Author: UllalaVani

Kannada News From Coastal Karnataka

UN NETWORKS ಕೊಣಾಜೆ : ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಗಾಳಿ ಮಳೆಯಿಂದಾಗಿ ಕೊಣಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾರಿಪ್ಪಾಡಿ ಸೈಟ್‍ನಲ್ಲಿಯ ಮಾರ್ಟಿನ್ ಪೆರಾವೋ ಎಂಬವರ ಮನೆಗೆ ಬುಧವಾರ ಸುರಿದ ಭಾರೀ ಗಾಳಿ ಮಳೆಗೆ ಮರವೊಂದು ಉರುಳಿ ಬಿದ್ದ ಪರಿಣಾಮ ಅಪಾರ ಹಾನಿ ಸಂಭವಿಸಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ಗಾಯವಾಗಿಲ್ಲ. ಕೊಣಾಜೆ ನಡುಪದವು ಕಲ್ಲುಗುಂಡಿಯ ಖಾದರ್ ಹಾಜಿ ಎಂಬವರ ಮನೆ ಬಳಿಯ ಮರವೊಂದು ವಿದ್ಯುತ್ ತಂತಿಗೆ ಉರುಳಿ ಬಿದ್ದ ಪರಿಣಾಮ ನಾಲ್ಕು ವಿದ್ಯುತ್ ಕಂಬಗಳು ಧರೆಗುರಳಿದೆ. ಅಲ್ಲದೆ ಇಲ್ಲಿಯೇ ಸಮೀಪದ ಸುಧಾಕರ್ ಎಂಬವರ ಮನೆ ಸಮೀಪದ ಹಲಸಿನ ಮರವೊಂದು ಬುಧವಾರ ರಾತ್ರಿ ಗಾಳಿಗೆ ಮುರಿದು ಬಿದ್ದಿದೆ. ಪಟ್ಟೋರಿಯ ಶ್ರೀ ನಾಗಬ್ರಹ್ಮ ಉಳ್ಳಾಲ್ತಿ ದೈವಸ್ಥಾನದ ಮುಂಭಾಗದ ಆವರಣ ಗೋಡೆಯು ಸೋಮವಾರ ರಾತ್ರಿ ಸುರಿದ ಭಾರೀ ಮಳೆಗೆ ಕುಸಿದು ಬಿದ್ದು ಹಾನಿ ಸಂಭವಿಸಿದೆ. ಕೊಣಾಜೆ ದೊಡ್ಡುಗುಳಿಯ ಗೋಪಾಲ್ ಎಂಬವರ ಮನೆ ಸಮೀಪದ ಗುಡ್ಡದ ಮಣ್ಣು ಕುಸಿದು ಮನೆಗೆ ಹಾನಿ ಸಂಭವಿಸಿದೆ.

