UN NETWORKS
ತೊಕ್ಕೊಟ್ಟು: ಲೋಕಸಭಾ ಚುನಾವಣಾ ಪ್ರಚಾರ ಕಾರ್ಯ ಪ್ರಯುಕ್ತ ಮೈ ಬಿ ಚೌಕಿದಾರ್ ಪಾದಯಾತ್ರೆ ಬಿ.ಜೆ.ಪಿ.ಮಂಗಳೂರು ಕ್ಷೇತ್ರದ ಕಾಪಿಕಾಡ್ ಬಳಿಯ ಚುನಾವಣಾ ಕಾರ್ಯಾಲಯ ದಿಂದ ತೊಕ್ಕೊಟು ಜಂಕ್ಷನ್ ವರೆಗೆ ಮತ್ತು ತೊಕ್ಕೊಟು ಒಳಪೇಟೆವರೆಗೆ ನಡೆಯಿತು.




































































ಸಾವಿರಾರು ಕಾರ್ಯಕರ್ತರು ಕೇಸರಿ ಪೇಟ ಧರಿಸಿ ಮೋದಿ ಪರ ಘೊಷಣೆ ಕೂಗುತ್ತಾ ನಡೆದರು. ಬಳಿಕ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸದರೆ ಜಿಲ್ಲೆಯಲ್ಲಿ ಬಿ.ಜೆ.ಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಮೂರು ಲಕ್ಷ ಕ್ಕೂ ಮತಗಳಿಂದ ಜಯಶಾಲಿಯಾಗುತ್ತಾರೆ ಎನ್.ಡಿ.ಎ.ಗೆ 350 ಕ್ಕಿಂತಲೂ ಸ್ಥಾನ ಸಿಗಲಿದೆ ಎಂದರು.
ವಿಧಾನ ಪರಿಷತ್ ನ ವಿರೋಧ ಪಕ್ಷದ ಮಾಜಿ ಮುಖ್ಯ ಸಚೇತಕ ಕ್ಯಾ ಗಣೇಶ್ ಕಾರ್ಣಿಕ್, ಕ್ಷೇತ್ರದ ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರ್, ಮಾಜಿ ಶಾಸಕರು ಕೆ.ಜಯರಾಮ ಶೆಟ್ಟಿ, ಕ್ಷೇತ್ರ ಚುನಾವಣಾ ಪ್ರಭಾರಿ ರಾದಕೃಷ್ಣ ರೈ ಬೂಡಿಯಾರ್, ರಾಜ್ಯ ಕಾರ್ಯಕಾರಿಣಿ ಸದಸ್ಯ ರಾದ ರವೀಂದ್ರ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷರಾದ ಚಂದ್ರಹಾಸ ಉಳ್ಳಾಲ್, ಕಾರ್ಯದರ್ಶಿ ಗಳಾದ ಸತೀಶ್ ಕುಂಪಲ, ನಮಿತಾ ಶ್ಯಾಮ್, ಚುನಾವಣಾ ಸಂಚಾಲಕರಾದ ಚಂದ್ರಶೇಖರ ಉಚ್ಚಿಲ್, ಕ್ಷೇತ್ರ ಪ್ರ.ಕಾರ್ಯದರ್ಶಿ ಗಳಾದ ಮೋಹನ್ ರಾಜ್ ಕೆ.ಆರ್, ಮನೋಜ್ ಆಚಾರ್ಯ, ದಕ್ಷಿಣ ವಲಯ ರೈಲ್ವೆ ಸಲಹ ಸಮಿತಿ ಸದಸ್ಯರಾದ ಚಂದ್ರಹಾಸ ಅಡ್ಯಂತಾಯ, ಜಿ.ಪಂ.ಸದಸ್ಯರಾದ ಧನಲಕ್ಷೀ ಗಟ್ಟಿ, ತಾಲೂಕು ಪಂ.ಸದಸ್ಯ ರವಿಶಂಕರ್, ಕ್ಷೇತ್ರ ಉಪಾಧ್ಯಕ್ಷರಾದ ಮೋಹನ್ ದಾಸ್ ಶೆಟ್ಟಿ, ಯಶವಂತ್ ಅಮೀನ್, ಹರಿಯಪ್ಪ ಸಾಲ್ಯಾನ್, ಕಾರ್ಯದರ್ಶಿ ಹೇಮಂತ್ ಶೆಟ್ಟಿ, ಜಿಲ್ಲಾ ಮಹಿಳಾ ಮೋರ್ಚದ ಪ್ರ.ಕಾರ್ಯದರ್ಶಿ ರಾಜೀವಿ ಕೆಂಪುಮಣ್ಣು, ಮಾಧ್ಯಮ ಸಂಚಾಲಕ ಜೀವನ್ ಕುಮಾರ್ ತೊಕ್ಕೊಟು, ಯುವ ಮೋರ್ಚದ ಅಧ್ಯಕ್ಷ ಸುಜಿತ್ ಮಾಡೂರು, ಹಿರಿಯರಾದ ಬಾಬು ಬಂಗೇರ, ಸಂಜೀವ ಶೆಟ್ಟಿ, ಲಲಿತಾ ಸುಂದರ್, ತಲಪಾಡಿ ಪಂ.ಅಧ್ಯಕ್ಷರಾದ ಸುರೇಶ್ ಆಳ್ವ, ಸೋಮೇಶ್ವರ ಪಂ.ಅಧ್ಯಕ್ಷರಾದ ರಾಜೇಶ್ ಉಚ್ಚಿಲ್, ಕೋಟೆಕಾರ್ ಪಟ್ಟಣ ಪಂ.ಉಪಾಧ್ಯಕ್ಷೆ ಭಾರತಿ ಗಟ್ಟಿ, ಪ್ರಮುಖರಾದ ಸುರೇಂದ್ರ ಶೆಟ್ಟಿ, ಚಂದ್ರಹಾಸ ಪಂಡಿತ್ ಹೌಸ್, ಅಜಂತ್ ಪಿಲಾರ್, ನಗರ ಸಭಾ ಸದಸ್ಯರು, ಪಂ.ಸದಸ್ಯರು ಪಕ್ಷ ಪ್ರಮುಖರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಯೂತ್ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಕಾರ್ತಿಕ್ ಪೂಜಾರಿ ಬಿ.ಜೆ.ಪಿ.ಸೇರ್ಪಡೆಯಾದರು. ಪಕ್ಷದ ಅಧ್ಯಕ್ಷರು ಧ್ವಜ ನೀಡಿ ಸ್ವಾಗತಿಸಿದರು.


