ಉಳ್ಳಾಲ: ನಟರಾಗಿ ಸಮಾಜದ ಜವಾಬ್ದಾರಿ ವಹಿಸುತ್ತಾ ಜಿಲ್ಲೆಯಾದ್ಯಂತ ಪ್ರಚಾರದ ಹಂಗಿಲ್ಲದೆ ಜನರ ಸಂಕಷ್ಟದಲ್ಲಿ ಪಾಲ್ಗೊಳ್ಳುತ್ತಿರುವ ರೂಪೇಶ್ ಶೆಟ್ಟಿ ಕಾರ್ಯ ಶ್ಲಾಘನೀಯ ಎಂದು ರೀಚಲ್ ಚಾರಿಟೇಬಲ್ ಟ್ರಸ್ಟಿನ ಟ್ರಸ್ಟೀ ಸಿರಿಲ್ ರಾಬರ್ಟ್ ಅಭಿಪ್ರಾಯಪಟ್ಟರು.ಅವರು ತೊಕ್ಕೊಟ್ಟು ಶಿವಾಜಿ ಫ್ರೆಂಡ್ಸ್ ಸರ್ಕಲ್ ನಲ್ಲಿ ಮಂಗಳವಾರ ರೂಪೇಶ್ ಶೆಟ್ಟಿ ನೇತೃತ್ವದಲ್ಲಿ 100 ಕುಟುಂಬಗಳಿಗೆ ಆಹಾರ ಕಿಟ್ ಗಳನ್ನು ವಿತರಣೆ ನಡೆಸಿ ಮಾತನಾಡಿದರು.ತೊಕ್ಕೊಟ್ಟು ಭಾಗದಲ್ಲಿ ಅಶಕ್ತರಿಗೆ ನೆರವಾಗುವ ಸಲುವಾಗಿ ನಟ ರೂಪೇಶ್ ಶೆಟ್ಟಿ ಅವರನ್ನು ಕೇಳಿಕೊಂಡಾಗ ಉತ್ತಮವಾಗಿ ಸ್ಪಂಧಿಸಿ ಆಹಾರ ಕಿಟ್ ಗಳನ್ನು ಶಿವಾಜಿ ಫ್ರೆಂಡ್ಸ್ ಮೂಲಕ ನೀಡಿದ್ದಾರೆ ಎಂದರು.ನಟ ರೂಪೇಶ್ ಶೆಟ್ಟಿ ಮಾತನಾಡಿ , ಈವರೆಗೆ ಜಿಲ್ಲೆಯಾದ್ಯಂತ 3,000 ಕಿಟ್ ವಿತರಿಸಲಾಗಿದೆ. ಗಿರಗಿಟ್ ಚಲನಚಿತ್ರಕ್ಕೆ ಜಿಲ್ಲೆಯ ಜನ ಅಭೂತಪೂರ್ವ ಯಶಸ್ಸನ್ನು ತಂದುಕೊಟ್ಟಿದ್ದಾರೆ. ಇದರಿಂದ ಚಲನಚಿತ್ರದ ತಂಡದ ಮೇಲೆ ಜವಾಬ್ದಾರಿಯಿದೆ ಅನ್ನುವುದನ್ನು ಅರಿತುಕೊಂಡು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇವೆ . ಮುಂದರೆಯೂ 1,000ಕ್ಕಿಂತ ಅಧಿಕ ಕಿಟ್ ನೀಡಲಿದ್ದೇವೆ ಎಂದರು.ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಇಲಾಖೆಯ ನಿವೃತ್ತ ಅಧಿಕಾರಿ ಚಂದ್ರಹಾಸ್ ಶೆಟ್ಟಿ, ಶಿವಾಜಿ ಫ್ರೆಂಡ್ಸ್…
Author: UllalaVani
