UN NETWORKS ದೇರಳಕಟ್ಟೆ : ದ.ಕ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ದಕ್ಷಿಣ ವಲಯ ಮತ್ತು ದೇರಳಕಟ್ಟೆ ನೇತಾಜಿ ಸುಭಾಷ್ ಚಂದ್ರಬೋಸ್ ಸರಕಾರಿ ಪ್ರೌಢಶಾಲೆಯ ಸಂಯುಕ್ತ ಅಶ್ರಯದಲ್ಲಿ ಉಳ್ಳಾಲ ಹೋಬಳಿ ಮಟ್ಟದ ಪ್ರೌಢಶಾಲೆಗಳ ಕಬಡ್ಡಿ ಪಂದ್ಯಾಟ ದೇರಳಕಟ್ಟೆಯ ನೇತಾಜಿ ಸುಭಾಷ್ ಚಂದ್ರಬೋಸ್ ಶಾಲಾ ವಠಾರದಲ್ಲಿ ನಡೆಯಿತು. ಬೆಳ್ಮ ಗ್ರಾ.ಪಂ ಉಪಾಧ್ಯಕ್ಷ ಬಿ.ಎಂ ಸತ್ತಾರ್ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಪಠ್ಯದ ಜೊತೆಜೊತೆ ಪಠ್ಯೆತರ ಚಟುವಟಿಯಲ್ಲಿ ಭಾಗವಹಿಸಬೇಕು. ಮಸ್ತಕ ಬೆಳೆಯುದರ ಜೊತೆ ದೈಹಿಕವಾಗಿ ಬೆಳವಣೆಗೆ ಹೊಂದಬೇಕಾಗಿದೆ. ಪಂದ್ಯಾಟದಲ್ಲಿ ಸೊಲು ಗೆಲುವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯವಾಗಿದೆ ಎಂದು ಹೇಳಿದರು.ಬೆಳ್ಮ ಗ್ರಾ.ಪಂ ಆಧ್ಯಕ್ಷೆ ವಿಜಯ ಕೃಷ್ಣ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು. ನಿವೃತ್ತ ತಾಹಸೀಲ್ದಾರ್ ನಾರಾಯಣ ಶೆಟ್ಟಿ, ಬೆಳ್ಮ ಗ್ರಾ.ಪಂ ಸದಸ್ಯ ಕಬೀರ್ ಡಿ, ಪ್ರೌಢ ಶಾಲೆ ಅಭಿವೃದ್ಧಿ ಸಮಿತಿ ಆಧ್ಯಕ್ಷ ಇಸ್ಮಾಯಿಲ್ ಪಿ.ಎಚ್, ಪ್ರಾಥಮಿಕ ಶಾಲಾ ಅಭಿವೃದ್ದಿ ಸಮಿತಿ ಅಧ್ಯಕ್ಷ…
Author: UllalaVani
UN NETWORKS ಬೋಳಿಯಾರು : ಬೋಳಿಯಾರು ಉದ್ಯಮಿ ಪ್ರಭಾಕರ ಆಚಾರ್ಯ ಅವರ ಮೃತದೇಹ ಸುರತ್ಕಲ್ ಠಾಣಾ ವ್ಯಾಪ್ತಿಯ ಮುಕ್ಕ ಮಿತ್ರಪಟ್ನ ಸಮುದ್ರ ತೀರದಲ್ಲಿ ಇಂದು ಪತ್ತೆಯಾಗಿದೆ. ಕಳೆದ ಎರಡು ದಿನಗಳಿಂದ ಪ್ರಭಾಕರ್ ಆಚಾರ್ಯ ಅವರು ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದರು. ಮುಡಿಪು ಸಮೀಪ ಅವರ ಸ್ಕೂಟರ್ ಅನಾಥವಾಗಿ ಪತ್ತೆಯಾಗಿತ್ತು. ಈ ಕುರಿತು ಕೊಣಾಜೆ ಪೊಲೀಸ್ ಠಾಣೆ ಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು. ಇದೀಗ ಮಿತ್ರಪಟ್ನ ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ಹಲವು ವರ್ಷಗಳಿಂದ ಪ್ರಭಾಕರ ಆಚಾರ್ಯ ಅವರು ಬೋಳಿಯಾರ್ ಜಂಕ್ಷನ್ನಿನಲ್ಲಿ ಜ್ಯುವೆಲ್ಲರಿ ಅಂಗಡಿ ಸಹಿತ ಫೈನಾನ್ಸ್ ನಡೆಸುತ್ತಾ ಬಂದಿದ್ದರು. ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ ನಡೆಸಿರುವ ಸಾಧ್ಯತೆಯಿದೆ ಅನ್ನುವ ಸಂಶಯ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.ಮೃತದೇಹದ ಪ್ಯಾಂಟಿನಲ್ಲಿ ಪ್ರಭಾಕರ ಆಚಾರ್ಯ ಅವರ ಆಧಾರ್ ಕಾರ್ಡ್ ಸಹಿತ ದಾಖಲೆಗಳು ಪತ್ತೆಯಾಗಿವೆ.ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
UN NETWORKS ಉಳ್ಳಾಲ : ಮನೆಯಲ್ಲಿ ಪರ್ಸ್ ಬಿಟ್ಟು ಬಂದಿರುವುದಾಗಿ ಬುಲೆಟ್ ಬೈಕ್ ನಲ್ಲಿ ತೆರಳಿದ್ದ ಯುವಕ ಟೋಯಿಂಗ್ ವಾಹನಕ್ಕೆ ಢಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ನೇತ್ರಾವತಿ ಸೇತುವೆಯಲ್ಲಿ ನಿನ್ನೆ ಮಧ್ಯಾಹ್ನ ವೇಳೆ ಸಂಭವಿಸಿದೆ. ಪಂಡಿತ್ ಹೌಸ್ ನಿವಾಸಿ ಭಾಸ್ಕರ್ ಮತ್ತು ಶಾರದಾ ದಂಪತಿ ದ್ವಿತೀಯ ಪುತ್ರ ಅಭೀಷ್ ಕೆ.ನಾಯರ್ (32) ಸಾವನ್ನಪ್ಪಿದವರು. ದುಬೈ ಖಾಸಗಿ ಕಂಪೆನಿಯಲ್ಲಿ ಪಿಆರ್ ಓ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಭೀಷ್ ಎಂಟು ದಿನಗಳ ಹಿಂದಷ್ಟೇ ಸಂಬಂಧಿಕರ ಮದುವೆಗೆಂದು ಊರಿಗೆ ಬಂದಿದ್ದರು. ತಿರುವನಂತಪುರಂನಲ್ಲಿ ನಡೆದಿದ್ದ ವಿವಾಹ ಸಮಾರಂಭದಲ್ಲಿ ಕುಟುಂಬ ಸಮೇತರಾಗಿ ಭಾಗಿಯಾಗಿ ಸೋಮವಾರ ವಾಪಸ್ಸಾಗಿದ್ದರು. ನಿನ್ನೆ ಬೆಳಿಗ್ಗೆ ಸಹೋದರ ಬ್ರಿಜೇಶ್ ಅವರಿಗೆ ಬೆಂದೂರ್ ವೆಲ್ ನಲ್ಲಿರುವ ಲಿಫ್ಟ್ ಕಂಪೆನಿಗೆ ತೆರಳಿದ್ದ ಅಭೀಷ್ , ಮನೆಯಲ್ಲಿ ಪರ್ಸ್ ಬಿಟ್ಟು ಬಂದಿರುವುದಾಗಿ ವಾಪಸ್ಸಾಗಿದ್ದರು. ಈ ವೇಳೆ ಸಹೋದರ ಬ್ರಿಜೇಶ್ ಕಾರಿನಲ್ಲಿ ತೆರಳುವಂತೆ ಸೂಚಿಸಿದರೂ, ತಾನು ಬುಲೆಟ್ ಬೈಕಿನಲ್ಲೇ ಹೋಗುವುದಾಗಿ ಹೇಳಿ ವಾಪಸ್ಸಾಗಿದ್ದರು. ದಾರಿಮಧ್ಯೆ ನೇತ್ರಾವತಿ ಸೇತುವೆಯಲ್ಲಿ ಟೋಯಿಂಗ್ ವಾಹನಕ್ಕೆ ತಲೆ…
UN NETWORKS ಉಳ್ಳಾಲ : ಸೋಮೇಶ್ವರ ಬಳಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆಯೊಂದಕ್ಕೆ ದಾಳಿ ನಡೆಸಿರುವ ಪೊಲೀಸರು ಇಬ್ಬರು ಮಹಿಳಾ ಪಿಂಪ್‍ಗಳನ್ನು ಬಂಧಿಸಿದ್ದು ಯುವತಿಯರನ್ನು ಪೂರೈಸುತ್ತಿದ್ದ ಒಬ್ಬಾಕೆ ತಲೆಮರೆಸಿಕೊಂಡಿದ್ದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತ ಪಿಂಪ್‍ಗಳನ್ನು ಮಂಜೇಶ್ವರ ನಿವಾಸಿ ಅರುಂಧತಿ, ಜಪ್ಪಿನಮೊಗರು ನಿವಾಸಿ ಸರಸ್ವತಿ ಬಂಧಿತ ಪಿಂಪ್‍ಗಳಾಗಿದ್ದು,ಬೆಂಗಳೂರಿನಿಂದ ಯುವತಿಯರನ್ನು ಪೂರೈಕೆ ಮಾಡುವ ರಂಜಿತಾ ತಲೆಮರೆಸಿಕೊಂಡಿದ್ದು, ವೇಶ್ಯಾವಾಟಿಕೆಯಲ್ಲಿ ಸಿಲುಕಿದ್ದ ಯುವತಿಯನ್ನು ರಕ್ಷಿಸಲಾಗಿದೆ. ಇದರೊಂದಿಗೆ ಮೂವರು ಗ್ರಾಹಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಸೋಮೇಶ್ವರ ಬಳಿಯ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎನ್ನುವ ಖಚಿತ ಮಾಹಿತಿಯಂತೆ ಸಿಸಿಬಿ ಪೊಲೀಸರು ಉಳ್ಳಾಲ ಪೊಲೀಸರೊಂದಿಗೆ ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಇಬ್ಬರು ಮಹಿಳಾ ಪಿಂಪ್‍ಗಳು ಸೇರಿದಂತೆ ಮೂವರು ಗ್ರಾಹಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಪಿಂಪ್‍ಗಳ ಮೇಲೆ ಪ್ರಕರಣ ದಾಖಲಾಗಿಲ್ಲ. ಮನೆ ಸ್ವಚ್ಛಗೊಳಿಸಲು ಕೀ ಪಡೆದಿದ್ದರು : ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆ ಮಾಲಿಕ ನಿಧನರಾಗಿ ಹಲವು ವರ್ಷಗಳು ಕಳೆದಿದ್ದು ಆವರ ಸ್ನೇಹಿತ ಮಾಧವ ಎಂಬವರು ಮನೆಯನ್ನು ನೋಡಿಕೊಳ್ಳುತ್ತಿದ್ದರು. ಈ ಮನೆಯಲ್ಲಿ…
UN NETWORKS ಉಳ್ಳಾಲ : ಕರ್ನಾಟಕ ಸರಕಾರ, ದ.ಕ. ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಮಂಗಳೂರು ದಕ್ಷಿಣ ವಲಯ ಮದನಿ ಪ್ರೌಢಶಾಲೆ, ಅಳೇಕಲ ಉಳ್ಳಾಲ ಇವರ ಸಂಯುಕ್ತ ಆಶ್ರಯದಲ್ಲಿ ಉಳ್ಳಾಲ ಹೋಬಳಿ ಮಟ್ಟದ ಪ್ರೌಢ ಶಾಲಾ ವಿಭಾಗದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ 2019 ಕಾರ್ಯಕ್ರಮ ಅಳೇಕಲ ಮದನಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. ಈ ಸಂದರ್ಭ ಶಾಲೆಯ ಅಧ್ಯಾಪಕರು, ಊರಿನ ಮುಖಂಡರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
