UN networks ಉಳ್ಳಾಲ: ಹಿಂದೂ ದೇವರುಗಳ ನಿಂದಿಸಿದ ತೊಕ್ಕೊಟ್ಟು ನಿವಾಸಿ ಉದ್ಯಮಿಯನ್ನು ಉಳ್ಳಾಲ ಪೊಲೀಸರು ಇಂದು ಬಂಧಿಸಿದ್ದಾರೆ. ಆರೋಪಿ ಹಿಂದೂ ದೇವರುಗಳ ವಿರುದ್ಧ ನಿಂದನೆಯ ಮಾತುಗಳನ್ನು ಆಡಿದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.ತೊಕ್ಕೊಟ್ಟು ಸ್ಮಾರ್ಟ್ ಸಿಟಿ ವಸತಿ ಸಂಕೀರ್ಣದಲ್ಲಿ ಇರುವ ಸ್ವಾಲಿಝ್ ಇಕ್ಬಾಲ್ (45) ಬಂಧಿತ. ಫರ್ನಿಚರ್ ಅಂಗಡಿ ಸಹಿತ ವಿವಿಧ ಉದ್ಯಮಗಳನ್ನು ನಡೆಸುತ್ತಿದ್ದ ಸ್ವಾಲಿಝ್ ಇಕ್ಬಾಲ್ ಚಾಮುಂಡೇಶ್ವರಿ ದೇವಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ವೀಡಿಯೋ ಮೂರು ದಿನಗಳಿಂದ ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಆಡಿಯೋ ವೈರಲ್ ಆಗುತ್ತಿದ್ದಂತೆ, ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಹಿಂದೂ ಸಂಘಟಕರು ದೂರು ದಾಖಲಿಸಿದ್ದರು. ಅದರಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲಾಗಿದ್ದು, ಇಂದು ಉಳ್ಳಾಲ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Author: UllalaVani
ಉಳ್ಳಾಲ: ಸೋಮೇಶ್ವರ ಹಿಂದೂ ರುದ್ರಭೂಮಿ ತಡೆಗೋಡೆ ಸಮುದ್ರಪಾಲಾದ ಪ್ರದೇಶಕ್ಕೆ ಬಂದರು ಅಧಿಕಾರಿಗಳ ಜೊತೆಗೆ ಸೋಮೇಶ್ವರ ಪುರಸಭೆ ಪೌರಾಯುಕ್ತೆ ವಾಣಿ ಆಳ್ವ ಭೇಟಿ ನೀಡಿದರು.ಸದ್ಯಕ್ಕೆ ತಾತ್ಕಾಲಿಕ ಕಾಮಗಾರಿಯ ಅಂದಾಜು ಮತ್ತು ಹೆಚ್ಚಿನ ಪರಿಹಾರ ಒದಗಿಸುವ ಕುರಿತು ಅಧಿಕಾರಿಗಳ ಜೊತೆಗೆ ಚರ್ಚಿಸಿರುವುದಾಗಿ ವಾಣಿ ಆಳ್ವ ತಿಳಿಸಿದ್ದಾರೆ.
