Author: UllalaVani

Kannada News From Coastal Karnataka

UN NETWORKS ಉಳ್ಳಾಲ: ನವ ದೆಹಲಿಯ ರಾಷ್ಟ್ರೀಯ ಪರೀಕ್ಷಾ ಮಂಡಳಿ, ಖ್ಯಾತ ಆರ್ಥೋಪೆಡಿಕ್ ಸರ್ಜನ್, ದೇರಳಕಟ್ಟೆಯ ನಿಟ್ಟೆ ಪರಿಗಣಿಸಲಾಗಿರುವ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಪ್ರೊ. ಡಾ. ಎಂ. ಶಾಂತಾರಾಮ ಶೆಟ್ಟಿ ಅವರಿಗೆ ನವದೆಹಲಿಯ ಪರೀಕ್ಷಾ ಮಂಡಳಿ ಕೇಂದ್ರದಲ್ಲಿಇತ್ತೀಚೆಗೆ ನಡೆದ 2018ರ ಘಟಿಕೋತ್ಸವದಲ್ಲಿ “ಶ್ರೇಷ್ಠ ಅಧ್ಯಾಪಕ ರಾಷ್ಟ್ರ ಪ್ರಶಸ್ತಿ’ ನೀಡಿ ಗೌರವಿಸಿದೆ. ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಪ್ರಶಸ್ತಿ ವಿತರಿಸಿದರು.

Read More

UN NETWORKS ತಲಪಾಡಿ: ಮಂಗಳೂರಿನಿಂದ ಕಾಸರಗೋಡು ಕಡೆಗೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರು ಮರಳು ಲಾರಿಗಳನ್ನು ತಲಪಾಡಿ ಬಳಿ ರಾತ್ರಿ ಗಸ್ತು ತಿರುತ್ತಿದ್ದ ಉಳ್ಳಾಲ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು ಚಾಲಕರು ಪರಾರಿಯಾದ ಘಟನೆ ಭಾನುವಾರ ತಡರಾತ್ರಿ ನಡೆದಿದೆ. ಮಂಗಳೂರು ಕಣ್ಣೂರು ನೇತ್ರಾವತಿ ಬದಿಯಿಂದ ನಾಲ್ಕು ಲಾರಿ ಹಾಗೂ ಎರಡು ಟಿಪ್ಪರ್ ಗಳಲ್ಲಿ ಮರಳು ತುಂಬಿಸಿ ಕೇರಳ ಕಡೆಗೆ ಸಾಗಿಸುವ ಮಾಹಿತಿ ಪಡೆದ ಉಳ್ಳಾಲ ಇನ್ಸ್ ಪೆಕ್ಟರ್ ಗೋಪಿಕೃಷ್ಣ ಅವರ ಸೂಚನೆ ಮೇರೆಗೆ ತಲಪಾಡಿ ಬಳಿ ಗಸ್ತು ತಿರುಗುತ್ತಿದ್ದ ಉಳ್ಳಾಲ ಪೊಲೀಸರು ನಾಲ್ಕು ಲಾರಿ ಹಾಗೂ ಎರಡು ಟಿಪ್ಪರ್ ಮರಳು ಸಮೇತ ವಶಕ್ಕೆ ತೆಗದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಪೊಲೀಸರು ದಾಳಿ ನಡೆಸುತ್ತಿದ್ದಂತೆಯೇ ಲಾರಿ ಹಾಗೂ ಟಿಪ್ಪರ್‍ನ್ನು ರಸ್ತೆಯಲ್ಲಿಯೇ ಬಿಟ್ಟು ಚಾಲಕರು ಪರಾರಿಯಾಗಿದ್ದಾರೆ. ವಶಕ್ಕೆ ಪಡೆದ ನಾಲ್ಕು ಲಾರಿ ಹಾಗೂ ಎರಡು ಟಿಪ್ಪರ್‍ಗಳನ್ನು ಗಣಿ ಹಾಗೂ ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದ್ದಾರೆ. ಜಿಲ್ಲೆಯಲ್ಲಿ ಮರಳು ಲಭ್ಯ ಇಲ್ಲದಿರುವುದರಿಂದ ಕೆಲವೇ ಮಂದಿಗೆ ನಿಯಮಾನುಸಾರ ಮರಳು ಸಾಗಾಟಕ್ಕೆ ಪರವಾನಗಿ…

