UN NETWORKS ಅಸೈಗೋಳಿ : ಕೊಣಾಜೆಯ ಅಸೈಗೋಳಿ ಬಳಿ ಗುರುವಾರ ರಾತ್ರಿ ಸಂಭವಿಸಿದ್ದ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಪಿ.ಎ. ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಮಹಮ್ಮದ್ ಸವಾದ್ (23) ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅಸೈಗೋಳಿ ಪುಲ್ಲು ನಿವಾಸಿಯಾಗಿದ್ದ ಮಹಮ್ಮದ್ ಸವಾದ್ ಅಸೈಗೋಳಿಯಿಂದ ಹಾಲು ತೆಗೆದುಕೊಂಡು ಬೈಕಿನಲ್ಲಿ ಮನೆಗೆ ಮರಳುತ್ತಿದ್ದಾಗ ಅಸೈಗೋಳಿ ಜಂಕ್ಷನ್‌ನಿಂದ 100 ಮೀ. ದೂರದಲ್ಲಿ ಅಪಘಾತ ಸಂಭವಿಸಿದೆ. ಇವರ ಬೈಕ್ ಮತ್ತು ದೇರಳಕಟ್ಟೆ ಕಡೆಯಿಂದ ಕೊಣಾಜೆ ಕಡೆ ಬರುತ್ತಿದ್ದ ಬೈಕ್ ಮುಖಾಮುಖೀ ಢಿಕ್ಕಿಯಾಗಿತ್ತು. ಪರಿಣಾಮ ಸವಾದ್ ತಲೆಗೆ ಗಂಭೀರ ಗಾಯವಾಗಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇನ್ನೊಂದು ಬೈಕಿನಲ್ಲಿದ್ದ ಇಬ್ಬರು ಸವಾರರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದರು.ಸವಾದ್ ಸ್ಥಿತಿ ಉಲ್ಬಣಿಸಿದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಶುಕ್ರವಾರ ಕೊನೆಯುಸಿರೆಳೆದರು. ಜಿಲ್ಲಾ ವಕ್ಫ್ ಸಮಿತಿ ಸದಸ್ಯ ಸುಲೈಮಾನ್ ಪುಲ್ಲು ಅವರ ಏಕೈಕ ಪುತ್ರನಾಗಿದ್ದ ಸವಾದ್ ಅವರು ಪಿ.ಎ.ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ಡಿಪ್ಲೊಮಾ ವಿದ್ಯಾರ್ಥಿಯಾಗಿದ್ದರು. ಅವರು ತಂದೆ,…
Author: UllalaVani
UN NETWORKS ತೊಕ್ಕೊಟ್ಟು : ತಾಯಿ ಉತ್ತರಕ್ರಿಯೆಯ ತಯಾರಿಯಲ್ಲಿದ್ದ ಮಗ ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಘಟನೆ ತೊಕ್ಕೊಟ್ಟು ಪಂಡಿತ್ ಹೌಸ್ ಸಮೀಪ ಗುರುವಾರ ತಡರಾತ್ರಿ ವೇಳೆ ನಡೆದಿದೆ.ಚೆಂಬುಗುಡ್ಡೆ ಎಸ್.ಸಿ ಕಾಲನಿ ನಿವಾಸಿ ಮುಕೇಶ್ (22) ಗಾಯಗೊಂಡವರು. ತಾಯಿ ಉತ್ತರಕ್ರಿಯೆಯ ರಾತ್ರಿ ಕಾರ್ಯಕ್ರಮದ ತಯಾರಿಯಲ್ಲಿದ್ದ ಮುಕೇಶ್ ಚೆಂಬುಗುಡ್ಡೆ ಕಡೆಯಿಂದ ಕುತ್ತಾರು ಕಡೆಗೆ ತೆರಳುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿದೆ. ಖಾಸಗಿ ಬಸ್ಸೊಂದು ಮುಕೇಶ್ ತೆರಳುತ್ತಿದ್ದ ಸ್ಕೂಟರ್ ಗೆ ಢಿಕ್ಕಿ ಹೊಡೆದು ಗಾಯಗೊಂಡಿದ್ದಾರೆ.ಕಾಲಿಗೆ ಗಾಯಗೊಂಡಿರುವ ಮುಕೇಶ್ ಸ್ಥಳೀಯ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
UN NETWORKS ಮುಡಿಪು : ಮುಡಿಪು ಕೈಗಾರಿಕಾ ಪ್ರದೇಶದಲ್ಲಿ ದೊಡ್ಡ ಗಾತ್ರದ ಕಾಡುಕೋಣವೊಂದು ಪ್ರತ್ಯಕ್ಷವಾಗಿದೆ.ಗುರುವಾರ ಹಗಲು ಹೊತ್ತಿನಲ್ಲೇ ರಸ್ತೆ ದಾಟುತ್ತಿರುವ ದೃಶ್ಯವನ್ನು ಸ್ಥಳೀಯರು ಸೆರೆಹಿಡಿದಿದ್ದಾರೆ.