Read More

UN NETWORKS ತೊಕ್ಕೊಟ್ಟು : ಕಾಂಗ್ರೆಸ್ ಅಧಿಕಾರದ ಸುಖ ಅನುಭವಿಸಲು ಮತ ಬ್ಯಾಂಕ್ ಸೃಷ್ಟಿಗಾಗಿ ಮಾಡಿರುವ ದುರಂತಮಯ ಕಾಯ್ದೆಗಳನ್ನು ರದ್ದುಗೊಳಿಸಿ ಸಬ್ ಕಾ ಸಾಥ್ ಸಬ್ ವಿಕಾಸ್ ದೋರಣೆಯೊಂದಿಗೆ ಹೆಜ್ಜೆ ಇಡುತ್ತಿರುವ ನರೇಂದ್ರ ಮೋದಿಯವರ ಆಡಳಿತದ ಕೇಂದ್ರ ಸರಕಾರ ಜಮ್ಮು ಕಾಶ್ಮೀರ ಕ್ಕೆ ನೀಡಿರುವ ವಿಶೇಷ ಸ್ಥಾನಮಾನ 370 ಮತ್ತು 35 A ಕಾಯ್ಧೆಯನ್ನು ರದ್ದುಗೊಳಿಸಿದ ಐತಿಹಾಸಿಕ ತೀರ್ಮಾನವನ್ನು ಅಭಿನಂದಿಸಿ ಮಂಗಳೂರು ಕ್ಷೇತ್ರ ಬಿ.ಜೆ.ಪಿ.ಯಿಂದ ತೊಕ್ಕೊಟಿನಲ್ಲಿ ಸಿಹಿ ತಿಂಡಿ ನೀಡಿ ಹರ್ಷಾಚರಣೆಗೈಯಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರ ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ,ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ರವೀಂದ್ರ ಶೆಟ್ಟಿ, ಮಾಜಿ ಅಧ್ಯಕ್ಷ ರಾದ ಚಂದ್ರಶೇಖರ ಉಚ್ಚಿಲ್, ಹಿರಿಯರಾದ ಸಂಜೀವ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್ ಮಾತನಾಡಿದರು. ಕ್ಷೇತ್ರದ ಉಪಾಧ್ಯಕ್ಷ ರಾದ ಹರಿಯಪ್ಪ ಸಾಲ್ಯಾನ್, ಪ್ರಕಾಶ್ ಸಿಂಫೋನಿ, ಮಹಿಳಾ ಮೋರ್ಚಾದ ಜಿಲ್ಲಾ ಪ್ರ.ಕಾರ್ಯದರ್ಶಿ ರಾಜೀವಿ ಕೆಂಪುಮಣ್ಣು, ಮಾಧ್ಯಮ ಸಂಚಾಲಕರಾದ ಜೀವನ್ ಕುಮಾರ್ ತೊಕ್ಕೊಟು, ಪ್ರಮುಖರಾದ ಚಂದ್ರಹಾಸ ಪಂಡಿತ್ ಹೌಸ್, ಪ್ರಶಾಂತ್ ಕಾಪಿಕಾಡ್, ಅಜಂತ್…

Read More

UN NETWORKS ಹರೇಕಳ : ನಾಲ್ಕು ಗೋಡೆಗಳ ನಡುವೆ ಕಲಿಯುವ ಪಾಠಕ್ಕಿಂತ ಅದಕ್ಕಿಂತ ಹೊರತಾದ ಚಟುವಟಿಕೆಗಳು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಅತ್ಯುತ್ತಮವಾಗಿ ಸಿಕ್ಕರೆ ನಮ್ಮ ಮುಂದಿನ ಜೀವನ ರೂಪಿಸುವಲ್ಲಿ ಸಹಕಾರಿಯಾಗುತ್ತದೆ ಎಂದು ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅಭಿಪ್ರಾಯಪಟ್ಟರು. ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ 35 ವರ್ಷ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ರವೀಂದ್ರ ರೈ ಕಲ್ಲಿಮಾರ್ ಅವರಿಗೆ ಭಾನುವಾರ ಗ್ರಾಮಸ್ಥರು ಮತ್ತು ಹಳೆವಿದ್ಯಾರ್ಥಿ ಸಂಘದ ವತಿಯಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಇಂದು ಹಲವಾರು ಕನ್ನಡ ಮಾಧ್ಯಮ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಸೊರಗುತ್ತಿದೆ. ಇಂತಹ ಶಾಲೆಗಳನ್ನು ಮತ್ತೆ ಜೀವ ತುಂಬಿಸುವ ಕೆಲಸ ನಡೆಯಬೇಕಿದೆ. ಶಾಲಾ ಜೀವನದಲ್ಲಿ ಹಲವು ಶಿಕ್ಷಕರು ಬಂದರೂ ರವೀಂದ್ರ ರೈಯಂತಹ ಮಾದರಿ ಶಿಕ್ಷಕರು ಮನದಲ್ಲಿ ಸದಾ ಇರುತ್ತಾರೆ ಎಂದು ಹೇಳಿದರು. ರವೀಂದ್ರ ರೈ ಶಾಲೆಯಲ್ಲಿ ಮಾತ್ರ ಪಾಠ ಮಾಡದೆ, ಸಮಾಜದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲೂ ಸಕ್ರಿಯವಾಗಿ ಪಾಲ್ಗೊಂಡು ಜನರಿಗೆ ಜೀವನದ ಪಾಠ ಮಾಡುವ…

