Author: UllalaVani

Kannada News From Coastal Karnataka

UN NETWORKS ಇರಾ : ಮಂಚಿ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡವನ್ನು ವೈದ್ಯಾಧಿಕಾರಿ ಡಾ. ಕೃಷ್ಣಮೂರ್ತಿ ಸಮ್ಮುಖ ಹಸ್ತಾಂತರ ಕಾರ್ಯ ನಡೆಯಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂಲಕ 1.30 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಾಣಗೊಂಡ ಮಂಚಿ, ಇರಾ, ಕೊಲ್ನಾಡು, ಸಾಲೆತ್ತೂರು ಗ್ರಾಮ ಪಂಚಾಯತ್‍ಗಳ ವ್ಯಾಪ್ತಿಗೊಳಪಡುವ ಮಂಚಿ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ಕೊಲ್ನಾಡು ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್. ಮುಹಮ್ಮದ್, ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ, ಮಂಚಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಮೀಳಾ, ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ವೈದ್ಯಾಧಿಕಾರಿ ಡಾ. ರೋಹಿಣಿ, ಗ್ರಾಮ ಪಂಚಾಯತ್ ಸದಸ್ಯರಾದ ಇಬ್ರಾಹಿಂ ಜಿ.ಎಂ, ಮೊಯ್ದೀನ್ ಕುಂಞಿ, ಪುಷ್ಪ ಕಾಮತ್, ಪ್ರತಿಮ, ಗುತ್ತಿಗೆದಾರರಾದ ಪುಶ್ಪರಾಜ್ ಶೆಟ್ಟಿ ಹಾಜರಿದ್ದರು.

Read More

UN NETWORKS ಉಳ್ಳಾಲ : ಹಿಂದೆ ನನ್ನ ಮನೆ, ನನ್ನ ಪರಿಸರ ಎನ್ನುವ ಭಾವನೆ ಜನರಲ್ಲಿತ್ತು, ಆದರೆ ಇಂದು ಅಂತಹ ಭಾವನೆ ದೂರವಾಗಿದ್ದು ಇದರಿಂದಾಗಿ ಪರಿಸರ ತ್ಯಾಜ್ಯದಿಂದ ಹಾಳಾಗುತ್ತಿದೆ ಎಂದು ಕೋಟೆಕಾರ್ ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಕ ವಿಕ್ರಂ ಅಭಿಪ್ರಾಯಪಟ್ಟರು. ಕೆಥೊಲಿಕ್ ಸಭಾ ಪಾನೀರ್ ಘಟಕದ 30ನೇ ವರ್ಷಾಚರಣೆಯ ಪ್ರಯುಕ್ತ 30 ಕಾರ್ಯಕ್ರಮದಲ್ಲಿ ಒಂದಾಗಿರುವ ಭಾನುವಾರ ಪಾನೀರ್ ಚರ್ಚ್ ಸಭಾಂಗಣದಲ್ಲಿ ನಡೆದ ಪೈಪ್ ಕಾಂಪೋಸ್ಟ್ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಮನೆಯಲ್ಲಿ ಹಸಿ, ಒಣ ಮತ್ತು ಅಪಾಯಕಾರಿ ಕಸ ವಿಂಗಡಿಸಿದಾಗ ಹಸಿ ವಿಂಗಡಿಸುವುದು ಮೊದಲು ಕಲಿಯಬೇಕಿದೆ. ಕೋಟೆಕಾರ್ ನಲ್ಲಿ ಕಸ ಹಾಕಲು ಜಾಗ ಇಲ್ಲದ ಕಾರಣ ಮಂಗಳೂರಿಗೆ ಸಾಗಿಸಲಾಗುತ್ತಿದೆ. ಮನೆಯಲ್ಲೇ ಕಸ ವಿಂಗಡಿಸಿ ನೀಡದಿದ್ದರೆ ವಿಲೇವಾರಿ ಮಾಡುವವರು ಸ್ವೀಕರಿಸದ ಕಾರಣ ಸಮಸ್ಯೆ ಎದುರಾಗುತ್ತದೆ ಎಂದು ತಿಳಿಸಿದರು. ಪಾನೀರ್ ಮರ್ಸಿಯಮ್ಮನವರ ಇಗರ್ಜಿಯ ಧರ್ಮಗುರು ಫಾ.ಡೆನ್ನಿಸ್ ಸುವಾರಿಸ್ ಅಧ್ಯಕ್ಷತೆ ವಹಿಸಿ, ನಮ್ಮ ಮನೆಯಲ್ಲಿ ಸಂಗ್ರಹವಾಗುವ ತ್ಯಾಜ್ಯ ಸಾರ್ವಜನಿಕ ಸ್ಥಳಗಳಲ್ಲಿ ರಸ್ತೆಬದಿ ಬಿಸಾಡಿ ಪರಿಸರದಲ್ಲಿ…

