UN NETWORKS
ಉಳ್ಳಾಲ : ಕೆಸಿಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ಅಧೀನದಲ್ಲಿರುವ ಹರಮ್ ಯೂನಿಟ್ ವತಿಯಿಂದ ಹರಮಿನ ಕ್ಲಾಕ್ ಟವರ್ ನ ಮೂರನೇ ಮಹಡಿಯಲ್ಲಿ ಯೂನಿಟ್ ಅಧ್ಯಕ್ಷ ಅಶ್ರಫ್ ಮಂಜನಾಡಿಯವರ ಅಧ್ಯಕ್ಷತೆಯಲ್ಲಿ ಬೃಹತ್ ಇಫ್ತಾರ್ ಸಂಗಮ ಕಾರ್ಯಕ್ರಮ ನಡೆಯಿತು.







ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಯುವ ಪ್ರಭಾಷಣಗಾರ ಕಾಂತಪುರಂ ಅಬ್ದುಲ್ ಲತೀಫ್ ಸಖಾಫಿ ರಂಝಾನಿನ ಸಂದೇಶ ನೀಡಿ, ನಬಿ ಮದ್ಹ್ ಗೀತೆ ದುಆಃ ಮಜ್ಲಿಸ್ ನಡೆಸಿ ಕೊಟ್ಟರು. ಈ ಸಂದರ್ಭ ಕೆಸಿಎಫ್ ಜಿದ್ದಾ ಝೋನ್, ಕೆಸಿಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ನೇತಾರರು ಹಾಗೂ ಸೆಕ್ಟರ್ ನ ಯೂನಿಟ್ ಗಳ ಕಾರ್ಯಕರ್ತರು ಹಾಗೂ ಮೊದಲಾದ ನೇತಾರರು ಸಾರ್ವಜನಿಕರು ಉಪಸ್ಥಿತರಿದ್ದರು. ಹನೀಫ್ ಸಖಾಫಿ ಬೊಳ್ಮಾರ್ ಸ್ವಾಗತಿಸಿದರು.

ಯೂನಿಟ್ ಪ್ರ. ಕಾರ್ಯದರ್ಶಿ ಮುಜೀಬುರ್ರಹ್ಮಾನ್ ಹರೇಕಳ ವಂದಿಸಿದರು.