Read More

UN NETWORKS ಕೊಲ್ಯ : ನಾಟ್ಯನಿಕೇತನ ಕೊಲ್ಯ ಸೋಮೇಶ್ವರ ಇವರ ತಂಡದ ಸಾಹಿತಿ ಅಮೃತ ಸೋಮೇಶ್ವರ ರಚಿಸಿದ ಎಲುವೆರ್ ದೈಯ್ಯರ್ ನೃತ್ಯರೂಪಕ ದುಬೈ ವಿಶ್ವ ತುಳು ಸಮ್ಮೇಳನದಲ್ಲಿ ಪ್ರದರ್ಶನಗೊಂಡಿತು.

Read More

UN NETWORKS ದುಬಾಯಿ : ತುಳುವರು ಇರುವಲ್ಲಿ ಊರಿನ ಕೀರ್ತಿ ಹೆಚ್ಚಳವಾಗುತ್ತಲೇ‌ ಇರುತ್ತದೆ. ವಿದೇಶದಲ್ಲಿ ನಡೆದ ಸಮ್ಮೇಳನ ಸಾರ್ಥಕವಾಗಬೇಕಾದರೆ ಮನೆಯಲ್ಲಿ‌ ತುಳು ‌ಭಾಷೆ‌ ಮಾತನಾಡುವ ಶಪಥ ಅಗತ್ಯ ಎಂದು ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು. ಕಡಲಂಚಿನ ತುಳುವೆರ್, ತುಳು ಸಾಹಿತ್ಯ ಅಕಾಡೆಮಿ ಹಾಗೂ ಅಖಿಲ ‌ಭಾರತ ತುಳು‌ ಒಕ್ಕೂಟ ಇವುಗಳ ಸಹಕಾರದಲ್ಲಿ ದುಬಾಯಿಯ ದುಬಾಯಿಯ ಅಲ್ ಲೀಸರ್ ಲ್ಯಾಂಡ್ ಐಸ್ ರಿಂಕ್ ಒಳಾಂಗಣ ಸಭಾಂಗಣದಲ್ಲಿ‌ ಎರಡು ದಿನ ‌ನಡೆದ ವಿಶ್ವ ತುಳು ಸಮ್ಮೇಳನ-2018ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.ಮಾನವನ ಅಭಿವೃದ್ಧಿ ಗಾಳಿಪಟದಂತೆ, ಎಷ್ಟೇ ಎತ್ತರ ಹೋದರೂ ಮೂಲಸ್ಥಾನ ನೂಲಿನಲ್ಲಿರುತ್ತದೆ. ಅದರಂತೆ ನಾವು‌‌ ಎಲ್ಲೇ ಎಷ್ಟು ಎತ್ತರಕ್ಕೆ ಹೋದರೂ ತುಳು ಅಭಿಮಾನ‌ ಹೊಂದಿರಬೇಕು ಎಂದು ಹೇಳಿದರು. ಒಡಿಯೂರು ಮಠದ ಶ್ರೀ ಗುರುದೇವಾನಂದ ಸ್ವಾಮೀಜಿ ಮಾತನಾಡಿ, ಕ್ರಿಯೆ, ಪ್ರೀತಿ, ವಿಶ್ವಾಸಕ್ಕೊಂದು ಹೆಸರೇ ತುಳು. ಈ ಭಾಷೆಯಲ್ಲಿ ಆಧ್ಯಾತ್ಮದ ತಿರುಳು ಇದೆ. ಸಂಸ್ಕೃತಿ ಉಳಿಯಬೇಕಾದರೆ ಭಾಷೆ ಉಳಿಯಬೇಕಿದೆ ಎಂದರು.ಮಾಣಿಲ ‌‌ಮಠದ ಶ್ರೀ…

