UN NETWORKS
ಉಳ್ಳಾಲ: ಬಡ ನಿರ್ಗತಿಕ, ಅನಾರೋಗ್ಯ ಪೀಡಿತರಿಗೆ ಸಹಾಯ ಮಾಡುವ ಮತ್ತು ಉಳ್ಳಾಲ ಪರಿಸರದವರಿಗೆ ಆಂಬ್ಯುಲೆನ್ಸ್ ಸೇವೆ ಒದಗಿಸುವ ಸಲುವಾಗಿ ಕ್ರಿಕೆಟ್ ಪಂದ್ಯಾಟವನ್ನು ನಡೆಸಿದ ಬಿ,ಬಾಯ್ಸ್ ಸ್ಪೋಟ್ರ್ಸ್ ಮತ್ತು ಕಲ್ಚರಲ್ ಅಸೋಸಿಯೇಶನ್ ಅವರ ಸಾಮಾಜಿಕ ಕಾರ್ಯ ನಿರಂತರವಾಗಿ ನಡೆಯಲಿ ಎಂದು ಉಳ್ಳಾಲ ನಗರ ಸಭಾ ಸದಸ್ಯ ಯು.ಪಿ.ಅಯ್ಯೂಬ್ ಮಂಚಿಲ ಹೇಳಿದರು.
ಅವರು ಮದನಿ ಜೂನಿಯರ್ ಕಾಲೇಜಿನ ವಠಾರದಲ್ಲಿ ಇತ್ತೀಚೆಗೆ ಜರಗಿದ ಅಳೇಕಲ ಬಿ,ಬಾಯ್ಸ್ ಸ್ಪೋಟ್ರ್ಸ್ ಮತ್ತು ಕಲ್ಚರಲ್ ಅಸೋಸಿಯೇಶನ್‍ನ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ನೆರವೇರಿಸಿ ಮಾತನಾಡಿದರು.ಈ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಹಝ್ರತ್ ಶಾಲೆಯ ನಫೀಸ, ಮರಿಯ ಬೀವಿ, ಮತ್ತು ಮದನಿ ಹಿರಿಯ ಪ್ರಾಥಮಿಕ ಶಾಲೆಯ ಶಾಹುಲ್ ಹಮೀದ್, ಕುರಾನ್ ಕಂಠ ಪಾಠ ಮಾಡಿ ಹಾಫಿಳ್ ಸಾಧನೆ ಮಾಡಿದ ಸಂಶುದ್ದೀನ್ ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಅಲೆಕಳ ಮದನಿ ಶಿಕ್ಷಣ ಸಂಸ್ಥೆಯಲ್ಲಿ ಕಳೆದ 35 ವರ್ಷಗಳಿಂದ ಸೇವೆ ಸಲ್ಲಿಸಿದ ಶಂಕರ್ ಅವರನ್ನು ಮತ್ತು ಮದನಿ ಎಜುಕೇಶನ್ ಟ್ರಸ್ಟ್‍ನಲ್ಲಿ ಉತ್ತಮ ಸೇವೆ ಸಲ್ಲಿಸಿದ ಯು.ಎ.ಇಬ್ರಾಹಿಂ ಕಾಸಿಂ ಮತ್ತು ಹಿರಿಯ ಸಮಾಜ ಸೇವಕ ನುಸ್ರತುಲ್ ಮಸಾಕೀನ್ ಟ್ರಸ್ಟ್‍ನ ಎ.ಎ. ಖಾದರ್ ಅವರನ್ನು ಸನ್ಮಾನಿಸಲಾಯಿತು.
ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ತ್ವಾಹಾ , ಕಾರ್ಯದರ್ಶಿ ಯು.ಎ. ಹನೀಫ್ , ಉಳ್ಳಾಲ ಅಳೇಕಲ ಸ್ಪೋಟ್ರ್ಸ್‍ನ ಅಧ್ಯಕ್ಷ ಯುಬಿ.ಫಾರೂಕ್, ಮದನಿ ಎಜುಕೇಶನ್ ಟ್ರಸ್ಟ್ ಸದಸ್ಯ ಯು.ಎನ್. ಇಬ್ರಾಹಿಂ, ಉಳ್ಳಾಲ ನಗರಸಭಾ ಸದಸ್ಯ ಅಸ್ಗರ್ ಅಲಿ, ಯು.ಎ.ಇಸ್ಮಾಯಿಲ್, ಯುವ ಕಾಂಗ್ರೆಸ್ ಅಧ್ಯಕ್ಷ ಯು.ಬಿ ಸಲೀಂ, ಮಕ್ಸೂದ್ ಖಾನ್, ಯು.ಬಿ. ರಹೀಂ, ಬಿ.ಬಾಯ್ಸ್ ಅಧ್ಯಕ್ಷ ಯು.ಡಿ ಹನೀಫ್, ಉಪಾಧ್ಯಕ್ಷ ಅಲೀ ಮಾರ್ಗತಲೆ, ಕಫ್ತಾನ ಶಬೀರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು . ಯು.ಎಚ್.ಹಿದಾಯತ್ ಕಾರ್ಯಕ್ರಮ ನಿರೂಪಿಸಿದರು.
ಕ್ರಿಕೆಟ್ ಪಂದ್ಯಾಟದಲ್ಲಿ ಉಳ್ಳಾಲ ಬೈಲ್ ಕೀರ್ತಿ ತಂಡ ಚಾಂಪಿಯನ್ ಮತ್ತು ಮಂಚಿಲ ಸಫರ್ ಸ್ಪೋಟ್ರ್ಸ್ ಮತ್ತು ಕಲ್ಚರಲ್ ದ್ವಿತೀಯ ಸ್ಥಾನ ಪಡೆಯಿತು.


