UN NETWORKS
ಉಳ್ಳಾಲ: ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಉಳ್ಳಾಲ ಮತ್ತು ಕೊಣಾಜೆ ಭಾಗದಲ್ಲಿ ಸಿ ಆರ್ ಪಿಎಫ್ ಪಡೆ ಮತ್ತು ಸ್ಥಳೀಯ ಪೊಲೀಸರ ನೇತೃತ್ವದಲ್ಲಿ ರೂಟ್ ಮಾರ್ಚ್ ಶುಕ್ರವಾರ ಸಂಜೆ ವೇಳೆ ಜರಗಿತು.
ಉಳ್ಳಾಲ ಠಾಣಾ ವ್ಯಾಪ್ತಿಯ ಅಬ್ಬಕ್ಕ ಸರ್ಕಲ್, ಮೊಗವೀರಪಟ್ನ, ಕೋಡಿ, ಕೋಟೆಪುರ, ಪ್ಯಾರೀಸ್ ಜಂಕ್ಷನ್, ತೊಕ್ಕೊಟ್ಟು, ಕುತ್ತಾರು ಮತ್ತು ಕೊಣಾಜೆ ಠಾಣಾ ವ್ಯಾಪ್ತಿಯ ದೇರಳಕಟ್ಟೆ, ನಾಟೆಕಲ್ ,ಮುಡಿಪು ,ಕಾಯರ್ ಗೋಳಿ, ಮೊಂಟೆಪದವು, ಮಂಜನಾಡಿ, ಉರುಮಣೆ ಭಾಗದಲ್ಲಿ ನಡೆಯಿತು. ಸಿಆರ್‍ಪಿಎಫ್ ಬೆಂಗಳೂರು ಪಡೆಯ ಕಮಾಂಡರ್ ಮಾರುತಿ ನಾಯ್ಕ್, ಎಸಿಪಿ ರಾಮರಾವ್, ಠಾಣಾಧಿಕಾರಿ ಗುರುವಪ್ಪ ಕಾಂತಿ, ಕೊಣಾಜೆ ಠಾಣಾಧಿಕಾರಿ ರವಿ ನಾಯ್ಕ್, ಎಸ್. ಐ ಉಮೇಶ್ ನೇತೃತ್ವದಲ್ಲಿ ಮಾರ್ಚ್ ನಡೆಯಿತು.


