ಉಳ್ಳಾಲ: ಅಂಗಡಿ ಬಳಿ ಮಾಸ್ಕ್ ಧರಿಸದೇ ಕುಳಿತಿದ್ದವರಿಗೆ ಎಚ್ಚರಿಕೆ ನೀಡಿದ ಕಿನ್ಯಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ವ್ಯಕ್ತಿಯೋರ್ವನ ವಿರುದ್ದ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಿನ್ಯಾ ಬೆಳರಿಂಗೆ ನಿವಾಸಿ ಸಾಕಿರ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಬೆಳರಿಂಗೆ ಬಳಿಯ ಕೆಬಿಎಂ ಜನರಲ್ ಸ್ಟೋರ್ ಬಳಿ ಮಾಸ್ಕ್ ಹಾಕದೇ ಕುಳಿತಿದ್ದವರಿಗೆ ಕಿನ್ಯಾ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿ ಮಹಮ್ಮದ್ ಅಶ್ರಫ್ ಎಚ್ಚರಿಕೆ ನೀಡಿದ್ದರು. ಈ ವೇಳೆ ತಗಾದೆ ತೆಗೆದ ಸಾಕಿರ್ ,ತನ್ನ ಮನೆಯ ಅಂಗಳದಲ್ಲಿ ಕುಳಿತಿದ್ದೇನೆ. ಮಾಸ್ಕ್ ಹಾಕಬೇಕೆಂದೇನಿಲ್ಲ. ಏನು ಬೇಕಾದರೂ ಮಾಡಿ ‘ ನೀವ್ಯಾರು ಕೇಳಲು’ ಎಂದು ಉಡಾಫೆಯಾಗಿ ವರ್ತಿಸಿದ್ದಾನೆ. ಈ ಕುರಿತು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಉಳ್ಳಾಲ ಠಾಣೆಯಲ್ಲಿ ನೀಡಿರುವ ದೂರಿನಂತೆ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯಿದೆ ಉಲ್ಲಂಘನೆ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.
Author: UllalaVani
ಉಳ್ಳಾಲ: ಮುಂಭಾಗದ ಟಯರ್ ಸಿಡಿದು ಡಿವೈಡರ್ ದಾಟಿದ ಕಾರು ಎದುರಿನಿಂದ ಬರುತ್ತಿದ್ದ ಸ್ಕೂಟರಿಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರಿನ ಹಿಂಬದಿ ಸವಾರೆ ವಸಂತಿ ಎಂಬವರು ಫ್ಲೈವರಿನಿಂದ ಕೆಳಗೆ 10 ಮೀ ಕೆಳಕ್ಕೆ ರಸ್ತೆಗೆ ಬಿದ್ದು