Read More

UN NETWORKS ಉಳ್ಳಾಲ : ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಗಾಳಿ ಮಳೆಗೆ ಸೋಮೇಶ್ವರ ಉಚ್ಚಿಲದಲ್ಲಿ ಕಡಲ್ಕೊರೆತವಾಗಿದ್ದುಉಚ್ಚಿಲ ಬಟ್ಟಪ್ಪಾಡಿಯಲ್ಲಿ ಬೀಚ್ ರಸ್ತೆ ಸಮುದ್ರ ಪಾಲಾಗುವ ಭೀತಿಯಲ್ಲಿದೆ. ಉಚ್ಚಿಲದಲ್ಲಿ ಕಡಲ್ಕೊರೆತಕ್ಕೆ ಶಾಶ್ವತ ಕಾಮಗಾರಿಗಾಗಿ ಬಟ್ಟಪ್ಪಾಡಿಯಲ್ಲಿ ಹಾಕಿರುವ ತಡೆದಂಡೆಯಿಂದ ಆ ಪ್ರದೇಶದಲ್ಲಿ ಕಡಲತೀರ ರಕ್ಷಣೆಯಾದರೆ ಸಮುದ್ರದ ಅಲೆ ಬಟ್ಟಪ್ಪಾಡಿಯ ಇನ್ನೊಂದು ಭಾಗಕ್ಕೆ ತೀವ್ರ ಹಾನಿ ಮಾಡಿದ್ದು ಇದೀಗ ಬೀಚ್ ರಸ್ತೆಯೇ ಕೊಚ್ಚಿ ಹೋಗುವ ಭೀತಿಯಿದೆ. ಉಚ್ಚಿಲ ಎಂಡ್ ಪಾಯಿಂಟ್ ಸೇರಿದಂತೆ ಸುಮಾರು 15ಕ್ಕು ಹೆಚ್ಚು ಮನೆಗಳಿಗೆ ಸಂಪರ್ಕ ಕಡಿಯುವ ಭೀತಿಯಲ್ಲಿದೆ. ಮೆಸ್ಕಾಂ ಇಲಾಖೆಯವರು ರವಿವಾರ ನಾಲ್ಕು ಕಂಬಗಳನ್ನು ಸ್ಥಳಾಂತರ ಮಾಡಿದ್ದು, ನಿರಂತರವಾಗಿ ಗಾಳಿ ಮಳೆ ಬಂದರೆ ರಸ್ತೆ ಸಮುದ್ರಪಾಲಾಗಲಿದೆ.

Read More

ಮಂಗಳೂರು : ಕರಾವಳಿ ಜಿಲ್ಲೆಗಳಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿದ್ದು, ಮಾರಣಾಂತಿಕ ಜ್ವರಕ್ಕೆ ಖಾಸಗಿ ವಾಹಿನಿಯ ಪತ್ರಕರ್ತರೊಬ್ಬರು ಬಲಿಯಾದ ಘಟನೆ ನಡೆದಿದೆ. ನಗರದ ನೀರುಮಾರ್ಗ ಸಮೀಪದ ಪಡು ನಿವಾಸಿ ನಾಗೇಶ್ ಡೆಂಗ್ಯೂ ಜ್ವರಕ್ಕೆ ಬಲಿಯಾದವರು.ಕಳೆದ ಕೆಲವು ದಿನಗಳಿಂದ ಶಂಕಿತ ಡೆಂಗ್ಯೂವಿನಿಂದ ಬಳಲುತ್ತಿದ್ದ ಅವರು ಜ್ವರ ಉಲ್ಬಣಗೊಂಡು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ನಾಗೇಶ್ ಮೃತಪಟ್ಟಿದ್ದಾರೆ.ಮೃತ ನಾಗೇಶ್ ಖಾಸಗಿ ವಾಹಿನಿಯಲ್ಲಿ ಪತ್ರಕರ್ತರಾಗಿ (ವಿಡಿಯೋ ಜರ್ನಲಿಸ್ಟ್) ಹಲವಾರು ವರುಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರು. ಮೃತರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Read More

UN NETWORKS ಸೋಮೇಶ್ವರ : ರಾಜ್ಯದ ಅತೀದೊಡ್ಡ ಪಂಚಾಯತ್‌ ಆಗಿರುವ ಮಂಗಳೂರು ತಾಲೂಕಿನ ಸೋಮೇಶ್ವರ ಗ್ರಾಮ ಪಂಚಾಯತ್‌ ಪುರಸಭೆಯಾಗಿ ಮೇಲ್ದರ್ಜೆಗೇರಿದೆ. ರಾಜ್ಯ ಸರಕಾರ ಪಂಚಾಯತ್‌ ಮೇಲ್ದರ್ಜೇಗೇರಿಸುವ ನಿಟ್ಟಿ ನಲ್ಲಿ ಕರಡು ಅಧಿಸೂಚನೆ ಹೊರಡಿಸಿದ ಒಂದು ವರ್ಷದ ಬಳಿಕ ಪುರಸಭೆಯಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದು ಮುಖ್ಯಾಧಿಕಾರಿಯನ್ನು ನೇಮಕ ಮಾಡಿ ಆದೇಶ ನೀಡಿದೆ. 12 ವರ್ಷಗಳಿಂದ ಸೋಮೇಶ್ವರ ಪಂ. ಮೇಲ್ದರ್ಜೆಗೇರಿಸಬೇಕು ಎಂದು ಹೋರಾಟ, ಚುನಾವಣೆ ಬಹಿ ಷ್ಕಾರ ಸಹಿತ ಹಲವು ರೀತಿಯಲ್ಲಿ ಜನಪ್ರತಿನಿ ಧಿಗಳು, ಮುಖಂಡರು ಮತ್ತು ಗ್ರಾಮಸ್ಥರು ರಾಜ್ಯ ಸರಕಾರಕ್ಕೆ ಒತ್ತಾಯಿಸಿ ಮೇಲ್ದರ್ಜೆ ಗೇರಿಸುವಂತೆ ಮನವಿ ಮಾಡಿದ್ದರು. ಜನಸಂಖ್ಯೆಯ ಆಧಾರದಲ್ಲಿ ಕಡಿಮೆಯಿದ್ದ ಕೋಟೆಕಾರು ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೆಗೇರಿದ ಬಳಿಕ ಸೋಮೇ ಶ್ವರವನ್ನು ಮೇಲ್ದರ್ಜೆಗೇರಿಸುವ ಭರವಸೆ ನೀಡಿದ್ದ ಸಚಿವ ಯು.ಟಿ. ಖಾದರ್‌ ಪುರ ಸಭೆ ಮಾಡುವ ನಿಟ್ಟಿನಲ್ಲಿ ಪ್ರಕ್ರಿಯೆಗೆ ಚಾಲನೆ ನೀಡಿದ್ದರು. ಸೋಮೇಶ್ವರ ಪುರಸಭೆಯಾಗುವ ಹಿನ್ನೆಲೆಯಲ್ಲಿ 2018ರ ಜು. 23ರಂದು ಕರ್ನಾಟಕ ವಿಶೇಷ ರಾಜ್ಯ ಪತ್ರದಲ್ಲಿ ಕರಡು ಅಧಿಸೂಚನೆಯನ್ನು ಹೊರಡಿಸಿದ್ದು, ಸಲಹೆಗಳು ಆಕ್ಷೇಪಗಳು…