Read More

UN NETWORKS ಮುನ್ನೂರು : ಹಣ ಕೊಟ್ಟು ಉಪಯೋಗಿಸುವಂತಹ ಬಿಸ್ಲೆರಿಗಿಂತಲೂ ಪರಿಶುದ್ಧ ನೀರು ಕೇಬಲ ಎರಡು ರೂಪಾಯಿಗೆ ಸಿಗುತ್ತಿದೆ, ಉದರ ಸದುಪಯೋಗವಾದಾಗ ಸರ್ಕಾರದ ಯೋಜನೆ ಸಾರ್ಥಕವಾಗಲಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ ಅಭಿಪ್ರಾಯಪಟ್ಟರು. ಮುನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಭಾಷ್ ನಗರದಲ್ಲಿ ನಿರ್ಮಾಣವಾದ ಶುದ್ಧ ಕುಡಿಯುವ ನೀರಿನ ಘಟಕ ಭಾನುವಾರ ಉದ್ಘಾಟಿಸಿ ಮಾತನಾಡಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವೀಂದ್ರ ನಾಯಕ್ ಮಾತನಾಡಿ ಹಲವು ಸಮಯಗಳಿಂದ ಕೆಲಸ ಆಗದೆ ಬಾಕಿಯಾಗಿತ್ತು, ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸುವ ಮೂಲಕ ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದಯ ತಿಳಿಸಿದರು. ಮಾಜಿ ಶಾಸಕ ಕೆ.ಜಯರಾಮ ಶೆಟ್ಟಿ, ಮುನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪಾ ಶೆಟ್ಟಿ, ಉಪಾಧ್ಯಕ್ಷ ಹರೀಶ್ ಗಟ್ಟಿ ಭಂಡಾರಬೈಲ್, ದೇರಳಕಟ್ಟೆ ವಿದ್ಯಾರತ್ನ ಆಂಗ್ಲಮಾಧ್ಯಮ ಶಾಲೆಯ ನಿರ್ದೇಶಕ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಪುಷ್ಪಲತಾ ಅಂಚನ್, ಕಿರಣ್ ಶೆಟ್ಟಿ, ಸಿಬ್ಬಂದಿ ಕಮಲಾಕ್ಷ, ಧನರಾಜ್, ಮಮತಾ ಕುಲಾಲ್, ಸುಜಾತ, ಸಾವಿತ್ರಿ, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಪಂಚಾಯಿತಿ ಸಿಬ್ಬಂದಿ ನೆವಿಲ್…