ಮೃತಪಟ್ಟು, ಪುತ್ರಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ತೊಕ್ಕೊಟ್ಟು ಫ್ಲೈಓವರ್ ನಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆಕುಂಪಲದ ಆಶ್ರಯಕಾಲನಿ ನಿವಾಸಿ ವಸಂತಿ ನಾಯರ್ (45) ಮೃತಪಟ್ಟವರು . ಪುತ್ರಿ ಶ್ರೀಜಾ ( 20) ಎಂಬವರನ್ನು ಗಂಭೀರ ಸ್ಥಿತಿಯಲ್ಲಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಚಾಲಕ ಶಮಿತ್ ಎಂಬಾತನನ್ನು ನಾಗುರಿ ಸಂಚಾರಿ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಕುಂಪಲದಿಂದ ಜೆಪ್ಪಿನಮೊಗರುವಿನ ತಾಯಿ ಮನೆಗೆ ವಸಂತಿ ಅವರು ಮಗಳ ಜೊತೆಗೆ ಸ್ಕೂಟರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಎದುರಿನಿಂದ ತೊಕ್ಕೊಟ್ಟು ಫ್ಲೈಓವರ್ ನಲ್ಲಿ ಕಲ್ಲಾಪು ಕಡೆಯಿಂದ ಕಾಪಿಕಾಡು ಕಡೆಯತ್ತ ಬರುತ್ತಿದ್ದ ಕಾರಿನ ಎದುರುಗಡೆಯ ಟಯರ್ ಸಿಡಿದಿದ್ದು, ಇದರಿಂದ ನಿಯಂತ್ರಣ ತಪ್ಪಿದ ಕಾರು ಡಿವೈಡರ್ ದಾಟಿ ಎದುರಿನಿಂದ ಬರುತ್ತಿದ್ದ ಸ್ಕೂಟರಿಗೆ ಢಿಕ್ಕಿ ಹೊಡೆದಿದೆ. ಈ…
ವರದಿ : ಅರ್ಚನಾ ಎಂ. ಬಂಗೇರ ಕುಂಪಲ ಮಂಗಳೂರು: ದಿ ನ್ಯೂಯಾರ್ಕ್ ನಲ್ಲಿ ನಡೆಯುವ ಫಿಲಂ ಫೆಸ್ಟಿವಲ್ ಗೆ ಭಾರತದ ವತಿಯಿಂದ ಆಯ್ಕೆಯಾದ ಎಲ್ಲಾ ಭಾಷೆಗಳ ಚಲನಚಿತ್ರಗಳ ನಡುವೆ ನೀಲಿಹಕ್ಕಿ ಶಿರಸಿ ಭಾಷೆ ಚಿತ್ರ ಕೂಡ ಆಯ್ಕೆಯಾಗಿದೆ.ನೀಲಿಹಕ್ಕಿಚಿತ್ರದಲ್ಲಿ ಸಿದ್ದಾರ್ಥ ಎಂಬ ಹೆಸರಿನ ಪಾತ್ರದಾರಿಯಾಗಿ ಮಂಗಳೂರಿನ ಅಮನ್. ಎಸ್. ಕರ್ಕೇರಾ ಅವರು ಬಾಲನಟನಾಗಿ ಬಣ್ಣಹಚ್ಚಿ ಅದರಲ್ಲೂ ಬೆಸ್ಟ್ ಚೈಲ್ಡ್ ಆರ್ಟಿಸ್ಟ್ ಗೆ ನೊಮಿನೇಟ್ ಆಗಿರುವುದು ಭಾರತ ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ. ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಸದ್ದಿಲ್ಲದೆ ಮಿಂಚುತ್ತಿದ್ದರೂ ಇನ್ನೂ ತೆರೆಮರೆಯಲ್ಲಿರುವ ಕರಾವಳಿಯ ನವಿರಾದ ಕೇಶ ರಾಶಿಯ ಹಾಲುಗೆನ್ನೆ ಸವಿ ಅಕ್ಕರೆಯ ಮುದ್ದುಮುಖದ ಸೌಂದರ್ಯಗಣಿ, ತುಳುನಾಡಿನ ಬಹುಮುಖ ಬಾಲಪ್ರತಿಭೆ, ಬಾಲನಟ, ವಿ.ಜೆ ಅಮನ್.ಎಸ್. ಕರ್ಕೇರ ಅವರ ಸಾಧನೆಯ ಯಶೋಗಾಥೆ.ನೀರಿಗಿಂತ ತಿಳಿಯಾದದ್ದು-ಜ್ಞಾನ ಪ್ರತಿಭೆ ಎನ್ನುವುದು ದೇವರು ಕೊಟ್ಟ ವರ, ದೇವರ ಅಪ್ಪಣೆ ವಿನಹಃ ಹುಲ್ಲು ಕಡ್ಡಿಯೂ ಅಲುಗಾಡದು. ಸಾಧನೆ ಎಂಬುವುದು ಸಾಗರವಿದ್ದಂತೆ,ಬಗೆದಷ್ಟು ಮುಗಿಯದು. ಮನಸ್ಸಿದ್ದರೆ ಮಾರ್ಗವೆಂಬಂತೆ ಸಾಧನೆ ಫಲಪ್ರದವಾಗಲು ಗುರು, ನಿರ್ದಿಷ್ಟ ಗುರಿ,ಕಠಿಣ ಪರಿಶ್ರಮ,ಧ್ಯೇಯ, ಮಾರ್ಗದರ್ಶನ ಅತ್ಯಗತ್ಯ.ಬೆಳೆಯುವ…
ಉಳ್ಳಾಲ: ಜೆಸಿಐ ಮಂಗಳಗಂಗೋತ್ರಿ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಧೈರ್ಯದಿಂದ ಮುನ್ನಡೆಯುವ ಆತ್ಮಸ್ಥೈರ್ಯ ಕೊಡುವಂತಹ ಕಾರ್ಯ ಆಗಿದೆ ಎಂದು ಹರೇಕಳ ಶ್ರೀ ರಾಮಕೃಷ್ಣ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ರವೀಂದ್ರ ರೈ ಕಲ್ಲಿಮಾರು ಹೇಳಿದರು.ಅವರು ನಾಟೆಕಲ್ ಪ್ರಾಥಮಿಕ ಕೇಂದ್ರದಲ್ಲಿ ಬುಧವಾರ ಜೆಸಿಐ ಮಂಗಳಗಂಗೋತ್ರಿ ವತಿಯಿಂದ 30 ಮಂದಿ ಆಶಾ ಕಾರ್ಯಕರ್ತೆಯರಿಗೆ ಕಿಟ್ ವಿತರಣೆ ನಡೆಸಿ ಮಾತನಾಡಿದರು.ವ್ಯಕ್ತಿತ್ವ ವಿಕಸನ ಸಂಸ್ಥೆಯಾಗಿರುವ ಜೆ.