UN NETWORKS ಉಳ್ಳಾಲ : ಡಯಾಲಿಸಿಸ್ ಪ್ರಕ್ರಿಯೆಗೆ ಲಕ್ಷಾಂತರ ರೂ. ವೆಚ್ಚ ಆಗುವುದಲ್ಲದೆ ರೋಗಿಗಳ ಪಾಲಿಗೆ ಪ್ರಕ್ರಿಯೆ ಹೊರೆಯಾಗುತ್ತಿದೆ. ಇದನ್ನು ಮನಗಂಡು ಯೆನೆಪೋಯ ಆಸ್ಪತ್ರೆ ದೇರಳಕಟ್ಟೆ ಯಲ್ಲಿ ಮೂತ್ರಪಿಂಡ ಕಸಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಕಡಿಮೆ ವೆಚ್ಚದಲ್ಲಿ ಈಗಾಗಲೇ ಗ್ರಾಮೀಣ ಭಾಗದ ನಾಲ್ವರ ಮೂತ್ರಪಿಂಡ ಕಸಿ ನಡೆಸಿ ಯಶಸ್ವಿಯಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಪದ್ಮನಾಭ ಭಟ್ ಹೇಳಿದರು. ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಯಲ್ಲಿ ಸೋಮವಾರ ಯಶಸ್ವಿ ಮೂತ್ರಪಿಂಡ ಕಸಿ ನಡೆಸಿದ ನಾಲ್ವರು ರೋಗಿಗಳಾದ ಇರ್ಫಾನ್.ಯಸ್ ಶಿರಸಿ, ಸೌಮ್ಯಲತಾ ಬೆಳ್ತಂಗಡಿ, ನೌಸೀರ್ ಪಾಷಾ, ಬವರ್ ಲಾಲ್ ಜೈನ್ ಜತೆಗೆ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಯೆನೆಪೋಯದಲ್ಲಿ ಕಸಿ ಸೇವೆ ಅತ್ಯಾಧುನಿಕವಾಗಿ ಹಾಗೂ ಕೈಗೆಟಕುವ ದರದಲ್ಲಿ ಮಾಡಲಾಗುತ್ತಿದೆ. ಸಕ್ಕರೆಕಾಯಿಲೆ, ರಕ್ತದೊತ್ತಡ ದಂತಹ ಕಾಯಿಲೆಗಳಿಂದ ಬಳಲುವ ಅನೇಕ ಮಂದಿ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರಿಗೆ ಡಯಾಲಿಸಿಸ್ ಪ್ರಕ್ರಿಯೆಯಿಂದ ಆರ್ಥಿಕ ಹೊರೆಯಾಗುವುದರ ಜತೆಗೆ ಆರೋಗ್ಯದಲ್ಲಿಯೂ ಸುಧಾರಣೆ ಕಂಡುಬರುತ್ತಿಲ್ಲ. ಇದನ್ನು ಮನಗಂಡು ಯೆನೆಪೋಯ ಸಂಸ್ಥೆಯ ಅಧ್ಯಕ್ಷರ ನಿರ್ದೇಶನುಸಾರ ಮೂತ್ರಪಿಂಡ ಕಸಿ…
UN NETWORKS ಉಳ್ಳಾಲ : ನೆರೆ ಸಂತ್ರಸ್ತರನ್ನು ಗುರುತಿಸಿ ಅವರಿಗೆ ಯಾವುದೇತಾರತ್ಮಯವಿಲ್ಲದೇ ಪರಿಹಾರ ಕೊಡುವ ಕೆಲಸ ಸರಕಾರದಿಂದ ಆಗಬೇಕಾಗಿದೆ. ಪರಿಹಾರ ನೀಡುವುದರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಮಳೆ ನೀರು ಸರಾಗವಾಗಿ ಹರಿದು ಹೋಗಲು ಜಾಗವಿಲ್ಲದೇ ಸಮಸ್ಯೆ ಎದುರಾಗಿದ್ದು, ಇದಕ್ಕೆ ಚರಂಡಿ ಒತ್ತುವರಿ ಖಾಲಿ ಮಾಡಿಸಿ ವ್ಯವಸ್ಥೆ ಮಾಡಬೇಕು. ಕಳಪೆ ಕಾಮಗಾರಿಯಿಂದ ಹಾಳಾದ ರಸ್ತೆ ಚರಂಡಿ,ಕಿರು ಸೇತುವೆಗಳನ್ನು ಕೂಡಲೇ ದುರಸ್ತಿ ಮಾಡಬೇಕು ಎಂದು ಎಸ್‍ಡಿಪಿಐ ರಾಜ್ಯ ಕಾರ್ಯದರ್ಶಿ ಅಕ್ರಂ ಹಸನ್ ಒತ್ತಾಯಿಸಿದರು.ಅವರು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಳ್ಳಾಲ ನಗರ ಸಮಿತಿ ವತಿಯಿಂದ ಉಳ್ಳಾಲ ನಗರ ಸಭೆಯ ದರಾಡಳಿತ ಮತ್ತು ನೆರೆ ಸಂತ್ರಸ್ತರ ಪರಿಹಾರದಲ್ಲಿ ತಾರತಮ್ಯ ಎಸಗಿರುವುದನ್ನು ವಿರೋಧಿಸಿ ಉಳ್ಳಾಲ ನಗರ ಸಭಾ ಕಚೇರಿ ಮುಂಭಾಗದಲ್ಲಿ ಸೋಮವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ನೈಜ ನೆರೆ ಸಂತ್ರಸ್ತರಿಗೆ ಕೂಡಲೇ ಪರಿಹಾರವನ್ನು ಸರಕಾರ ರಾಜಕಾರಣಿ,ಬ್ರೋಕರ್ ಗಳಿಗೆ ಅವಕಾಶ ನೀಡದೇ ಕೌನ್ಸಿಲರ್ ಗಳು ಶಿಫಾರಸ್ಸು ಮಾಡಿದ ನೈಜ ಫಲಾನುಭವಿಗಳಿಗೆ ಪರಿಹಾರ ವಿತರಣೆ ಮಾಡಬೇಕು.ಜನವಸತಿ ಪ್ರದೇಶದಲ್ಲಿ…
UN NETWORKS ಬೋಳಿಯಾರ್ : ಚಿನ್ನದ ಅಂಗಡಿ ಹಾಗೂ ಫೈನಾನ್ಸ್ ಮಾಲಕರಾಗಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾದ ಬಗ್ಗೆ ಕೊಣಾಜೆ ಠಾಣೆಯಲ್ಲಿ ದೂರು ದಾಖಲಾಗಿದೆ. ಬೋಳಿಯಾರ್ ನ ಪ್ರಭಾ ಜ್ಯುವೆಲ್ಲರ್ಸ್ ಹಾಗೂ ಪ್ರಭಾ ಫೈನಾನ್ಸ್‍ನ ಮಾಲಕರಾದ ಪ್ರಭಾಕರ ಆಚಾರ್ಯ(57) ಎಂಬವರೇ ನಾಪತ್ತೆಯಾದ ವ್ಯಕ್ತಿಯಾಗಿದ್ದಾರೆ. ಕಳೆದ ಹಲವಾರು ವರ್ಷದಿಂದ ಇದೇ ವ್ಯವಹಾರವನ್ನು ನಡೆಸಿಕೊಂಡು ಬರುತ್ತಿದ್ದ ಪ್ರಭಾಕರ ಆಚಾರ್ಯ ಅವರು ಬೊಳಿಯಾರ್ ನಲ್ಲಿ ವಾಸವಾಗಿದ್ದರು. ಭಾನುವಾರದಂದು ಮನೆಯಿಂದ ಔಷಧಿಗಾಗಿ ಹೋಗಿ ಬರುತ್ತೇನೆ ಎಂದು ಪತ್ನಿ ಪೂರ್ಣಿಮಾರಲ್ಲಿ ತಿಳಿಸಿ ಹೊರಟಿದ್ದರು. ಬಳಿಕ ರಾತ್ರಿಯಾದರೂ ಮನೆಗೆ ವಾಪಸ್ಸಾಗದ ಕಾರಣ ಮನೆ ಮಂದಿ ಆತಂಕಗೊಂಡು ಎಲ್ಲಾ ಕಡೆಯೂ ಹುಡುಕಾಡಿದ್ದಾರೆ. ಆದರೆ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದಲ್ಲದೆ ಎಲ್ಲಿಯೂ ಪತ್ತೆಯಾಗದ ಹಿನ್ನೆಲೆಯಲ್ಲಿ ಪ್ರಭಾಕರ ಆಚಾರ್ಯ ಅವರ ಪುತ್ರ ಕೊಣಾಜೆ ಠಾಣೆಗೆ ದೂರು ನೀಡಿದ್ದಾರೆ. ಇವರು ಚಲಾಯಿಸಿಕೊಂಡು ಬಂದ ಕಾರು ಮುಡಿಪು ಬಳಿ ಪತ್ತೆಯಾಗಿದೆ. ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