UN NETWORKS ಉಳ್ಳಾಲ : ಕರಾವಳಿ ಜಿಲ್ಲೆಗಳಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿದ್ದು, ಮಾರಣಾಂತಿಕ ಜ್ವರಕ್ಕೆ ನಗರದ ಏಳನೇ ತರಗತಿಯ ಬಾಲಕಿಯೋರ್ವಳು ಬಲಿಯಾದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ. ಮಂಗಳೂರಿನ ಜಪ್ಪು – ಮೋರ್ಗನ್ ಗೇಟ್ ನಿವಾಸಿ ಕಿಶೋರ್ ಶೆಟ್ಟಿಯವರ ದ್ವಿತೀಯ ಪುತ್ರಿ ಶ್ರದ್ಧಾ ಡೆಂಗ್ಯೂ ಜ್ವರದಿಂದ ಮೃತಪಟ್ಟ ಘಟನೆ ನಡೆದಿದೆ. ಶ್ರದ್ಧಾ ನಗರದ ಥೆರೆಸಾ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಕಲಿಯುತ್ತಿದ್ದರು.ಶ್ರದ್ಧಾಳ ಸಹೋದರಿ ಕೂಡಾ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ.
UN NETWORKS ಉಳ್ಳಾಲ : ಯುನೈಟೆಡ್ ಬ್ರದರ್ಸ್ ಚಂದಹಿತ್ಲು ಇದರ ವತಿಯಿಂದ, ಈ ವರ್ಷ ಪವಿತ್ರ ಹಜ್ ಯಾತ್ರೆ ಕೈಗೊಳ್ಳುತ್ತಿರುವ ಸಂಘಟನೆಯ ಅಧ್ಯಕ್ಷರಾದ ಹನೀಫ್ ಶೈನ್ ಅವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಯುನೈಟೆಡ್ ಬ್ರದರ್ಸ್ ಚಂದಹಿತ್ಲು ಎಂಬ ಸಂಘಟನೆಯು ಉಳ್ಳಾಲ ಮೊಂಟೆಪದವು ಹತ್ತಿರವಿರುವ ಚಂದಹಿತ್ಲು ವಿನ ಕುಟುಂಬದ ಒಕ್ಕೂಟವಾಗಿದ್ದು ಹಲವು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ನರಿಂಗಾನ ಗ್ರಾಮ ಪಂಚಾಯತ್ ಸದಸ್ಯರಾದ ರಹ್ಮಾನ್ ಚಂದಹಿತ್ಲು, ಸಂಘಟನೆಯ ಕಾರ್ಯದರ್ಶಿ ಶಾಕೀರ್ ಚಂದಹಿತ್ಲು, ಕೋಶಾಧಿಕಾರಿ ಅಬ್ಬಾಸ್ NH ಮೊಂಟೆಪದವು, ಹೈದರ್ ಮೊಂಟೆಪದವು, ಖಲೀಲ್ ಮೊಂಟೆಪದವು, ಅಯ್ಯೂಬ್ ಮೂಡಿಗೆರೆ, ಅಬ್ಬಾಸ್ ಆಸರ್, ಅಶ್ರಫ್ ಕೊಡೆಂಚಿಲ್, ಸಿದ್ಧೀಕ್ ಮಜಲು, ಸಿರಾಜ್ ಕಿನ್ಯಾ ಮತ್ತು ಇತರರು ಉಪಸ್ಥಿತರಿದ್ದರು.
