UN networks ಉಳ್ಳಾಲ: ನೇತ್ರಾವತಿ ಸೇತುವೆಯಲ್ಲಿ ಕಸ ಬಿಸಾಡುವವರ ವಿರುದ್ಧ ವೃಕ್ಷ ಎನ್ ಜಿ ಒ ನ ಬಾಸ್ಕಿಯಾಬ್ಸ್ ೯ ಯುವ ತಂಡದ ವತಿಯಿಂದ ಜಾಗೃತಿ ಜಾಥಾ ಎರಡನೇ ದಿನ ನಡೆಯಿತು. ಸುಮಾರು 100 ರಷ್ಟು ಕಾರ್ಯಕರ್ತರು ನೇತ್ರಾವತಿ ಸೇತುವೆಯುದ್ದಕ್ಕೂ ಸಾಲಾಗಿ ನಿಂತು ಮೊಬೈಲ್ ಟಾಚ್೯ ಹಿಡಿದು ಕಸ ಬಿಸಾಡದಂತೆ ಎಚ್ಚರಿಕೆಯ ಜಾಗೃತಿ ಮೂಡಿಸಿದರು. ಪರಿಸರ ಮಾಲಿನ್ಯದ ವಿರುದ್ಧ ಸಂಸ್ಥೆ ಪರಿಣಾಮಕಾರಿಯಾಗಿ ಜಾಗೃತಿ ಜಾಥಾಗಳನ್ನು ನಡೆಸುತ್ತಾ ಬಂದಿದೆ. ಇತ್ತೀಚೆಗೆ ಬೆಂಗ್ರೆ ಸಮುದ್ರ ತೀರದಲ್ಲಿ ತ್ಯಾಜ್ಯದ ರಾಶಿ ವಿರುದ್ಧ ಜಾಗೃತಿಗೆ ಮುಂದಾದಾಗ, ಅಲ್ಲಿ ಶೇಖರಣೆಯಾಗುವ ತ್ಯಾಜ್ಯವೆಲ್ಲ ನೇತ್ರಾವತಿ ಸೇತುವೆಯಿಂದ ಎಸೆದದ್ದಾಗಿದೆ ಎಂಬುದು ಗೊತ್ತಾದ ಹಿನ್ನೆಲೆಯಲ್ಲಿ ನೇತ್ರಾವತಿ ಸೇತುವೆಯಲ್ಲೇ ಜಾಥಾ ಕೈಗೊಳ್ಳಲು ತೀರ್ಮಾನಿಸಿ, ಇಂದು ಎರಡನೇ ದಿನ ನಸುಕಿನಿಂದ ಕಾರ್ಯಕ್ರಮ ನಡೆಸಿದೆ.ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಶೀನ ಶೆಟ್ಟಿ, ಬಿಗ್ ಬ್ಯಾಂಗ್ ಸಕ್ರಿಯ ಸದಸ್ಯ ಮಹಮ್ಮದ್ ಫೌಝಾನ್ ಶೇಖ್, ಹಸಿರುದಳ ನಾಗರಾಜ್ ರಾಘವ್ ಅಂಚನ್, ಎಪಿಡಿ ಫೌಂಡೇಶನ್ ನ ವಾಣಿಶ್ರೀ ಬಿ.ಆರ್ , ಮನಪಾ ಸದಸ್ಯೆ…
Author: UllalaVani
UN networks ಮಂಗಳೂರು: ತೊಕ್ಕೊಟ್ಟು ಒಳಪೇಟೆಯ ಬೀಫ್ ಸ್ಟಾಲ್ ಗೆ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನಾಗರಾಜ್ (32)ಬಂಧಿತ ಆರೋಪಿಯಾಗಿದ್ದಾನೆ. ತೊಕ್ಕೊಟ್ಟು ಒಳಪೇಟೆಯಲ್ಲಿ 4 ಬೀಪ್ ಸ್ಟಾಲ್ ಗಳಿಗೆ ಬೆಂಕಿ ಹಚ್ಚಲಾಗಿತ್ತು. ಮೊಹಮ್ಮದ್ ಹನೀಫ್ ಎಂಬವರ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧಿಸಿ ಪೊಲೀಸರು ಸಿಸಿಟಿವಿ ಆಧರಿಸಿ ತನಿಖೆ ಕೈಗೊಂಡಿದ್ದರು. ಜ.8ರಂದು ರಾತ್ರಿ ಕೃತ್ಯ ನಡೆದಿದ್ದ ದಿನ ನಾಗರಾಜ್ ಆ ಭಾಗದಲ್ಲಿ ಸುತ್ತಾಡುವುದು ಕಂಡುಬಂದಿದ್ದರಿಂದ ಆತನನ್ನು ವಶಕ್ಕೆ ಪಡೆದು ವಿಚಾರಿಸಿದ್ದಾರೆ. ಈ ವೇಳೆ, ತಾನೇ ಕೃತ್ಯ ಮಾಡಿದ್ದಾಗಿ ಒಪ್ಪಿದ್ದಾಗಿ ಹೇಳಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
UN networks ಉಳ್ಳಾಲ :ಪಾದಾಚಾರಿ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ಸ್ಥಳೀಯರು ಹಿಡಿದು ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ್ದು ಆರೋಪಿಯ ವಿರುದ್ದ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಸ್ಥಳೀಯ ಮಹಿಳೆಯರು ಪೊಲೀಸ್ ಠಾಣೆಯಲ್ಲಿ ಧರಣಿ ನಡೆಸಿದ ಘಟನೆ ನಡೆದಿದೆ. ಉಳ್ಳಾಲ ಉಳಿಯಕ್ಕೆ ಸಂಪರ್ಕಿಸುವ ಉಳ್ಳಾಲ ಬಂಡಿಕೊಟ್ಯ , ಗೊಳಿಯಡಿ ರಸ್ತೆಯಾಗಿ ಮಹಿಳೆಯರು ನಡೆದುಕೊಂಡು ಹೋಗುತ್ತಿದ್ದಾಗ ರಸ್ತೆ ಬದಿಯ ಓಣಿ ಮತ್ತು ಬೈಕ್ ನಲ್ಲಿ ಬರುವ ಆಗಂತುಕರು ಮಹಿಳೆಯ ಮೈ ಸವರಿಕಂಡು ಹೋಗುತ್ತಿದಗದು ಕಳೆದ 15 ದಿನಗಳಿಂದ ಮೂರಿ ನಾಲ್ಕು ಬಾರಿ ಇಂತಹ ಘಟನೆಗಳು ನಡೆದಿತ್ತು. ಶುಕ್ರವಾರವೂ ಇಂತಹ ಘಟನೆ ನಡೆದಾಗ .ಸ್ಥಳೀಯರು ಹಿಡಿದಿದ್ದು ಅಲೇಕಳ ನಿವಾಸಿ 16 ರ ಬಾಲಕನನ್ನು ಉಳ್ಳಾಲ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.
ಮುಡಿಪು: ಅಕ್ರಮ ಜಾನುವಾರು ಸಾಗಾಟ ನಡೆಸುತ್ತಿದ್ದ ಆರೋಪದ ಹಿನ್ನಲೆಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಟೆಂಪೋ ಅಡ್ಡಹಾಕಿದ ಘಟನೆ ಮುಡಿಪು ಸಮೀಪ ನಡೆದಿದೆ. ಕೋಟೆಕಾರು ಡೈರಿಯಿಂದ, ಬಾಕ್ರಬೈಲು ಡೈರಿಗೆ ಆರು ಹಸುಗಳು, ಒಂದು ಕರುಕೊಂಡೊಯ್ಯಲಾಗುತ್ತಿದ್ದ ಲಾರಿಯನ್ನು ಸಂಘಟನೆಯ ಕಾರ್ಯಕರ್ತರು ಅಡ್ಡ ಹಾಕಿದ್ದಾರೆ. ಸ್ಥಳಕ್ಕೆ ಕೊಣಾಜೆ ಪೊಲೀಸರು ಆಗಮಿಸಿ ಟೆಂಪೋ ವಶಪಡಿಸಿಕೊಂಡಿದ್ದಾರೆ ವೈದ್ಯರ ಅನುಮತಿ ಪತ್ರ ಪಡೆದು ಸಾಗಾಟವನ್ನು ನಡೆಲಾಗಿದೆ ಎಂದು ತಿಳಿದು ಬಂದಿದ್ದು ಕೊಣಾಜೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
