾಗಿದ್ದು, ಹುತಾತ್ಮ ಯೋಧ ಗುರು ಅವರ ಪತ್ನಿ ಸೈನ್ಯಕ್ಕೆ ಸೇರುವುದಾಗಿ ಮಾಡಿರುವ ಪ್ರತಿಜ್ಞೆ, ಒರಿಸ್ಸಾದ ಯೋಧ ರಾಮ ಠಾಕೂರ್ ಅವರ ತಂದೆ ಕಿರಿಯ ಪುತ್ರನನ್ನೂ ಸೈನ್ಯಕ್ಕೆ ಸೇರಿಸುವ ಬಗ್ಗೆ ಆಡಿರುವ ಮಾತುಗಳು ತ್ಯಾಗಕ್ಕೆ ಸಾಕ್ಷಿಯಾಗಿದೆ. ಯೋಧರ ಬಲಿದಾನ ಎಂದಿಗೂ ವ್ಯರ್ಥವಾಗದು. 45 ಸೈನಿಕರ ಜೀವಕ್ಕೆ ಬದಲು 450 ಪಾಪಿ ಪಾಕ್ ಸೈನಿಕರ ಜೀವ ಬಲಿ ಪಡೆಯುವ ದಿನ ದೂರವಿಲ್ಲ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ನಿವೃತ್ತ ಯೋಧರಾದ ಪ್ರಭಾಕರ ಮುಡಿಪು, ಗೋಪಾಲ…
UN NETWORKS ದೇರಳಕಟ್ಟೆ: ದೇರಳಕಟ್ಟೆ ಬದ್ರಿಯಾ ಜುಮಾ ಮಸ್ಜಿದ್ ಮುಂಬಾಗದಲ್ಲಿ SKSSF ಸ್ಥಾಪಕ ದಿನದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ಹಾಗೂ ಕಾಶ್ಮೀರದಲ್ಲಿ ಸಿ.ಆರ್.ಪಿ.ಎಫ್ ಯೋಧರ ಮೇಲೆ ನಡೆದ ದಾಳಿಯನ್ನು ವಿರೋಧಿಸಿ ಖಂಡನಾ ಸಭೆಯು ಸರ್ವ ಮಹನೀಯರ ಸಮ್ಮುಖದೊಂದಿಗೆ ನಡೆಯಿತು. ದೇರಳಕಟ್ಟೆ ಹಾಯಾತುಲ್ ಇಸ್ಲಾಮ್ ಸೆಕೆಂಡರಿ ಮದರಸ ಅಧ್ಯಾಪಕರಾದ ಜಬ್ಬಾರ್ ಮುಸ್ಲಿಯಾರ್ ಕರಾಯ ರವರು ಸ್ಚಾಗತಿಸಿದರು.ದೇರಳಕಟ್ಟೆ ಮದರಸ ಮ್ಯಾನೇಜ್ಮೆಂಟ್ ಅಧ್ಯಕ್ಷರಾದ ಹಾಜಿ ಇಸ್ಮಾಯಿಲ್ ಡಿ. ಧ್ವಜಾರೋಹಣವನ್ನು ನೆರವೇರಿಸಿದರು. SKSSF ದೇರಳಕಟ್ಟೆ ಕ್ಲಸ್ಟರ್ ಅಧ್ಯಕ್ಷರಾದ ಜನಾಬ್ ಸಯ್ಯದ್ ಅಲಿ ರವರ ಅದ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಬದ್ರಿಯಾ ಜುಮಾ ಮಸೀದಿ ಮುದರ್ರಿಸ್ ಬಹು ಶರೀಫ್ ಅರ್ಶದಿ ರವರು ದುವಾ ಹಾಗೂ ಕಾರ್ಯಕ್ರಮವನ್ನು ಉದ್ಘಾಟಿಸಿ SKSSF ನ ಕಾರ್ಯವೈಖರಿಯ ಬಗ್ಗೆ ಪ್ರಭಾಷಣ ನಡೆಸಿದರು. SKSSF ಕೇಂದ್ರ ಸಮಿತಿ ಸದಸ್ಯರಾದ ಬಹು ಅಬ್ದುರ್ರಹ್ಮಾನ್ ದಾರಿಮಿ ತಬೂಕ್ ರವರು ಖಂಡನಾ ಪ್ರಭಾಷಣ ನಡೆಸಿದರು. ದೇರಳಕಟ್ಟೆ ಎಜುಕೇಷನಲ್& ಚಾರೀಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಹಾಜಿ ಅಬೂಬಕ್ಕರ್ ನಾಟ್ಟೆಕ್ಕಲ್. ಎಸ್.ವೈ.ಎಸ್.ಅಧ್ಯಕ್ಷರಾದ ಹಾಜಿ ಮೊಹಮ್ಮದ್…