Read More

UN NETWORKS ದುಬಾಯಿ: ತುಳು ಭಾಷೆ, ಸಂಸ್ಕೃತಿಗೆ ಸಾವಿರ ವರ್ಷದ ಇತಿಹಾಸವಿದ್ದು ತುಳು ಭಾಷೆಯನ್ನು 8ನೇ ಪರಿಚ್ಚೇದಕ್ಕೆ ಸೇರಿಸುವ ನಿಟ್ಟಿನಲ್ಲಿ ಕಳೆದ ಬಾರಿ ಧರ್ಮಸ್ಥಳಕ್ಕೆ ಆಗಮಿಸಿದ್ದ ಪ್ರದಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿದ್ದು, ಇದೀಗ ಎರಡನೇ ಬಾರಿಗೆ ವಿದೇಶದ ಮಣ್ಣಿನಲ್ಲಿ ನಡೆಯುವ ವಿಶ್ವ ತುಳು ಸಮ್ಮೇಳನದ ಮೂಲಕ ಕೇಂದ್ರ ಸರಕಾರಕ್ಕೆ ಇನ್ನೊಮ್ಮೆ ಮನವಿ ಮಾಡುತ್ತಿದ್ದು, ತುಳು ಭಾಷೆಯನ್ನು ಎಂಟನೇ ಪರಿಚ್ಚೇದಕ್ಕೆ ಸೇರಿಸುವ ಮೂಲಕ ವಿಶ್ವದ ಮಾನ್ಯತೆ ನೀಡುವ ಕಾರ್ಯ ಆಗಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ.ವಿರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು. ಕಡಲಂಚಿನ ತುಳುವೆರ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಅಖಿಲ ಭಾರತ ತುಳು ಒಕ್ಕೂಟಗಳ ಸಹಕಾರದೊಂದಿಗೆ ಶುಕ್ರವಾರ ದುಬಾಯಿಯ ಅಲ್ ನಾಸರ್ ಲೀಸರ್‍ಲ್ಯಾಂಡ್‍ನ ಐಸಿರಿಂಕ್ ಒಳಾಂಗಣ ಕ್ರೀಡಾಂಗಣದಲ್ಲಿ ಆರಂಭಗೊಂಡ ಎರಡು ದಿನಗಳ ಕಾಲ ನಡೆಯಲಿರುವ ವಿಶ್ವ ತುಳು ಸಮ್ಮೇಳನ ದುಬಾಯಿ-2018ಗೆ ಚಾಲನೆ ನೀಡಿ ಮಾತನಾಡಿದರು. ತುಳುನಾಡಿನ ವಿಶೇಷತೆ ಎಂದರೆ ಯಾವುದೇ ಪ್ರದೇಶಕ್ಕೆ ನಮ್ಮವರು ಹೋದರೆ ಅಲ್ಲಿನ ಸಂಸ್ಕೃತಿ,ಆಚಾರ ವಿಚಾರಗಳನ್ನು ಆಳವಡಿಸಿಕೊಂಡುಬಾಳುತ್ತಾರೆ.…

