ಕಂಬಳಪದವು: ವರ್ಷದ ಹಿಂದೆ ತಾಲೂಕಾಗಿ ಘೋಷಣೆಯಾಗಿದ್ದ ಉಳ್ಳಾಲಕ್ಕೆ ನೂತನ ತಹಸೀಲ್ದಾರ್ ಇಂದು ನೇಮಕವಾಗಿದೆ. ಕಂಬಳಪದವು ಭಾರೀ ವಾಹನ ಚಾಲನಾ ತರಬೇತಿ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಯು.ಟಿ ಖಾದರ್ ಹೇಳಿಕೆ ನೀಡಿದ್ದಾರೆ. ತಾಲೂಕು ಮಟ್ಟದ ಆರ್ ಟಿ ಓ ಕಚೇರಿಯೂ ಕಂಬಳಪದವು ಭಾರೀ ವಾಹನ ಚಾಲನಾ ತರಬೇತಿ ಕೇಂದ್ರದಲ್ಲಿ ಆರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ.
Author: UllalaVani
UN networks ಕುತ್ತಾರು: ರಸ್ತೆ ಅಗಲೀಕರಣ ವೇಳೆ ಮೆಸ್ಕಾಂ ವಯರಿಗೆ ಕ್ರೇನ್ ತಗಲಿದ ಪರಿಣಾಮ ಕ್ರೇನ್ ಚಾಲಕ ಪವಾಡಸದೃಶ ಪಾರಾಗಿರುವ ಘಟನೆ ತೊಕ್ಕೊಟ್ಟು- ಮೆಲ್ಕಾರ್ ರಸ್ತೆಯಲ್ಲಿ ನಡೆದಿದೆ. ಕ್ರೇನ್ ಮೂಲಕ ರಸ್ತೆ ಅಗಲೀಕರಣ ನಡೆಸಲಾಗುತ್ತಿತ್ತು.ಈ ಸಂದರ್ಭದಲ್ಲಿ ಮೆಸ್ಕಾಂ ವಯರ್ ಗೆ ಕ್ರೇನ್ ತಗಲಿದೆ ಪರಿಣಾಮ ವಯರ್ ರಸ್ತೆ ಗೆ ಬಿದ್ದಿದೆ. ಕ್ರೇನ್ ಚಾಲಕ ತಕ್ಷಣವೇ ಕ್ರೇನ್ ನಿಂದ ಹಾರಿ ಪವಾಡ ಸದೃಶವಾಗಿ ಪಾರಾಗಿದ್ದಾರೆ. ಈ ರಸ್ತೆಯ ಮೂಲಕ ನರ್ಸಿಂಗ್ ವಿದ್ಯಾರ್ಥಿ ನಡೆದಾಡುತ್ತಿದ್ದುರಸ್ತೆಗೆ ಬಿದ್ದ ವಯರಿನಿಂದ ಸೆಕೆಂಡುಗಳ ಅಂತರದಲ್ಲಿ ಪರಾಗುವ ಮೂಲಕ ಮಹಾದುರಂತವೊಂದು ತಪ್ಪಿದೆ. ಕೆಲ ನಿಮಿಷಗಳ ಕಾಲ ರಸ್ತೆ ಸಂಚಾರದಲ್ಲಿ ಅಡ್ಡಿ ಉಂಟಾಗಿದ್ದು ಮೆಸ್ಕಾಂ ಎಇಇ ದಯಾನಂದ್ ಸ್ಥಳಕ್ಕೆ ಭೇಟಿ, ಲೈನ್ ಮೆನ್ ಗಳಿಂದ ಜೀವದ ಹಂಗು ತೊರೆದು ತುರ್ತು ಕಾರ್ಯಾಚರಣೆ ನಡೆಸುತ್ತಿದ್ದು ಮದನಿನಗರ ನಿವಾಸಿಗಳುಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದಾರೆ. ಮಹಾದುರಂತ: ಬಸ್, ವಾಹನಗಳ ಮೇಲೆ ಹಲವು ಕಿಲೋ ವ್ಯಾಟ್ ವಿದ್ಯುತ್ ಹೊಂದಿರುವ ಸಾಲು ಸಾಲು ತಂತಿಗಳು ಬೀಳುವ ಸಾಧ್ಯತೆ ಇತ್ತು.
ತೊಕ್ಕೊಟ್ಟು: ತೊಕ್ಕೊಟ್ಟು ಅಯ್ಯಪ್ಪ ಸ್ವಾಮಿ ದೇವಸ್ಥಾನದ ಕಾಣೆಕೆ ಹುಂಡಿಯನ್ನು ಕಳ್ಳರು ಒಡೆಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
UN networks ಉಳ್ಳಾಲ: ಪರಿಶಿಷ್ಟ ಪಂಗಡಕ್ಕೆ ಸೇರಿದ ಯುವತಿಯನ್ನು ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಯನ್ನು ಕೊಣಾಜೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಪಾನೇಲ ನಿವಾಸಿ ಇರ್ಷಾದ್ (23) ಬಂಧಿತ.ಖಾಸಗಿ ಸಂಸ್ಥೆಯಲ್ಲಿ ಕೆಲಸಕ್ಕಿದ್ದ ಯುವತಿ , ಕೆಲಸ ಮುಗಿಸಿ ಮನೆ ಕಡೆಗೆ ವಾಪಸ್ಸಾಗುವ ಸಂದರ್ಭ ಆರೋಪಿ ಅತ್ಯಾಚಾರಕ್ಕೆ ಯತ್ನಿಸಿದ್ದನು. ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿ ಇಂದು ಆರೋಪಿಯನ್ನು ಬಂಧಿಸಿದ್ದಾರೆ.
UN networks ಉಳ್ಳಾಲ : ಮಂಗಳೂರು ಕ್ಷೇತ್ರದ ಶಾಸಕರೇ ಬೆಂಗಳೂರಿಗೆ ಹೋಗುವುದನ್ನು ಕಡಿಮೆ ಮಾಡಿ ಉಳ್ಳಾಲದಲ್ಲಿ ಸುತ್ತು ಹಾಕಿ ಇಲ್ಲಿನ ವಿಚಾರಗಳನ್ನು ಅರಿವು ಮಾಡಿಕೊಳ್ಳಲಿ. ಮಂದಿರ, ಕಟ್ಟೆಯಲ್ಲಿ ಇಂತಹ ಘಟನೆ ನಡೆದಿದೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು. .ಹಿಂಪ ಬಜರಂಗದಳ ಉಳ್ಳಾಲ ಪ್ರಖಂಡ ಉಳ್ಳಾಲ ಪರಿಸರದಲ್ಲಿ ನಡೆಯುವ ಹಿಂದೂ ವಿರೋಧಿ ಕೃತ್ಯಗಳನ್ನು ಹಾಗೂ ಹಿಂದೂ ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸುತ್ತಿರುವ ಹುನ್ನಾರದ ವಿರುದ್ದ ತೊಕ್ಕೊಟ್ಟು ಬಸ್ಸು ನಿಲ್ದಾಣದಲ್ಲಿ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ದುಷ್ಕøತ್ಯಗಳು ಮಸೀದಿಯಲ್ಲಿ ಆಗುತ್ತಿದ್ದರೆ ಶಾಸಕರು ಅರ್ಥ ಮಾಡಿಕೊಳ್ಳಬೇಕಿದೆ. ಈ ಕಾಲದಲ್ಲಿ ಕೊರಗಜ್ಜ ಕಾಯೆರ್ ದಂಟೆ ಬೀಸಿದರೆ ಅನ್ಯಾಯ ಎಸಗಿದವರ ವಿಳಾಸ ಸಿಗಲು ಸಾಧ್ಯವಿಲ್ಲ. ಯಾರೇ ದುಷ್ಕøತ್ಯ ಮಾಡಿದರೂ ಆತ ಸಮಾಜದ ಎದುರು ವಿಕೃತ ಕಾಮಿ. ಫರಂಗಿಪೇಟೆಯಲ್ಲಿಲ್ಲದ ರಿಯಾಝ್ ಫರಂಗಿಪೇಟೆ ಎರಡು ಸೀಟು ಹಿಡಿದುಕೊಂಡು ತಾಂಟಲು ಬರುತ್ತಿರುವುದು ಹಾಸ್ಯಾಸ್ಪದ. ತಾಕತ್ತಿದ್ದಲ್ಲಿ ಹಿಂದೂಗಳಿರುವ ಜಾಗದಲ್ಲಿ ನಿಂತು ಗೆದ್ದು ತೋರಿಸಲಿ. ಅವರ ಪಕ್ಷದ ಸಿದ್ಧಾಂತದ ಸ್ವತಂತ್ರ್ಯಕ್ಕೆ ಅರ್ಥವಿಲ್ಲ. ಅತಂತ್ರದಲ್ಲಿ…
