UN NETWORKS
ಹರೇಕಳ : ಹರೇಕಳ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಮಂಗಳೂರಿನ ಕಾರ್ಪೊರೇಷನ್ ಬ್ಯಾಂಕ್‍ನ ಆರ್ಥಿಕ ಅಭಿವೃದ್ಧಿ ಪ್ರತಿಷ್ಠಾನದ ವತಿಯಿಂದ ಉಚಿತ ವೈದಕೀಯ ತಪಾಸಣಾ ಶಿಬಿರವು ನಡೆಯಿತು.
ಕಾರ್ಪೊರೇಷನ್ ಬ್ಯಾಂಕ್‍ನ ಸಂಸ್ಥಾಪಕರ ದಿನಾಚರಣೆಯ ಅಂಗವಾಗಿ ನಡೆದ ಈ ಶಿಬಿರದ ಉದ್ಘಾಟನೆಯನ್ನು ಬ್ಯಾಂಕ್‍ನ ಉಪಮಹಾಪ್ರಬಂಧಕರಾದ ಎ.ಎನ್. ರವಿಶಂಕರ್ ನೆರವೇರಿಸಿ, ಪ್ರತಿಯೊಬ್ಬರೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡು ಬರಬೇಕು. ರೋಗ ಬಂದ ಮೇಲೆ ಡಾಕ್ಟರ್ ಹತ್ತಿರ ಹೋಗುವ ಬದಲು, ರೋಗಗಳು ಬಾರದೆ ಹಾಗೆ ಆರೋಗ್ಯವನ್ನು ನೋಡಿಕೊಳ್ಳುವುದು ಬಹಳ ಮುಖ್ಯ. ವಿದ್ಯಾರ್ಥಿಗಳು ಜೀವನದಲ್ಲಿ ಶ್ರದ್ಧೆಯನ್ನು ಅಳವಡಿಸಿಕೊಳ್ಳಬೇಕು. ಎಲ್ಲಾ ವಿಚಾರದಲ್ಲೂ ಶ್ರದ್ಧೆ ಇದ್ದರೆ ಉತ್ತಮ ಆರೋಗ್ಯ, ಉತ್ತಮ ಜ್ಞಾನ, ಉತ್ತಮ ಯಶಸ್ಸು ನಿಮ್ಮದಾಗುತ್ತದೆ ಎಂದರು. ಮುಖ್ಯ ಅತಿಥಿಯಾಗಿ ಕಾರ್ಪೊರೇಷನ್ ಬ್ಯಾಂಕ್‍ನ ಸಹಾಯಕ ಮಹಾಪ್ರಬಂಧಕರಾದ ರವಿಕುಮಾರ್ ಅವರು ಉಪಸ್ಥಿತರಿದ್ದರು.
ಪ್ರಸ್ತಾವನೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಕೆ.ರವೀಂದ್ರ ರೈ ಅವರು ನೆರವೇರಿಸಿ ಸರ್ವರನ್ನು ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಕೆ.ಎಂ.ಸಿ ಅತ್ತಾವರದ ಮಕ್ಕಳ ತಜ್ಞೆ ಡಾ. ಮೊನಿಕ ಮತ್ತು ಅವರ ತಂಡ ವಿದ್ಯಾಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳನ್ನು ಆರೋಗ್ಯ ತಪಾಸಣೆ ನಡೆಸಿದರು ಹಾಗೂ ಸಂಬಂಧಪಟ್ಟ ಕೆಲವೊಂದು ಖಾಯಿಲೆಗಳಿಗೆ ಔಷಧಿಯನ್ನು ಕೂಡ ನೀಡಲಾಯಿತು ಹಾಗೂ ಕಾರ್ಪೊರೇಷನ್ ಬ್ಯಾಂಕ್‍ನ ಅಧಿಕಾರಿಗಳಾದ ವಿಶ್ವನಾಥ್ ಪೈ, ಮಹಾಂತೇಶ್, ವೆಂಕಟೇಶ್ ಇವರುಗಳು ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕರಾದ ತ್ಯಾಗಂ ಹರೇಕಳ ನಿರೂಪಿಸಿದರು. ಕೌಶಿಕ್ ಪ್ರಾರ್ಥನೆ ಗೈದರು. ಶಿಕ್ಷಕರಾದ ರವಿಶಂಕರ್ ಧನ್ಯವಾದ ವಿತ್ತರು.


