Author: UllalaVani

Kannada News From Coastal Karnataka

UN NETWORKS ತೊಕ್ಕೊಟ್ಟು : ಭಗತ್ ಸಿಂಗ್ ಸೇವಾ ಪ್ರತಿಷ್ಠಾನ ತೊಕ್ಕೊಟ್ಟು. ಇದರ ಆಶ್ರಯದಲ್ಲಿ ನಡೆದ ಗುರುಪೂರ್ಣಿಮೆಯ ಅಂಗವಾಗಿ ದೇರಳಕಟ್ಟೆಯ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಗುರುಸ್ವಾಮಿಯಾಗಿ ಧಾರ್ಮಿಕವಾಗಿ ತೊಡಗಿಸಿಕೊಂಡಿದ್ದ ಗುರುಸ್ವಾಮಿ ವಿಶ್ವನಾಥ್ ಕಾಯರ್‍ಪಳಿಕೆ ಅವರಿಗೆ ದೇರಳಕಟ್ಟೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುರುವಂದನೆ ನೀಡಿ ಗೌರವಿಸಲಾಯಿತು. ದೇರಳಕಟ್ಟೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ ಅಡ್ಯಂತಾಯ ಅವರು ಮುಖ್ಯ ಅತಿಥಿಯಾಗಿ ಬಾಗವಹಿಸಿ ಮಾತನಾಡಿ ದೇರಳಕಟ್ಟೆಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರುವಾರಿಗಳಲ್ಲಿ ಒಬ್ಬರಾದ ವಿಶ್ವನಾಥ್ ಕಾಯರ್‍ಪಳಿಕೆ ಅವರು ತನ್ನ ಮನೆಗಿಂತಲೂ ಹೆಚ್ಚಾಗಿ ದೇವಸ್ಥಾನದ ಅಭಿವೃದ್ದಿಯಲ್ಲಿ ತೊಡಗಿಸಿಕೊಂಡವರು. ಗುರುಸ್ವಾಮಿಯಾಗಿ ಅನೇಕ ಅಯ್ಯಪ್ಪ ಭಕ್ತರಿಗೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿರುವ ಅವರಿಗೆ ಗುರುವಂದನಾ ನೆರವೇರಿಸಿರುವುದು ಶ್ಲಾಘನೀಯ ಎಂದರು. ಕುಂಪಲ ಬಾಲಕೃಷ್ಣ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ ಮಾತನಾಡಿ ಭಗತ್‍ಸಿಂಗ್ ಪ್ರತಿಷ್ಠಾನದಂತಹ ಸಂಘಟನೆಯಿಂದ ಹಲವಾರು ಯುವ ಪ್ರತಿಭೆಗಳನ್ನು ಪೋಷಿಸಿದ ಇತಿಹಾಸವಿದ್ದು ಇದರೊಮದಿಗೆ ಸಮಾಜಿಕ ಕಾರ್ಯಗಳಿರಲಿ, ಪರಿಸರ ಸಂಬಂಧಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದೆ. ಗುರುಪೂರ್ಣಿಮೆಯ ಈ ಸಂದರ್ಭದಲ್ಲಿ…

