Author: UllalaVani

Kannada News From Coastal Karnataka

UN NETWORKS ಉಳ್ಳಾಲ : ಯುವತಿಯೋರ್ವಳು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾಡೂರು ಕಾಯರ್ ಮಜಲ್ ಸಮೀಪ ಭಾನುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಕಾಯರ್ ಮಜಲು ನಿವಾಸಿ ವಿಠಲ ಮತ್ತು ಚಂದ್ರಾವತಿ ದಂಪತಿ ಪುತ್ರಿ ದಿವ್ಯಾ(22) ಆತ್ಮಹತ್ಯೆಗೈದ ಯುವತಿ. ಶನಿವಾರ ತಡರಾತ್ರಿ ವೇಳೆ ಮನೆಯ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ನಡೆಸಿದ್ದಾರೆ.ಶನಿವಾರ ಆಸ್ಪತ್ರೆಗೆ ತೆರಳಿದ್ದ ದಿವ್ಯಾ, ಅನಾರೋಗ್ಯದ ಕುರಿತು ವೈದ್ಯರ ಸಲಹೆ ಪಡೆದುಕೊಂಡು ವಾಪಸ್ಸಾಗಿದ್ದಳು. ಆ ಬಳಿಕ ಮಂಕಾಗಿದ್ದಳು. ಬಿಳಿ ರಕ್ತದ ಕಣಗಳು ಜೀವದಲ್ಲಿ ಹೆಚ್ಚಿವೆ ಅನ್ನುವ ಕಾರಣದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರ ದೂರಿನಲ್ಲಿ ತಿಳಿಸಲಾಗಿದೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

UN NETWORKS ಕೊಣಾಜೆ : ವಿದ್ಯಾರ್ಥಿಗಳೊಂದಿಗೆ ಹಳ್ಳಿಯ ಜನರೂ ಜತೆಗೂಡಿದಾಗ ಅಳಿಯುತ್ತಿರುವ ಕೃಷಿ ಸಂಸ್ಕೃತಿ ಉಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ಕೊಣಾಜೆ ಗ್ರಾಮೋತ್ಸವವು ಯಶಸ್ವಿಯಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ| ಪಿ.ಎಸ್‌. ಎಡಪಡಿಯತ್ತಾಯ ಹೇಳಿದರು. ಮಂಗಳೂರು ವಿಶ್ವವಿದ್ಯಾಲಯ, ಕೊಣಾಜೆ ಗ್ರಾ.ಪಂ., ಮಂಗಳಾ ಗ್ರಾಮೀಣ ಯುವಕ ಸಂಘ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಮಂಗಳೂರು ವಿವಿ ಎನ್‌ಎಸ್‌ಎಸ್‌ ಘಟಕ ಇವುಗಳ ಸಂಯುಕ್ತಾಶ್ರಯದಲ್ಲಿ ಕೊಣಾಜೆ ಕಲ್ಲಿಮಾರ್‌ ಗದ್ದೆಯಲ್ಲಿ ಎರಡು ದಿನ ನಡೆಯಲಿರುವ “ಕೊಣಾಜೆ ಗ್ರಾಮೋತ್ಸವ-2019 ‘ಉದ್ಘಾಟಿಸಿ ಮಾತನಾಡಿದರು.ಗ್ರಾಮೀಣ ಭಾಗದ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಮಂಗಳೂರು ವಿಶ್ವವಿದ್ಯಾನಿಲಯ ಸಮರ್ಥವಾಗಿ ಅರ್ಥಮಾಡಿಕೊಳ್ಳಬೇಕು, ಮುಂದಿನ ದಿನಗಳಲ್ಲಿ ಎಲ್ಲ ಕಾಲೇಜು ವಿದ್ಯಾರ್ಥಿಗಳ ನಡೆ ರೈತರ ಕಡೆಗಿರಲಿ ಎಂದರು. ಗ್ರಾಮೋತ್ಸವ ಸಮಿತಿಯ ಅಧ್ಯಕ್ಷ ಪ್ರಸಾದ್‌ ರೈ ಕಲ್ಲಿಮಾರ್‌ ಅಧ್ಯಕ್ಷತೆ ವಹಿಸಿ, ಯುವವಿದ್ಯಾರ್ಥಿಗಳು, ಯುವ ಸಮುದಾಯಕ್ಕೆ ಕೃಷಿ, ಗ್ರಾಮೀಣ ಬದುಕು ಪರಿಚಯಿಸುವುದು, ಸಾಮರಸ್ಯದ ಜೀವನಕ್ಕೆ ಆದ್ಯತೆ ನೀಡಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ಕೊಣಾಜೆ ಗ್ರಾ.ಪಂ.…

