UN NETWORKS ನರಿಂಗಾನ : ಮಾನವ ಸಂಪನ್ಮೂಲ ಅಭಿವೃದ್ಧಿಗೆ ಪೂರಕವಾಗಿರುವ ಆರೋಗ್ಯ ಸೇವೆಗೆ ಆದ್ಯತೆ ನೀಡಿ ಸರ್ವರಿಗೂ ಉತ್ತಮ ಗುಣಮಟ್ಟದ ಉಚಿತ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಸರಕಾರ ಹಾಗೂ ಸರಕಾರೇತರ ಸಂಘ ಸಂಸ್ಥೆಗಳು ಮುಂದಾಗಬೇಕೆಂದು ಬಂಟ್ವಾಳ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ್ ಕರೆ ನೀಡಿದ್ದಾರೆ. ನರಿಂಗಾನ ಗ್ರಾಪಂ ಕಚೇರಿ ವಠಾರದಲ್ಲಿ ಆಲ್‌ಕಾರ್ಗೋ ಲಾಜಿಸ್ಟಿಕ್, ಪ್ರಜ್ಞಾ ಸಲಹಾ ಕೇಂದ್ರ, ಜನ ಶಿಕ್ಷಣ ಟ್ರಸ್ಟ್, ನರಿಂಗಾನ ಗ್ರಾಪಂ, ಸುಗ್ರಾಮ ಜಾಗೃತಿ ವೇದಿಕೆ, ಕೆಎಂಸಿ ಆಸ್ಪತ್ರೆ ಅತ್ತಾವರ ಇವುಗಳ ಸಹಭಾಗಿತ್ವದಲ್ಲಿ ಇತ್ತೀಚೆಗೆ ನಡೆದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಪಂ ಅಧ್ಯಕ್ಷ ಇಸ್ಮಾಯೀಲ್ ಮೀನಂಕೋಡಿ, ಜಿಪಂ ಸದಸ್ಯೆ ಮಮತಾ ಗಟ್ಟಿ, ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ, ಕೆಎಂಸಿ ಶಿಬಿರ ಸಂಯೋಜಕ ಹರ್ಬರ್ಟ್, ಗ್ರಾಪಂ ಉಪಾಧ್ಯಕ್ಷೆ ನಳಿನಾಕ್ಷಿ, ಗ್ರಾಪಂ ಸದಸ್ಯರಾದ ಹರಿಣಾಕ್ಷಿ, ಬೇಬಿ, ಅಬ್ದುಲ್ ಖಾದರ್, ಮುಹಮ್ಮದ್ ಅರಾಫತ್, ಅಬ್ದುಲ್ ರಹ್ಮಾನ್ ಲತೀಫ್, ಮುರಳಿ ಭಾಗವಹಿಸಿದ್ದರು. ಪ್ರಜ್ಞಾದ ಯೋಜನಾ ಸಂಯೋಜಕ ವಿಲಿಯಂ…
Author: UllalaVani
UN NETWORKS ಉಳ್ಳಾಲ : ಕಳೆದ ಕೆಲವು ದಿನದಿಂದ ಎಡಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ಪ್ರಾಕೃತಿಕ ವಿಕೋಪದಿಂದಾಗಿ ಹಾನಿಯಾಗಿದ್ದು ಈ ಪ್ರದೇಶಕ್ಕೆ ಬುಧವಾರ ಶಾಸಕ ಯು.ಟಿ.ಖಾದರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಉಳ್ಳಾಲದ ಮಂಚಿಲ ಸುಧಾಕರ್ ರವರ ಮನೆಗೆ ಮರಬಿದ್ದು ಹಾನಿಯಾಗಿದ್ದು, ಮಂಚಿಲ ಬಳಿ ಆಲಿಸ್ ವೇಗಸ್ ಎಂಬುವವರ ಮನೆ ಆಕಸ್ಮಿಕ ಬೆಂಕಿಗೆ ಸಂಪೂರ್ಣ ಆಹುತಿಯಾಗಿ ಅಪಾರ ಹಾನಿ ಸಂಭವಿಸಿದೆ. ಮಳೆಯಿಂದಾಗಿ ಉಳ್ಳಾಲ ಹಳೇಕೋಟೆ ಬಳಿ ರಸ್ತೆಗೆ ಕಟ್ಟಲಾದ ಬೃಹತ್ ತಡೆಗೋಡೆ ಕುಸಿದು ಬಿದ್ದು ಸಂಚಾರಕ್ಕೆ ತೊಂದರೆಯಾಗಿತ್ತು. ಹಾನಿಗೊಳಗಾದ ಸ್ಥಳಕ್ಕೆ ಶಾಸಕ ಯು.