ಉಳ್ಳಾಲ: ಅರಬ್ಬೀ ಸಮುದ್ರದ ಆಗ್ನೇಯ ಭಾಗದಲ್ಲಿ ಆಗಿರುವ ವಾಯುಭಾರ ಕುಸಿತದ ಎಫೆಕ್ಟ್ ಉಳ್ಳಾಲಕ್ಕೂ ತಟ್ಟಿದೆ. 50 ಕ್ಕೂ ಅಧಿಕ ಮನೆಗಳು ಅಪಾಯದಂಚಿನಲ್ಲಿದ್ದರೆ, ಸೋಮೇಶ್ವರ ಹಿಂದೂ ರುದ್ರಭೂಮಿಯ ತಡೆಗೋಡೆ ಪಾಲಾಗಿದೆ. ಉಳ್ಳಾಲದ ಸುಭಾಷನಗರ, ಕೈಕೋ, ಹಿಲೆರಿಯಾನಗರ, ಮುಕ್ಕಚ್ಚೇರಿ, ಒಂಭತ್ತುಕೆರೆ, ಸೋಮೇಶ್ವರ , ಉಚ್ಚಿಲ ಭಾಗದಲ್ಲಿ ಸಮುದ್ರದ ಅಲೆಗಳು ಕೆಲ ಮೀ. ಎದುರುಬಂದಿದೆ. ತೆಂಗಿನಮರಗಳು ಸಮುದ್ರಪಾಲಾದರೆ, ಸೋಮೇಶ್ವರದ ಹಿಂದೂ ರುದ್ರಭೂಮಿಯ ದೊಡ್ಡದಾದ ತಡೆಗೋಡೆ ಕಡಲಿಿಿಿನ ಪಾಲಾಗಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಕಾರವಾರ ಸೇರಿದಂತೆ ಜಿಲ್ಲೆಯ ಕರಾವಳಿಯ ವಿವಿಧೆಡೆ ಮಳೆಯಾಗಲಿದೆ. ಸಮುದ್ರದ ಆಗ್ನೆಯ ಭಾಗದಲ್ಲಿ ವಾಯುಭಾರ ಕುಸಿತವಾಗಿದ್ದು, ಮೇ 14 ರ ನಂತರ ಚಂಡಮಾರುತವಾಗಿ ಪರಿವರ್ತನೆಯಾಗಬಹುದು.ಹೀಗಾಗಿ ಮೇ. 15 ಹಾಗೂ 16 ರಂದು ಕರಾವಳಿ ಜಿಲ್ಲೆಗಳಲ್ಲಿ 120-200 ಮಿ.ಮೀ ಮಳೆ ಬೀಳುವ ಮುನ್ಸೂಚನೆಯಿದ್ದು, ಜಿಲ್ಲೆಯ ಎಲ್ಲಾ ಮೀನುಗಾರರು ಹಾಗೂ ಸಾರ್ವಜನಿಕರು ಸಮುದ್ರದ ಕಡೆಗೆ ಬರದಿರುವಂತೆ ಎಚ್ಚರಿಕೆ ನೀಡಲಾಗಿದೆ.ಮೀನುಗಾರಿಕೆಗೆ ತೆರಳಿರುವ ಮೀನುಗಾರರು ಕೂಡಲೇ ದಡಕ್ಕೆ ಮರಳುವಂತೆ ಕೋಸ್ಟ್ ಗಾರ್ಡ್ ಮತ್ತು ಮೀನುಗಾರಿಕಾ ಇಲಾಖೆಯಿಂದ…
ತೊಕ್ಕೊಟ್ಟು: ಅಂಗಡಿಯಲ್ಲಿದ್ದ ಮಹಿಳೆಯಲ್ಲಿ ನೀರು ಕೇಳಿ ಕಳ್ಳರಿಬ್ಬರು ನಗದು ದೋಚಿದ ಘಟನೆ ತೊಕ್ಕೊಟ್ಟು ಒಳಪೇಟೆಯ ಟಿ.ಸಿ ರೋಡ್ ನಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಟಿ.ಸಿ ರೋಡಿನಲ್ಲಿರುವ ಅನುಸೂಯ ಎಂಬವರ ಅಂಗಡಿಯಿಂದ ನಗದು ಕಳವು ನಡೆದಿದೆ. ಇಂದು ಬೆಳಿಗ್ಗೆ ಬೈಕಿನಲ್ಲಿ ಬಂದಿದ್ದ ಆಗಂತುಕನೋರ್ವ ಅಂಗಡಿಯಲ್ಲಿ ಸಿಗರೇಟು ಕೇಳಿದ್ದನು. ಸಿಗರೇಟು ಪಡೆದು ಅಲ್ಲಿಯೇ ಸೇದಲು ಮುಂದಾದಾಗ ಅನುಸೂಯ ಅವರು ಅಲ್ಲಿ ಸೇದದಂತೆ ಸೂಚಿಸಿದ್ದರು. ಆ ಬಳಿಕ ಕುಡಿಯಲು ನೀರು ಕೇಳಿದ್ದಾನೆ. ಇದೇ ವೇಳೆ ಅವರು ಫ್ರಿಡ್ಜ್ ನಿಂದ ನೀರು ತೆಗೆಯುವಷ್ಟರಲ್ಲಿ ಅಂಗಡಿಯೊಳಗೆ ನುಗ್ಗಿದ ಕಳ್ಳ ಅಲ್ಲಿದ್ದ ಪರ್ಸನ್ನು ಎಳೆದೊಯ್ದು, ತೊಕ್ಕೊಟ್ಟು ಜಂಕ್ಷನ್ ಕಡೆಗೆ ಬೈಕಿನಲ್ಲಿ ಪರಾರಿಯಾಗಿದ್ದಾನೆ. ಪರ್ಸಿನಲ್ಲಿದ್ದ ರೂ.35,000 ನಗದು ಕಳ್ಳಕಳವುಗೈದಿದ್ದಾನೆ. ಅಂಗಡಿಗೆ ಸಾಮಗ್ರಿಗಳು ಬರುವ ಸಮಯವಾಗಿದ್ದರಿಂದ ಪರ್ಸಿನಲ್ಲಿ ನಗದನ್ನು ಇಟ್ಟಿದ್ದರು. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಳ್ಳರ ಸುಳಿವು ಎದುರುಗಡೆ ಇರುವ ಖಾಸಗಿ ನರ್ಸಿಂಗ್ ಕಾಲೇಜಿನ ಸಿಸಿಟಿವಿಯಲ್ಲಿ ದಾಖಲೆಯಾಗಿರುವ ಸಾಧ್ಯತೆ ಇದೆ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ.
Un networks ಮಂಗಳೂರು : ಮದುವೆ ಮನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರನ್ನು ಸೇರಿಸಿ ಡಿ.ಜೆ ಹಾಕಿ ಡ್ಯಾನ್ಸ್ ಮಾಡಿರುವ ಹಿನ್ನೆಲೆಯಲ್ಲಿ ಅಡ್ಯಾರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೀಡಿರುವ ದೂರಿನಂತೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ರಾಜ್ಯ ಸರಕಾರದ ಕೋವಿಡ್-19 ನಿಂiÀiಮಾವಳಿಗಳನ್ನು ಉಲ್ಲಂಘಿಸಿರುವ ಕಾಯ್ದೆಗಳಡಿ ಮದುಮಗ ಹಾಗೂ ಆತನ ತಂದೆಯ ವಿರುದ್ಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಡ್ಯಾರು ಗುಡ್ಡೆಮನೆಯ ರಂಜಿತ್ ಎಂಬವರ ಮದುವೆ ಮೇ. 