Read More

UN NETWORKS ಪಾನೀರ್ : ಕೆಥೊಲಿಕ್ ಸಭಾ ಪಾನೀರ್ ಘಟಕ ಹಾಗೂ ದಯಾಮಾತೆ ಇಗರ್ಜಿಯ ಜಂಟಿ ಆಶ್ರಯದಲ್ಲಿ ಪಾನೀರ್ ಡೆನ್ಝಿಲ್ ಡೇಸಾ ಅವರ ಗದ್ದೆಯಲ್ಲಿ ಭಾನುವಾರ ಮಸ್ತಿ-ಕುಸ್ತಿ ಕ್ರೀಡಾಕೂಟ ನಡೆದಿದ್ದು, ಕೆಥೋಲಿಕ್ ಸಮುದಾಯ ದಿನವಿಡೀ ಗದ್ದೆಯಲ್ಲೇ ಕಳೆದರು. ನಾಸಿಕ್ ಬ್ಯಾಂಡ್ ಜಲಕ್ಕೆಥೋಲಿಕ್ ಸಭಾ 30ನೇ ವರ್ಷಾಚರಣೆ ಪ್ರಯುಕ್ತ ಮೂವತ್ತು ಕಾರ್ಯಕ್ರಮದಲ್ಲಿ ಒಂದಾಗಿ ಗದ್ದೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಅತಿಥಿಗಳನ್ನು ನಾಸಿಕ್ ಬ್ಯಾಂಡ್ ಮೆರವಣಿಗೆ ಮೂಲಕ ಕರೆ ತರಲಾಯಿತು. ಪ್ರತೀ ಪಂದ್ಯದ ಸಂದರ್ಭ ಬ್ಯಾಂಡ್ ಮೂಲಕ ಹುರಿದುಂಬಿಸಲಾಯಿತು. ಬಂದವರಿಗೆಲ್ಲರಿಗೂ ಮಾಂಸಾಹಾರಿ ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು. ನಡೆದ ಪಂದ್ಯಾಟಗಳುನಿಧಿಶೋಧ, ಲಿಂಬೆ ಚಮಚ, ಓಟ, ಮೂರು ಕಾಲಿನ ಓಟ, ವಾಲಿಬಾಲ್, ಬಾಸ್ಕೆಟ್‍ಬಾಲ್ ಥ್ರೋ, ಹಾಡುವ ಸ್ಪರ್ಧೆ, ಮಡಕೆ ಒಡೆಯುವ ಸ್ಪರ್ಧೆ, ಹಿಂದಕ್ಕೆ ಓಡುವುದು, ಪತಿ ಪತ್ನಿಯನ್ನು ಎತ್ತಿಕೊಂಡು ಹಿಂದಕ್ಕೆ ಹೋಗುವುದು, ಹಾಳೆಯಲ್ಲಿ ಎಳೆಯುವುದು ಸಹಿತ ಇನ್ನಿತರ ಸ್ಪರ್ಧೆಗಳು ದಂಪತಿಗೆ, ಮಹಿಳೆಯರು, ಪುರುಷರಿಗೆ, ಹುಡುಗ, ಹುಡುಗಿಯರಿಗಾಗಿ ನಡೆಯಿತು. ಮಂಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ನಿರ್ದೇಶನಾಲಯದ…

Read More

UN NETWORKS ಮಂಗಳೂರು : ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಮೂರನೇ ವಾರ್ಷಿಕೋತ್ಸವ ಹಾಗೂ ಬ್ಲಡ್ ಡೊನೇಷನ್ ಎಕ್ಸ್ಪೋ2019ನ ಉದ್ಘಾಟನಾ ಸಮಾರಂಭ ನಗರ ಫಿಝಾ ಮಾಲ್ ನಡೆಯಿತು. ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಹಾಫಿಲ್ ಸುಫಿಯಾನ್ ಸಖಾಫಿ, ಮಿಲಾಗ್ರಿಸ್ ಚರ್ಚ್ ನ ಧರ್ಮಗುರು ಫಾ.ಅನಿಲ್ ಫ್ರಾನ್ಸಿಸ್ ಪಿಂಟೋ ಹಾಗೂ ಪೊಳಲಿ ರಾಮಕೃಷ್ಣ ತಪೋವನದ ವಿವೇಕ್ ಚೈತನ್ಯಾನಂದ ಸ್ವಾಮಿ ಮೂರು ಧರ್ಮಗುರುಗಳು ಜೊತೆ ಸೇರಿ ಕಾರ್ಯಕ್ರಮ ಉದ್ಘಾಟಿಸಿದರು.ಕುಂಬ್ರ ಕರ್ನಾಟಕ ಇಸ್ಲಾಮಿಕ್ ಅಕಾಡೆಮಿಯ ಪ್ರಾಧ್ಯಾಪಕ ಅನೀಸ್ ಕೌಸರಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಸಂಪೂರ್ಣ ಮಾಹಿತಿ ಇರುವ ಕೈಪಿಡಿಯನ್ನು ಬಿಡುಗಡೆಗೊಳಿಸಿದರು. ವೆನ್ಲಾಕ್ ಅಸ್ಪತ್ರೆಯ ರಕ್ತನಿಧಿ ಅಧಿಕಾರಿ ಡಾ. ಶರತ್ ಕುಮಾರ್ ರಾವ್.ಜಿ, ತೇಜಸ್ವಿನಿ ಅಸ್ಪತ್ರೆಯ ರಕ್ತನಿಧಿ ಅಧಿಕಾರಿ ಡಾ.ಶಿಲ್ಪ ಪ್ರೇಮ್ ಕುಮಾರ್, ಶ್ರೀನಿವಾಸ್ ಅಸ್ಪತ್ರೆಯ ಡಾ.ಸುಕೇಶ್ ಕೊಟ್ಟಾರಿ, ಕಚಚೂರು ಅಸ್ಪತ್ರೆಯ ರಕ್ತನಿಧಿ ಅಧಿಕಾರಿ ವೆಂಕಟೆಸ್ ರಾಜ್ ರೈ, ರೆಡ್ ಕ್ರಾಸ್ ಸೊಸೈಟಿಯ ಪ್ರವಿಣ್ ಕುಮಾರ್, ಎ.ಜೆ ಅಸ್ಪತ್ರೆಯ ಪಿ.ಆರ್ ಗೋಪಾಲಕೃಷ್ಣ ರಕ್ತದಾನ…