Read More

UN NETWORKS ಹರೇಕಳ : ಪಾವೂರು-ಹರೇಕಳದ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ ಇತ್ತೀಚೆಗೆ ನಡೆಯಿತು. ಮಂಗಳೂರು ವಿಶ್ವವಿದ್ಯಾಲಯ ಇಂಗ್ಲೀಷ್ ವಿಭಾಗದ ಪ್ರಾಧ್ಯಾಪಕ ಡಾ. ರವಿಶಂಕರ್ ರಾವ್ ವಿವಿಧ ಸಂಘಗಳನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ತಮ್ಮಲ್ಲಿರುವ ಕೀಳರಿಮೆಯನ್ನು ಬಿಟ್ಟು ದೈರ್ಯದಿಂದ ತಮಗೆ ಒದಗಿ ಬರುವ ಅವಕಾಶಗಳನ್ನು ಉಪಯೋಗಿಸಿಕೊಂಡಾಗ ಸರಿಯಾದ ವ್ಯಕ್ತಿತ್ವ ನಿರ್ಮಿಸಿಕೊಳ್ಳಲು ಸಾಧ್ಯ ಎಂದರು. ಶಾಲಾ ಸಂಚಾಲಕ ಜಯರಾಮ ಆಳ್ವ ಪೋಡಾರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು. ಶಾಲಾ ಮುಖ್ಯ ಶಿಕ್ಷಕ ಕೆ. ರವೀಂದ್ರ ರೈ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿವಿಧ ಸಂಘಗಳ ಅಧ್ಯಕ್ಷ ಪದಾಧಿಕಾರಿಗಳಿಗೆ ಮುಖ್ಯ ಶಿಕ್ಷಕರು ಪ್ರತಿಜ್ಞಾ ವಿಧಿ ಬೋಧಿಸಿದರು. ಶಿಕ್ಷಕ ರಕ್ಷದ ಸಂಘದ ಅಧ್ಯಕ್ಷೆ ಜಯಶ್ರೀ ಹಾಗೂ ಅಧ್ಯಾಪಕರು ಉಪಸ್ಥಿತರಿದ್ದರು.ರಿತಿಕಾ, ದೀಕ್ಷಾ, ವೇದಾಕ್ಷಿ, ನಬಿಲ್, ಕೌಶಿಕ್, ಯಂಸೀನ, ಫಾತಿಮ ಶಿಫಾ ಹಾಗೂ ನವನೀತ್ ಪ್ರಮಾಣ ವಚನಗೈದರು. ಕಾರ್ಯಕ್ರಮದಲ್ಲಿ ಎಸ್‍ಎಸ್‍ಎಲ್‍ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಾದ ಸುಶ್ಮಿತಾ ಮತ್ತು ಶರಣ್ಯ ಅವರನ್ನು…

Read More

UN NETWORKS ಮುಡಿಪು : ದೇಶದಲ್ಲಿ ಅಪ್ರಾಪ್ತ ಬಾಲಕಿಯರಿಗೆ, ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುವ ಆರೋಪಿಗಳನ್ನು ಮಾನಸಿಕ ಅಸಸ್ವಸ್ಥ , ಹುಚ್ಚ ಎಂದು ನಿರೂಪಿಸಿ ಕಾನೂನಿನ ಕಟಕಟೆಗೆ ಹತ್ತಿಸುವ ಮೊದಲು ನಿರಪರಾಧಿ ಮಾಡುವ ಕಾರ್ಯ ನಡೆಯುತ್ತಿದ್ದು, ಮುಡಿಪುವಿನಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಯ ವಿರುದ್ಧ ಕಾನೂನಿನಡಿಯಲ್ಲಿ ಕಠಿಣ ಕ್ರಮವನ್ನು ತೆಗೆದುಕೊಂಡು ಆತನಿಗೆ ಕಠಿಣ ಶಿಕ್ಷೆಯನ್ನು ನೀಡುವ ನಿಟ್ಟಿನಲ್ಲಿ ಪೊಲೀಸರು ಆರೋಪ ಪಟ್ಟಿ ಸಲ್ಲಿಸಬೇಕು ಎಂದು ಹಿಂದೂ ಜಾಗರಣಾ ವೇದಿಕೆ ಮುಖಂಡ ರಾಧಾಕೃಷ್ಣ ಅಡ್ಯಂತಾಯ ಅಭಿಪ್ರಾಯಪಟ್ಟರು. ಮುಡಿಪುವಿನಲ್ಲಿ ಫ್ಯಾನ್ಸಿ ಮಾಲಕನಿಂದ ವಿದ್ಯಾರ್ಥಿನಿಯ ಅತ್ಯಾಚಾರ ಯತ್ನಕ್ಕೆ ಸಂಬಂಧಿಸಿದಂತೆ ಮಂಗಳವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಫ್ಯಾನ್ಸಿ ಮಾಲಕ ವ್ಯಾಪಾರ ಮಾಡುವುದನ್ನು ಬಿಟ್ಟು ಲೈಂಗಿಕ ಕಿರುಕುಳ ನೀಡುವ ಮೂಲಕ ಸಮಾಜ ತಲೆತಗ್ಗಿಸುವ ಕೆಲಸ ಮಾಡಿದ್ದಾನೆ ಇದು ಪ್ರತಿಭಟನೆಯಲ್ಲ ಜನಜಾಗೃತಿ ಕಾರ್ಯಕ್ರಮವಾಗಬೇಕು ಇಂತಹ ಘಟನೆಯನ್ನು ವಿದ್ಯಾರ್ಥಿ , ಸಂಘಟನೆಗಳು, ಒಂದು ಸಮುದಾಯದ ಜನರು ಮಾತ್ರವಲ್ಲದೆ ಇಡೀ ಸಮಾಜವೇ ಇದನ್ನು ಖಂಡಿಸಬೇಕು ಎಂದ ಅವರು ಘಟನೆ ನಡೆದ…