Read More

UN NETWORKS ಮಂಗಳೂರು: ಕಲಾವರ್ಧಕ ಯುವಕ ಮಂಡಲ (ರಿ) ಹಾಗೂ ಕಲಾಚೇತನ ಯುವತಿ ಮಂಡಲವಾರ ಸಂಕೇತ ಇವರ ಜಂಟಿ ಆಶ್ರಯದಲ್ಲಿ “ಚಿಣ್ಣರ ಚಿಗುರು-2018 ಕಾರ್ಯಕ್ರಮ ಶ್ರೀ ಸೀತಾರಾಮ ಭಜನಾ ಮಂದಿರ ನಾರ್ಲದಲ್ಲಿ ಇತ್ತೀಚೆಗೆ ನಡೆಯಿತು.ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಶೇಕಡಾ 96 ಅಂಕ ಗಳಿಸಿದ ನಿಷ್ರ್ಕಸ್ ಚೌಟ ಎಂಬ ವಿದ್ಯಾರ್ಥಿಯನ್ನು ಸನ್ಮಾನಿಸಲಾಯಿತು. ಸಿ.ಎ ಗಣೇಶ್ ರಾವ್, ರಮೇಶ್ ಆಚಾರ್ಯ, ಸೋಹನ್ ಅತಿಕಾರಿ ಗ್ರಾಮ ಪಂಚಾಯತ್ ಸದಸ್ಯರಾದ ಸಂದೀಪ್ ಶೆಟ್ಟಿ ಜಯಾನಂದ್ ಕುಲಾಲ್, ರಮಿತಾ ಶಿವರಾಜ್, ಶೃತಿ ಸುಶಾಂತ್ ಉಪಸ್ಥಿತರಿದ್ದರು.

Read More

UN NETWORKS ಉಳ್ಳಾಲ : ಜಮಾಅತೆ ಇಸ್ಲಾಂ ಹಿಂದ್ ಇದರ ಆಶ್ರಯದಲ್ಲಿ ಧಾರ್ಮಿಕ ಸಹಬಾಳ್ರವ ಮತ್ತು ಸಾಮರಸ್ಯದ ಬಗ್ಗೆ ಕೊಲ್ಯ ಜೋಯ್‍ಲ್ಯಾಂಡ್ ಶಾಲೆಯಲ್ಲಿ ಶಿಕ್ಷಕರ ಜತೆ ವಿಚಾರಗೋಷ್ಠಿ ವಿಶೇಷ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಜಮಾತೆ ಇಸ್ಲಾಮಿ ಹಿಂದ್‍ನ ನಾಯಕ ಪಿಎ. ಕಾಲೇಜಿನ ಫ್ರೋ. ಮಹಮ್ಮದ್ ಮುಬೀನ್ ಅವರು, ನಾವೆಲ್ಲ ಸೌಹಾರ್ದತೆಯನ್ನು ಬೆಳೆಸಬೇಕಾಗಿದೆ ಜಮಾತೆ ಇಸ್ಲಾಮಿ ಹಿಂದ್ ಈದ್ ಸೌಹಾರ್ದ ಕೂಟ, ದೀಪಾವಳಿ ಸೌಹಾರ್ದ ಕೂಟ, ಕ್ರಿಸ್‍ಮಸ್ ಸೌಹಾರ್ದ ಕೂಟ, ವಿಚಾರಗೋಷ್ಠಿ ಮಾಡುವ ಮೂಲಕ ಧರ್ಮದ ಬಗ್ಗೆ ಪರಸ್ಪರ ಅರಿತು ಉತ್ತಮ ವಾತಾವರಣ ಸೃಷ್ಟಿ ಮಾಡಲು ಸಾಮರಸ್ಯತೆ ಬೆಳೆಯಬೇಕಾಗಿದೆ ಎಂದರು. ಜಮಾತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಅಬ್ದುಲ್ ಕರೀಂ , ಉಪಾಧ್ಯಕ್ಷ ಅಬ್ದುಲ್ ರಹ್‍ಮಾನ್, ಬೋಳಾರ ಇನ್‍ಪೆಂಟ್ ಜಸಸ್ ಜೋಯ್‍ಲ್ಯಾಂಡ್ ಶಾಲೆಯ ಮುಖ್ಯೋಪಧ್ಯಾಯರಾದ ಸವಿತಾ ಜಲಂಧರ್ ಮೊದಲಾದವರು ಉಪಸ್ಥಿತರಿದ್ದರು. ಕೊಲ್ಯ ಜೋಯ್‍ಲ್ಯಾಂಡ್ ಶಾಲೆಯ ಮುಖ್ಯೊಪಾಧ್ಯಾಯರಾದ ವೀಣ ಭಟ್ ಸ್ವಾಗತಿಸಿದರು. ಇಸಾಕ್ ಹಸನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಜ್ಯೋತಿ ವಂದಿಸಿದರು.

