UN NETWORKS ಪಾವೂರು : ಹೈನುಗಾರಿಕೆಯಲ್ಲಿ ಭಾರತ ವಿಶ್ವದಲ್ಲಿ ಮೊದಲ ಸ್ಥಾನದಲ್ಲಿದ್ದು, ದೇಶದಲ್ಲಿ ಗುಜರಾತ್ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಹತ್ತನೇ ಸ್ಥಾನದಲ್ಲಿದೆ ಎಂದು ನ್ಯೂಟ್ರೀಷಿಯನ್ ಕನ್ಸಲ್ಟೆಂಟ್ ಡಾ.ಚೆನ್ನೇಗೌಡ ಹೇಳಿದರು. ದ.ಕ.ಜಿಲ್ಲಾ ಪಂ., ಮಂಗಳೂರು ಕೃಷಿ ಇಲಾಖೆಯ 2019-20ನೇ ಸಾಲಿನ ಆತ್ಮ ಯೋಜನೆಯಡಿ ಕೆಥೊಲಿಕ್ ಸಭಾ ಪಜೀರ್ ಘಟಕದ ಸಹಕಾರದಲ್ಲಿ ಪಾವೂರು ಸರ್ಕಾರಿ ಪ್ರೌಢಶಾಲೆಯ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ಹೈನುಗಾರಿಕೆ ತರಬೇತಿ’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಹಾಲು ಉತ್ಪಾದನೆ ಹೆಚ್ಚಾಗಿದ್ದರೂ ಬಹುಜನರ ಜೀವನ ಇದರಿಂದಲೇ ಸಾಗುವುದರಿಂದ ಸರ್ಕಾರ ಉಳಿದ ಹಾಲಿನಿಂದ ಇತರ ತಿಂಡಿಗಳನ್ನು ತಯಾರಿಸುವ ಮೂಲಕ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ನೀಡುತ್ತಿದೆ. ಗುಜರಾತ್ ಮತ್ತು ಕರ್ನಾಟಕದಲ್ಲಿ ಮಾತ್ರವೇ ಸರ್ಕಾರದ ಮೂಲಕ ಹಾಲು ಖರೀದಿ ಮಾಡಲಾಗುತ್ತಿದೆ ಎಂದು ತಿಳಿಸಿದರು. ನಮ್ಮಲ್ಲಿ ಪಶು ಸಾಕಾಣಿಕೆಗೆ ಸಾಕಷ್ಟು ವ್ಯವಸ್ಥೆ ಇಲ್ಲದ ಕಾರಣ ಐದಕ್ಕಿಂತ ಕಡಿಮೆ ದನ ಸಾಕುವವರು ಹೈನುಗಾರಿಕೆಯಿಂದ ದೂರವಾಗುತ್ತಿದ್ದಾರೆ. ಭಾರತದಲ್ಲಿ ಮಾತ್ರವೇ ಫ್ಯಾಟ್ ಪರೀಕ್ಷಿಸಿ ಹಾಲು ಖರೀದಿ ಮಾಡಲಾಗುತ್ತಿದೆ, ವಾಸ್ತವವಾಗಿ ಫ್ಯಾಟ್ ಜೊತೆ…
Author: UllalaVani
UN NETWORKS ನರಿಂಗಾನ : ನರಿಂಗಾನದಲ್ಲಿರುವ ಯೆನೆಪೊಯ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಥಮ ವರ್ಷದ ಬಿಎಎಂಎಸ್ ವಿದ್ಯಾರ್ಥಿಗಳ ಶಿಕ್ಷಕ-ಪೋಷಕರ ಸಭೆಯನ್ನು ಶನಿವಾರ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಯೆನೆಪೊಯ ವಿಶ್ವವಿದ್ಯಾನಿಲಯದ ಪ್ರೊ. ವಿ.ಸಿ.ರಘುವೀರ್, ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಪೋಷಕರ ಹಾಗೂ ಶಿಕ್ಷಕರ ಪಾತ್ರಗಳ ಬಗ್ಗೆ ವಿವರಿಸಿದರು. ಯೆನೆಪೊಯ ಆಯುರ್ವೇದ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಡಾ. ವಿದ್ಯಾ ಪ್ರಭಾ ಮಾತನಾಡಿ ಕಾಲೇಜಿನ ನೀತಿ, ನಿಯಮಗಳ ಕುರಿತಾಗಿ ಪೋಷಕರಿಗೆ ವಿವರಿಸಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿನ ಸಾಧನೆಗಳನ್ನು ತಿಳಿಸಿ ಶ್ಲಾಘಿಸಿದರು. ಉಪಪ್ರಾಂಶುಪಾಲೆ ಡಾ.ಶುಭದ ವಿ.ಐ. ವಂದಿಸಿದರು. ನಂತರ ನಡೆದ ಶಿಕ್ಷಕ-ಪೋಷಕರ ಆಪ್ತ ಸಮಾಲೋಚನೆಯಲ್ಲಿ ದೂರದ ಊರುಗಳಿಂದ ಆಗಮಿಸಿದ ಪೋಷಕರು ಬಹಳಷ್ಟು ಉತ್ಸಾಹದಿಂದ ಭಾಗವಹಿಸಿದರು.
