UN NETWORK ದೇರಳಕಟ್ಟೆ : ಯುವಸಮುದಾಯ ಶಿಕ್ಷಣದ ಜೊತೆಗೆ ವೃತ್ತಿಪರತೆಯಲ್ಲಿ ನೈತಿಕತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ.ಈ ಮೂಲಕ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಬೆಂಗಳೂರಿನ ನ್ಯಾಷನಲ್ ಸ್ಕೂಲ್ ಆಫ್ ಇಂಡಿಯಾ ಕಾನೂನು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಆರ್. ವೆಂಕಟ ರಾವ್ ಅಭಿಪ್ರಾಯಪಟ್ಟರು. ದೇರಳಕಟ್ಟೆ ಎ.ಬಿ ಶೆಟ್ಟಿ ದಂತ ವೈದ್ಯಕೀಯ ಕಾಲೇಜಿನ ಮನನ ಸಭಾಂಗಣದಲ್ಲಿ ದಂತ ಮಹಾವಿದ್ಯಾಲಯದ ಹಳೇ ವಿದ್ಯಾರ್ಥಿಗಳ ಆಶ್ರಯದಲ್ಲಿ ನಡೆದ 9ನೇ ವರ್ಷದ ಪ್ರೊ.ಎನ್. ಶ್ರೀಧರ್ ಶೆಟ್ಟಿ ದತ್ತಿ ಉಪನ್ಯಾಸದಲ್ಲಿ ಜೀವನದಲ್ಲಿ ನೀತಿಶಾಸ್ತ್ರ ವಿಚಾರದಲ್ಲಿ ಉಪನ್ಯಾಸ ನೀಡಿದರು. ಶಿಕ್ಷಣ ಸಂಸ್ಥೆಗಳು ಎಂದಿಗೂ ಜೀವತ್ವವನ್ನು ಪಡೆಯುತ್ತದೆ. ಮನುಷ್ಯರಿಗೆ ವಯಸ್ಸಾಗುತ್ತದೆ. ಈ ನಿಟ್ಟಿನಲ್ಲಿ ಶ್ರೀಧರ್ ಶೆಟ್ಟಿ ವ್ಯಕ್ತಿಯಲ್ಲ, ಅವರೊಬ್ಬರು ಶಿಕ್ಷಣ ಸಂಸ್ಥೆಯಿದ್ದಂತೆ. ವಿಶ್ವವೇ ಭಾರತದ ಯುವಸಮುದಯಾವನ್ನು ಎದುರುನೋಡುತ್ತಿದೆ. ಬರಾಕ್ ಒಬಾಮ ಚುನಾವಣಾ ಸಂದರ್ಭ ನಡೆಸಿದ ಭಾಷಣದಲ್ಲಿ ನಾಸಾ, ಸಿಲಿಕಾನ್ ಸಿಟಿ ಅಮೆರಿಕಾದ ಮಹತ್ವದ ಸಂಸ್ಥೆಗಳೆಂದು ಚುನಾವಣೆ ಸಂದರ್ಭ ತಿಳಿಸಿದ್ದರು. ಅಂತಹ ಸಂಸ್ಥೆಗಳಲ್ಲಿ ಶೇ.40 ರಷ್ಟು ಭಾರತೀಯ ಯುವಪ್ರತಿಭೆಗಳ ಸಂಸ್ಥೆಯನ್ನು ಕಟ್ಟಿಬೆಳೆಸುವಲ್ಲಿ ಪಾತ್ರ ವಹಿಸಿರುವುದು…
Author: UllalaVani
UN NETWORKS ಉಳ್ಳಾಲ : ಗಿಡ ನೆಟ್ಟು ಬೆಳೆಸುವುದರಿಂದ ಪ್ರಕೃತಿ ಸಂರಕ್ಷಣೆ ಸಾಧ್ಯವಿದ್ದು ವಿದ್ಯಾರ್ಥಿಗಳು ಈ ಗಿಡವನ್ನು ಪೋಷಿಸುವುದರೊಂದಿಗೆ ಪರಿಸರ ಸಂರಕ್ಷಣೆಗೆ ಕೊಡುಗೆಯನ್ನು ನೀಡಬೇಕು ಎಂದು ಮದ್ರಸ ಅಧ್ಯಾಪಕ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಭಿಪ್ರಾಯಪಟ್ಟರು. ಕಲ್ಲಾಪು ಪಟ್ಲದ ಖುವ್ವತುಲ್ ಇಸ್ಲಾಂ ಮದ್ರಸ ಸಭಾಂಗಣದಲ್ಲಿ ಖುವ್ವತುಲ್ ಇಸ್ಲಾಂ ಮದ್ರಸ ಪಟ್ಲ ಕಲ್ಲಾಪು ಮಂಗಳೂರು ಇದರ 2019 – 2020ನೇ ಸಾಲಿನ ಮದ್ರಸ ಪ್ರಾರಂಭೋತ್ಸವ ಹಾಗೂ ಇದರ ಅಂಗವಾಗಿ ಕಲ್ಲಾಪುವಿನ ಸಮಾಜ ಸ್ನೇಹಿ ಕುಟುಂಬವು ದಾನವಾಗಿ ನೀಡಿದ ಮಾವಿನ ಗಿಡಗಳನ್ನು ಮದ್ರಸ ವಿದ್ಯಾರ್ಥಿಗಳಿಗೆ ವಿತರಿಸುವ ಮೂಲಕ ವೈವಿಧ್ಯಮಯ ರೀತಿಯಲ್ಲಿ ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಟ್ಲ ತಖ್ವಾ ಜುಮಾ ಮಸೀದಿ ಅಧ್ಯಕ್ಷ ಮಹಮೂದ್ ವಹಿಸಿದ್ದರು. ಪಟ್ಲ ಜುಮಾ ಮಸೀದಿ ಮುದರ್ರಿಸರಾದ ಇಝ್ಝುದ್ದೀನ್ ಅಹ್ಸನಿ ಮಾತನಾಡಿ ಸ್ವಸ್ಥ, ಸದ್ರಢ ಸಮಾಜ ನಿರ್ಮಾಣಕ್ಕೆ ಧಾರ್ಮಿಕ ಅರಿವು ಅನಿವಾರ್ಯ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಯ್ಯಿದ್ ಮದನಿ ಕೇಂದ್ರ ಸಮಿತಿ ಸದಸ್ಯ ಮೊಯ್ದಿನ್, ಪಟ್ಲ ಮಸೀದಿ ಪ್ರಧಾನ ಕಾರ್ಯದರ್ಶಿ ಹಾರಿಸ್,…
UN NETWORKS ತಲಪಾಡಿ : ಪ್ರತಿಯೊಬ್ಬ ನಾಗರಿಕನು ತನ್ನ ಜವಾಬ್ದಾರಿಯನ್ನು ಅರಿತುಕೊಂಡು ಕಸದ ನಿರ್ವಹಣೆಯನ್ನು ಮಾಡಿದಲ್ಲಿ ಸ್ವಚ್ಛ ಸುಂದರ ಪರಿಸರ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಸ್ವಚ್ಛತಾ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವ ಮೂಲಕ ಸ್ವಚ್ಛ ಮನಸ್ಸಿನ ಸೇನಾನಿಗಳಾಗಬೇಕು ಎಂದು ಎಂ.ವಿ. ಶೆಟ್ಟಿ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ಪ್ರಾಧ್ಯಾಪಕಿ ಹಾಗೂ ರಾಮಕೃಷ್ಣ ಮಿಷನ್‍ನ ಸ್ವಚ್ಛ ಭಾರತಾ ಅಭಿಯಾನದ ಸಂಯೋಜಕಿ ಪ್ರೊ. ನಿವೇದಿತಾ ಕಾಮತ್ ಅಭಿಪ್ರಾಯಪಟ್ಟರು. ಅವರು