UN NETWORKS ಉಳ್ಳಾಲ : ವಿದ್ಯಾರ್ಥಿ ನಿಗೆ ಚೂರಿ ಇರಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಶಕ್ತಿನಗರ ನಿವಾಸಿ ಸುಶಾಂತ್ ನನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಯಿಂದ ಗುರುವಾರ ಬಿಡುಗಡೆಗೊಳಿಸಿ , ಉಳ್ಳಾಲ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಜೂ.29 ರಂದು ಕಾರ್ಕಳ ಕಾಲೇಜಿನಿಂದ ಮನೆಗೆ ಮರಳುತ್ತಿದ್ದ ಬಗಂಬಿಲ ನಿವಾಸಿ ದೀಕ್ಷಾ(21) ಳನ್ನು ಅಡ್ಡಗಟ್ಟಿ ಸುಶಾಂತ್ ಚೂರಿಯಿಂದ 12 ಬಾರಿ ಇರಿದು, ತಾನೂ ಕುತ್ತಿಗೆಗೆ ಇರಿದು ಆತ್ಮಹತ್ಯೆಗೆ ಯತ್ನಿಸಿದ್ದ. ಘಟನೆ ಬಳಿಕ ಇಬ್ಬರನ್ನು ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ದೀಕ್ಷಾ ಸ್ಥಿತಿ ಇನ್ನೂ ಗಂಭೀರವಾಗಿದೆ. ಸುಶಾಂತ್ ಎರಡು ದಿನಗಳಲ್ಲೇ ಚೇತರಿಸಿಕೊಂಡಿದ್ದ. ಒತ್ತಡಕ್ಕೆ ಒಳಗಾಗಿದ್ದ ಸುಶಾಂತ್ ನನ್ನು ಮಾನಸಿಕ ರೋಗಿಗಳ ವಿಭಾಗದಲ್ಲಿರಿಸಿ ಚಿಕಿತ್ಸೆಯನ್ನೂ ನೀಡಲಾಗಿತ್ತು. ಇಂದು ಐದು ದಿನಗಳ ಬಳಿಕ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪ್ರೇಮ ವೈಫಲ್ಯವೇ ಕಾರಣ: ತಾನು ದೀಕ್ಷಾಳನ್ನು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಮದುವೆಯಾಗುವ ಉದ್ದೇಶ ಇಟ್ಟುಕೊಂಡಿದ್ದನು. ಕಾರ್ಕಳದ ಕಾಲೇಜು ತೆರಳಿದ ಬಳಿಕ ದೀಕ್ಷಾ ತನ್ನ ಸಂಪರ್ಕವನ್ನೇ ಕಡಿತಗೊಳಿಸಿದ್ದಳು.…
Author: UllalaVani
UN NETWORKS ಉಳ್ಳಾಲ : ಸಂಘಪರಿವಾರದ ಕಾರ್ಯಕರ್ತರು ಜಿಲ್ಲೆಯಲ್ಲಿ ತಾವು ಏನು ಮಾಡಿದರೂ ನಡೆಯುತ್ತದೆ ಎಂಬ ದುರಹಂಕಾರದಿಂದ ವರ್ತಿಸುತ್ತಿದ್ದು ಇದರ ಪರಿಣಾಮವೇ ಪುತ್ತೂರಿನಲ್ಲಿ ದಲಿತ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಮಾಡುವ ಪ್ರಕ್ರಿಯೆ ನಡೆದಿದ್ದು ಇವರ ದುರಹಂಕಾರ ಮತ್ತು ಸೊಕ್ಕನ್ನು ಮುರಿಯಲು ಜಿಲ್ಲೆಯ ಜನತೆ ಮುಂದಾಗಬೇಕಿದೆ ಎಂದು ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಹೇಳಿದರು. ಪುತ್ತೂರಿನಲ್ಲಿ ನಡೆದ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಖಂಡಿಸಿ , ಜಿಲ್ಲೆಯಲ್ಲಿ ವ್ಯಾಪಕವಾಗಿರುವ ಮಾದಕ ದ್ರವ್ಯ ಮಾರಾಟ ಜಾಲವನ್ನು ಮಟ್ಟ ಹಾಕುವಂತೆ ಒತ್ತಾಯಿಸಿ ಉಳ್ಳಾಲ ಡಿವೈಎಫ್ಐ ಸಮಿತಿ ದೇರಳಕಟ್ಟೆಯ ಜಂಕ್ಷನ್ ನಲ್ಲಿ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಡ್ರಗ್ಸ್ ಮಾಫಿಯಾದ ಪ್ರಮುಖ ಮಾರಾಟ ಕೇಂದ್ರವಾಗಿ ಮಾರ್ಪಟ್ಟಿದ್ದು ವಿದ್ಯಾರ್ಥಿ ಮತ್ತು ಯುವಜನರಿಗೆ ಬಹಳ ಸುಲಭವಾಗಿ ಡ್ರಗ್ಸ್ ದೊರಕುತ್ತಿದೆ. ಈ ಬಗ್ಗೆ ಗಮನ ಹರಿಸಬೇಕಿದ್ದ ಇಲ್ಲಿನ ಶಾಸಕರು ಮತ್ತು ಸಂಸದರು ಜನಗಳ ಸಮಸ್ಯೆಗಿಂತ ಹೆಚ್ಚಾಗಿ…
UN NETWORKS ತೊಕ್ಕೊಟ್ಟು : ತಾಯಿಯ ಸ್ವಂತ ಅಣ್ಣನ ಮಗನನ್ನು ಭೀಕರವಾಗಿ ಕೊಲೆ ಮಾಡಿದ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು ಚೆಂಬುಗುಡ್ಡೆ ಮಹಾಕಾಳಿ ದೈವಸ್ಥಾನದ ಮುಂಭಾಗದಲ್ಲಿ ಬುಧವಾರ ರಾತ್ರಿ ನಡೆದಿದ್ದು ಕೊಲೆಗೆ ಕೌಟುಂಬಿಕ ಕಲಹ ಎಂದು ಸಂಶಯಿಸಲಾಗಿದೆ. ದೈವಸ್ಥಾನದ ಮುಂಭಾಗದ ಮನೆಯ ಒಡತಿ ಲಲಿತಾ ಅವರ ಅಣ್ಣನ ಮಗ (45)ನಾರಾಯಣ ಕೊಲೆಯಾಗಿದ್ದು ಲಲಿತಾ ಅವರ ಮಗ ರಾಜೇಶ್ (35) ಕೊಲೆ ಆರೋಪಿಯಾಗಿದ್ದು ಉಳ್ಳಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಲಲಿತಾ ಅವರ ಅಣ್ಣನ ಮಗ ನಾರಾಯಣ ಲಲಿತಾ ಅವರ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದು ಲಲಿತಾ ಅವರ ಹಿರಿಯ ಮಗ ರಾಜೇಶ್(35) ಕೊಲೆ ಮಾಡಿರುವ ಸಂಶಯದಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.ಲಲಿತಾ ಅವರ ಎರಡನೆಯ ಮಗ ರಮೇಶ್ ಮೂಡುಬಿದಿರೆಯಲ್ಲಿ ವಾಸವಾಗಿದ್ದಾನೆ. ಆರೋಪಿ ರಾಜೇಶ್ ಗುಜರಾತ್ ನಲ್ಲಿ ಕೆಲಸ ಮಾಡುತ್ತಿದ್ದು ಪ್ರತಿ ಮೂರು ತಿಂಗಳಿಗೊಮ್ಮೆ ಬರುತ್ತಿದ್ದ. ಈ ಬಾರಿಯೂ ಊರಿಗೆ ಬಂದವರು ರಜಾ ಮೇಲೆ ಊರಿನಲ್ಲಿದ್ದ.ನಾರಾಯಣ ಕೂಲಿ ಕೆಲಸ ಮಾಡುತ್ತಿದ್ದ. ಕೌಟುಂಬಿಕ ಕಲಹದಿಂದ ಮಾತಿನ ಚಕಮಕಿ ನಡೆದು…
