UN networks ಉಳ್ಳಾಲ: ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಸೋಂಕು ತಡೆಗಟ್ಟಲು ಮತ್ತು ಕೋವಿಡ್ ಸೋಂಕಿತರೊಂದಿಗೆ ಸಂಪರ್ಕ ಸಾಧಿಸಲು ಪುರಸಭಾ ಕಚೇರಿಯಲ್ಲಿ ಕೋವಿಡ್ ಸಹಾಯವಾಣಿಯನ್ನು ಆರಂಭಿಸಿದ್ದು, ಸೋಂಕಿತರೊಂದಿಗೆ ವಿಡಿಯೋ ಕಾಲ್ ಮೂಲಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಮಾಲೋಚನೆ ನಡೆಯಲಿದೆ ಎಂದು ಪುರಸಭೆಯ ಮುಖ್ಯಾಧಿಕಾರಿ ವಾಣಿ ವಿ. ಆಳ್ವ ತಿಳಿಸಿದ್ದಾರೆ. ಸೋಮೇಶ್ವರ ಪುರಸಭಾ ಕಚೇರಿಯಲ್ಲಿ ಸಹಾಯವಾಣಿಗೆ ಚಾಲನೆ ನೀಡಿ ಮಾತನಾಡಿದ ಅವರು : ಪುರಸಭೆ ವ್ಯಾಪ್ತಿಯಲ್ಲಿ ಕೊರೋನಾ ಎರಡನೇ ಅಲೆಯಲ್ಲಿ ದಿನ ನಿತ್ಯ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿವೆ. ಸರಕಾರದ ನಿಯಮದಂತೆ ಜನರಲ್ಲಿ ಅಂತರ ಕಾಯ್ದುಕೊಳ್ಳಲು ಮತ್ತು ಅನವಶ್ಯಕವಾಗಿ ಹೊರಗಡೆ ಓಡಾಡದಂತೆ ಜನತಾ ಕಫ್ರ್ಯೂ ಪುರಸಭಾ ವ್ಯಾಪ್ತಿಯಲ್ಲಿ ವಿಧಿಸಿದೆ. ಈ ಹಿನ್ನೆಲೆಯಲ್ಲಿ ವಿವಿಧ ಕೆಲಸ ಕಾರ್ಯಗಳಿಗೆ ಸಾರ್ವಜನಿಕರು ಅನವಶ್ಯಕವಾಗಿ ಕಛೇರಿಗೆ ಆಗಮಿಸಿ ಕಾಯುವುದನ್ನು ತಪ್ಪಿಸಲು ಮತ್ತು ಸಾರ್ವಜನಿಕರಿಗೆ ಸುಲಭವಾಗಿ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಲು ವಿಭಾಗವಾರು ಸಿಬ್ಬಂದಿಗಳನ್ನು ನೇಮಕ ಮಾಡಿ ಪುರಸಭೆ ಕಛೇರಿಗೆ ಬಂದು ಅಲೆದಾಟ ಮಾಡುವುದನ್ನು ತಪ್ಪಿಸಲು ನೇರವಾಗಿ ತಮ್ಮ ಕೆಲಸ ಯಾರಿಂದ…
Author: UllalaVani
UN networks ಉಳ್ಳಾಲ: ಗ್ರಾಮೀಣ ಭಾಗಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅಧಿಕಾರಿಗಳು ಮಾನಸಿಕವಾಗಿ ಸದೃಢತೆಯನ್ನು ಕಾಪಾಡಿಕೊಂಡು ಕರ್ತವ್ಯ ನಿಭಾಯಿಸಬೇಕಿದೆ. ಸೋಂಕಿತರು ಸಾಯುವಂತಹ ಪರಿಸ್ಥಿತಿ ಎದುರಾಗಬಾರದು. ವೈಯಕ್ತಿಕ ನಿರ್ಧಾರಗಳಿಂದಲೇ ಸಾವುಗಳಾಗುತ್ತಿವೆ ಎಂದು ಶಾಸಕ ಯು.