UN NETWORKS ದೇರಳಕಟ್ಟೆ : ರೋಟರಿ ಕ್ಲಬ್ ದೇರಳಕಟ್ಟೆಯ ವತಿಯಿಂದ “ಆಟಿದ ಕೂಟ” ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ರವೀಂದ್ರ ಕಲಾ ವೇದಿಕೆಯಲ್ಲಿ ನಡೆಯಿತು. ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರವೀಂದ್ರ ರೈ ಮತ್ತು ಪೊಸಕುರಲ್ ಟಿ ವಿ ಚಾನೆಲ್ ನ ನಿರ್ದೇಶಕ ವಿದ್ಯಾಧರ ಶೆಟ್ಟಿ ಆಟಿ ತಿಂಗಳ ವಿಶೇಷತೆಯನ್ನು ತಿಳಿಸಿದರು. ದೇರಳಕಟ್ಟೆ ರೋಟರಿ ಕ್ಲಬ್‍ನ ಅಧ್ಯಕ್ಷ ಪ್ರೊ| ರವಿಶಂಕರ್ ರಾವ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ರೋಟರಿಯ ಮಾಜಿ ಜಿಲ್ಲಾ ಗವರ್ನರ್ ಡಾಟ ದೇವದಾಸ್ ರೈ ಮುಖ್ಯ ಅತಿಥಿಯಾಗಿದ್ದರು. ಕ್ಲಬ್‍ನ ಕಾರ್ಯದರ್ಶಿ ವಿಕ್ರಂ ದತ್ತಾ, ನಿಕಟ ಪೂರ್ವ ಅಧ್ಯಕ್ಷರಾದ ಪುರುಷೋತ್ತಮ್ ಅಂಚನ್, ಕೋಶಾಧಿಕಾರಿ ಜೆ. ಪಿ. ರೈ ಉಪಸ್ಥಿತರಿದ್ದರು. ಕ್ಲಬ್‍ನ ಉಪಾಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು ಸ್ವಾಗತಿಸಿದರು. ನಿರ್ದೇಶಕರಾದ ಡಾ| ಅನಂತನ್ ವಂದಿಸಿದರು.
Author: UllalaVani
UN NETWORKS ಮಂಗಳೂರು: ಸೋಮವಾರ ರಾತ್ರಿ ಮಂಗಳೂರು ತೊಕ್ಕೊಟ್ಟು ನೇತ್ರಾವತಿ ನದಿ ಸೇತುವೆ ಸಮೀಪ ಕಾಣೆಯಾಗಿದ್ದ ಕೆಫೆ ಕಾಫಿ ಡೇ ಸ್ಥಾಪಕ, ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಅಳಿಯ ಸಿದ್ಧಾರ್ಥ ಅವರ ಮೃತದೇಹ ಬುಧವಾರ ಬೆಳಗ್ಗೆ 6.30ಕ್ಕೆ ಹೊಯ್ಗೆ ಬಝಾರ್ ಅಳಿವೆ (ನದಿ ಮತ್ತು ಸಮುದ್ರ ಸೇರುವ ಸ್ಥಳ) ಬಾಗಿಲ ಸಮೀಪ ಪತ್ತೆಯಾಗಿದೆ. ಕಾರು ಚಾಲಕನಲ್ಲಿ ಸೇತುವೆ ಬಳಿ ಕಾರು ನಿಲ್ಲಿಸುವಂತೆ ಹೇಳಿದ್ದ ಸಿದ್ಧಾರ್ಥ ಅವರು ಆ ಬಳಿಕ ಸೇತುವೆಯಲ್ಲಿ ನಡೆದುಕೊಂಡು ಮೊಬೈಲ್ ನಲ್ಲಿ ಮಾತನಾಡುತ್ತಾ ತೆರಳಿದ್ದಾರೆ. ಬಳಿಕ ಸೇತುವೆ ಮಧ್ಯಭಾಗಕ್ಕೆ ಬಂದು ನಂತರ ಕಾಣೆಯಾಗಿದ್ದಾರೆ ಎಂದು ಈ ಬಗ್ಗೆ ಮಂಗಳೂರು ಪೊಲೀಸರಿಗೆ ಕಾರು ಚಾಲಕ ದೂರು ನೀಡಿದ್ದರು.
