Author: UllalaVani

Kannada News From Coastal Karnataka

UN networks ತೊಕ್ಕೊಟ್ಟು: ವಿವಾದಿತ ಬೀಫ್ ಸ್ಟಾಲ್ ಅಂಗಡಿಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ತೊಕ್ಕೊಟ್ಟು ಒಳಪೇಟೆಯಲ್ಲಿ ಶನಿವಾರ ನಡೆದಿದೆ. ಅಕ್ರಮ ಬೀಫ್ ಸ್ಟಾಲ್ ಎಂದು ಆರೋಪಿಸಿ ಉಳ್ಳಾಲದ ಬಜರಂಗದಳ- ವಿಹಿಂಪ ಇತ್ತೀಚೆಗೆ ತೆರವಿಗೆಪೊಲೀಸ್ ಇಲಾಖೆ ಮತ್ತು ಉಳ್ಳಾಲ ನಗರಸಭೆ ಪೌರಾಯುಕ್ತರಿಗೆ ಮನವಿ ನೀಡಿದ್ದರು.ಇದೀಗ ಎರಡು ಅಂಗಡಿಗಳಿಗೆ ಬೆಂಕಿ ಹಚ್ಚುವ ಕೆಲಸ ನಡೆದಿದ್ದು ಕೃತ್ಯದ ಹಿಂದಿನ ನಿಜವಾದ ಕಹಾನಿ ಇನ್ನಷ್ಟೇ ತಿಳಿದು ಬರಬೇಕಿದೆ.

Read More

UN networks ಕೊಣಾಜೆ: ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಚುನಾವಣೆ ಸ್ಪರ್ಧಿಸುತ್ತಿರುವ ನಲಪ್ಪಾಡ್ ಬೆಂಬಲಿಗರಿಂದ ಮಗುವಿನ ಅಪಹರಣ ಆರೋಪದ ಹಿನ್ನಲೆಯಲ್ಲಿ ಕೊಣಾಜೆ ಠಾಣೆಯಲ್ಲಿ ಯುವಕಾಂಗ್ರೆಸ್ ಬೆಂಬಲಿಗರು ಜಮಾಯಿಸುರುವ ಘಟನೆ ನಡೆದಿದೆ. ಯುವಕಾಂಗ್ರೆಸ್ ರಾಜ್ಯಾಧ್ಯಕ್ಷ ಹುದ್ದೆಗೆ ನಲಪ್ಪಾಡ್ ಹ್ಯಾರೀಸ್ ಪುತ್ರ ಮಹಮ್ಮದ್ ಹ್ಯಾರೀಸ್ ನಲಪ್ಪಾಡ್ ಸ್ಪರ್ಧಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿಮುಡಿಪು ಭಾಗಕ್ಕೆ ಯುವಕಾಂಗ್ರೆಸ್ ಚುನಾವಣೆ ಪ್ರಚಾರಕ್ಕೆ ಬೆಂಗಳೂರಿನ ಆಗಮಿಸಿದ್ದರು. ಈ ಬೆಂಬಲಿಗರಿಂದ ಮಗುವನ್ನು ಅಪಹರಿಸಲಾಗದೆ ಎಂದು ಸಾರ್ವಜನಿಕರಿಂದ ಅಪಹರಣ ಆರೋಪ ಕೇಳಿ ಬಂದಿದ್ದು ದೇರಳಕಟ್ಟೆ ಸಮೀಪ ಮಗುವಿಗೆ ನಲಪ್ಪಾಡ್ ಬೆಂಬಲಿಗರಿದ್ದ ವಾಹನ ಅಪಘಾತವಾಗಿದೆ .ಇದನ್ನು ಖಂಡಿಸಿ ಕೊಣಾಜೆ ಠಾಣೆಯಲ್ಲಿ ಯುವ ಕಾಂಗ್ರೆಸ್ ಬೆಂಬಲಿಗರು ಜಮಾಯಿಸಿದ್ದಾದಾದ

