UN NETWORKS ತಲಪಾಡಿ : ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಪ್ರಮುಖ ಬುಕ್ಕಿ, ಬೇಕರಿ ಅಂಗಡಿ ಮಾಲೀಕ ಸೇರಿದಂತೆ ಆತನ ಸಹಚರನನ್ನು ಸಿಸಿಬಿ ತಂಡ ತಲಪಾಡಿ ಸಮೀಪ ನಿನ್ನೆ ಬಂಧಿಸಿದೆ. ವಿಟ್ಲ ಕನ್ಯಾನ ನಿವಾಸಿ ಸಂತೋಷ್ ಶೆಟ್ಟಿ (40) ಕನ್ಯಾ ನ, ಆತನ ಕಲೆಕ್ಷನ್ ಹುಡುಗನಾಗಿರುವ ಜೀವನ್ (22) ಬಂಧಿತರು.ಸಂತೋಷ್ ಅವರು ಬೆಂದೂರ್ ವೆಲ್ ಸಮೀಪ ಸ್ಕಂದ ಬೇಕರಿ ಮಾಲೀಕರಾಗಿದ್ದಾರೆ. ಬಂಧಿತರಿಂದ ಮೊಬೈಲ್ ಆಪ್, ಕಂಪ್ಯೂಟರ್, ಕ್ರೇಟಾ ಕಾರು, ರೂ.70,000 ನಗದು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಸಂತೋಷ್ ಶೆಟ್ಟಿ ಲೊಕ್ಯಾಂಟೋ ಆ್ಯಾಪ್ ಮೂಲಕ ಬೆಟ್ಟಿಂಗ್ ವ್ಯವಹಾರದಲ್ಲಿ ಯುವಕರನ್ನು ತೊಡಗಿಸುತ್ತಿದ್ದರೆನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ ತಲಪಾಡಿಯ ಮನೆಯೊಂದರಿಂದ ಬಂಧಿಸಿ, ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
Author: UllalaVani
UN NETWORKS ಉಳ್ಳಾಲ : ಮುಂದಿನ ತಲೆಮಾರಿಗೆ ನಾವು ಉಪಯೋಗಿಸುವ ಅನ್ನವನ್ನು ಭತ್ತದಿಂದ ಉಂಟಾಗುವ ಅಕ್ಕಿಯಿಂದ ಮಾಡುತ್ತೇವೆ ಎಂದು ತಿಳಿಯಪಡಿಸುವುದು ಬಹಳ ಕ್ಲಿಷ್ಟಕರವಾದ ವಿಷಯವಾಗಿದೆ. ವಿದ್ಯಾರ್ಥಿಗಳಿಗೆ ಈ ಬಗ್ಗೆ ತಿಳುವಳಿಕೆ ನೀಡುವ ಉದ್ದೇಶದಿಂದ ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಳೆಕೋಟೆಯಲ್ಲಿ ನಡೆಸಲ್ಪಡುತ್ತಿರುವ ಸಯ್ಯಿದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮತ್ತು ಸಯ್ಯಿದ್ ಮದನಿ ಪ್ರೌಢ ಶಾಲೆಯ ಮೇಲಂತಸ್ತಿನಲ್ಲಿ ಗದ್ದೆಯ ಮಾದರಿ ತಯಾರಿಸಿ ಕೇಂದ್ರ ಜುಮಾ ಮಸ್ಜಿದ್‍ನ ಅಧ್ಯಕ್ಷರಾದ ಹಾಜಿ ಅಬ್ದುಲ್ ರಶೀದ್‍ರವರ ನೇತೃತ್ವದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಶಾಲಾಭಿವೃಧ್ಧಿ ಸಮಿತಿ ಸದಸ್ಯರು ಹಾಗೂ ಉಳ್ಳಾಲ ನಗರ ಸಭೆಯ ಆಯುಕ್ತೆ ವಾಣಿ ವಿ. ಆಳ್ವರವರು ನಾಟಿ ಮಾಡಿದರು. ಉಳ್ಳಾಲದ ಕೃಷಿಕ ವಿಜಯರವರ ಮಾರ್ಗದರ್ಶನದಲ್ಲಿ ಮಾದರಿ ಗದ್ದೆಯನ್ನು ಶಾಲಾ ಟ್ಯಾರಿಸ್ ನಲ್ಲಿ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಗದ್ದೆಯ ಮಹತ್ವ ತಿಳಿಯಲು ಸಹಕಾರಿಯಾಗಿದೆ.