9ರಂದು ಸಿದ್ದಕಟ್ಟೆಯಲ್ಲಿ ನಡೆದಿತ್ತು.ಅದಕ್ಕಾಗಿ ಅಡ್ಯಾರು ಗ್ರಾಮ ಪಂಚಾಯಿತಿನಿಂದ 25 ಮಂದಿ ಭಾಗವಹಿಸುವ ಕುರಿತು ಅನುಮತಿಯನ್ನು ಪಡೆದಿದ್ದರು. ಮದುವೆಯಿಂದ ವಾಪಸ್ಸಾದ ನಂತರ ಮನೆಯಲ್ಲಿ ರಾತ್ರಿ ಮೈಕ್ ಅಳವಡಿಸಿ ಸಾರ್ವಜನಿಕರನ್ನು ಸೇರಿಸಿಕೊಂಡು ಡಿಜೆ ಆಯೋಜಿಸಿದ್ದರು. ಈ ಕುರಿತ ವೀಡಿಯೋ ಒಂದು ವೈರಲ್ ಆದ ಹಿನ್ನೆಲೆಯಲ್ಲಿ ಅಡ್ಯಾರು ಗ್ರಾ.ಪಂ.ನ ಅಭಿವೃದ್ಧಿ ಅಧಿಕಾರಿ ಕೃಷ್ಣ ನಾಯಕ್ ಅವರು ಮದುಮಗ ರಂಜಿತ್ ಮತ್ತವರ ತಂದೆ ದಾಮೋದರ್ ಶೆಟ್ಟಿಗಾರ್ ವಿರುದ್ಧ ದೂರು ದಾಖಲಿಸಿದ್ದರು. ಅದರಂತೆ ವಿಪತ್ತು ನಿರ್ವಹಣಾ ಕಾಯ್ದೆಯಡಿ…
UN networks ಉಳ್ಳಾಲ: ಸೋಮೇಶ್ವರ ಪುರಸಭೆ ವ್ಯಾಪ್ತಿಯ ಕೋವಿಡ್ ಟಾಸ್ಕ್ ಫೋರ್ಸ್‍ನಿಂದ ಸೋಂಕಿತರ ಹಾಗೂ ಅವರ ಮನೆಮಂದಿಯನ್ನು ಆದಷ್ಟು ಕೋವಿಡ್ ಸೆಂಟರಿಗೆ ಹಾಗೂ ಆಸ್ಪತ್ರೆಗೆ ದಾಖಲಿಸುವಂತೆ ಮನವೊಲಿಸುವ ಪ್ರಯತ್ನಗಳಾಗಬೇಕು. ಈ ಮೂಲಕ ಕೊರೊನಾ ಸೋಂಕು ತಡೆಗಟ್ಟಲು ಸಾಧ್ಯ ಎಂದು ಶಾಸಕ ಯು.ಟಿ ಖಾದರ್ ಹೇಳಿದರು. ಅವರು ಸೋಮೇಶ್ವರ ಪುರಸಭೆಯಲ್ಲಿ ಸೋಮವಾರ ಅಧಿಕಾರಿಗಳ, ಆಶಾ ಕಾರ್ಯಕರ್ತೆಯರ, ಅಂಗನವಾಡಿ ಕಾರ್ಯಕರ್ತೆಯರ, ಪುರಸಭೆ ಸಿಬ್ಬಂದಿಗಳ ಜೊತೆಗೆ ಆಯೋಜಿಸಿದ್ದ ಕೋವಿಡ್ ಪರಿಶೀಲನಾ ಸಭೆ ಹಾಗೂ ಸೇಫ್ಟಿ ಕಿಟ್ ವಿತರಣೆ ನಡೆಸಿ ಮಾತನಾಡಿದರು.ಸೋಮೇಶ್ವರ ಪುರಸಭೆಯ 23 ವಾರ್ಡುಗಳನ್ನು ನಾಲ್ಕು ಝೋನ್ ಆಗಿ ವಿಭಾಗಿಸಿ ಆಯಾಯ ಝೋನ್ ಗಳಿಗೆ ಅಧಿಕಾರಿಯನ್ನು ನೇಮಕಗೊಳಿಸಲಾಗಿದೆ. ಅವರ ಮೂಲಕ ವಾರ್ಡ್ ಸಮಿತಿ ಸಭೆಯನ್ನು ಎರಡು ದಿನಕ್ಕೊಮ್ಮೆ ನಡೆಸಲು ಸೂಚಿಸಲಾಗಿದೆ. ಸೋಂಕಿತರು