ಉಳ್ಳಾಲ ತಾಲೂಕು ಕಚೇರಿ ನಾಟೆಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಹಳೇ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಕಾರ್ಯಾಚರಣೆ ನಡೆಸಲಿದೆ. ತಾಲೂಕಿನ ಎಲ್ಲಾ ನಿಯಮಗಳನ್ನು ಜ್ಯಾರಿಗೊಳಿಸಿ ಹಾಗೂ ತಹಶೀಲ್ದಾರ್ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳ ನೇಮಕಕ್ಕೆ ರಾಜ್ಯ ಸರಕಾರ ಆದೇಶ ನೀಡಿದೆ ಎಂದು ಶಾಸಕ ಯು.ಟಿ ಖಾದರ್ ಹೇಳಿದರು.ಅವರು ಉಳ್ಳಾಲ ತಾಲೂಕು ಕಚೇರಿಗೆ ಗುರುತಿಸಲಾದ ನಾಟೆಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಹಳೇ ಕಟ್ಟಡವನ್ನು ವೀಕ್ಷಿಸಿ ಮಾತನಾಡಿದರು.ನೂತನ ತಾಲೂಕು ಕಚೇರಿಯ ವ್ಯವಸ್ಥೆ ಕಲ್ಪಿಸುವ ಉಸ್ತುವಾರಿಯನ್ನು ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ಅವರಿಗೆ ನೀಡಲಾಗಿದೆ. ತಾತ್ಕಾಲಿಕವಾಗಿ ತಾಲೂಕು ಕಚೇರಿ ನಾಟೆಕಲ್ ನಲ್ಲಿ ಕಾರ್ಯಾಚರಿಸಲಿದ್ದು, ಮುಂದಿನ ದಿನಗಳಲ್ಲಿ ಸರಕಾರಿ ಸ್ಥಳವನ್ನು ಕಂದಾಯ ಇಲಾಖೆ ಗುರುತಿಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ ನಂತರ ಶಾಶ್ವತ ತಾಲೂಕು ಕಚೇರಿಯ ನಿರ್ಮಾಣ ಆಗಲಿದೆ. ಸ್ಥಳ ನಿಗದಿ ಬಳಿಕ ಕಟ್ಟಡ ನಿರ್ಮಾಣಕ್ಕೆ ಬೇಕಾಗಿರುವ ಅನುದಾನವನ್ನು ಸರಕಾರದಿಂದ ಕೇಳಿ ತರುವ ಜವಾಬ್ದಾರಿ ತನ್ನದು. ತಾಲೂಕು ಪಂಚಾಯತ್ ಕಚೇರಿಯೂ ಹತ್ತಿರದಲ್ಲೇ ನಿರ್ಮಾಣವಾಗಲಿದೆ. ತೊಕ್ಕೊಟ್ಟು ಪರಿಸರದಲ್ಲಿ ಕಾರ್ಯಾಚರಿಸುವ ನೆಮ್ಮದಿ ಕೇಂದ್ರ, ಕಂದಾಯ ಇಲಾಖೆ…
ಉಳ್ಳಾಲ: ಗ್ರಾಮಮಟ್ಟದಲ್ಲಿ ವ್ಯಾಕ್ಸಿನ್ ಟೋಕನ್ ನೀಡುವ ಸಂದರ್ಭ ಆಧಾರ್ ಕಾರ್ಡ್ ಮೊಬೈಲನ್ನು ಕಡ್ಡಾಯವಾಗಿ ಪಡೆದುಕೊಳ್ಳಿ. ಈ ಮೂಲಕ ಬೇರೆ ಗ್ರಾಮದವರು ವ್ಯಾಕ್ಸಿನ್ ಪಡೆಯುವುದನ್ನು ತಪ್ಪಿಸಿಕೊಳ್ಳಬಹುದು ಎಂದು ಶಾಸಕ ಯು.