UN NETWORKS ದೇರಳಕಟ್ಟೆ : ದೇರಳಕಟ್ಟೆಯ ನಿಟ್ಟೆ ಸಮೂಹ ಸಂಸ್ಥೆಯ ಅಂಗ ಸಂಸ್ಥೆಯಾಗಿರುವ ಡಾ. ನಿಟ್ಟೆ ಶಂಕರ ಅಡ್ಯಂತಾಯ ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ಡಾ. ನವೀನ್ ಶೆಟ್ಟಿ ಕೆ. ಅಧಿಕಾರ ವಹಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಡಾ. ನವೀನ್ ಶೆಟ್ಟಿಯವರು ನಗರದ ಮಹೇಶ್ ಪದವಿ ಪೂರ್ವ ಕಾಲೇಜಿನಲ್ಲಿ ನಿರ್ದೇಶಕ ಪಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ್ದರು.
UN NETWORKS ಉಳ್ಳಾಲ : ಬೈಕಿನಲ್ಲಿ ಬಂದ ಕಿರಾತಕರಿಬ್ಬರು ವೃದ್ಧೆ ಬಳಿಯಿದ್ದ ನಕಲಿ ಚಿನ್ನದ ಸರವನ್ನು ಎಗರಿಸಿ ಪರಾರಿಯಾದ ಘಟನೆ ಮಾಡೂರು ನಡಾರಿನ ಮಡ್ಯಾರ್ ಸಮೀಪ ಗುರುವಾರ ಸಂಭವಿಸಿದೆ. ಮಾಡೂರು ನಿವಾಸಿ ಸೀತಾ(65) ಎಂಬವರು ನಡಾರು ಬಳಿಯಿರುವ ಸಹೋದರಿ ಮನೆಗೆ ತೆರಳುತ್ತಿದ್ದರು. ಇದೇ ವೇಳೆ ಬೈಕಿನಲ್ಲಿ ಕಾಯುತ್ತಿದ್ದ ಇಬ್ಬರು ಯುವಕರು ಹಿಂಬದಿಯಿಂದ ಬಂದು ಸೀತ ಅವರ ಕತ್ತಿನಲ್ಲಿದ್ದ ಸರವನ್ನು ಕಸಿದು ಪರಾರಿಯಾಗಿದ್ದಾರೆ. ಆದರೆ ಸೀತ ಅವರ ಬಳಿ ಇದ್ದದ್ದು ನಕಲಿ ಚಿನ್ನವಾಗಿತ್ತು. ಕಳ್ಳರಿಬ್ಬರೂ ಚಿನ್ನ ಎಂದು ಕೊಂಡೊಯ್ದರೂ ಬಂದ ದಾರಿಗೆ ಸುಂಕವಿಲ್ಲ ಎಂಬಂತಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
UN NETWORKS ತೊಕ್ಕೊಟ್ಟು : ಬೆಳಗ್ಗಿನಿಂದ ಸುರಿದ ಭಾರೀ ಮಳೆಗೆ ತೊಕ್ಕೊಟ್ಟು ಜಂಕ್ಷನ್ ನಲ್ಲಿ ಕೃತಕ ನೆರೆಯಾಯಿತು. ಇದರಿಂದ ಫ್ಲೈಓವರ್ ಕೆಳಗಡೆ ತೆರಳುವ ವಾಹನ ಸವಾರರು ಪಾದಚಾರಿಗಳು ಪರದಾಡುವ ಸ್ಥಿತಿ ನಿರ್ಮಾಣವಾಯಿತು.ಗುರುವಾರ ಬೆಳಗ್ಗಿನಿಂದ ಎಡಬಿಡದೆ ಸುರಿದ ಮಳೆಯಿಂದಾಗಿ ತೊಕ್ಕೊಟ್ಟು ಜಂಕ್ಷನ್ ಇಡೀ ಜಲಾವೃತಗೊಂಡಿತು. ಸರ್ವಿಸ್ ರಸ್ತೆಯಲ್ಲಿಡೀ ಮೊಣಕಾಲುದ್ದಕ್ಕೆ ನೀರು ನಿಂತು ಪಾದಚಾರಿಗಳು ಪರದಾಡಬೇಕಾಯಿತು. ಫ್ಲೈಓವರ್ ಕೆಳಗಡೆಯಿಂದ ಸಂಚರಿಸುವ ವಾಹನ ಸವಾರರು