ಕಂಡುಬಂದಲ್ಲಿ ಮನೆಮಂದಿ ಜೊತೆಗೆ ಟಾಸ್ಕ್ ಫೋರ್ಸ್ ತಂಡ ಮಾತುಕತೆ ನಡೆಸಿ ಅವರನ್ನು ಕೋವಿಡ್ ಕೇರ್ ಸೆಂಟರಿಗೆ ಹೋಗುವಂತೆ ಮನವೊಲಿಸುವ ಪ್ರಯತ್ನಗಳಾಗಬೇಕು. ಅದಕ್ಕಾಗಿ ಬೆಳ್ಮದಲ್ಲಿ ನೋಡೆಲ್ ಸೆಂಟರನ್ನು ಮಾಡಲಾಗಿದೆ. ಕೋವಿಡ್ ಸೆಂಟರಿನಲ್ಲಿ ಔಷಧಿ ಹಾಗೂ…
UN networksಕೋಟೆಕಾರು: ಕೋಟೆಕಾರು ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ 178 ಸೋಂಕಿತರಿದ್ದಾರೆ. ಇವರಲ್ಲಿ 78 ಮಂದಿ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವಿದ್ಯಾರ್ಥಿಗಳಾಗಿದ್ದಾರೆ. ಬೀರಿ ಕೆ2 ಕನ್ ಸ್ಟ್ರಕ್ಷನ್ ಅಡಿ ಕಾರ್ಯ ನಿರ್ವಹಿಸುವ 14 ಮಂದಿ ಕಾರ್ಮಿಕರಿಗೆ ಪಾಸಿಟಿವ್ ಆಗಿದೆ. ಎಲ್ಲರನ್ನೂ ಐಸೊಲೇಷನ್ ನಲ್ಲಿಡಲಾಗಿದೆ ಎಂದು ಕಿರಿಯ ಆರೋಗ್ಯ ನಿರೀಕ್ಷಕ ವಿಕ್ರಮ್ ತಿಳಿಸಿದ್ದಾರೆ. ಕೋಟೆಕಾರು ಪಟ್ಟಣ ಪಂಚಾಯಿತಿನಲ್ಲಿ ಅಧಿಕಾರಿಗಳ ಜೊತೆಗೆ ಸೋಮವಾರ ನಡೆದ ಕೋವಿಡ್ ನಿಗ್ರಹ ಕುರಿತ ಪರಿಶೀಲನಾ ಸಭೆಯಲ್ಲಿ ತಿಳಿಸಲಾಗಿದೆ. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಯು.ಟಿ.ಖಾದರ್ 15 ದಿನಗಳಿಗೆ ಸಭೆ ಸೇರಿದಲ್ಲಿ ಟಾಸ್ಕ್ ಫೋಸ್೯ ಆಗುವುದಿಲ್ಲ, ಎರಡು ದಿನಗಳಿಗೊಮ್ಮೆ ಫೀಲ್ಡಿಗೆ ಹೋಗಲೇಬೇಕು.ಬೀಟ್ ಪೊಲೀಸ್ ಕಡ್ಡಾಯವಾಗಿ ಬರಲೇಬೇಕು ಎಂದು ಹೇಳಿದರು. ಟಾಸ್ಕ್ ಫೋಸ್೯ ಇಷ್ಟೇ ಜನರು ಬೇಕೆಂಬ ವಿಚಾರವಿಲ್ಲ. ತುರ್ತು ಸ್ಥಿತಿ ಸಂದರ್ಭದಲ್ಲಿ ಇರುವಷ್ಟು ಜನರನ್ನು ತಂಡವಾಗಿ ರಚಿಸಿ ಜನರಿಗೆ ನೆರವಾಗಿ. ಸದ್ಯ ಇರುವ ಸಿಬ್ಬಂದಿಯಲ್ಲಿ ಒಬ್ಬರಿಗೆ ನಾಲ್ಕು ವಾಡ್೯ ವಿಂಗಡಿಸಿ ಕಾರ್ಯಾಚರಿಸಿ.ಕೋವಿಡ್ ಪಿಡುಗು ಮೂರು ವರ್ಷಗಳ ಕಾಲ ಮುಂದುವರಿಯುವ ಲಕ್ಷಣಗಳಿದ್ದು, ಲಸಿಕೆ ಮಾತ್ರ…
