UN NETWORKS
ಉಳ್ಳಾಲ: ಇಲ್ಲಿನ ಧರ್ಮನಗರದ ಹನುಮಾನ್ ಫ್ರೆಂಡ್ಸ್ ಇದರ ನಾಲ್ಕನೇ ವಾರ್ಷಿಕೋತ್ಸವ ಪ್ರಯುಕ್ತ ಜರಗಿದ ಸಭಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಶ್ರೀ ವೈದ್ಯನಾಥ ಕ್ಷೇತ್ರ ಉಳ್ಳಾಲಬೈಲಿನ ಪ್ರಧಾನ ಅರ್ಚಕ ದಾಮೋದರ ಪೂಜಾರಿ ಉದ್ಘಾಟಿಸಿದರು.
ತೆಂಗಿನಹಿತ್ಲು ಶ್ರೀ ರಾಹು ಗುಳಿಗ ಬನ ಸೇವಾ ಸಮಿತಿಯ ಗೌರವಾಧ್ಯಕ್ಷ ನಾರಾಯಣ ತೆಂಗಿನ ಹಿತ್ಲು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಗರಸಭೆ ಸದಸ್ಯೆ ಸ್ವಪ್ನಾ ಹರೀಶ್, ಉಳ್ಳಾಲ ನಗರಸಭೆ ಮಾಜಿ ಸದಸ್ಯೆ ಮಹಾಲಕ್ಷ್ಮೀ, ಸದಾನಂದ ತೆಂಗಿನಹಿತ್ಲು, ಶೇಖರ್ ಬಂಗೇರ, ಗೋಪಾಲ ಕಲ್ಪನೆ, ಲತೀಶ್ ಕುಮಾರ್, ಸತೀಶ್ ಕುಮಾರ್, ಭಾಸ್ಕರ್ ತೆಂಗಿನಹಿತ್ಲು, ತಿಲಕ್ ತೆಂಗಿನಹಿತ್ಲು , ಶ್ರವಣ್ ಧರ್ಮನಗರ ಉಪಸ್ಥಿತರಿದ್ದರು.ಅರುಣ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.