Read More

UN NETWORKS ಕೊಣಾಜೆ : ತ್ಯಾಜ್ಯ ವಿಲೇವಾರಿಯ ಬಗ್ಗೆ ಮಾಹಿತಿ ಕೇಳಲು ತೆರಳಿದ್ದ ಕೊಣಾಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಪಂಚಾಯತ್ ಸದಸ್ಯನ ಮೇಲೆ ಇಬ್ಬರು ಪಾನಮತ್ತರು ಕರ್ತವ್ಯಕ್ಕೆ ಅಡ್ಡಿ ಪಡಿಸಿ ಹಲ್ಲೆ ನಡೆಸಿದ ಘಟನೆ ಮಂಗಳವಾರ ನಡೆದಿದೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇನೋಳಿಯ ಸುರೇಂದ್ರ ಹಾಗೂ ಮಾಡೂರು ಸಮೀಪದ ಯೋಗೀಶ್ ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ. ಅಸೈಗೋಳಿ ಸಮೀಪದ ಅನಧಿಕೃತ ಪಾಸ್ಟ್ ಫುಡ್ ಅಂಗಡಿಯೊಂದಕ್ಕೆ ಕೊಣಾಜೆ ಪಂಚಾಯತ್ ಪಿಡಿಒ ಸವಿತಾ ಮತ್ತು ಪಂಚಾಯತ್ ಕಾರ್ಯದರ್ಶಿ ಶಾಲಿನಿ, ಸಿಬ್ಬಂದಿ ಭರತ್ ಅವರು ಕಸ ಹಾಗೂ ತ್ಯಾಜ್ಯ ವಿಲೇವಾರಿಯ ಬಗ್ಗೆ ಮಾಹಿತಿ ಕೇಳಲು ತೆರಳಿದ್ದು, ಈ ಸಂದರ್ಭ ಅಂಗಡಿಯ ಬಳಿ ಕುಳಿತಿದ್ದ ಸುರೇಂದ್ರ ಹಾಗೂ ಯೋಗೀಶ್ ಪಿಡಿಒ ಅವರಲ್ಲಿ ನಿಮಗೆ ಅವೆಲ್ಲಾ ಯಾಕೆ ಎಂದು ಪ್ರಶ್ನಿಸಿದಲ್ಲದೆ ಅವ್ಯಾಚ್ಯವಾಗಿ ನಿಂದಿಸಿ, ಸರಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದ್ದು, ಇದರಿಂದ ಭಯಗೊಂಡ ಸವಿತಾ ಅವರು ಪೊಲೀಸರಿಗೆ ಫೋನ್ ಮಾಡಿದಾಗ ಆರೋಪಿಗಳು ಫೋನ್ ಕಸಿಯಲು ಯತ್ನಿಸಿ, ಹಲ್ಲೆ…