UN NETWORKS ಮಂಜನಾಡಿ : ಮಂಜನಾಡಿ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್‌ನ ಸ್ಥಾಪಕ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಸಾಧಕ, ಹಿರಿಯ ಧಾರ್ಮಿಕ ವಿದ್ವಾಂಸ ಅಲ್‌ಹಾಜ್ ಪಿ.ಎಂ. ಅಬ್ಬಾಸ್ ಮುಸ್ಲಿಯಾರ್ (73) ಸೋಮವಾರ ಸಂಜೆ ನಿಧನರಾಗಿದ್ದು, ಅವರ ಅಂತಿಮ ಸಂಸ್ಕಾರವು ಇಂದು ಬೆಳಗ್ಗೆ ಜನ ಸಾಗರದ ನಡುವೆ ನಡೆಯಿತು. ಮಂಜನಾಡಿಯ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಆವರಣದಲ್ಲಿ ಎ.ಪಿ. ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ನೇತೃತ್ವದಲ್ಲಿ ಮಯ್ಯತ್ ನಮಾಝ್ ನಡೆಯಿತು. ಕಳೆದ ಕೆಲವು ಸಮಯದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅಬ್ಬಾಸ್ ಉಸ್ತಾದ್ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಪತ್ನಿ, 5 ಗಂಡು ಮತ್ತು 3 ಹೆಣ್ಮಕ್ಕಳ ಸಹಿತ ಅಪಾರ ಶಿಷ್ಯ ವೃಂದ, ಅಭಿಮಾನಿ ಹಾಗೂ ಉಲಮಾ-ಉಮಾರಗಳು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.ಈ ಸಂದರ್ಭ ಮಾಜಿ ಸಚಿವ ಯುಟಿ ಖಾದರ್, ಪೆರೋಡ್ ಅಬ್ದುರ್ರಹ್ಮಾನ್ ಸಖಾಫಿ, ಆಲಿಕುಂಞಿ ಮುಸ್ಲಿಯಾರ್ ಶಿರಿಯಾ ಮತ್ತಿತರ ಉಲಮಾ-ಉಮರಾಗಳ ಸಹಿತ ಸಾವಿರಾರು ಶಿಷ್ಯಂದಿರು, ಅಭಿಮಾನಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
UN NETWORKS ಮಂಗಳೂರು: ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅಳಿಯ ವಿ.ಜಿ. ಸಿದ್ದಾರ್ಥ್ ಮಂಗಳೂರಿನ ನೇತ್ರಾವತಿ ಸೇತುವೆ ಬಳಿ ನಾಪತ್ತೆಯಾಗಿದ್ದು, ತೀವ್ರ ಶೊಧ ಕಾರ್ಯ ನಡೆಯುತ್ತಿದೆ. ಕಾರ್ಯಾಚರಣೆಗೆ ಸೇನಾ ಹೆಲಿಕಾಪ್ಟರ್ ಬಳಸುವ ಬಗ್ಗೆಚಿಂತನೆ ನಡೆಯುತ್ತಿದೆ ಎಂದು ವರದಿಯಾಗಿದೆ. ವಿ.ಜಿ. ಸಿದ್ದಾರ್ಥ್ ಸೋಮವಾರ ಸಂಜೆ ಮಂಗಳೂರಿನ ನೇತ್ರಾವತಿ ಸೇತುವೆ ಬಳಿಯಿಂದ ನಾಪತ್ತೆಯಾಗಿದ್ದರು. ಜಪ್ಪಿನ ಮೊಗರು, ಅಳಿವೆ ಬಾಗಿಲು, ಉಳ್ಳಾಲ ಸುತ್ತಮುತ್ತ ತೀವ್ರ ಶೋಧ ಕಾರ್ಯ ನಡೆಯುತ್ತಿದೆ. 