Read More

UN NETWORKS ಉಳ್ಳಾಲ : ಡೆಂಗ್ಯು, ಮಲೇರಿಯಾ ಮುಂತಾದ ರೋಗಗಳನ್ನು ತಡೆಗಟ್ಟಲು ಶಾಲಾ-ಕಾಲೇಜುಗಳಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್.ಎಫ್.ಐ.)ನ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು. ಜಿಲ್ಲೆಯಲ್ಲೆಡೆ ಅದರಲ್ಲೂ ಮುಖ್ಯವಾಗಿ ಮಂಗಳೂರು ನಗರದೆಲ್ಲೆಡೆ ಡೆಂಗ್ಯೂ ವ್ಯಾಪಕವಾಗಿ ಹರಡುತ್ತಿದೆ. ಡೆಂಗ್ಯೂಗೆ ತುತ್ತಾಗಿ ಇತ್ತೀಚೆಗೆ ಸಾವು ಉಂಟಾಗಿದೆ. ಜು.19 ರಂದು ನಗರದ ಖಾಸಗಿ ಶಾಲೆಯಲ್ಲಿ ಕಲಿಯುವ 7ನೇ ತರಗತಿಯ ವಿದ್ಯಾರ್ಥಿನಿ ಡೆಂಗ್ಯೂಗೆ ಬಲಿಯಾಗಿದ್ದಾಳೆ. ಹಾಗಾಗಿ ಜನರು ಡೆಂಗ್ಯೂ ಹಾವಳಿಯಿಂದ ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಈ ಸಂದರ್ಭದಲ್ಲಿ ಜನರಿಗೆ ಡೆಂಗ್ಯೂ ಹರಡದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಯ ಕ್ರಮಗಳನ್ನು ತಿಳಿಸುವ ಅಗತ್ಯವಿದೆ. ಆ ಕೆಲಸ ಈಗಾಗಲೇ ನಡೆಯುತ್ತಿದೆಯಾದರೂ, ಜಿಲ್ಲೆಯೆಲ್ಲೆಡೆ ಇರುವ ಶಾಲಾ-ಕಾಲೇಜುಗಳಲ್ಲಿ ಈ ಕುರಿತು ಜಾಗೃತಿ ಅಭಿಯಾನ ನಡೆಸುವ ಅಗತ್ಯವಿದೆ. ಜಿಲ್ಲೆಯ ಹಲವು ಶಾಲಾ ಕಾಲೇಜುಗಳಲ್ಲಿ ಅಲ್ಲಲ್ಲಿ ನೀರು ನಿಂತಿರುವುದು ಕಂಡುಬರುತ್ತಿದೆ. ಉದಾಹರಣೆಗೆ ನಗರದ ಸರಕಾರಿ ಮಹಿಳಾ ಕಾಲೇಜು ಬಲ್ಮಠದಲ್ಲಿ ಮಳೆಯಿಂದಾಗಿ ನೀರು ಮೈದಾನದಲ್ಲಿ ತುಂಬಿಕೊಂಡಿದೆ. ಇದರಿಂದಾಗಿ…