ತಲಪಾಡಿಯ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲಿನಲ್ಲಿ ರಾಮಕೃಷ್ಣ ಮಿಶನ್ ಆಯೋಜಿಸಿದ ಸ್ವಚ್ಛ ಮನಸ್ಸು -2019 ಕಾರ್ಯಕ್ರಮಕ್ಕೆ ಚಾಲನೆ ನೀಡಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ನಮ್ಮ ಪರಿಸರದ ವಿಕೃತಿಗೆ ಮೂಲ ಕಾರಣ ಮಾನವ ತನ್ನ ಸುಖಲೋಲುಪತೆಯ ಜೀವನಕ್ಕಾಗಿ ಆತನು ಪ್ರಕೃತಿಯ ಮೇಲೆ ಮಾಡಿದ ಆಕ್ರಮಣದಿಂದಾಗಿ ನಮ್ಮ ಸುಂದರ ಪರಿಸರ ಇಂದು ವಿನಾಶದ ಅಂಚಿನಲ್ಲಿದೆ. ಹತ್ತು ಹಲವು ಮಾಲಿನ್ಯಗಳನ್ನು ತನ್ನ ಒಡಲಲ್ಲಿರಿಸಿದ ಪ್ರಕೃತಿಯು ಇಂದು ರೋಗರುಜಿನಗಳ ಗೂಡಾಗಿದೆ. ಇದರ ಮೂಲ ಕಾರಣವನ್ನು ಹುಡುಕುತ್ತಾ ಹೋದರೆ ನಮಗೆ…
UN NETWORKS ಉಳ್ಳಾಲ : ಅಂಬಿಕಾರೋಡ್‍ನ ಗಟ್ಟಿ ಸಮಾಜದ ಮಾತೃ ಸಂಘದ ಅಧ್ಯಕ್ಷರಾಗಿ ಪವಿತ್ರ ಕುಮಾರ್ ಗಟ್ಟಿ ಕುತ್ತಾರ್ ಆಯ್ಕೆಯಾಗಿದ್ದಾರೆ. 71ನೇ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.ಉಪಾಧ್ಯಕ್ಷರಾಗಿ ನಿತಿನ್ ಗಟ್ಟಿ ಲೇಡಿಹಿಲ್, ಪ್ರಧಾನ ಕಾರ್ಯದರ್ಶಿಯಾಗಿ ದಯಾನಂದ ಗಟ್ಟಿ ಪಿಲಾರ್, ಜೊತೆ ಕಾರ್ಯದರ್ಶಿಯಾಗಿ ಪದ್ಮನಾಭ ಗಟ್ಟಿ ಬಜಿಲಕೇರಿ, ಕೋಶಾಧಿಕಾರಿಯಾಗಿ ಕೃಷ್ಣ ಮೋಹನ್ ಗಟ್ಟಿ ಮಣ್ಣಗುಡ್ಡೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಿಶ್ವನಾಥ ಗಟ್ಟಿ ವಗ್ಗ, ಪ್ರಶಾಂತ್ ಗಟ್ಟಿ ಅಮ್ಮೆಂಬಳ, ಜನಾರ್ಧನ ಗಟ್ಟಿ , ದಿನೇಶ್ ಗಟ್ಟಿ ಕುತ್ತಾರ್, ಸೇಸಪ್ಪ ಗಟ್ಟಿ ಕೊಲ್ಯ, ದಯಾನಂದ ಗಟ್ಟಿ ಪಿಲಿಕೂರು, ಕೆ. ಆರ್. ಗಟ್ಟಿ ಕೊರಂತೋಡಿ, ರಾಜೇಶ್ ಗಟ್ಟಿ ಕುಂಪಲ, ಸುಹಾಸಿನಿ ಗಟ್ಟಿ ಕೂಟತ್ತಜೆ, ಅಶೋಕ್ ಗಟ್ಟಿ ನಂದಾವರ, ಯಜ್ಞೇಶ್ವರ ಗಟ್ಟಿ ಕಾವೂರು, ಚಂದ್ರಶೇಖರ್ ಗಟ್ಟಿ ಕೊಂಚಾಡಿ, ಪ್ರಶಾಂತ್ ಗಟ್ಟಿ ಅಡ್ಕ, ಪುಷ್ಪಲತಾ ಗಟ್ಟಿ ಯು.ಕೆ. ಆಯ್ಕೆಯಾದರು.