Read More

UN networks ಉಳ್ಳಾಲ: ಟೈ¯ರ್ ವೃತ್ತಿ ಮುಗಿಸಿಕೊಂಡು ಮನೆಗೆ ಹಿಂತಿರುಗಿದ್ದ ಮಹಿಳೆ ತಲೆಗೆ ಗಂಭೀರ ಗಾಯಗೊಂಡಿದ್ದು, ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಘಟನೆಗೆ ಕಾರಣ ನಿಗೂಢವಾಗಿದ್ದು, ಮಹಿಳೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಮಾತನಾಡದ ಸ್ಥಿತಿಯಲ್ಲಿದ್ದಾರೆ. ತೊಕ್ಕೊಟ್ಟು ಬಸ್ ನಿಲ್ದಾಣದ ಬಳಿಯ ಮಿರಾಕಲ್ ಟೈಲರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅಂಬ್ಲಮೊಗರುವಿನ ಮದಕ ಸಮೀಪದ ತಾರಿಗುಡ್ಡೆ ನಿವಾಸಿ ದಿನೇಶ್ ಎಂಬವರ ಪತ್ನಿ ಶೋಭಾ (30) ಸ್ಥಿತಿ ಗಂಭೀರವಾಗಿದೆ. ಜ.5 ರಂದು ತೊಕ್ಕೊಟ್ಟುವಿನಿಂದ ಬಸ್ಸಿನಲ್ಲಿ ಹೊರಟವರು ಮನೆಗೆ ಸೇರಿರಲಿಲ್ಲ. ಮನೆಮಂದಿಗೆ ಶೋಭಾ ಅವರು ಆಸ್ಪತ್ರೆಗೆ ದಾಖಲಾಗಿರುವ ಕುರಿತು ಆಸ್ಪತ್ರೆಯಿಂದಲೇ ಮಾಹಿತಿ ಬಂದಿತ್ತು. ಶೋಭಾ ಅವರ ಬಳಿಯಿದ್ದ ಐಡಿ ಕಾರ್ಡಿನಲ್ಲಿದ್ದ ವಿಳಾಸದ ಮೂಲಕ ಮನೆಮಂದಿಗೆ ಮಾಹಿತಿ ನೀಡಲಾಗಿತ್ತು. ಮನೆಮಂದಿ ಆಸ್ಪತ್ರೆಗೆ ಬರುವಷ್ಟರಲ್ಲಿ ಶೋಭಾ ಅವರು ಮಾತನಾಡದ ಸ್ಥಿತಿಯಲ್ಲಿದ್ದಾರೆ. ಈ ಕುರಿತು ಆಸ್ಪತ್ರೆ ಮಂದಿಯಲ್ಲಿ ವಿಚಾರಿಸಿದಾಗ ರಿಕ್ಷಾ ಚಾಲಕನೊಬ್ಬ ಗಾಯಾಳು ಮಹಿಳೆಯನ್ನು ತಂದು ಆಸ್ಪತ್ರೆ ತುರ್ತು ನಿಗಾ ಘಟಕದ ಎದುರು ಕುಳ್ಳಿರಿಸಿ ಅಲ್ಲಿಂದ ಕಣ್ಮರೆಯಾಗಿದ್ದಾನೆ. ಶೋಭಾ…