ರಸ್ತೆಯಲ್ಲಿ ಹರಿದ ನೀರಿನಿಂದಾಗಿ ಪರದಾಡಬೇಕಾಯಿತು. ಅಸರ್ಮಪಕ ಚರಂಡಿ ನಿರ್ವಹಣೆ : ಭಟ್ನಗರದಿಂದ ತೊಕ್ಕೊಟ್ಟು ಹಾದುಹೋಗುವ ಚರಂಡಿ ಬ್ಲಾಕ್ ನಿಂದಾಗಿ ಸಮಸ್ಯೆ ಉದ್ಭವಿಸಿದೆ. ಚರಂಡಿ ತೆರವಿಗೆ ಉಳ್ಳಾಲ ನಗರಸಭೆ ಅಧಿಕೃತರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಮಾಡಬೇಕಾಗಿದೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿ ಯನ್ನು ನಿರ್ವಹಿಸುವ ಗುತ್ತಿಗೆ ಕಂಪೆನಿಯವರಿಗೂ ತೆರವುಗೊಳಿಸುವ ಜವಾಬ್ದಾರಿಯಿದೆ . ಆದರೆ ಸ್ಥಳೀಯಾಡಳಿತ ಕ್ರಮಕೈಗೊಂಡಲ್ಲಿ ರಾ.ಹೆ ಕೂಡಲೇ ಕ್ರಮಕೈಗೊಳ್ಳುತ್ತದೆ. ಆದರೆ ಈವರೆಗೂ ಸ್ಥಳೀಯ ಸದಸ್ಯರಾಗಲಿ, ನಗರಸಭೆ ಕಮೀಷನರ್ ಆಗಲಿ ಮನವಿ, ದೂರು ಸಲ್ಲಿಸದ ಹಿನ್ನೆಲೆಯಲ್ಲಿ ಸಮಸ್ಯೆ ಉದ್ಭವವಾಗಿದೆ ಅನ್ನುವುದು ಸ್ಥಳೀಯ…
UN NETWORKS ಕೊಣಾಜೆ : ತ್ಯಾಜ್ಯ ವಿಲೇವಾರಿಯ ಬಗ್ಗೆ ಮಾಹಿತಿ ಕೇಳಲು ತೆರಳಿದ್ದ ಕೊಣಾಜೆ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಹಾಗೂ ಪಂಚಾಯತ್ ಸದಸ್ಯನ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ ಫಾಸ್ಟ್‍ಫುಡ್ ಅಂಗಡಿ ನಡೆಸುತ್ತಿದ್ದ ಗೀತಾ ವಿರುದ್ಧವೂ ಪ್ರಕರಣ ದಾಖಲಾಗಿದ್ದು ಕೊಣಾಜೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಅಸೈಗೋಳಿಯಲ್ಲಿದ್ದ ಪಾಸ್ಟ್ ಫುಡ್ ಅಂಗಡಿಯ ತ್ಯಾಜ್ಯ ವಿಷಯಕ್ಕೆ ಸಂಬಂಧಿಸಿದಂತೆ ತಪಾಸಣೆ ನಡೆಸಲು ಬಂದಿದ್ದ ಕೊಣಾಜೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸವಿತಾ ಅವರಿಗೆ ಕರ್ತವ್ಯಕ್ಕೆ ಅಡ್ಡಿ ಹಾಗೂ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ರವಿ ಅಸೈಗೋಳಿ ಅವರಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯತೀಶ್ ಮತ್ತು ಸುರೇಂದ್ರ ಅವರ ಮೇಲೆ ಪ್ರಕರಣ ದಾಖಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಅಂಗಡಿ ಮಾಲಿಕರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಅನಧಿಕೃತ ಅಂಗಡಿ ತೆರವಿಗೆ ನಿರ್ಣಯ : ಫಾಸ್ಟ್ ಫುಡ್ ಅನಧಿಕೃತವಾಗಿದ್ದು ಅಂಗಡಿ ಮುಚ್ಚಿಸಲು ಪಂಚಾಯತ್‍ನಲ್ಲಿ ಬುಧವಾರ ನಡೆದ ತುರ್ತು ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಗೂಂಡಾ ಕಾಯ್ದೆ ದಾಖಲಿಸಲು ಮನವಿ : ಕೊಣಾಜೆ…
UN NETWORKS ತಲಪಾಡಿ : ಸರಕಾರಿ ಜಾಗ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಆರೋಪ ಪ್ರತ್ಯಾರೋಪಗಳೊಂದಿಗೆ ಗದ್ದಲದಲ್ಲಿ ಆರಂಭಗೊಂಡ ತಲಪಾಡಿ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡರೆ, ಮೊಬೈಲ್ ಟವರ್ ವಿಚಾರದಲ್ಲಿ ಗ್ರಾಮಸ್ಥರೊಬ್ಬರು ಆಧ್ಯಕ್ಷರ ಮತ್ತು ಪಂಚಾಯತ್ ಆಭಿವೃದ್ಧಿ ಅಧಿಕಾರಿ ವಿರುದ್ಧ ಗಂಭೀರ ಅರೋಪಕ್ಕೆ ಪಂಚಾಯಿತಿ ಅಧ್ಯಕ್ಷ ಸುರೇಶ್ ಆಳ್ವ ಸಾಂತ್ಯಗುತ್ತು ಅಸಮಾಧಾನ ವ್ಯಕ್ತಪಡಿಸಿ ಆರೋಪ ಮಾಡುವ ಸಂದರ್ಭ ಸಾಕ್ಷಿಯೂ ಜೊತೆಗಿರಲಿ ಎಂದು ತರಾಟೆಗೆ ತೆಗೆದುಕೊಂಡರು. ತಲಪಾಡಿ ಗ್ರಾಮ ಪಂಚಾಯಿತಿ ವಠಾರದಲ್ಲಿ ಗುರುವಾರ ನಡೆದ 2019-20ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿದ್ದರು.ಗ್ರಾಮದಲ್ಲಿ ಮೊಬೈಲ್ ಟವರ್ ನಿರ್ಮಾಣಕ್ಕೆ ಅನುಮತಿ ನೀಡಲು ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿ, ಲಂಚ ಪಡೆದಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ ಎಂದು ಅನುಮಾನ ವ್ಯಕ್ತಪಡಿಸಿದರು. ಈ ಆರೋಪ ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳಲ್ಲಿ ಆಕ್ರೋಶಕ್ಕೆ ಕಾರಣವಾಯಿತು. ನೀವು ಆಧಾರರಹಿತ ಆರೋಪ ಮಾಡುತ್ತಿದ್ದು, ಸಾಕ್ಷಿ ಸಹಿತ ಆರೋಪ ಸಾಬೀತುಪಡಿಸಿ. ಇಲ್ಲದಿದ್ದರೆ ನಾವು ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಪಿಡಿಓ…

