UN NETWORKS ಮಂಗಳೂರು :ಆಯುಷ್ ಫೆಡರೇಶನ್ ಆಫ್ ಇಂಡಿಯಾ, ಮಂಗಳೂರು ವತಿಯಿಂದ ನಗರದ ಅಭಿಮಾನ್ ರೆಸಿಡೆನ್ಸಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಆಯುಷ್ ವೈದ್ಯರಿಗೆ ನಿರಂತರ ಶಿಕ್ಷಣ ಕಾರ್ಯಾಗಾರ ಹಾಗೂ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಪ್ರಯುಕ್ತ ರಸಪ್ರಶ್ನೆಯೊಂದಿಗೆ ವಿವಿಧ ಕಾರ್ಯಕ್ರಮ ನಡೆಯಿತು. ನಿರಂತರ ವೈದ್ಯಕೀಯ ಕಾರ್ಯಕ್ರಮದಡಿಯಲ್ಲಿ ಪ್ರಸಿದ್ಧ ಯೋಗ ತಜ್ನ ಡಾ.ಕೆ.ಗಣೇಶ ಭಟ್ ರವರು ” ಯೋಗ ಥೆರಪಿ ಇನ್ ಫ಼್ರೋಜನ್ ಶೋಲ್ಡರ್” ವಿಷಯದ ಬಗ್ಗೆ ಮಾಹಿತಿಯನ್ನು ನೀಡಿದರು.ಅಂತಾರಾಷ್ಟ್ರೀಯ ವೈದ್ಯರ ದಿನಾಚಾರಣೆಯ ಅಂಗವಾಗಿ ಆಯುಷ್ ವೈದ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. ಕು.ಅಶ್ವೀಜಾ ಉಡುಪ ಇವರಿಂದ ಅದ್ಭುತ ಯೋಗ ಪ್ರದರ್ಶನ ನಡೆದು ನಂತರ ಡಾ.ಪ್ರತಿಭಾ ರೈ, ಡಾ.ಸುಧೀರ್ ಪ್ರಭು, ಡಾ.ವಿಜಯಲಕ್ಷ್ಮಿ ಪ್ರಸನ್ನಿ ಇವರು ತಮ್ಮ ಸುಶ್ರಾವ್ಯ ಕಂಠದಿಂದ ಸಭಿಕರ ಮನಸೂರೆಗೊಂಡರು. ಡಾ.ಸುದೀಪ್ ದಂಪತಿಗಳ ನೃತ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.ಡಾ.ಶಶಿಧರ ಕಜೆಯವರು ಕಾರ್ಯಕ್ರಮ ನಿರ್ವಹಿಸಿ, ಮಂಗಳೂರು ಏ.ಎಫ್.ಐ.ಅಧ್ಯಕ್ಷ ಡಾ.ಕೃಷ್ಣ ಎಮ್ ಗೋಖಲೆಯವರು ಸ್ವಾಗಸಿದರೆ ಕಾರ್ಯದರ್ಶಿ ಡಾ.ಸುಧೀಂದ್ರ ರಾವ್ ರವರು ವಂದನಾರ್ಪಣೆ ಮಾಡಿದರು.ಜಿಲ್ಲಾ ಅಧ್ಯಕ್ಷ…
Author: UllalaVani