UN NETWORKS ಮಂಗಳೂರು : ಹಿಂದೂ ಯುವ ಸೇನೆ ಮಂಗಳೂರು ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಶಶಿಕಾಂತ್ ನಾಗ್ವೇಕರ್ ಆಯ್ಕೆಯಾಗಿದ್ದಾರೆ. ಹಿಂದೂ ಯುವ ಸೇನೆ ಕೇಂದ್ರೀಯ ಮಂಡಳಿ ಆಶ್ರಯದಲ್ಲಿ ನಡೆಯುವ 27 ನೇ ವರ್ಷದ ಮಂಗಳೂರು ಗಣೇಶೋತ್ಸವದ ಸಭೆ ಸೇನಾ ಕಾರ್ಯಾಲಯದಲ್ಲಿ ಕೇಂದ್ರೀಯ ಮಂಡಳಿ ಅದ್ಯಕ್ಷ ಯಶೋಧರ ಚೌಟ ರವರ ಅದ್ಯಕ್ಷತೆಯಲ್ಲಿ ಮಂಗಳೂರು ಗಣೇಶೋತ್ಸವದ ನೂತನ ಪದಾದಿಕಾರಿಗಳಾಗಿ ಆಯ್ಕೆ ಮಾಡಲಾಯಿತು. ಗೌರವಾದ್ಯಕ್ಷರಾಗಿ ಭಾಸ್ಕರಚಂದ್ರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಚೌಟ, ಕೋಶಾಧಿಕಾರಿ ಸುರೇಶ್ ಶೆಟ್ಟಿ ಕೊಟ್ಟಾರ ಕ್ರಾಸ್, ಉಪಾಧ್ಯಕ್ಷರುಗಳಾಗಿ ಉಮೇಶ್ ಪೈ, ರಾಜೇಂದ್ರ ಶೆಣೈ, ಧರ್ಮೇಂದ್ರ ಎಂ.ಪಿ, ವಸಂತ್ ಉರ್ವಸ್ಟೋರ್, ಶುಭಕರ ಶೆಟ್ಟಿ ಎಕ್ಕೂರು, ಶ್ರೀನಿವಾಸ್ ಎಕ್ಕೂರು, ಕೊರಗಪ್ಪ ಶೆಟ್ಟಿ ಆಕಾಶಭವನ, ಶರತ್ ಮಂಕಿಸ್ಟ್ಯಾಂಡ್, ಯಾದವ ಕುಂದರ್ ವಾಮಂಜೂರ್, ಲಕ್ಷಣ್ ಜೋಗಿ ಮೂಡುಶೆಡ್ಡೆ, ಕಿರಣ್ ರೈ ಬಜಾಲ್, ಪಮ್ಮಿ ಕೊಡಿಯಾಲ್ ಬೈಲ್, ಸುರೇಶ್ ಹೊಳ್ಳ ಕುಡುಂಬೂರು, ಲೋಕೇಶ್ ಕುತ್ತಡ್ಕ, ಸುರೇಶ್ ಕೆಮ್ಮಟೆ, ಕಾರ್ಯದರ್ಶಿಗಳಾಗಿ ಸುಕುಮಾರ್ ಸುರತ್ಕಲ್, ನಾಗೇಶ್ ಎಕ್ಕೂರು, ಕಿರಣ್ ಕುಂಪಲ, ಹರೀಶ್…
UN NETWORKS ಉಳ್ಳಾಲ : ಉಚ್ಚಿಲ ಸೋಮೇಶ್ವರ ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ಚುನಾವಣೆಯ ಹೊಸ ನಾಯಕರುಗಳ ಪ್ರಮಾಣ ವಚನ ಕಾರ್ಯಕ್ರಮ ನಡೆಯಿತು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಕೃಷ್ಣಗಟ್ಟಿ ಪ್ರತಿಜ್ಞಾ ವಿಧಿ ನೆರವೇರಿಸಿಮಂತ್ರಿಗಳಿಗೆ ಅವರವರ ಕರ್ತವ್ಯವನ್ನು ಶ್ರದ್ಧೆಯಿಂದ ಹಾಗೂ ಉತ್ತಮ ಬಾಂಧ್ಯವ್ಯದೊಂದಿಗೆ ನಿರ್ವಹಿಸಲು ತಿಳಿಸಿದರು. ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ಉಮೇಶ್ ಉಚ್ಚಿಲ್, ಇಸ್ಮಾಯಿಲ್ ಎನ್. ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಮುಖ್ಯೋಪಾಧ್ಯಾಯ ಲಕ್ಷ್ಮಣ ಕೆ.ವಿ. , ಸಹ ಶಿಕ್ಷಕರು ಉಪಸ್ಥಿತರಿದ್ದರು.