UN NETWORKS ಕೊಣಾಜೆ : ಕೊಣಾಜೆ ಬೆಳ್ಮ ಶ್ರೀ ಉಳ್ಳಾಲ್ತಿ ಅಮ್ಮನವರ ಕ್ಷೇತ್ರಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಪದ್ಮಭೂಷಣ ಡಾ| ಡಿ. ವಿರೇಂದ್ರ ಹೆಗ್ಡೆಯವರು ಭೇಟಿ ನೀಡಿ ಆಶೀರ್ವಚನ ನೀಡಿದರು. ಈ ಸಂದರ್ಭ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಉಮರಬ್ಬ, ಅನ್ಣಪ್ಪ ಪಿ.ಎಸ್., ಮಂಗಳೂರು ವಿವಿ ವಿಶ್ರಾಂತ ಪ್ರಾಧ್ಯಪಕ ಡಾ| ಚಿನ್ನಪ್ಪ ಗೌಡ, ಧಾರ್ಮಿಕ ಮುಂದಾಳುಗಳಾದ ಸೀತಾರಾಮ ಶೆಟ್ಟಿ ನೆತ್ತಿಲಬಾಳಿಕೆ, ರಘುರಾಮ ಕಾಜವ, ಸ್ವಸಹಾಯ ಸಂಘಗಳ ಸದಸ್ಯರು, ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪ್ರಸಾದ್ ರೈ, ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ, ಕೋಶಾಧಿಕಾರಿ ರವೀಂದ್ರ ಬಂಗೇರ ಕೊಣಾಜೆ, ಗೌರವ ಸಲಹೆಗಾರ ಸುದರ್ಶನ್ ಭಟ್, ಜೊತೆ ಕಾರ್ಯದರ್ಶಿ ಸುಂದರ ಸೆಟ್ಟಿಗಾರ್, ಹರೀಶ್ ಗಟ್ಟಿ, ದೇವಣ್ಣ ಶೆಟ್ಟಿ ಉಪಸ್ಥಿತರಿದ್ದರು. ಶ್ರೀ ಉಳ್ಳಾಲ್ತಿ ಅಮ್ಮನವರಿಗೆ ಪೂಜೆ ನೆರವೇರಿಸಿದ ಬಳಿಕ ಪ್ರಸಾದ ವಿತರಿಸಲಾಯಿತು.
UN NETWORKS ತಲಪಾಡಿ : ಪದವಿ ಪೂರ್ವ ಕಾಲೇಜು ಶಿಕ್ಷಣ ಇಲಾಖೆ 2018-19ರ ಶೈಕ್ಷಣಿಕ ಸಾಲಿನಲ್ಲಿ ನಡೆಸಿದ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಸತತ ಎರಡನೇ ಬಾರಿಗೆ ಶೇಕಡ 100% ಫಲಿತಾಂಶ ಸಾಧಿಸಿದ ತಲಪಾಡಿ ಕೆ.ಸಿ ರೋಡ್ ವಿದ್ಯಾನಗರದ ಫಲಾಹ್ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಿಗೆ ಹಾಗೂ ಪ್ರಾಂಶುಪಾಲರಿಗೆ ಮತ್ತು ಉಪನ್ಯಾಸಕರಿಗೆ ಆಡಳಿತ ಮಂಡಳಿ ಫಲಾಹ್ ಎಜುಕೇಶನ್ ಸೊಸೈಟಿ ವತಿಯಿಂದ ಅಭಿನಂದನಾ ಸಮಾರಂಭ ನಡೆಯಿತು. ಫಲಾಹ್ ಎಜುಕೇಶನ್ ಸೊಸೈಟಿ ಅಧ್ಯಕ್ಷ ಎನ್.