Read More

UN NETWORKS ಉಳ್ಳಾಲ : ಉಳ್ಳಾಲ ಶ್ರೀ ವಿದ್ಯಾಂಜನೇಯ ವ್ಯಾಯಾಮ ಶಾಲೆಯ ಸಕ್ರೀಯ ಸದಸ್ಯ ಮತ್ತು ಉಳ್ಳಾಲ ಮಲರಾಯ ಸ್ಥಾನದ ನೂತನವಾಗಿ ಅರ್ಚಕರಾಗಿ ಆಯ್ಕೆಯಾದ ಲತೀಶ್ ಪೂಜಾರಿಯವರಿಗೆ ಗೌರವಾರ್ಪಣೆ ಕಾರ್ಯಕ್ರಮ ಶ್ರೀ ವಿದ್ಯಾಂಜನೇಯ ವ್ಯಾಯಾಮ ಶಾಲೆಯಲ್ಲಿ ನಡೆಯಿತು. ಅಧ್ಯಕ್ಷರಾದ ಚಂದ್ರಹಾಸ ಶ್ರೀಯಾನ್, ನವೀನ್ ಚಂದ್ರ ಉಳ್ಳಾಲಬೈಲ್, ಗೌರವ ಅಧ್ಯಕ್ಷ ರವೀಂದ್ರ ರಾಜ್ ಉಳ್ಳಾಲ್, ಮಾಜಿ ಅಧ್ಯಕ್ಷ ಕಾಂಚನ್ ಕೆ. ಉಳ್ಳಾಲಬೈಲ್, ಕಾರ್ಯದರ್ಶಿ ದಿನೇಶ್ ಉಳ್ಳಾಲ್, ಸದಸ್ಯರಾದ ಜಗದೀಶ್ ಗೋಳಿಯಡಿ, ವ್ಯಾಯಾಮ ಶಾಲೆಯ ಉಸ್ತಾದ್ ಲಿಂಗಪ್ಪ ಮಾಸ್ಟರ್ ಉಳ್ಳಾಲ ನಗರ ಸಭೆ ಸದಸ್ಯರಾದ ರೇಶ್ಮಾ ಜಗದೀಶ್ ಮೊದಲಾದವರು ಉಪಸ್ಥಿತರಿದ್ದರು.

