UN NETWORKS
ಕೊಣಾಜೆ : ಲಯನ್ಸ್ ಕ್ಲಬ್ ಕಂಕನಾಡಿ ಪಡಿಲ್ ಇದರ ಅಧ್ಯಕ್ಷ ರವೀಂದ್ರನಾಥ್ ಶೆಟ್ಟಿ ಮತ್ತು ಸದಸ್ಯರು ಕೊಣಾಜೆ ಮುಕ್ತಿ ಭೂಮಿಯ 2 ಎಕರೆ ಪ್ರದೇಶದಲ್ಲಿ ಸುಮಾರು 300 ವಿವಿಧ ತಳಿಯ ಅಳಿವಿನಂಚಿನಲ್ಲಿರುವ ಸಸ್ಯಗಳನ್ನು (ಕಿಂಜ, ರಕ್ತಚಂದನ, ಸೀಬೆ, ಮತ್ತಿ, ಮಂಜೊಟ್ಟಿ, ಶಿವನೆ, ಹೊನ್ನೆ, ಶ್ರೀಗಂಧ, ಗಜಮಾವು ಮುಂತಾದ) ನೆಡುವುದರ ಮೂಲಕ ಜಿಲ್ಲಾ ರಾಜ್ಯಪಾಲ ಎಟಞಛಿo ರವರ ಗೋಗ್ರೀನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಉಪ ಅರಣ್ಯಾಧಿಕಾರಿ ರವಿ ಕುಮಾರ್ ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು. ಮುಕ್ತಿ ಭೂಮಿ ಇದರ ಉಸ್ತುವಾರಿ ಪ್ರಸಾದ್ ರೈ ಈವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು. ಲಯನ್ಸ್ ಕ್ಲಬ್ ಕಂಕನಾಡಿ ಪಡಿಲ್ ಇದರ ಅಧ್ಯಕ್ಷ ರವೀಂದ್ರನಾಥ್ ಶೆಟ್ಟಿ, ಮಾಜಿ ಜಿಲ್ಲಾ ಗವರ್ನರ್ ಕೆ ಸಿ ಪ್ರಭು, ಎಂ ಸಿ ಶೆಟ್ಟಿ, ರಘುರಾಮ್ ಶೆಟ್ಟಿ, ಅರವಿಂದ್ ಶೇನೊಯ್, ಕಲ್ಲಾರೆ, ಮಮತಾ ಶೆಟ್ಟಿ, ವಿಜಯಲಕ್ಷ್ಮಿ ರೈ, ದೀಪಾಲಿ, ಮನೋಹರ್ ಶೆಟ್ಟಿ, ಮುಕ್ತಿಭೂಮಿಯ ಕೋಶಾಧಿಕಾರಿ ರವೀಂದ್ರ ರೈ, ಕಾರ್ಯದರ್ಶಿ ರವೀಂದ್ರ ಬಂಗೇರ ಉಪಸ್ಥಿತರಿದ್ದರು.