ಅರಬಿ ಕುಂಞ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಂಸ್ಥೆಯ ಪ್ರಾಂಶುಪಾಲ ಅಬ್ದುಲ್ ಖಾದರ್ ಹುಸೈನ್ ಪಡುಬಿದ್ರಿ ಪ್ರಾಸ್ತವಿಕವಾಗಿ ಮಾತನಾಡಿದರು. ಸಂಸ್ಥೆಯ ಸಂಚಾಲಕ ಹಾಗೂ ಕರ್ನಾಟಕ ಹೈಕೋರ್ಟ್‍ನ ನ್ಯಾಯಾವಾದಿ ಮುಝಫರ್ ಅಹಮದ್, ಕಾರ್ಯದರ್ಶಿ ಅಬ್ಬಾಸ್ ಉಚ್ಚಿಲ್ ಮತ್ತು ಮಾಜಿ ಕೋಶಾ„ಕಾರಿ ಇಸ್ಮಾಯಿಲ್ ನಾಗತೋಟ ಸಂದರ್ಭೋಚಿತವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದ 100 ಗಂಟೆಗಳ ಸ್ಪೋಕನ್ ಇಂಗ್ಲೀಷ್ ಕೋರ್ಸ್, ಕಾಲೇಜು ಚಟುವಟಿಕೆಗಳ ವಿವಿಧ ಸಂಘದ ಉದ್ಘಾಟನೆ ಹಾಗೂ ಹಳೆ ವಿದ್ಯಾರ್ಥಿ ಸಂಘದ…
UN NETWORKS ದೇರಳಕಟ್ಟೆ: ನಾವು ನೀಡಿದ ಸಸಿಗಳನ್ನು ಒಳ್ಳೆಯ ರೀತಿಯಲ್ಲಿ ಬೆಳೆಸಿ ಸಂರಕ್ಷಣೆ ಮಾಡಿದಾಗ ಮುಂದೆ ಆ ಗಿಡ ಮರವಾಗಿ ನಮ್ಮನ್ನು ಸಂರಕ್ಷಿಸುತ್ತದೆ, ಅಲ್ಲದೆ ಒಂದು ಸ್ವಚ್ಛ, ಆರೋಗ್ಯ ಪೂರ್ಣ ಪರಿಸರದ ನಿರ್ಮಾಣದಲ್ಲಿ ನಾವು ತೊಡಗಿದಂತಾಗಿ ಇತರರಿಗೆ ಮಾದರಿಯಾಗುತ್ತೇವೆ. ಆ ಕೆಲಸ ನಮ್ಮೆಲ್ಲರಿಂದ ಆಗಬೇಕಾಗಿದೆ ಎಂದು ಸಂಸ್ಥೆಯ ಸ್ಥಾಪಕಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಅಭಿಪ್ರಾಯಪಟ್ಟರು. ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ರತ್ನ ಎಜುಕೇಷನ್ ಟ್ರಸ್ಟ್ ವತಿಯಿಂದ ವಿವಿಧ ತಳಿಗಳ ಸಸಿಗಳನ್ನು ವಿತರಿಸಿ ಮಾತನಾಡಿದರು. ದೇರಳಕಟ್ಟೆಯ ಯೂನಿಯನ್ ಬ್ಯಾಂಕ್‍ನ ಮೆನೇಜರ್ ವಿಜಯ ಬೋರ್ಕರ್, ವಿದ್ಯಾಸಂಸ್ಥೆ ಯ ಕಾರ್ಯದರ್ಶಿ ಸೌಮ್ಯ ಆರ್ ಶೆಟ್ಟಿ, ಶಾಲಾ ಮುಖ್ಯೋಪಾಧ್ಯಾಯಿನಿ ನಯೀಮ್ ಹಮೀದ್, ಶಿಕ್ಷಕರಾದ ರವಿಕುಮಾರ್ ಕೋಡಿ, ವೀಣಾ ರಾಮದಾಸ್, ಹೇಮಮಾಲಿನಿ, ಶ್ವೇತಾ, ರಾಕೇಶ್ ಕಂಬಳಪದವು, ಪವಿತ್ರ ಉಪಸ್ಥಿತರಿದ್ದರು.
