Author: UllalaVani

Kannada News From Coastal Karnataka

ಉಳ್ಳಾಲ: ಜೂ.14 ರಿಂದ ಜೂ.21 ರವರೆಗೆ ಕೊಣಾಜೆ ಗ್ರಾಮವನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗುವುದು. ಜಿಲ್ಲಾಡಳಿತದ ಆದೇಶದಂತೆ ಕ್ರಮ ಕೈಗೊಳ್ಳಲಾಗಿದೆ. ಗ್ರಾಮಸ್ಥರು ಸಹಕರಿಸಬೇಕು ಎಂದು ಕೊಣಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂಚಲಾಕ್ಷಿ ಹೇಳಿದ್ದಾರೆ.ಕೊಣಾಜೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.ಗ್ರಾಮದ 50 ಕ್ಕಿಂತ ಹೆಚ್ಚು ಪ್ರಕರಣಗಳನ್ನು ಕಂಡುಬಂದ ಪ್ರದೇಶಗಳಲ್ಲಿ ಹೆಚ್ಚಿನ ಪ್ರಾಧಾನ್ಯತೆ ನೀಡಿ , ವೈದ್ಯಕೀಯ ತಪಾಸಣೆ ಆರಂಭಿಸಲಾಗಿದೆ. ಕೊಣಾಜೆ ಗ್ರಾಮ ಸಂಪರ್ಕಿಸುವ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಹೊರತುಪಡಿಸಿ ಏಳು ರಸ್ತೆಗಳನ್ನು ಬಂದ್ ಮಾಡಲಾಗಿದೆ. ಬ್ಯಾಂಕ್, ಮದ್ಯದಂಗಡಿ ಸೇರಿದಂತೆ ಎಲ್ಲಾ ಅಂಗಡಿಗಳನ್ನು ಸಂಪೂರ್ಣ ಬಂದ್ ಮಾಡಿ ಕಟ್ಟುನಿಟ್ಟಿನ ಶಿಸ್ತು ಜಾರಿಗೊಳಿಸಲಾಗಿದೆ. ಗ್ರಾಮದ ಎರಡು ನ್ಯಾಯಬೆಲೆ ಅಂಗಡಿಗಳನ್ನು ಪೂರ್ಣವಾಗಿ ಬಂದ್ ಮಾಡಲಾಗಿದೆ. ತುರ್ತು ಅವಶ್ಯಕತೆ ಇದ್ದವರಿಗೆ ಮಾತ್ರ ಹೋಗಲು ಅವಕಾಶ ಮಾಡಿಕೊಡಲಾಗಿದೆ. ಪ್ರತಿ ಗ್ರಾಮದ ಗಡಿಭಾಗದಲ್ಲಿ ಸಹಾಯವಾಣಿ ಆರಂಭಿಸಲಾಗಿದೆ. ಆಹಾರ ಸಾಮಗ್ರಿಗಳನ್ನು ವಿತರಿಸಲು ಕೋವಿಡ್ ಟಾಸ್ಕ್ ಫೆÇೀಸ್9 ರಚಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು , ಗ್ರಾ.ಪಂ…