UN networks ಉಳ್ಳಾಲ: ವೈಡ್ ಬಾಲ್ ರೈಟ್ ಎಂದು ಹೇಳಿದ ವಿಚಾರಕ್ಕೆ ಸಂಬಂಧಿಸಿ ಕೆ.ಸಿ ರೋಡ್ ಮತ್ತು ಅಳೇಕಲ ದ ಎರಡು ತಂಡಗಳ ನಡುವೆ ಗಲಾಟೆ ಆರಂಭವಾಗಿ ಮಾರಾಮಾರಿ ನಡೆದು ಪೊಲೀಸರು ಲಾಠಿಯೇಟು ನೀಡಿದ ಘಟನೆ ಉಳ್ಳಾಲದ ಅಳೇಕಲ ಮದನಿ ಶಾಲೆಯಲ್ಲಿ ಶನಿವಾರ ನಡೆದಿದ್ದು, ಇದೀಗ ವೀಡಿಯೋ ವೈರಲ್ ಆಗುವ ಮೂಲಕ ಬೆಳಕಿಗೆ ಬಂದಿದೆ. ಉಳ್ಳಾಲ್ ಕ್ರಿಕೇಟ್ ಅಸೋಸಿಯೇಷನ್ ವತಿಯಿಂದ ಅಳೇಕಲದ ಮದನಿ ಶಾಲಾ ಮೈದಾನದಲ್ಲಿ ಅಂಡರ್ ಆಮ್೯ ಟೂರ್ನಮೆಂಟ್ ಆಯೋಜಿಸಲಾಗಿತ್ತು. ಆಟದ ನಡುವೆ ವೈಡ್ ಬಾಲ್ ಕುರಿತು ವಿವಾದ ಏರ್ಪಟ್ಟಿತ್ತು. ಅದು ತಾರಕಕ್ಕೇರಿ ಹೊಯ್ಕೈ ನಡೆದಿತ್ತು. ಬಳಿಕ ಮಾರಾಮಾರಿ ನಡೆದಿದ್ದು, ಇದನ್ನು ಕಂಡ ಉಳ್ಳಾಲ ಪೊಲೀಸರು ಕ್ರೀಡಾಂಗಣಕ್ಕೆ ತೆರಳಿ ಮಾರಾಮಾರಿಯಲ್ಲಿ ಭಾಗವಹಿಸಿದ್ದ ಮಂದಿಗೆ ಲಾಠಿಯೇಟು ನೀಡಿ ಓಡಿಸಿದ್ದಾರೆ. ಘಟನೆ ಕುರಿತು ಯಾವುದೇ ಪ್ರಕರಣಗಳು ದಾಖಲಾಗಿಲ್ಲ.
UN networksಉಳ್ಳಾಲ: ಟೈಲರ್ ಮಹಿಳೆ ಗಂಭೀರ ಗಾಯ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಕ್ಷಾ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮದಕ ತಾರಿಗುಡ್ಡೆ ನಿವಾಸಿ ಶೋಭಾ ಗಂಭೀರ ಗಾಯಗೊಂಡು ನಿಗೂಢವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಕ್ಷಾ ಚಾಲಕ ಚೆಂಬುಗುಡ್ಡೆ ನಿವಾಸಿ ಸಾದಿಕ್(25) ಎಂಬಾತನನ್ನು ಸಂಚಾರಿ ಪೊಲೀಸರ ವಶಕ್ಕೆ ಪಡೆದುಕೊಂಡಿದ್ದಾರೆ. ಸಂಚಾರಿ ಎಸಿಪಿ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ.