Read More

UN NETWORKS ತಲಪಾಡಿ : ಲಾರಿ ಕಂಟೈನರ್ ಒಳಗಡೆ ಹಿಂಸಾತ್ಮಕವಾಗಿ ಸಾಗಾಟ ನಡೆಸುತ್ತಿದ್ದ 22 ಎಮ್ಮೆ ಮತ್ತು ಕೋಣಗಳನ್ನು  ಉಳ್ಳಾಲ ಪೊಲೀಸರು ಭಾನುವಾರ ನಸುಕಿನ ಜಾವ ತಲಪಾಡಿ ಬಳಿ ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣ ಸಂಬಂಧ  ಮೂವರನ್ನು ಬಂಧಿಸಲಾಗಿದ್ದು, ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಹಾಸನ ನಿವಾಸಿ ಚಿಂದೇಗೌಡ, ಕಾಸರಗೋಡು ನಿವಾಸಿ ರವೀಂದ್ರನ್ ಮತ್ತು ಮಹಮ್ಮದ್ ಫಾರೂಕ್ ಬಂಧಿತರು.ಆರೋಪಿಗಳು ಘಟ್ಟದ ಭಾಗದಿಂದ   ಜಾನುವಾರುಗಳನ್ನು ಕಳವು ನಡೆಸಿ, ಅಕ್ರಮವಾಗಿ ಲಾರಿ ಕಂಟೈನರ್ ನಲ್ಲಿ ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿ  ಸಾಗಾಟ ನಡೆಸುತ್ತಿದ್ದರು. ಕೇರಳ ಕಡೆಗೆ ಸಾಗಾಟ ನಡೆಸುತ್ತಿದ್ದರು.  ಈ ಕುರಿತು ಖಚಿತ ಮಾಹಿತಿ ಪಡೆದ ಉಳ್ಳಾಲ ಠಾಣಾಧಿಕಾರಿ ನೇತೃತ್ಬದ ಪೊಲೀಸರ ತಂಡ ತಲಪಾಡಿ ಸಮೀಪ ಪರಿಶೀಲನೆ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಪರಾರಿಯಾದ ಆರೋಪಿಗಳಿಗಾಗಿ ಉಳ್ಳಾಲ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.