UN NETWORKS ಕೊಣಾಜೆ : ಸೆಂಟರ್ ಆಫ್ ಎಕ್ಸ್‍ಲೆನ್ಸ್ ಫಾರ್ ರಿಸಾರ್ಚ್ ಇನ್ನೋವೇಶನ್ ಆ್ಯಂಡ್ ಎಂಟರ್ ಪ್ರೆನರ್‍ಶಿಪ್ ಪಿ.ಎ.ಕಾಲೇಜ್, ಇಂಡಿಯನ್ ಸೊಸೈಟಿ ಆಫ್ ಟೆಕ್ನಿಕಲ್ ಎಜ್ಯುಕೇಶನ್ ಮತ್ತು ಮೆಕಾನಿಕಲ್ ವಿಭಾಗದ ಸಹಯೋಗದೊಂದಿಗೆ ಒಂದು ದಿನದ ಸಂಶೋದನೆ, ಬರಹ ಹಾಗೂ ಪ್ರಕಟಣೆ ವಿಷಯದಲ್ಲಿ ಅಂತರಾಷ್ಟ್ರೀಯ ಮಟ್ಟದ ಕಾರ್ಯಗಾರ ಶನಿವಾರ ಪಿ.ಎ.ಕಾಲೇಜಿನಲ್ಲಿ ನಡೆಯಿತು. .ಕಾರ್ಯಗಾರದ ಉದ್ಘಾಟನೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಅಬ್ದುಲ್ ಶರೀಫ್ ನೆರವೇರಿಸಿದರು. ಕಾರ್ಯಗಾರದ ನಿರ್ದೇಶಕರಾದ ಡಾ. ರಮೀಝ್ ಎಂ.ಕೆ. ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಇಮಾಮ್ ಅಬ್ದುಲ್ ರೆಹಮಾನ್ ಬಿನ್ ಫೈಝಲ್, ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ. ಮುಜೀಬ್ ಭಾಗವಹಿಸಿದ್ದರು. ಸಂಶೋಧನಾ ಡೀನ್ ಡಾ.ಝಾಹಿದ್ ಅನ್ಸಾರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪ್ರೋ. ಝೀಶಾನ್ ಕಿರಾತ್ ಪಠಿಸಿದರು. ಕಾರ್ಯಗಾರ ಸಂಯೋಜಕರಾದ ಪ್ರೋ. ಅಮ್ಜದ್ ಖಾನ್ ವಂದಿಸಿದರು.