UN NETWORKS ಸುರತ್ಕಲ್: ಕಥೊಲಿಕ್ ಸಭಾ ಮಂಗಳೂರು ಪ್ರದೇಶ, ಸುರತ್ಕಲ್ ವಲಯ ಮತ್ತು ಘಟಕಗಳ ವತಿಯಿಂದ ಪರಿಸರ ಜಾಗೃತಿ ಅಭಿಯಾನ-2019 ಪ್ರಯುಕ್ತ ಅರಣ್ಯ ಇಲಾಖೆಯ ಸಹಭಾಗಿತ್ವದೊಂದಿಗೆ ಪರಿಸರ ದಿನಾಚರಣೆ ಮುಕ್ಕ ಚಚ್೯ ವಠಾರದಲ್ಲಿ ನಡೆಯಿತು. ಮಂಗಳೂರು ಧರ್ಮಪ್ರಾಂತ್ಯ ಶ್ರೇಷ್ಠ ಗುರು ಮ್ಯಾಕ್ಸಿಂ ಎಲ್. ನೊರೊನ್ಹಾ ಅಶೀರ್ವಚನಗೈದರು.ಮುಖ್ಯ ಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿ’ಸೋಜಾ ಗೀಡ ನೆಡುವ ಮೂಲಕ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಮಂಗಳೂರು ಉತ್ತರ ಕ್ಷೇತ್ರ ಶಾಸಕ ಡಾ.ವೈ ಭರತ್ ಶೆಟ್ಟಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದರು.ಕಿನ್ನಿಗೋಳಿ ವಲಯ ಅರಣ್ಯಾಧಿಕಾರಿ ಕೆ.ಸಿ ಮ್ಯಾಥ್ಯು ಪರಿಸರ ಸಂರಕ್ಷಣೆ ಮತ್ತು ಮಳೆ ನೀರು ಇಂಗಿಸುವಿಕೆ ಬಗ್ಗೆ ಮಾಹಿತಿ ನೀಡಿದರು.ಕಥೋಲಿಕ್ ಸಭಾದ ಅಧ್ಯಾತ್ಮಿಕ ನಿರ್ದೇಶಕ ಮ್ಯಾಥ್ಯು ವಾಸ್, ಸುರತ್ಕಲ್ ವಲಯದ ಪಾವ್ಲ್ ಪಿಂಟೊ, ಅಧ್ಯಾತ್ಮಿಕ ನಿರ್ದೇಶಕ ಸಿರಿಲ್ ಪಿಂಟೊ, ಮಂಗಳೂರು ವಲಯ ಅರಣ್ಯಾಧಿಕಾರಿ ಪಿ.ಶ್ರೀಧರ್, ಮುಕ್ಕ ಚಚ್೯ ಸಮಿತಿಯ ಉಪಾಧ್ಯಕ್ಷ ರೋಶನ್ ಡಿಸೋಜ, ಕಾರ್ಯದರ್ಶಿ ಶೈಲಾ ಡಿಸೋಜ, ಕೇಂದ್ರೀಯ ಸಮಿತಿ ಅಧ್ಯಕ್ಷ ಪಾವ್ಲ್ ರೊಲ್ಫಿ ಡಿಕೊಸ್ತಾ,…
UN NETWORKS ಎರ್ಮಾಳ್ : ಕೂಲಿ ಕಾರ್ಮಿಕರ ಬವಣೆ, ನೀರಿನ ಅಭಾವ, ಐಟಿ ಕ್ಷೇತ್ರದತ್ತ ಒಲವು, ರಿಯಲ್ ಎಸ್ಟೇಟ್, ಕಾರ್ಖಾನೆಗಳು ಹೀಗೆ ನಾನಾ ಕಾರಣಗಳಿಂದ ಕೃಷಿ ಪ್ರಧಾನ ಕರಾವಳಿ ಭಾಗಗಳ ಕೃಷಿ ಭೂಮಿ ಬಂಜರು ಭೂಮಿಯಾಗಿ ಹಾಗೂ ಒತ್ತುವರಿಯಾಗಿ ನಾಶವಾಗುತ್ತಿವೆ. ಇವೆಲ್ಲವನ್ನು ಸವಾಲುಗಳನ್ನಾಗಿ ಸ್ವೀಕರಿಸಿದ ಮುಂಬೈಯಲ್ಲಿ ಉದ್ಯಮಿಯಾಗಿರುವ ಎರ್ಮಾಳು ನಿವಾಸಿ ಎರ್ಮಾಳ್ ಹರೀಶ್ ಶೆಟ್ಟಿ ಹುಟ್ಟೂರ ಹಳ್ಳಿಯತ್ತ ಮುಖಮಾಡಿ ಸಾಗುವಳಿಗಾಗಿ ಸ್ವತಃ ಉಳುಮೆಗಿಳಿದಿದ್ದಾರೆ. ಮುಂಗಾರು ಆಗಮಿಸುತ್ತಿದ್ದಂತೆಯೇ ಕಳೆದ ಸೋಮವಾರ ಮುಂಬಯಿನಿಂದ ನೇರವಾಗಿ ಉಡುಪಿ ಜಿಲ್ಲೆಯ ತವರೂರು ಎರ್ಮಾಳ್ ನಿವಾಸಕ್ಕೆ ತೆರಳಿ ಅಲ್ಲಿನ ತನ್ನ ಹಿರಿಯರ ಸುಮಾರು 5 ಎಕರೆಗೂ ಮಿಕ್ಕಿದ ಕೃಷಿ ಜಮೀನಿನಲ್ಲಿ ಭತ್ತದ ಕೃಷಿ ಬೆಳೆಯಲು ತೊಡಗಿಸಿ ಕೊಂಡಿದ್ದಾರೆ. ಜೊತೆಗೆ ಆಸುಪಾಸಿನ ಕೃಷಿಭೂಮಿಯಲ್ಲೂ ಕೈಯಾಡಿಸಿ ಆಳುಗಳು, ಊರಮಂದಿಯನ್ನು ಒಗ್ಗೂಡಿಸಿ ಈ ಬಾರಿ ಸುಮರು15 ಎಕರೆ ಭೂಮಿಯಲ್ಲಿ ಅಂದಾಜು 56 ಗದ್ದೆಗಳನ್ನು ನಿರ್ಮಿಸಿ ಸ್ವಂತ ತಾವೂ ನೆಟ್ಟಿಯ ಭಟ್ಟಿಗಳನ್ನು ಹೊತ್ತು, ಟ್ರಾಕ್ಟರ್ ಮೂಲಕ ಉಳುಮೆಯಲ್ಲಿ ನಿರತರಾಗಿದ್ದಾರೆ. ಆದುದರಿಂದ ಅನೇಕ ದಶಕಗಳಿಂದ ಹಡೀಲು…
UN NETWORKS ಉಳ್ಳಾಲ : ಪವಿತ್ರ ಹಜ್ಜ್ ಯಾತ್ರೆಗೆ ತೆರಳುತ್ತಿರುವ ಕೋಡಿ ಜುಮಾ ಮಸೀದಿಯ ಖತೀಬ್ ಅಬ್ದುಲ್ ಮಜೀದ್ ಮದನಿ ಹಾಗೂ ಸದರ್ ಉಸ್ತಾದ್ ಮುಹಿಯುದ್ದೀನ್ ಮುಸ್ಲಿಯಾರ್ ಇವರಿಗೆ ಬೀಳ್ಕೊಡುಗೆ ಸಮಾರಂಭ ಕೋಡಿ ಮಸೀದಿಯ ವಠಾರದಲ್ಲಿ ಶುಕ್ರವಾರ ನಡೆಯಿತು. ಇದೇ ಸಂದರ್ಭದಲ್ಲಿ ಮಸೀದಿಯ ಖಾದಿಮಿ ಉಮ್ಮರ್ ಮುಸ್ಲಿಯಾರ್ ಅವರನ್ನು ಸನ್ಮಾನಿಸಲಾಯಿತು.ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಯು.ಕೆ.ಮೋನು ಇಸ್ಮಾಯಿಲ್, ಅರಬಿಕ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಅಮೀರ್, ದರ್ಗಾ ಲೆಕ್ಕ ಪರಿಶೋಧಕ ಯು.ಟಿ.ಇಲ್ಯಾಸ್ ತೋಟ, ಚಾರಿಟೇಬಲ್ ಟ್ರಸ್ಟ್ ಜೊತೆಕಾರ್ಯದರ್ಶಿ ಎ.ಕೆ.ಮೊಯಿದಿನ್, ಉಳ್ಳಾಲ ಲೋಕೋಪಯೋಗಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಯು.ಕೆ.