ಟಿ ಖಾದರ್ ಹೇಳಿದರು. ದೇರಳಕಟ್ಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಜರಗಿದ ಗ್ರಾಮಾಂತರ ಭಾಗಗಳಲ್ಲಿ ಕೊರೊನಾ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಶಾಸಕರ ನೇತೃತ್ವದಲ್ಲಿ ಜಿಲ್ಲೆಯ ಅಧಿಕಾರಿಗಳು , ಮಂಗಳೂರು ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಅಧ್ಯಕ್ಷರುಗಳ ಸಮ್ಮುಖದಲ್ಲಿ ಜರಗಿದ ತುರ್ತು ಸಭೆಯಲ್ಲಿ ಮಾತನಾಡಿದರು. ಫಸ್ಟ್ ಡೋಸ್, ಸೆಕೆಂಡ್ ಡೋಸ್ ಜೊತೆಗೆ ಥರ್ಡ್ ಡೋಸ್ ಆಗಿ ಶಾಶ್ವತ ಮಾಸ್ಕನ್ನು ಧರಿಸುವುದೇ ಸೋಂಕಿನಿಂದ ತಪ್ಪಿಸಬಹುದು. ಲಸಿಕೆ ಕೊರತೆ ಕುರಿತು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮಾತನಾಡುವ ಪ್ರಯತ್ನ ಮಾಡುತ್ತೇನೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮಮಟ್ಟದಲ್ಲಿ ಜನಜಾಗೃತಿ ಅಗತ್ಯ ನಿಭಾಯಿಸಬೇಕಿದೆ. ಸಾಂಕ್ರಾಮಿಕ ರೋಗ ತಡೆಗಟ್ಟುವಿಕೆ ಕಾಯ್ದೆಯಡಿ ಗ್ರಾಮ ಪಂಚಾಯಿತಿಗೆ ಜನರಿಗೆ ಜಾಗೃತಿ ಮೂಡಿಸುವುದು ಹಾಗೂ ಎಚ್ಚರಿಸಲು ಸಂಪೂರ್ಣ ಅಧಿಕಾರವಿದೆ. ಜಿಲ್ಲಾಡಳಿತದ…
UN networks ಉಳ್ಳಾಲ: ಉಳ್ಳಾಲದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಜಿಲ್ಲಾಧಿಕಾರಿ ಡಾ.ಕೆ.ಎಸ್ ರಾಜೇಂದ್ರ ನೇತೃತ್ವದಲ್ಲಿ ಕೋವಿಡ್-19 ವ್ಯಾಪಕವಾಗಿ ಹರಡುವಿಕೆ ಕುರಿತು ನಡೆಸಿದ ತುರ್ತು ಸಭೆಗೆ ಒಂದು ಗಂಟೆ ತಡವಾಗಿ ಬಂದ ಕೋಟೆಕಾರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯನ್ನು ಉಸ್ತುವಾರಿ ಸಚಿವರು ತರಾಟೆಗೆ ತೆಗೆದುಕೊಂಡು ಅಮಾನತುಗೊಳಿಸುವ ಎಚ್ಚರಿಕೆಯನ್ನು ನೀಡಿದ ಘಟನೆ ಉಳ್ಳಾಲ ನಗರಸಭೆಯಲ್ಲಿ ನಡೆಯಿತು. ಕೋಟೆಕಾರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪ್ರಭಾಕರ್ ಎಂ.ಪಿ ಇವರನ್ನು ತರಾಟೆಗೆ ತೆಗೆದುಕೊಂಡರು. ಸಭೆ ಆರಂಭವಾದ ಬಳಿಕ ಉಳ್ಳಾಲ ನಗರಸಭೆ, ಸೋಮೇಶ್ವರ ಪುರಸಭೆ ಹಾಗೂ ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸೋಂಕಿತರ ವಿವರಗಳನ್ನು ಜಿಲ್ಲಾಧಿಕಾರಿಗಳು ಕೇಳಿದ್ದರು. ಪೌರಾಯುಕ್ತರು ಹಾಗೂ ಮುಖ್ಯಾಧಿಕಾರಿ ಇಬ್ಬರು ತಮ್ಮ ವ್ಯಾಪ್ತಿಯ ಸೋಂಕಿತರ ವರದಿಯನ್ನು ನೀಡಿದ್ದು, ಕೋಟೆಕಾರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಗೈರಾಗಿದ್ದರು. ಈ ವೇಳೆ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಕೋಟ, ಮುಖ್ಯಾಧಿಕಾರಿಗೆ ಶೀಘ್ರವೇ ನೋಟೀಸು ಜಾರಿಗೊಳಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು. ಬಳಿಕ ತಕ್ಷಣಕ್ಕೆ ಅಮಾನತುಗೊಳಿಸುವಂತೆ ಆಗ್ರಹಿಸಿದರು. ಸಭೆ ಆರಂಭವಾಗಿ…