UN NETWORKS ದೇರಳಕಟ್ಟೆ : ಹಿರಿಯ ಸಾಹಿತಿ, ಕಲಾವಿದ ಇಬ್ರಾಹೀಂ ತಣ್ಣೀರುಬಾವಿ ಅವರಿಗೆ ಸಂತಾಪ ಸೂಚಕ ಸಭೆಯು ದೇರಳಕಟ್ಟೆಯ ಬ್ಯಾರಿ ಲೇಖಕರು ಮತ್ತು ಕಲಾವಿದರ ಬಳಗ-ಮೇಲ್ತೆನೆ-ಯ ವತಿಯಿಂದ ರವಿವಾರ ದೇರಳಕಟ್ಟೆಯಲ್ಲಿ ಜರುಗಿತು. ಮೇಲ್ತೆನೆಯ ಅಧ್ಯಕ್ಷ ಹಂಝ ಮಲಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕವಿ, ಹಾಡುಗಾರ ಬಶೀರ್ ಅಹ್ಮದ್ ಕಿನ್ಯ, ಲೇಖಕ ಇಸ್ಮತ್ ಪಜೀರ್ ನುಡಿನಮನ ಸಲ್ಲಿಸಿದರು. ಗೌರವಾಧ್ಯಕ್ಷ ಆಲಿಕುಂಞಿ ಪಾರೆ, ಉಪಾಧ್ಯಕ್ಷ ಮುಹಮ್ಮದ್ ಬಾಷಾ ನಾಟೆಕಲ್, ಕೋಶಾಧಿಕಾರಿ ಇಸ್ಮಾಯೀಲ್ ಮಾಸ್ಟರ್, ಜೊತೆ ಕಾರ್ಯದರ್ಶಿ ಬಶೀರ್ ಕಲ್ಕಟ್ಟ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಮನ್ಸೂರ್ ಅಹ್ಮದ್ ಸಾಮಣಿಗೆ ಸ್ವಾಗತಿಸಿದರು. ಸದಸ್ಯ ಆಶಿರುದ್ದೀನ್ ಆಲಿಯಾ ಮಂಜನಾಡಿ ವಂದಿಸಿದರು.
UN NETWORKS ತಲಪಾಡಿ : ಎಸೆಸ್ಸೆಫ್ ತಲಪಾಡಿ ಸೆಕ್ಟರ್, ಎಸೆಸ್ಸೆಫ್ ಕೆ.ಸಿ.ರೋಡ್ ಯುನಿಟ್, ದ.ಕ.ಜಿಲ್ಲಾ ಎಸೆಸ್ಸೆಫ್ ಬ್ಲಡ್ ಸೈಬೋ ಇದರ ಆಶ್ರಯದಲ್ಲಿ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ, ಲೇಡಿಗೋಶನ್ ಆಸ್ಪತ್ರೆಯ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರವು ಕೆ.ಸಿ.ರೋಡ್ ಅಲ್ಮಿಸ್ಬಾಹ್ ಝಹ್ರತಲ್ ಖುರಾನ್ ಪ್ರೀ ಸ್ಕೂಲ್ ನಲ್ಲಿ ರವಿವಾರ ನಡೆಯಿತು. ಪ್ರೀ ಸ್ಕೂಲ್ ಅಧ್ಯಕ್ಷ ಮುಸ್ತಫ ಝುಹುರಿ ದುಆಗೈದರು. ದ.ಕ.ಜಿಲ್ಲಾ ಸುನ್ನಿ ಜಮೀಯತುಲ್ ಮುಸ್ಲಿಮೀನ್ ಅಧ್ಯಕ್ಷ ಪಿ.ಮುಹಮ್ಮದ್ ಮದನಿ ಕಾರ್ಯಕ್ರಮ ಉದ್ಘಾಟಿಸಿದರು. ಎಸೆಸ್ಸೆಫ್ ತಲಪಾಡಿ ಸೆಕ್ಟರ್ ಅಧ್ಯಕ್ಷ ಸಿರಾಜುದ್ದೀನ್ ವಿ.ಎ.ಎಚ್ ಅಧ್ಯಕ್ಷತೆ ವಹಿಸಿದರು. ಎಸ್‌ಎಂಎ ತಲಪಾಡಿ ರೇಂಜ್ ಅಧ್ಯಕ್ಷ ಎಂ.ಎಂ.ಅಬ್ಬಾಸ್ ಹಾಜಿ, ಎಸೆಸ್ಸೆಫ್ ಉಳ್ಳಾಲ ಡಿವಿಜನ್ ಅಧ್ಯಕ್ಷ ಸೈಯದ್ ಕುಬೈಬ್ ತಂಙಳ್, ಪ್ರಧಾನ ಕಾರ್ಯದರ್ಶಿ ಹಮೀದ್ ತಲಪಾಡಿ, ಉಪಾಧ್ಯಕ್ಷ ಇಸ್ಮಾಯಿಲ್ ಕೆ.ಸಿ.ನಗರ, ಎಸೆಸ್ಸೆಫ್ ಉಳ್ಳಾಲ ಡಿವಿಜನ್ ಬ್ಲಡ್ ಇನ್‌ಚಾರ್ಜ್ ಹಕೀಮ್ ಪೂಮಣ್ಣು, ಡೈಮಂಡ್ ವೆಲ್ಫೇರ್ ಅಸೋಸಿಯೇಶನ್‌ನ ನಿರ್ದೇಶಕ ಶಂಶುದ್ದೀನ್, ಖಿದ್ಮತ್ ಫ್ರೆಂಡ್ಸ್ ಅಧ್ಯಕ್ಷ ನಝೀರ್ ಕೆ.ಸಿ.ನಗರ, ಎಸೆಸ್ಸೆಫ್ ಕೆ.ಸಿ.ರೋಡ್ ಅಧ್ಯಕ್ಷ ಹಂಝ ಕೆ.ಸಿ.ರೋಡ್, ತಲಪಾಡಿ ಗ್ರಾಪಂ…
UN NETWORKS ದೇರಳಕಟ್ಟೆ : ದೇರಳಕಟ್ಟೆ ಸಮೀಪದ ಬಗಂಬಿಲದಲ್ಲಿ ದೀಕ್ಷಾ ಎಂಬ ಯುವತಿಯನ್ನು ಯುವಕನೋರ್ವ ಚೂರಿಯಿಂದ ಇರಿದು ಕೊಲೆಯ ಯತ್ನಿಸುತ್ತಿದ್ದಾಗ ಪ್ರಾಣದ ಹಂಗು ತೊರೆದು ಯುವತಿಯನ್ನು ರಕ್ಷಿಸಿದ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ದಾದಿ ನಿಮ್ಮಿ ಸ್ಟೀಫನ್ ಅವರು ಬೆಂಗಳೂರಿನಲ್ಲಿ ರವಿವಾರ ನ್ಯಾಶನಲ್ ಫ್ಲೋರೆನ್ಸ್ ನೈಟಿಂಗೇಲ್ ಪ್ರಶಸ್ತಿಯನ್ನು ಪಡೆದುಕೊಂಡರು. ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ದಾದಿ ನಿಮ್ಮಿ ಸ್ಟೀಫನ್ ಅವರು ತಿಂಗಳ ಹಿಂದೆ ಬಗಂಬಿಲ ಬಳಿ ಶಕ್ತಿನಗರದ ಯುವಕನೋರ್ವ ವಿದ್ಯಾರ್ಥಿನಿ ದೀಕ್ಷಾ ಎಂಬ ಯುವತಿಗೆ ಪ್ರೀತಿಯ ನಿರಾಕರಣೆಯ ನೆಪವೊಡ್ಡಿ ಚೂರಿಯಿಂದ ಹಲವಾರು ಬಾರಿ ಇರಿದು ಕೊಲೆಗೆ ಯತ್ನಿಸಿದಲ್ಲದೆ ತಾನೂ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಆ ಸಂದರ್ಭದಲ್ಲಿ ಅಲ್ಲಿ ಜನರು ಸೇರಿ ಮೊಬೈಲ್‍ನಲ್ಲಿ ದೃಶ್ಯಾವಳಿ ಸೆರೆ ಹಿಡಿಯುತ್ತಿದ್ದರೂ ಯಾರೂ ಕೂಡಾ ಭಯದಿಂದ ಯುವತಿಯ ರಕ್ಷಣೆಗೆ ಮುಂದಾಗಿರಲಿಲ್ಲ. ಆದರೆ ಈ ಕಠಿಣ ಸಂದರ್ಭದಲ್ಲಿ ಇಲ್ಲಿಗೆ ಬಂದ ನರ್ಸ್ ನಿಮ್ಮಿ ಅವರು ಜೀವದ ಹಂಗು ತೊರೆದು ಯುವಕನಿಂದ ಚೂರಿ ಕಸಿದುಕೊಂಡು ಯುವತಿಯನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.…
