UN NETWORKS
ಮಂಗಳೂರು : “ರಾಷ್ಟ್ರೀಯ ದಂತ ವೈದ್ಯರ ದಿನಾಚರಣೆ’ ಪ್ರಯುಕ್ತ ಮಂಗಳೂರಿನ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ವತಿಯಿಂದ ಮಂಗಳೂರಿನ ಕಾಪಿಕಾಡಿನಲ್ಲಿರುವ ಬಿಜೈ ಕಾಪಿಕಾಡಿನ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತ ದಂತ ಆರೋಗ್ಯ ಮಾಹಿತಿ ಶಿಬಿರ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಚೂಂತಾರು ಸರೋಜಿನಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಮುರಲೀ ಮೋಹನ್ ಚೂಂತಾರು ದೇಹದ ಆರೋಗ್ಯಕ್ಕೆ ದಂತದ ಆರೋಗ್ಯ ಅತೀ ಅವಶ್ಯಕ. ಬೆಳೆಯುವ ಮಕ್ಕಳು ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಂಡರೆ ಪರಿಪೂರ್ಣ ದೈಹಿಕ ಆರೋಗ್ಯಕ್ಕೆ ಪೂರಕ ವಾತವಾರಣ ಸೃಷ್ಠಿಯಾಗಿ ಆರೋಗ್ಯವಂತ ಮಕ್ಕಳು ಹುಟ್ಟಿಕೊಳ್ಳುತ್ತಾರೆ. ಆರೋಗ್ಯವಂತ ಮಕ್ಕಳೇ ದೇಶದ ಆಸ್ತಿ. ಆ ಕಾರಣದಿಂದ ದಂತ ಆರೋಗ್ಯವನ್ನು ನಿರ್ಲಕ್ಷಿಸಬೇಡಿ ಎಂದು ಮಕ್ಕಳಿಗೆ ಸಲಹೆ ನೀಡಿದರು.ಮುಖ್ಯ ಶಿಕ್ಷಕಿ ಪಾವನಾ, ಶಿಕ್ಷಕರುಗಳಾದ ಜಯಲಕ್ಷ್ಮಿ ಎ, ಅರುಣಾ ಕುಮಾರಿ, ಸಿಸಿಲಿಯಾ ಹಾಗೂ ಜಗದೀಶ ನಾವಡ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 35 ಮಕ್ಕಳಿಗೆ ಉಚಿತವಾಗಿ ಟೂತ್ಪೇಸ್ಟ್ ಮತ್ತು ಮೌತ್ವಾಶ್ಗಳನ್ನು ಹಂಚಲಾಯಿತು.


