UN NETWORKS
ತಲಪಾಡಿ : ಬಾಡಿಗೆ ಮನೆಯಲ್ಲಿದ್ದ ಮೂವರು ಮಂಗಳಮುಖಿಯರಿಗೆ 15 ಮಂದಿಯಿದ್ದ ತಂಡದ ಮಂಗಳಮುಖಿಯರು ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿರುವ ಘಟನೆ ತಲಪಾಡಿ ಟೋಲ್ ಸಮೀಪ ಶನಿವಾರ ಮುಂಜಾನೆ ವೇಳೆ ಸಂಭವಿಸಿದೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಲಪಾಡಿ ಟೋಲ್ ಸಮೀಪದ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಅನುಶ್ರೀ, ಶಮ್ಮಾ, ನಿಶಾ ಎಂಬವರು ಹಲ್ಲೆಗೊಳಗಾದವರು. ಇವರಿಗೆ ಸುರತ್ಕಲ್ ಕಾನ ನಿವಾಸಿ ಮೌನಾ , ಆರುಂಧತಿ, ಖುಷಿ ಎಂಬವರ ತಂಡ ದಾಳಿ ನಡೆಸಿದೆ. ತಿಂಗಳಿಗೆ ಹಣ ನೀಡುವಂತೆ ಒತ್ತಾಯಿಸಿರುವುದನ್ನು ಮೂವರು ನಿರಾಕರಿಸಿದ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಕೊಡದೇ ಇದ್ದಲ್ಲಿ ಕೊಲ್ಲುವ ಬೆದರಿಕೆಯನ್ನು ಒಡ್ಡಿದ ತಂಡ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿತರು ನಿರಂತರವಾಗಿ ಹಲ್ಲೆ ನಡೆಸುತ್ತಾ ಬಂದಿದ್ದಾರೆ. ಪ್ರಕರಣಗಳು ದಾಖಲಾದರೂ ಅವರ ವಿರುದ್ಧ ಪೊಲೀಸರು ಕ್ರಮಕೈಗೊಳ್ಳುತ್ತಿಲ್ಲ ಅನ್ನುವ ಆರೋಪ ಮಾಡಿದ್ದಾರೆ.


