UN NETWORKS ಸರ್ಕಾರಿ ಸವಲತ್ತುಗಳನ್ನು ಪಡೆಯಲು ಕಡ್ಡಾಯವಾಗಿರುವ ಆಧಾರ್ ಕಾರ್ಡನ್ನು ಇನ್ನು ಮುಂದೆ ಮದ್ಯ ಖರೀದಿಗೂ ಕಡ್ಡಾಯಗೊಳಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.ಹದಿನೆಂಟು ವರುಷದ ಒಳಗಿನ ಮಕ್ಕಳು ಕುಡಿತದ ಚಟದಿಂದ ಮಾನಸಿಕ ರೋಗಕ್ಕೆ ಬಲಿಯಾಗುತ್ತಿದ್ದು ಮತ್ತು ಮದ್ಯದ ಬಾಟಲಿ ಮತ್ತು ಟೆಟ್ರಾ ಪ್ಯಾಕ್ ಗಳಿಂದ ಉಂಟಾಗುತ್ತಿರುವ ಮಾಲೀನ ತಡೆಗಟ್ಟುವ ಉದ್ದೇಶದಿಂದ ಇಂತಹ ಹಕ್ಕೊತ್ತಾಯ ಬಲವಾಗಿದೆ. ಟೆಟ್ರಾ ಪ್ಯಾಕ್ ಮತ್ತು ಬಾಟಲಿಗಳಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯ ತಡೆಯಲು ಮದ್ಯ ಖರೀದಿಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸುವ ವಿಚಾರದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಗ್ರ ವರದಿ ನೀಡುವಂತೆ ರಾಜ್ಯ ಸರ್ಕಾರ ಅಬಕಾರಿ ಇಲಾಖೆಗೆ ಮಹತ್ವದ ಸೂಚನೆ ನೀಡಿದೆ.ಸರ್ಕಾರದ ನಿರ್ದೇಶನ ಹಿನ್ನಲೆಯಲ್ಲಿ ಅಬಕಾರಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರು ಇಲಾಖಾ ಆಯುಕ್ತರಿಗೆ ಪತ್ರ ಬರೆದು ಜಿಲ್ಲಾ ಕೇಂದ್ರಗಳಿಂದ ಅಭಿಪ್ರಾಯ ಸಂಗ್ರಹಿಸಿ ಸರ್ಕಾರಕ್ಕೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ. ಮಂಗಳೂರಿನ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಮನವಿಯಲ್ಲಿ ಟೆಟ್ರಾಪ್ಯಾಕ್ ಹಾಗೂ ಬಾಟಲಿಗಳಿಂದ ಆಗುತ್ತಿರುವ ಪರಿಸರ ಮಾಲಿನ್ಯ ತಡೆಯಲು…
Author: UllalaVani
UN NETWORKS ಉಳ್ಳಾಲ : ಕುಡಿದ ಮತ್ತಿನಲ್ಲಿ ನೇತ್ರಾವತಿ ಸೇತುವೆಯ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ರಕ್ಷಿಸಿದ ಘಟನೆ ಶುಕ್ರವಾರ ಸಂಭವಿಸಿದೆ.