Read More

UNN special ಸಾಧನೆ ಎಂಬ ಹಾದಿಯಲ್ಲಿ ಛಲದ ಜೊತೆ ಪರಿಶ್ರಮದಿಂದ ನಡೆದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಇದಕ್ಕೆ ಉದಾಹರಣೆ ಎಂಬಂತೆ ವಿವಿಧ ಕ್ಷೇತ್ರಗಳಲ್ಲಿ ಹಲವು ರೀತಿಯಲ್ಲಿ ಸಾಧನೆ ಮಾಡಿದ ಸಾಧಕರನ್ನು ನಾವು ಕಾಣುತ್ತೇವೆ. ಏನಾದರೂ ಸಾಧಿಸಬೇಕು ಅಪ್ಪನ ಕನಸ್ಸನ್ನು ನನಸು ಮಾಡಬೇಕು ಎಂದು ಸಂಗೀತ ಕ್ಷೇತ್ರದಲ್ಲಿ ಹೆಜ್ಜೆ ಹಾಕುತ್ತಿರುವ ಪೋರಿತಬಲಾ ಕ್ಷೇತ್ರದಲ್ಲಿ ಕೊಲ್ಕತ್ತಾದ `ಸುನಂದ ಭಾರತ’ ಲಲಿತ ಕಲಾ ಸಂಸ್ಥೆಯ ನಂದನ್ ಶ್ರೀ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದ ಕರ್ನಾಟಕದ ಮೊದಲ ತಬಲಾ ಕಲಾವಿದೆಯಾದ ಹಿಮಾಂಗಿ ಡಿ.ಉಳ್ಳಾಲ್. ತಬಲಾ ಕಲಾವಿದ ದೀಪಕ್ ರಾಜ್ ಉಳ್ಳಾಲ್ ಹಾಗೂ ಧನಲಕ್ಮ್ಷಿ ಡಿ ಉಳ್ಳಾಲ್ ಅವರ ಏಕೈಕ ಪುತ್ರಿ. ಹುಟ್ಟೂರು ಉಳ್ಳಾಲದ ಮೋಗವೀರಪಟ್ನವಾದರೂ ಪ್ರಸ್ತುತ ಸುರತ್ಕಲ್ ನಲ್ಲಿ ವಾಸವಾಗಿದ್ದಾರೆ. ಸುರತ್ಕಲ್ ನ ಖಿಲಾರಿಯಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹತ್ತನೆ ತರಗತಿ ವ್ಯಾಸಂಗ ಮಾಡುತ್ತಿರುವ ಹಿಮಾಂಗಿ ಸಂಗೀತ ಕ್ಷೇತ್ರದ ಸಾಧನೆಯ ಜೊತೆಗೆ ಕಲಿಕೆಯಲ್ಲೂ ಉನ್ನತ ಶ್ರೇಣಿ ಪಡೆಯುತ್ತಿದ್ದಾರೆ. ಜೊತೆಗೆ ಸಂಗೀತ, ನೃತ್ಯ, ಚಿತ್ರಕಲೆ, ಭಗವದ್ಗೀತೆ ಕಠಪಾಠಗಳಲ್ಲಿಯೂ ಎತ್ತಿದ ಕೈ.…

Read More

UN networks ಉಳ್ಳಾಲ: ಉಳ್ಳಾಲ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಬಸ್ ನಿಲ್ದಾಣದಲ್ಲಿ ತಡರಾತ್ರಿ ಪಾರ್ಟಿ ಮಾಡುತ್ತಿದ್ದ ಆರು ಮಂದಿ ಯುವಕರನ್ನು ತರಾಟೆಗೆ ತೆಗೆದುಕೊಂಡಿರುವ ನೂತನ ಕಮೀಷನರ್ ಶಶಿ ಕುಮಾರ್ ಅವರ ವಿರುದ್ಧ ಕೇಸು ದಾಖಲಿಸಿ ಎಚ್ಚರಿಕೆ ನೀಡಿ ಬಿಟ್ಟಿದ್ದಾರೆ. ಕಮೀಷನರ್ ಅಧಿಕಾರ ಸ್ವೀಕರಿಸಿದ್ದ ಎರಡೇ ದಿನದಲ್ಲಿ ತಡರಾತ್ರಿ ಅವಶ್ಯಕತೆಯಿಲ್ಲದೆ ತಿರುಗಾಡುವವರನ್ನು, ಬೀದಿಬದಿ ಕುಳಿತುಕೊಳ್ಳುವವರಿಗೆ ಎಚ್ಚರಿಕೆ ನೀಡಿದ್ದರು. ಅಲ್ಲದೆ ಮಂಗಳೂರು ನಗರದಲ್ಲಿ ಕುಳಿತವರ ವಿರುದ್ಧ ಕ್ರಮ ತೆಗೆದುಕೊಂಡು ಕಮೀಷನರೇಟ್ ವ್ಯಾಪ್ತಿಯಲ್ಲಿ ಎಲ್ಲಿಯೂ ತಡರಾತ್ರಿ ಅಡ್ಡಾಡುವುದು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆಯನ್ನು ನೀಡಿದ್ದರು. ಆದರೆ ಮಂಗಳವಾರ ತಡರಾತ್ರಿ ವೇಳೆ ರಾ.ಹೆ.66ರ ಉಚ್ಚಿಲ ಬಸ್ ನಿಲ್ದಾಣದಲ್ಲಿ , ಉಚ್ಚಿಲ ಆಸುಪಾಸಿನ ಆರು ಮಂದಿ ಯುವಕರು ಮದ್ಯ ಪಾರ್ಟಿ ನಡೆಸುತ್ತಿದ್ದರು. ರೌಂಡ್ಸ್ ನಲ್ಲಿದ್ದ ಕಮೀಷನರ್ ಬಸ್ ನಿಲ್ದಾಣಕ್ಕೆ ದಾಳಿ ನಡೆಸಿ , ಆರು ಮಂದಿ ಯುವಕರನ್ನು ಉಳ್ಳಾಲ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