Read More

UN NETWORKS ಕೊಣಾಜೆ : ಹಿರಿಯರು ಕಿರಿಯರಿಗೆ ನೀಡುವ ಮಾರ್ಗದರ್ಶನದ‌ ಫಲವಾಗಿ ಕೊಣಾಜೆಯಲ್ಲಿ ಕೋಮು ಸಾಮರಸ್ಯ ಇಂದಿಗೂ‌ ಗಟ್ಟಿಯಾಗಿದೆ, ಗ್ರಾಮಕ್ಕೆ ಮಂಗಳೂರು ವಿಶ್ವವಿದ್ಯಾಲಯ ಮುಕುಟಪ್ರಾಯ ಇದ್ದಂತೆ.‌ ಈ ಗ್ರಾಮ ಇತರ ಗ್ರಾಮಗಳಿಗೆ ಮಾದರಿ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಡಾ.ಎ.ಎಂ.ಖಾನ್ ಅಭಿಪ್ರಾಯಪಟ್ಟರು. ಮಂಗಳೂರು ವಿಶ್ವವಿದ್ಯಾಲಯ, ಕೊಣಾಜೆ ಗ್ರಾಮ ಪಂಚಾಯಿತಿ, ಮಂಗಳಾ ಗ್ರಾಮೀಣ ಯುವಕ ಸಂಘ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಮಂಗಳೂರು ವಿವಿ‌ ಎನ್ಎಸ್ಎಸ್‌ ಘಟಕದ ಸಂಯುಕ್ತ ಆಶ್ರಯದಲ್ಲಿ ಕೊಣಾಜೆ‌ ಕಲ್ಲಿಮಾರ್ ಗದ್ದೆಯಲ್ಲಿ ಎರಡು ದಿನ ನಡೆದ‌ ‘ಕೊಣಾಜೆ ಗ್ರಾಮೋತ್ಸವ-2019’ರ‌ ವಿವಿಯ‌ ಮಂಗಳ ಸಭಾಂಗಣದಲ್ಲಿ ಭಾನುವಾರ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಜಿಲ್ಲಾ ರಾಜ್ಯಪಾಲ ರೊನಾಲ್ಡ್ ಗೋಮ್ಸ್, ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು, ಸದಸ್ಯೆ ಪದ್ಮಾವತಿ ಪೂಜಾರಿ, ಮೂಡಾದ‌ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಮಂಗಳೂರು ವಿವಿ‌ ಎನ್ಎಸ್ಎಸ್‌ ಘಟಕ…

Read More

UN NETWORKS ಉಳ್ಳಾಲ : ಸಯ್ಯದ್ ಮದನಿ ಅರಬಿಕ್ ಕಾಲೇಜಿನ 2019-20ನೇ ಶೈಕ್ಷಣಿಕ ವರ್ಷವನ್ನು ಪ್ರಾರಂಭಿಸಲಾಯಿತು. ಮುಹಮ್ಮದ್ ತ್ವಾಹ ಹಾಜಿ ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿದರು. ‘ ಸಂಸ್ಥೆಯ ಪ್ರಾಂಶುಪಾಲರಾದ ಶೈಖುನಾ ತೋಡಾರು ಉಸ್ಮಾನುಲ್ ಫೈಝಿ ಉಸ್ತಾದ್ ದುಆಶಿರ್ವಾಚನ ಗೈದು ಶಿಕ್ಷಣವು ಮನುಷ್ಯನನ್ನು ಪರಿಪೂರ್ಣನನ್ನಾಗಿಸುತ್ತದೆ ಎಂದು ತಿಳಿಸದರು. ಸಯ್ಯದ್ ಮದನಿ ಅರಬಿಕ್ ಎಜುಕೇಶನ್ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಅಮೀರ್ ಹಾಜಿ, ಜೊತೆ ಕಾರ್ಯದರ್ಶಿ ಆಸಿಫ್ ಅಬ್ದುಲ್ಲಾ ಹಾಗೂ ಹಾಜಿ ಇಲ್ಯಾಸ್ ಕಾರ್ಯಕ್ರಮದಲ್ಲಿ ಹಿತ ವಚನವನ್ನು ನೀಡಿದರು. ಕಾರ್ಯಕ್ರಮದಲ್ಲಿ ಇಬ್ರಾಹೀಂ ಮದನಿ, ಇಬ್ರಾಹಿಂ ಅಹ್ಸನಿ, ಹಾಫಿಳ್ ಝೈನ್ ಸಖಾಫಿ, ಶರೀಫ್ ಮದನಿ, ಮುಫತ್ತಿಶ್ ಹನೀಫ್ ಸಖಾಫಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಇಬ್ರಾಹಿಂ ಮದನಿ ಸ್ವಾಗತಿಸಿ ವಂದಿಸಿದರು.