ಇಲ್ಲಿನ ನಾಗುರಿ ನಿವಾಸಿ ಪದ್ಮನಾಭ (35) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಕುಡಿತದ ಚಟ ಹೊಂದಿದ್ದ ಕಾರಣ ಕುಡಿದ ಮತ್ತಿನಲ್ಲಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದೆಂದು ನೇತ್ರಾವತಿ ಸೇತುವೆಯ ಮೇಲೆ ನಿಂತು ನದಿಗೆ ಹಾರಿದ್ದಾನೆ, ಇದನ್ನು ಕಂಡ ಸ್ಥಳೀಯರು ಆತನನನ್ನು ರಕ್ಷಿಸಿದ್ದು ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.ಕಂಕನಾಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
UN NETWORKS ಕೋಟೆಕಾರ್ : ನಾವು ಜೀವನ ಸಾಗಿಸಲು ಇರುವ ದಾರಿಯನ್ನು ಸರ್ಕಾರ ತೋರಿಸಿಕೊಟ್ಟಿದ್ದು ಅವುಗಳಲ್ಲಿ ಕುಕ್ಕುಟ ವಿತರಣೆಯೂ ಒಂದಾಗಿದೆ, ಏಳು ವಾರಗಳ ಬಳಿಕ ಕೋಳಿಗಳ ಫೊಟೋ ಕಳಿಸಿದರೆ ಉತ್ತಮ ಕೋಳಿಗಳಿಗೆ ಬಹುಮಾನ ನೀಡಲು ಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ ಅಭಿಪ್ರಾಯಪಟ್ಟರು. ಜಿಲ್ಲಾ ಪಂಚಾಯಿತಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಶುಕ್ರವಾರ ಸೋಮೇಶ್ವರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಫಲಾನುಭವಿಗಳಿಗೆ ಕೋಟೆಕಾರ್ ಪಶು ಆಸ್ಪತ್ರೆಯಲ್ಲಿ ನಡೆದ ಕುಕ್ಕುಟ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಡಿಮೆ ಖರ್ಚಿನಲ್ಲಿ ಕೋಳಿಗಳನ್ನು ಸಾಕಲು ಸಾಧ್ಯವಿದ್ದು, ಪರಿಸರ ಸ್ವಚ್ಛಗೊಳಿಸುವ ಮೂಲಕ ಸ್ವಚ್ಛ ಭಾರತ ಕನಸನ್ನೂ ಸಾಕಾರಗೊಳಿಸುತ್ತದೆ. ಗಿರಿರಾಜ ಕೋಳಿಗಳ ಸಾಕಾಣೆಯಿಂದ ಮೊಟ್ಟೆ ಮತ್ತು ಮಾಂಸದಿಂದಲೂ ಉತ್ತಮ ಆದಾಯ ಪಡೆಯಬಹುದು. ಸರ್ಕಾರ ಕೋಳಿ ಮಾತ್ರವಲ್ಲದೆ ಆಡು, ದನಗಳನ್ನೂ ನೀಡಿ ನೆಮ್ಮದಿಯ ಜೀವನಕ್ಕೆ ಅವಕಾಶ ಮಾಡಲಾಗುತ್ತಿದೆ. ಸರ್ಕಾರ ನೀಡುವ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡಾಗ ಸ್ವಾವಲಂಭಿ ಜೀವನ ನಡೆಸಲು ಸಾಧ್ಯ ಎಂದು ಹೇಳಿದರು. ಮುಖ್ಯ ಪಶು…