UN networks ಉಳ್ಳಾಲ: ಬಿಜೆಪಿ ಸರಕಾರದ ವೈಫಲ್ಯದಿಂದ ದುಷ್ಕರ್ಮಿಗಳು ದುಷ್ಕೃತ್ಯಗಳನ್ನು ನಡೆಸುತ್ತಲೇ ಬಂದಿದ್ದಾರೆ . ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರವೇ ಇರುವಾಗ ಬಿಜೆಪಿ ಹಾಗೂ ಬೆಂಬಲಿತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿರುವು ನಾಚಿಕೆಗೇಡಿನ ವಿಚಾರ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ ತಿಳಿಸಿದರು.ಉಳ್ಳಾಲದ ಕೊರಗಜ್ಜ -ಗುಳಿಗಜ್ಜ ಕಟ್ಟೆಯಲ್ಲಿ ಮತ್ತು ಕೊಣಾಜೆ ಮುಲಾರದ ಗೋಪಾಲಕೃಷ್ಣ ಮಂದಿರದಲ್ಲಿ ಹಿಂದೂ ದೈವ -ದೇವರ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ ಘಟನೆಯನ್ನು ಖಂಡಿಸಿ ಮತ್ತು ಆರೋಪಿಗಳನ್ನು ಶೀಘ್ರವೇ ಪೊಲೀಸ್ ಇಲಾಖೆ ಬಂಧಿಸುವಂತೆ ಆಉಗ್ರಹಿಸಿ ತೊಕ್ಕೊಟ್ಟು ಬಸ್ಸು ನಿಲ್ದಾಣದಲ್ಲಿ ಸೋಮವಾರ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.ತಮ್ಮದೇ ಕೈಯಲ್ಲಿ ಗೃಹ ಇಲಾಖೆ ಇರುವ ಸಂದರ್ಭದಲ್ಲೇ ಪ್ರತಿಭಟನೆಯನ್ನು ನಡೆಸುವಂತಹ ಬಿಜೆಪಿಯ ಸಂಘಪರಿವಾರ ಜನರನ್ನು ಧಿಕ್ಕು ತಪ್ಪಿಸುವ ಕಾರ್ಯವನ್ನು ಮಾಡುತ್ತಿವೆ. ಈ ಮೂಲಕ ಸಹೋದರತೆಯನ್ನು ಒಡೆಯುವ ಪ್ರಯತ್ನಗಳಾಗುತ್ತಿವೆ ಮಂಗಳೂರು ಕ್ಷೇತ್ರ ವ್ಯಾಪ್ತಿಯಲ್ಲಿ ದೈವ ದೇವಸ್ಥಾನಗಳಿಗೆ ಕಾಂಗ್ರೆಸ್ ಶಾಸಕರು ನೀಡಿದ ಕೊಡುಗೆ ಬಹಳಷ್ಟಿದೆ. ಜಾತ್ಯಾತೀತ ಮನೋಭಾವದ ಶಾಸಕರಿಂದ ಇದು ಸಾಧ್ಯವಾಗಿದೆ ಎಂದರು.ಉಳ್ಳಾಲ…
UN network s ತೊಕ್ಕೊಟ್ಟು: ವಿಹಿಂಪ ಬಜರಂಗದಳಕ್ಕೆ ತಾಕತ್ ಇದ್ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮನೆ ಎದುರುಗಡೆ ಪ್ರತಿಭಟನೆ ನಡೆಸಲಿ ಎಂದು ಇಂಟಕ್ ಮುಖಂಡ ದಿನಕರ್ ಶೆಟ್ಟಿ ತಿಳಿಸಿದ್ದಾರೆ. ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ತೊಕ್ಕೊಟ್ಟು ಜಂಕ್ಷನ್ ನಲ್ಲಿ ದುಷ್ಕೃತ್ಯ ಖಂಡಿಸಿ ನಡೆದಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಉಳ್ಳಾಲ ಕೊಣಾಜೆಯಲ್ಲಿ ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ದುಷ್ಕೃತ್ಯ ನಡೆಯುತ್ತಿದೆ.ಕೇಂದ್ರ ಮತ್ತು ರಾಜ್ಯದ ಗೃಹ ಇಲಾಖೆ ಬಿಜೆಪಿ ಕೈಯಲ್ಲಿದ್ದರೂ , ಅವರ ಅಂಗಸಂಸ್ಥೆಗಳಿಂದಲೇ ನಡೆಯುತ್ತಿರುವ ಪ್ರತಿಭಟನೆ ನಾಚಿಕೆಗೇಡು ತರುತ್ತಿದೆ ಎಂದು ಅವರು ತಿಳಿಸಿದರು.