Read More

UN NETWORKS ಉಳ್ಳಾಲ:  ಹಿಂದೆ ಹೆಣ್ಣು ಎಂದರೆ ಶಾಪ ಅನ್ನುವ ಕಾಲವಿದ್ದರೆ, ಈಗ ಅದು ಬದಲಾಗಿ ಹೆಣ್ಣು ಅನ್ನುವವಳು ಮನೆಗೆ ವರ ಅನ್ನುವಂತಹ ವಾತಾವರಣ ನಿರ್ಮಾಣವಾಗಿದೆ ಎಂದು  ಸೋಮೇಶ್ವರ ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ ಅಭಿಪ್ರಾಯಪಟ್ಟರು.  ಅವರು ದ.ಕ ಜಿಲ್ಲಾ ಪಂಚಾಯಿತಿ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು , ಪ್ರಾಥಮಿಕ ಆರೋಗ್ಯ ಕೇಂದ್ರ ಅಂಬ್ಲಮೊಗರು ಹಾಗೂ ಮುನ್ನೂರು ಗ್ರಾಮ ಪಂಚಾಯಿತಿ ಇವರ ಸಂಯುಕ್ತ ಆಶ್ರಯದಲ್ಲಿ  ಕುತ್ತಾರು  ದುರ್ಗಾವಾಹಿನಿ ಮಹಿಳಾ ಮಂಡಲದಲ್ಲಿ ನಡೆದ ` ಹೆಣ್ಣು ಮಗುವನ್ನು ರಕ್ಷಿಸಿ , ಹೆಣ್ಣು ಮಗುವನ್ನು ಉಳಿಸಿ  ಯೋಜನೆಯಡಿ ಆರೋಗ್ಯವಂತ ಶಿಶು ಪ್ರದರ್ಶನ  ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಹಿಂದೆ ಹೆಣ್ಮಕ್ಕಳಿಗಾಗಿ ಸರಕಾರದ ಯೋಜನೆಗಳು ಬಹಳಷ್ಟು ಕಡಿಮೆಯಿತ್ತು. ಇದೀಗ ಸರಕಾರದಿಂದ  ಸುಕನ್ಯಾ ಸಮೃದ್ಧಿ, ಭಾಗ್ಯಲಕ್ಷ್ಮೀ ಯೋಜನೆ,  ಹೆಣ್ಮಕ್ಕಳ ಪೋಷಕರಿಗೆ ಮಾತೃ ವಂದನೆ ಹಾಗೂ ಮಾತೃ ಯೋಜನೆಗಳು ಜಾರಿಯಲ್ಲಿದೆ. ಇದರ ಸದುಪಯೋಗವನ್ನು ಗ್ರಾಮಸ್ಥರು ಮಾಡಬೇಕಿದೆ. ಮಕ್ಕಳನ್ನು ಅವರ ಧರ್ಮದ…

Read More

UN NETWORKS ಉಳ್ಳಾಲ : ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾಗಿ ಬೆಂಗಳೂರು ನಗರದ ತಿಮ್ಮಯ್ಯ ಕೋದಂಡರಾಮ್ ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ ಸಹಾಯಕ ಪೊಲೀಸ್ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ರಾಮರಾವ್ ಅವರು ಬಳ್ಳಾರಿ ನಗರ ಠಾಣೆಗೆ ಡಿವೈ ಎಸ್ ಪಿಯಾಗಿ ವರ್ಗಾವಣೆಗೊಂಡಿದ್ದಾರೆ. ನೂತನ ಅಧಿಕಾರ ಸ್ವೀಕರಿಸಿಕೊಂಡಿರುವ ಟಿ. ಕೋದಂಡರಾಮ್ ಇವರು ಬೆಂಗಳೂರು ಗ್ರಾಮಾಂತರ ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥರಾಗಿ ಹಲವು ವಷಗಳ ಕಾಲ ಸೇವೆ ಸಲ್ಲಿಸಿ ಇದೀಗ ವರ್ಗಾವಣೆಗೊಂಡಿದ್ದಾರೆ. ಜಿಲ್ಲೆಯ ಕದ್ರಿ , ಉರ್ವ, ಪಣಂಬೂರು, ಕಾವೂರು, ಬಜಪೆ ಠಾಣೆಗಳಲ್ಲಿ ವೃತ್ತನಿರೀಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಬೆಂಗಳೂರು ನಗರ, ಮಂಡ್ಯ, ಸಿಸಿಬಿ ಬೆಂಗಳೂರು, ಬ್ಯಾಟರಾಯನಪುರ, ವಿಜಯನಗರ, ಭಯೋತ್ಪಾಧಕ ನಿಗ್ರಹ ದಳ , ಮದ್ದೂರು, ಸಿಐಡಿ ತಂಡಗಳಲ್ಲಿ ಸೇವೆಯನ್ನು ಸಲ್ಲಿಸಿರುತ್ತಾರೆ. ಇವರ ಸೇವೆಯನ್ನು ಗುರುತಿಸಿರುವ ರಾಜ್ಯ ಸರಕಾರ ಮುಖ್ಯಮಂತ್ರಿ ಪದಕ ಹಾಗೂ ಚಿನ್ನದ ಪದಕವನ್ನು ನೀಡಿ ಗೌರವಿಸಿದೆ. ಇಲಾಖೆಯಲ್ಲಿ 26 ವರ್ಷಗಳ ಸೇವೆಯನ್ನು ಸಲ್ಲಿಸಿರುವ ಇವರು 13 ವರ್ಷಗಳ ಕಾಲ ಮಂಗಳೂರು…