UN NETWORKS ಸೋಮೇಶ್ವರ : ಶ್ರಾವಣ ಅಮವಾಸ್ಯೆ ಪ್ರಯುಕ್ತ ಸೋಮೇಶ್ವರದ ಶ್ರೀ ಸೋಮನಾಥ ದೇವಸ್ಥಾನದಲ್ಲಿ ಸುಮಾರು ಐದು ಸಾವಿರ ಮಂದಿ ಶುಕ್ರವಾರ ಸಮುದ್ರಸ್ನಾನಗೈಯುವ ಮೂಲಕ ಕೃತಾರ್ಥರಾದರು.ಬೆಳಗ್ಗಿನಿಂದಲೇ ಜಡಿಮಳೆ ಇದ್ದರೂ ಶ್ರೀ ಕ್ಷೇತ್ರಕ್ಕೆ ಭಕ್ತರು ಬೆಳಗ್ಗೆ ನಾಲ್ಕು ಗಂಟೆಯಿಂದ ಮಧ್ಯಾಹ್ನ ಒಂದೂವರೆ ಗಂಟೆ ತನಕ ಆಗಮಿಸಿ, ಮೊದಲು ಗದಾತೀರ್ಥದಲ್ಲಿ ಸ್ನಾನ ಮಾಡಿ ಬಳಿಕ ಸಮುದ್ರ ಸ್ನಾನ ಮಾಡಿ ಅಲ್ಲಿಂದ ಶ್ರೀ ಸೋಮನಾಥನ ದರ್ಶನ ಪಡೆದು ಧನ್ಯರಾದರು. ಶುಕ್ರವಾರ ಸಮುದ್ರದಲ್ಲಿ ಬೃಹತ್ ಅಲೆಗಳ ಹೊಡೆತ ಇದ್ದರೂ ತೀರ್ಥಸ್ನಾನಗೈಯಲು ಬರುವ ಭಕ್ತರ ರಕ್ಷಣೆಗಾಗಿ ಉಳ್ಳಾಲ ಮೊಗವೀರಪಟ್ನದ ಜೀವರಕ್ಷಕ ಈಜುಗಾರರ ಸಂಘದ ಸದಸ್ಯರು ಬೆಳಗ್ಗೆ ನಾಲ್ಕು ಗಂಟೆಯಿಂದ ಮಧ್ಯಾಹ್ನ ಎರಡು ಗಂಟೆ ತನಕ ಸಹಕಾರ ನೀಡಿದರು. ಭಕ್ತರು ಸಮುದ್ರದ ಉಪ್ಪುನೀರಿನ ತೀರ್ಥಸ್ನಾನಗೈದು ಪಾಪ ವಿಮೋಚನೆ ಮತ್ತು ಚರ್ಮರೋಗ, ಸಿಡುಬು, ಅರ್ಬುಧ, ಅಸ್ತಮಾ ಮೊದಲಾದ ರೋಗ ಬಾಧೆಗಳ ನಿವಾರಣೆಗೆ ಶ್ರೀ ಸೋಮನಾಥ ಸನ್ನಿಧಿಯಲ್ಲಿ ಪ್ರಾರ್ಥಿಸಿದರು.ಕಳೆದ ಹಲವು ವರ್ಷಗಳಲ್ಲಿ ಆಗಮಿಸಿದ ಭಕ್ತರ ಸಂಖ್ಯೆಯನ್ನು ಪರಿಗಣಿಸಿದಾಗ ಈ ಬಾರಿ ಶ್ರಾವಣ ಅಮಾವಸ್ಯೆ…
UN NETWORKS ಕೊಣಾಜೆ: `ಸೋಷಿಯಲ್ ಮೀಡಿಯಾ, ಪಬ್ಲಿಕ್ ಸ್ಪೇರ್ ಆಂಡ್ ದಿ ಯೂತ್: ಆ್ಯನ್ ಎಕ್ಸ್‍ಪ್ಲೋರೇಟರಿ ಸ್ಟಡಿ ಆಫ್ ಬೆಂಗಳೂರು ಅರ್ಬನ್’ ಎಂಬ ವಿಷಯದಲ್ಲಿ ಚಂದ್ರಲೇಖ ಜೆ.ಎಸ್ ಅವರು ಮಂಗಳೂರು ವಿಶ್ವವಿದ್ಯಾಲಯಕ್ಕೆ ಮಂಡಿಸಿದ ಮಹಾಪ್ರಬಂಧಕ್ಕೆ ಮಂಗಳೂರು ವಿವಿಯು ಪಿ.ಎಚ್‍ಡಿ ಪದವಿ ನೀಡಿ ಗೌರವಿಸಿದೆ. ಇವರಿಗೆ ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎಚ್.ಕೆ.ಮರಿಸ್ವೇ ಅವರು ಮಾಗದರ್ಶನ ನೀಡಿದ್ದರು. ಚಂದ್ರಲೇಖ ಅವರು ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ, ಸಮಾಜಶಾಸ್ತ್ರಜ್ಞರಾದ ಪ್ರೊ.ಜೋಗನ್‍ಶಂಕರ್ ಅವರ ಪುತ್ರಿಯಾಗಿದ್ದಾರೆ.