UN NETWORKS ತೊಕ್ಕೊಟ್ಟು : ತೊಕ್ಕೊಟ್ಟು ಮೊಸರುಕುಡಿಕೆ ಉತ್ಸವ ಎಂದರೆ ಪ್ರದೇಶದ ಉತ್ಸವವಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಜನ ಭಾಗವಹಿಸುವ ಮೂಲಕ ಉತ್ಸವಕ್ಕೆ ಹೆಚ್ಚಿನ ಹುರುಪು ದೊರೆತಿದೆ ಎಂದು ದೇರಳಕಟ್ಟೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ ಅಡ್ಯಂತಾಯ ಅಭಿಪ್ರಾಯಪಟ್ಟರು. ತೊಕ್ಕೊಟ್ಟು ಭಟ್ನಗರದ ಶ್ರೀ ಜೈ ವೀರ ಮಾರುತಿ ವ್ಯಾಯಾಮ ಶಾಲೆ ಟ್ರಸ್ಟ್ ಇದರ ವತಿಯಿಂದ ನಡೆಯುವ ಶ್ರೀ ಕೃಷ್ಣ ಜನ್ಮಾಷ್ಟಮಿ 59ನೇ ವರ್ಷದ ತೊಕ್ಕೊಟ್ಟು ಮೊಸರು ಕುಡಿಕೆ ಉತ್ಸವಕ್ಕೆ ಚಾಲನೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಂಬಯಿ ಸಫಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಪಿ. ಸಪಲ್ಯ, ಸೋಮೇಶ್ವರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಬಂಟರ ಸಂಘ ಉಳ್ಳಾಲ ವಲಯ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಉದ್ಯಮಿ ಚಂದ್ರಹಾಸ್ ಪಂಡಿತ್ ಹೌಸ್, ಶಬರಿಮಲೆ ಸಂರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ್ ಪೊದುವಾಲ್,ಪೊಲದವರ ಯಾನೆ ಗಟ್ಟಿಯವರ ಸಮಾಜ ಸೇವಾ ಸಂಘದ ಅಧ್ಯಕ್ಷ ಪವಿತ್ರ ಕುಮಾರ್ ಗಟ್ಟಿ,…
UN NETWORKS ತಲಪಾಡಿ : ತಲಪಾಡಿ ಗ್ರಾಮದ ದೇವಿನಗರ ನಿವಾಸಿಯಾಗಿರುವ ಗಿರಿದಾಸ್ ಪೂಜಾರಿಯವರು ಕಳೆದ ಒಂದು ವರ್ಷದಿಂದ ಅನಾರೋಗ್ಯ ಪೀಡಿತರಾಗಿದ್ದು ಅವರ ವೈದ್ಯಕೀಯ ವೆಚ್ಚಕ್ಕೆ ತೊಕ್ಕೊಟ್ಟಿನ ಬ್ರಹ್ಮಶ್ರೀ ಬಿಲ್ಲವ ವೇದಿಕೆ ಕೇಂದ್ರ ಸಮಿತಿ ವತಿಯಿಂದ ಅಧ್ಯಕ್ಷ ಕೆ.ಟಿ.ಸುವರ್ಣರ ನೇತೃತ್ವದಲ್ಲಿ ಅವರ ಮನೆಗೆ ಭೇಟಿ ನೀಡಿ ಧನಸಹಾಯ ಮತ್ತು ಅಕ್ಕಿ ನೀಡಲಾಯಿತು. ಕಾರ್ಯಾಧ್ಯಕ್ಷ ಸತೀಶ್ ಕರ್ಕೇರ, ಪ್ರಧಾನ ಕಾರ್ಯದರ್ಶಿ ಜೀವನ್ ಕುಮಾರ್ ತೊಕ್ಕೊಟ್ಟು, ಉಪಾಧ್ಯಕ್ಷ ಹರೀಶ್ ಮುಂಡೋಳಿ, ಜತೆ ಕಾರ್ಯದರ್ಶಿ ಕೃಷ್ಣಪ್ಪ ಕಿನ್ಯ, ಪಾರ್ಥಸಾರಥಿ ಹಾಗೂ ಸುಕೃತ್ ಉಪಸ್ಥಿತರಿದ್ದರು.