Read More

ಉಳ್ಳಾಲ: ಜನರು ರಕ್ತದಾನ ಮಾಡಲು ಹಿಂಜರಿಯುತ್ತಿರುವ ಕಾಲಘಟ್ಟದಲ್ಲಿ ರಕ್ತದ ಅಭಾವ, ರೋಗಿಗಳಿಗೆ ರಕ್ತ ಸಮರ್ಪಕವಾಗಿ ಪೂರೈಕೆಯಾಗದಿರುವುದನ್ನು ಮನಗಂಡು, ರಕ್ತದಾನದ ಮಹತ್ವ ಹಾಗೂ ಅದರಿಂದ ದಾನಿಗಳಿಗೆ ಆಗುವ ಪ್ರಯೋಜನದ ಬಗ್ಗೆ ಜಾಗೃತಿ ಮೂಡಿಸಿ ಸಂಘದ ಎಲ್ಲ ಸದಸ್ಯರ ಸಾಂಘಿಕ ಪ್ರಯತ್ನದಿಂದ 298ರಕ್ತದಾನ ಶಿಬಿರ ಆಯೋಜಿಸಿ ದಾನಿಗಳಿಂದ 29ಸಾವಿರ ಯೂನಿಟ್ ರಕ್ತ ಸಂಗ್ರಹಿಸಿ ಅರ್ಹ ಫಲಾನುಭವಗಿಳಿಗೆ ಪೂರೈಸಿದ ಮಂಗಳೂರಿನ ಬ್ಲಡ್ ಡೋನರ್ಸ್ ಮಂಗಳೂರು ಎಂಬ ಸಮಾಜ ಸೇವಾ ಸಂಸ್ಥೆ ಜೂ. 20ರಂದು ಬಾಳೆಪುಣಿ ಗ್ರಾಮದ ಹೂ ಹಾಕುವ ಕಲ್ಲಿನ ಎಸ್. ಕೆ. ಸಭಾಭವನದಲ್ಲಿ 300ನೇ ರಕ್ತದಾನ ಶಿಬಿರ ಆಯೋಜಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಸಿದ್ದಿಕ್ ಮಂಜೇಶ್ವರ ಹೇಳಿದರು.ದೇರಳಕಟ್ಟೆಯ ಯೇನೆಪೆÇಯ ಆಸ್ಪತ್ರೆ ಬಳಿಯ ಖಾಸಗಿ ಹೋಟೆಲ್ ನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 2013ರ ಜುಲೈನಲ್ಲಿ ಸಂಘ ಸ್ಥಾಪನೆಗೊಂಡಿದ್ದು ಜೂ. 14ರಂದು ಮಂಜನಾಡಿಯಲ್ಲಿ 299ನೇ ಶಿಬಿರ ಆಯೋಜಿಸಿದೆ. ರಕ್ತದಾನ ಶಿಬಿರವನ್ನು ಕೇವಲ ದಕ್ಷಿಣ ಕನ್ನಡ ಜಿಲ್ಲೆಗೆ ಸೀಮಿತಗೊಳಿಸದೆ ಉಡುಪಿ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು…

Read More

ಉಳ್ಳಾಲ: ಕೊರೊನ ಪಾಸಿಟಿವ್‍ನಿಂದ ಎಲ್ಲರೂ ದೂರ ಹೋಗುತ್ತಿರುವ ಕಾಲಘಟ್ಟದಲ್ಲಿ ಟಿ.ಜಿ. ರಾಜಾರಾಮ್ ಭಟ್ ಅವರ ನೇತೃತ್ವದಲ್ಲಿ ಹಿಂದೂ ಸಂಘಟನೆಗಳ ಯುವಕರ ತಂಡದ ಶ್ರಮದಾನದ ಮೂಲಕ ಧನಾತ್ಮಕ ಚಿಂತನೆಯೊಂದಿಗೆ ಆರ್ಥಿಕವಾಗಿ ಹಿಂದುಳಿದ ಕುಟುಂಬವೊಂದಕ್ಕೆ “ಆಸರೆ” ಯೋಜನೆಯಡಿ ಸುಂದರ ಮನೆ ನಿರ್ಮಿಸಿಕೊಟ್ಟಿರುವ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದ್ದು ಇದು ಇಡೀ ಸಮಾಜಕ್ಕೆ ಪಾಸಿಟಿವ್ ಕಾರ್ಯವಾಗಿದೆ ಎಂದು ಆರ್ ಎಸ್ ಎಸ್ ಮುಖಂಡ ಡಾ| ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.ಅವರು ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದ ಶೇಡಿಗುಂಡಿಯ ನಾರಾಯಣ ಪೂಜಾರಿ ಅವರಿಗೆ ಕೈರಂಗಳ ಪುಣ್ಯಕೋಟಿನಗರದ ಶಾರದಾಗಣಪತಿ ವಿದ್ಯಾಕೇಂದ್ರದ ಸಂಚಾಲಕ ಟಿ.ಜಿ. ರಾಜಾರಾಮ್ ಭಟ್ ನೇತೃತ್ವದಲ್ಲಿ ದಾನಿಗಳು, ಸಂಘಟನೆಗಳು, ಸ್ವಯಂಸೇವಕರ ಸಹಕಾರದಲ್ಲಿ ನಿರ್ಮಿಸಲಾದ “ಆಸರೆ” ನೂತನ ಮನೆಯ ಕೀಲಿ ಕೈಯನ್ನು ನಾರಾಯಣ ಪೂಜಾರಿ ಕುಟುಂಬಕ್ಕೆ ಹಸ್ತಾಂತರಿಸಿ, ಮನೆಯೊಳಗೆ ದೀಪ ಬೆಳಗಿಸಿದ ಬಳಿಕ ಅಂಗಳದಲ್ಲಿ ತುಳಸಿಗಿಡ ನೆಟ್ಟು ಮಾಧ್ಯಮದ ಜೊತೆಗೆ ಅವರು ಮಾತನಾಡಿದರು.ಟಿ.ಜಿ. ರಾಜಾರಾಮ್ ಭಟ್ ಅವರ ಅವಿರತ ಶ್ರಮದಿಂದ ಹಿರಿಯರ ಮಾರ್ಗದರ್ಶನದಲ್ಲಿ ಕಿರಿಯರು, ಅನೇಕ ಸಂಘಟನೆ ಸಹಕಾರದಲ್ಲಿ ಒಂದು…