ಯೂಸುಫ್, ಪೇಟೆ ಜುಮಾ ಮಸೀದಿಯ ಅಧ್ಯಕ್ಷ ಮೊಯಿದಿನಬ್ಬ, ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಹಮೀದ್ ಎ.ಆರ್, ಮಾಜಿ ಅಧ್ಯಕ್ಷ ಅಶ್ರಫ್, ಉಪಾಧ್ಯಕ್ಷ ಯು.ಸಿ.ಖಾಸಿಂ, ಕೋಶಾಧಿಕಾರಿ ಮೂಸ ಕುಂಞ, ಕಾರ್ಯದರ್ಶಿ ಇಸ್ಮಾಯಿಲ್, ಜೊತೆ ಕಾರ್ಯದರ್ಶಿ ಮೊಹಮ್ಮದ್, ಉಳ್ಳಾಲ ನಗರಸಭೆ ಸದಸ್ಯರಾದ ಅಝೀಝ್, ರಮೀಝ್, ಮೊಹಮ್ಮದ್ ಮುಕ್ಕಚ್ಚೇರಿ, ಬಶೀರ್, ಮಾಜಿ…
UN NETWORKS ಮುಡಿಪು : ಚಹಾ, ಊಟ ಮಾಡುವುದು ವಿಭಿನ್ನ ಸ್ನೇಹ, ಇದು ಯಾರು ಯಾರಿಗೂ ಕೊಡಬಹುದು. ಆದರೆ ರಕ್ತದಾನ ಶಿಬಿರ ಎಂದರೆ ಜೀವ ಉಳಿಸುವ, ಆರೋಗ್ಯ ಕಾಪಾಡುವ ವಿಶೇಷ ಕಾರ್ಯಕ್ರಮ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಡಾ.ಎ.ಎಂ.ಖಾನ್ ಅಭಿಪ್ರಾಯಪಟ್ಟರು. ಕಾರವಾರದ ಕಲ್ಲೂರು ಎಜ್ಯುಕೇಶನ್ ಟ್ರಸ್ಟ್, ಮುಡಿಪು ಪ್ರಥಮ ದರ್ಜೆ ಕಾಲೇಜು, ರೋವರ್ಸ್-ರೇಂಜರ್ಸ್ ಹಾಗೂ ದೇರಳಕಟ್ಟೆ ಯೇನೆಪೊಯ ವೈದ್ಯಕೀಯ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಶನಿವಾರ ಮುಡಿಪು ಗೋಪಾಲಕೃಷ್ಣ ಸಭಾಂಗಣದಲ್ಲಿ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.ಇಂದು ನಾವೆಲ್ಲಾ ಸ್ವಾರ್ಥಿಗಳಾಗಿದ್ದೇವೆ, ಹಿರಿಯರು ನಮಗೆ ನೀಡುತ್ತಿದ್ದಂತಹ ಮಾರ್ಗದರ್ಶನ ನೀಡುವಂತಹ ಕಾರ್ಯ ಮತ್ತೊಮ್ಮೆ ಸ್ಕೌಟ್-ಗೈಡ್ಸ್, ರೋವರ್ಸ್-ರೇಂಜರ್ಸ್ ವಿದ್ಯಾರ್ಥಿಗಳಿಂದ ನಡೆಯಲಿ. ಶಿಬಿರದಲ್ಲಿ ಭಾಗವಹಿಸಿ ಒಮ್ಮೆಗೆ ರಕ್ತ ಕೊಟ್ಟರೆ ಸಾಲದು, ಮುಂದೆಯೂ ಪರಸ್ಪರ ಪ್ರೀತಿ, ವಿಶ್ವಾಸದ ಜೀವನ ನಡೆಸಲು ಮುಂದಾಗಬೇಕು ಎಂದು ಆಶಿಸಿದರು. ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಾ.ಮುರಲೀ ಮೋಹನ್ ಚೂಂತಾರು ಮಾತನಾಡಿ, ಸಾಮಾನ್ಯ ಮನುಷ್ಯ ಮಾಡುವ ಪ್ರಾಮಾಣಿಕ ದಾನ, ರೋಗಿಯ ಜೀವ ಉಳಿಸಲು ವೈದ್ಯನಿಂದ ಮಾತ್ರ…