UN networks ಉಳ್ಳಾಲ : ಉಳ್ಳಾಲ ಕೊರಗಜ್ಜ ಮತ್ತು ಗುಳಿಗಜ್ಜನ ಕಟ್ಟೆಯ ಕಾಣಿಕೆ ಹುಂಡಿಯಲ್ಲಿ ಅಶ್ಲೀಲ ವಸ್ತುಗಳನ್ನು ಹಾಕಿ ವಿಕೃತಿ ಮೆರೆದು ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ ಪ್ರಕರಣ ಖಂಡನೀಯವಾಗಿದ್ದು ಈ ಕೃತ್ಯವೆಸಗಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಡಿವೈಎಫ್ಐ ಉಳ್ಳಾಲ ವಲಯ ಸಮಿತಿಯ ನಿಯೋಗ ಭಾನುವಾರ ಉಳ್ಳಾಲ ಪೊಲೀಸ್ ಠಾಣೆಗೆ ತೆರಳಿ ಮನವಿ ಸಲ್ಲಿಸಿದರು. ಕಿಡಿಗೇಡಿಗಳ ಈ ಕೃತ್ಯದಿಂದ ಕೊರಗಜ್ಜ , ಗುಳಿಗಜ್ಜ ದೈವಗಳನ್ನು ಆರಾಧಿಸುವ ಭಕ್ತರ ಮನಸ್ಸಿಗೆ ಮತ್ತು ಧಾರ್ಮಿಕ ನಂಬಿಕೆಗಳನ್ನು ಗೌರವಿಸುವ ಜನಗಳ ಭಾವನೆಗಳಿಗೆ ಧಕ್ಕೆಯಾಗಿದೆ. ಕಿಡಿಗೇಡಿಗಳು ಸಮಾಜದಲ್ಲಿ ಧಾರ್ಮಿಕ ಸಂಘರ್ಷವನ್ನು ಹುಟ್ಟು ಹಾಕುವ ಉದ್ದೇಶದಿಂದ ಈ ಕೃತ್ಯವೆಸಗಿದ್ದಾರೆ. ಪೊಲೀಸ್ ಇಲಾಖೆ ಈ ಪ್ರದೇಶದಲ್ಲಿ ಕೋಮು ಉದ್ವಿಗ್ನತೆಗೆ ಕಾರಣವಾಗುತ್ತಿರುವ ವ್ಯಕ್ತಿಗಳು ಮತ್ತು ಸಂಘಟನೆಗಳ ಮೇಲೆ ನಿಗಾ ವಹಿಸುವಂತೆಯೂ ನಿಯೋಗ ಒತ್ತಾಯಿಸಿತು. ನಿಯೋಗದಲ್ಲಿ ಡಿವೈಎಫ್ಐ ಉಳ್ಳಾಲ ವಲಯ ಸಮಿತಿಯ ಅಧ್ಯಕ್ಷ ಅಶ್ರಫ್ ಕೆಸಿ ರೋಡ್, ಕಾರ್ಯದರ್ಶಿ ಸುನಿಲ್ ತೇವುಲ, ಉಪಾಧ್ಯಕ್ಷ ರಝಾಕ್ ಮೊಂಟೆಪದವು, ಜೊತೆ ಕಾರ್ಯದರ್ಶಿ…