UN NETWORKS ಕೊಣಾಜೆ : ಐರೋಪ್ಯ ಸಮುದಾಯವು 6 ಸದಸ್ಯ ರಾಷ್ಟ್ರಗಳಿಂದ ಆರಂಭವಾಗಿ ಪ್ರಸ್ತುತಚ28 ಸದಸ್ಯ ರಾಷ್ಟ್ರಗಳನ್ನು ಹೊಂದಿದೆ. ಇದು ಪ್ರಮುಖವಾಗಿ ಯುದ್ದ ಮತ್ತು ಸಂಘರ್ಷಗಳಿಂದ ಮುಕ್ತವಾಗಿ, ಶಾಂತಿಯುತವಾಗಿ ಆರ್ಥಿಕ ಬಲವರ್ಧನೆಗೊಳಿಸಿ ಜಾಗತಿಕ ಮಟ್ಟದಲ್ಲಿ ಐರೋಪ್ಯ ಒಕ್ಕೂಟದ ಪ್ರಭಾವವನ್ನು ಹಚ್ಚಿಸಿಕೊಳ್ಳಲು ಪ್ರಯತ್ನಿಸಿದೆ. ಈ ಒಕ್ಕೂಟವು ಸಹಕಾರವನ್ನು ವೃದ್ದಿಸಿಕೊಳ್ಳುವುದರ ಜೊತೆಗೆ ಜಾಗತಿಕ ಮಟ್ಟದಲ್ಲಿ ಪ್ರಭಾವಿ ಸಂಘಟನೆಯಾಗಿದೆ ಎಂದು ಭಾರತದಲ್ಲಿನ ಪೊಲಾಂಡ್ ಮಾಜಿ ರಾಯಬಾರಿಯಾಗಿ ಥಾಮಸ್ ಲುಕಾಸ್ಜುಕ್ ಅವರು ಹೇಳಿದರು. ಅವರು ಜೀನ್ ಮಾನೆಟ್ ಮಾಡ್ಯುಲ್, ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗ, ಇತಿಹಾಸ ವಿಭಾಗ ಮತ್ತು ಸಮಾಜಶಾಸ್ರ್ರ ವಿಭಾಗಗಳ ಸಹಯೋಗದೊಂದಿಗೆ ಬುಧವಾರ ಯೂರೋಪಿಯನ್ ಯೂನಿಯನ್: ಇತಿಹಾಸ, ಸಂಸ್ಕೃತಿ ಮತ್ತು ರಾಜಕಾರಣ ಕುರಿತಾದ ಒಂದು ದಿನದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಮಂಗಳೂರು ವಿವಿಯಲ್ಲಿ ಉದ್ಘಾಟಿಸಿ ಮಾತನಾಡಿದರು. ಐರೋಪ್ಯ ಒಕ್ಕೂಟ ಐತಿಕಾಸಿಕವಾಗಿ ಪ್ರಾಮುಖ್ಯತೆಯನ್ನು ಪಡೆದಿದ್ದು, ಇದರ ಸಂಸ್ಕೃತಿ, ಬೌಗೋಳಿಕತೆಯು ಆರ್ಥಿಕ ಮತ್ತು ರಾಜಕೀಯ ದೃಷ್ಟಿಕೋನದಿಂದ ಮಹತ್ವದಾಗಿದೆ. ಐರೋಪ್ಯ ಒಕ್ಕೂಟದ ಮೂಲ ಮೌಲ್ಯಗಳು, ಯೂರೋಪಿಯನ್ ಸಂಸ್ಕೃತಿಯ ಮೂಲಾಧಾರವಾದ ಗ್ರೀಕ್…
UN NETWORKS ತೊಕ್ಕೊಟ್ಟು : ಕಾಲೇಜು ವಿದ್ಯಾರ್ಥಿ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆಗೈದ ಘಟನೆ ಉಳ್ಳಾಲ ಮಾಸ್ತಿಕಟ್ಟೆಯಲ್ಲಿ ಗುರುವಾರ ನಡೆದಿದೆ. ನಗರದ ಸಂತ ಅಲೋಶಿಯಸ್ ಕಾಲೇಜಿನ ದ್ವಿತೀಯ ಪಿಯುಸಿ ಸೈನ್ಸ್ ವಿದ್ಯಾರ್ಥಿ ಪ್ರತೀಕ್ (18 ) ಆತ್ಮಹತ್ಯೆಗೈದ ವಿದ್ಯಾರ್ಥಿ.ತಂದೆ ಕಮಲಾಕ್ಷ ಹಾಗೂ ತಾಯಿ ಪದ್ಮಾಕ್ಷಿ ಕಂಕನಾಡಿಯ ಖಾಸಗಿ ಕೋ-ಆಪರೇಟಿವ್ ಬ್ಯಾಂಕ್ ಉದ್ಯೋಗಿಗಳಾಗಿದ್ದು , ಪ್ರತೀಕ್ ಗುರುವಾರ ತರಗತಿಗೆ ರಜೆ ಎಂದು ಪ್ರತೀಕ್ ಮನೆಯಲ್ಲಿ ಉಳಿದುಕೊಂಡಿದ್ದ ಎನ್ನಲಾಗಿದೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ.ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