Read More

UN networks ಬೆಂಗಳೂರು: ಬಜಾಜ್ ಫೈನಾನ್ಸ್ ಗೆ ಸುಮಾರು 2.5 ಕೋಟಿ ರೂ ದಂಡವನ್ನು ಆರ್ ಬಿ ಐ ವಿಧಿಸಿದೆ . ಪ್ರತಿ ನಿತ್ಯಗ್ರಾಹಕರಿಂದ ಸಾಲವನ್ನು ವಸೂಲಿ ಮಾಡಲು ಬಲವಂತದ ವಿಧಾನಗಳನ್ನು ಅನುಸರಿದ್ದಕ್ಕಾಗಿ ಹಾಗೂ ಸಾಮಾನ್ಯ ಮಾರ್ಗಸೂಚಿಗಳ ಉಲ್ಲಂಘನೆಯಿಂದಾಗಿ ರಿಸರ್ವ್‌ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಬಜಾಜ್‌ ಫೈನಾನ್ಸ್‌ಗೆ 2.50 ಕೋಟಿ ರೂ. ದಂಡ ವಿಧಿಸಿದೆ. ಬಜಾಜ್ ಫೈನಾನ್ಸ್ ಸಾಲ ವಸೂಲಾತಿಗಾಗಿ ರಿಕವರಿ ಎಜೆಂಟ್ ಗಳನ್ನು ನೇಮಿಸಿದೆ ಅವರು ಪದೇ ಪದೇ ಕರೆ ಮಾಡಿ ಮಾನಸಿಕ ಕಿರುಕುಳ , ಮನೆಗೆ ಬಂದು ,ಬೇರೆಯವರ ಮುಖಾಂತರ ಅವಮಾನ ಮಾಡಿ ದೌರ್ಜನ್ಯ ಎಸಗುವ ಕೆಲಸ ಬಜಾಜ್ ಸಂಸ್ಥೆಯಿಂದ ನಡೆಯುತ್ತಿದೆ. ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿ) ಅನ್ವಯವಾಗುವ ನ್ಯಾಯಯುತವಾದ ನಿಯಮಗಳನ್ನು ಮತ್ತು ನೀತಿ ಸಂಹಿತೆಯನ್ನು ನಿರ್ವಹಿಸುವ ನಿರ್ದೇಶನಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಆರ್‌ಬಿಐ ಈ ದಂಡ ವಿಧಿಸಿದೆ. ಇದಲ್ಲದೆ, ಬಜಾಜ್ ಫೈನಾನ್ಸ್ ಸಹ ಪತ್ರ ಮತ್ತು ಉತ್ಸಾಹದಲ್ಲಿ ಎಫ್‌ಪಿಸಿಯೊಂದಿಗೆ ಸಂಪೂರ್ಣ ಅನುಸರಣೆ ಖಚಿತಪಡಿಸಿಕೊಳ್ಳಲು ನಿರ್ದಿಷ್ಟ ನಿರ್ದೇಶನವನ್ನು…

