Author: UllalaVani

Kannada News From Coastal Karnataka

UN NETWORKS ಉಳ್ಳಾಲ : ಮಾಜಿ ಮುಖ್ಯಮಂತ್ರಿ ಎಸ್‌ ಎಂ ಕೃಷ್ಣ ಅಳಿಯ, ಕೆಫೆ ಕಾಫಿ ಡೇ ಸ್ಥಾಪಕ ಸಿದ್ದಾರ್ಥ ವಿ.ಜಿ ಅವರು ಇತ್ತೀಚೆಗೆ ಉಳ್ಳಾಲದ ನೇತ್ರಾವತಿ ಸೇತುವೆಯ ಬಳಿ ಸಾವನ್ನಪ್ಪಿದ ಬಳಿಕ ಮುಂದಿನ ದಿನಗಳಲ್ಲಿ ಇಂತಹ ಅನಾಹುತಗಳನ್ನು ತಪ್ಪಿಸುವ ಸಲುವಾಗಿ ಸೇತುವೆಗೆ ಸಿಸಿಟಿವಿ ಅಳವಡಿಸಲು ಶಾಸಕ ವೇದವ್ಯಾಸ ಕಾಮತ್‌ ಚಿಂತನೆ ನಡೆಸಿದ್ದಾರೆ. ತನ್ನ ಫೇಸ್‌ ಬುಕ್‌ ಖಾತೆಯಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್‌ ಅವರು ಉಳ್ಳಾಲ ಸೇತುವೆಗೆ ಸಿಸಿಟಿವಿ ಅಳವಡಿಕೆಗೆ ಬಗ್ಗೆ ಜಿಲ್ಲಾಧಿಕಾರಿಯವರೊಂದಿಗೆ ಸಮಾಲೋಚನೆ ನಡೆಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಶುಕ್ರವಾರ ಬೆಳಿಗ್ಗೆ ಫೇಸ್‌ ಬುಕ್‌ ಪೋಸ್ಟ್‌ ಮಾಡಿರುವ ಶಾಸಕ ಕಾಮತ್‌, ʼʼಮಂಗಳೂರಿನಿಂದ ಉಳ್ಳಾಲಕ್ಕೆ ಹೋಗುವ ರಸ್ತೆಯಲ್ಲಿ ಪ್ರಮುಖವಾಗಿ ಸಿಗುವ ನೇತ್ರಾವತಿ ಸೇತುವೆ ಅಥವಾ ಉಳ್ಳಾಲ ಸೇತುವೆಗೆ ಸಿಸಿಟಿವಿ ಅಳವಡಿಸಲು ಚಿಂತನೆ ಮಾಡಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಯವರೊಂದಿಗೆ ಸಮಾಲೋಚಿಸುತ್ತೇನೆ. ನೇತ್ರಾವತಿ ಸೇತುವೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಅಪಾಯಕಾರಿ ತಾಣವಾಗಿ ಪರಿಣಮಿಸುತ್ತದೆ. ಆತ್ಮಹತ್ಯೆಯಂತಹ ಅಹಿತಕರ ಘಟನೆಗಳಿಗೆ ಇದು…