Read More

UN NETWORKS ದೇರಳಕಟ್ಟೆ : ಸಮಾಜದಲ್ಲಿರುವ ಅಶಕ್ತ ತಾಯಂದಿರ ಆರೈಕೆ ಮಾಡುವ ಮೂಲಕ ಲಯನ್ಸ್ ಸೇವಾಶ್ರಮ ಉತ್ತಮ ಕಾರ್ಯ ನಡೆಸುತ್ತಿದ್ದು, ಸರಕಾರದಿಂದ ಸಿಗುವ ಸವಲತ್ತುಗಳನ್ನು ನೀಡುವ ಕಾರ್ಯವನ್ನು ಮಾಡಲಾಗುವುದು ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು. ಮಂಗಳೂರಿನ ಸೇವಾಬಾವ ಚಾರಿಟೇಬಲ್ ಟ್ರಸ್ಟ್ ಆಶ್ರಯದ ದೇರಳಕಟ್ಟೆ ಬೆಳ್ಮದ ಸೇವಾಶ್ರಮದಲ್ಲಿ ಎಂಆರ್‍ಪಿಎಲ್ ವತಿಯಿಂದ ನಿರ್ಮಾಣಗೊಂಡಿರುವ ತಡೆಗೋಡೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕಳೆದ ಹಲವು ವರ್ಷಗಳಿಂದ ಸೇವಾಶ್ರಮ ಉತ್ತಮ ಕಾರ್ಯವನ್ನು ನಡೆಸುತ್ತಾ ಬಂದಿದೆ. ಸೇವಾಶ್ರಮ ನಿವಾಸಿಗಳ ಆಧಾರ್ ಕಾರ್ಡ್ ಇದ್ದಲ್ಲಿ ಅವರಿಗೆ ಆಹರ ಪದಾರ್ಥಗಳು ಸರಕಾರದಿಂದ ದೊರೆಯುತ್ತದೆ. ಆ ನಿಟ್ಟಿನಲ್ಲಿ ಎಲ್ಲರ ಆಧಾರ್ ಕಾರ್ಡ್ ಮಾಡಿ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಸೇವಾಶ್ರಮದ ಮ್ಯಾನೆಜಿಂಗ್ ಟ್ರಸ್ಟಿ ಡಾ. ಜಿ.ಆರ್. ಶೆಟ್ಟಿ ಮಾತನಾಡಿ ಕಳೆದ 6ವರ್ಷಗಳಿಂದ ಟ್ರಸ್ಟಿಗಳ ಮತ್ತು ದಾನಿಗಳ ಸಹಕಾರದಲ್ಲಿ ಸೇವಾಶ್ರಮವನ್ನು ನಡಡೆಸಿಕೊಂಡು ಬರುತ್ತಿದ್ದು, ಆಶ್ರಮದ ತಡೆಗೋಡೆ ನಿರ್ಮಾಣಕ್ಕೆ ಎಂಆರ್‍ಪಿಎಲ್ ಸಹಾಯಧನ ನೀಡಿದ್ದು, ಅದರೊಂದಿಗೆ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಕೊಳವೆ ಬಾವಿ ಕೊರೆಸಲಾಗಿದ್ದು…

Read More

UN NETWORKS ದೇರಳಕಟ್ಟೆ : ದೇರಳಕಟ್ಟೆಯ ಯೇನೆಪೊಯ ಮೆಡಿಕಲ್ ಕಾಲೇಜು ಆಸ್ಪತ್ರೆ ವತಿಯಿಂದ ಸಮುದಾಯದೊಂದಿಗೆ ಸಂವಾದ ಕಾರ್ಯಕ್ರಮ ದೇರಳಕಟ್ಟೆ ಶಾಂತಿಭಾಗ್ ಅನ್ಸಾರುಲ್ ಜುಮ್ಮಾ ಮಸ್ಜಿದ್ ವಠಾರದಲ್ಲಿ ನಡೆಯಿತು. ಸ್ಥಳೀಯ ಸಾಮಾಜಿಕ ಮುಂದಾಳು ಮುನೀರ್ ಬಾವಾ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಯೇನೆಪೊಯ ಆಸ್ಪತ್ರೆಯಲ್ಲಿ ರೋಗಿಗಳಿಗೆ ದೊರೆಯುವಂತಹ ಸೌಲಭ್ಯಗಳೊಂದಿಗೆ ಸಮಾಜಕ್ಕೆ ಇನ್ನೂ ಉತ್ತಮವಾದ ಆರೋಗ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಹಾಗೂ ಆಸ್ಪತ್ರೆಯೊಂದಿಗೆ ಉತ್ತಮ ಬಾಂದವ್ಯ ಬೆಳೆಸಿಕೊಳ್ಳುವ ಕುರಿತು ನೆರೆದವರ ಜೊತೆಗೆ ಚರ್ಚಿಸಲಾಯಿತು. ಕಾರ್ಯಕ್ರಮದಲ್ಲಿ ಶಾಂತಿಭಾಗ್ ದಾರುಸ್ಸಲಾಂ ಜುಮ್ಮಾ ಮಸ್ಜಿದ್ ಅಧ್ಯಕ್ಷ ಮೊಹಮ್ಮದ್ ಪರಪ್ಪು, ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ಸಂಘ ಸಂಸ್ಥೆಗಳ ಮುಖ್ಯಸ್ಥರುಗಳು ಮತ್ತು ಯೇನೆಪೊಯ ಆಸ್ಪತ್ರೆಯ ವತಿಯಿಂದ ಆಸ್ಪತ್ರೆಯ ಸಹಾಯಕ ವೈದ್ಯಕೀಯ ಅೀಕ್ಷಕ ಡಾ. ನಾಗರಾಜ ಶೇಠ್, ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಡಾ. ಮೊಹಮ್ಮದ್ ಗುತ್ತಿಗಾರ್, ಆಸ್ಪತ್ರೆಯ ಅಧೀಕ್ಷಕ ಪ್ರವೀಣ್ ಕುಮಾರ್, ಆಸ್ಪತ್ರೆಯ ಸಹಾಯಕ ಆಡಳಿತಾಕಾರಿ ಮುಹಮ್ಮದ್ ಸಾಬಿತ್, ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ವಿಜಯಾನಂದ ಶೆಟ್ಟಿ, ಉಮ್ಮರ್ ಶಾಫಿ ಹಾಗೂ…