UN NETWORKS ಕೊಣಾಜೆ: ದೇಶದಲ್ಲಿ ವಿಶ್ವವಿದ್ಯಾನಿಲಯಗಳು ಹಿಂದಿನ ಗೌರವವನ್ನು ಕಳೆದುಕೊಳ್ಳುತ್ತಿವೆ. ಇದಕ್ಕೆ ಆರ್ಥಿಕ -ಸಾಮಾಜಿಕ ಸಂಪನ್ಮೂಲಗಳ ಕೊರತೆ ಕಾರಣ. ನಮ್ಮ ವಿವಿಗಳು ವಿದೇಶಿ ವಿವಿಗಳನ್ನು ಅನುಕರಣೆ ಮಾಡದೆ ನಮ್ಮದೇ ಮಾದರಿಯಲ್ಲಿ ಶೈಕ್ಷಣಿಕ ಗುಣಮಟ್ಟಕ್ಕೆ ಒತ್ತು ನೀಡುವುದರೊಂದಿಗೆ ಆದರ್ಶ ರೀತಿಯಲ್ಲಿ ಪುನಶ್ಚೇತನವಾಗಬೇಕು. ನೂತನ ಕುಲಪತಿ ಪ್ರೊ| ಎಡಪಡಿತ್ತಾಯ ಅವರ ನೇತೃತ್ವದಲ್ಲಿ ಮಂಗಳೂರು ವಿವಿ ಇದೇ ಮಾರ್ಗದಲ್ಲಿ ಉನ್ನತ ಸ್ಥಾನಕ್ಕೆ ಏರಲಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು. ಡಾ| ಎಡಪಡಿತ್ತಾಯ ಅಭಿನಂದನ ಸಮಿತಿ ವತಿಯಿಂದ ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ಶನಿವಾರ ನೂತನ ಉಪಕುಲಪತಿ ಪ್ರೊ| ಪಿ.ಎಸ್. ಎಡಪಡಿತ್ತಾಯ ಅವರಿಗೆ ಅಭಿನಂದನೆ ನೆರವೇರಿಸಿ ಅವರು ಮಾತನಾಡಿದರು.50 ವರ್ಷಗಳಲ್ಲಿ ನಾನು ಹಲವಾರು ವಿಶ್ವವಿದ್ಯಾನಿಲಯ, ಕುಲಪತಿಗಳು, ರಾಜ್ಯಪಾಲರನ್ನು ಕಂಡಿದ್ದೇನೆ. ಹಿಂದೆ ವಿವಿಗಳಿಗೆ ಇದ್ದ ಹೆಸರು -ಗೌರವ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ. ವಿದ್ಯಾರ್ಥಿಗಳ ಬುದ್ಧಿಮತ್ತೆ, ಜ್ಞಾನವನ್ನು ದುಡಿಸಿಕೊಳ್ಳುವ ಕಾರ್ಯಕ್ಕೆ ಪ್ರಾಧ್ಯಾಪಕರು ಮುಂದಾಗಬೇಕು. ಮಂಗಳೂರು ವಿವಿ ಮೇಲೆ ಹಲವು ನಿರೀಕ್ಷೆಗಳಿದ್ದು, ನಮ್ಮದೇ ಜಿಲ್ಲೆಯ ಉಪಕುಲಪತಿಗಳು…
UN NETWORKS ಮುಡಿಪು : ತುಂಬೆಯ ನೇತ್ರಾವತಿ ನದಿಯಿಂದ ಮುಡಿಪು ಸಮೀಪದ ಮೂಳೂರುವಿನಲ್ಲಿ ಹೊಸದಾಗಿ ಜಾರಿಗೊಳಿಸಿದ ಕೆನರಾ ಕೈಗಾರಿಕಾ ಪ್ರದೇಶ ಗಳಿಗೆ ನೀರು ಸರಬರಾಜು ಮಾಡಲು ಯೋಜನೆ ರೂಪಿಸಲಾಗುತ್ತಿದ್ದು, ಈ ಮೂಲಕ ಮಂಗಳೂರಿಗೆ ನೀರುಣಿಸುವ ತುಂಬೆ ವೆಂಟೆಡ್ ಡ್ಯಾಂನ ಮೇಲೆ ಇನ್ನಷ್ಟು ಒತ್ತಡ ಎದುರಾದಂತಾಗಿದೆ. ಈ ಬಾರಿ, ತುಂಬೆ ಡ್ಯಾಂನಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ನಗರದಲ್ಲಿ ಕುಡಿ ಯುವ ನೀರಿಗೆ ಸಮಸ್ಯೆ ಉಲ್ಬಣಿಸಿತ್ತು. ಹೀಗಾಗಿ ಕೈಗಾರಿಕೆಗಳಿಗೆ ಆವಶ್ಯ ನೀರನ್ನು ಪರ್ಯಾಯ ಮೂಲಗಳಿಂದ ಒದಗಿಸ ಬೇಕು ಎಂದು ಆಡಳಿತ ವ್ಯವಸ್ಥೆ ಚಿಂತನೆ ನಡೆಸುತ್ತಿತ್ತು. ಆದರೆ ಇದೀಗ ತುಂಬೆ ಡ್ಯಾಂನ ನೀರನ್ನು ಕೆನರಾ ಕೈಗಾರಿಕಾ ಪ್ರದೇಶಕ್ಕೆ ಹರಿಸಲು ಯೋಜನೆಯೊಂದನ್ನು ರೂಪಿಸಲಾಗುತ್ತಿದೆ. ಯೋಜನೆಗೆ ಟೆಂಡರ್ ಆಹ್ವಾನ ಕೆನರಾ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 600 ಎಕ್ರೆಯಷ್ಟು ಭೂಮಿ ಕೆಐಎಡಿಬಿ ವಶದಲ್ಲಿದೆ. ಇದರಲ್ಲಿ 67.87 ಎಕ್ರೆ ಭೂಮಿಯನ್ನು ಹೊಸ ಜೈಲು ನಿರ್ಮಾಣಕ್ಕೆ ಮೀಸಲಿಡಲಾಗಿದೆ. ಉಳಿದ ಭೂಮಿ ಇನ್ನಷ್ಟೇ ಕೈಗಾರಿಕೆಗಳಿಗೆ ನೀಡಬೇಕಾಗಿದೆ. ಇದಕ್ಕೆ ಪೂರಕವಾಗಿ ಈ ಪ್ರದೇಶಕ್ಕೆ ನೀರು ಸರಬರಾಜಿಗಾಗಿ…
UN NETWORKS ಉಳ್ಳಾಲ : ಸುಮಾರು 12 ಕೋಟಿಗೂ ಅಧಿಕ ಸದಸ್ಯರ ಮೂಲಕ ಬಿ.ಜೆ.ಪಿ. ಜಗತ್ತಿನ ಅತೀ ದೊಡ್ಡ ರಾಜಕೀಯ ಶಕ್ತಿಯಾಗಿದೆ. ಮುಂದೆ 20 ಕೋಟಿ ಸದಸ್ಯರನ್ನು ನೋಂದಾಯಿಸುವ ಗುರಿಯಿಟ್ಟು ಸದಸ್ಯತನ ಅಭಿಯಾನವನ್ನು ಪ್ರಧಾನಿ ನರೇಂದ್ರ ಮೋದಿಯವರು ವಾರಾಣಾಸಿಯಲ್ಲಿ ಚಾಲನೆ ನೀಡಿದ್ದಾರೆ ಎಂದು ಬಿ.ಜೆ.ಪಿ.ಸದಸ್ಯತನ ಅಭಿಯಾನದ ಜಿಲ್ಲಾ ಸಂಚಾಲಕ ಗೋಪಾಲಕೃಷ್ಣ ಹೇರಳೆ ತಿಳಿಸಿದ್ದಾರೆ. ಅವರು ಮಂಗಳೂರು ಬಿ.ಜೆ.ಪಿ.ಯ ವತಿಯಿಂದ ನಡೆದ ಸಂಘಟನಾ ಪರ್ವ ಕಾರ್ಯಾಗಾರದಲ್ಲಿ ಹೇಳಿದರು. ಕ್ಷೇತ್ರದ ವ್ಯಾಪ್ತಿಯಲ್ಲಿ 45 ಶಕ್ತಿ ಕೇಂದ್ರಗಳನ್ನಾಗಿ ವಿಂಗಡಿಸಿ ಸಂಚಾಲಕ, ಮತ್ತು ಪ್ರಮುಖರನ್ನು ನಿಯೋಜಿಸಿ ಪ್ರತಿ ಬೂತಿನಲ್ಲೂ ಮಿಸ್ ಕಾಲ್ ಮೂಲಕ ಸದಸ್ಯರನ್ನು ಸೇರ್ಪಡಿಸುವ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ಕ್ಷೇತ್ರಧ್ಯಕ್ಷ ಸಂತೋಷ್ ಬೋಳಿಯಾರ್ ವಹಿಸಿದ್ದರು. ಮಾಜಿ ಶಾಸಕ ಕೆ.