30ಕ್ಕೂ ಹೆಚ್ಚು ಬೋಟ್ ಗಳಲ್ಲಿ 300ಕ್ಕೂ ಹೆಚ್ಚು ಸಿಬ್ಬಂದಿಗಳಿಂದ ಹುಡುಕಾಟ ನಡೆಯುತ್ತಿದೆ. ಸ್ಥಳಕ್ಕೆ ಎನ್ ಡಿ ಆರ್ ಎಫ್ ತಂಡ ಆಗಮಿಸುತ್ತಿದೆ. ಕಾರಿನ ಚಾಲಕ ಪೊಲೀಸರಿಗೆ ನೀಡಿದ ಮಾಹಿತಿಯಂತೆ ಸಿದ್ದಾರ್ಥ್ ಬೆಂಗಳೂರಿನಿಂದ ಮಂಗಳೂರಿಗೆಂದು ಹೇಳಿ ಚಾಲಕ ಮತ್ತು ಇಬ್ಬರ ಜತೆಗೂಡಿ ಕಾರಿನಲ್ಲಿ ಹೊರಟಿದ್ದರು. ಪಂಪ್‌ವೆಲ್ ತಲುಪಿದಾಗ ಜತೆಗಿದ್ದ ಇಬ್ಬರು ಕಾರಿನಿಂದ ಇಳಿದಿದ್ದರು. ಬಳಿಕ ಮಾಲಕನ ಸೂಚನೆಯಂತೆ ಚಾಲಕ ಕಾರನ್ನು ಕಾಸರಗೋಡು ಹೆದ್ದಾರಿಯತ್ತ ತಿರುಗಿಸಿದ್ದನು. ನೇತ್ರಾವತಿ ಸೇತುವೆ ಬಳಿ ತಲುಪುತ್ತಿದ್ದಂತೆ ಕಾರನ್ನು ಎಡ ಬದಿಯಲ್ಲಿರುವ ಕಂರ್ಬಿಸ್ಥಾನದ…
UN NETWORKS ಮಂಜನಾಡಿ : ಮಂಜನಾಡಿ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್‌ನ ಸ್ಥಾಪಕ, ಹಿರಿಯ ಧಾರ್ಮಿಕ ವಿದ್ವಾಂಸ ಅಲ್ ಹಾಜ್ ಪಿ.ಎಂ. ಅಬ್ಬಾಸ್ ಮುಸ್ಲಿಯಾರ್ (73) ಅಲ್ಪ ಕಾಲದ ಅಸೌಖ್ಯದಿಂದ ಇಂದು ನಿಧನರಾಗಿದ್ದಾರೆ. ಅಬ್ಬಾಸ್ ಮುಸ್ಲಿಯಾರ್ ಅವರ ಪರಿಚಯ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಹಾಕತ್ತೂರು ಎಂಬಲ್ಲಿ 1946ರ ಜನವರಿ 1ರಂದು ಮುಹಮ್ಮದ್ ಕುಂಞಿ-ಬೀಫಾತಿಮಾ ಹಜ್ಜುಮ್ಮ ದಂಪತಿಯ ಪುತ್ರನಾಗಿ ಅಬ್ಬಾಸ್ ಉಸ್ತಾದ್ ಜನಿಸಿದರು. ಹಾಕತ್ತೂರಿನಲ್ಲಿ ಅಹ್ಮದ್ ಮುಸ್ಲಿಯಾರ್ ಅವರಿಂದ ಮದ್ರಸ ಕಲಿಕೆ ಆರಂಭ. 1957ರಲ್ಲಿ ಕೊಡಂಗೇರಿಯಲ್ಲಿ ದರ್ಸ್ ಗೆ ಸೇರ್ಪಡೆಗೊಂಡು ಕೆ.ಸಿ.ಅಬ್ದುಲ್ಲಾ ಕುಟ್ಟಿ ಮುಸ್ಲಿಯಾರ್ ರಿಂದ ಕಲಿಕೆ ಮುಂದುವರಿಕೆ. ಅಲ್ಲಿ 5 ವರ್ಷ ದರ್ಸ್ ಕಲಿತ ಬಳಿಕ ಕೇರಳದ ತಿರುಮಟ್ಟೂರಿನಲ್ಲಿ ಸಿಪಿ ಮುಹಮ್ಮದ್ ಕುಟ್ಟಿ ಮುಸ್ಲಿಯಾರ್ ರಿಂದ ಕಲಿಕೆ ಮುಂದುವರಿಕೆ. 1965ರಲ್ಲಿ ‘ಉಳ್ಳಾಲ ತಂಙಳ್’ ಎಂದೇ ಖ್ಯಾತರಾದ ಸೈಯದ್ ಅಬ್ದುರ್ರಹ್ಮಾನ್ ಕುಂಞಿಕೋಯ ತಂಙಳ್‌ರ ಬಳಿ ದರ್ಸ್ ಕಲಿಕೆ. ಬಳಿಕ ಅವರ ನಿರ್ದೇಶನದಂತೆ ದೇವ್ ಬಂದ್ ನಲ್ಲಿ ಕಾಲೇಜಿಗೆ ಸೇರ್ಪಡೆ. ಅಲ್ಲಿನ ಬಹ್ಮತುಲ್…