Read More

UN networks ಹರೇಕಳ: ಹರೇಕಳ ಗ್ರಾಮದ ಎಲ್ಯಾರ್ ಪದವಿನಲ್ಲಿರುವ ಖಾಸಗಿ ರೆಸಾರ್ಟ್ ನವರು ಮುಖ್ಯ ರಸ್ತೆಯ ಬದಿಯಲ್ಲಿರುವ ಚರಂಡಿಯನ್ನು ಅತಿಕ್ರಮಿಸಿ ಕಾಂಪೌಂಡ್ ಕಟ್ಟಿದ್ದು ಕೂಡಲೇ ಇದನ್ನು ತೆರವುಗೊಳಿಸಲು ಮುಂದಾಗುವಂತೆ ಡಿವೈಎಫ್ಐ ಹರೇಕಳ ಗ್ರಾಮ ಸಮಿತಿ ಒತ್ತಾಯಿಸಿದೆ. ಹರೇಕಳ – ಕುತ್ತಾರು ನಡುವೆ ಸಂಪರ್ಕ ಕಲ್ಪಿಸುವ ರಸ್ತೆಯು ಕಿರಿದಾಗಿದ್ದು ತಿರುವುಗಳಿಂದ ಕೂಡಿರುವುದಾಗಿದೆ. ಎಲ್ಯಾರ್ ಪದವಿನಲ್ಲಿರುವ ಈ ಖಾಸಗಿ ರೆಸಾರ್ಟ್ ಮಾಲೀಕರು ರಸ್ತೆಯ ಪಕ್ಕದಲ್ಲೇ ಗುಂಡಿ ತೋಡಿ ಅಲ್ಲಿ ಸಿಮೆಂಟ್ ಕಂಬಗಳನ್ನು ನೆಟ್ಟು ಕಾಂಪೌಂಡ್ ನಿರ್ಮಿಸಿದ್ದಾರೆ. ಇದರಿಂದಾಗಿ ಇಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ಪಾದಾಚಾರಿಗಳಿಗೆ ತೊಂದರೆ ಆಗಲಿದೆ. ಅದೂ ಅಲ್ಲದೇ ರಸ್ತೆ ಬದಿಯಲ್ಲಿದ್ದ ಚರಂಡಿ ಒಳಗೆ ಬರುವಂತೆ ಅತಿಕ್ರಮಣ ಮಾಡಿಕೊಂಡು ಕಾಂಪೌಂಡ್ ಕಟ್ಟಲಾಗಿದ್ದು ಪ್ರಭಾವಿಗಳ ಈ ಭೂ ಅತಿಕ್ರಮಣ ಪಂಚಾಯತ್ ಅಧಿಕಾರಿಗಳು ಕಂಡೂ ಕಾಣದಂತೆ ಕಣ್ಣುಮುಚ್ಚಿ ಕುಳಿತಿದ್ದಾರೆ. ಡಿವೈಎಪ್ಐ ಹರೇಕಳ ಗ್ರಾಮ ಸಮಿತಿ ಇಂತಹ ಕೃತ್ಯವನ್ನು ಖಂಡಿಸುತ್ತಿದ್ದು ಪಂಚಾಯತ್ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಈ ಕಾಂಪೌಂಡ್ ತೆರವುಗೊಳಿಸಲು ಮುಂದಾಗಬೇಕು. ಪ್ರಭಾವಿಗಳ…

Read More

UN networks ಮಂಜನಾಡಿ: ಮಂಜನಾಡಿ ಗ್ರಾಮದ ಅರಂತಾಡಿ ಬಳಿ ಸುಮಾರು 6 ಕ್ಕೂ ಅಧಿಕ ಕಾಗೆಗಳ ನಿಗೂಢವಾಗಿ ಸತ್ತುಬಿದ್ದಿರುವ ಬಗ್ಗೆ ವರದಿಯಾಗಿದೆ. ಹಕ್ಕಿಜ್ವರ ಸಾಧ್ಯತೆ ಹಿನ್ನೆಲೆಯಲ್ಲಿ ಕಾಗೆಗಳು ಸತ್ತು ಬಿದ್ದಿರುವ ಸಾಧ್ಯತೆ ಗಳು ಇದೆ ಎಂದು ಸಹಾಯಕ ಆಯುಕ್ತರು, ಪಶುವೈದ್ಯರಿಗೆ ವರದಿ ನೀಡಲಾಗಿದೆ.ಸ್ಥಳಕ್ಕೆ ಭೇಟಿ ನೀಡಿದ ಪರಿಶೀಲನೆ ನಡೆಸಿದ ಪಂಚಾಯಿತಿ ಪಿಡಿಓ ಮಂಜಪ್ಪ ಹಾಗೂ ಗ್ರಾಮಕರಣಿರಿಂದ ವರದಿ ಸಲ್ಲಿಕೆಯಾಗಿದೆ‌