UN NETWORKS ಕೊಣಾಜೆ: ನಡುಪದವಿನಲ್ಲಿರುವ ಪಿ.ಎ. ಎಜ್ಯುಕೇಶನಲ್ ಟ್ರಸ್ಟ್, ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧಗಳ ಠಾಣೆ ಮಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಮಾದಕ ದ್ರವ್ಯದ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾದ ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧಗಳ ಠಾಣೆ ಮಂಗಳೂರು ಇದರ ಪೊಲೀಸ್ ಮುಖ್ಯಾಧಿಕಾರಿಣಿ ಶ್ರೀಲತಾ ಮಾತನಾಡಿ ವಿದ್ಯಾರ್ಥಿಗಳು ಮಾದಕ ದ್ರವ್ಯ ವ್ಯಸನಿಗಳಾಗದೆ ಶಿಕ್ಷಣಕ್ಕೆ ಹೆಚ್ಚು ಮಹತ್ವಕೊಟ್ಟು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು. ಯುವ ಪೀಳಿಗೆ ಮಾದಕ ಪದಾರ್ಥಗಳ ಗೀಳು ಅಂಟಿಸಿಕೊಂಡು ಆರೋಗ್ಯ ಹಾಳು ಮಾಡಿಕೊಳ್ಳುತ್ತಿರುವುದು ಒಳ್ಳೆಯದಲ್ಲ, ಕ್ಷಣಿಕ ಸುಖಕ್ಕೆ ಬದುಕು ಬಲಿಕೊಡದೆ ದುಶ್ಚಟಗಳ ದುಷ್ಪರಿಣಾಮ ಕುರಿತು ಎಚ್ಚರ ವಹಿಸಬೇಕೆಂದು ಅವರು ಕರೆ ನೀಡಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಪೊಲೀಸ್ ಉಪ ಅಧಿಕಾರಿಣಿ ಲತಾ, ಅಧಿಕಾರಿ ಶಿವಕುಮಾರ್, ಪಿ.ಎ. ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಅಬ್ದುಲ್ಲಾ ಶರೀಫ್, ಶೈಕ್ಷಣಿಕ ನಿರ್ದೇಶಕ ಡಾ.ಸಫ್ರ್ರಾಝ್ ಜೆ. ಹಾಶಿಂ, ಎಂ.ಬಿ.ಎ ವಿಭಾಗದ ನಿರ್ದೇಶಕಿ…
UN NETWORKS ಉಳ್ಳಾಲ: ಶಂಕಿತ ಡೆಂಗ್ಯುಗೆ ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಸೋಮೇಶ್ವರದ ಕುಂಪಲ ಹಾಗೂ ಉಳ್ಳಾಲದ ಚೆಂಬುಗುಡ್ಡೆ ನಿವಾಸಿ ಇಬ್ಬರು ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ. ಉದಯಚಂದ್ರ ಎಂಬವರ ಪತ್ನಿ ಸುಮತಿ(35) ಹಾಗೂ ಕುಂಪಲ ಕುಂಪಲ ಬಲ್ಯ ನಿವಾಸಿ ಪ್ರಕಾಶ್ ಗಟ್ಟಿ (47) ಸಾವನ್ನಪ್ಪಿದವರು.