UN NETWORKS
ಕೊಲ್ಯ: ಕಳೆದ ನಾಲ್ಕು ವರುಷ ಹತ್ತು ತಿಂಗಳ ಅವಧಿಯಲ್ಲಿ ದೇಶದಲ್ಲಿ ಅಮೂಲಾಗ್ರ ಬದಲಾವಣೆಯಾಗಿದೆ.ಎಂದು ಬಿ.ಜೆ.ಪಿ. ಜಿಲ್ಲಾ ಚುನಾವಣಾ ಸಂಚಲಕರಾದ ಗೋಪಾಲಕೃಷ್ಣ ಹೇರಳೆಯವರು ಹೇಳಿದರು.ಅವರು ಕೊಲ್ಯ ಸೌಭಾಗ್ಯ ಭವನದಲ್ಲಿ ಮಾಜಿ ಶಾಸಕರಾದ ಕೆ.ಜಯರಾಮ ಶೆಟ್ಟಿ ಜತೆಯಲ್ಲಿ,ಬಿ.ಜೆ.ಪಿ. ಮಂಗಳೂರು ಕ್ಷೇತ್ರದ ಲೋಕಸಭಾ ಚುನಾವಣೆಗೆ ಸಿದ್ದತಾ ಸಭೆ ಮತ್ತು ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಬಡ ಜನರ ಕಲ್ಯಾಣಕ್ಕಾಗಿ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ ಜನಧನ ಬ್ಯಾಂಕ್ ಖಾತೆ, ಉಜ್ವಲ ಯೋಜನೆ ಮೂಲಕ ಗ್ಯಾಸ್ ಸ್ಟವ್ ವಿತರಣೆ, ಗರ್ಭಿಣಿ ಮಹಿಳೆಯರ ಹೆರಿಗೆ ರಜೆ ಹೆಚ್ಚಳ, ರೈತರರಿಗಾಗಿ ವಿಶೇಷ ಯೋಜನೆ, 8. ಲಕ್ಷ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ, ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ಮೂಲಕ ಜನಸ್ನೇಹಿ ಆಡಳಿತ ನೀಡಿರುವ ಮೋದಿಯವರು ಸೈನ್ಯಕ್ಕೆ ವಿಶೇಷ ಅಧಿಕಾರ ನೀಡುವ ಸೈನಿಕರ ಆತ್ಮ ಸ್ಥೈರ್ಯ ಹಿಗ್ಗಿಸುವ ಕೆಲಸ ಮಾಡಿದರು. ದೇಶದ ಜನತೆ ಮತ್ತೊಮ್ಮೆ ಮೋದಿಜೀಯವರೇ ಪ್ರಧಾನಿಯಾಗಬೇಕೆಂದು ಆಶಿಸಿದರೇ, ದೇಶವನ್ನು ಕೊಳ್ಳೆ ಹೊಡೆದು ತಮ್ಮ ಕುಟುಂಬ ರಕ್ಷಣೆಗಾಗಿ ಮಹಾಘಟಬಂಧನ್ ಹೆಸರಲ್ಲಿ ಅಧಿಕಾರದ ಹಗಲು ಕನಸಲ್ಲಿ ಕೆಲವೊಂದು ಪಕ್ಷಗಳು ಇವೆ ಎಂದು ಅವರು ಹೇಳಿದರು.
ಕ್ಷೇತ್ರಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ಅಧ್ಯಕ್ಷತೆ ವಹಿಸಿದ್ದರು. ವಿಭಾಗ ಚುನಾವಣಾ ಸಹ ಪ್ರಭಾರಿ ಪ್ರತಾಪ್ ಸಿಂಹ ನಾಯಕ್, ಕ್ಷೇತ್ರ ಚುನಾವಣಾ ಪ್ರಭಾರಿ ರಾಧಾಕೃಷ್ಣ ಬೂಡಿಯಾರ್, ಜಿಲ್ಲಾ ವಕ್ತಾರ. ವಿಕಾಸ್ ಪುತ್ತೂರು, ಜಿಲ್ಲಾ ಉಪಾಧ್ಯಕ್ಷ ರಾದ ಚಂದ್ರಹಾಸ್ ಉಳ್ಳಾಲ, ಜಿಲ್ಲಾ ಕಾರ್ಯದರ್ಶಿ ಗಳಾದ ಸತೀಶ್ ಕುಂಪಲ,ನಮಿತಾ ಶ್ಯಾಮ್, ಕ್ಷೇತ್ರ ಚುನಾವಣಾ ಸಂಬಾಲಕ ಚಂದ್ರಶೇಖರ ಉಚ್ಚಿಲ್, ಪ್ರಧಾನ ಕಾರ್ಯದರ್ಶಿ ಗಳಾದ ಮೋಹನ್ ರಾಜ್ ಕೆ.ಆರ್. ಮತ್ತು ಮನೋಜ್ ಆಚಾರ್ಯ ಉಪಸ್ಥಿತರಿದ್ದರು.