ಜಯರಾಮ ಶೆಟ್ಟಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ ಉಳ್ಳಾಲ್, ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ, ನಮಿತಾ ಶ್ಯಾಮ್, ಹಿರಿಯರಾದ ಸೀತರಾಮ್ ಬಂಗೇರ, ಸಂಜೀವ ಶೆಟ್ಟಿ ಅಂಬ್ಲಮೊಗರು, ಉಪಸ್ಥಿತರಿದ್ದರು. ಪ್ರ.ಕಾರ್ಯದರ್ಶಿ…
UN NETWORKS ಕೊಣಾಜೆ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಉಳ್ಳಾಲ ಸ್ಥಳೀಯ ಸಂಸ್ಥೆ ಮತ್ತು ಸೌಜನ್ಯ ಸ್ಕೌಟ್ಸ್ ದಳ ಶ್ರೀರಾಮಕೃಷ್ಣ ಪ್ರೌಢಶಾಲೆ ಹರೇಕಳ ಇದರ ವತಿಯಿಂದ ಸ್ಕೌಟ್ಸ್ ಗೈಡ್ಸ್ ಕಬ್ ಬುಲ್‍ಬುಲ್ ಮಕ್ಕಳಿಗಾಗಿ ಪರಂಡೆ ಗದ್ದೆಯಲ್ಲಿ 5ನೇ ವರ್ಷದ ಮುಂಗಾರು ಮಳೆಯಲ್ಲಿ ಭತ್ತದ ನಾಟಿ, ಕೆಸರು ಗದ್ದೆಯಲ್ಲಿ ಕ್ರೀಡೋತ್ಸವದಲ್ಲಿ ಮಕ್ಕಳು ಭಾಗವಹಿಸಿದರು.
UN NETWORKS ಮಂಗಳೂರು : ಫೈವ್ ಟ್ರಿಲಿಯನ್ ಇಕಾನಮಿ ಉದ್ದೇಶವನ್ನು ಇಟ್ಟುಕೊಂಡಿರುವುದರಿಂದ ದೇಶ ಸರ್ವತೋಮುಖ ಅಭಿವೃದ್ಧಿಯಾಗಲಿದೆ. ದೇಶದ ಮೂಲಸೌಕರ್ಯ ಅಭಿವೃದ್ಧಿಗೆ 100 ಲಕ್ಷ ಕೋಟಿಯನ್ನು ಮೀಸಲಿರಿಸಲಾಗಿದೆ. ಇದರಿಂದ ಕಟ್ಟಡ ಹಾಗೂ ಇತರೆ ಸಾಮಗ್ರಿ ತಯಾರಿಕಾ ಘಟಕಗಳಿಗೆ ಬಹಳ ಲಾಭದಾಯಕವಾಗಲಿದೆ. ಎಂದು ಕೆನರಾ ಸಣ್ಣ ಕೈಗಾರಿಕೆಗಳ ಅಸೋಸಿಯೇಷನ್ ಅಧ್ಯಕ್ಷ ಗೌರವ್ ಹೆಗ್ಡೆ ಅಭಿಪ್ರಾಯಪಟ್ಟರು. ಅವರು ಬೈಕಂಪಾಡಿಯ ಕೆನರಾ ಸಣ್ಣ ಕೈಗಾರಿಕೆಗಳ ಅಸೋಸಿಯೇಷನ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಬಜೆಟ್ -2019 ಚರ್ಚಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. ಕಾನ್ಫಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರೀ ( ಸಿಐಐ ) ಕಾರ್ಯಕ್ರಮ ಆಯೋಜಿಸಿತ್ತು. ಸಾಮಗ್ರಿಗಳ ಸಾಗಾಟ ಲಾಜಸ್ಟಿಕ್ ಗಳ ವ್ಯವಹಾರವೂ ಅಭಿವೃದ್ಧಿಯಾಗುವುದು. ಕಾರ್ಮಿಕರಿಗೆ ಕೆಲಸವಾಗಲಿದೆ. ಜಿಎಸ್ ಟಿಯಲ್ಲೂ ಸರಳೀಕರಣ ನೀತಿಯನ್ನು ಜಾರಿಗೊಳಿಸುವ ಉದ್ದೇಶ ಇದೆ. ಸಹಜ್ ಮತ್ತು ಸರಳ್ ಫೈಲಿಂಗ್ ಉದ್ದಿಮೆದಾರರಿಗೆ ಉಪಯುಕ್ತವಾಗಲಿದೆ. ಕಾರ್ಖಾನೆ ಕಾರ್ಮಿಕರಿಗೆ ಲೇಬರ್ ಕೋಡ್ ನೀತಿ ಜಾರಿಗೊಳಿಸುವ ಮೂಲಕ ಲೇಬರ್ ಮ್ಯಾನೇಜ್ ಮಂಟ್ ಸುಲಭವಾಗಲಿದೆ. ಗ್ರಾಮೀಣ ಜನರಿಗೆ ಕೌಶಲ್ಯವೃದ್ಧಿಗೆ ಒತ್ತು ಹಾಗೂ ಕಡಿಮೆ ವೆಚ್ಚದ ಮನೆ…
UN NETWORKS ಉಳ್ಳಾಲ : ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ ಹಾಗೂ ಬಿರುಸಿನ ಗಾಳಿಗೆ ಸೋಮೇಶ್ವರ ಉಚ್ಚಿಲ ಪ್ರದೇಶದಲ್ಲಿ ಕಡಲ್ಕೊರೆತದ ಅಬ್ಬರಕ್ಕೆ 10ಮನೆಗಳು ಅಪಾಯದ ಸ್ಥಿತಿಯಲ್ಲಿದೆ. ಹಲವು ಮನೆಗಳು ಹಾನಿಗೊಳಗಾಗಿದೆ. ಐದು ಮರಗಳು ಧರಾಶಾಹಿಯಾಗಿದೆ. ತಾತ್ಕಾಲಿಕ ಕಡಲ್ಕೊರೆತಕ್ಕೆ ತಟದ ಸುಮಾರು 200ಮೀ. ಉದ್ದಕ್ಕೆ ಹಾಕಲಾದ ಭಾರೀ ಗಾತ್ರದ ಕಲ್ಲುಗಳು ಸಮುದ್ರಪಾಲಾಗುತ್ತಿದೆ. ಎರಡು ವಾರದ ಹಿಂದೆ ಉಚ್ಚಿಲ ಕೋಟೆ, ಸೀಗ್ರೌಂಡ್ ಪ್ರದೇಶದಲ್ಲಿ ಭಾರೀ ಪ್ರಮಾಣದ ಕಡಲ್ಕೊರೆತ ಉಂಟಾಗಿದ್ದು ಅದರಿಂದಾಗಿ ಬಹಳಷ್ಟು ಮನೆಗಳು ಹಾನಿಗೀಡಾಗಿದ್ದವು, ಕೆಲವು ಮನೆಗಳು ಧರಾಶಾಹಿಯಾಗಿತ್ತು. ಶನಿವಾರ ಹಾಗೂ ಭಾನುವಾರದ ಮಳೆ ಹಾಗೂ ಬಿರುಸಿನ ಗಾಳಿಗೆ ಬೃಹತ್ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದು ಉಚ್ಚಿಲದ ಕಡಲ ತಟ ಭಾಗದ ನಿವಾಸಿಗಳಾದ ರೂಪೇಶ್, ಸಂತೋಷ್, ತಾರಾನಾಥ್, ಸಂಜೀವ, ಕಿಶೋರ್, ಚಿದಾನಂದ, ಪ್ರದೀಪ್, ಚಂದಪ್ಪಣ್ಣವರ ಅಂಗಡಿ ಕಡಲ್ಕೊರೆತಕ್ಕೆ ಹಾನಿಯಾಗಿದೆ. ಹಾಗಿದ್ದರೂ ಈ ಭಾಗದಲ್ಲಿ ತಾತ್ಕಾಲಿಕ ಬ್ರೇಟ್ ವಾಟರ್ ದೊಡ್ಡ ಸಮಸ್ಯೆ ಎಂಬುದು ಕೆಲವರ ಅಭಿಪ್ರಾಯ.

