UN NETWORKS
ಉಳ್ಳಾಲ: ದೇರಳಕಟ್ಟೆಯ ಫಾದರ್ ಮುಲರ್ಸ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ವಿಶ್ವ ಹೋಮಿಯೋಪತಿ-2019 ದಿನ ಪ್ರಯುಕ್ತ ಕಾಲ್ನಡಿಗೆ ಜಾಥಾ ಮತ್ತು ಬೀದಿನಾಟಕ ದೇರಳಕಟ್ಟೆ ಮತ್ತು ತೊಕ್ಕೊಟ್ಟು ಬಸ್ಸು ನಿಲ್ದಾಣಗಳಲ್ಲಿ ಬುಧವಾರ ನಡೆಯಿತು.


























ಜಾಥಾ ನೇತೃತ್ವ ವಹಿಸಿದ್ದ , ಸಮಾಜ ಸೇವಕ ವಿವೇಕ್ ಫೆರ್ನಾಂಡಿಸ್ ಮಾತನಾಡಿ ಆಗಸ್ಟಸ್ ಫಾದರ್ ಮುಲ್ಲರ್ ಸ್ಥಾಪಿಸಿದಂತಹ ಹೋಮಿಯೋಪತಿ ಔಷಧಿ ಪದ್ಧತಿಯನ್ನು 100 ವರ್ಷಗಳ ಇತಿಹಾಸವಿರುವ ಫಾದರ್ ಮುಲ್ಲರ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಮತ್ತು ದೇರಳಕಟ್ಟೆ ಭಾಗದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಸ್ಥಾಪಿಸಿದೆ. ಹೋಮಿಯೋಪತಿ ದಿನವಾದ ಇಂದು ಕಾಲೇಜಿನ ಮ್ಯಾನೇಜ್ ಮೆಂಟ್, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸೇರಿಕೊಂಡು ತೊಕ್ಕೊಟ್ಟು, ದೇರಳಕಟ್ಟೆ ಭಾಗದಲ್ಲಿ ಜಾಥಾ ನಡೆಸಲಾಗಿದೆ. ಆಸ್ಪತ್ರೆಯಲ್ಲಿ ಇರುವ ಮಕ್ಕಳ, ಮಹಿಳೆಯರಸಹಿತ ವಿವಿಧ ವಿಭಾಗಗಳಿಂದ ದೊರಕುವ ಸೌಲಭ್ಯಗಳ ಕುರಿತ ಮಾಹಿತಿಯನ್ನು ಬೀದಿ ನಾಟಕದ ಮೂಲಕ ತೋರಿಸಲಾಗಿದೆ . ಯಾವುದೇ ಅಡ್ಡಪರಿಣಾಮವಿಲ್ಲದ ಹೋಮಿಯೋಪತಿ ಔಷಧ ಪದ್ಧತಿಯನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಅನ್ನುವ ಸಂದೇಶವನ್ನು ಈ ಮೂಲಕ ಸಾರಲಾಗಿದೆ ಎಂದರು.
ಈ ಸಂದರ್ಭ ಫಾದರ್ ಮುಲ್ಲರ್ಸ್ ಚಾರಿಟೇಬಲ್ ಸಂಸ್ಥೆಯ ನಿರ್ದೇಶಕ ಫಾ.ರಿಚರ್ಡ್ ಕುವೆಲ್ಲೋ , ಆಡಳಿತಾಧಿಕಾರಿ ಫಾ.ವಿನ್ಸೆಂಟ್ ವಿನೋದ್ ಸ್ಟಾಲಿನ್ , ಸಮುದಾಯ ವಿಭಾಗದ ಮುಖ್ಯಸ್ಥ ಡಾ.ಸ್ಟಾಲಿನ್, ಎನ್.ಎಸ್.ಎಸ್ ಸಂಯೋಜಕ ಡಾ.ಸೆಬಾಸ್ತಿಯನ್ ಉಪಸ್ಥಿತರಿದ್ದರು. ಪ್ರೊ.ರಂಜನ್ ಕಾರ್ಯಕ್ರಮ ನಿರೂಪಿಸಿದರು.
ಹೋಮಿಯೋಪತಿಯನ್ನು ಕಡೆಗಣಿಸುತ್ತಿದ್ದಾರೆ. ಅಡ್ಡಪರಿಣಾಮವಿಲ್ಲದೆ ಚಿಕಿತ್ಸೆ ಪಡೆಯುವ ವಿಧಾನ ಹೋಮಿಯೋಪತಿಯಾಗಿದೆ. ಇದನ್ನು ಜನರಿಗೆ ತಿಳಿಸುವ ಪ್ರಯತ್ನ ಜಾಥಾ ಮೂಲಕ ನಡೆಸಲಾಗಿದೆ.
ದೀಕ್ಷಾ
ವೈದ್ಯಕೀಯ ಕಾಲೇಜು
ದ್ವಿತೀಯ ವರ್ಷದ ವಿದ್ಯಾರ್ಥಿನಿ
ಶಸ್ತ್ರಚಿಕಿತ್ಸಾ ವಿಭಾಗ, ಮಕ್ಕಳ ವಿಭಾಗ, ವೈದ್ಯಕೀಯ ವಿಭಾಗ, ಪ್ರಮುಖವಾಗಿ ಸ್ತ್ರೀಯರ ರೋಗಕ್ಕೆ ಹೋಮಿಯೋಪತಿ ಅತ್ಯಂತ ಉಪಕಾರಕ. ಎಲ್ಲರೂ ಹೋಮಿಯೋಪತಿ ಔಷಧಿಯತ್ತ ಬರಬೇಕೆಂಬ ಉದ್ದೇಶದಿಂದ ನಡೆಸಿರುವ ಕಾರ್ಯಕ್ರಮ ಯಶಸ್ವಿಯಾಗಿದೆ. ಜನರಲ್ಲಿ ಜಾಗೃತಿ ಮೂಡಿಸಿರುವ ಕಾರ್ಯವೂ ಆಗಿದೆ.
ಜಗ್ಗೇಶ್
ವೈದ್ಯಕೀಯ ಕಾಲೇಜು
ದ್ವಿತೀಯ ವರ್ಷ
ವಿದ್ಯಾರ್ಥಿನಿ