Read More

ಉಳ್ಳಾಲ: ಕೇಂದ್ರ ಸರಕಾರ ಪೆಟ್ರೋಲ್ ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಹಗಲು ದರೋಡೆ ಮಾಡುತ್ತಿದ್ದು, ಬೆಲೆ ಕಡಿಮೆ ಮಾಡಿ ಬಡಜನರ ಕಷ್ಟಗಳಿಗೆ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಗ್ರಾಮ ಮಟ್ಟದಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಮುಡಿಪು ಬ್ಲಾಕ್ ಕಾಂಗ್ರೆಸ್ ಆಧ್ಯಕ್ಷ ಪ್ರಶಾಂತ್ ಕಾಜವ ಅಭಿಪ್ರಾಯಪಟ್ಟರು.ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಏರಿಸಿದ ಕೇಂದ್ರ ಸರ್ಕಾರ ಮತ್ತು ವಿದ್ಯುತ್ ದರ ಏರಿಸಿದ ರಾಜ್ಯ ಸರ್ಕಾರದ ವಿರುದ್ಧ ಮುಡಿಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಂಗಳವಾರ ಮುಡಿಪು ಜಂಕ್ಷನ್ ನಲ್ಲಿರುವ ಪೆಟ್ರೋಲ್ ಪಂಪ್ ಮುಂಭಾಗದಲ್ಲಿ ನಡೆದ ‘ಪೆಟ್ರೋಲ್ ನಾಟ್ ಔಟ್ 100’ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.ಕಳೆದ ಏಳು ವರ್ಷದ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರಕಾರದ ದುರಾಡಳಿತದಿಂದ ಜನರು ಬೀದಿಗೆ ಇಳಿದು ಹೋರಾಟ ನಡೆಸುವ ಸ್ಥಿತಿ ನಿರ್ಮಾಣವಾಗಿದೆ. ಕೆಲವೇ ಜನರ ಹಿತದೃಷ್ಟಿ ಕಾಯುವ ಈ ಸರಕಾರ ಬಡ ಮತ್ತು ಮದ್ಯಮ ವರ್ಗದ ಜನರ ಬದುಕನ್ನು ದುಸ್ತರಗೊಳಿಸಿದೆ. ಕಾಂಗ್ರೆಸ್ ಅ„ಕಾರವ„ಯಲ್ಲಿ ಪೆಟ್ರೋಲ್ ವಿಚಾರದಲ್ಲಿ…