ಟಿ.ಖಾದರ್ ಭೇಟಿ ನೀಡಿ ಪರಿಶೀಲನೆ ಶೀಘ್ರ ಪರಿಹಾರ ಒದಗಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಉಳ್ಳಾಲ ನಗರ ಸಭಾ ಸದಸ್ಯರಾದ ಅಯ್ಯೂಬ್ ಮಂಚಿಲ, ಯು.ಎ.ಇಸ್ಮಾಯಿಲ್, ವೀಣಾ ಡಿಸೋಜ, ಬಾಝಿಲ್ ಡಿಸೋಜ, ಅಸ್ಗರ್ ಆಲಿ,ಭಾರತಿ, ಇಬ್ರಾಹಿಮ್ ಅಶ್ರಫ್, ಅಬ್ದುಲ್ ರವೂಫ್ ಮತ್ತು ಅಳೇಕಲ ಸ್ಪೋರ್ಟಿಂಗ್ಸ್ ಅಧ್ಯಕ್ಷ ಉಮ್ಮರ್ ಫಾರೂಕ್, ಉಳ್ಲಾಲ ದರ್ಗಾ ಸಮಿತಿ ಸದಸ್ಯ ಆಶೀಫ್…
UN NETWORKS ಉಳ್ಳಾಲ : ರಾಜ್ಯದ ಅತೀದೊಡ್ಡ ಗ್ರಾಮ ಪಂಚಾಯತ್ ಆಗಿರುವ ಸೋಮೇಶ್ವರ ಗ್ರಾಮ ಪಂಚಾಯತ್ ಬುಧವಾರದಿಂದ ಪುರಸಭೆಯಾಗಿ ಕಾರ್ಯಾರಂಭ ಮಾಡಿದ್ದು ಉಳ್ಳಾಲ ನಗರಸಭೆಯ ಮುಖ್ಯಾಧಿಕಾರಿಯಾಗಿದ್ದ ವಾಣಿ ವಿ. ಆಳ್ವ ಅವರು ಸೋಮೇಶ್ವರ ಪುರಸಭೆಯ ಮುಖ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು. ಸೋಮೇಶ್ವರ ಗ್ರಾಮ ಪಂಚಾಯತ್‍ನ ಅಧ್ಯಕ್ಷ ರಾಜೇಶ್ ಎ. ಉಚ್ಚಿಲ್ , ಉಪಾಧ್ಯಕ್ಷೆ ಸುಶೀಲಾ ಎಸ್.ನಾಯಕ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮನೋಹರ ಗೌಡ ಅವರ ಉಪಸ್ಥಿತಿಯಲ್ಲಿ ವಾಣಿ ವಿ. ಆಳ್ವ ಅವರು ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯ ರವಿಶಂಕರ್, ಮಾಜಿ ಉಪಾಧ್ಯಕ್ಷ ರಮೇಶ್ ಕೊಲ್ಯ, ಮಾಜಿ ಅಧ್ಯಕ್ಷ ಮೋಹನ್ ಶೆಟ್ಟಿ ಮತ್ತು ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸೋಮೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಎ. ಉಚ್ಚಿಲ್ ಮಾತನಾಡಿ ಕಳೆದ 12 ವರ್ಷಗಳ ಹಿಂದೆ ಪಕ್ಷಾತೀತವಾಗಿ ಸೋಮೇಶ್ವರ ಗ್ರಾಮ ಪಂಚಾಯತ್ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಹೋರಾಟ ನಡೆದಿತ್ತು. ಎಲ್ಲರ ವಿಶ್ವಾಸವನ್ನು ತೆಗೆದುಕೊಂಡು ಗ್ರಾಮ ಪಂಚಾಯತ್ ಈವರೆಗೆ ಆಡಳಿತ ನಡೆಸಿದ್ದು,…