UN NETWORKS ತೊಕ್ಕೊಟ್ಟು : ರೈತ ನಾಯಕ ಯಡಿಯೂರಪ್ಪ ಗುಡುಗಿದರೆ ವಿಧಾನಸಭೆ ಗಡಗಡ ನಡುಗುತಿತ್ತು. ಅಂತಹ ನಾಯಕ ಯಡಿಯೂರಪ್ಪ ರಾಜಕೀಯ ವಿಚಾರದಲ್ಲಿ ಪಳಗಿದವರು, ರೈತರ ಸಾಲಮನ್ನಾ ಮಾಡುವಲ್ಲಿ ಪಾದಯಾತ್ರೆ ನಡೆಸಿ ಯಶಸ್ವಿಯಾದವರು . ಈ ಮೂಲಕ ಬಿಜೆಪಿ ರೈತರ ಕಾಳಜಿಯುಳ್ಳ ಪಕ್ಷ ಎಂದು ತೋರಿಸಿಕೊಟ್ಟವರು ಎಂದು ಮಾಜಿ ಶಾಸಕ ಜಯರಾಮ ಶೆಟ್ಟಿ ಹೇಳಿದರು. ಅವರು ತೊಕ್ಕೊಟ್ಟು ಬಸ್ ನಿಲ್ದಾಣದಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರ ವಹಿಸುತ್ತಿರುವ ಕ್ಷಣದ ಸಂಭ್ರಮಾಚರಣೆಯಲ್ಲಿ ಶುಕ್ರವಾರ ಭಾಗವಹಿಸಿ ಮಾತನಾಡಿದರು. ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿದ ಆಧಾರದಲ್ಲಿ ಬಿಜೆಪಿ ಪಕ್ಷ ರಾಜ್ಯದಲ್ಲಿ ಆಡಳಿತ ನಡೆಸಬೇಕಿತ್ತು. ಆದರೆ ಕಾಂಗ್ರೆಸ್ -ಜೆಡಿಎಸ್ ಸೇರಿಕೊಂಡು ಅನೈತಿಕ ರಾಜ್ಯಭಾರ ನಡೆಸಿ ಇಂದು ದುರಂತಕ್ಕೀಡಾಗಿದೆ. ಇಂತಹ ರಾಜ್ಯಭಾರದಿಂದ ರೋಸಿಹೋದ ಸ್ವಪಕ್ಷೀಯ 15 ಮಂದಿ ಶಾಸಕರು ಪಕ್ಷದ ಹಿರಿಯ ನಾಯಕರ ಮಾತುಗಳನ್ನು ಲೆಕ್ಕಿಸದೆ ಮುಂಬೈನಲ್ಲಿ ಕುಳಿತಿದ್ದಾರೆ. ಸರಕಾರ ಹೋಗಬೇಕೆನ್ನುವ ಅಭಿಲಾಷೆಯಿಂದ ಕುಳಿತಿರುವುದು ವಿಪರ್ಯಾಸ. ಈ ನಡುವೆ ಕಾಂಗ್ರೆಸ್-ಜೆಡಿಎಸ್ ಪಕ್ಷದ ನಾಯಕರು…
UN NETWORKS ಉಳ್ಳಾಲ : ಗ್ರಾಮಮಟ್ಟದಲ್ಲಿ ವಿಶೇಷ ಅನುಮತಿ ಪಡೆದುಕೊಂಡು , ಗುಲಾಂ ನಬಿ ಆಝಾದ್ ಕೇಂದ್ರ ಸಚಿವರಾಗಿದ್ದ ಸಂದರ್ಭ ಪಡೆದುಕೊಂಡ ಅನುಮತಿಯಡಿ ನಗರದಿಂದ ಕೇವಲ ಆರು ಕಿ.ಮೀ ದೂರದ ಉಳ್ಳಾಲದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ಉಳ್ಳಾಲ ನಗರ ಸಮುದಾಯ ಆರೋಗ್ಯ ಕೇಂದ್ರ ಜನರ ಸೇವೆಗೆ ಸಿದ್ಧಗೊಂಡಿದೆ. ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿದೆ ಎಂದು ಮಾಜಿ ಸಚಿವ ಹಾಗೂ ಉಳ್ಳಾಲ ಶಾಸಕ ಯು.