UN networks ತೊಕ್ಕೊಟ್ಟು: ಖಾದರ್ ಅವರ ಕ್ಷೇತ್ರದ ಚೆಂಬುಗುಡ್ಡೆಯ ಸ್ಮಶಾನಕ್ಕೆ ಹೋಗುವ ರಸ್ತೆ ಅವ್ಯವಸ್ಥೆಯಿಂದ ಕೂಡಿದೆ. ಇತ್ತೀಚೆಗೆ ಹೆಣವೊಂದು ರಸ್ತೆ ಅವ್ಯವಸ್ಥೆಯಿಂದ ಆಂಬ್ಯುಲೆನ್ಸ್ ನಿಂದ ಹೊರಬೀಳುವುದರಿಂದ ತಪ್ಪಿತ್ತು. ನಗರೋತ್ಥಾನದಲ್ಲಿ ಅನುದಾನವಿದ್ದರೂ ರಸ್ತೆ ದುರಸ್ತಿಗೆ ಮುಂದಾಗದಿರುವುದು ವಿಪರ್ಯಾಸ ಎಂದು ದಿ ಮೈಸೂರ್ ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ. ನಿಗಮದ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಹೇಳಿದರು. ತೊಕ್ಕೊಟ್ಟು ಕಾಪಿಕಾಡಿನಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಬೋಳಿಯಾರ್, ಜಿಲ್ಲೆಯಲ್ಲಿ ಕೋವಿಡ್ ಅಬ್ಬರ ಹೆಚ್ಚಿದ್ದರೂ, ಶಾಸಕರು ನಿಯಂತ್ರಿಸಲು ಅವಿರತವಾಗಿ ದುಡಿಯುತ್ತಿದ್ದಾರೆ. ಜಿಲ್ಲಾಡಳಿತ ಪೊಲೀಸ್ ಇಲಾಖೆ ಸೇರಿದಂತೆ ಕೊರೊನಾ ವಾರಿಯರ್ ಗಳ ಸೇವೆಯೂ ಬಹಳಷ್ಟಿದೆ. ಜಿಲ್ಲೆಯ ಮೂಲೆ ಮೂಲೆಗಳಲ್ಲಿ ಕೋವಿಡ್ ವಾರ್ ರೂಂ ಪರಿಣಾಮಕಾರಿಯಾಗಿ ಕಾರ್ಯಚರಿಸಿ ಸೋಂಕಿತರಿಗೆ ಬೇಕಾದ ಆಸ್ಪತ್ರೆ, ಐಸಿಯು ವನ್ನು ಒದಗಿಸುವಲ್ಲಿ ಬೆಳಿಗ್ಗೆ 6 ರಿಂದ 9ರ ತನಕ ಕಾರ್ಯಾಚರಿಸುತ್ತಿದೆ. ಕೆಲಸ ಮಾಡುವುದಕ್ಕಿಂತ ಜಾಸ್ತಿ ಮಂಗಳೂರು ಕ್ಷೇತ್ರದ ಶಾಸಕ ಯು.ಟಿ ಖಾದರ್ ಸುದ್ಧಿಗೋಷ್ಠಿಗಳನ್ನು ಮಾಡುತ್ತಿದ್ದಾರೆ. ಮಂಗಳೂರು ಕ್ಷೇತ್ರ ಬಿಟ್ಟು ಮಂಗಳೂರು ದಕ್ಷಿಣ ಕ್ಷೇತ್ರದ ಬಗ್ಗೆ ಮಾತನಾಡುತ್ತಿದ್ದಾರೆ.…