UN NETWORKS ಉಳ್ಳಾಲ : ಪರಿಜ್ಞಾನ ಪದವಿ ಪೂರ್ವ ಕಾಲೇಜು ಸೋಮೇಶ್ವರದಲ್ಲಿ ಕಾರ್ಗಿಲ್ ವಿಜಯ ದಿನವನ್ನು ಆಚರಿಸಲಾಯಿತು. ನಿವೃತ್ತ ಸೇನಾನಿ ವೆಂಕಟೇಶ್ ಕುಂಪಲ ಕಾರ್ಗಿಲ್ ಯುದ್ಧ ಹಾಗೂ ಅದರಲ್ಲಿ ಬಲಿದಾನಗೈದ ವೀರ ಯೋಧರ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು. ಸಾರಸ್ವತ ವಿದ್ಯಾ ಸಂಸ್ಥೆಯ ಕಾರ್ಯದರ್ಶಿಗಳಾದ ಮಹೇಶ್ ಎಲ್ ಬೊಂಡಾಲ್, ಆನಂದಾಶ್ರಮ ಪ್ರೌಢಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜೀವನ್ ಸೋಮೇಶ್ವರ್, ಕಾರ್ಯದರ್ಶಿ ಚಂದ್ರಶೇಖರ್ ಉಚ್ಚಿಲ್, ಪ್ರಾಂಶುಪಾಲ ವಿಕ್ರಮ ಹಾಗೂ ಉಪನ್ಯಾಸಕ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
UN NETWORKS ಕಿನ್ಯ: ರಾಮಾಯಣ ಮಸಾಚರಣೆಯ ಉದ್ಘಾಟನೆಯು ಕಿನ್ಯದ ಗುತ್ತಿನ ಮನೆಯಲ್ಲಿ ಮಲರಾಯ ಚಾವಡಿಯಲ್ಲಿ ಸಂಕ್ರಾಂತಿ ಆಚರಣೆಯೊಂದಿಗೆ ಪ್ರಾರಂಭವಾಯಿತು. ಹರಿಕಥೆ ಸಂತ್ಸಾಂಗವನ್ನು ರಾಮಾಯಣ ಮಾಸಾಚರಣೆಯ ಅಧ್ಯಕ್ಷ ಮಧುಸೂದನ್ ಅಯ್ಯಾರ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ನಾರಾಯಣ ಶೆಟ್ಟಿ ಯಜಮಾನ ಕಿನ್ಯಗುತ್ತು, ಶಿವರಾಮ ಶೆಟ್ಟಿ ಸಾಂತ್ಯಗುತ್ತು, ದೇವಿಪುರ ಮಹಾದೇವ ಭಜನಾ ಮಂದಿರದ ಅಧ್ಯಕ್ಷ ನವೀನ್ ಆಳ್ವ, ಪ್ರಭಾಕರ್ ಶೆಟ್ಟಿ ಕಿನ್ಯಗುತ್ತು ಅಳಿಕೆ ಉಪಸ್ಥಿತರಿದ್ದರು. ಕೀರ್ತನಾ ಪ್ರವೀಣಾ ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಪುತ್ರಕಾಮೆಷ್ಠೆ ಯಾಗದ ವಿಷಯದಲ್ಲಿ ಹರಿಕತೆ ನಡೆಸಿದರು. ಹಿಮ್ಮೇಳದಲ್ಲಿ ಪ್ರಕಾಶ್ ಆಚಾರ್ಯ ಕುಂಟಾರು, ಕೌಶಿಕ್ ಮಂಜನಾಡಿ, ಸಂಯೋಜಕ ಪದ್ಮನಾಭ, ನಾರಾಯಣ ಕಜೆ, ಮಹಾಬಲ ಪೂಂಜ, ಮಂಜನಾಡಿ ಸದಾಶಿವ ಆಚಾರ್ಯ, ಹಾಗೂ ಕಿನ್ಯ ಗುತ್ತಿನ ಕುಟುಂಬಸ್ಥರು ಭಾಗವಹಿಸಿದ್ದರು. ಟಿ. ಮೋನಪ್ಪ ಶೆಟ್ಟಿ ಸ್ವಾಗತಿಸಿದರು.
