ಉಳ್ಳಾಲ : ದ.ಕ ಜಿಲ್ಲಾ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರು ಶನಿವಾರ ಉಳ್ಳಾಲ ಉಳಿಯ ಶ್ರೀ ಉಳ್ಳಾಲ್ತಿ ಧರ್ಮರಸರ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.ದೇವಸ್ಥಾನದ ಆಡಳಿತ ಮೊಕ್ತೇಸರ ದೇವು ಮೂಲ್ಯಣ್ಣ ವಿಶೇಷ ಪ್ರಾರ್ಥನೆ ಸಲ್ಲಿಸಿದರು.


ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ತಾ.ಪಂ ಅಧ್ಯಕ್ಷ ಮಹಮ್ಮದ್ ಮೋನು , ನಗರಸಭೆ ಸದಸ್ಯೆ ವೀಣಾ ಡಿಸೋಜಾ, ನಗರಸಭೆ ಮಾಜಿ ಸದಸ್ಯೆ ಯು.ಕೆ ಗೋಪಾಲ ಕೊಟ್ಟಾರ, ಸ್ಥಳೀಯರಾದ ಸ್ಟೀವನ್ ಕೊಟ್ಟಾರ, ಅವಿನಾಶ್ ಕೊಟ್ಟಾರ, ಆನಂದ ಮೆಂಡನ್ ಉಳಿಯ, ಇಸ್ಮಾಯಿಲ್ ಸೀದಿಯಬ್ಬ, ಪೊಡಿಮೋನು ಇಸ್ಮಾಯಿಲ್, ಜಾನ್ ಡಿಸೋಜ, ನವೀನ್ ಡಿಸೋಜಾ, ಪ್ರೇಮ್ ಪ್ರಕಾಶ್, ಹೆರಾಲ್ಡ್ ಡಿಸೋಜಾ, ಅಫ್ರೀದಿ ಹುಸೈನ್ ಕೊಟ್ಟಾರ, ಅಹಮ್ಮದ್ ಬಾವ ಕೊಟ್ಟಾರ ಉಪಸ್ಥಿತರಿದ್ದರು.