ಟಿ ಖಾದರ್ ಹೇಳಿದರುಮಂಗಳೂರು ತಾಲೂಕಿನ ಮಂಗಳೂರು ಬಿ. (ಉಳ್ಳಾಲ) ಹೋಬಳಿಯ 14 ಗ್ರಾಮಗಳು ಮತ್ತು ಬಂಟ್ವಾಳ ತಾಲೂಕಿನ ಪಾಣೆಮಂಗಳೂರು (ಮುಡಿಪು) ಹೋಬಳಿಯ 9 ಗ್ರಾಮಗಳು ಸೇರಿ ಒಟ್ಟು 23 ಗ್ರಾಮಗಳನ್ನೊಳಗೊಂಡ ನೂತನ ಉಳ್ಳಾಲ ತಾಲೂಕು ಅಸ್ತಿತ್ವಕ್ಕೆ ಬಂದ ಒಂದು ವರ್ಷದ ಬಳಿಕ ದೇರಳಕಟ್ಟೆಯ ಖಾಸಗಿ ಸಭಾಂಗಣದಲ್ಲಿ ಮಂಗಳವಾರ ನಡೆದ ಉಳ್ಳಾಲ ತಾಲೂಕಿಗೆ ಸಂಬಂಧಪಟ್ಟ ಎಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳ ಅ„ಕಾರಿಗಳು, ಜನಪ್ರತಿನಿ„ಗಳ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ಗ್ರಾಮಿಣ ಮಟ್ಟಕ್ಕೂ ಆ್ಯಪ್ ರಚಿಸುವ ಮೂಲಕ ಆಸ್ಪತ್ರೆ ಮಟ್ಟಕ್ಕೆ ಬರುವ ವ್ಯಾಕ್ಸಿನ್ ಗ್ರಾಮ ಮಟ್ಟಕ್ಕೆ ವಿಂಗಡಣೆಗೆ ಸೂಚಿಸುತ್ತೇವೆ. ಈ ಕುರಿತು ಸರಕಾರದ ಗಮನಕ್ಕೆ ತರುತ್ತೇನೆ. ಗ್ರಾಮಕ್ಕೆ ಹೊರಗಿನಿಂದ ಬಂದವರಿಗೆ ವ್ಯಾಕ್ಸಿನ್ ನೀಡಬೇಡಿ. ಗ್ರಾಮದವರಿಗೆ ಟೋಕನ್ ನೀಡಿ. 150 ವ್ಯಾಕ್ಸಿನ್ ಇದ್ದರೆ 300 ಕೂಪನ್ ಒಂದೇ ದಿನ ನೀಡಿ,…
ಉಳ್ಳಾಲ : ಕಡಲ್ಕೊರೆತ ಸಂಭಂಧ ಪಟ್ಟ ಹಾಗೆ ತೌಕ್ತೆ ಚಂಡಮಾರುತ ದಿಂದ ಸೋಮೇಶ್ವರ, ಉಳ್ಳಾಲ, ಕೋಟೆಪುರ,ಭಟ್ಟಂಪಾಡಿಯಲ್ಲಿ ಮನೆಗಳಿಗೆ ವ್ಯಾಪಕವಾಗಿ ಹಾನಿಯಾಗಿದೆ. ಮೊಗವೀರ ಪಟ್ನದಿಂದ ಸೋಲಾರ್ ಕ್ಲಬ್ ವರೆಗೆ ಹಾಗೂ ಪೆರಿಬೈಲ್ ರೋಹಿತ್ ಮಾಸ್ಟರ್ ಮನೆಕೋಟೆಬಾಗಿಲು, ನಾಗೇಶ್, ಬೆಟ್ಟಂಪಾಡಿಯವರ ಮನೆ ಅಪಾಯದಲ್ಲಿದೆ, ಇದನ್ನು ಸಂರಕ್ಷಿಸುವ ಕಾರ್ಯ ಸರಕಾರ ಮಾಡಬೇಕಿದೆಈವರೆಗೆ ಸರಿಪಡಿಸುವ ಕಾರ್ಯಕ್ಕೆ ಸರಕಾರ ಮುಂದಾಗಿಲ್ಲ ಎಂದು ಶಾಸಕ ಯು.ಟಿ ಖಾದರ್ ಹೇಳಿದರು.ಅವರು ಮಂಗಳೂರು ವಿಶ್ವವಿದ್ಯಾನಿಲಯದ ಐ.ಬಿಯಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಇಂದಿನವರೆಗೆ ಮನೆಗಳನ್ನು ಉಳಿಸುವ ಕೆಲಸ ಪ್ರಾರಂಭವಾಗಿಲ್ಲ, ಕಡಲಂಚಿನ ಜನರು ಭಯದ ವಾತಾವರಣದಲ್ಲಿ ಇದ್ದಾರೆ. ಜಿಲ್ಲಾಧಿಕಾರಿ ಕಚೇರಿರಯಲ್ಲಿ ನಡೆದ ಸಭೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿತ್ತು . ಮೀನುಗಾರಿಕೆ ಹಾಗೂ ಬಂದರು ಇಲಾಖೆಯ ಸಂಬಂಧ ಪಟ್ಟ ಸಭೆ ಮಂಗಳೂರಿನಲ್ಲಿ ನಡೆಯಬೇಕು. ಬೆಂಗಳೂರಿನ ಎ.ಸಿ ಕೋಣೆಯಲ್ಲಿ ಅಧಿಕಾರಿಗಳಿಗೆ ಕಡಲಿನಂಚಿನಲ್ಲಿರುವ ಸಮಸ್ಯೆ ತಿಳಿಯುವುದಿಲ್ಲ. ಆದ್ದರಿಂದಉನ್ನತ ಮಟ್ಟದ ಸಭೆ ಮಂಗಳೂರಿನಲ್ಲಿಯೇ ನಡೆಯಬೇಕು ಎಂದು ಒತ್ತಾಯಿಸಿದ್ದೆ. ಆದರೆ ಈವರೆಗೆ ಬೆಂಗಳೂರಿನಲ್ಲೂ ಸಭೆ ಆಗಿಲ್ಲ, ಮಂಗಳೂರಿನಲ್ಲೂ ಆಗಿಲ್ಲ. ಮೀನುಗಾರರ ಮನೆ ಹಾನಿಯಾದಲ್ಲಿ ರಾಜ್ಯ…
ಕೊಣಾಜೆ : ಹೆಚ್ಚಾಗಿ ಮೊಬೈಲಿನಲ್ಲಿ ಮಾತನಾಡುತ್ತಿರುವುದನ್ನು ತಾಯಿ ಪ್ರಶ್ನಿಸಿದಕ್ಕೆ ಬಾಲಕಿಯೋರ್ವಳು ಮನೆ ಬಿಟ್ಟು ನಾಪತ್ತೆಯಾಗಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳೆಪುಣಿಯಲ್ಲಿ ನಡೆದಿದೆ.ಈ ಕುರಿತು ತಾಯಿ ಮೀನಾಕ್ಷಿ ಕೊಣಾಜೆ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ಜು.6 ರಂದು ಮೀನಾಕ್ಷಿ ಅವರು ಮುಡಿಪು ಪೇಟೆಗೆ ಮಗನ ಜೊತೆಗೆ ಬೆಳಿಗ್ಗೆ 7.30 ರ ಸುಮಾರಿಗೆ ತೆರಳಿದ್ದರು. ಈ ವೇಳೆ ಬಾಳೆಪುಣಿ ಗ್ರಾಮದ ಕುಕ್ಕುದಕಟ್ಟೆ ಸೈಟ್ ನಲ್ಲಿದ್ದ ಕುಮಾರಿ ದೀಕ್ಷಾ (18) ಒಬ್ಬಳೇ ಮನೆಯಲ್ಲಿದ್ದವಳು ನಾಪತ್ತೆಯಾಗಿದ್ದಾಳೆ. ದೀಕ್ಷಾ ಹೆಚ್ಚಾಗಿ ಮೊಬೈಲಿನಲ್ಲಿ ಮಾತನಾಡುತ್ತಿದ್ದುದನ್ನು ತಾಯಿ ಪ್ರಶ್ನಿಸಿದ್ದರು. ಇದೇ ಕಾರಣವನ್ನು ಮುಂದಿಟ್ಟುಕೊಂಡು ಬಾಲಕಿ ನಾಪತ್ತೆಯಾಗಿರುವ ಸಾಧ್ಯತೆ ಇದೆ ಎಂದು ದೂರು ದಾಖಲಿಸಿದ್ದಾರೆ.