ಸಿ ಐ ಅತ್ಯುತ್ತಮವಾಗಿ ಕಾರ್ಯಾಚರಿಸುತ್ತಿದೆ. ಜೆಸಿಐ ಸೇರಿಕೊಂಡವರು ವ್ಯಕ್ತಿತ್ವ ರೂಪಿಸಿಕೊಂಡವರುಜೆಸಿಐನಲ್ಲಿ ತೊಡಗಿಸಿಕೊಂಡ ಅನೇಕರು ಸಮಾಜಕ್ಕೆ ಸ್ಪಂಧಿಸಿ ಶಿಕ್ಷಕರಾದವರು. ಕೊರೊನಾ ಸಂಧಿಗ್ಧ ಕಾಲದಲ್ಲಿ ಕಟ್ಟ ಕಡೆಯದಾಗಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಕಿಟ್ ನೀಡುವುದು ಮಾನವೀಯತೆಗೆ ಸ್ಪರ್ಶ ಕೊಡುವಂತಹ ಕಾರ್ಯಕ್ರಮ. ಆಶಾ ಕಾರ್ಯಕರ್ತೆಯರಿಗೆ ಎಲ್ಲಿಯೂ ತೊಂದರೆಯಾಗದಂತೆ ನೋಡಿಕೊಳ್ಳುವುದು ನಾಗರಿಕರ ಜವಾಬ್ದಾರಿ . ವಿಭಿನ್ನ ಸ್ವಭಾವದ ಜನ ವಿಭಿನ್ನವಾಗಿ ಮಾತನಾಡುತ್ತಾರೆ, ಆಶಾ ಕಾರ್ಯಕರ್ತೆಯರು ತಾಳ್ಮೆಯಲ್ಲಿದ್ದುಕೊಂಡು ದೇವರ ಕೆಲಸ ಎಂದುಕೊಂಡು ಕಾರ್ಯನಿರ್ವಹಿಸಿ ಎಂದರು.ರೇಚಲ್ ಸಂಸ್ಥೆಯ ನಿರ್ದೇಶಕಿ ನಿರ್ಮಾ ಡಿಸೋಜ ಮಾತನಾಡಿ,ಇತರರ ಸೇವೆ ಮಾಡುವ ಸಂದರ್ಭ ತಮ್ಮಲ್ಲಿ ಆತ್ಮಸ್ಥೈರ್ಯವನ್ನು ತುಂಬಲು…
ಉಳ್ಳಾಲ: ಮುಡಿಪು ಒಳಪ್ರದೇಶಗಳ ಜನರ ಬಹುಬೇಡಿಕೆಯ ಆಂಬ್ಯುಲೆನ್ಸ್ ವ್ಯವಸ್ಥೆ ಇದೀಗ ಫಲಪ್ರದವಾಗಿದೆ. ಸರ್ವಧರ್ಮದವರನ್ನು ಗೌರವಯುತವಾಗಿ ಕಾಣುತ್ತಿದ್ದ ಬೇಕಲ್ ಉಸ್ತಾದರ ಹೆಸರಿನಲ್ಲಿ ಭಾರತ್ ಬೀಡಿ ಸಂಸ್ಥೆ ನೀಡಿರುವ ಆಂಬ್ಯುಲೆನ್ಸ್ ಸೇವೆ ಜನರಿಗೆ ಸಹಕಾರಿಯಾಗಲಿ ಎಂದು ಶಾಸಕ ಯು.ಟಿ ಖಾದರ್ ಹೇಳಿದರು. ಅವರು ಶ್ರೀ ಅನಂತ್ ಜಿ.ಪೈ ಸ್ಮರಣಾರ್ಥ ಭಾರತ್ ಬೀಡಿ ವಕ್ಸ್ ್ ಪ್ರೈ. ಲಿಮಿಟೆಡ್ ಇವರು ಯು.ಟಿ ಫರೀದ್ ಫೌಂಡೇಶನ್ ಸಹಯೋಗದೊಂದಿಗೆ ದಾನವಾಗಿ ನೀಡಿದ ಬೇಕಲ್ ಉಸ್ತಾದ್ ಮೆಮೋರಿಯಲ್ ಫೌಂಡೇಶನ್ ಹೆಸರಿನ ಆಂಬ್ಯುಲೆನ್ಸ್ ಸೇವೆಯನ್ನು ಮುಡಿಪು ಜಂಕ್ಷನ್ನಿನಲ್ಲಿ ಗುರುವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಕರಾವಳಿ ಪ್ರದೇಶದ ಧಾರ್ಮಿಕ ವಿಧ್ವಾಂಸರಲ್ಲಿ ತನ್ನದೇ ಹೆಸರು ಮೂಡಿಸಿ, ಸರ್ವಧರ್ಮದವರನ್ನು ಗೌರವಯುತವಾಗಿ ಕಾಣುತ್ತಿದ್ದ ಬೇಕಲ್ ಉಸ್ತಾದ ಪರಿಚಿತರಿಲ್ಲದವರು ಯಾರಿಲ್ಲ. ಜೀವಿತಾವಧಿಯ ಸಂಪೂರ್ಣ ಅವಧಿಯಲ್ಲಿ ಸಹೋದರತೆಯ ಪ್ರೀತಿ ವಿಶ್ವಾಸವನ್ನು ಬೋಧಿಸಿದ ಬೇಕಲ ಉಸ್ತಾದರು ಕಳೆದ ವರ್ಷ ಅಗಲಿರುವುದು ಎಲ್ಲರಿಗೂ ತುಂಬಲಾರದ ನಷ್ಟವಾಗಿದೆ. ಕುಟುಂಬದವರು ಅವರ ಹೆಸರಿನಲ್ಲಿ ಬೇಕಲ್ ಉಸ್ತಾದ್ ಮೆಮೋರಿಯಲ್ ಟ್ರಸ್ಟ್ ಆರಂಭಿಸಿದ್ದಾರೆ. ಮುಡಿಪು ಅಭಿವೃದ್ಧಿಯ ಪ್ರದೇಶವಾಗಿದೆ.…
ಉಳ್ಳಾಲ: ಗ್ರಾಮದಲ್ಲಿ 44 ಮಂದಿ ಪರೀಕ್ಷೆ ಮಾಡಿಸಿರುವವರ ಪೈಕಿ 21 ಮಂದಿಗೆ ಕೋವಿಡ್ ಪಾಸಿಟಿವ್ ಆಗಿರುವುದು ಗಂಭೀರ ವಿಚಾರ. ಕೂಡಲೇ ಎಲ್ಲರೂ ಜಾಗರೂಕರಾಗಿ ಜಿಲ್ಲಾಡಳಿತದ ಕ್ರಮದೊಂದಿಗೆ ಕೈಜೋಡಿಸಿ ಎಂದು ಶಾಸಕ ಯು.ಟಿ ಖಾದರ್ ಹೇಳಿದರು.ಅವರು ಮಂಜನಾಡಿ ಗ್ರಾಮ ಪಂಚಾಯತ್ ನ ದಿ.ಯು.ಟಿ ಫರೀದ್ ಸಭಾಂಗಣದಲ್ಲಿ ಜರಗಿದ ಕೋವಿಡ್-19 ಟಾಸ್ಕ್ ಫೆÇೀಸ್9 ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ಕೋವಿಡ್ ನಿಯಂತ್ರಣಕ್ಕೆ ಅನುಗುಣವಾಗಿ ಟಾಸ್ಕ್ ಫೆÇೀಸ್9 ಕಾರ್ಯನಿರ್ವಹಿಸುತ್ತಾ ಮುಂದುವರಿಯಬೇಕು. ಲಾಕ್ ಡೌನ್ ಕೊರೊನಾಕ್ಕೆ ಔಷಧಿಯಲ್ಲ. ಹಿಂದೆ ಲಾಕ್ಡೌನ್ ಮಾಡಿದ ನಂತರವೂ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಲೇ ಬಂದಿದೆ. ಸಮರ್ಪಕವಾಗಿ ತಳಮಟ್ಟದಲ್ಲಿ ಆಕ್ಷನ್ ಪ್ಲಾನ್ ರಚಿಸಿದಲ್ಲಿ ಮಾತ್ರ ನಿಯಂತ್ರಣ ಸಾಧ್ಯ. ಗ್ರಾಮಮಟ್ಟ ಮಾತ್ರವಲ್ಲ ವಾಡ್9 ಮಟ್ಟದಲ್ಲೂ ಸಮಿತಿಯನ್ನು ರಚನೆ ಮಾಡಬೇಕು. ಪಾಸಿಟಿವ್ ಪ್ರಕರಣ ಕುರಿತು ಮಾಹಿತಿ ಗ್ರಾ.ಪಂ ಸದಸ್ಯರಲ್ಲಿ ಇರಬೇಕು. ಕೋವಿಡ್ ಟೆಸ್ಟ್ ನೀಡಿದವರು ವರದಿ ಬರುವವರೆಗೆ ಸುತ್ತಾಡದಂತೆ ಬೀಟ್ ಪೆÇಲೀಸರು ಕ್ರಮಕೈಗೊಳ್ಳಬೇಕು. ಅದನ್ನು ಅಧಿಕಾರಿಗಳು ಪರಿಶೀಲಿಸುತ್ತಿರಬೇಕು ಎಂದರು.ಉಪತಹಶೀಲ್ದಾರ್ ವಿನೋದಾ ಯಸ್. ರಾವ್ , ತಾ.ಪಂ ಕಾರ್ಯನಿರ್ವಹಣಾ ಅಧಿಕಾರಿ…