Read More

UN NETWORKS ಕೈರಂಗಳ : ಕೈರಂಗಳದ ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ ಪಠ್ಯೇತರ ಚಟುವಟಿಕೆಗಳ ಹಾಗೂ ಶಾಲಾ ಸಂಸತ್ತಿನ ಉದ್ಘಾಟನೆ ನಡೆಯಿತು. ಮಂಗಳೂರು ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು ಅಧ್ಯಕ್ಷತೆ ವಹಿಸಿ ಮಾತನಾಡಿ ಭವಿಷ್ಯದ ನಾಯಕರಾಗಬಲ್ಲ ಮಕ್ಕಳು ಎಳವೆಯಲ್ಲಿಯೇ ಉತ್ತಮ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು. ಮಂಗಳೂರು ವಿಧಾನಸಭಾ ಕ್ಷೇತ್ರದ ಮಹಿಳಾ ಮೋರ್ಚ ಉಪಾಧ್ಯಕ್ಷೆ ಪೂರ್ಣಿಮಾ ಪುರಂದರ ಶೆಟ್ಟಿ ಮಕ್ಕಳು ಯಾವುದೇ ಕೆಟ್ಟ ಚಟಗಳಿಗೆ ಬಲಿಯಾಗದೇ ಸಾತ್ವಿಕ ಜೀವನ ನಡೆಸಬೇಕು ಎಂದರು. ಈ ವರ್ಷ ದಾಖಲಾದ ವಿದ್ಯಾರ್ಥಿಗಳನ್ನು ತಿಲಕವಿಟ್ಟು ಸ್ವಾಗತಿಸಲಾಯಿತು. ಶಾಲಾ ಪ್ರಿನ್ಸಿಪಾಲ್ ದಿವ್ಯದೀಪ ಶಾಲಾ ಸಂಸತ್ತಿನ ಸದಸ್ಯರಿಗೆ ಪ್ರಮಾಣವಚನ ಬೋಸಿದರು. ಮಾಧವ ಕೊಳತ್ತಮಜಲು ಮತ್ತು ಯಕ್ಷಧ್ರುವ ಪಟ್ಲ ಫೌಂಡೇಶನ್‍ನ ಪ್ರತಿನಿ ರಾಜೇಶ್ ಮಡಿವಾಳ ಉಪಸ್ಥಿತರಿದ್ದರು. ಶ್ರೀನಿವಾಸ ಭಟ್ ಸೇರಾಜೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಶ್ವತಿದುರ್ಗಾ ಸ್ವಾಗತಿಸಿದರು. ಶರಣ್ ಶೆಟ್ಟಿ ವಂದಿಸಿದರು. ಸ್ವಸ್ತಿ ಕಾರ್ಯಕ್ರಮ ನಿರೂಪಿಸಿದರು.