UN networks ಉಳ್ಳಾಲ: ಬೀಚ್ ಬಸ್ಸು ನಿಲ್ದಾಣ ಬಳಿ ರಾತ್ರಿ ಹೊತ್ತು ವಿನಾ ಕಾರಣ ತಿರುಗುತ್ತಿದ್ದವರನ್ನು ಠಾಣೆ ಮಟ್ಟಿಲೇರಿಸಿದ ಕಮಿಷನರ್ ಶಶಿಕುಮಾರ್ ಇದೀಗ ಎರಡನೇ ಬಾರಿಗೆ ಉಳ್ಳಾಲಕ್ಕೆ ಆಗಮಿಸಿ ಉಳ್ಳಾಲ ದರ್ಗಾ ಸೇರಿದಂತೆ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿದ್ದು, ಉಳ್ಳಾಲದಾದ್ಯಂತ ಪಾದಯಾತ್ರೆ ನಡೆಸಿ ಕೋಡಿಯಲ್ಲಿ ಯುವಕರೊಂದಿಗೆ ಕ್ರಿಕೆಟ್ ಆಟವಾಡಿ ಪೆÇಲೀಸರು ಜನರೊಂದಿಗಿದ್ದಾರೆ ಎನಉವ ಸಂದೇಶವನ್ನು ನೀಡಿದ್ದಾರೆ. ಕಳೆದ ವಾರ ಉಳ್ಳಾಲ, ಸೋಮೇಶ್ವರ ಉಚ್ಚಿಲ ಬೀಚ್ ಸೇರಿದಂತೆ ಬಸ್ಸು ನಿಲ್ದಾಣಗಳಲ್ಲಿ ರಾತ್ರಿ ಪಾರ್ಟಿ ಮಾಡುತ್ತಿದ್ದ ಯುವಕರಿಗೆ ಠಾಣೆಯ ರುಚಿ ತೋರಿಸಿದ್ದರು. ಶನಿವಾರ ಬೀಫ್ ಸ್ಟಾಲ್‍ಗೆ ಬೆಂಕಿ ಬಿದ್ದ ಘಟನೆಯ ನಿಮಿತ್ತ ಆಗಮಿಸಿದ್ದ ಕಮಿಷನರ್ ಶಶಿಕುಮಾರ್ ಉಳ್ಳಾಲದಲ್ಲಿ ಕೋಮು ಸೌಹಾರ್ಧತೆ ಕದಡದಿರಲಿ ಎನ್ನುವ ನಿಟ್ಟಿನಲ್ಲಿ ಉಳ್ಳಾಲ ದರ್ಗಾ ಮತ್ತು ಮೊಗವೀರಪಟ್ಣದ ವ್ಯಾಘ್ರ ಚಾಮುಂಡೇಶ್ವರೀ ದೇವಸ್ಥಾನಕ್ಕೆ ಭೆಟಿ ನೀಡಿ ಧಾರ್ಮಿಕ ಮುಖಂಡರೊಂದಿಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಡಿಸಿಪಿ ಹರಿರಾಂ, ಉಳ್ಳಾಲ ಠಾಣಾ„ಕಾರಿ ಸಂದೀಪ್ ಎಂ.ಜಿ., ಸಿಸಿಬಿ ಇನ್ಸ್‍ಪೆಕ್ಟರ್ ಮಹೇಶ್ ಕುಮಾರ್, ಪ್ರಕಾಶ್ ಮತ್ತು ಪೆÇಲೀಸ್…
UN networks ಕೋಟೆಕಾರು: ಪಾನೀರ್ ದಯಾಮಾತೆ ಚರ್ಚ್‍ನ ವಾರ್ಷಿಕ ಹಬ್ಬ ರವಿವಾರ ನಡೆಯಿತು. ಜಪ್ಪು ಸೈಂಟ್ ಜೋಸೆಫ್ ಸೆಮಿನರಿಯ ಪ್ರಾಧ್ಯಾಪಕ ವಂ| ಲಿಯೊ ಲಸ್ರಾದೊ ಅವರು ಬಲಿ ಪೂಜೆಯ ನೇತೃತ್ವ ವಹಿಸಿದ್ದರು. ಚರ್ಚ್‍ನ ಧರ್ಮ ಗುರು ವಂ| ಡೆನಿಸ್ ಸುವಾರಿಸ್, ವಂ| ವಲೇರಿಯನ್ ಪಿಂಟೊ, ಡೀಕನ್ ಸೂರಜ್ ಲೋಬೊ ಉಪಸ್ಥಿತರಿದ್ದರು. ಕೊರೊನಾ ಬಗ್ಗೆ ಆರೋಗ್ಯ ಇಲಾಖೆ ನೀಡಿದ ಮಾರ್ಗಸೂಚಿಯನ್ವಯ ಸಾಮಾಜಿಕ ಅಂತರ ಮತ್ತಿತರ ನಿಯಮಗಳನ್ನು ಪಾಲಿಸಿಕೊಂಡು ಭಕ್ತಾದಿಗಳು ಬಲಿ ಪೂಜೆಯಲ್ಲಿ ಪಾಲ್ಗೊಂಡರು.
