UN NETWORKS
ಕೊಣಾಜೆ: ಕುಡಿಯುವ ನೀರಿನ ಸಮಸ್ಯೆಗೆ ಸೂಕ್ತ ಪರಿಹಾರ ಕಲ್ಪಿಸಲು ಆಗ್ರಹಿಸಿ ಪೋಡಾರ್ ಗ್ರಾಮಸ್ಥರು ಪಾವೂರು ಗ್ರಾಪಂ ಕಚೇರಿ ಎದುರು ಧರಣಿ ಕುಳಿತಿದ್ದಾರೆ.
ಇಂದು ಬೆಳಗ್ಗೆ 7:30ರಿಂದ ಗ್ರಾಪಂ ಕಚೇರಿ ಎದುರು ಜಮಾಯಿಸಿರುವ ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆ ಕುರಿತು ಗ್ರಾಪಂ ನಿರ್ಲಕ್ಷ ವಹಿಸುತ್ತಿದೆ ಎಂದು ಆರೋಪಿಸಿದ್ದಾರೆ.ಗ್ರಾಪಂ ಅಧ್ಯಕ್ಷರು ಆಗಮಿಸುವವರೆಗೆ ಪಂಚಾಯತ್ ಕಚೇರಿ ಬಾಗಿಲು ತೆರೆಯಲು ಅವಕಾಶ ನೀಡೆವು ಎಂದು ಧರಣಿನಿರತರು ಪಟ್ಟು ಹಿಡಿದು ಕುಳಿತಿದ್ದಾರೆ.