Read More

UN NETWORKS ಉಳ್ಳಾಲ : ಹಜ್ಜ್ ಯಾತ್ರೆ ಮಾಡುವುದು ಪ್ರವಾದಿ ಅವರಿಗೆ ತುಂಬಾ ಇಷ್ಟವಾದ ಕಾರ್ಯವಾಗಿದೆ ಎಂದು ಉಳ್ಳಾಲ ಸೈಯ್ಯದ್ ಮದನಿ ದರ್ಗಾ ಸಮಿತಿಯ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ ತಿಳಿಸಿದರು. ಅವರು ಉಳ್ಳಾಲ ಹೊಸಪಳ್ಳಿ ಮುಹಿಯುದ್ದೀನ್ ಜುಮಾ ಮಸೀದಿ ವತಿಯಿಂದ ಹೊಸಪಳ್ಳಿ ಮೊಹಲ್ಲದಿಂದ ಹಜ್ಜ್ ಯಾತ್ರೆಗೈಯುವ ಹಜ್ಜಾಜ್ ಗಳಿಗೆ ಬೀಳ್ಕೊಡಿಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಂದು ನಾವು ಮಂಗಳೂರಿನಿಂದ ಬೆಂಗಳೂರಿಗೆ ತಲುಪುವ ಮೊದಲು ಹಜ್ಜ್ ಹಾಜಿಗಳು ಸೌದಿ ಅರೇಬಿಯ ತಲುಪುವಂತಹ ತಂತ್ರಜ್ಞಾನ ವಿದೆ. ಇಸ್ಲಾಮಿನ ಐದು ಕರ್ಮಗಳಲ್ಲಿ ಕೊನೆಯದ್ದು ಹಜ್ ಯಾತ್ರೆಗೈಯುದಾಗಿದೆ ಎಂದು ಹೇಳಿದರು. ಹೊಸಪಳ್ಳಿ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಯುಸೂಫ್ ಮಿಸ್ಬಾಹಿ ದುಅ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಹಿಯುದ್ದೀನ್ ಜುಮಾ ಮಸೀದಿ ಮಾಜಿ ಅಧ್ಯಕ್ಷ ಫಾರೂಕ್ ಉಳ್ಳಾಲ್ ಹಜ್ಜಾಜಿಗಳಿಗೆ ಶುಭಹಾರೈಸಿದರು. ಉಳ್ಳಾಲ ನಗರ ಸಭೆ ಸದಸ್ಯರಾದ ಯು.ಎ ಇಸ್ಮಾಯಿಲ್, ಜಬ್ಬಾರ್, ಉಳ್ಳಾಲ ಸೈಯ್ಯದ್ ಮದನಿ ದರ್ಗಾ ಸಮಿತಿಯ ಕಾರ್ಯದರ್ಶಿ ತ್ವಾಹ ಹಾಜಿ, ಜೊತೆ ಕಾರ್ಯದರ್ಶಿ…