ಉಳ್ಳಾಲ: ಮಹಾಮಾರಿ ಕೊರೊನಾ ಆಮ್ಲಜನಕದ ಅಗತ್ಯತೆಯನ್ನು ಜನರಿಗೆ ತೋರಿಸಿಕೊಟ್ಟಿದೆ. ಈ ನಿಟ್ಟಿನಲ್ಲಿ ಆಮ್ಲಜನಕ ಪೂರೈಸುವ ಗಿಡಗಳ ಸಂರಕ್ಷಣೆ ಅತ್ಯಗತ್ಯ. ಅದಕ್ಕಾಗಿ ಎಲ್ಲರೂ ಪರಿಸರವನ್ನು ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದು ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಅಧ್ಯಕ್ಷ ಹಾಗೂ ಜಿ.ಪಂ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಹೇಳಿದರು.ಅವರು ಶ್ರೀ ಬಾಲಕೃಷ್ಣ ಮಂದಿರ ಕುಂಪಲ ಇದರ ರಜತ ವರ್ಷದ ಸಾಮಾಜಿಕ ಕಾರ್ಯಕ್ರಮದ ಅಂಗವಾಗಿ ಭಾರತ ಸರಕಾರದ ನೆಹರು ಯುವ ಕೇಂದ್ರ, ಮಂಗಳೂರು ಇದರ ಸಹಕಾರದೊಂದಿಗೆ ಬಗಂಬಿಲದ ಹಿಂದೂ ರುದ್ರಭೂಮಿಯಲ್ಲಿ ಮೂರುಕಟ್ಟ ಮಿತ್ರ ಮಂಡಲಿ, ಜೈಭಾರತ್ ಫ್ರೆಂಡ್ಸ್ ಕ್ಲಬ್ ಕುಂಪಲ. ವಾಸುಕಿ ಫ್ರೆಂಡ್ಸ್ ಚಿತ್ರಾಂಜಲಿನಗರ, ಮಹಾದೇವಿ ಮಂದಿರ ಬಗಂಬಿಲ, ಬಗಂಬಿಲ ಫ್ರೆಂಡ್ಸ್ ಸರ್ಕಲ್ , ಬಗಂಬಿಲ, ಹಿಂದೂ ಯುವಸೇನೆ ಮಹಾದೇವಿ ಶಾಖೆ ಬಗಂಬಿಲ ಇವುಗಳ ಜಂಟಿ ಆಶ್ರಯದಲ್ಲಿ ಶನಿವಾರ ವಿಶ್ವ ಪರಿಸರ ದಿನಾಚರಣೆಯನ್ನು ಗಿಡ ನೆಡುವುದರ ಮೂಲಕ ಆಚರಿಸಿದರು.ಪರಿಸರವನ್ನು ಬೆಳೆಸುವ ಕಾರ್ಯಕ್ಕೆ ಕೈ ಹಾಕಿ ಹಿಂದೂ ರುದ್ರಭೂಮಿ ಪರಿಸರ ಒಳ್ಳೆಯ ರೀತಿಯಲ್ಲಿ ಕಾಣುವಂತೆ ವಿಶ್ವ ಪರಿಸರ…
ಉಳ್ಳಾಲ: ತಂಡವೊಂದು ಯುವಕನಿಗೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಧರ್ಮನಗರದಲ್ಲಿ ಇಂದು ಸಂಜೆ ನಡೆದಿದೆ.