UN NETWORKS
ಉಳ್ಳಾಲ: ಎಸ್ಸೆಸ್ಸೆಫ್ ಮುಡಿಪು ಡಿವಿಶನ್ ವತಿಯಿಂದ ಒರ್ಬಿಟ್ ಕರಿಯರ್ ಗೈಡೆನ್ಸ್ ಕಾರ್ಯಾಗಾರವು ವಲಯಾಧ್ಯಕ್ಷ ತೌಸೀಫ್ ಸಅದಿ ಉಸ್ತಾದರ ಅಧ್ಯಕ್ಷತೆಯಲ್ಲಿ ಅಲ್ ಮದೀನ ಕ್ಯಾಂಪಸ್ ಮಂಜನಾಡಿಯಲ್ಲಿ ನಡೆಯಿತು.ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಕಾರ್ಯಕ್ರಮ ಉದ್ಘಾಟಿಸಿದರು.

ಗೈಡನ್ಸ್ ಕರಿಯರ್ ತರಗತಿ ಮುಡಿಪು ಡಿವಿಶನ್ ಇವೆಂಟ್ಸ್ ಮತ್ತು ಟ್ರೆ„ ನಿಂಗ್ ಕನ್ವೀನರ್ ಮನ್ಸೂರ್ ಹಿಮಮಿ ಮೊಂಟೆಪದವು ಮತ್ತು ನಾಸಿರ್ ಬಜಪೆ ಕೆರಿಯರ್ ಗೈಡನ್ಸ್ ಬಗ್ಗೆ ತರಗತಿ ನಡೆಸಿದರು.

ಅಲ್-ಮದೀನಾ ಮುದರ್ರಿಸ್ ಅಬ್ದುಲ್ ಸಲಾಂ ಅಹ್ಞನಿ ಹಾಗೂ ಅಬ್ದುರ್ರಝಾಕ್ ಮಾಸ್ಟರ್ ನಾವೂರು ಶುಭ ಹಾರೈಸಿದರು.ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೋಳಿಕೆ ಸ್ವಾಗತಿಸಿದರು. ಶರೀಫ್ ಪಾನೇಲ ವಂದಿಸಿದರು.