ಉಳ್ಳಾಲ: ಗ್ರಾಮೀಣ ಮಟ್ಟದ ಜಂಕ್ಷನ್‍ಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ. ಭವಿಷ್ಯದಲ್ಲಿ ಹೆಚ್ಚಿನ ಜನಜಂಗುಳಿ ಉಂಟಾದಾಗ, ವಾಹನಗಳ ಓಡಾಟಕ್ಕೆ ಅಡಚಣೆಯಾಗದೆ, ಇನ್ನಷ್ಟು ಅಭಿವೃದ್ಧಿಗೆ ಕುಂಠಿತವಾಗಬಾರದು ಅನ್ನುವ ಉದ್ದೇಶವನ್ನಿಟ್ಟುಕೊಂಡು ಮಂಗಳೂರು ಕ್ಷೇತ್ರದ ಗ್ರಾಮೀಣ ಭಾಗದಲ್ಲಿರುವ ಹಲವು ಜಂಕ್ಷನ್ನುಗಳ ಅಭಿವೃದ್ಧಿ ಕಾರ್ಯ ನಡೆಸಲಾಗುತ್ತಿದೆ ಎಂದು ಶಾಸಕ ಯು.ಟಿ ಖಾದರ್ ಹೇಳಿದರು.ಅವರು ನಾಟೆಕಲ್ ಜಂಕ್ಷನ್ನಿನಲ್ಲಿ ರಸ್ತೆ ಅಗಲೀಕರಣ ಹಾಗೂ ಸರ್ಕಲ್ ನಿರ್ಮಾಣದ ಕಾಮಗಾರಿಯನ್ನು ಮಂಗಳವಾರ ವೀಕ್ಷಿಸಿ ಮಾತನಾಡಿದರು.ನಾಟೆಕಲ್, ಕಲ್ಕಟ್ಟ , ಡಿ.ಜಿ ಕಟ್ಟೆ, ಮೊಂಟೆಪದವು ಜಂಕ್ಷನ್ನುಗಳ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿಗಳು ಆರಂಭವಾಗಿದೆ. ದೇರಳಕಟ್ಟೆ ಮತ್ತು ಅಸೈಗೋಳಿ ಜಂಕ್ಷನ್ನಿನ ಅಭಿವೃದ್ಧಿ ಶೀಘ್ರದಲ್ಲಿ ನಡೆಯಲಿದೆ. ರೂ.10 ಕೋಟಿ ಅನುದಾನದಡಿ ಕುತ್ತಾರಿನಿಂದ ದೇರಳಕಟ್ಟೆವರೆಗಿನ ಚತುಷ್ಪಥ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ತೊಕ್ಕೊಟ್ಟುವಿನಿಂದ ಕುತ್ತಾರು ರಸ್ತೆಗೆ ರೂ.24 ಕೋಟಿ ಮಂಜೂರಾಗಿದೆ. ಆದರೆ ಅನುದಾನ ಬಿಡುಗಡೆಯಾಗದ ಕೊರತೆಯಿಂದ ಕಾಮಗಾರಿ ಕುಂಠಿತವಾಗಿದೆ. ಹಾಗೂ ದೇರಳಕಟ್ಟೆಯಿಂದ ಕಂಬ್ಲಪದವು ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಮಾಡುವ ಮುಂದಿನ ಯೋಜನೆ ಶೀಘ್ರದಲ್ಲೇ ಆರಂಭವಾಗಲಿದೆ. ಕಾಂಗ್ರೆಸ್…