UN NETWORKS ತಲಪಾಡಿ : ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಪ್ರಾಮಾಣಿಕತೆ ಮತ್ತು ನಾಯಕತ್ವದ ಗುಣಗಳನ್ನು ಅಳವಡಿಸಿಕೊಂಡಾಗ ಮುಂದಿನ ದಿನಗಳಲ್ಲಿ ಉತ್ತಮ ನಾಯಕರಾಗುವುದರಲ್ಲಿ ಸಂಶಯವಿಲ್ಲ ಎಂದು ರೇಡಿಯಾಲಜಿ ವಿಭಾಗದ ಮುಖ್ಯಸ್ಥ ಡಾ| ಕೃಷ್ಣ ಯು. ಅಭಿಪ್ರಾಯಪಟ್ಟರು. ತಲಪಾಡಿಯ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು. ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ| ಎಂ. ಬಿ. ಪುರಾಣಿಕ್ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ವಿವಿಧ ರೀತಿಯ ಪ್ರತಿಭೆಗಳಿದ್ದು ಅವುಗಳನ್ನು ಹೊರತರಲು ಹಾಗೂ ನಾಯಕತ್ವ ಗುಣ ಬೆಳೆಸಿಕೊಳ್ಳಲು ವಿದ್ಯಾರ್ಥಿ ಸಂಘವು ಪ್ರಮುಖ ಪಾತ್ರ ವಹಿಸುತ್ತದೆ ಎಂದರು.ಶಾಲಾ ಪ್ರಾಂಶುಪಾಲ ಸುಷ್ಮಾ ದಿನಕರ್, ಮೋಹನ್‍ದಾಸ್, ಲತಾಂಜಲಿ ರೈ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿನಾಯಕ್ ಬಿ.ಜಿ, ಆಡಳಿತಾ„ಕಾರಿ ವಿವೇಕ್ ತಂತ್ರಿ, ಶಿಕ್ಷಕ ಶಿಕ್ಷಕೇತರ ವರ್ಗದವರು ಉಪಸ್ಥಿತರಿದ್ದರು.
UN NETWORKS ಹಿರಾ : ಹಿರಾ ಮಹಿಳಾ ಕಾಲೇಜು, ಬಬ್ಬುಕಟ್ಟೆ ಇಲ್ಲಿನ ಇಕೋ-ಕ್ಲಬ್ ವಿಭಾಗ ಮತ್ತು ಸೆಂಟರ್ ಫಾರ್ ಎನ್ವಿರಾನ್ ಮೆಂಟಲ್ ಸ್ಟಡಿಸ್, ಯೇನೆಪೊಯ ಯೂನಿವರ್ಸಿಟಿ, ದೇರಳಕಟ್ಟೆ ಇದರ ಸಹಯೋಗದಿಂದ ಕಾಲೇಜಿನ ವಠಾರದಲ್ಲಿ ವನಮಹೋತ್ಸವವು ನಡೆಯಿತು. ಕಾರ್ಯಕ್ರಮದಲ್ಲಿ ದೇರಳಕಟ್ಟೆ ಯೇನೆಪೊಯ ಯೂನಿವರ್ಸಿಟಿ ಸೆಂಟರ್ ಫಾರ್ ಎನ್ವಿರಾನ್ ಮೆಂಟಲ್ ಸ್ಟಡಿಸ್ ಅಸಿಸ್ಟೆಂಟ್ ಡೈರೆಕ್ಟರ್ ಡಾ| ಭಾಗ್ಯ ಬಿ. ಶರ್ಮಾ, ಸ್ಥಳೀಯ ಕೌನ್ಸಿಲರ್ ಮುಸ್ತಾಕ್ ಪಟ್ಲ, ಶಾಂತಿ ಎಜುಕೇಶನಲ್ ಟ್ರಸ್ಟ್ ಕಾರ್ಯದರ್ಶಿ ಅಬ್ದುಲ್ ಕರೀಮ್, ಕಾಲೇಜಿನ ಪ್ರಾಂಶುಪಾಲೆ ಭಾರತಿ ಎಂ. ಆರ್., ಮೌಲ್ಯ ಶಿಕ್ಷಣ ವಿಭಾಗ ಮುಖ್ಯಸ್ಥೆ ಆಯಿಷಾ ಯು.ಕೆ. ಸಂಯೋಜಕಿ ಮುಬೀನ ಎಸ್. ಎಚ್.ಉಪಸ್ಥಿತರಿದ್ದರು.