UN NETWORKS ಉಳ್ಳಾಲ : ಮಾದಕ ದ್ರವ್ಯ ವ್ಯಸನದಿಂದ ಆರೋಗ್ಯದ ಜೊತೆ ವ್ಯಕ್ತಿತ್ವ, ಮನೆಮಂದಿಯ ಗೌರವವೇ ಹಾಳಾಗುತ್ತದೆ. ಇದರಿಂದಾಗಿ ಸಮಾಜದಲ್ಲಿ ತೊಂದರೆಯನ್ನು ಅನುಭವಿಸಬೇಕಾಗುತ್ತದೆ ಎಂದು ಉಳ್ಳಾಲ ಪೊಲೀಸ್ ಠಾಣಾ ಉಪನಿರೀಕ್ಷಕ ಗುರುಕಾಂತಿ ಅಭಿಪ್ರಾಯಪಟ್ಟರು. ಉಳ್ಳಾಲ ಸದ್ಭಾವನಾ ವೇದಿಕೆ ಮತ್ತು ಪೊಸಕುರಲ್ ಬಳಗದ ವತಿಯಿಂದ ಸೋಮೇಶ್ವರ ಆನಂದಾಶ್ರಮ ಪ್ರೌಢ ಶಾಲೆಯಲ್ಲಿ ನಡೆದ ಮಾದಕ ದ್ರವ್ಯ ವ್ಯಸನ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಮಾದಕ ವ್ಯಸನದಿಂದಾಗುವ ಅನಾಹುತಗಳನ್ನು ತಿಳಿದು ಜಾಗರೂಕರಾಗಿರುವುದು ಅಗತ್ಯ. ಇಂತಹ ಚಟುವಟಿಕೆಗಳು ಕಂಡು ಬಂದಾಗ ಶಿಕ್ಷಕರು, ಮನೆಯವರ ಗಮನಕ್ಕೆ ತರಬೇಕು. ಈ ಬಗ್ಗೆ ಪೊಲೀಸರಿಗೆ ತಿಳಿಸಿದರೆ ಸೂಕ್ತ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ ಎಂದು ಹೇಳಿದರು. ಸದ್ಭಾವನಾ ವೇದಿಕೆಯ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್ ಅಧ್ಯಕ್ಷತೆ ವಹಿಸಿ, ಮಾದಕ ದ್ರವ್ಯದ ಕುರಿತು ವಿದ್ಯಾರ್ಥಿಗಳು ಸದಾ ಜಾಗೃತಿ ವಹಿಸಬೇಕು. ಅದರಂತೆ ಪ್ರಸ್ತುತ ದಿನಗಳಲ್ಲಿ ಅಗತ್ಯವಾದ ನೀರಿನ ಬಳಕೆ, ನೀರಿಂಗಿಸುವಿಕೆ ಬಗ್ಗೆಯೂ ತಿಳಿದುಕೊಳ್ಳಬೇಕಾಗಿದೆ ಎಂದು ತಿಳಿಸಿದರು. ಆನಂದಾಶ್ರಮ ಶಾಲಾ ಮುಖ್ಯೋಪಧ್ಯಾಯ ಗುರುಮೂರ್ತಿ ಉಪಸ್ಥಿತರಿದ್ದರು.…