UN NETWORKS ಉಳ್ಳಾಲ : ಭೂೃಣಶಾಸ್ತ್ರಜ್ಞ ಮುಹಮ್ಮದ್ ಆಸೀಫ್ ಅವರು ಮಂಡಿಸಿದ “ದಿ ಸ್ಟಡಿ ಆನ್ ಡರ್ಮಟೊಗ್ಲಿಪಿಕ್ ಟ್ರೈಟ್, ಎಬಿಒ/ಆರ್‍ಎಚ್ ಬ್ಲಡ್ ಗ್ರೂಪ್ಸ್ ಮತ್ತು ಕಾಮನ್ ಜೆನೆಟಿಕ್ ವೆರಿಯೆಂಟ್ಸ್ ಅಸೋಸಿಯೇಟೆಡ್ ವಿದ್ ಮಯೋಕಾರ್ಡಿಯಲ್ ಇನ್ಫೆಕ್ಷನ್” ಮಹಾ ಪ್ರಬಂಧಕ್ಕೆ ಯೆನೆಪೋಯ ವಿಶ್ವವಿದ್ಯಾನಿಲಯ ಪಿಎಚ್‍ಡಿ ಪದವಿ ನೀಡಿದೆ. ಅವರು ಅಂಗರಚನಾಶಾಸ್ತ್ರಜ್ಞ ಡಾ. ಶಿವರಾಮ ಭಟ್, ತಿಳಿಶಾಸ್ತ್ರಜ್ಞ ಡಾ. ಮುಸ್ತಕ್ ಹಾಗೂ ಹೃದ್ರೋಗ ತಜ್ಞ ಡಾ. ಸುಬ್ರಮಣ್ಯಂ ಮಾರ್ಗ ದರ್ಶನದಲ್ಲಿ ಪ್ರಬಂಧ ಮಂಡಿಸಿರುತ್ತಾರೆ. ಅವರು ಪರಂಗಿಪೇಟೆ ಉಮರಬ್ಬ(ಪುತುಭಾವ) ಮತ್ತು ಅಲಿಮಮ್ಮ ದಂಪತಿಯ ಪುತ್ರರಾಗಿರುತ್ತಾರೆ.
UN NETWORKS ಉಳ್ಳಾಲ : ಪ್ರಿಯತಮನಿಂದ ಚೂರಿ ಇರಿತಕ್ಕೆ ಒಳಗಾಗಿದ್ದ ವಿದ್ಯಾರ್ಥಿನಿ ಬಗಂಬಿಲ ನಿವಾಸಿ ಧೀಕ್ಷಾ (22) ಚೇತರಿಸಿಕೊಂಡಿದ್ದು, ದಾಖಲಾಗಿದ್ದ ದೇರಳಕಟ್ಟೆ ಕ್ಷೇಮ ಆಸ್ಪತ್ರೆಯ ತೀವ್ರ ನಿಗಾ ಘಟಕದಿಂದ ವಾಡ್9ಗೆ ಬುಧವಾರ ಸ್ಥಳಾಂತರಿಸಲಾಗಿದೆ. ಜು.29 ರಂದು ಶಕ್ತಿನಗರ ನಿವಾಸಿ ಸುಶಾಂತ್ ಪ್ರೀತಿ ನಿರಾಕರಿಸಿದಳೆಂಬ ಕಾರಣಕ್ಕೆ ದೀಕ್ಷಾಳಿಗೆ 12 ಬಾರಿ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ್ದ. ಬಳಿಕ ತನ್ನ ಕುತ್ತಿಗೆ ಭಾಗಕ್ಕೆ ಇರಿದು ಆತ್ಮಹತ್ಯೆಗೆ ಯತ್ನಿಸಿದ್ದನು. ಇಬ್ಬರನ್ನು ದೇರಳಕಟ್ಟೆಯ ಕ್ಷೇಮ ಆಸ್ಪತ್ರೆಗೆ ಗಂಭೀರ ಸ್ಥಿತಿಯಲ್ಲಿ ದಾಖಲಿಸಲಾಗಿತ್ತು. ಸುಶಾಂತ್ ಎರಡೇ ದಿನದಲ್ಲಿ ಚೇತರಿಸಿಕೊಂಡಿದ್ದು, ಉಳ್ಳಾಲ ಪೊಲೀಸರು ಸಂಪೂರ್ಣ ಚೇತರಿಸಿಕೊಂಡ ಎಂಟು ದಿನಗಳ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ , ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. 10 ದಿನಗಳ ಕಾಲ ಧೀಕ್ಷಾ ಸ್ಥಿತಿ ಚಿಂತಾಜನಕ ಸ್ಥಿತಿಯಲ್ಲೇ ಮುಂದುವರಿದಿತ್ತು. ಘಟನೆ ನಡೆದು 25 ದಿನಗಳ ಬಳಿಕ ಧೀಕ್ಷಾ ಆರೋಗ್ಯ ಸ್ಥಿತಿಯಲ್ಲಿ ಬಹಳ ಸುಧಾರಣೆಯಾಗಿದೆ. ವಾರ್ಡಿಗೆ ಸ್ಥಳಾಂತರಗೊಳಿಸಲಾಗಿದ್ದು, ಆಹಾರವನ್ನು ಸೇವಿಸುತ್ತಿದ್ದಾಳೆ. ದೇಹದೊಳಗಿನ ಗಾಯ ಮಾಸುವವರೆಗೆ ಚಿಕಿತ್ಸೆ ಮುಂದುವರಿದಿದೆ.
UN NETWORKS ಮಂಗಳೂರು : ಮಿತಭಾಷಿ , ನಗು ಮುಖದ ಸುಂದರ ತರುಣ ನಾಗೇಶರ ನಿಧನ,ಅಘಾತವಷ್ಟೇ ಅಲ್ಲ, ನಮ್ಮ ವ್ಯವಸ್ಥೆ ಯ ಅಚಾತುರ್ಯ ಮತ್ತು ಉದಾಸೀನತೆಯ ಬಗ್ಗೆ ಅಪರಾಧ ಪ್ರಜ್ಞೆ ಕಾಡುತ್ತದೆ.! ಈ ಸಾವಿನಲ್ಲಿ ನಮ್ಮ ಸಾಮಾಜಿಕ ಹೊಣೆಗಾರಿಕೆಯ ವೈಫಲ್ಯ ವೂ ಅಡಗಿದೆ!? ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಫಾರೂಕ್ ಉಳ್ಳಾಲ್ ತಮ್ಮ ಸಂತಾಪ ಪ್ರಕಟನಾ ಹೇಳಿಕೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಲೋಕದ ಸರಿ-ತಪ್ಪುಗಳನ್ನು ಸಾಕೆನ್ನಿಸುವಷ್ಟು ಬಾರಿ ಹೇಳುತ್ತಲೇ ಇರುವ ಮಾಧ್ಯಮಗಳು ಅದರಲ್ಲೂ ನಾಗೇಶ್ ಉದ್ಯೋಗದಲ್ಲಿದ್ದ ‘ದೃಶ್ಯ ಮಾಧ್ಯಮ’ಕ್ಕೆ(,ಗಳಿಗೆ) ಊರಿಗೆ ಮಹಾ ಮಾರಿಯಂತೆ ವಕ್ಕರಿಸಿರುವ ‘ಡೆಂಗ್ಯೂ ಜ್ವರ’ ದ ಜಾಗೃತಿ ಮೂಡಿಸಲು, ಸಂಬಂಧ ಪಟ್ಟ ಇಲಾಖೆಯನ್ನು ಎಚ್ಚರಿಸಲು ಸಕಾಲಿಕ ಕಾರ್ಯಕ್ರಮ ನೀಡ ಬೇಕೆಂದು ಅನಿಸದೇ ಹೋದದ್ದು, ‘ದೀಪದ ಕೆಳಗೆ’ ಕತ್ತಲೆಯಾಗಿರುತ್ತದೆ ಎನ್ನುವಂತಾಗಿದೆ ನಿಜಕ್ಕೂ ಇದು ದುರಂತವೇ ಸರಿ. ಖಂಡನಾರ್ಹ ಕೂಡಾ. ಇನ್ನಾದರೂ, ಸ್ಥಳೀಯವಾಗಿಯಾದರೂ ಮಾಧ್ಯಮಗಳು ವೃತ್ತಿ ಬಾಂಧವರ ಕ್ಷೇಮ, ತಮ್ಮ ಕರ್ತವ್ಯ ಎಂದು ಪರಿಗಣಿಸುವಂತಾಗಲಿ. ಎಂದು ಮಾಧ್ಯಮ ವ್ಯವಸ್ಥಾಪಕರನ್ನು ಒತ್ತಾಯಿಸಿರುವ ಫಾರೂಕ್ ಉಳ್ಳಾಲ್,…
UN NETWORKS ತಲಪಾಡಿ : ಅಕ್ರಮವಾಗಿ ಕೇರಳ ಕಡೆಗೆ ಲಾರಿ ಮೂಲಕ ಜಾನುವಾರು ಸಾಗಿಸುತ್ತಿದ್ದ ನಾಲ್ವರ ತಂಡವನ್ನು ಬಂಧಿಸಿರುವ ಉಳ್ಳಾಲ ಪೊಲೀಸರು, ಲಾರಿ ಸಹಿತ 10 ಜಾನುವಾರುಗಳನ್ನು ತಲಪಾಡಿ ಟೋಲ್‌ಗೇಟ್ ಬಳಿ ಸೋಮವಾರ ವಶಪಡಿಸಿಕೊಂಡಿದ್ದಾರೆ. ಅಸ್ಸಾಂ ಮೂಲದ ರೂಪೇಯ್ ಮಾರ್ಡಿ, ಸುಮಿತ್, ದಶರಥ್ ಹಾಗೂ ಜಾನ್ ಬಂಧಿತರು. ನೆಲ್ಯಾಡಿ ನಿವಾಸಿ ಸೆಬಾಸ್ಟಿಯನ್ ಎಂಬಾತ ಜಾನುವಾರುಗಳನ್ನು ಲಾರಿಯಲ್ಲಿ ಕಳುಹಿಸಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ.ಟೋಲ್ ಸಮೀಪ ವಾಹನ ತಪಾಸಣೆ ನಡೆಸುತ್ತಿದ್ದಾಗ ಕೇರಳ ನೋಂದಾಯಿತ ಈಚರ್ ಲಾರಿಯಲ್ಲಿ ಎಮ್ಮೆ ಮತ್ತು ಕೋಣ ಸಹಿತ ಒಟ್ಟು 10 ಜಾನುವಾರುಗಳನ್ನು ಅಕ್ರಮವಾಗಿ ಹಾಗೂ ಅಮಾನುಷವಾಗಿ ಸಾಗಿಸಲಾಗುತ್ತಿತ್ತು. ಈ ಕುರಿತು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಾನುವಾರುಗಳನ್ನು ಪಜೀರು ಗೋವನಿತಾಶ್ರಯ ವಶಕ್ಕೆ ಒಪ್ಪಿಸಲಾಗಿದೆ. ಇನ್‌ಸ್ಪೆಕ್ಟರ್ ಗೋಪಿಕೃಷ್ಣ ನೇತೃತ್ವದಲ್ಲಿ ಎಎಸ್‌ಐ ರಾಧಾ ಕೃಷ್ಣ , ಪರಮೇಶ್ವರ್ ಹಾಗೂ ತಲಪಾಡಿ ಚೆಕ್ ಪೋಸ್ಟ್ ಸಿಬಂದಿ ರವೀಂದ್ರ ಹಾಗೂ ಹೋಂ ಗಾರ್ಡ್ ರಹಿಮಾನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು
UN NETWORKS ಸೋಮೇಶ್ವರ : ಸೋಮೇಶ್ವರ ಪುರಸಭೆಗೊಳಪಟ್ಟ ಬಟ್ಟಪ್ಪಾಡಿ ಎಂಬಲ್ಲಿನ ಕಾಲು ಸೇತುವೆಯು ಕುಸಿಯುವ ಹಂತ ತಲುಪಿ ವರ್ಷವಾದರೂ ಕೂಡ ದುರಸ್ತಿಯ ಭಾಗ್ಯ ಕಾಣುತ್ತಿಲ್ಲ. ಇನ್ನೇನೋ ಈ ಬಾರಿಯ ಮಳೆಗೆ ಸಂಪೂರ್ಣವಾಗಿ ಕುಸಿದು ಬಿದ್ದರೆ ಸಾರ್ವಜನಿಕರು ಪರದಾಡಬೇಕಾದ ಪರಿಸ್ಥಿತಿ ಇದೆ. ಕೆ.ಸಿ.ರೋಡುವಿನಿಂದ ಬಟ್ಟಪ್ಪಾಡಿಗೆ ಸಂಪರ್ಕಿಸುವ ಅತಿ ಕಾಲು ಸಂಕ ಇದಾಗಿದ್ದು, ದಿನಂಪ್ರತಿ ನೂರಾರು ಶಾಲಾ-ವಿದ್ಯಾರ್ಥಿಗಳು, ಸಾರ್ವಜನಿಕರು ಇದರ ಮುಖಾಂತರ ಸಂಚರಿಸುತ್ತಿದ್ದಾರೆ. ಈ ಹಿಂದೆಯೇ ಸೋಮೇಶ್ವರ ಪುರಸಭೆಯ ಅಧಿಕಾರಿಗಳು ಹೊಸ ಸಂಕ ನಿರ್ಮಿಸುವುದಾಗಿ ಭರವಸೆ ನೀಡಿ ಸೇತುವೆಯ ತಡೆಬೇಲಿಯನ್ನು ಒಡೆದು ಹಾಕಿದ್ದಾರೆ. ಆ ಬಳಿಕ ಯಾವ ಪ್ರಗತಿಯೂ ಕಂಡಿಲ್ಲ. ಈ ಬಗ್ಗೆ ನಾಗರಿಕರು ಹಲವು ಬಾರಿ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದರೂ ಕೂಡ ಪ್ರಯೋಜನ ಆಗಿಲ್ಲ. ಸಚಿವ ಯು.ಟಿ. ಖಾದರ್‌ಗೆ ಇಲ್ಲಿನ ವಸ್ತುಸ್ಥಿತಿಯ ಅರಿವಿದ್ದರೂ ಹೊಸ ಕಾಲು ಸಂಕದ ರಚನೆಗೆ ಆಸಕ್ತಿ ವಹಿಸಿಲ್ಲ ಎಂದು ಸ್ಥಳೀಯರು ಆಪಾದಿಸಿದ್ದಾರೆ. ಇನ್ನಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
UN NETWORKS ಉಳ್ಳಾಲ : ಉಳ್ಳಾಲದಾದ್ಯಂತ ಗಾಳಿ ಮಳೆಗೆ ಗುಡ್ಡಕುಸಿತಕ್ಕೆ ಎರಡು ಮನೆಗಳು ಹಾನಿಯಾದರೆ, ಮರಗಳು ಉರುಳಿ ವಿದ್ಯುತ್ ಕಂಬಗಳು ಧರೆಗುರುಳಿದ್ದು ಯೇನೆಪೊಯ ಬಳಿ ವಿದ್ಯುತ್ ಸರಬರಾಜು ಮಾಡುವ ಮುಖ್ಯ ಲೇನ್‍ಗೆ ಮರಬಿದ್ದು ರಾತ್ರಿಯಿಡೀ ವಿದ್ಯುತ್‍ನಿಂದ ಜನತೆ ವಂಚಿತರಾದರೆ, ಅಲ್ಲಲ್ಲಿ ಮರ, ಗುಡ್ಡ ಕುಸಿತದಂತಹ ಸಣ್ಣಪುಟ್ಟ ಘಟನೆಗಳು ವರದಿಯಾಗಿದೆ. ಅಂಬ್ಲಮೊಗರು ಮದಕ ಜಂಕ್ಷನ್ ಬಳಿ ಗುಡ್ಡ ಕುಸಿದು ಮದಕ ನಿವಾಸಿಗಳಾದ ಅಬ್ಬಾಸ್ ಮತ್ತು ರಝಾಕ್ ಎಂಬವರ ಮನೆಗಳಿಗೆ ಹಾನಿಯಾದರೆ ವಿದ್ಯುತ್ ಕಂಬವೊಂದು ಧರೆಗುರುಳಿದೆ. ಘಟನೆಯ ವೇಳೆ ಮನೆಯವರ ಸಮಯ ಪ್ರಜ್ಞೆಯಿಂದ ಅನಾಹುತ ಸಂಭವಿಸಿಲ್ಲ. ಕಳೆ ವರ್ಷದ ಮಳೆಗಾಲದಲ್ಲೂ ಇದೇ ಗುಡ್ಡ ಜರಿದು ಸುಮಾರು ನಾಲ್ಕಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿತ್ತು ಮನೆ ದುರಸ್ತಿ ಮಾಡಿದ ಕೆಲವೇ ದಿನಗಳಲ್ಲಿ ಮನೆಗಳಿಗೆ ಹಾನಿಯಾಗಿದೆ. ವಿದ್ಯುತ್ ಸರಬರಾಜಿನ ಮುಖ್ಯಲೇನ್‍ಗೆ ಹಾನಿ : ಸಂಜೆ ಸರಿದ ಗಾಳಿ ಮಳೆಗೆ ಯೇನೆಪೊಯ ಆಸ್ಪತ್ರೆ ಬಳಿ ದೊಡ್ಡದೊಮದಿ ಮರ ಉರುಳಿ ಕೊಣಾಜೆ ಉಪಕೇಂದ್ರದಿಂದ ಉಳ್ಳಾಲ ಕೇಂದ್ರಕ್ಕೆ ವಿದ್ಯುತ್ ಪೂರೈಸುವ ಮುಖ್ಯ ಲೈನ್…