UN NETWORKS ಹಿರಾ : ಹಿರಾ ಮಹಿಳಾ ಕಾಲೇಜು, ಬಬ್ಬುಕಟ್ಟೆ, ಇಲ್ಲಿನ ವಿದ್ಯಾರ್ಥಿನಿಯರಿಂದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿನಿಯರಿಗಾಗಿ ಫ್ರೆಶರ್ಸ್ ಡೇ ಕಾರ್ಯಕ್ರಮ ಮತ್ತು 2019-20 ನೇ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆಯ ಪ್ರತಿಜ್ಞಾಸ್ವೀಕಾರ ಕಾರ್ಯಕ್ರಮ ನಡೆಸಲಾಯಿತು. ಕಾಲೇಜಿನ ನಾಯಕಿಯಾಗಿ ವಿದ್ಯಾರ್ಥಿನಿ ಹಲೀಮ ರುಝ್ಮಿ , ಉಪನಾಯಕಿಯಾಗಿ ಶಮ್ರೀನ್ ಆಯ್ಕೆಗೊಂಡರು. ಪ್ರಾಂಶುಪಾಲೆ ಭಾರತಿ ಎಂ.ಆರ್. ಅವರ ನೇತೃತ್ವದಲ್ಲಿ ಕ್ಯಾಬಿನೆಟ್ ಸದಸ್ಯರು ಪ್ರಮಾಣವಚನ ಸ್ವೀಕರಿಸಿದರು. ಫ್ರೆಶರ್ಸ್ ಡೇ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಹೊಸ ವಿದ್ಯಾರ್ಥಿನಿಯರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶವನ್ನು ಮಾಡಿಕೊಡಲಾಯಿತು. ವಿದ್ಯಾರ್ಥಿನಿ ರಹೀಮ ಮತ್ತು ಅಶ್ವಿನಾ ಶಿರಿನ್ ರವರು ಕಿರಾತ್ ಪಠಿಸಿದರು. ಹವರನ್ಯ ಕಾರ್ಯಕ್ರವi ನಿರೂಪಿಸಿದರು.
UN NETWORKS ಉಳ್ಳಾಲ : ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಮತ್ತು ಮದನಿ ಪ.ಪೂ ಕಾಲೇಜು ಅಳೇಕಲ ಹಾಗೂ ಮದನಿ ಎಜುಕೇಶನಲ್ ಅಸೋಸಿಯೇಷನ್, ಅಳೇಕಲ, ಉಳ್ಳಾಲ ಇವರ ಜಂಟಿ ಆಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮವು ಅಳೇಕಲ ಮದನಿ ಪ.ಪೂ ಕಾಲೇಜಿನಲ್ಲಿ ನಡೆಯಿತು. ಮದನಿ ಪ.ಪೂ ಕಾಲೇಜು ಹಾಗೂ ಪ್ರೌಢ ಶಾಲಾ ಸಂಚಾಲಕ ಯು.ಎನ್. ಇಬ್ರಾಹಿಂ ವಿದ್ಯಾರ್ಥಿಗಳಿಗೆ ಸಸಿಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಮದನಿ ಪ.ಪೂ.ಕಾಲೇಜಿನ ಪ್ರಾಂಶುಪಾಲ ಇಸ್ಮಾಯಿಲ್ ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಟಿ.ಆರ್.