ಟಿ.ಖಾದರ್ ಹೇಳಿದರು. ಅವರು ಉಳ್ಳಾಲದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಉಳ್ಳಾಲ ನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿರುವ ಸವಲತ್ತುಗಳನ್ನು, ಉಪಕರಣಗಳನ್ನು ವೀಕ್ಷಿಸಿ ಬಳಿಕ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು. ಹಿಂದೆ ಉಳ್ಳಾಲ ಗ್ರಾಮವಾಗಿದ್ದ ಸಂದರ್ಭ ವಿಶೇಷ ಅನುಮತಿಯನ್ನು ಪಡೆಯಲಾಗಿತ್ತು. ಇದೀಗ ಸುಸಜ್ಜಿತ ಆಸ್ಪತ್ರೆ ಕಟ್ಟಡ ನಿರ್ಮಾಣವಾಗಿ ಶವಾಗಾರ, ಪೋಸ್ಟ್ ಮಾರ್ಟಂ ವ್ಯವಸ್ಥೆ, ವೈದ್ಯರ ಕ್ವಾಟ್ರರ್ಸ್ , ಅತ್ಯಾಧುನಿಕ ಉಪಕರಣಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸಿಬ್ಬಂದಿ , ವೈದ್ಯರು ಹಾಗೂ ಉಪಕರಣಗಳ ಕೊರತೆಯಿಂದಾಗಿ ಉದ್ಘಾಟನೆ ವಿಳಂಬವಾಗಿದೆ. ಸದ್ಯ ಕಿರು ಆಸ್ಪತ್ರೆಯಲ್ಲಿರುವ ಎಲ್ಲಾ ರೀತಿಯ ಉಪಕರಣಗಳು ಆರೋಗ್ಯ ಕೇಂದ್ರದಲ್ಲಿ ಸ್ಥಾಪಿಸಲಾಗಿದೆ. ಮೂವರು ಎಂಬಿಬಿಎಸ್…
UN NETWORKS ಮೇರಿಹಿಲ್ : ಕಾರ್ಗಿಲ್ ವಿಜಯದ ಅಂಗವಾಗಿ ಕಾರ್ಗಿಲ್‍ನಲ್ಲಿ ಹುತಾತ್ಮರಾದವರಿಗೆ ಗೌರವ ನಮನ ಸಲ್ಲಿಸುವ ಹಾಗೂ ಕಾರ್ಗಿಲ್ ವಿಜಯ ದಿನಾಚರಣೆ ಮೇರಿಹಿಲ್ ನ ಜಿಲ್ಲಾ ಗೃಹರಕ್ಷಕ ದಳ ಕಚೇರಿಯಲ್ಲಿ ಶುಕ್ರವಾರ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರ ಯೋಧರಿಗೆ ಮುಂಬತ್ತಿ ಹಚ್ಚಿ ಪುಷ್ಪ ನಮನ ಸಲ್ಲಿಸಲಾಯಿತು. ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಠ ಡಾ. ಮುರಲೀ ಮೋಹನ್ ಚೂಂತಾರು ಮಾತನಾಡಿ ಕಾರ್ಗಿಲ್ ಯುದ್ದವು 1999ರ ಮೇ ತಿಂಗಳಿನಿಂದ ಜುಲೈ ತನಕ ನಡೆಯಿತು. ಜುಲೈ 26ಕ್ಕೆ ಭಾರತಕ್ಕೆ ವಿಜಯ ಪ್ರಾಪ್ತವಾದ ನೆಲೆಯಲ್ಲಿ ಈ ದಿನವನ್ನು ಕಾರ್ಗಿಲ್ ವಿಜಯ ದಿನವಾಗಿ ಆಚರಿಸಲಾಗುತ್ತಿದೆ ಎಂದರು. ಕಾರ್ಗಿಲ್ ಯುದ್ಧದಲ್ಲಿ 527ವೀರ ಯೋಧರು ಹತರಾಗಿದ್ದು, ಅದರಲ್ಲಿ ಮೂರು ವೀರ ಯೋಧರಿಗೆ ಪರಮವೀರ ಚಕ್ರ ಮರಣೋತ್ತರ ಪ್ರಶಸ್ತಿ ನೀಡಲಾಗಿದೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಗೃಹರಕ್ಷಕದಳದ ಉಪ ಸಮಾದೇಷ್ಟ ರಮೇಶ್, ಕಚೇರಿ ಅಧೀಕ್ಷಕ ರತ್ನಾಕರ, ಅನಿತಾ, ಮಿನಾಕ್ಷಿ , ರಮೇಶ್ ಭಂಡಾರಿ, ಸನತ್ ಕುಮಾರ್ ಆಳ್ವ, ದಿವಾಕರ, ಸತೀಶ್…
UN NETWORKS ಅಂಬ್ಲಮೊಗರು : ಅಂಬ್ಲಮೊಗರು ಅನ್ನುವುದು ಶಾಂತಿ, ಸೌಹಾರ್ದತೆಯ ಗ್ರಾಮ, ಪ್ರೀತಿ ವಿಶ್ವಾಸದಿಂದ ಬಾಳಿದ ಊರು, ಇಂತಹ ಗ್ರಾಮಾಂತರ ಭಾಗದಲ್ಲಿ ಪ್ರಥಮ ಬಾರಿ ಚೆಸ್ ಪಂದ್ಯಾಟ ನಡೆಯುತ್ತಿರುವುದು ಶ್ಲಾಘನೀಯ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್ ಅಭಿಪ್ರಾಯಪಟ್ಟರು. ಅವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ , ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಕ್ಷಣಾಧಿಕಾರಿಯವರ ಕಛೇರಿ ಮಂಗಳೂರು ವಲಯ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಅಂಬ್ಲಮೊಗರು ಇವರ ಸಂಯುಕ್ತ ಆಶ್ರಯದಲ್ಲಿ ,ಅಂಬ್ಲಮೊಗರು ಶಾಲೆಯಲ್ಲಿ ಗುರುವಾರ ನಡೆದ 14/17 ವರ್ಷದ ವಯೋಮಿತಿ ಯೊಳಗಿನ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಚೆಸ್ ಪಂದ್ಯಾಟ 2019-20 ನ್ನು ಉದ್ಘಾಟಿಸಿ ಮಾತನಾಡಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿ.ಪಂ ಸದಸ್ಯೆ ಧನಲಕ್ಷ್ಮೀ ಗಟ್ಟಿ ಮಾತನಾಡಿ,ಚೆಸ್ ಆಟ ಬದುಕಿನ ಪಾಠಗಳನ್ನು ಕಲಿಸುತ್ತದೆ. ಶಕ್ತಿ ಮತ್ತು ಯುಕ್ತಿಯ ಆಟ ಚೆಸ್, ಮಾನಸಿಕ ಚೈತನ್ಯಗಳನ್ನು ಬೆಳೆಸುವಲ್ಲಿ ಸಹಕಾರಿ .ಈ ಮೂಲಕ ಮಕ್ಕಳ ಮಾನಸಿಕತೆಯಲ್ಲಿ ಬದಲಾವಣೆಯನ್ನು ಕಾಣಲು ಸಾಧ್ಯ. ಸದ್ಯ…