Read More

ಮುಡಿಪು: ನಾವು ಕೊರೋನದ‌ ವಿರುದ್ಧ ಸಂಘಟಿತರಾಗಿ ಹೋರಾಡಿದರೆ ಕೊರೋನದ ಯಾವುದೇ ಅಲೆಯನ್ನು ಹೊಡೆದೋಡಿಸಬಹುದು. ಆತ್ಮಸ್ಥೈರ್ಯದೊಂದಿಗೆ ನಿಯಮಾವಳಿಗಳನ್ನು ಪಾಲಿಸಿಕೊಂಡು ಮುನ್ನಡೆದರೆ ಕೊರೋನ ಮೂರನೇ ಅಲೆಯನ್ನು ತಡೆಯಲು ಸಾಧ್ಯ ಎಂದು ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಅವರು ಹೇಳಿದರು.ಅವರು ಮುಡಿಪುವಿನಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದ ಕುರ್ನಾಡು ಶಕ್ತಿ ಕೇಂದ್ರದ ವತಿಯಿಂದ ಅಂಗನವಾಡಿ ಕಾರ್ಯಕರ್ತರಿಗೆ ಶನಿವಾರ ಮುಡಿಪುವಿನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ಜಗತ್ತಿನಲ್ಲಿ ಚೀನಕ್ಕಿಂತ ಭಾರತದಲ್ಲಿಯೇ ತಯಾರಾದ ವ್ಯಾಕ್ಸಿನ್ ನ್ನು ಜನರು ಹೆಚ್ಚು ಅಪೇಕ್ಷೆ ಪಡುತ್ತಿದ್ದಾರೆ. ಭಾರತದ‌ ಆರೋಗ್ಯ ವೈಜ್ಞಾನಿಕ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡುತ್ತಿದೆ ಎಂದರು.ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಇದರ ಅಧ್ಯಕ್ಷ ರಾದ ಸಂತೋಷ್ ಕುಮಾರ್ ಬೋಳಿಯಾರ್ ಅವರು ಮಾತನಾಡಿ, ಕೊರೋನ ಸಂದಿಗ್ಧ ಕಾಲದಲ್ಲಿ ಸಮಾಜಕ್ಕಾಗಿ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಮಹತ್ತರವಾದುದು. ಅವರ ಸೇವೆಯನ್ನು ಸಮಾಜ ಗುರುತಿಸಬೇಕು ಎಂದು ಹೇಳಿದರು.ಹಿರಿಯ ಮುಖಂಡರಾದ ಟಿ.ಜಿ.ರಾಜಾರಾಮ ಭಟ್ ಅವರು ಮಾತನಾಡಿ, ಕೊರೋನ ಎರಡನೇ ಅಲೆ ಸಮಾಜದಲ್ಲಿ ಬಹಳಷ್ಟು ತೊಂದರೆಯನ್ನು ಕೊಟ್ಟಿದೆ. ಇಂತಹ…