UN NETWORKS ಬೋಳಿಯಾರ್ : ಬೋಳಿಯಾರ್ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ನಡೆದ ರೈತರೊಡನೆ ಸಂವಾದ ಮತ್ತು ತಾಂತ್ರಿಕ ಮಾಹಿತಿ ಕಾರ್ಯಕ್ರಮ ನಡೆದಿದ್ದು ಈ ಸಂದರ್ಭ ಇಲಾಖಾಧಿಕಾರಿಗಳ ವಿರುದ್ಧ ಗ್ರಾಮದ ಕೃಷಿಕರು ಆಕ್ರೋಶ ವ್ಯಕ್ತಪಡಿಸಿದರು. ಸಭೆಯ ಆರಂಭದಲ್ಲೇ ಮಾತನಾಡಿದ ದ.ಕ. ಮತ್ತು ಉಡುಪಿ ಸಾವಯವ ಕೃಷಿಕರ ಸಂಘದ ನಿರ್ದೇಶಕ ಪ್ರಶಾಂತ್ ಗಟ್ಟಿ, ಈ ಕಾರ್ಯಕ್ರಮ ಅಯೋಜಿಸಿದವರಾರು? ರ್ಯಕ್ರಮ ಆಯೋಜಿಸಿದಾಗ ಬೋಳಿಯಾರ್ ಗೆ ಎಷ್ಟು ಆಮಂತ್ರಣ ಕೊಟ್ಟಿದ್ದೀರಿ? ನಿಮ್ಮ ಬಗ್ಗೆಯೂ ನಮಗೆ ಪರಿಚಯ ಇಲ್ಲ. ನಮ್ಮ ಗ್ರಾಮದ ಕೃಷಿ ಬಗ್ಗೆ ನಿಮ್ಮಲ್ಲಿ ಮಾಹಿತಿ ಇದೆಯೇ? ಜಿಲ್ಲಾ ಉಸ್ತುವಾರಿ ಸಚಿವರ ಸಹಿತ ಹಲವರಿಗೆ ಆಮಂತ್ರಣ ಕೊಟ್ಟಿದ್ದೀರಿ, ಆದರೆ ಪಂಚಾಯಿತಿಗೆ 16 ಆಮಂತ್ರಣ ಪತ್ರಗಳು ಮಾತ್ರ ಬಂದಿದೆ. ನೀವು ಹೆಸರಿಗೆ ಮಾತ್ರ ಕಾರ್ಯಕ್ರಮ ನಡೆಸುವುದೇ? ಕಾರ್ಯಕ್ರಮ ನಡೆಸುವಾಗ ಗ್ರಾಮ ಪಂಚಾಯಿತಿಯಲ್ಲಿ ಚರ್ಚಿಸಿದ್ದೀರಾ? ಸಿಬ್ಬಂದಿ ಕೊರತೆಯಿದ್ದರೆ ನಮ್ಮಲ್ಲಿ ಹೇಳಿ, ನಾವು ವ್ಯವಸ್ಥೆ ಮಾಡುತ್ತೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಭೆಯ ಬಗ್ಗೆ ಅಧ್ಯಕ್ಷರಲ್ಲಿ ತಿಳಿಸಲಾಗಿತ್ತು ಎಂದು ಆತ್ಮ ಯೋಜನೆಯ…
UN NETWORKS ಕೊಣಾಜೆ : ಮಂಗಳೂರು ವಿಶ್ವವಿದ್ಯಾಲಯದಲ್ಲಿ ಈ ಶೈಕ್ಷಣಿಕ ಸಾಲಿನಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿತರಿಸುವ ಪದ್ಧತಿಗೆ ಪೂರ್ಣ ವಿರಾಮ ಹಾಕುವ ಚಿಂತನೆ ಇದ್ದು ಪ್ರಶಸ್ತಿ ಕೊಡಲೇ ಬೇಕು ಎಂದು ಶಿಕ್ಷಕರು ಒತ್ತಾಯಿಸಿದರೆ ಕೊಡುವ ಕ್ರಮಕ್ಕೆ ನನ್ನದೇನು ಅಭ್ಯಂತರ ಇಲ್ಲ ಎಂದು ಮಂಗಳೂರು ವಿಶ್ವವಿದ್ಯಲಯದ ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ ಹೇಳಿದರು. ಮಂಗಳೂರು ವಿಶ್ವವಿದ್ಯಾಲಯ ಶಿಕ್ಷಕರ ಎಸೋಸಿಯೇಶನ್ (ಮುಟಾ) ಹಾಗೂ ವಿಶ್ವವಿದ್ಯಾಲಯದ ಎಸ್‍ಸಿ- ಎಸ್‍ಟಿ ಉದ್ಯೋಗಿಗಳ ಸಂಘದ ಸಹಯೋಗದಲ್ಲಿವಿವಿಯ ಉಪನ್ಯಾಸ ಸಭಾಂಗಣದಲ್ಲಿ ಗುರುವಾರ ನಡೆದ ನೂತನ ಕುಲಪತಿ ಪ್ರೊ. ಪಿ.