Read More

UN NETWORKS ಮುಡಿಪು : ಪವಿತ್ರ ಮಕ್ಕಾಕ್ಕೆ ಹಜ್‌ಗೆ ಹೊರಡಲಿರುವ ಅಮ್ಮೆಂಬಳ ಕೇಂದ್ರ ಜುಮಾ ಮಸೀದಿಯ ಮಾಜಿ ಅಧ್ಯಕ್ಷ, ಲೇಖಕ, ಪರಿಸರವಾದಿ ಬಿ.ಎಸ್. ಹಸನಬ್ಬ ಅಮ್ಮೆಂಬಳ ಅವರಿಗೆ ಎಸ್‌ವೈಎಸ್-ಎಸೆಸ್ಸೆಫ್ ಅಮ್ಮೆಂಬಳ ಶಾಖೆಯ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮವು ಎಸೆಸ್ಸೆಫ್ ಅಮ್ಮೆಂಬಳ ಬ್ರಾಂಚ್ ಜೊತೆ ಕಾರ್ಯದರ್ಶಿ ಅಬ್ಬಾಸ್ ಎಸ್. ಕೋಟೆ ಅವರ ಮನೆಯಲ್ಲಿ ರವಿವಾರ ನಡೆಯಿತು. ಈ ಸಂದರ್ಭ ಎಸ್ಸೆಸ್ಸೆಫ್ ಮುಡಿಪು ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಸಿರಾಜುದ್ದೀನ್ ಅಮ್ಮೆಂಬಳ, ಕೇಂದ್ರ ಜುಮಾ ಮಸೀದಿಯ ಅಮ್ಮೆಂಬಳ ಅಧ್ಯಕ್ಷ ಹನೀಫ್ ಎಸ್.ಜಿ., ಅಮ್ಮೆಂಬಳ ಶಾಖೆಯ ಅಧ್ಯಕ್ಷ ಅನ್ವರ್ ಕೋಟೆ, ಎಸ್‌ವೈಎಸ್ ಅಮ್ಮೆಂಬಳ ಬ್ರಾಂಚ್ ಕೋಶಾಧಿಕಾರಿ ರಫೀಕ್ ಕೋಟೆ, ಕೇಂದ್ರ ಜುಮಾ ಮಸೀದಿಯ ಮಾಜಿ ಕಾರ್ಯದರ್ಶಿ ಮುಸ್ತಫಾ ಕೋಟೆ, ಜಿ. ಎಸೆಸ್ಸೆಫ್ ಅಮ್ಮೆಂಬಳ ಶಾಖೆಯ ಮಾಜಿ ಅಧ್ಯಕ್ಷ ಸಮಿರ್, ಅಮ್ಮೆಂಬಳ ಹೆಲ್ಪ್ಲೈನ್ ಸಂಚಾಲಕ ಫರ್ವಿಝ್ ಅಮ್ಮೆಂಬಳ ಉಪಸ್ಥಿತರಿದ್ದರು.

Read More

UN NETWORKS ಉಳ್ಳಾಲ :  ಫ್ಯಾನ್ಸಿ ಅಂಗಡಿಗೆ ಖರೀದಿಸಿದ ಬ್ಯಾಗ್ ಬದಲಾಯಿಸಲು ಬಂದಿದ್ದ ಅಪ್ರಾಪ್ತೆ  ಮೇಲೆ  ಅಶ್ಲೀಲ ವೀಡಿಯೋ ತೋರಿಸಿ,  ಅತ್ಯಾಚಾರಕ್ಕೆ ಯತ್ನಿಸಿದ  ಪ್ರಕರಣಕ್ಕೆ ಸಂಬಂಧಿಸಿ  ಮುಡಿಪು  ಫ್ಯಾನ್ಸೀ ಪ್ಯಾಲೇಸ್ ಅಂಗಡಿ ಮಾಲೀಕನ ವಿರುದ್ಧ  ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿ ಕೊಣಾಜೆ  ಪೊಲೀಸರು ಬಂಧಿಸಿದ್ದಾರೆ. ದೇರಳಕಟ್ಟೆ  ಬದ್ಯಾರು ಬಾಡಿಗೆ ಮನೆಯಲ್ಲಿರುವ , ವಿಟ್ಲ ನಿವಾಸಿ ಸಲೀಂ ಝಕರಿಯಾ (45) ಬಂಧಿತ. ವಿವಾಹಿತನಾಗಿರುವ ಈತ ಮೂವರು ಮಕ್ಕಳ ತಂದೆಯಾಗಿದ್ದಾನೆ. ಘಟನೆ ವಿವರ : ಭಾನುವಾರ ತಂದೆಯ ಜತೆಗೆ ಮುಡಿಪು ಫ್ಯಾನ್ಸಿ ಅಂಗಡಿಗೆ ಬಂದಿದ್ದ ಅಪ್ರಾಪ್ತೆ   ಬ್ಯಾಗ್ ಖರೀದಿಸಿದ್ದಳು. ಬ್ಯಾಗ್   ಬಣ್ಣ ಬೇರೆ ಬೇಕಾದಲ್ಲಿ ನಾಳೆಯೂ ಬದಲಾಯಿಸಲುಬಹುದು ಅಂದಿದ್ದರು.   ಅದರಂತೆ ಸೋಮವಾರ ಶಾಲೆಗೆ ಬಂದಿದ್ದ ವಿದ್ಯಾರ್ಥಿನಿ ಫ್ಯಾನ್ಸಿ ಅಂಗಡಿಗೆ ತೆರಳಿ ಬ್ಯಾಗ್ ಬದಲಾಯಿಸುವಂತೆ ಕೇಳಿದ್ದಳು. ಈ ವೇಳೆ ಅಂಗಡಿ ಮಾಲೀಕ  ಸಲೀಂ ವಿದ್ಯಾರ್ಥಿನಿಯನ್ನು ಮೇಲಿನ ಮಹಡಿಗೆ ಕರೆದೊಯ್ದು, ಅಲ್ಲಿ  ಇತ್ತೀಚೆಗೆ   ನಡೆದ ಪುತ್ತೂರು ಸಾಮೂಹಿಕ ಅತ್ಯಾಚಾರದ ವೀಡಿಯೋ ತೋರಿಸಿದ್ದನು.…