UN NETWORKS ಉಳ್ಳಾಲ : ಸಿಐಟಿಯು ಉಳ್ಳಾಲ ವಲಯ ಸಮ್ಮೇಳನವು ರವಿವಾರ ಕುತ್ತಾರಿನ ಮುನ್ನೂರು ಯುವಕ ಮಂಡಲದಲ್ಲಿ ಜರುಗಿತು. ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಸಿಐಟಿಯು ದ.ಕ.ಜಿಲ್ಲಾಧ್ಯಕ್ಷ ಜೆ. ಬಾಲೃಷ್ಣ ಶೆಟ್ಟಿ ಕಳೆದ 5 ವರ್ಷಗಳ ಅವಧಿಯಲ್ಲಿ ನಿರಂತರವಾಗಿ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸಿದ ನರೇಂದ್ರ ಮೋದಿ ಸರಕಾರದ ಬಗ್ಗೆ ಜನತೆಯಲ್ಲಿ ಭಾರೀ ಆಕ್ರೋಶವಿತ್ತು. ಮತ್ತೆ ಅಧಿಕಾರಕ್ಕೇರುವುದೇ ಕಷ್ಟಸಾಧ್ಯವೆಂದಾಗ ಪುಲ್ವಾಮಾ ದಾಳಿ ನಡೆಸಿ ಸೈನಿಕರನ್ನು ಬಲಿ ಕೊಟ್ಟು ದೇಶಪ್ರೇಮದ ಉನ್ಮಾದವನ್ನು ಸೃಷ್ಟಿಸಿ ಅಬ್ಬರದ ಪ್ರಚಾರ ನಡೆಸಿ ಯುವಕರಲ್ಲಿ ಭಾರೀ ಭ್ರಮೆಯನ್ನು ಮೂಡಿಸಿ ನರೇಂದ್ರ ಮೋದಿ ಸರಕಾರವು ಮತ್ತೊಮ್ಮೆ ಅಧಿಕಾರಕ್ಕೇರುವಲ್ಲಿ ಈ ದೇಶದ ಬಂಡವಾಳಶಾಹಿಗಳ ಪಾತ್ರ ಎದ್ದು ಕಾಣುತ್ತಿದೆ ಎಂದರು. ನೋಟು ರದ್ದತಿ, ಜಿಎಸ್‌ಟಿಯಿಂದಾಗಿ ಲಕ್ಷಾಂತರ ಕೈಗಾರಿಕೆಗಳು ಮುಚ್ಚಲ್ಪಟ್ಟಿದ್ದು ಕಾರ್ಮಿಕರ ಬದುಕು ಸಂಕಷ್ಟಮಯವಾಗಿದೆ. ಬ್ಯಾಂಕುಗಳ ವಿಲೀನ, ರೈಲ್ಚೆ,ರಕ್ಷಣೆ ಖಾಸಗೀಕರಣ, ಕಾರ್ಮಿಕರ ಕಾನೂನು ತಿದ್ದುಪಡಿಗಳು, ಬಂಡವಾಳಿಗರ ಲಾಭ ಹೆಚ್ಚಿಸಲೇ ಹೊರತು ಕಾರ್ಮಿಕರ ಉದ್ದಾರಕ್ಕಲ್ಲ. ಎರಡನೆ ಬಾರಿಗೆ ಅಧಿಕಾರಕ್ಕೇರಿದ ನರೇಂದ್ರ ಮೋದಿ ಸರಕಾರವು ಕಾರ್ಮಿಕ ವಿರೋಧಿ ನೀತಿಗಳನ್ನು…