UN networks ಉಳ್ಳಾಲ: ಕೋಟ್ಯಂತರ ಹಿಂದೂಗಳಿಗೆ ನವಚೈತನ್ಯ ಕೊಟ್ಟಂತಹ ಭಗವಧ್ವಜ , ದೇವರನ್ನು ಪೂಜಿಸುವ ಪವಿತ್ರ ಸ್ಥಳದಲ್ಲಿ ಹೊಲಸು ಮಾಡುತ್ತಾರೆಂದರೆ ಅವರು ಅಪ್ಪನಿಗೆ ಹುಟ್ಟಿದವರಲ್ಲ, ತಾಯಿಯನ್ನೂ ಬಿಡದ ಹಡಬೆ ಸಂತಾನದವರು ಎಂದು ಹಿಂದೂ ಜಾಗರಣಾ ವೇದಿಕೆಯ ಕೇಂದ್ರೀಯ ಮಂಡಳಿ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ ಹೇಳಿದರು. ಹಿಂದೂ ಜನಜಾಘರತಿ ಸಮಿತಿ ಕೊಣಾಜೆ ವತಿಯಿಂದ ಕೊಣಾಜೆ ಪರಿಸರದಲ್ಲಿ ಕಳೆದ ಕೆಲವು ಸಮಯಗಳಿಂದ ನಡೆಯುತ್ತಿರುವ ಹಿಂದೂ ವರೋಧಿ ಕೃತ್ಯ ಹಗೂ ಹಿಂದೂ ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸುತ್ತಿರುವ ವಿರುದ್ಧ ಕೊಣಾಜೆ ಪೊಲೀಸ್ ಠಾಣೆ ಮುಂದೆ ಭಾನುವಾರ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸುವ ವ್ಯವಸ್ಥೆ ನಿರಂತರವಾಗಿ ನಡೆಯುತ್ತಿದೆ. ಮತಾಂತರಿಗಳು ಬಹುಸಂಖ್ಯಾತರಾದ ಪ್ರದೇಶಗಳಲ್ಲಿ ಹಿಂದೂಗಳ ವಿರುದ್ಧ ನೀಚ ಕೃತ್ಯಗಳು ನಡೆಯುತ್ತಲೇ ಇದೆ. ಕೊಣಾಜೆಯಲ್ಲಿ ಕೃತ್ಯ ನಡೆಸಿದ ಆರೋಪಿಗಳನ್ನು ಬಂಧಿಸುವ ಮೂಲಕ ಕೃತ್ಯ ಎಸಗಿರುವವನ ಇತಿಹಾಸ ತಿಳಿಯಬೇಕಿದೆ. ಕ್ರೈಸ್ತ, ಮುಸ್ಲಿಂ, ಹಿಂದೂಗಳಿಗೆ ಹಾಲು ಕೊಡವುದು ಗೋವು. ಇಲ್ಲಿ ಗೋವು ಮಾತ್ರ ಸೆಕ್ಯುಲರಿಸಂ , ಉಳಿದದ್ದೆಲ್ಲಾ ಡೋಂಗಿ ಸೆಕ್ಯುಲರಿಸಂ.…
ತೊಕ್ಕೊಟ್ಟು : ಬುಲೆಟ್ – ಸ್ಕೂಟರ್ ಮುಖಾಮುಖಿಯಾಗಿಬುಲೆಟ್ ಸವಾರ ಗಂಭೀರ ಗಾಯಗೊಂಡಿರುವ ಘಟನೆ ತೊಕ್ಕೊಟ್ಟಿನಲ್ಲಿ ನಡೆದಿದೆ. ಗಾಯಾಳು ಸಹಾರಾ ಆಸ್ಪತ್ರೆಗೆ ದಾಖಲಾಗಿಸಲಾಗಿದ್ದು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