UN NETWORKS ತಲಪಾಡಿ : ಸಂಸ್ಕಾರ ಭಾರತಿ ಮಂಗಳೂರು ಕಳೆದ 16 ವರ್ಷಗಳಿಂದ ಗುರುಪೂರ್ಣಿಮೆಯಂದು ನಾಡಿನ ಹಿರಿಯ ಕಲಾ ಸಂಘಟಕರಿಗೆ, ಸಮಾಜಸೇವಕರನ್ನು ಗುರುತಿಸಿ ಗೌರವಿಸುವ ಕೆಲಸ ಶ್ಲಾಘನೀಯ ಎಂದು ತಲಪಾಡಿ ದೇವಿಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರ. ಅರ್ಚಕ ಗಗೇಶ್ ಭಟ್ ದೇವಿನಗರ ಅಭಿಪ್ರಾಯಪಟ್ಟರು. ದೇವಿನಗರ ಶ್ರೀ ಅವಿನಾಶಿ ಮಹಾದೇವ ಭಜನಾ ಮಂದಿರದಲ್ಲಿ ದೇವಸ್ಥಾನ, ದೈವಸ್ಥಾನಗಳಲ್ಲಿ ಶೇರಿಗಾರ ವೃತ್ತಿ ಮಾಡಿಕೊಂಡು , 65 ವರ್ಷಕ್ಕಿಂತ ಹೆಚ್ಚುಕಾಲ ಸೇವೆ ಸಲ್ಲಿಸಿದ ದೇವಿನಗರದ ಜನಾರ್ಧನ ಶೇರಿಗಾರ ಅವರಿಗೆ ಗುರುವಂದನೆ ನೀಡಿ ಅಭಿನಂದಿಸಲಾಯಿತು. ಈ ಸಂದರ್ಭ ಜನಾರ್ದನ ಶೇರಿಗಾರ್ ಮತ್ತು ವಾರಿಜಾ ದಂಪತಿ ಗಳನ್ನು ಸನ್ಮಾನಿಸಿ, ನಿಟ್ಟೆ ಶಿಕ್ಷಣ ಸಂಸ್ಥೆಯ ವತಿಯಿಂದ ನಗದು ಪುರಸ್ಕಾರ ಮತ್ತು ಸನ್ಮಾನ ಪತ್ರ ನೀಡಿ ಗುರುನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ತಲಪಾಡಿ ಗ್ರಾಮಪಂಚಾಯತ್ ಅಧ್ಯಕ್ಷ ಸುರೇಶ್ ಆಳ್ವ, ಸಂಸ್ಕಾರ ಭಾರತಿಯ ದಯಾನಂದ ಕತ್ತಾಲ್ ಸಾರ್, ಕಿನ್ಯ ಕೇಶವ ಶಿಶುಮಂದಿರದ ವ್ಯವಸ್ಥಾಪಕ ನಾರಾಯಣ ಕಜೆ, ಜನಾರ್ಧನ ಶೇರಿಗಾರ್, ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‍ನ…
UN NETWORKS ತಲಪಾಡಿ : ತಲಪಾಡಿಯ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ 20ನೇ ವರ್ಷದ ಕಾರ್ಗಿಲ್ ವಿಜಯದ ದಿನವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ 30 ವರ್ಷ ಸೈನ್ಯದಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಸೈನಿಕ ಮೇಜರ್ ದಾಮೋದರ ಸುವರ್ಣ ಮಕ್ಕಳನ್ನು ಉದ್ದೇಶಿಸಿ ಕಾರ್ಗಿಲ್ ಯುದ್ಧಕ್ಕೆ ಕಾರಣ, ಸೈನಿಕರ ಸಾಹಸ, ಯುದ್ಧ ನಡೆದ ಸ್ಥಳದ ಕುರಿತು ಸಂಪೂರ್ಣವಾಗಿ ಮಾಹಿತಿ ನೀಡಿದರು. ಸೈನಿಕರ ಕುಟುಂಬದ ಒಳಿತನ್ನು ಕೋರಿ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಮಾಡಲಾಯಿತು. ಕಾರ್ಗಿಲ್ ವಿಜಯವನ್ನು ದೇಶಭಕ್ತಿ ಗೀತೆಯೊಂದಿಗೆ ಹಣತೆಯನ್ನು ಬೆಳಗಿಸಿ ಆಚರಿಸಲಾಯಿತು. ಶಾಲಾ ಶಿಕ್ಷಕರಾದ ಮಂಜುನಾಥ್ ವೀರ ಸೈನಿಕರ ಕುರಿತು ಸ್ವರಚಿತ ಕವನ ವಾಚನ ಮಾಡಿದರು. ವೀರ ಸೈನಿಕರ ಸಾಹಸದ ಕುರಿತು ಸಾಕ್ಷ್ಯಚಿತ್ರವನ್ನು ತೋರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಮೋಹನ್‍ದಾಸ್, ಲತಾಂಜಲಿ ಎಸ್ ರೈ, ಶಿಕ್ಷಕ- ಶಿಕ್ಷಕೇತರರು ಉಪಸ್ಥಿತರಿದ್ದರು.