ಉಳ್ಳಾಲ: ಹರೇಕಳ -ಅಡ್ಯಾರು ಅಣೆಕಟ್ಟು ಕಾಮಗಾರಿಗೆ ಚಂಡಾಮಾರುತದಿಂದಾಗಿ ಕೋಟ್ಯಂತರ ನಷ್ಟ ಉಂಟಾಗಿದೆ. ಈ ಬಗ್ಗೆ ಕಂಪೆನಿಗೆ ಆಗಿರುವ ನಷ್ಟದ ಕುರಿತು ರಾಜ್ಯ ಸರಕಾರದ ಗಮನಕ್ಕೆ ತರುತ್ತೇನೆ ಎಂದು ಅಲೆಮಾರಿ ಮತ್ತು ಅರೆ ಅಲೆಮಾರಿ ನಿಗಮದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದರು.ಅವರು ರೂ.200 ಕೋಟಿ ವೆಚ್ಚದಲ್ಲಿ ನಿರ್ಮಾಣ ಹಂತದಲ್ಲಿರುವ ಹರೇಕಳ-ಅಡ್ಯಾರು ಅಣೆಕಟ್ಟಿನ ಕಾಮಗಾರಿಗೆ ಚಂಡಾಮಾರುತದ ಪರಿಣಾಮ ನದಿ ನೀರು ನುಗ್ಗಿ ಆಗಿರುವ ಅನಾಹುತವನ್ನು ದೋಣಿ ಮುಖೇನ ತೆರಳಿ ಹರೇಕಳ ಗ್ರಾಮಸ್ಥರ ಜೊತೆಗೆ ವೀಕ್ಷಿಸಿ ಮಾತನಾಡಿದರು. ತೌಟ್ಕೇ ಚಂಡಮಾರುತದ ಪರಿಣಾಮ ಮಂಗಳೂರು ಕ್ಷೇತ್ರದಲ್ಲಿಯೇ ಬಹಳಷ್ಟು ಅನಾಹುತಗಳು ಸಂಭವಿಸಿದೆ. ಉಳ್ಳಾಲ ಕೋಡಿಯಿಂದ ಮೊಗವೀರಪಟ್ನ, ಸೋಮೇಶ್ವರ ಉಚ್ಚಿಲದವರೆಗೆ ಚಂಡಾಮಾರುತದ ಪರಿಣಾಮವನ್ನು ಉಸ್ತುವಾರಿ ಸಚಿವರ ಭೇಟಿ ವೇಳೆ ವೀಕ್ಷಿಸಿದ್ದೇನೆ. ಹರೇಕಳ ಗ್ರಾಮಕ್ಕೆ ಸರಕಾರ ನೀಡಿರುವ ಉತ್ತಮ ಯೋಜನೆಯಾದ ಹರೇಕಳ -ಅಡ್ಯಾರು ಅಣೆಕಟ್ಟು ನಿರ್ಮಾಣ ಕಾಮಗಾರಿಗೂ ಬಹಳ ನಷ್ಟ ಉಂಟಾಗಿದೆ. ಚಂಡಾಮಾರುತದ ಪರಿಣಾಮದಿಂದಾಗಿ ಕಾಮಗಾರಿಗೆ ಬೇಕಾದ ಸಿಮೆಂಟ್, ಸ್ಟೀಲ್ , ಯಂತ್ರಗಳು ನೀರಿನಲ್ಲಿ ಮುಳುಗಿ ರೂ.10 ಕೋಟಿ ನಷ್ಟ…
ಉಳ್ಳಾಲ: ಪಾರ್ಸೆಲ್ ತಿಂಡಿ ಪಡೆದ ಹಣವನ್ನು ಕೇಳಿದ ಕ್ಯಾಷಿಯರ್ ತಲೆಗೆ ದೊಣ್ಣೆಯಿಂದ ಹೊಡೆದು ಕೊಲೆಗೆ ಯತ್ನಿಸಿದ್ದಲ್ಲದೆ, ಹೊಟೇಲಿನೊಳಗೆ ಅಕ್ರಮ ಪ್ರವೇಶ ಮಾಡಿ ದಾಂಧಲೆ ನಡೆಸಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮದನಿನಗರದಲ್ಲಿ ಭಾನುವಾರ ತಡರಾತ್ರಿ ವೇಳೆ ಸಂಭವಿಸಿದೆ.