Read More

UN NETWORKS ಉಳ್ಳಾಲ : ಯುವಸಮುದಾಯ ಕೆಲಸ ಪಡೆದುಕೊಂಡ ತಕ್ಷಣ ಹೆತ್ತವರನ್ನು, ಸಮುದಾಯವನ್ನು ಮರೆಯುವಂತಹ ಕೆಲಸ ಮಾಡುತ್ತಿದೆ. ಆದರೆ ಅಂತಹ ಮನಸ್ಥಿತಿಯ ನ್ನು ದೂರವಾಗಿಸಿ ಶಿಕ್ಷಣದ ಸಂದರ್ಭ ತ್ಯಾಗ ಮಾಡಿದ ಹೆತ್ತವರು, ಸಂಘಟನೆಗಳನ್ನು ಸ್ಮರಿಸುತ್ತಾ ಮುಂದುವರಿಯುವುದು ಉತ್ತಮ ನಡೆ ಎಂದು ಇನ್ಫೋಸಿಸ್ ಸಂಸ್ಥೆ ಮಂಗಳೂರು ಕೇಂದ್ರ ಮುಖ್ಯಸ್ಥ ವಾಸುದೇವ ಕಾಮತ್ ಅಭಿಪ್ರಾಯಪಟ್ಟರು. ಅವರು ಕುಂಪಲದ ಶ್ರೀ ಬಾಲಕೃಷ್ಣ ಮಂದಿರ, ಶ್ರೀ ಬಾಲಕೃಷ್ಣ ಸೇವಾ ಸಮಿತಿ ಇದರ ವತಿಯಿಂದ ಕುಂಪಲದ ಶ್ರೀ ಬಾಲಕೃಷ್ಣ ಮಂದಿರದಲ್ಲಿ ಭಾನುವಾರ ನಡೆದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಶೇ.90 ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜ್ಞಾನದೀವಿಗೆ ಪುರಸ್ಕಾರ-2019 ಪ್ರಧಾನ ಮಾಡಿ ಹಾಗೂ ಆಟಿಡೊಂಜಿ ಕೂಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸ್ವಿಗ್ಗೀ, ಉಬರ್ ಈಟ್ಸ್, ಝೊಮೆಟೊ ಕಾಲದಲ್ಲಿ ಆಟಿದ ಕೂಟದ ತಿಂಡಿ ತಿನುಸುಗಳು ರುಚಿಕರವಾಗುತ್ತದೆ.ಜ್ಞಾನದೀವಿಗೆ ಪುರಸ್ಕಾರ ಪಡೆದ ವಿದ್ಯಾರ್ಥಿಗಳು ಜೀವನದ ಮೊದಲ ಹಂತವನ್ನು ಗೆದ್ದಿರುವಿರಿ, ಭವಿಷ್ಯದಲ್ಲಿ ದೊಡ್ಡ ಹಂತಗಳನ್ನು ಯಶಸ್ವಿಯಾಗಿ ಪೂರೈಸಲು ಮುನ್ನ ಡೆಯಬೇಕಿದೆ.…