ಉಳ್ಳಾಲ: ಕೊರೊನ ಎರಡನೇ ಅಲೆ ನಿಯಂತ್ರಿಸುವ ಸಲುವಾಗಿ ರಾಜ್ಯ ಸರಕಾರ ಜಾರಿಗೊಳಿಸಿದ ಲಾಕ್‍ಡೌನ್ ನಿಯಮ ಉಲ್ಲಂಘನೆ ಮಾಡಿದತೊಕ್ಕೊಟ್ಟು ವಿನ ಸ್ಮಾರ್ಟ್ ಸಿಟಿ ವಾಣಿಜ್ಯ ಸಂಕೀರ್ಣದಲ್ಲಿದ್ದ ಐದು ಬಟ್ಟೆ ಅಂಗಡಿಗಳ ಮಾಲೀಕರ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬಟ್ಟೆ ಅಂಗಡಿ ಗಳು ಅರ್ಧ ಶಟರ್ ಹಾಕಿ ಗ್ರಾಹಕರನ್ನು ಸೇರಿಸಿ ವ್ಯಾಪಾರ ಮಾಡುತ್ತಿದ್ದರೆನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಪೆÇಲೀಸರು ದಾಳಿ ನಡೆಸಿ ಅಂಗಡಿ ಬಂದ್ ಮಾಡುವಂತೆ ಸೂಚಿಸಿದರು. ಪೆÇಲೀಸರ ಸೂಚನೆ ಬಳಿಕ ಮಾಲಕರು ಅಂಗಡಿ ಬಂದ್ ಮಾಡಿದ್ದಾರೆ. ಬಳಿಕ ಲಾಕ್ ಡೌನ್ ಉಲ್ಲಂಘನೆ ಆರೋಪದ ಅಡಿಯಲ್ಲಿ ಕಾರ್ಯಾಚರಿಸುತ್ತಿದ್ದ ಐದು ಅಂಗಡಿ ಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ .ಅಲ್ಲದೇ ಬೇಕಾಬಿಟ್ಟಿ ಓಡಾಡುತ್ತಿದ್ದ ಒಟ್ಟು ಐದು ದ್ವಿಚಕ್ರ ವಾಹನ ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಾಳೆಪುಣಿ: ಬಾಳೆಪುಣಿ ಗ್ರಾ.ಪಂ. ವ್ಯಾಪ್ತಿಯ ಕುಕ್ಕುದಕಟ್ಟೆ ಆದಿವಾಸಿ ಕೊರಗರ ಕಾಲೊನಿಯಲ್ಲಿ ಲಸಿಕೆ ಹಾಕಿಸೋಣ, ಕೊರೊನಾ ತಡೆಯೊಣ ಜಾಗೃತಿ ಕಾರ್ಯಕ್ರಮ ನಡೆಯಿತು. ಜನ ಶಿಕ್ಷಣ ಟ್ರಸ್ಟ್, ಗ್ರಾಮ ಪಂಚಾಯತ್ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಭಾಗವಹಿಸಿ ಅರಿವೇ ಔಷ„ ಮಾಸ್ಕೇ ಮದ್ದು, ಮನೆಯೇ ಆಸ್ಪತ್ರೆ, ಲಸಿಕೆ ಹಾಕಿಸಿ ಕೊರೊನಾ ಓಡಿಸಿ ಈ ಕುರಿತು ಮಾಹಿತಿ ನೀಡಿ ಸಂವಾದ ನಡೆಸಿದರು. ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಕೊರಗ ಜನಾಂಗದ ಹಿರಿಯ ಮುಂದಾಳು ಬಳ್ಳು ಕೊರಗ, ಮಾದರಿ ಗ್ರಾಮ ಅಭಿಯಾನದ ಸ್ವಯಂ ಸೇವಕಿ ವಿದ್ಯಾ, ಆಶಾ ಕಾರ್ಯಕರ್ತೆ ವಿಶಾಲಾಕ್ಷಿ ಸಂವಾದದಲ್ಲಿ ಭಾಗವಹಿಸಿದರು
ಉಳ್ಳಾಲ: ಪಶ್ಚಿಮಬಂಗಾಳದಲ್ಲಿ ನಡೆಯುತ್ತಿರುವ ಹಿಂಸಾಚಾರ ಖಂಡಿಸಿ ಬಿಜೆಪಿ ಮಂಗಳೂರು ಕ್ಷೇತ್ರ ವತಿಯಿಂದ ತೊಕ್ಕೊಟ್ಟು ಕಾಪಿಕಾಡಿನ ಕಚೇರಿ ಎದುರು ಕಪ್ಪುಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು.ಸಾಂಕೇತಿಕ ಪ್ರತಿಭಟನೆಯಲ್ಲಿ ದಿ. ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರಿಸ್ ಪ್ರೈವೆಟ್ ಲಿಮಿಟೆಡ್ ಇದರ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಮಂಗಳೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್‍ಹೌಸ್ , ಪ್ರ. ಕಾರ್ಯದರ್ಶಿ ಹೇಮಂತ್ ಶೆಟ್ಟಿ ದೇರಳಕಟ್ಟೆ, ಕಾರ್ಯದರ್ಶಿಗಳಾದ ಆನಂದ ಶೆಟ್ಟಿ ,ನವೀನ್ ಶೆಟ್ಟಿ ಕುರ್ನಾಡು ಕೋಟೆಕಾರು ಶಕ್ತಿಕೇಂದ್ರದ ಅಧ್ಯಕ್ಷ ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು, ಕಾರ್ಯದರ್ಶಿ ಪುರುಷೋತ್ತಮ ಗಟ್ಟಿ ಪರಿಯತ್ತೂರು, ಉಪಾಧ್ಯಕ್ಷರಾದ ರವಿಶಂಕರ್ ಸೋಮೇಶ್ವರ, ಯಶವಂತ ಅಮೀನ್, ಯುವ ಮೋರ್ಚಾ ಅಧ್ಯಕ್ಷ ಸಚಿನ್ ಮೋರೆ, ಕಾರ್ಯದರ್ಶಿ ಪ್ರವೀಣ್ ಕೊಂಡಾಣ, ಹಿಂದುಳಿದ ವರ್ಗಗಳ ಅಧ್ಯಕ್ಷ ರವಿ ಸೋವೂರು, ಕಾರ್ಯದರ್ಶಿ ಭರತ್ ಗಟ್ಟಿ ಕಟ್ಟಪುಣಿ, ರೈತ ಮೋರ್ಚಾ ಅಧ್ಯಕ್ಷ ಯೋಗೀಶ್ ಶೆಟ್ಟಿ ಮಂಜನಾಡಿ, ಕೌನ್ಸಿಲರ್‍ಗಳಾದ ರಾಜೇಶ್ ಯು. ಬಿ. ಗೀತಾಬಾೈ, ಜಿಲ್ಲಾ ಸಮಿತಿ ಸದಸ್ಯರಾದ ಸುಜಿತ್ ಕಂಬ್ಲಪದವು, ಜೀವನ್ ತೊಕ್ಕೊಟ್ಟು…
ಉಳ್ಳಾಲ: ಇಲ್ಲಿನ ಪೊಲೀಸ್ ಠಾಣೆಯಲ್ಲಿ 5ಕ್ಕಿಂತಲೂ ಅಧಿಕ ಪ್ರಕರಣ ಹೊಂದಿದ್ದ ಆರೋಪಿ ಕಾಸರಗೋಡು ಸಮೀಪದ ಮೇಲ್ಪರಂಬ ಪೊಲೀಸ್ ಠಾಣಾ ವ್ಯಾಪ್ತಿಯ ಚಟ್ಟಂಚಾಲು ಪ್ರದೇಶದಲ್ಲಿ ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಶವ ಸೋಮವಾರ ಪತ್ತೆಯಾಗಿದೆ.ಚೆಂಬುಗುಡ್ಡೆ ನಿವಾಸಿ ಹಿದಾಯತ್ (28) ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಕಾಸರಗೋಡು ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಮೇ.5 ರಂದು ಶವಮಹಜರು ಪರೀಕ್ಷೆ ನಡೆಯಲಿದೆ. ಬಳಿಕವಷ್ಟೇ ಸಾವಿನ ಕಾರಣ ತಿಳಿದುಬರಬಹುದು. ಹಿದಾಯತ್ ವಿರುದ್ಧ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಸೇವನೆ, ಕಳವು, ಜಾನುವಾರು ಕಳವು ಕುರಿತು 5 ಕ್ಕಿಂತಲೂ ಅಧಿಕ ಪ್ರಕರಣಗಳಿವೆ. ಉಪ್ಪಳದಲ್ಲಿ ಕೆಲಸಕ್ಕಿದ್ದ ಹಿದಾಯತ್ ಮೇ.1 ರಿಂದ ನಾಪತ್ತೆಯಾಗಿದ್ದರೆಂದು ತಿಳಿದುಬಂದಿದೆ. ಎ.3 ರಂದು ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಚಟ್ಟಂಚಾಲು ಎಂಬಲ್ಲಿ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಹಿದಾಯತ್ ಮೊಬೈಲ್ ಮಾತ್ರ ಪತ್ತೆಯಾಗಿದ್ದು, ಅದರಲ್ಲಿ ಸಿಮ್ ಕಾರ್ಡ್ ಪತ್ತೆಯಾಗಿಲ್ಲ. ಮೇಲ್ಪರಂಬ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಉಳ್ಳಾಲ: ತೊಕ್ಕೊಟ್ಟು ಶ್ರೀ ಸಾಯಿ ಪರಿವಾರ್ ನ ಮೂಲಕ ಪಿಲಾರು ದಾರಂದಬಾಗಿಲು ಮತ್ತು ಕುಂಪಲ ಬಗಂಬಿಲದ ಎರಡು ಅಶಕ್ತ ಕುಟುಂಬಗಳಿಗೆ ತಿಂಗಳ ದಿನಬಳಕೆಯ ದಿನಸಿ ಕಿಟ್ ವಿತರಿಸಲಾಯಿತು.ದಿ ಮೈಸೂರ್ ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ.ನ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಅಶಕ್ತರಿಗೆ ಅನ್ನದಾನಕ್ಕೆ ಸಹಕರಿಸಿದರು. ತೊಕ್ಕೊಟ್ಟು ಓವರ್ ಬ್ರಿಡ್ಜ್ ಕೊರಗಜ್ಜ ಸೇವಾ ಸಮಿತಿಯ ಸ್ಥಾಪಕರೂ ರಾಜ್ ಕೇಟರರ್ಸ್ ನ ಮಾಲಕ ರಾಜೇಶ್ ಕಾಪಿಕಾಡ್ ಎರಡು ಕುಟುಂಬಗಳ ಕಿಟ್ ಗೆ ಸಹಕರಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಸಂತೋಷ್ ಬೊಳಿಯಾರ್, ಪ್ರಮುಖರಾದ ಪ್ರಶಾಂತ್ ಕೊಲ್ಯ, ರವಿಶಂಕರ್ ಸೋಮೇಶ್ವರ, ಗಣೇಶ್ , ರೂಪೇಶ್,ಸುಜೀತ್ ಕಂಬ್ಳ ಪದವು, ನವೀನ್ ಶೆಟ್ಟಿ ಕುರ್ನಾಡು,ಮಾಜಿ ಗ್ರಾ.ಪಂ ಸದಸ್ಯ ಪ್ರೇಮಾನಂದ ಪಿಲಾರು, ಬಗಂಬಿಲ ಶಿವಶಕ್ತಿ ಮಿತ್ರ ಮಂಡಳಿಯ ಪ್ರವೀಣ ಐ ಬಗಂಬಿಲ, ಸದಸ್ಯರು,ಸಾಯಿ ಪರಿವಾರ್ ಟ್ರಸ್ಟ್ ನ ಪ್ರಮುಖರಾದ ಪ್ರವೀಣ್ ಎಸ್.ಕುಂಪಲ, ಪುರುಷೋತ್ತಮ ಕಲ್ಲಾಪು, ಗಣೇಶ್ ಅಂಚನ್, ಸೂರ್ಯ ಕುಂಪಲ, ದೀಕ್ಷಿತ್ ಪೂಜಾರಿ, ಅರುಣ್, ಕಿಶೋರ್ ಡಿ.ಕೆ. , ಸತೀಶ್ ಚೆಂಬುಗುಡ್ಡೆ,…