Read More

UN NETWORKS ಹಳೆಕೋಟೆ: ಹಳೆಕೋಟೆ ಅನುದಾನಿತ ಸಯ್ಯದ್ ಮದನಿ ಉರ್ದು ಹಿ.ಪ್ರಾ. ಶಾಲೆ ಮತ್ತು ಸಯ್ಯದ್ ಮದನಿ ಪ್ರೌಢ ಶಲೆಯ ವತಿಯಿಂದ ಪ್ಲಾಸ್ಟಿಕ್ ನಿರ್ಮೂಲನದ ಬಗೆ ಜಾಗೃತಿ ಸಮಾವೇಶ ಮತ್ತು ಶಾಲೆ ಬಿಟ್ಟುಹೋದ ಮಕ್ಕಳ ಸಮೀಕ್ಷೆ ಮಾಡುವ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು. ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ ಮಾತನಾಡಿ, ಮಕ್ಕಳು ಸಂಗ್ರಹ ಮಾಡಿದ ತ್ಯಾಜ್ಯವನ್ನು ಉಳ್ಳಾಲ ನಗರಸಭೆಯ ಆಯುಕ್ತ ವಾಣಿ ವಿ. ಆಳ್ವವರಿಗೆ ಕೊಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಪ್ಲಾಸ್ಟಿಕ್ ನಿರ್ಮೂಲನದ ಬಗ್ಗೆ ಜಾಗೃತಿ ಸಮಾವೇಶ ವಿದ್ಯಾರ್ಥಿಗಳಿಗೆ ಅರ್ಥ ಆಗುವ ರೀತಿಯಲಿ ಮಾಡಿದ್ದಾರೆ.ಇನ್ನು ಮುಂದೆ ನಮ್ಮ ಮನೆಯಲ್ಲಿ ಅಥವಾ ಪರಿಸರದಲ್ಲಿ ಎಲ್ಲಿಯೂ ಕಸ ಕಂಡರೂ ಅದನ್ನು ತೆಗೆದು ಶೇಖರಣೆ ಮಾಡುವ ಕೆಲಸ ಮಕ್ಕಳಿಂದ ಆಗುತ್ತಿದೆ ಎನ್ನುವ ನಂಬಿಕೆ ನನಗಿದೆ ಎಂದರು. ಉಳ್ಳಾಲ ನಗರಸಭಾ ಆಯುಕ್ತ ವಾಣಿ ಮಾತನಾಡಿ, ಇಷ್ಟೊಂದು ಪ್ಲಾಸ್ಟಿಕ್‍ನ್ನು ಸಂಗ್ರಹ ಮಾಡಿ ಅದನ್ನು ಕ್ರಮಬದ್ಧವಾಗಿಟ್ಟು ಒಳ್ಳೆಯ ಕೆಲಸ ಮಾಡುವುದರಲ್ಲಿ ಹಳೆಕೋಟೆ…