ಎಸ್.ಯಡಪಡಿತ್ತಾಯ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಎಲ್ಲ ಶಿಕ್ಷಕರು ಅತ್ಯುತ್ತಮ ಶಿಕ್ಷಕರೇ ಆಗಿರುವುದರಿಂದ ಉತ್ತಮ ಶಿಕ್ಷಕರ ಅಯ್ಕೆ ಕಠಿಣ ಸವಾಲಾಗಿದೆ. ಇದುವರೆಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದವರು ಶ್ರೇಷ್ಠ ಶಿಕ್ಷಕರು ಎಂಬದುರಲ್ಲಿ ಎರಡು ಮಾತಿಲ್ಲ. ಅದರ ಜೊತೆಗೆ ನಿವೃತ್ತಿ ಹೊಂದಿದ ಶಿಕ್ಷಕರು ಅತ್ಯುತ್ತಮ ಶಿಕ್ಷಕರು ಎಂಬುದನ್ನು ನೆನೆಪಿಸಬೇಕಾದುದು ಅತಿ ಮುಖ್ಯ. ಆ ಪ್ರಶಸ್ತಿಗೆ ನ್ಯಾಯ ಕೊಡಿಸುವುದು ಕಷ್ಟ.…
UN NETWORKS ಉಳ್ಳಾಲ : ಅವರು 71ರ ಹರೆಯದ ಹಿರಿಯ ವ್ಯಕ್ತಿ. ಭಾರತೀಯ ಸೇನೆಯಲ್ಲಿ ಮೂರು ವರ್ಷಗಳ ಸೇವೆ ಸಲ್ಲಿಸಿ ವೈಯಕ್ತಿಕ ಕಾರಣಕ್ಕೆ ವೃತ್ತಿಯನ್ನು ತೊರೆದು ಮನೆಗೆ ವಾಪಸ್ಸಾಗಿದವರು. ಅನಾಥರಾಗಿ ಬಾಳುತ್ತಿರುವವವರು ಮರದ ಮೇಲಿಂದ ಕೆಳಗೆ ಬಿದ್ದು ಕಾಲಿಗೆ ಗಂಭೀರ ಗಾಯಗೊಂಡು , ಸರಿಯಾಗಿ ನಡೆಯಲು ಸಾಧ್ಯವಾಗದೆ ಕಳೆದ ಮೂರು ವರ್ಷದಿಂದ ನೋವು ನುಂಗುತ್ತಾ ಜೀವನ ಎದುರಿಸುತ್ತಿದ್ದರು. ಆದರೆ ಇದೀಗ ಕಾಲು ನೋವು ವಿಪರೀತ ಆಗಿರುವುದರಿಂದ ಹೆಲ್ಪ್ ಇಂಡಿಯಾ ಫೌಂಡೇಷನ್ನಿನ ಮೊರೆ ಹೋಗಿದ್ದಾರೆ. ಫೌಂಡೇಷನ್ ಸ್ಥಾಪಕ ಕಾರ್ಯದರ್ಶಿ ರಾಝಿಕ್ ಉಳ್ಳಾಲ್ ಅವರು ಕಣಚೂರು ಆಸ್ಪತ್ರೆಗೆ ದಾಖಲಿಸಿದ್ದರೂ, ಇದೀಗ ಕಾಲಿನ ಶಸ್ತ್ರಚಿಕಿತ್ಸೆಗೆ ಸಾವಿರಾರು ರೂ. ತಗಲುವ ಹಿನ್ನೆಲೆಯಲ್ಲಿ ದಾನಿಗಳ ಮೊರೆ ಹೋಗಿದ್ದಾರೆ. ಉಳ್ಳಾಲ ಮಾಸ್ತಿಕಟ್ಟೆಯ ಬೋಜ (71) ದಯನೀಯ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ಕಾಲು ನೋವು ವಿಪರೀತ ಆಗಿರುವುದರಿಂದ ನೆಡಯಲು ಹಾಗೂ ನೋವು ತಡೆಯಲು ಅಸಾಧ್ಯವಾಗಿ ರಾಝಿಕ್ ಉಳ್ಳಾಲ್ ಅವರನ್ನು ಸಂಪರ್ಕಿಸಿದ್ದಾರೆ. ಸದಾ ಮಾನವ ನೋವುಗಳಿಗೆ ಸ್ಪಂಧಿಸುತ್ತಾ ಬಂದಿರುವ ರಾಝಿಕ್ ಅವರು ಖುದ್ದು…
UN NETWORKS ಉಳ್ಳಾಲ : ತಾಯಿಯ ಅಣ್ಣನ ಮಗನನ್ನು ಸ್ವಂತ ಭಾವಮೈದುನನೇ ಕೊಲೆಗೈದಿರುವ ಘಟನೆಗೆ ಸಂಬಂಧಿಸಿದಂತೆ ಬಂಧಿತ ಚೆಂಬುಗುಡ್ಡೆ ನಿವಾಸಿ ರಾಜೇಶನನ್ನು ಉಳ್ಳಾಲ ಪೊಲೀಸರು ಗುರುವಾರ ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಉಳ್ಳಾಲ ಠಾಣಾ ವ್ಯಾಪ್ತಿಯ ಚೆಂಬುಗುಡ್ಡೆ ಮಹಾಕಾಳಿ ದೈವಸ್ಥಾನದ ಎದುರುಗಡೆ ಬುಧವಾರ ತಡರಾತ್ರಿ ಘಟನೆ ನಾರಾಯಣ ಎಂಬವರನ್ನು ಕತ್ತಿಯಿಂದ ಕಡಿದು ಬರ್ಬರವಾಗಿ ಹತ್ಯೆ ನಡೆಸಲಾಗಿತ್ತು. ಲಲಿತಾ ಎಂಬವರ ಮನೆಯಲ್ಲಿ ಅವರ ಸಹೋದರನ ಪುತ್ರ ನಾರಾಯಣ (41) ಹಲವು ವರ್ಷಗಳಿಂದ ನೆಲೆಸಿದ್ದರು. ಲಲಿತಾ ಅವರ ಪುತ್ರ ರಾಜೇಶ್ ಗುಜರಾತಿನ ಪೋರ್ ಬಂದರಿನಲ್ಲಿ ಮೀನಿನ ಕೆಲಸ ನಿರ್ವಹಿಸುತ್ತಿದ್ದರು. ಇನ್ನೋರ್ವ ಪುತ್ರ ರಮೇಶ್ ಮೂಡಿಗೆರೆಯಲ್ಲಿ ನೆಲೆಸಿದ್ದಾರೆ. ಹಿರಿಯ ಮಗ ರಾಜೇಶ್ ಮೂರು ತಿಂಗಳಿಗೊಮ್ಮೆ ತಾಯಿಮನೆಗೆ ಬರುತ್ತಿದ್ದರು. ಆದರೆ ತಮ್ಮ ಮನೆಯಲ್ಲಿ ಬಾವಮೈದುನ ನಾರಾಯಣ ಇರುವ ಕುರಿತು ಹಲವು ಬಾರಿ ತಾಯಿ ಲಲಿತಾ ಜತೆಗೆ ಅಸಮಧಾನ ವ್ಯಕ್ತಪಡಿಸಿದ್ದರು. ಜೂನ್ ತಿಂಗಳಲ್ಲಿ ಮಳೆಗಾಲದ ಸಮಯವಾಗಿರುವುದರಿಂದ ಮೀನಿನ ಕೆಲಸವಿಲ್ಲದೆ ದೀರ್ಘಕಾಲದ ರಜೆಯಿಂದ ಬಂದು ತಾಯಿ ಜತೆಗೆ ರಾಜೇಶ್ ಇದ್ದರು. ಈ…