ಕೊಣಾಜೆ: ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ರಿಕ್ಷಾ ವೊಂದು ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟ ಘಟನೆ ಸೋಮವಾರದಂದು ಮುಡಿಪುವಿನಲ್ಲಿ ನಡೆದಿದೆ.ಹೂಹಾಕುವ ಕಲ್ಲು ಸಮೀಪದ ಚಂದ್ರಶೇಖರ್ (೫೮) ಎಂಬವರೇ ಮೃತಪಟ್ಟ ವ್ಯಕ್ತಿಯಾಗಿದ್ದಾರೆ.ಚಂದ್ರಶೇಖರ್ ಅವರು ಕೆಲಸ ಮುಗಿಸಿ ಸಂಜೆ 7 ಗಂಟೆಗೆ ಮುಡಿಪು ಜಂಕ್ಷನ್‌ನಲ್ಲಿ ರಸ್ತೆ ದಾಟುತ್ತಿದ್ದ ಸಂದರ್ಭ ಮುಡಿಪು ಕಡೆಯಿಂದ ಬಾಳೆಪುಣಿ ಕಡೆಗೆ ಹೋಗುತ್ತಿದ್ದ ಆಟೋರಿಕ್ಷಾ ಢಿಕ್ಕಿ ಹೊಡೆದಿತ್ತು. ಢಿಕ್ಕಿ ಹೊಡೆದ ಪರಿಣಾಮ ಚಂದ್ರಶೇಖರ್ ತಲೆ ಹಿಂಬದಿಗೆ ತೀವ್ರವಾದ ಗಾಯಗಳಾಗಿದ್ದವು.ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಗಂಭೀರ ಗಾಯದಿಂದ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಉಳ್ಳಾಲ: ನೇತ್ರಾವತಿ ನದಿ ತೀರದಿಂದ ಪರವಾನಿಗೆಯಿಲ್ಲದೆ ಮರಳು ಸಾಗಾಟ ನಡೆಸುತ್ತಿದ್ದ ಎರಡು ಟಿಪ್ಪರ್ ಲಾರಿಗಳನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಎರಡು ಲಾರಿಗಳ ಚಾಲಕರು, ಮಾಲಕರು , ಉಸ್ತುವಾರಿ ಹಾಗೂ ಲೋಡರ್ ಗಳ ವಿರುದ್ಧ ಕೋವಿಡ್ 19 ಸಾಂಕ್ರಾಮಿಕ ರೋಗ ಹರಡುವ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿರುವ ಕುರಿತು ಪ್ರಕರಣ ದಾಖಲಾಗಿದೆ.ಉಳ್ಳಾಲ ಠಾಣಾ ಪೊಲೀಸರು ಕುತ್ತಾರು ಪ್ರದೇಶದಲ್ಲಿ ರೌಂಡ್ಸ್‍ನಲ್ಲಿದ್ದ ಸಂದರ್ಭ ಎರಡು ಟಿಪ್ಪರ್ ಲಾರಿಗಳನ್ನು ಬರುವುದನ್ನು ಗಮನಿಸಿ ಸಂಶಯಗೊಂಡು ನಿಲ್ಲಿಸಲು ಸೂಚಿಸಿದ್ದರು. ರಸ್ತೆ ಬದಿಯಲ್ಲಿಯೇ ಲಾರಿಗಳನ್ನು ನಿಲ್ಲಿಸಿದ ಚಾಲಕರ ಬಳಿ ಮರಳು ಸಾಗಾಟದ ಪರವಾನಿಗೆಯಿರಲಿಲ್ಲ. ನೇತ್ರಾವತಿ ನದಿಯ ಕಲ್ಲಾಪು ಭಾಗದಿಂದ ಕುತ್ತಾರು ರಸ್ತೆಯಾಗಿ ಮರಳು ಸಾಗಾಟ ನಡೆಸಲಾಗುತಿತ್ತು. ಎರಡು ಲಾರಿಗಳನ್ನು ಮರಳು ಸಮೇತ ವಶಪಡಿಸಿಕೊಂಡಿರುವ ಉಳ್ಳಾಲ ಪೊಲೀಸರು , ಚಾಲಕ ಮೊಹಿಯುದ್ದೀನ್ ಬಾವ, ಪುತ್ತುಬಾವ , ಲಾರಿ ಮಾಲಕರು, ಲೋಡರ್ ಗಳ ವಿರುದ್ಧ ಕೋವಿಡ್ ವೈರಾಣು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ನಿರ್ಲಕ್ಷ್ಯತನ ಹಾಗೂ ಅಕ್ರಮ ಮರಳು ಸಾಗಾಟಕ್ಕೆ ಸಂಬಂಧಿಸಿದ ಪ್ರಕರಣ ದಾಖಲಿಸಿಕೊಂಡಿದ್ದಾರೆ.