UN NETWORKS ಕೋಟೆಕಾರು: ಪರಿಜ್ಞಾನ ವಿದ್ಯಾಲಯ, ಸೋಮೇಶ್ವರ ಕೋಟೆಕಾರ್ ನಲ್ಲಿ ವಿದ್ಯಾರ್ಥಿಗಳ ಪೋಷಕರಿಗೆ 2019-20ನೇ ಸಾಲಿನ ಶೈಕ್ಷಣಿಕ ವರ್ಷದ ಒಂದು ದಿನದ ಓರಿಯೆಂಟೇಷನ್ ಕಾರ್ಯಕ್ರಮ ನಡೆಯಿತು. ಸಾರಸ್ವತ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ಮಹೇಶ್‍ಎಲ್.ಬೊಂಡಾಲ್, ಮುಖ್ಯಶಿಕ್ಷಕಿ ರಂಜಿತ ಎಮ್. ಜೋಷಿ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.ಸ್ಕೌಟ್ ಮತ್ತು ಗೈಡ್ಸ್ ನ ಲೀಡರ್ ಟ್ರೈನರ್ ಜಯವಂತಿ ಸೋನ್ಸ್ ಇವರು ಸ್ಕೌಟ್ ಮತ್ತು ಗೈಡ್ಸ್ ಮತ್ತು ಬುಲ್ ಬುಲ್‍ಗಳ ಬಗ್ಗೆ ಸವಿವರಾದ ಮಾಹಿತಿ ನೀಡಿದರು.ರಾಮಕೃಷ್ಣ ಮಿಶನ್ ಸ್ವಚ್ಚತಾ ಅಭಿಯಾನ್, ಮಂಗಳೂರು ಇದರ ಸದಸ್ಯ ಉಮನಾಥ್ ಕೋಟೆಕಾರ್ ಮತ್ತು ಸಚಿನ್‍ರವರು ಹಸಿಕಸ ನಿರ್ವಹಣೆಗೆ ಮೂರು ಮಡಕೆಯಗೊಬ್ಬರದ ವಿಧಾನದ ಬಗ್ಗೆ ಪ್ರಾತ್ಯಕ್ಷಿತೆ ನೀಡಿದರು. ಹಿಪೊ ಕ್ಯಾಂಪಸ್‍ನ ವಲಯ ವ್ಯವಸ್ಥಾಪಕಿ ಶೋಭಾ ಪೈ ಪೋಷಕರಿಗೆ ಹಿಪೊ ಕ್ಯಾಂಪಸ್‍ನ ಕಾರ್ಯಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು. ಚೇತನ ಗುಲ್ವಾಡಿ ಸ್ವಾಗತಿಸಿದರು. ರೀಜಾ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು. ದೇವಿಶ್ರೀ ವಂದಿಸಿದರು.
UN NETWORKS ಉಳ್ಳಾಲ: ತೊಕ್ಕೊಟಿನ ಭಗತ್‍ಸಿಂಗ್ ಸೇವಾ ಪ್ರತಿಷ್ಠಾನದ ವತಿಯಿಂದ ಗಿಡ ನೆಡಿ, ಪರಿಸರ ಉಳಿಸಿ ಎಂಬ ಆಶಯದೊಂದಿಗೆ ಸಮಾಜದ ಗಣ್ಯರ ಮನೆಯಲ್ಲಿ ಗಿಡ ನೆಡುವುದರ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು. ಪ್ರತಿಷ್ಠಾನದ ಅಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟು ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖಂಡರಾದ ಚಂದ್ರಶೇಖರ ಉಚ್ಚಿಲ್, ಸುರೇಶ್ ಭಟ್ನಗರ್, ಸಂಜೀವ ಶೆಟ್ಟಿ ಅಂಬ್ಲಮೊಗರು ಇವರ ಮನೆಯಲ್ಲಿ ಸಸಿ ನೆಡಲಾಯಿತು. ಪರಿಸರ ಪ್ರೇಮಿ ಮಾಧವ ಉಳ್ಳಾಲ್ ಮರಗಳ ವಿಶೇಷತೆ ಮತ್ತು ಅಗತ್ಯತೆ ಬಗ್ಗೆ ತಿಳಿಸಿದರು. ಸೋಮೇಶ್ವರ ಪಂ.ಅಧ್ಯಕ್ಷ ರಾಜೇಶ್ ಉಚ್ವಿಲ್, ರಘು ಉಚ್ಚಿಲ್, ಗೌರವಧ್ಯಕ್ಷ ರಾಕೇಶ್ ಕುಮಾರ್, ಉಪಾಧ್ಯಕ್ಷರಾದ ಮೋಹನ್ ಸಾಲ್ಯಾನ್, ನವೀನ್ ಎ.ಕೆ.,ಕೋಶಾಧಿಕಾರಿ ಹರೀಶ್ ಅಂಬ್ಲಮೊಗರು, ಪ್ರ.ಸಂ. ಕಾರ್ಯದರ್ಶಿ ಕಿರಣ್ ಕೊಲ್ಯ, ಪದಾಧಿಕಾರಿಗಳಾದ ಚೇತನ್ ಕುಮಾರ್, ರಾಜೇಂದ್ರ, ನಾರಾಯಣ ಬಿ., ಕೃಷ್ಣ ಪೊನ್ನೊತ್ತೊಡು, ಪ್ರವೀಣ್ ಬಸ್ತಿ,,ಗಂಗಾಧರ, ದೀಕ್ಷಿತ್, ಪ್ರಕಾಶ್ ಕೊಲ್ಯ ಉಪಸ್ಥಿತರಿದ್ದರು.