ಗುರುವಾರ ತೊಕ್ಕೊಟ್ಟು ಬಳಿ ಸಂಭವಿಸಿದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಹಲ್ಲೆ ನಡೆದಿದೆ ಎನ್ನಲಾಗಿದೆ. ಧರ್ಮನಗರ ನಿವಾಸಿ ದಿವಾಕರ ಆಚಾರ್ಯ ಹಲ್ಲೆಗೊಳಗಾದವರು. ರಸ್ತೆ ಬದಿಯಲ್ಲಿ ನಿಂತಿದ್ದ ದಿವಾಕರ್ ಅವರ ಮೇಲೆ ಬೈಕಿನಲ್ಲಿ ಬಂದ ತಂಡ ಯದ್ವಾತದ್ವ ಹಲ್ಲೆ ನಡೆಸಿ ಪರಾರಿಯಾಗಿದೆ. ಗಾಯಾಳು ದಿವಾಕರ್ ಅವರನ್ನು ತೊಕ್ಕೊಟ್ಟು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳ್ಳಾಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಳ್ಳಾಲ: ಜನಸಂಖ್ಯೆ ಆಧಾರದಲ್ಲಿ ಗ್ರಾಮಮಟ್ಟದಲ್ಲಿ ವ್ಯಾಕ್ಸಿನೇಷನ್ ವಿತರಿಸುವ ಕುರಿತು ಸರಕಾರದ ಗಮನಕ್ಕೆ ತರುತ್ತೇನೆ. ಹಿರಿಯರಿಗೆ ಹಾಗೂ ಯುವಕರಿಗೆ ಸಮಪಾಲಾಗಿ ವ್ಯಾಕ್ಸಿನೇಷನ್ ಪೂರೈಸುವ ಪ್ರಯತ್ನವನ್ನು ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ಅವರು ಸೋಮೇಶ್ವರ ಪುರಸಭೆಯಲ್ಲಿ ಶನಿವಾರ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೊತೆಗೆ ಹಮ್ಮಿಕೊಂಡಿದ್ದ ಕೋವಿಡ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ವ್ಯಾಕ್ಸಿನೇಷನ್ ಆರಂಭದಲ್ಲಿ ಯಾರೂ ತೆಗೆದುಕೊಳ್ಳಲು ಮುಂದಾಗಲಿಲ್ಲ. ಆದರೆ ಇದೀಗ ಒಮ್ಮಿಂದೊಮ್ಮೆಲೇ ಎಲ್ಲರೂ ವ್ಯಾಕ್ಸಿನ್ ಗಾಗಿ ಮುಗಿಬೀಳುವುದರಿಂದ ಕೊರತೆ ಉಂಟಾಗುವುದು ಸಹಜ. ಸರಕಾರ ಎಲ್ಲರಿಗೂ ವ್ಯಾಕ್ಸಿನ್ ಸಿಗುವಂತೆ ಪ್ರಯತ್ನವನ್ನು ಇಲಾಖೆಗಳ ಮುಖೇನ ಶ್ರಮವಹಿಸಿ ನಡೆಸುತ್ತಿದೆ. ಈವರೆಗೆ ಪುರಸಭೆ ಆಧಾರದಲ್ಲಿ ವ್ಯಾಕ್ಸಿನ್ ವಿತರಿಸುತ್ತಿರುವುದು ಗೊಂದಲಗಳಿಗೆ ಕಾರಣವಾಗುತ್ತಿದೆ. ಮುಂದಿನ ದಿನಗಳಲ್ಲಿ ಜನಸಂಖ್ಯೆ ಆಧಾರದಲ್ಲಿ ವ್ಯಾಕ್ಸಿನ್ ವಿತರಿಸುವ ಕುರಿತು ಸರಕಾರದ ಗಮನಕ್ಕೆ ತರುವುದಾಗಿ ತಿಳಿಸಿದ ಸಚಿವರು, ಸೋಮೇಶ್ವರ ಪುರಸಭೆ ವ್ಯಾಪ್ತಿಯಲ್ಲಿ ಬರುವ ಸೋಂಕಿತರ ವಿವರವನ್ನು ಪಡೆದರು.