Read More

UN NETWORKS ತೊಕ್ಕೊಟ್ಟು : ಉಳ್ಳಾಲ ವ್ಯಾಪ್ತಿಯಲ್ಲಿ ಶುಕ್ರವಾರ ಧಾರಕಾರವಾಗಿ ಮಳೆ ಸುರಿದಿದ್ದು, ರಾಷ್ಟ್ರೀಯ ಹೆದ್ದಾರಿ66ರ ತೊಕ್ಕೊಟ್ಟು ಜಂಕ್ಷನ್‍ನಲ್ಲಿ ಕೃತಕ ನೆರಯಾದರೆ ತೊಕ್ಕೊಟ್ಟು ಭಟ್ನಗರದಿಂದ ಜಂಕ್ಷನ್ ಸಂಪರ್ಕಿಸುವ ಚರಂಡಿಯ ಮಣ್ಣನ್ನು ತೆಗೆದು ನೀರು ಹರಿಯುವಂತೆ ಮಾಡಿದ್ದು, ಈ ಪ್ರದೇಶ ಸಂಪೂರ್ಣ ಕೆಸರುಮಯವಾಗಿದೆ. ಜಂಕ್ಷನ್‍ನಲ್ಲಿ ಕೃತಕ ನೆರೆಗೆ ಕಾರಣವಾಗುತ್ತಿದ್ದ ಚರಂಡಿ ದುರಸ್ತಿ ಕಾಮಗಾರಿ ಬೆಳಗ್ಗಿನಿಂದಲೇ ಆರಂಭಗೊಂಡಿದ್ದು ಸಂಜೆಯವೇಳೆಗೆ ಮಣ್ಣು ತೆಗೆಯುವ ಕಾರ್ಯ ಮುಗಿದಿದೆ, ಜೆಸಿಬಿ ಸಹಾಯದಿಂದ ಮಣ್ಣು ತೆಗೆದರೂ ಮಣ್ಣನ್ನು ಚರಂಡಿಯ ಬದಿಯಲ್ಲೇ ರಾಶಿ ಹಾಕಿದ್ದರಿಂದ ಸಣಪೂರ್ಣ ಕೆಸರುಮಯವಾಗಿ ಪಾದಾಚಾರಿಗಳಿಗೆ ಸಂಚಾರಕ್ಕೆ ತೊಂದರೆಯಾಗಿದೆ.  ಚರಂಡಿ ಬದಿಯಲ್ಲಿ ಹಾಕಿರುವ ಮಣ್ಣನ್ನು ಸ್ಥಳಾಂತರಿಸುವ ಅಗತ್ಯ ಇದೆ. ಮೇಲ್ಸೇತುವೆಯಿಂದ ಮುಂದುವರೆದ ಜಲಪಾತ : ಧಾರಾಕಾರವಾಗಿ ಮಳೆ ಸುರಿಯುವುದರಿಂದ ಮೇಲ್ಸೇತುವೆಯಿಂದ ಜಲಪಾತದಿಂದ ನೀರು ಜಂಕ್ಷನ್‍ಗೆ ಬೀಳುತ್ತಿದ್ದು ದ್ವಿಚಕ್ರ ವಾಹನ ಸವಾರರು ಸಂಚಾರಕ್ಕೆ ಪರದಾಡುವಂತಾಗಿದೆ. ತೊಕ್ಕೊಟ್ಟು ಜಂಕ್ಷನ್‍ನಲ್ಲಿ ಸಂಜೆ ಸುರಿದ ಮಳೆಗೆ ಕೃತಕ ನೆರೆಯಾಗಿದೆ. ರಸ್ತೆಗಳು ಹೊಂಡದಿಂದ ಕೂಡಿದೆ. ಸಮುದ್ರ ಅಬ್ಬರ : ಸೋಮೇಶ್ವರ ಉಚ್ಚಿಲ ಮತ್ತು ಉಳ್ಳಾಲದ ಕೆಲವೆಡೆ…

Read More