Read More

UN NETWORKS ಉಳ್ಳಾಲ : ಕಾಫಿ ಡೇ ಸ್ಥಾಪಕ ಸಿದ್ಧಾರ್ಥ್ ಹೆಗ್ಡೆ ಅವರ ಸಾವಿನ ಪ್ರಕರಣದ ಅನಂತರ ಇದೀಗ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನೇತ್ರಾವತಿ ನದಿಯಲ್ಲಿ ಉಳ್ಳಾಲ ಸೇತುವೆ ಮೇಲೆ ಹಾದು ಹೋಗುವ ಜನರ ಸುರಕ್ಷತೆ ಬಗ್ಗೆ ವ್ಯಾಪಕ ಚರ್ಚೆ ಶುರುವಾಗಿದೆ. ತೊಕ್ಕೊಟ್ಟಿನಿಂದ ಮಂಗಳೂರಿಗೆ ಬರುವ ಹಳೆಯ ಸೇತುವೆಯ ಎಡಭಾಗದ ಫುಟ್ಪಾತ್‌ನಲ್ಲಿ ಉಳ್ಳಾಲಕ್ಕೆ ನೀರು ಸರಬರಾಜು ಮಾಡಲು ಪೈಪ್‌ಲೈನ್‌ ಅಳವಡಿಸಿರುವುದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಈ ಪೈಪ್‌ಲೈನ್‌ ಮೇಲೆ ಕಾಲಿಟ್ಟು, ಕೆಲವರು ನದಿಗೆ ಇಣುಕಿ ನೋಡುವ ಪ್ರಯತ್ನ ನಡೆಸುತ್ತಿದ್ದು, ಹಲವು ಬಾರಿ ಅಪಾಯಕ್ಕೂ ಕಾರಣವಾಗಿದೆ ಎಂಬುದು ಅವರ ವಾದ. ಒಂದೊಮ್ಮೆ, ಸಿದ್ಧಾರ್ಥ್ ಅವರು ಕೂಡ ಇದೇ ಸೇತುವೆಯಿಂದ ನದಿಗೆ ಹಾರಿದ್ದರೆ, ಈ ಪೈಪ್‌ಲೈನ್‌ ಮೇಲೆಯೇ ಕಾಲಿಟ್ಟು ಸುಮಾರು ನಾಲ್ಕು ಅಡಿ ಎತ್ತರಕ್ಕೆ ಇರುವ ತಡೆಯನ್ನು ಬಹಳ ಸುಲಭವಾಗಿ ದಾಟಿ ನದಿಗೆ ಧುಮುಕಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಅನುಮತಿ ಪಡೆದಿಲ್ಲಮನಾರ್ಹ ಅಂದರೆ, ಹಳೆ ಸೇತುವೆಯಲ್ಲಿ ನೀರಿನ ಪೈಪ್‌ಲೈನ್‌ ಅನ್ನು ರಸ್ತೆಯ ಪಕ್ಕದಲ್ಲಿ…

Read More

UN NETWORKS ಕೊಣಾಜೆ : ಕೊಣಾಜೆ ಕಲ್ಲೆಗುಂಡಿ ನಿವಾಸಿ ಎಸ್.ಬಾಲಕೃಷ್ಣ ಭಟ್(84) ಅವರು ಬುಧವಾರ ಸ್ವಗೃಹದಲ್ಲಿ ನಿಧನರಾದರು. ನಿವೃತ್ತ ಅಂಚೆ ಅಧಿಕಾರಿಯಾಗಿದ್ದ ಇವರು ಕೃಷಿಕರೂ ಆಗಿದ್ದರು. ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.