ಮದನಿನಗರ ಬಳಿಯಿರುವ ಕ್ಯಾಲಿಕಟ್ ಕಿಚನ್‍ಗೆ ಆರೋಪಿಗಳಾದ ಲುಕ್ಮಾನ್, ಅಜ್ಮಾಲ್, ರಿಜ್ವಾನ್, ಇಮ್ರಾನ್, ನವಾಝ್, ನಿಝಾಂ , ಇರ್ಫಾನ್ ಮತ್ತು ತೌಫೀಕ್ ಸೇರಿದಂತೆ ತಂಡ ಬಂದಿತ್ತು. ಇವರು ಹೊರಗಿನಿಂದ ನಿಂತು ತಿಂಡಿ ತಿನಿಸಿಗೆ ಆರ್ಡರ್ ಮಾಡಿದಾಗ ಕ್ಯಾಷಿನಲ್ಲಿದ್ದ ಸತೀಶ್ ಅವರು ತಿಂಡಿಯ ಮೊತ್ತವನ್ನು ಪಾವತಿಸುವಂತೆ ಹೇಳಿದ್ದರು. ಇದರಿಂದ ರೊಚ್ಚಿಗೆದ್ದ ತಂಡ ಇನ್ನಷ್ಟು ಜನರನ್ನು ಸೇರಿಸಿಕೊಂಡು ಕೈಯಲ್ಲಿ ಕಲ್ಲು ದೊಣ್ಣೆಗಳನ್ನು ಹಿಡಿದುಕೊಂಡು ಬಂದು ಹೊಟೇಲಿನ ಒಳಗೆ ಅಕ್ರಮವಾಗಿ ಪ್ರವೇಶಿಸಿ ಏ ಬೇವರ್ಸಿಗಳಾ ನಿಮಗೆ ನಾವು ಕೇಳುವಾಗ ಉಚಿತ ತಿಂಡಿ ಕೊಡಲು ಆಗುವುದಿಲ್ಲವಾ? ನಾವು ನಿಮಗೆ ಹಣ ಕೊಡಬೇಕಾ’ ಎಂದು ಬೈಯ್ಯುತ್ತಾ ಕೌಂಟರಿನಲ್ಲಿದ್ದ ಸತೀಶ್ ಅವರ ಮೇಲೆ ಲುಕ್ಮಾನ್ ಎಂಬಾತ ಕೈಯಲ್ಲಿದ್ದ ದೊಣ್ಣೆಯಿಂದ ತಲೆಗೆ ಜೋರಾಗಿ ಬಡಿದಿದ್ದಾರೆ.…
ಉಳ್ಳಾಲ: ಲಾಕ್ ಡೌನ್ ನಡುವೆಯೇ ಯುವಕನೋರ್ವ ನಾಪತ್ತೆಯಾಗಿರುವ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಲಪಾಡಿ ಗ್ರಾಮದ ವಿದ್ಯಾನಗರ ಬಳಿಯ ಫಲಾಹ್ ಶಾಲೆ ಬಳಿ ನಿವಾಸಿ ಯು.ನಝೀರ್ ಎಂಬವರ ಪುತ್ರ ಶೇಖ್ ಝಾಯಿದ್ ನಿಝ್ಮಾನ್ (19) ನಾಪತ್ತೆಯಾದವರು. ಮೇ.13 ರಂದು ಮದ್ಯಾಹ್ನ ಮನೆಯಿಂದ ಹೊರಹೋದವರು ಮನೆಗೆ ವಾಪಸ್ಸಾಗಿಲ್ಲ. ಮನೆ ಸುತ್ತಮುತ್ತಲು, , ಸಂಬಂಧಿಕರ ಮನೆ, ಸ್ನೇಹಿತರ ಮನೆಯಲ್ಲಿ ಹುಡುಕಾಡಿದರೂ ಪತ್ತೆಯಾಗಿಲ್ಲ. ಈ ಬಗ್ಗೆ ತಂದೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಂತೆ ನಾಪತ್ತೆ ಪ್ರಕರಣ ದಾಖಲಾಗಿದೆ.