Read More

UN NETWORKS ತಲಪಾಡಿ : ವಿದ್ಯಾರ್ಥಿಗಳು ತಮಗೆ ದೊರೆತ ಉತ್ತಮ ವಿದ್ಯೆಯ ಸದುಪಯೋಗದಿಂದ ಭವ್ಯ ಭಾರತದ ಶಿಲ್ಪಿಗಳಾಗಿ ರೂಪುಗೊಳ್ಳಬೇಕು ಎಂದು ಮಂಗಳೂರಿನ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಅಭಿಪ್ರಾಯಪಟ್ಟರು. ಅವರು ತಲಪಾಡಿಯ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲಿನ ವಿದ್ಯಾರ್ಥಿಗಳ ಮಂತ್ರಿಮಂಡಲವನ್ನು ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಣ ಇಂದಿನ ಅಗತ್ಯಗಳಲ್ಲಿ ಒಂದು ಮಕ್ಕಳನ್ನು ಉತ್ತಮ ನಾಗರೀಕರನ್ನಾಗಿ ಮಾಡುವುದು. ಹಿಂದೆ ವಿದ್ಯಾರ್ಥಿ ಗುರುವಿದ್ದ ಹಾಗೂ ಗುರಿಯಿತ್ತು. ಆದರೆ ಇಂದು ಗುರು ಮಾತ್ರವಿದ್ದು ವಿದ್ಯಾರ್ಥಿಗಳಲ್ಲಿ ಗುರಿ ಮಾಯವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ನಾವು ಸಾಧನೆ ಮಾಡಬೇಕಾದರೆ ನಮ್ಮಲ್ಲಿ ದೂರದೃಷ್ಟಿತ್ವ, ಆತ್ಮವಿಶ್ವಾಸ, ಕಲಿಯುವ ಹಂಬಲ, ಆಸಕ್ತಿ, ದೃಢನಿರ್ಧಾರ ಕಲಿಕಾ ಕೌಶಲ್ಯಗಳು ಹಾಗೂ ಸಮಯದ ಸದುಪಯೋಗದಂತಹ ಉತ್ತಮ ಗುಣಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ನಾವೂ ಜ್ಞಾನದೇವತೆಯ ಆರಾಧಕರಾಗಬಹುದು. ಬದುಕು ನಮ್ಮ ಕೈಯಲ್ಲಿದೆ, ಅದನ್ನು ಬಳಸುವ ಉತ್ತಮ ರೀತಿಯೂ ನಮ್ಮ ಕೈಯಲ್ಲೇ ಇರುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್ ಅವರು ಮಾತನಾಡಿ ನಾಯಕರಾದವರು…

Read More

UN NETWORKS ಕುಂಪಲ : ಕೇಸರಿ ಮಿತ್ರ ವೃಂದ ಸೇವಾ ಟ್ರಸ್ಟ್ ಮತ್ತು ಕೇಸರಿ ಮಾತೃ ಮಂಡಳಿ, ವ್ಯಾಸನಗರ ಕುಂಪಲ ಇದರ ವತಿಯಿಂದ ಆಟಿದ ಕೂಟ-2019 ಕಾರ್ಯಕ್ರಮ ಕುತ್ತಾರಿನ ಬಾಲಸಂರಕ್ಷಣಾ ಕೇಂದ್ರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮಾಜಿ ಶಾಸಕ ಜಯರಾಮ ಶೆಟ್ಟಿ , ನ್ಯಾಯವಾದಿ ಕಿರಣ್ ಮಹೇಶ್ ಉದ್ಘಾಟಿಸಿದರು. ನಿವೃತ್ತ ಸೇನಾನಿಗಳಾದ ಕ್ಯಾಪ್ಟನ್ ಜಿ. ಎಸ್. ಪ್ರಸಾದ್, ವೆಂಕಟೇಶ್ ಕುಂಪಲ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಬಾಲಸಂರಕ್ಷಣಾ ಕೇಂದ್ರದ ವಿದ್ಯಾರ್ಥಿಗಳಿಗೆ ಸಂದೀಪ್ ಕುಂಪಲ ತೆಲಿಕೆ ನಲಿಕೆದ ಆಟಗಳನ್ನು ಆಡಿಸಿದರು ಮತ್ತು ಬಹುಮಾನಗಳನ್ನು ನೀಡಲಾಯಿತು. ಕೇಸರಿ ಮಾತೃ ಮಂಡಳಿಯ ಸಂಜನಾ ಡೆನ್ನಾನ ಡೆನ್ನಾನ ತುಳುನಾಡ ಸಿರಿ, ಬಾಲ ಸಂರಕ್ಷಣಾ ಕೇಂದ್ರದ ದೀಪ ಮತ್ತು ಸಂಗಡಿಗರಿಂದ ಆಟಿ ಕಳೆಂಜೆ ನೃತ್ಯ ಪ್ರದರ್ಶನ ನಡೆಯಿತು. ಅಕ್ಷತಾ ಮತ್ತು ಸ್ವಾತಿ ತುಳು ಪದ್ಯವನ್ನು ಹಾಡಿದರು.. ಹರಿಣಾಕ್ಷಿ ರವರು ಪಾಡ್ದವನ್ನು ಹಾಡಿದರು.. ಅನುಷಾ ಭಗವದ್ಗೀತೆ ಕಂಠ ಪಾಟದ ತುಣುಕೊಂದನ್ನು ವಾಚಿಸಿದರು. ನಂತರ ತುಳುನಾಡ ಲಿಟಲ್ ಸ್ಟಾರ್, ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಮಾಸ್ಟರ್ ತಕ್ಷಿಲ್…