ಎಫ್ ಅಧ್ಯಕ್ಷ ರಿಯಾಝ್ ಕಣ್ಣೂರು, ಮದನಿ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಪಿ ಇಬ್ರಾಹಿಂ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಜಯಂತಿ ಉಪಸ್ಥಿತರಿದ್ದರು.ಟಿ.ಆರ್.ಎಫ್ ಸಲಹೆಗಾರ ರಫೀಕ್ ಮಾಸ್ಟರ್ ವನಮಹೋತ್ಸವದ ಮಹತ್ವದ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕ ಹಬೀಬ್ ರಹ್ಮಾನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಾರೀರಿಕ ಶಿಕ್ಷಣ ಉಪನ್ಯಾಸಕ ಅಶ್ರಫ್ ವಂದಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪನ್ಯಾಸಕ ವರ್ಗ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದು, ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಮನೆಯಲ್ಲಿ ನೆಟ್ಟು ಬೆಳೆಸಲು…
UN NETWORKS ಕೋಟೆಕಾರು: ಹಠಾತ್ ಆಗಿ ಬೀಸಿದ ಸುಂಟರಗಾಳಿಗೆ ಕಟ್ಟಡಗಳ ಶೀಟುಗಳು ಹಾರಿಹೋಗಿ, ಮೂರು ಕಾರುಗಳಿಗೆ ಹಾನಿಗೊಂಡಿರುವ ಘಟನೆ ಮಂಗಳವಾರ ಮುಂಜಾನೆ ವೇಳೆ ಕೋಟೆಕಾರು ಬೀರಿ ಸಮೀಪ ಸಂಭವಿಸಿದೆ. ಐದು ನಿಮಿಷಗಳ ಕಾಲ ಕೋಟೆಕಾರು ಬೀರಿ ಸಮೀಪ ಸುಂಟರಗಾಳಿ ಸುತ್ತಿದೆ. ಹೊರಗಿದ್ದ ಜನರನ್ನು ದೂಡುವಂತಹ ರಭಸದಲ್ಲಿ ಬೀಸಿದ ಗಾಳಿಯಿಂದಾಗಿ ಬೀರಿಯ ರಾಷ್ಟ್ರೀಯ ಹೆದ್ದಾರಿ ಸಮೀಪದ ಒಂದು ವಿದ್ಯುತ್ ಕಂಬ, ಅಂಬೇಡ್ಕರ್ ಕೈಗಾರಿಕಾ ಸಂಘದ ಕಟ್ಟಡದ ಶೀಟ್ ಹಾರಿಹೋಗಿದೆ. ಸುಮಾರು 100 ಮೀ. ವರೆಗೂ ಹಾರಿದ ಶೀಟ್ ಸರಕಾರಿ ಶಾಲೆಯ ಕಂಪೌಂಡಿನೊಳಕ್ಕೆ ಬಿದ್ದಿದೆ. ಅದೃಷ್ಟವಶಾತ್ ಸಮಯ ಬೆಳಿಗ್ಗೆ 7.30 ಆಗಿದ್ದರಿಂದಾಗಿ ಶಾಲೆಯಲ್ಲಿ ಯಾರೂ ಇರಲಿಲ್ಲ. ಅಲ್ಲೇ ಸಮೀಪದಲ್ಲಿರುವ ಸಿಮೆಂಟ್ ಅಂಗಡಿ, ಕರಿಕಲ್ಲಿನ ಅಂಗಡಿ, ಕ್ಯಾಂಟೀನ್ ಕಟ್ಟಡಗಳ ಶೀಟುಗಳು ಹಾರಿ ಹೋಗಿ ವ್ಯಾಪಕ ಹಾನಿ ಹಾಗೂ ನಷ್ಟ ಸಂಭವಿಸಿದೆ. ರಸ್ತೆ ಬದಿಯ ಭಗವತಿ ರೆಸಿಡೆನ್ಸ್ ಕಟ್ಟಡದ ಕೆಳಗೆ ನಿಲ್ಲಿಸಲಾಗಿದ್ದ ಮೂರು ಕಾರುಗಳ ಮೇಲೆ ಹಾರಿದ ಶೀಟುಗಳು ಬಿದ್ದ ಪರಿಣಾಮ ಮೂರು ಕಾರುಗಳು ಜಖಂಗೊಂಡಿವೆ. ಘಟನೆಯಿಂದಾಗಿ…