Read More

UN NETWORKS ಹರೇಕಳ : ನಾವಿರುವ ಈ ಸಮಾಜದಲ್ಲಿ ಸಾಮಾಜಿಕ ಆತಂಕದ ಪರಿಸ್ಥಿತಿಗಳು ಎದುರಾಗುವಾಗ ಅದನ್ನು ಸವಾಲಾಗಿ ಸ್ವೀಕರಿಸಲು, ಅಂತಹ ಬಹು ದೊಡ್ಡ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವಂತಹ ಸಮರ್ಥ ವಿದ್ಯಾರ್ಥಿಗಳನ್ನು ಜವಬ್ದಾರಿಯುತರನ್ನಾಗಿ ಆರಂಭದ ಹಂತದಿಂದಲೇ ರೂಪಿಸುವುವುದು ಪ್ರಾಥಮಿಕ ಹಾಗೂ ಪ್ರೌಢಶಾಲಾ ಅಧ್ಯಾಪಕರು ಹೊರತು ಉನ್ನತ ಶಿಕ್ಷಣ ಕಲಿಸಿಕೊಡುವ ಪ್ರಾಧ್ಯಾಪಕರಲ್ಲ ಎಂದು ಮಂಗಳೂರು ವಿಶ್ವವಿದ್ಯಾಲಯದ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಪ್ರೊ. ಪಿ.ಎಲ್. ಧರ್ಮ ಹೇಳಿದರು. ಪಾವೂರು ಹರೇಕಳದ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆಯಲ್ಲಿ 35ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿಯಾಗುತ್ತಿರುವ ಮುಖ್ಯ ಶಿಕ್ಷಕ ಕೆ. ರವೀಂದ್ರ ರೈ ಅವರನ್ನು ಶಾಲಾ ಆಡಳಿತ ಮಂಡಳಿ ಪಾವೂರು ಹರೇಕಳ ತ್ರಿಶಕ್ತಿ ವಿದ್ಯಾವರ್ಧಕ ಸಂಘದ ವತಿಯಿಂದ ಬುಧವಾರ ಶಾಲೆಯಲ್ಲಿ ನಡೆದ ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಅಭಿನಂದನಾ ಭಾಷಣ ಮಾಡಿದರು. ಈ ಜಿಲ್ಲೆಯ ಮಣ್ಣಿಗೆ ಯಾರೆಲ್ಲ ಕಾಲಿಟ್ಟಿದ್ದಾರೋ ಅವರೆಲ್ಲರನ್ನು ಈ ಮಣ್ಣು ಸ್ವೀಕರಿಸಿ ಅವರ ಸಾಧನೆಗೆ ನೀರೆರೆದು ಪೋಷಿಸಿದೆ. ಇಲ್ಲಿನ ದೈವ ದೇವರುಗಳ…

Read More

UN NETWORKS ತೊಕ್ಕೊಟ್ಟು : ತೊಕ್ಕೊಟ್ಟು ಫ್ಲೈಓವರ್ ಬಳಿ ಆಪರಿಚಿತ ಮೃತದೇಹ ಪತ್ತೆಯಾಗಿದ್ದು, ವಾರಿಸುದಾರರು ಉಳ್ಳಾಲ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದಾಗಿದೆ. ಸುಮಾರು 45ರಿಂದ 50ರ ಹರೆಯದ ವಯಸ್ಸಿನ ವ್ಯಕ್ತಿಯಾಗಿದ್ದು, ಕಳೆದ ಹಲವು ಸಮಯಗಳಿಂದ ಇದೇ ಪರಿಸರದಲ್ಲಿ ಭಿಕ್ಷಾಟನೆ ಮಾಡಿಕೊಂಡು ರಾತ್ರಿವೇಳೆ ಫ್ಲೈಓವರ್ ಅಡಿಯಲ್ಲಿ ಮಲಗುತ್ತಿದ್ದರು. ಇದೀಗ ಗಂಭೀರ ಕಾಯಿಲೆಯಿಂದ ವ್ಯಕ್ತಿ ಮೃತಪಟ್ಟಿದ್ದಾರೆಂದು ಶಂಕಿಸಲಾಗಿದೆ. ಮೃತ ಶರೀರವನ್ನು ಮಂಗಳೂರಿನ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದ್ದು ವಾರಿಸುದಾರರು ಉಳ್ಳಾಲ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕಾಗಿ ವಿನಂತಿ.