Read More

UN NETWORKS ಉಳ್ಳಾಲ : ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವ ಶಿಕ್ಷಣ ಅಭಿಯಾನ, ಮಂಗಳೂರು ದ.ಕ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ , ಮಂಗಳೂರು ದಕ್ಷಿಣ ವಲಯ ಹಾಗೂ ಉಚ್ಚಿಲ ಬೋವಿ ವಿದ್ಯಾ ಸಂಸ್ಥೆಗಳ ಶತಮಾನೋತ್ಸವ ಆಚರಣಾ ಸಮಿತಿ ಇದರ ಸಹಯೋಗದೊಂದಿಗೆ ಪಿಲಾರ್ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ 2019 ಉಚ್ಚಿಲ ಬೋವಿ ಆಂಗ್ಲ ಮಾದ್ಯಮ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮೂರೂರ ಬೋವಿ ಮಹಾ ಸಭಾ ಅಧ್ಯಕ್ಷ ಚಿದಾನಂದ.ಆರ್ ಉಚ್ಚಿಲ್ ಉದ್ಘಾಟಿಸಿದರು.ಉಚ್ಚಿಲ ಬೋವಿ ವಿದ್ಯಾಸಂಸ್ಥೆಯ ಸಂಚಾಲಕ ದೇವದಾಸ್ ಟಿ. ಉಚ್ಚಿಲ್, ಉಚ್ಚಿಲ ಬೋವಿ ವಿದ್ಯಾಸಂಸ್ಥೆಗಳ ಶತಮಾನೋತ್ಸವ ಆಚರಣಾ ಸಮಿತಿಯ ಕಾರ್ಯಾಧ್ಯಕ್ಷ ರೋಹಿತಾಶ್ವ .ಯು, ಕಾರ್ಯದರ್ಶಿ ನಾರಾಯಣ ಉಚ್ಚಿಲ್, ಗೌರವ ಅಧ್ಯಕ್ಷೆ ಲಕ್ಷ್ಮಿ ಡಿ. ಉಚ್ಚಿಲ್, ಪಿಲಾರ್ ಕ್ಲಸ್ಟರ್ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ವೀಣಾ ಡೇಸಾ, ಬದ್ರಿಯಾ ನಗರ ಕ್ಲಸ್ಟರ್ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಫ್ಲೇವಿ ಡಿ’ಸೋಜ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಉಚ್ಚಿಲ ಬೋವಿ ವಿದ್ಯಾ ಸಂಸ್ಥೆಗಳ ಶತಮಾನೋತ್ಸವ ಆಚರಣಾ…

Read More