ಶಾಸಕ ಯು.ಟಿ ಖಾದರ್ ಮಾತನಾಡಿ ಕೋಟೆಕಾರು, ಸೋಮೇಶ್ವರ, ತಲಪಾಡಿ, ಭಾಗಕ್ಕೆ 40 ವ್ಯಾಕ್ಸಿನ್ ವಿತರಣೆಯಾದರೆ, ಕಿನ್ಯಾ ಗ್ರಾಮಕ್ಕೆ 30…
ಉಳ್ಳಾಲ: ಊರವರ ಬೇಡಿಕೆಗೆ ಅನುಸಾರವಾಗಿ ಮೂಲಭೂತ ಸೌಕರ್ಯಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪಂಚಾಯಿತಿನಿಂದ ಬರುವ ಯೋಜನೆಯಿಂದ ಕುಡಿಯುವ ನೀರಿನ ಯೋಜನೆ ಮುಂದಿನ ದಿನಗಳಲ್ಲಿ ಆಗಲಿದೆ. ಯಾತ್ರಿ ನಿವಾಸ ಕಾಮಗಾರಿ ಸಂದರ್ಭ ಸ್ಥಳೀಯರ ಸಹಕಾರ ಅಗತ್ಯ ಎಂದು ಶಾಸಕ ಯು.ಟಿ ಖಾದರ್ ಹೇಳಿದರು.ಅವರು ಮಂಜನಾಡಿ ಜಮಾಅತಿನ ಮಸೀದಿ ವಠಾರದಲ್ಲಿ ಪ್ರವಾಸೋದ್ಯಮ ಇಲಾಖೆ ಅನುದಾನದಡಿ ನಿರ್ಮಾಣಗೊಳ್ಳಲಿರುವ ಯಾತ್ರಿ ನಿವಾಸದ ಶೌಚಾಲಯಕ್ಕೆ ಶನಿವಾರ ಶಿಲನ್ಯಾಸ ನೆರವೇರಿಸಿ ಮಾತನಾಡಿದರು.ಮಂಜನಾಡಿ ಗ್ರಾಮ ಹಂತಹಂತವಾಗಿ ಅಭಿವೃದ್ಧಿಯಾಗುತ್ತಿದೆ. ಮಂಜನಾಡಿ ಮಸೀದಿಯೂ ಪ್ರದೇಶದ ಕೇಂದ್ರಬಿಂದುವಿನಲ್ಲಿರುವುದರಿಂದ ಜನ ಹೆಚ್ಚಿನ ಸಂಖ್ಯೆಯಲ್ಲಿ ಸಂದರ್ಶನಕ್ಕೆ ಆಗಮಿಸುತ್ತಾರೆ. ಅವರ ಅನುಕೂಲಕ್ಕಾಗಿ ಯಾತ್ರಿ ನಿವಾಸದ ಕಾಮಗಾರಿ ಆರಂಭವಾಗಲಿದೆ. ಅದಕ್ಕೆ ಪೂರಕವಾಗಿ ಶೌಚಾಲಯದ ನಿರ್ಮಾಣವೂ ಶೀಘ್ರವೇ ಆಗಲಿದೆ. ಈಗಾಗಲೇ ಕಂಪೌಂಡ್ ನಿರ್ಮಾಣದ ಕಾಮಗಾರಿ ಪೂರ್ಣಗೊಂಡಿದೆ. ಗ್ರಾಮದ ಅಭಿವೃದ್ಧಿಗೆ ಹಚ್ಚಿನ ಗಮನ ಹರಿಸಲಾಗಿದೆ. ಹಂತಹಂತವಾಗಿ ನಡೆಸಲಾಗುವುದು ಎಂದರು.ಮಂಜನಾಡಿ ಮಸೀದಿಯ ಉಸ್ತಾದ್ ಅಹಮ್ಮದ್ ಬಾಖವಿ ದುಆ ನೆರವೇರಿಸಿದರು.ಮಂಜನಾಡಿ ಜಮಾಅತ್ ಅಧ್ಯಕ್ಷ ಮೈಸೂರ್ ಬಾವಾ , ಕಾರ್ಯದರ್ಶಿ ಅಝೀಜ್ ಪರ್ತಿಪ್ಪಾಡಿ, ಉಪಾಧ್ಯಕ್ಷ ಎನ್. ಎಸ್ ಕರೀಂ ,…