UN NETWORKS ಉಳ್ಳಾಲ: ಸ್ಮಾರ್ಟ್ ಸಿಟಿ ವರ್ತಕರ ಸಂಘ, ಮತ್ತು ಆಟೊ ಚಾಲಕರು ಜಂಟಿ ಆಶ್ರಯದಲ್ಲಿ ಕಾಶ್ಮೀರದಲ್ಲಿ ನಡೆದ ಉಗ್ರರ ಅಟ್ಟಹಾಸಕ್ಕೆ ಬಲಿಯಾದ ಭಾರತದ ವೀರ ಸೈನಿಕರಿಗೆ ನುಡಿ ನಮನ ಅರ್ಪಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಕಾರ್ಯಕ್ರಮದಲ್ಲಿ ಇಸ್ಮಾಯಿಲ್ ಸಾಗರ್, ನಾಸೀರ್ ಸಾಮಣಿಗೆ, ಮೊಹಿದಿನ್ ಉಳ್ಳಾಲ, ಎಡ್ವಕೇಟ್ ಜಾಹಿದ್, ಸಾದಿಕ್ ಕಲ್ಲಾಪು, ಇರ್ಶಾದ್,ಸಮದ್,ಸುಹೈಬ್, ಇಕ್ಬಾಲ್,ನವಾಜ್,ರಮೇಶ್, ಅದ್ನಾನ್, ಮೊದಲಾದವರು ಭಾಗವಹಿಸಿದ್ದರು.
UN NETWORKS ಕೋಟೆಕಾರು: ದಂಪತಿ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಕಾರು ಬೀರಿ ಸಮೀಪ ಮಂಗಳವಾರ ಬೆಳಕಿಗೆ ಬಂದಿದೆ. ದೇವರಾಜ್ (70) ಮತ್ತು ವಸಂತಿ (58) ಆತ್ಮಹತ್ಯೆ ಮಾಡಿಕೊಂಡವರು. ಮಂಗಳವಾರ ಬೆಳಿಗ್ಗೆ ವೆಂಕಪ್ಪ ಅನ್ನುವವರು ಹಾಲು ನೀಡಲೆಂದು ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಮೂಲತ: ಮಂಜೇಶ್ವರ ಮೂಲದವರಾಗಿರುವ ದಂಪತಿ ಸುಮಾರು 20 ವರ್ಷಗಳಿಂದ ಬೀರಿಯಲ್ಲಿ ಮನೆ ನಿರ್ಮಿಸಿ ವಾಸಿಸುತ್ತಿದ್ದರು. ಮಕ್ಕಳಿರದ ಕೊರಗಿನಲ್ಲಿದ್ದ ಇಬ್ಬರೂ ಅನಾರೋಗ್ಯದಿಂದ ಬಳಲುತ್ತಿದ್ದರು. ರಾತ್ರಿ ಊಟ ಮುಗಿಸಿ ಇಬ್ಬರು ಮನೆ ಚಾವಡಿಯಲ್ಲೇ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ದೇವರಾಜ್ ಅವರು ಮಂಗಳೂರು ಆಕಾಶವಾಣಿಯಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು. ಶ್ವಾನ ಪ್ರೀತಿ : ಮಕ್ಕಳಿಲ್ಲದಿದ್ದರೂ ದಂಪತಿ ಶ್ವಾನಗಳ ಮೇಲೆ ಅಪಾರ ಪ್ರೀತಿ ಹೊಂದಿದ್ದರು. ನಾಯಿ ಮನೆಯೊಳಗೆ ದಂಪತಿ ಜತೆಗೆ ಹೆಚ್ಚಾಗಿ ಇರುತ್ತಿತ್ತು. ಮನೆ ಸಮೀಪ ಯಾರದರೂ ಗೇಟಿನ ಹೊರಗಡೆ ನಿಂತರೂ ನಾಯಿ ನಿರಂತರವಾಗಿ ಬೊಗಳುತಿತ್ತು. ಆದರೆ…
UN NETWORKS ಉಳ್ಳಾಲ: ಕಾಶ್ಮೀರದ ಪುಲ್ವಾಮಾದಲ್ಲಿ ಹುತಾತ್ಮರಾದ ಸೈನಿಕರನ್ನು ಜಾತಿಯಿಂದ ವಿಂಗಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿರುವ ಯುವ ವಕೀಲ ಹಾಗೂ ಸಿಪಿಎಂ ಕಾರ್ಯಕರ್ತ ನಿತಿನ್ ಕುತ್ತಾರ್, ಇವರು ದೇಶದ್ರೋಹ ನಡೆಸಿದ್ದಾರೆ ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಆರೋಪಿಸಿ ಮಂಗಳೂರು ನೊಂದ ನಾಗರಿಕರು ಪೊಲೀಸ್ ಕಮೀಷನರ್ ಅವರಿಗೆ ದೂರು ನೀಡಲಾಗಿದೆ. ದೇಶ ಸೇನೆಯ ಸೈನಿಕರನ್ನು ಕಳೆದುಕೊಂಡು ಕಂಬನಿ ಮಿಡಿಯುತ್ತಿದೆ. ಇದರ ನಡುವೆ ದೇಶದಲ್ಲೇ ಇದ್ದುಕೊಂಡು ಕುತ್ತಾರು ನಿವಾಸಿ ನಿತಿನ್ ಕುತ್ತಾರ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಮೃತರಾದ ಸೈನಿಕರಲ್ಲಿ 13-ಎಸ್.ಸಿ, 14- ಎಸ್.ಟಿ, 14-ಒಬಿಸಿ, 1-ಮುಸ್ಲಿಂ ಮತ್ತು ಬ್ರಾಹ್ಮಣ-0 ಎಂದು ಬರೆದಿರುವುದು ಪ್ರಚೋದನಾತ್ಮಕವಾಗಿದೆ. ಬ್ರಾಹ್ಮಣರು ಸೈನ್ಯದಲ್ಲಿ ಭಾಗವಹಿಸದೆ ಬೇರೆ ಜಾತಿಯವರನ್ನು ಸೈನ್ಯಕ್ಕೆ ಸೇರಲು ಪ್ರಚೋದಿಸಿ ಅವರನ್ನು ಉಗ್ರರು ಕೊಲ್ಲಲೆಂದೇ ಕಳಹಿಸುತ್ತಾರೆ ಎಂಬ ಸಂದೇಶ ಸಾರಿದಂತಾಗಿದೆ. ಭಾರತೀಯ ಸೇನೆಗೆ ಸೇರಲು ಜಾತಿಯ ಕಟ್ಟುಪಾಡುಗಳಿಲ್ಲ. ಶತ್ರುಗಳನ್ನು ಸದೆಬಡಿಯುವ ಸಂದರ್ಭ ಶತ್ರುಗಳು ಜಾತಿಯನ್ನು ಪರಿಗಣಿಸುವುದಿಲ್ಲ. ಸೈನ್ಯದಲ್ಲಿರುವ ಸೈನಿಕರನ್ನು ಜಾತಿಬೇಧ ಮಾಡದೆ ಗೌರವಿಸುವುದು ಭಾರತೀಯರ ಕರ್ತವ್ಯ. ಆದರೆ…