Read More

UN NETWORKS ಉಳ್ಳಾಲ: ಜಮಾಅತೆ ಇಸ್ಲಾಮಿ ಹಿಂದ್ ಉಳ್ಳಾಲ ಮತ್ತು ಉಳ್ಳಾಲ ನಗರ ಸಭೆಯ ಜಂಟಿ ಆಶ್ರಯದಲ್ಲಿ ಪ್ರವಾದಿ ಮುಹಮ್ಮದ್ (ಸ) ‘ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ’ ರಾಜ್ಯವ್ಯಾಪಿ ಸೀರತ್ ಅಭಿಯಾನದ ಪ್ರಯುಕ್ತ ಬಬ್ಬುಕಟ್ಟೆ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಉಳ್ಳಾಲ ನಗರ ಸಭೆಯ ಪೌರಾಯುಕ್ತೆ ವಾಣಿ ಆಳ್ವ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಉಳ್ಳಾಲ ನಗರ ಸಭೆಯ ಸದಸ್ಯರಾದ ಮುಶ್ತಾಕ್ ಪಟ್ಲ, ದಿನಕರ ಉಳ್ಳಾಲ, ನಗರ ಸಭೆಯ ಆರೋಗ್ಯ ಇಲಾಖೆಯ ಮೇಲ್ವಿಚಾರಕ ರಾಜೇಶ್, ವೆಲ್ಫೇರ್ ಪಾರ್ಟಿಯ ದ.ಕ. ಜಿಲ್ಲಾ ಉಪಾಧ್ಯಕ್ಷ ಸಲಾಂ ಸಿ.ಎಚ್., ಅಲ್ ಫುರ್ಕಾನ್ ವಿದ್ಯಾಸಂಸ್ಥೆಯ ಇಸಾಕ್ ಕಲ್ಲಾಪು ಮತ್ತು ಜಮಾಅತೆ ಇಸ್ಲಾಮಿ ಹಿಂದ್ ಉಳ್ಳಾಲ ಅಧ್ಯಕ್ಷ ಕರೀಮ್ ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದರು.

Read More

UN NETWORKS ದೇರಳಕಟ್ಟೆ : ದೇರಳಕಟ್ಟೆ ಪಾನೀರ್ ದಯಾಮಾತೆ ಇಗರ್ಜಿಯಲ್ಲಿ ಪ್ರಕೃತಿ ಉಳಿವಿಗಾಗಿ ಹಸಿರು ಭಾನುವಾರ ಕಾರ್ಯಕ್ರಮ ಇಗರ್ಜಿಯ ಆವರಣದಲ್ಲಿ ಆಚರಿಸಲಾಯಿತು. ಮಂಗಳೂರು ಪ್ರಾಂತ್ಯ ಧರ್ಮಾಧ್ಯಕ್ಷರಾದ ರೆ.ಫಾ.ಪೀಟರ್ ಪೌಲ್‌ ಸಲ್ದಾನ ಅವರ ಆದೇಶದ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದ ಪ್ರಯುಕ್ತ ಇಗರ್ಜಿಯ ಆವರಣದಲ್ಲಿ ಗಿಡಗಳನ್ನು ನೀಡಲಾಯಿತು. ಈ ಸಂದರ್ಭ ನಡೆದ ಬಲಿಪೂಜೆಯನ್ನು ಫಾ.ಮ್ಯಾಕ್ಸಿಂ ರೊಜಾರಿಯೋ ನೆರವೇರಿಸಿ, ಪ್ರಕೃತಿ ರಕ್ಷಣೆ ನಮ್ಮ ಹೊಣೆಯಾಗಿದ್ದು ನಮ್ಮ ಮನೆಯ ಆವರಣದಲ್ಲಿ ಗಿಡ ನೆಡುವ ಮೂಲಕ ಪರಿಸರ ರಕ್ಷಿಸಬಹುದು ಎಂದು ಹೇಳಿದರು. ಚರ್ಚ್ ಧರ್ಮಗುರು ಫಾ.ಡೆನ್ನಿಸ್ ಸುವಾರಿಸ್, ಉಪಾಧ್ಯಕ್ಷ ಎಲಿಯಾಸ್ ಡಿಸೋಜ, ಕಾರ್ಯದರ್ಶಿ ಡೆನ್ನಿಸ್ ಗೋನ್ಸಾಲ್ವಿಸ್ ಇನ್ನಿತರರು ಉಪಸ್ಥಿತರಿದ್ದರು.

Read More