Read More

ಉಳ್ಳಾಲ : ಗ್ರಾಮ ಪಂಚಾಯಿತಿ ಸದಸ್ಯರು ತಮಗೆ ಬರುವ ಗೌರವ ಧನವನ್ನು ಆಶಾ ಕಾರ್ಯಕರ್ತರಿಗೆ ನೀಡಿರುವ ಕಾರ್ಯ ರಾಜ್ಯಕ್ಕೆ ಮಾದರಿ. ರಾಜ್ಯದಾದ್ಯಂತಹ ಇಂತಹ ಕಾರ್ಯಗಳು ನಡೆದು ಕೊರೊನಾ ಸಂಧಿಗ್ಧ ಸ್ಥಿತಿಯಲ್ಲಿ ಮನೆ ಮನೆಗೆ ಸುತ್ತಿ ಇತರರಿಗಾಗಿ ಶ್ರಮಿಸುವ ಆಶಾ ಕಾರ್ಯಕರ್ತರಿಗೆ ಸಹಾಯಕವಾಗಲಿ ಎಂದುಎಂದು ಶಾಸಕ ಯು.ಟಿ ಖಾದರ್ ಅಭಿಪ್ರಾಯಪಟ್ಟರು. ಅವರು ನರಿಂಗಾನ ಗ್ರಾ.ಪಂ ನ ನವೀಕೃತಗೊಂಡ ಕಟ್ಟಡದ ಉದ್ಘಾಟನೆ ಹಾಗೂ ನರಿಂಗಾನ ಗ್ರಾಮದ ಕೊರೊನಾ ವಾರಿಯರ್ಸ ಹಾಗೂ ಸಾಧಕರಿಗೆ ಸನ್ಮಾನಿಸಿ ಮಾತನಾಡಿದರು. ಗ್ರಾ.ಪಂ ನ ಸದಸ್ಯರು ಒಗ್ಗಟ್ಟಾಗಿ ಕಾರ್ಯಚರಿಸಿದಾಗ ಗ್ರಾಮದ ಅಭಿವೃದ್ಧಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನರಿಂಗಾನದ 30 ಮಂದಿ ಸದಸ್ಯರು ತಮಗೆ ಬರುವ ಗೌರವಧನವನ್ನು ಆಶಾ ಕಾರ್ಯಕರ್ತೆಯರಿಗೆ ನೀಡಿರುವುದು ಮಹತ್ತರ ಕಾರ್ಯ.ಗ್ರಾಮದ ಜನತೆ ಸಂಪೂರ್ಣ ಅಭಿವೃದ್ಧಿಗೆ ಒಂದೇ ಪಕ್ಷದ ಸದಸ್ಯರನ್ನು ಬೆಂಬಲಿಸಿದ್ದಾರೆ. ಅವರ ವಿಶ್ವಾಸಕ್ಕೆ ದ್ರೋಹ ಆಗದಂತೆ ಆಡಳಿತ ಸಮಿತಿ ಒಗ್ಗಟ್ಟಾಗಿ ಕಾರ್ಯಾಚರಿಸಬೇಕು. ಜುಲೈನಲ್ಲಿ ನೂತನ ರೇಷನ್ ಅಂಗಡಿ ಗ್ರಾಮದ ಎಲ್ಲರಿಗೂ ಅನುಕೂಲವಾಗುವ ಜಾಗದಲ್ಲಿ ಕಡ್ಡಾಯವಾಗಿ ಆರಂಭವಾಗಬೇಕು.ಗ್ರಾಮದ 300 ಮನೆಮಂದಿಯನ್ನು…

Read More

ಉಳ್ಳಾಲ : ಸಂಕಷ್ಟದ ಕಾಲದಲ್ಲಿ ಮಾನವೀಯ ಮೌಲ್ಯಗಳಿಗೆ ಬೆಲೆ ಕೊಡುವುದು ದೇವರು ಮೆಚ್ಚುವ ಕಾರ್ಯ ಎಂದು ರಾಣಿಪುರ ಚರ್ಚ್‍ನ ಧರ್ಮಗುರು ಫಾ.ಜಯಪ್ರಕಾಶ್ ಅಭಿಪ್ರಾಯಪಟ್ಟರು.ಅವರು ಯು.ಟಿ.ಕೆ ಹೆಲ್ಪ್ ಲೈನ್ ನಿರ್ದೇಶನದೊಂದಿಗೆ ಮುನ್ನೂರು ಗ್ರಾ.ಪಂ ಅಧ್ಯಕ್ಷ ವಿಲ್ಪ್ರೆಡ್ ಅವರು ವೈಯಕ್ತಿಕವಾಗಿ ಸಂತೋಷನಗರದ ಏಳನೇ ವಾರ್ಡಿನ ಫ್ಲೇವಿ ಡಿಸೋಜ ಎಂಬವರ ಮನೆಯಲ್ಲಿ ನೀಡಿದ ಆಹಾರ ಕಿಟ್ ವಿತರಣೆ ನಡೆಸಿ ಮಾತನಾಡಿದರು.ಮುನ್ನೂರು ಗ್ರಾ.ಪಂ ಅಧ್ಯಕ್ಷ ವಿಲ್ಫ್ರೆಡ್ ಡಿಸೋಜ ಮಾತನಾಡಿ, ಗ್ರಾಮದಲ್ಲಿ ಯುಟಿಕೆ ಹೆಲ್ಪ್ ಲೈನ್ ಸಹಯೋಗದೊಂದಿಗೆ ಬಹಳಷ್ಟು ಗ್ರಾಮಸ್ಥರಿಗೆ ವಿವಿಧ ರೀತಿಯಲ್ಲಿ ಸಹಕರಿಸಿದ್ದೇವೆ. ಸೋಂಕಿತರ ಮನೆಮಂದಿಗೂ ಎಲ್ಲಾ ರೀತಿಯ ಸಹಕಾರವನ್ನು ಪಂಚಾಯಿತಿ ವತಿಯಿಂದ ಮಾಡಲಾಗಿದೆ ಎಂದರು.ಈ ಸಂದರ್ಭ ಯುಟಿಕೆ ಹೆಲ್ಪ್ ಲೈನ್ ನ ಮುನ್ನೂರು ವಲಯ ಅಧ್ಯಕ್ಷ ಆರ್.ಕೆ.ಸಿ ಅಝೀಝ್, ನರಿಂಗಾನ ಗ್ರಾ.ಪಂ ಉಪಾಧ್ಯಕ್ಷ ನವಾಝ್, ಉಳ್ಳಾಲ ಬ್ಲಾಕ್ ಇಂಟಕ್ ಅಧ್ಯಕ್ಷ ಸಿದ್ದೀಖ್, ಉಪಾಧ್ಯಕ್ಷ ನೌಷೀರ್, ನದೀಮ್, ಸಿರಾಜ್, ಶಿಯಾಬ್, ಪಂ. ಸದಸ್ಯರುಗಳಾದ ಜಮೀಲಾ , ವಿಜಯಲಕ್ಷ್ಮೀ , ಪುಷ್ಪಾ ಅಂಚನ್, ಫ್ಲೇವಿ, ಸಮಾಜ ಸೇವಕ ಹೆರಾಲ್ಡ್…