UN NETWORKS ತೊಕ್ಕೊಟ್ಟು: ತುಳುನಾಡು ವಿಶೇಷ ಸಂಸ್ಕೃತಿಗಳ ನೆಲೆಬೀಡು. ದೈವರಾಧನೆ, ನಾಗಾರಾಧನೆ, ಪ್ರಕೃತಿಗಳ ಆರಾಧನೆ ಜತೆ ಯಕ್ಷಗಾನ, ಪಾಡ್ದನದಂತಹ ಸಾಂಸ್ಕೃತಿಕದ ಭಂಡಾರವಿದು. ಈ ವಿಚಾರಗಳನ್ನು ನಮ್ಮ ಯುವ ಪೀಳಿಗೆ ಅರಿಯಬೇಕು ಎಂದು ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ಅಧ್ಯಕ್ಷ ಕೆ.ಟಿ. ಸುವರ್ಣ ಹೇಳಿದರು. ಉಳ್ಳಾಲ ತೊಕ್ಕೊಟ್ಟಿನ ಬ್ರಹ್ಮಶ್ರೀ ಬಿಲ್ಲವ ವೇದಿಕೆ ಕೇಂದ್ರ ಸಮಿತಿಯ ವತಿಯಿಂದ ಭಾನುವಾರ ನಡೆದ ಆಟಿದ ಗಮ್ಮತ್ -2019 ಉದ್ಘಾಟಿಸಿ ಅವರು ಮಾತನಾಡಿ ಆಟಿ ತಿಂಗಳ ವಿಶೇಷತೆಯನ್ನು ತಿಳಿಸಿದರು. ಕಾಪಿಕಾಡು ಉಮಾಪುರಿ ಶ್ರೀ ಉಮಾಮಹೇಶ್ವರಿ ದೇವಸ್ಥಾನ ದ ಆಡಳಿತ ಮೊಕ್ತೇಸರ ಎ.ಜೆ. ಶೇಖರ್, ಬೆಳರಿಂಗೆ ಕಿನ್ಯ ಭಂಡಾರಮನೆ ಶ್ರೀ ಮಲರಾಯ ಧೂಮವತಿ ಬಂಟ ದೈವಗಳ. ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಬಾಬು ಶ್ರೀ ಶಾಸ್ತ ಕಿನ್ಯ, ವೇದಿಕೆಯ ಕಾರ್ಯಧ್ಯಕ್ಷ ಸತೀಶ್ ಕರ್ಕೇರ, ಕೊಲ್ಯ ಬಿಲ್ಲವ ಸಂಘದ ಅಧ್ಯಕ್ಷ ವೇಣು ಗೋಪಾಲ್, ತಲಪಾಡಿ ಬಿಲ್ಲವ ಸಂಘದ ಅಧ್ಯಕ್ಷ ನಾರಾಯಣ ಪೂಜಾರಿ, ವೇದಿಕೆಯ ದತ್ತು ಸಂಚಾಲಕ ಆನಂದ ಕೆ. ಅಸೈಗೋಳಿ, ಉಪಾಧ್ಯಕ್ಷ ಹರೀಶ್…