Read More

UN NETWORKS ತಲಪಾಡಿ : ತಲಪಾಡಿಯ ಶಾರದಾ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸೆಸ್ ಮತ್ತು ಇಕೋ ಕ್ಲಬ್ ವತಿಯಿಂದ ವನಮಹೋತ್ಸವವನ್ನು ಆಚರಿಸಲಾಯಿತು. ಕಾಲೇಜು ಆವರಣದಲ್ಲಿ ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್, ಪರಿಸರ ತಜ್ಞ ಎಲ್.ಎಸ್. ಹೆಗ್ಡೆ, ಪ್ರಾಂಶುಪಾಲ ಡಾ. ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್, ಆಡಳಿತಾಕಾರಿ ವಿವೇಕ್ ತಂತ್ರಿ, ವಿದ್ಯಾನಿಕೇತನ ಪ್ರಾಂಶುಪಾಲರುಗಳಾದ ಸುಷ್ಮಾ ದಿನಕರ್, ಲತಾಂಜಲಿ ರೈ ಗಿಡನೆಡುವುದರ ಮೂಲಕ ಚಾಲನೆ ನೀಡಿದರು.

Read More

UN NETWORKS ಮುಡಿಪು : ಮುಡಿಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ 2019-20ನೇ ಸಾಲಿನ ಕಾರ್ಯಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಮತ್ತು ಓರಿಯೆಂಟೇಶನ್ ಕಾರ್ಯಕ್ರಮ ಕಾಲೇಜಿನ ಸೆಮಿನಾರ್ ಹಾಲ್‍ನಲ್ಲಿ ನಡೆಯಿತು. ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಹಾಗೂ ಕೃಷ್ಣ ಮೂಲ್ಯ ಭಾಗವಹಿಸಿದ್ದರು. ವಾಮದಪದವು ಸರಕಾರಿ ಪದವಿ ಪೂರ್ವ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಮತ್ತು ರಾ.ಸೇ.ಯೋ ಕಾರ್ಯಕ್ರಮ ಅಧಿಕಾರಿ ದಯಾನಂದ್ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು.ವಿದ್ಯಾರ್ಥಿಗಳು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಲು ರಾ.ಸೇ.ಯೋ ಉತ್ತಮ ವೇದಿಕೆ ಎಂದು ಪ್ರಶಾಂತ ಕಾಜವ ಅಭಿಪ್ರಾಯಪಟ್ಟರು. ರಾ.ಸೇ.ಯೋ ಕಾರ್ಯಕ್ರಮ ಅಧಿಕಾರಿ ಶೋಭಾಮಣಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾವ್ಯಶ್ರೀ ಸ್ವಾಗತಿಸಿದರು. ದಾಕ್ಷಾಯಿಣಿ ಕಾರ್ಯಕ್ರಮ ನಿರೂಪಿಸಿದರು. ಗೌತಮ್ ರಾಜ್ ವಂದಿಸಿದರು.