Read More

ಉಳ್ಳಾಲ: ರೈತರು ಬೀದಿಯಲ್ಲಿ, ಬಡವರು ಸಂಕಷ್ಟದಲ್ಲಿದ್ದರೂ ಕಿವಿ ಕಣ್ಣು ಕಾಣಿಸದ ಮೋದಿ ಸರಕಾರ ಅಂಬಾನಿ, ಅಧಾನಿಯವರ ಆರ್ಥಿಕತೆಯನ್ನು ಹೆಚ್ಚಿಸುವಲ್ಲಿ ತೊಡಗಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ತಂದೊಡ್ಡಿದ ಅಹಿಂಸಾ ರೀತಿಯ ಚಳವಳಿ ಕೇಂದ್ರದ ಬಿಜೆಪಿ ಸರಕಾರವನ್ನು ಕಿತ್ತೊಗೆಯುವವರೆಗೂ ಕಾಂಗ್ರೆಸ್ ನಡೆಸಲಿದೆ ಎಂದು ಮುಡಾ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಹೇಳಿದರು.ಅವರು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪೆಟ್ರೋಲ್ ದರ ರೂ.100 ಕ್ಕೆ ಏರಿಕೆಯಾಗಿರುವುದನ್ನು ಖಂಡಿಸಿ ಕುತ್ತಾರು ಯೆನೆಪೋಯ ಆಸ್ಪತ್ರೆ ಬಳಿಯ ಪೆಟ್ರೋಲ್ ಬಂಕ್ ನಲ್ಲಿ ಭಾನುವಾರ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.ಸರಕಾರ ತಪ್ಪು ದಾರಿಯಲ್ಲಿದ್ದಾಗ ತಿದ್ದುವ ಕೆಲಸ ವಿರೋಧ ಪಕ್ಷ ಮಾಡಬೇಕಿದೆ. ಅದನ್ನು ಕಾಂಗ್ರೆಸ್ ಮಾಡುತ್ತಿದ್ದರೂ ಪ್ರಧಾನಿ ಕಿವಿ, ಕಣ್ಣು ಇಲ್ಲದಂತೆ ವರ್ತಿಸುತ್ತಿದ್ದಾರೆ. ಕ್ರೂಡ್ ಆಯಿಲ್ ಗೆ 65 ರೂ. ಇಳಿಕೆಯಾದರೂ ಸರಕಾರ ಅದನ್ನು ದೇಶದಲ್ಲಿ ಜಾರಿ ಮಾಡದೇ ಬಡವರನ್ನು ಸಂಕಷ್ಟಕ್ಕೆ ದೂಡಿ ಹಾಕಿದೆ ಎಂದರು.ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸದಾಶಿವ ಉಳ್ಳಾಲ್ ಮಾತನಾಡಿ, ಇತಿಹಾಸದಲ್ಲಿ ಪೆಟ್ರೋಲ್ ದರ 100 ರೂ. ಎಂದಿಗೂ ಆಗಿರಲಿಲ್ಲ. ಇದು…