UN networks ಉಳ್ಳಾಲ: ವಾರಾಂತ್ಯದ ಕಫ್ರ್ಯೂ ಹಿನ್ನೆಲೆಯಲ್ಲಿ ಉಳ್ಳಾಲದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ಕಮೀಷನರ್ ಆದೇಶದಂತೆ ಒಳರಸ್ತೆಗಳಲ್ಲಿ ಓಡುವ ವಾಹನಗಳ ಮೇಲೆ ಹೆಚ್ಚಿನ ನಿಗಾ ವಹಿಸುತ್ತಿದ್ದಾರೆ. ಉಳ್ಳಾಲದ ಅಲೇಕಳ ಮಂಚಿಲದಲ್ಲಿ ಉಳ್ಳಾಲ ಎಸ್.ಐ ಪ್ರದೀಪ್ ನೇತೃತ್ವದಲ್ಲಿ ಪೊಲೀಸ್ ರೈಡ್ ಹೊಡೆದಾಗ ತ್ರಿಬಲ್ ರೈಡ್ ಹೊಡೆಯುತ್ತಿದ್ದ ಬೈಕ್ ಸವಾರರು ಸೇರಿದಂತೆ ಮಗುವನ್ನು ಎತ್ತಿಕೊಂಡು ಕುಟುಂಬವೊಂದು ಎದ್ದೂಬಿದ್ದು ಓಡಿದ ವೀಡಿಯೋ ವೈರಲ್ ಆಗಿದೆ. ಉಳ್ಳಾಲದ ಎಸ್.ಐ ಪ್ರದೀಪ್ ಜೀಪ್ ಬರುತ್ತಿದ್ದಂತೆ ಬೈಕಿನಲ್ಲಿದ್ದ ಇಬ್ಬರು ಹಾರಿ ಪರಾರಿಯಾದರೆ, ಬೈಕ್ ಸವಾರನನ್ನು ಪೊಲೀಸರು ಹಿಡಿದು ಬೈಕನ್ನು ವಶಪಡಿಸಿಕೊಂಡಿದ್ದಾರೆ. ಇದೇ ವೇಳೆ ರಸ್ತೆ ಬದಿಯಲ್ಲಿ ಮಕ್ಕಳನ್ನು ಎತ್ತಿಕೊಂಡು ಸುತ್ತಾಡುತ್ತಿದ್ದ ಕುಟುಂಬವೊಂದು ಮನೆಯೊಳಗೆ ಓಡೋಡಿ ಪೊಲೀಸರ ಕಣ್ಣು ತಪ್ಪಿಸಿದ್ದಾರೆ. ಈ ಕುರಿತ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದೀಗ ವೈರಲ್ ಆಗಿದೆ.
ಗ್ರಾಮಚಾವಡಿ: ಪಜೀರು ಮರ್ಸಿಯಮ್ಮನವರ ಹಳೇ ಇಗರ್ಜಿ ಕಟ್ಟಡಕ್ಕೆ ಸಿಡಿಲು ಬಡಿದು ಹಾನಿಯಾಗಿದೆ. ಹೊಸ ಇಗರ್ಜಿಯ ಕಟ್ಟಡ ಗ್ರಾಮಚಾವಡಿ ಜಂಕ್ಷನ್ನಿಗೆ ಹತ್ತಿರವಾಗಿದ್ದು, ಪಜೀರು ಪ್ರದೇಶದಲ್ಲಿರುವ ಹಳೇ ಚರ್ಚ್‍ನಲ್ಲಿಯೂ ಪೂಜಾ ವಿಧಾನಗಳು ನಡೆಯುತಿತ್ತು. ಹಳೇಯ ಚರ್ಚ್ ಕಟ್ಟಡ ಗೋಪುರದ ಹೆಂಚುಗಳು ಹಾಗೂ ಶೀಟ್ ಗೆ ಹಾನಿಯಾಗಿದೆ. ಘಟನೆ ವೇಳೆ ಚರ್ಚ್ ಕಟ್ಟಡದಲ್ಲಿ ಯಾರೂ ಇರದಿರುವುದರಿಂದ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಪಜೀರು ಗ್ರಾ.ಪಂ ಸದಸ್ಯರು ಭೇಟಿ ನೀಡಿ ಹಾನಿ ವರದಿ ಸಂಗ್ರಹಿಸಿದ್ದಾರೆ.