Read More

UN NETWORKS ದೇರಳಕಟ್ಟೆ : ಕೌಶಾಲ್ಯಾಧಾರಿತ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳು ಮಾನವೀಯ ಗುಣಗಳು ಮತ್ತು ಜೀವನ ಮೌಲ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ| ಪಿ.ಎಸ್.ಎಡಪಡಿತ್ತಾಯ ಅಭಿಪ್ರಾಯಪಟ್ಟರು. ಅವರು ದೇರಳಕಟ್ಟೆಯ ಕಣಚೂರು ಇನ್‍ಸ್ಟಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಇದರ ಸಭಾಂಗಣದಲ್ಲಿ ಕಣಚೂರು ಎಜ್ಯುಕೇಶನ್ ಆಫ್ ಜನರಲ್ ಎಜ್ಯಕೇಶನ್ ಇದರ ಸಂಸ್ಥಾಪಕರ ದಿನಾಚರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಶಿಕ್ಷಣದಲ್ಲಿ ಅಂಕ ಪಡೆಯುವುದು ಮುಖ್ಯವಲ್ಲ. ಪದವಿಯೊಂದಿಗೆ ನಿರಂತರ ಜ್ಞಾನಾಭಿವೃದ್ಧಿ, ಜೀವನ ಶಿಕ್ಷಣವನ್ನು ಅಳವಡಿಕೊಳ್ಳಬೇಕು. ಮುಖ್ಯವಾಗಿ ವೈದ್ಯವಿದ್ಯಾರ್ಥಿಗಳು, ಮಾನವೀಯತೆಯೊಂದಿಗೆ ನೈತಿಕ ಮೌಲ್ಯಕ್ಕೆ ಹೆಚ್ಚಿನ ಗಮನ ಕೊಡಬೇಕು. ಈ ಶಿಕ್ಷಣ ಸಂಸ್ಥೆ ನೈತಿಕ ಮೌಲ್ಯದ ಭದ್ರಬುನಾದಿಯಡಿ ಕಣಚೂರು ಮೋನು ಅವರು ಸ್ಥಾಪಿಸಿದ್ದು ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆ ಇಂದು ಯಶಸ್ವಿಯಾಗಿ ಮುನ್ನಡೆಯಲು ಸಾಧ್ಯವಾಗಿದೆ. ಇಂತಹ ಮೌಲ್ಯಗಳನ್ನು ಈ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ತಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಕಣಚೂರು ಅಕಾಡೆಮಿ ಆಪ್ ಜನರಲ್ ಎಜ್ಯುಕೇಶನ್‍ನ ಶೈಕ್ಷಣಿಕ ಸಲಹೆಗಾರ ಹಾಗೂ ಕ್ಯಾಲಿಕಟ್ ವಿಶ್ವವಿದ್ಯಾನಿಲಯದ…

Read More