Read More

UN NETWORKS ದೇರಳಕಟ್ಟೆ : ಪವಿತ್ರ ಹಜ್ ಯಾತ್ರೆಗೈಯುತ್ತಿರುವ ದೇರಳಕಟ್ಟೆಯ  ಬದ್ರಿಯ ಜುಮಾ ಮಸೀದಿ ಅಧೀನದ ಸಂಘಟನೆಯಾದ  ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ ನ ಅಧ್ಯಕ್ಷ ಇಲ್ಯಾಸ್  ಹಾಜಿ ಡಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯ ಮುಹಮ್ಮದ್ ಪುತ್ತುಬಾವ ರವರಿಗೆ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ ವತಿಯಿಂದ ಬೀಳ್ಕೊಡಿಗೆ ಸಮಾರಂಭ ದೇರಳಕಟ್ಟೆಯ ಅಸೋಸಿಯೇಶನ್ ಕಚೇರಿಯಲ್ಲಿ ನಡೆಯಿತು. ಹಯಾತುಲ್ ಇಸ್ಲಾಂ ಮದರಸ ಸದರ್ ಮುಹಲ್ಲೀಂ ಅಬ್ದುಲ್ಲಾ ಫೈಝಿ  ದುಅ ನೆರವೇರಿಸಿದರು. ಹಯಾತುಲ್ ಇಸ್ಲಾಂ ಮದರಸದ ಮುಅಲ್ಲೀಂ ಹಾರೀಸ್ ಬದ್ರಿ, ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಬ್ಬಾಸ್ ಹಾಜಿ ಡಿ,ಉಪಾಧ್ಯಕ್ಷ ಅಬ್ದುಲ್ ಅಝೀಝ್ ಎನ್,  ಕಾರ್ಯದರ್ಶಿ ಅಬ್ದುಲ್ಲ ಆರ್ ಅಹ್ಮದ್, ಜೊತೆ ಕಾರ್ಯದರ್ಶಿಗಳಾದ ಅಬ್ದುಲ‌್ ರಶೀದ್ ಡಿ.ಎಂ, ಅಬ್ದುಲ್ ಮುತ್ತಲೀಬ್, ಮದರಸ ಮ್ಯಾನೇಜ್ ಮೆಂಟ್ ದೇರಳಕಟ್ಟೆ ರೇಂಜ್ ಅಧ್ಯಕ್ಷ ಇಸ್ಮಾಯಿಲ್ ಹಾಜಿ, ಕೊಟೆಕಾರ್ ಪಟ್ಟಣ ಪಂಚಾಯತ್ ಸದಸ್ಯ ಮುಹಮ್ಮದ್ ಡಿ.ಎಂ, ಅನ್ಸಾರುಲ್ ಮುಸ್ಲಿಮಿನ್ ಕಾರ್ಯದರ್ಶಿ ಅಮೀರ್ ಹುಸೈನ್, ಕಾರ್ಯ ಕಾರಿ ಸಮಿತಿ ಸದಸ್ಯರಾದ ಅಬೂಬಕ್ಕರ್ ಪಿ, ಇಸ್ಮಾಯಲ್…

Read More

ಉಳ್ಳಾಲ : ಕೆ.ಬಿ ಅಬ್ದುಲ್ ಅಝೀಝ್ ಜಿ.ಜಿ (65) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ನಿಧನರಾದರು. 4ಗಂಡು 5ಹೆಣ್ಣು ಮಕ್ಕಳು ಹಾಗೂ  ಪತ್ನಿ  ಮತ್ತು ಬಂಧುಬಳಗವನ್ನು ಅಗಲಿದ್ದಾರೆ.ಇವರು ತರ್ಬಿಯತುಲ್ ಇಸ್ಲಾಂ ಮದರಸ ಸಮಿತಿಯ ಮಾಜಿ ಅಧ್ಯಕ್ಷರಾಗಿ, ಕಿನ್ಯ ಬುಖಾರಿ ಜುಮಾ ಮಸೀದಿಯ ಕೋಶಾಧಿಕಾರಿ, ರೆಂಜಾಡಿ ಜುಮಾ ಮಸೀದಿ ಸಮಿತಿಯ‌ ಸದಸ್ಯರಾಗಿ ಹಾಗೂ ಹಲವು ಸುನ್ನಿ ಸಂಘನೆಗಳಲ್ಲಿ ತನ್ನನುತಾನು ತೊಡಗಿಸಿಕೊಂಡರು.

Read More