ದೇರಳಕಟ್ಟೆ ಯೆನೆಪೋಯ ಆಸ್ಪತ್ರೆಯಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಸುಮತಿ ಅವರು ಶನಿವಾರದಂದು ಆಸ್ಪತ್ರೆಗೆ ದಾಖಲಾಗಿದ್ದರು. ದೇರಳಕಟ್ಟೆ ಯೆನೆಪೋಯ ಆಸ್ಪತ್ರೆಯಲ್ಲಿ ಜಾಂಡೀಸ್ ಇರುವ ಕುರಿತು ತಿಳಿದುಬಂದಿತ್ತು. ಬಳಿಕ ಆರೋಗ್ಯ ಸ್ಥಿತಿಯಲ್ಲಿ ಬಹಳಷ್ಟು ಏರುಪೇರಾಗಿದ್ದು, ಬುಧವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಪ್ಲೇಟ್ ಲೆಟ್ ನಲ್ಲಿ ಬಹಳಷ್ಟು ವ್ಯತ್ಯಾಸ ಕಂಡುಬಂದಿರುವುದರಿಂದ ಡೆಂಗ್ಯುಗೆ ಬಲಿಯಾಗಿರುವ ಸಾಧ್ಯತೆಗಳಿವೆ. ಸುಮತಿ ಅವರ ಪತಿ ರಿಕ್ಷಾ ಚಾಲಕರಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಸುಮತಿ ಯೆನೆಪೋಯ ಆಸ್ಪತ್ರೆಯಲ್ಲಿ ಸ್ವೀಪಿಂಗ್ ಕೆಲಸ ನಿರ್ವಹಿಸುತ್ತಿದ್ದರು. ಪ್ರಕಾಶ್ ಗಟ್ಟಿ ಅವರು ಟೆಂಪೋ ಚಾಲಕನಾಗಿ ದುಡಿಯುತ್ತಿದ್ದರು. ಜ್ವರ ಬಂದ ಹಿನ್ನೆಲೆಯಲ್ಲಿ ಮಂಗಳೂರಿನ ಯೆನೆಪೋಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಮೂರು ಬಾಟಲಿ ರಕ್ತವನ್ನು…
ವರದಿ : ಸುರೇಶ್ ಪಡು ಕುಂಪಲ : ಕುಂಪಲದ ಲಾಸ್ಟ್ ಸ್ಟಾಪ್ ಎಂದೇ ಪ್ರಸಿದ್ಧಿ ಪಡೆದಿರುವ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಅಮೃತನಗರದಲ್ಲಿ ಚರಂಡಿ ಅವ್ಯವಸ್ಥೆ ರಸ್ತೆಯನ್ನೇ ನುಂಗುವ ಸ್ಥಿತಿ ನಿರ್ಮಾಣವಾಗಿದೆ. ದಿನದಲ್ಲಿ 10 ರಿಂದ 15 ಶಾಲಾ ಬಸ್ಸುಗಳು ಸಂಚರಿಸುತ್ತಿದೆ. ಚರಂಡಿಯ ಕುಸಿತದಿಂದ ಅವಘಢ ಸಂಭವಿಸುವ ಭೀತಿಯಿದೆ. ಇಲ್ಲಿ ದಿನನಿತ್ಯ ಶಾಲಾ ವಿದ್ಯಾರ್ಥಿಗಳು ಮತ್ತು ಪಾದಚಾರಿಗಳು ನಡೆದುಕೊಂಡು ಹೋಗುವವರೂ ಅಪಾಯವನ್ನು ಎದುರಿಸುವಂತಾಗಿದೆ. ಕೋಟೆಕಾರು ಪಟ್ಟಣಪಂಚಾಯತ್ ಬಗಂಬಿಲದಿಂದ ಬರುವ ಮಳೆ ನೀರು ಇದೇ ಚರಂಡಿ ಮೂಲಕ ಸಾಗಿ ಮಡ್ಯಾರು ಸಮೀಪದ ರಾಜಕಾಲುವೆ ಸೇರುತ್ತದೆ. ಇದೇ ಚರಂಡಿಯ ಒಂದು ಮೀ ಅಂತರದಲ್ಲಿ ರಸ್ತೆ ಉಬ್ಬು ಇದೆ. ಇದರಿಂದಾಗಿ ಹೆಚ್ಚಿನ ಪ್ರಾಣಹಾನಿಯನ್ನು ಇದು ತಪ್ಪಿಸಿದೆ. ಸೋಮೇಶ್ವರ ಗ್ರಾ.ಪಂ.ನ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವೇ ಕಾಮಗಾರಿ ನಡೆಸದೇ ಇದ್ದಲ್ಲಿ, ಕುಂಪಲದ ಲಾಸ್ಟ್ ಸ್ಟಾಪ್ ಇನ್ನೊಬ್ಬರ ಬಾಳಲ್ಲಿ ಲಾಸ್ಟ್ ಡೇ ಆಗುವುದರಲ್ಲಿ ಸಂಶಯವಿಲ್ಲ. ಸೋಮೆಶ್ವರ ಪುರಸಭೆಯ ಆಡಳಿತ ವರ್ಗ ಕ್ಯಾಥರ್ಹಾಲ್ ಕಾಯಿಲೆ (ವಾಸನೆ ಪ್ರಜ್ಞೆಯಿಲ್ಲದ ಕಾಯಿಲೆ) ಕಾಯಿಲೆಯಿಂದ ನರಳುತ್ತಿದೆಯೇ?.…