Read More

UN NETWORKS ಕೊಣಾಜೆ : ಸಂಸ್ಕೃತಿ ಚಿಂತಕ, ಸಾಹಿತ್ಯ ಪರಿಚಾರಕ ಏರ್ಯ ಲಕ್ಷ್ಮೀ ನಾರಾಯಣ ಆಳ್ವರು ಮಂಗಳೂರು ವಿವಿಯ ಎಸ್‍ವಿಪಿ ಕನ್ನಡ ಅಧ್ಯಯನ ಸಂಸ್ಥೆಗೆ ನೀಡಿದ ಕೊಡುಗೆ ಅಪಾರವಾಗಿದೆ ಎಂದು ಮಂಗಳೂರು ವಿವಿ ಎಸ್‍ವಿಪಿ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಪ್ರೊ.ಅಭಯಕುಮಾರ್ ಅವರು ಹೇಳಿದರು. ಅವರು ಸೋಮವಾರ ಮಂಗಳೂರು ವಿವಿಯ ಎಸ್‍ವಿಪಿ ಕನ್ನಡ ಅಧ್ಯಯನ ವಿಭಾಗದಲ್ಲಿ ಸಾಹಿತಿ ಏರ್ಯ ಲಕ್ಷ್ಷೀ ನಾರಾಯಣ ಆಳ್ವ ಅವರ ನಿಧನದ ಹಿನ್ನೆಲಯಲ್ಲಿ ನಡೆದ ಸಂತಾಪ ಸೂಚನೆ ಸಭೆಯಲ್ಲಿ ಮಾತನಾಡಿದರು.ಮಂಗಳೂರು ವಿಶ್ವವಿದ್ಯಾಲಯದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥ ತುಳು ಅಧ್ಯಯನ ಪೀಠ ಆರಂಭವಾದಾಗಿನಿಂದ ಹಿಡಿದು ಇಂದಿನ ವರೆಗೂ ಸಲಹಾ ಸಮಿತಿಯ ಸದಸ್ಯರಾಗಿದ್ದುಕೊಂಡು ತುಳು ಮತ್ತು ಕನ್ನಡ ಭಾಷೆಯ ಅನುಸಂಧಾನದ ಕೆಲಸ ಮಾಡಿದ್ದಾರೆ ಎಂದು ಹೇಳಿದರು. ಪ್ರಾಧ್ಯಾಪಕರಾದ ಪ್ರೊ.ಶಿವರಾಮ ಶೆಟ್ಟಿ ಅವರು ಮಾತನಾಡಿ, ತುಳು ಮತ್ತು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಏರ್ಯ ಅವರ ಕೊಡುಗೆ ಅನನ್ಯವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರಾಧ್ಯಾಪಕರುಗಳಾದ ಪ್ರೊ.ಸೋಮಣ್ಣ, ಡಾ.ನಾಗಪ್ಪ ಗೌಡ, ಡಾ.ಧನಂಜಯ ಕುಂಬ್ಳೆ,…

Read More

ಕೊಣಾಜೆ : ವ್ಯಕ್ತಿಗೆ ತನ್ನ ಬದುಕಲ್ಲಿ ತತ್ವ ಮತ್ತು ಬದ್ಧತೆ ಬಹಳ ಮುಖ್ಯವಾದುದು. ಪ್ರೊ.ಶಿವರಾಮ ಶೆಟ್ಟಿಯವರು ತನ್ನದೇ ಆದ ಬದ್ದತೆಯನ್ನು ಪಾಲಿಸಿಕೊಂಡು ವಿಭಾಗದಲ್ಲಿ ಪರಿಶ್ರಮದ ಸೇವೆ ಸಲ್ಲಿಸುವುದರೊಂದಿಗೆ ಕನ್ನಡ ವಿಭಾಗಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಮಂಗಳೂರು ವಿವಿಯ ಎಸ್‍ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದ ಪ್ರೊ.ಅಭಯ ಕುಮಾರ್ ಅವರು ಹೇಳಿದರು. ಅವರು ಮಂಗಳೂರು ವಿಶ್ವವಿದ್ಯಾಲಯದ ಎಸ್‍ವಿಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸೋಮವಾರ ನಡೆದ ಪ್ರೊ.ಶಿವರಾಮ ಶೆಟ್ಟಿ ಅವರಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಒಂದು ಉತ್ತಮ ವ್ಯಕ್ತಿತ್ವ, ತತ್ವ, ಬದ್ಧತೆಯೊಂದಿಗೆ ಸುಮಾರು 1980ರಿಂದಲೂ ವಿಭಾಗದಲ್ಲಿದ್ದು ಇದೀಗ ನಿವೃತ್ತಿಯವರೆಗೂ ಅದನ್ನು ಪಾಲಿಸಿಕೊಂಡು ಬಂದ ಶಿವರಾಮ ಶೆಟ್ಟಿಯವರ ನಿವೃತ್ತಿಯ ಬದುಕು ಸುಖದಾಯಕವಾಗಿರಲಿ ಹಾಗೂ ಇನ್ನಷ್ಟು ಸಂಶೋಧನಾ ಕಾರ್ಯವು ಅವರಿಂದ ನಡೆಯಲಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಎಸ್‍ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾದ ಪ್ರೊ.ಶಿವರಾಮ ಶೆಟ್ಟಿ ಅವರು, ಕೊಣಾಜೆಯಲಿದ್ದ…

