UN NETWORKS
ತೊಕ್ಕೊಟ್ಟು: ಪುಲ್ವಾಮದಲ್ಲಿ ಉಗ್ರರು ಸಿಆರ್‍ಪಿಎಫ್ ಯೋಧರ ಮೇಲೆ ದಾಳಿ ನಡೆಸಿ 44 ಸೈನಿಕರನ್ನು ಕೊಂದ ಪೈಶಾಚಿಕ ಕೃತ್ಯಕ್ಕೆ ಭಾರತೀಯ ಸೇನೆ ಸರಿಯಾಗಿಯೇ ಪ್ರತಿಕಾರ ತೀರಿಸಿದೆ. ಈ ಸಂಭ್ರಮವನ್ನು ತೊಕ್ಕೊಟಿನಲ್ಲಿ ಬಿ.ಜೆ.ಪಿ.ಮಂಗಳೂರು ಕ್ಷೇತ್ರದ ವತಿಯಿಂದ ಬಸ್ಸು ನಿಲ್ದಾಣದ ಬಳಿ ಆಚರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಸಮರ್ಥ ನಾಯಕತ್ವ ಹಾಗೂ ಸೇನೆಯ ಸಾಮರ್ಥ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಲಾಯಿತು.
ಕ್ಷೇತ್ರ ಬಿ.ಜೆ.ಪಿ. ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರ್, ಜಿಲ್ಲಾ ಬಿ.ಜೆ.ಪಿ. ಉಪಾಧ್ಯಕ್ಷರಾದ ಚಂದ್ರಹಾಸ ಉಳ್ಳಾಲ, ಕ್ಷೇತ್ರ ಚುನಾವಣಾ ಸಂಚಾಲಕರಾದ ಚಂದ್ರಶೇಖರ ಉಚ್ಚಿಲ್, ಹಿರಿಯರಾದ ಸೀತರಾಮ ಬಂಗೇರ, ಲಲಿತಾ ಸುಂದರ್, ಸಂಜೀವ ಶೆಟ್ಟಿ ಅಂಬ್ಲಮೊಗರು, ಜಿ.ಪಂ.ಸದಸ್ಯೆ ಧನಲಕ್ಷೀ ಗಟ್ಟಿ, ಕ್ಷೇತ್ರ ಪ್ರ.ಕಾರ್ಯದರ್ಶಿ ಮೋಹನ್ ರಾಜ್ ಕೆ.ಆರ್. ಉಪಾಧ್ಯಕ್ಷ ರಾದ ಯಶವಂತ ಅಮೀನ್, ಪ್ರಕಾಶ್ ಸಿಂಫೋನಿ, ಹರಿಯಪ್ಪ ಸಾಲಿಯಾನ್, ಕಾರ್ಯದರ್ಶಿ ರಾಮಕೃಷ್ಣ ಪಟ್ಟೋರಿ, ಮಾಧ್ಯಮ ಸಂಚಲಾಕರಾದ ಜೀವನ್ ಕುಮಾರ್ ತೊಕ್ಕೊಟು, ಜಿಲ್ಲಾ ಸಾಂಸ್ಕೃತಿಕ ಪ್ರಕೋಷ್ಠದ ಸಹ ಸಂಚಲಕರಾದ ಗಣೇಶ್ ಕಾಪಿಕಾಡ್, ಪ್ರಮುಖರಾದ ಸುರೇಂದ್ರ ಶೆಟ್ಟಿ, ಪ್ರಶಾಂತ್ ಕಾಪಿಕಾಡ್, ಅಜಂತ್ ಪಿಲಾರ್, ಬಾಲಕೃಷ್ಣ ಶೆಟ್ಟಿ ಉಳ್ಳಾಲಗುತ್ತು, ರಂಜಿತ್ ಗಟ್ಟಿ, ರಾಜೇಶ್ ಪ್ರಕಾಶ್ ನಗರ, ಮುನೀರ್ ಮಾಸ್ಟರ್, ಮೊಹಮ್ಮದ್ ಅಸ್ಗರ್, ಉಳ್ಳಾಲ ನಗರಸಭೆಯ ಸದಸ್ಯೆ ನಮಿತಾ ಗಟ್ಟಿ ಇನ್ನಿತರರು ಉಪಸ್ಥಿತರಿದ್ದರು.