Read More

ಉಳ್ಳಾಲ: ಸಂಕಷ್ಟದ ಸಂದರ್ಭ ಜನರಿಗೆ ಆಶ್ರಯವಾಗುವ ಉದ್ದೇಶದಿಂದ ಅಲೋಶಿಯಸ್ ಸಂಸ್ಥೆ ಜಿಲ್ಲೆಯಾದ್ಯಂತ ಆಹಾರ ಕಿಟ್ ಗಳನ್ನು ಒದಗಿಸುತ್ತಿದೆ. ಆದಷ್ಟು ಬೇಗ ಕೋವಿಡ್ ಮಹಾಮಾರಿ ದೂರವಾಗಿ ಎಲ್ಲರೂ ಎಂದಿನಂತೆ ಜೀವನ ನಡೆಸುವಂತಾಗಲಿ ಎಂದು ಸಂತ ಅಲೋಶಿಯಸ್ ಸಂಸ್ಥೆಯ ಕೋವಿಡ್ ಕೇರ್ ಮುಖ್ಯಸ್ಥ ಫಾ. ಸಿರಿಲ್ ಡಿಮೆಲ್ಲೋ ಹೇಳಿದರು. ಅವರು ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆ ಹಾಗೂ ಹಳೇ ವಿದ್ಯಾರ್ಥಿಗಳ ಸಹಕಾರದಿಂದ ನೀಡಲಾದ ಆಹಾರ ಕಿಟ್ ಗಳನ್ನುಕೃಷ್ಣನಗರ, ಉಚ್ಚಿಲ, ಕುಂಪಲ, ತೊಕ್ಕೊಟ್ಟು ಭಾಗದಲ್ಲಿ ವಿತರಿಸಿ ಮಾತನಾಡಿದರು. ರೇಡಿಯೋ ಸಾರಂಗ್ ಇನ್ಚಾಜ್೯ ರೋಷನ್ ಡಿಮೆಲ್ಲೋ, ಅಲೋಶಿಯಸ್ ಐಟಿಐ ಕಾಲೇಜು ಪ್ರಾಧ್ಯಾಪಕ ವಿಲ್ಸನ್, ರೀಚಲ್ ಸಮಾಜ ಸೇವಾ ಸಂಸ್ಥೆಯ ನಿರ್ಮಾ ಡಿಸೋಜ, ಸಿರಿಲ್ ಡಿಸೋಜ ಉಪಸ್ಥಿತರಿದ್ದರು.

Read More

ತೊಕ್ಕೊಟ್ಟು: ಇಲ್ಲಿನ ಫ್ಲೈಓವರಿನಡಿ ಬಿಗು ತಪಾಸಣೆ ನಡೆಸಿದ ಪೊಲೀಸರು ಅನಗತ್ಯವಾಗಿ ತಿರುಗಾಡುವ ವಾಹನ ಸವಾರರನ್ನು ತಡೆದು ದಂಡ ವಿಧಿಸಿದರು.ಉಳ್ಳಾಲ ಪಿಎಸ್ ಐ ರೇವಣ್ಣ ಸಿದ್ದಯ್ಯ ನೇತೃತ್ವದಲ್ಲಿ ಪೊಲೀಸರು ತಪಾಸಣೆ ನಡೆಸಿದರು. ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ನಿಂತ ಪೊಲೀಸರು 10ಕ್ಕೂ ಅಧಿಕ ದ್ವಿಚಕ್ರ ವಾಹನಗಳಿಗೆ ದಂಡ ವಿಧಿಸಿದರು.

Read More