Read More

UN NETWORKS ಉಳ್ಳಾಲ: ಎಸ್ಸೆಸ್ಸೆಫ್ ಹಾಗೂ ಎಸ್‍ವೈಎಸ್ ಪಟ್ಲ ಇದರ ಜಂಟಿ ಆಶ್ರಯದಲ್ಲಿ ಪಟ್ಲದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಳೆಗೊಂದು ನೆರಳು ಎಂಬ ಶೀರ್ಷಿಕೆಯಲ್ಲಿ ಸಸಿ ವಿತರಣಾ ಕಾರ್ಯಕ್ರಮ ಹಾಗು ಸಾಧಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಸೆಸ್ಸೆಫ್ ಪಟ್ಲ ಶಾಖಾಧ್ಯಕ್ಷರಾದ ನಝೀರ್ ಪಟ್ಲ ವಹಿಸಿದರು. ತಖ್ವಾ ಜುಮಾ ಮಸೀದಿ ಮುದರ್ರಿಸರಾದ ಇಝ್ಝುದ್ದೀನ್ ಅಹ್ಸನಿ ದುವಾ ನೆರವೇರಿಸಿದರು. ಉಳ್ಳಾಲ ನಗರ ಸಭಾಧ್ಯಕ್ಷ ಬಾಝಿಲ್ ಡಿ’ಸೋಜ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಶಾಲಾ ವಿದ್ಯಾರ್ಥಿಗಳಿಗೆ ಸಸಿ ವಿತರಿಸಲಾಯಿತು. ಮಂಗಳೂರು ಉಪ ವಲಯ ಅರಣ್ಯಾಧಿಕಾರಿ ರವಿಕುಮಾರ್ ಮಾತನಾಡಿ ಪರಿಸರ ಸಂರಕ್ಷಣೆಗೆ ಗಿಡ ನೆಡುವುದು ಅನಿವಾರ್ಯ ಎಂದು ತಿಳಿಸಿದರು. ಜೆ. ಸಿ. ಐ. ಮಂಗಳೂರು ಸಾಮ್ರಾಟ್ ಇದರ ಅಧ್ಯಕ್ಷೆ ಅಶ್ವಿನಿ ಐತಾಳ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆಯನ್ನೇ ತನ್ನ ದಿನ ನಿತ್ಯದ ಕಾಯಕವಾಗಿಸಿರುವ ಖ್ಯಾತ ಪರಿಸರ ಪ್ರೇಮಿ ಅಬ್ದುಲ್ ರಹ್ಮಾನ್ ಪಟ್ಲ ಹಾಗು ಸಂಜೀವ ಭಂಡಾರಿ ತೋಡುದಳ…

Read More

UN NETWORKS ತಲಪಾಡಿ : ತಲಪಾಡಿ ಕೃಷ್ಣನಗರ ಶ್ರೀ ಕೃಷ್ಣಾ ಭಜನಾ ಮಂದಿರದ ಅಧ್ಯಕ್ಷರಾಗಿ ರಮೇಶ್ ಕುಮಾರ್ ಆಯ್ಕೆಯಾಗಿದ್ದಾರೆ. 2019-20ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಗೌರವಾಧ್ಯಕ್ಷರಾಗಿ ಜಗನ್ನಾಥ ಕೆ, ಉಪಾಧ್ಯಕ್ಷರಾಗಿ ಶೇಖರ್, ಕಾರ್ಯದರ್ಶಿಯಾಗಿ ಚಂದ್ರಶೇಖರ್, ಜೊತೆ ಕಾರ್ಯದರ್ಶಿಯಾಗಿ ಸುರೇಶ್ ಕುಮಾರ್, ಕೋಶಾ„ಕಾರಿಯಾಗಿ ರಿತೇಶ್, ಕ್ರೀಡಾ ಕಾರ್ಯದರ್ಶಿಯಾಗಿ ದಿನೇಶ್, ರಿತೇಶ್ , ಕೌಶಿಕ್, ಭಜನಾ ಉಸ್ತವಾರಿಗಳಾಗಿ ರವೀಂದ್ರ, ಮುರಳೀಧರ, ಆಶೀರ್ವಾದ್, ಅರ್ಚಕರಾದ ಮನೋಹರ್ , ನಾಗೇಶ್, ಮಹಿಳಾ ಸಮಿತಿ ಉಸ್ತವಾರಿ ಕಲ್ಯಾಣಿ, ವಿನೋದ, ಗೌರವ ಸಲಹೆಗಾರರಾಗಿ ಮಂಜಪ್ಪ , ಜನಾರ್ಧನ, ಸದಾನಂದ ಇವರುಗಳನ್ನು ಆಯ್ಕೆ ಮಾಡಲಾಯಿತು.

Read More

UN NETWORKS ಕುಂಪಲ : ಭಾರತ ಸರಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ, ಮಂಗಳೂರು, ಶ್ರೀ ಬಾಲಕೃಷ್ಣ ಮಂದಿರ ಕುಂಪಲ ಮತ್ತು ಯುವ ಮರಾಠ ಕುಂಪಲ ಇದರ ಸಂಯುಕ್ತ ಆಶ್ರಯದಲ್ಲಿ ಮಲೇರಿಯಾ ಮತ್ತು ಡೆಂಗ್ಯೂ ತಡೆಗಟ್ಟಲು ಮುನ್ನೆಚ್ಚರಿಕಾ ಕಾರ್ಯಕ್ರಮ ಕುಂಪಲ ಶ್ರೀ ಬಾಲಕೃಷ್ಣ ಮಂದಿರದಲ್ಲಿ ನಡೆಯಿತು. ಮಾಹಿತಿ ಕಾರ್ಯಾಗಾರವನ್ನು ಆರೋಗ್ಯ ಇಲಾಖೆಯ ಆರ್.ಸಿ.ಹೆಚ್, ರಾಜೇಶ್ ನಡೆಸಿಕೊಟ್ಟರು. ಅದ್ಯಕ್ಷತೆಯನ್ನು ಬಾಲಕೃಷ್ಣ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ ವಹಿಸಿದ್ದರು. ನೆಹರೂ ಯುವ ಕೇಂದ್ರದ ಜಿಲ್ಲಾ ಸಂಪರ್ಕಾಧಿಕಾರಿ ರಘುವೀರ್ ಎಸ್, ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿ ಗೌರವಾದ್ಯಕ್ಷ ಸೋಮಶೇಖರ ಕೆ. ಜಗತಾಪ್, ಯುವ ಮರಾಠದ ಗೌರವಾದ್ಯಕ್ಷ ವೆಂಕಟಗಿರಿ, ಬಾಲಕೃಷ್ಣ ಮಂದಿರದ ಕಾರ್ಯದರ್ಶಿ ರವೀಂದ್ರ ಕುಂಪಲ, ಕೋಶಾಧಿಕಾರಿ ಮಾಧವ ಬಂಗೇರ, ನೆಹರೂ ಯುವ ಕೇಂದ್ರದ ವಿಕಾಸ್ ರಾವ್ ಕುಂಪಲ, ಪ್ರಜ್ವಲ್ ಹಾಗೂ ಯುವ ಮರಾಠ ಮತ್ತು ಬಾಲಕೃಷ್ಣ ಮಹಿಳಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಪ್ರವೀಣ್ ಎಸ್. ಕುಂಪಲ ಸ್ವಾಗತಿಸಿದರು, ಕೃಷ್ಣ…

Read More