UN NETWORKS ಕುಂಪಲ : ಕುಂಪಲ ಬಾಲಕೃಷ್ಣ ಮಂದಿರದ 22ನೇ ವರ್ಷದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಠಮಿಯ ಉತ್ಸವದ ಅಂಗವಾಗಿ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಮಂದಿರದಲ್ಲಿ ನಡೆಯಿತು. ಪುಟಾಣಿಗಳಾದ ಚಾಹಲ್, ಯಾಶಿಕ್ ನಾಯಕ್ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಭಜನಾ ತಂಡದ ಸಂಚಾಲಕ ಕೃಷ್ಣ ಪೊನ್ನತ್ತೋಡು ಮಾತನಾಡಿ ಕುಂಪಲ ಬಾಲಕೃಷ್ಣ ಮಂದಿರ ಭಜನಾ ಕ್ಷೇತ್ರ ಮತ್ತು ಸಾಂಸ್ಕೃತಿಕ, ಸಾಮಾಜಿಕ ರಂಗದಲ್ಲೂ ವಿಶೇಷ ಸೇವೆ ಮಾಡುತ್ತಿದ್ದು ಈ ಬಾರಿ 22ನೇ ವರ್ಷದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಠಮಿಯು ಆ. 23 ತಾರೀಕಿಗೆ ನಡೆಯಲಿದೆ ಎಂದು ಹೇಳಿದರು. ಮಂದಿರದ ಅಧ್ಯಕ್ಷ ಸತೀಶ್ ಕುಂಪಲ, ಗೌರವ ಅಧ್ಯಕ್ಷ ಕೇಶವದಾಸ್ ಬಗಂಬಿಲ, ಪ್ರಧಾನ ಕಾರ್ಯದರ್ಶಿ ರವೀಂದ್ರ ಕುಂಪಲ, ಉತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ಕುಂಪಲ, ಪ್ರಧಾನ ಸಂಚಾಲಕ ಗಣೇಶ್ ಶಿಲ್ಪಿ, ಮಂದಿರದ ಪ್ರಮುಖರಾದ ಚಂದ್ರ ಶೇಖರ್ ಬಿ.ಜೆ, ಮಾದವ ಬಂಗೇರ, ವೆಂಕಟೇಶ್ ಕುಂಪಲ, ಚಂದ್ರಹಾಸ ಮೂರುಕಟ್ಟೆ, ಅಶೋಕ್ ಕುಂಪಲ, ಚೇತನ್ ಪೂಜಾರಿ, ಸೋಮಶೇಖರ್, ವಿಕಾಸ್ ರಾವ್, ರಾಜೇಶ್…
UN NETWORKS ದೇರಳಕಟ್ಟೆ : ವೈದ್ಯಕೀಯ ಕ್ಷೇತ್ರ ಸೇವಾ ಕ್ಷೇತ್ರ. ಇಲ್ಲಿ ರೋಗಿಯ ಆರೈಕೆ ಅತ್ಯಂತ ಮಹತ್ವದ ಕಾರ್ಯ ಯುವ ವೈದ್ಯರು ತಮ್ಮ ವೈದ್ಯ ವೃತ್ತಿಯನ್ನು ಮಾದರಿಯಾಗಿ ತೆಗೆದುಕೊಂಡು ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್.ವಿನಯ ಹೆಗ್ಡೆ ಅಭಿಪ್ರಾಯಪಟ್ಟರು. ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ ಹಾಗೂ ಜಸ್ಟೀಸ್ ಕೆ. ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ, ದೇರಳಕಟ್ಟೆ ಇವರ ವತಿಯಿಂದ ಕೆ. ಎಸ್ . ಹೆಗ್ಡೆ ಆಸ್ಪತ್ರೆಯ `ಚಿಂತನ’ ಸಭಾಂಗಣದಲ್ಲಿ ಸೋಮವಾರ ನಡೆದ ವೈದ್ಯರ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸಾಧಕ ವೈದ್ಯರಿಗೆ ಸನ್ಮಾನ ನೆರವೇರಿಸಿ ಮಾತನಾಡಿದರು. ಪ್ರತಿಯೊಬ್ಬ ವೈದ್ಯರಿಗೆ ತಮ್ಮದೇ ಆದ ಬದ್ಧತೆ ಇದೆ. ಎಲ್ಲಾ ಸಮಯದಲ್ಲೂ ಹಣವೇ ಮುಖ್ಯವಾಗಿರುವುದಿಲ್ಲ. ಹಣದೊಂದಿಗೆ ಸೇವಾ ಮನೋಭಾವನೆ ಇದ್ದರೆ ವೃತ್ತಿ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಿದೆ. ಅಂತಹ ಸೇವೆ ಮಾಡಿರುವ ಮೂವರು ವೈದ್ಯರನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ನಡೆಸಿದ್ದು ಇಂತವರನ್ನು ಅನುಸರಿಸುವ ಕಾರ್ಯ ಯುವ ವೈದ್ಯರಿಂದ ಆಗಬೇಕು…
UN NETWORKS ತಲಪಾಡಿ : ತಲಪಾಡಿ ಅಲೋಪಥಿ, ಆಯುರ್ವೇದ ಸೇರಿದಂತೆ ಎಲ್ಲಾ ವೈದ್ಯ ಪದ್ಧತಿಯ ಮೂಲ ಉದ್ದೇಶ ರೋಗಿಗಳ ನೋವು ನಿವಾರಣೆ ಮಾಡುವುದು. ಅದರಲ್ಲೂ ಆಯುರ್ವೇದ ಚಿಕಿತ್ಸಾ ಪದ್ಧತಿಗೆ ಅದರದೇ ಆದ ಮಹತ್ವವಿದ್ದು, ಕಳೆದ ಒಂದು ವರ್ಷದಲ್ಲಿ ತಲಪಾಡಿಯ ಪ್ರಕೃತಿ ಮಡಿಲಲ್ಲಿ ಅತ್ಯಂತ ಕ್ಷಿಪ್ರ ಬೆಳವಣಿಗೆಯಾಗಿರುವ ಶಾರದಾ ಆಯುರ್ವೇದ ಆಸ್ಪತ್ರೆ ಅತ್ಯಂತ ಉತ್ತಮ ಆಯುರ್ವೇದ ಆಸ್ಪತ್ರೆಗಳ ಸಾಲಿನಲ್ಲಿ ಮೊದಲನೇ ಸಾಲಿನಲ್ಲಿ ನಿಂತಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅಭಿಪ್ರಾಯಪಟ್ಟರು. ಅವರು ತಲಪಾಡಿ ದೇವಿನಗರದ ಶಾರದಾ ಆಯುರ್ವೇದ ಮತ್ತು ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸೋಮವಾರ ಶಾರದಾ ಆಯುರ್ವೇದ ಆಸ್ಪತ್ರೆಯ ವರ್ಷಾಚರಣೆ ಮತ್ತು ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮವನ್ಬು ಉದ್ಘಾಟಿಸಿ ಮಾತನಾಡಿದರು.ಅಲೋಪಥಿಯಲ್ಲಿ ವೈದ್ಯರಿಗೆ ರೋಗಿಗಳು ಕ್ಲಿನಿಕಲ್ ಮೆಟೀರಿಯಲ್ ಆದರೆ ಆಯುರ್ವೇದ ಸೇರಿದಂತೆ ಎಲ್ಲಾ ಚಿಕಿತ್ಸಾ ಪದ್ಧತಿಯ ಉದ್ಧೇಶ ರೋಗಿಗಳ ನೋವು ಶಮನ ಮಾಡುವುದು. ಆಯುರ್ವೇದ ಚಿಕಿತ್ಸಾ ಪದ್ಧತಿಗೆ ಅದರದೇ ಆದ ಮಹತ್ವವಿದ್ದು ಈ ನಿಟ್ಟಿನಲ್ಲಿ ತಲಪಾಡಿ ದೇವಿನಗರದಲ್ಲಿ…