ಉಳ್ಳಾಲ: ಇಲ್ಲಿನ ನಗರಸಭಾ ವ್ಯಾಪ್ತಿ ಸಮುದ್ರ ಮತ್ತು ನೇತ್ರಾವತಿ ನದಿಯನ್ನು ಹೊಂದಿರುವುದರಿಂದ ಈ ಭಾಗದಲ್ಲಿ ಮಳೆಗಾಲದ ಸಂದರ್ಭದಲ್ಲಿ ಪ್ರಾಕೃತಿಕ ವಿಕೋಪ ತಡೆಯುವ ನಿಟ್ಟಿನಲ್ಲಿ ಆದರ ನಿರ್ವಹಣೆಗೆ ಬೇಕಾದ ವ್ಯವಸ್ಥೆಗೆ ನಗರಸಭೆಯ ಅಧಿಕಾರಿಗಳೊಂದಿಗೆ, ಜನಪ್ರತಿನಿಧಿಗಳ ಕಾರ್ಯ ಅತ್ಯಂತ ಪ್ರಮುಖವಾಗಿದ್ದು, ಸಮುದ್ರ ಮತ್ತು ನದಿ ತಟದ ಮೀನುಗಾರರ, ಸಂಘ ಸಂಸ್ಥೆಗಳ ಸಹಕಾರದೊಂದಿಗೆ ವಿಕೋಪ ಎದುರಿಸಲು ಬೇಕಾದ ಕ್ರಮವನ್ನು ಕೈಗೊಳ್ಳಬೇಕು ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ. ಖಾದರ್ ತಿಳಿಸಿದರು.ಉಳ್ಳಾಲ ನಗರಸಭಾ ಸಭಾಂಗಣದಲ್ಲಿ ಪ್ರಕೃತಿ ವಿಕೋಪ ಮುನ್ನೆಚ್ಚರಿಕೆಯ ಪೂರ್ವಭಾವಿ ಸಭೆಯಲ್ಲಿ ಉಳ್ಳಾಲ ತಾಲೂಕಿಗೆ ನಿಯೋಜಿತ ನೂತನ ತಹಶೀಲ್ದಾರ್, ನಗರಸಭಾ ಕಮಿಷನರ್ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳ, ಸಿಬ್ಬಂದಿಗಳ ಮತ್ತು ನಗರಸಭಾ ಸದಸ್ಯರೊಂದಿಗೆ ಚರ್ಚೆ ನಡೆಸಿ ಮಾತನಾಡಿದರು.ನದಿ ತಟದಲ್ಲಿ ತುರ್ತುಕ್ರಮವಾಗಿ ದೋನಿಗಳ ಅಗತ್ಯ ಇದೆ. ಇದಕ್ಕೆ ಸ್ಥಳೀಯ ಮೀನುಗಾರರ ಸಹಕಾರ ಪಡೆದುಕೊಳ್ಳಬಹುದು, ಇದರೊಂದಿಗೆ ಅಗ್ನಿಶಾಮಕದಳ, ಆಂಬುಲೆನ್ಸ್ ವ್ಯವಸ್ಥೆಯನ್ನು ಆಯಕಟ್ಟಿನ ಪ್ರದೇಶದಲ್ಲಿ ನಿಯೋಜಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರವೂ ಅಗತ್ಯ ಎಂದರು.ಈ ಸಂದರ್ಭದಲ್ಲಿ ನಗರಸಭಾ…