UN networks ಗ್ರಾಮ ಪಂಚಾಯಿತಿ ಚುನಾವಣೆ ವಿಚಾರದಲ್ಲಿ ರಾಜ್ಯ ಹಜ್ ಸಮಿತಿ ಸದಸ್ಯನ ಮೇಲೆ ನಡೆದ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ಆರೋಪಿಗಳಿಗೆ ಜಾಮೀನು ನೀಡಿದೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತ, ಹಜ್ ಸಮಿತಿ ಸದಸ್ಯರೂ ಆಗಿರುವ ಮೊಹಮ್ಮದ್ ಹನೀಫ್ ಅವರು ಮಂಜನಾಡಿ ಗ್ರಾಮದಿಂದ ಸ್ಪರ್ಧಿಸಲು ಮುಂದಾಗಿದ್ದರು. ಇದರಿಂದ ಅಸಮಾಧಾನಗೊಂಡ ಆರೋಪಿಗಳಾದ ಅಬ್ದುಲ್ ಕರೀಂ ಮತ್ತು ಹೈದರಾಲಿ ಎಂಬವರು ಹನೀಫ್ ಅವರನ್ನು ಮನೆಗೆ ಕರೆಸಿ ಸೋಡಾ ಬಾಟಲಿಯಿಂದ ಹಲ್ಲೆ ನಡೆಸಿದ್ದರು. ಇದರಿಂದಾಗಿ ತಲೆ ಒಡೆದು ಗಂಭೀರ ಗಾಯಗೊಂಡ ಹನೀಫ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚುನಾವಣೆ ಸನಿಹದಲ್ಲಿರುವಾಗ ಈ ಘಟನೆ ನಡೆದ ಕಾರಣ ಪ್ರಕರಣ ರಾಜಕೀಯವಾಗಿಯೂ ತಿರುವು ಪಡೆದಿತ್ತು.ಪ್ರಕರಣ ದಾಖಲಿಸಿದ್ದ ಕೊಣಾಜೆ ಪೊಲೀಸರು, ಆರೋಪಿಗಳನ್ನು ಬಂಧಿಸಲು ಹೋದಾಗ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಅಬ್ದುಲ್ ಕರೀಂ ವಿರುದ್ಧ ಹೆಚ್ಚುವರಿ ಕೇಸು ದಾಖಲಿಸಿ ಆರೋಪಿಗಳನ್ನು ಬಂಧಿಸಲಾಗಿತ್ತು.ಈ ಪ್ರಕರಣದ ವಿಚಾರಣೆ ಶುಕ್ರವಾರ ಜಿಲ್ಲಾ ನಾಲ್ಕನೇ ಹೆಚ್ಚುವರಿ ನ್ಯಾಯಾಲಯದಲ್ಲಿ ನಡೆದಿದ್ದು, ಆರೋಪಿಗಳಿಗೆ ಜಾಮೀನು ಮಂಜೂರುಗೊಳಿಸಿ ಜೈಲಿನಿಂದ…
UN networks ತೊಕ್ಕೊಟ್ಟು: ವಿವಾದಿತ ಬೀಫ್ ಸ್ಟಾಲ್ ಅಂಗಡಿಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನಾ ಸ್ಥಳಕ್ಕೆ ಉಳ್ಳಾಲ ನಗರಸಭೆಯ ಅಧ್ಯಕ್ಷೆ ಚಿತ್ರ ಚಂದ್ರಕಾಂತ್ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಇದೇ ಜಾಗದಲ್ಲಿ ಸದ್ಯ ದ ಮಟ್ಟಿಗೆ ಟೆಂಟ್ ಮಾದರಿಯಲ್ಲಿ ಬೀಫ್ ಸ್ಟಾಲ್ ಹಾಕಲು ಅನುಮತಿಯನ್ನು ನೀಡಲಾಗುವುದು.ನಿಮ್ಮ ಲೈಸನ್ಸ್ ರದ್ದಾಗಿಲ್ಲ ಆದರೆ ತಡೆ ಹಿಡಿಯಲಾಗಿದೆ. ಈ ಬಗ್ಗೆ ಸಂಬಂಧಿಸಿದ ಪಟ್ಟ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ. ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ. ಆದಷ್ಟು ಬೇಗ ಇದೇ ಜಾಗದಲ್ಲಿ ಕಟ್ಟಡ ನಿರ್ಮಾಣವನ್ನು ನಗರಸಭೆ ಮಾಡಿ ಎಲ್ಲರಿಗೂ ವ್ಯಾಪಾರ ಕ್ಕೆ ಅನುಕೂಲ ಮಾಡಿಕೊಡಲಾಗುತ್ತದೆ. ಅಕ್ರಮ ಬೀಫ್ ಸ್ಟಾಲ್ ಎಂದು ಆರೋಪಿಸಿ ಉಳ್ಳಾಲದ ಬಜರಂಗದಳ- ವಿಹಿಂಪ ಇತ್ತೀಚೆಗೆ ತೆರವಿಗೆಪೊಲೀಸ್ ಇಲಾಖೆ ಮತ್ತು ಉಳ್ಳಾಲ ನಗರಸಭೆ ಪೌರಾಯುಕ್ತರಿಗೆ ಮನವಿ ನೀಡಿದ್ದರು.ಇದೀಗ ಎರಡು ಅಂಗಡಿಗಳಿಗೆ ಬೆಂಕಿ ಹಚ್ಚುವ ಕೆಲಸ ನಡೆದಿದೆ.