Read More

UN networks ಉಳ್ಳಾಲ: ‌ಸಾಂಪ್ರದಾಯಿಕ ಉಡುಗೆ ತೊಟ್ಟಲ್ಲಿ ಮಾತ್ರ ದೇವಸ್ಥಾನಕ್ಕೆ ಇನ್ಮುಂದೆ ಪ್ರವೇಶ. ಇದುಉಳ್ಳಾಲದಾದ್ಯಂತ ದೇವಸ್ಥಾನಗಳಲ್ಲಿ ಬಜರಂಗದಳ- ವಿ.ಹಿಂ.ಪ ದೇವಸ್ಥಾನ ಆವರಣದಲ್ಲಿ ಹಾಕಿರುವ ಪೋಸ್ಟರ್ ಗಳಲ್ಲಿ ಎಚ್ಚರಿಕೆಯ ಸಂದೇಶ. ಉಳ್ಳಾಲದ ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೇವಸ್ಥಾನ, ದೇರಳಕಟ್ಟೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಹೀಗೆ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ಪೋಸ್ಟರ್ ಅನ್ನು ಅಳವಡಿಸಲಾಗಿದೆ. ಬೇಕಾಬಿಟ್ಟಿ ಬಟ್ಟೆ ತೊಟ್ಟು ದೇವಸ್ಥಾನಕ್ಕೆ ಬರುವ ಮೂಲಕ ದೇವಸ್ಥಾನ ದ ಪಾವಿತ್ರ್ಯತೆಗೆ ಧಕ್ಕೆಯಾಗುತ್ತಿದ್ದು . ಇದರಿಂದ ದೇವಸ್ಥಾನದೊಳಗೆ ಶ್ರದ್ಧೆ ಭಕ್ತಿಯ ವಾತಾವರಣವೂ ಇರುವುದಿಲ್ಲ. ಅದಕ್ಕಾಗಿ ಎಚ್ಚರಿಕೆಯ ಬ್ಯಾನರನ್ನು ಅಳವಡಿಸಲಾಗಿದೆ.

Read More

UN networks ಉಳ್ಳಾಲ: ಅಬ್ಬಕ್ಕ ಭವನಕ್ಕೆ ತಾಗಿಕೊಂಡು ಬ್ಯಾರಿ ಭವನ ಖಂಡಿತಾ ಬೇಡ. ಉಳ್ಳಾಲ ಅನ್ನುವುದು ಅತಿಸೂಕ್ಷ್ಮ ಪ್ರದೇಶ. ಸಣ್ಣ ಹುಡುಗ ಕಲ್ಲು ಬಿಸಾಡಿದರೂ ಗಲಭೆ ನಡೆಯುವಂತಹ ಸ್ಥಳ. ಇಂತಹ ವಾತಾವರಣ ಇರುವ ಸಂದರ್ಭ ವಿಭಿನ್ನ ವ್ಯವಸ್ಥೆಗಳ ಭವನ ಒಟ್ಟೊಟ್ಟಿಗೆ ಆದಲ್ಲಿ ಮುಂದಿನ ದಿನದಲ್ಲಿ ಬಹಳಷ್ಟು ತೊಂದರೆಯಾಗಲಿದೆ ಎಂದು ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಗೌರವಾಧ್ಯಕ್ಷ ಹಾಗೂ ಮಾಜಿ ಶಾಸಕ ಜಯರಾಮ ಶೆಟ್ಟಿ ಹೇಳಿದರು. ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ಶಿಲನ್ಯಾಸ ನೆರವೇರಿ 9 ವರ್ಷಗಳಾದರೂ ಇನ್ನೂ ನಿರ್ಮಾಣವಾಗದ ಅಬ್ಬಕ್ಕ ಭವನದ ಕಾಮಗಾರಿ ಶೀಘ್ರವೇ ಆರಂಭಿಸುವಂತೆ ಹಾಗೂ ಸಮೀಪದಲ್ಲೇ ಬ್ಯಾರಿ ಭವನ ನಿರ್ಮಾಣಕ್ಕೆ ಮುಂದಾಗಿರುವುದನ್ನು ವಿರೋಧಿಸಿ ತೊಕ್ಕೊಟ್ಟು ಹೊಸ ಬಸ್ಸು ನಿಲ್ದಾಣ ಬಳಿ ಅಬ್ಬಕ್ಕ ಭವನಕ್ಕೆ ಮೀಸಲಿಟ್ಟ ಪ್ರದೇಶದಲ್ಲಿ ಶುಕ್ರವಾರ ಹಮ್ಮಿಕೊಂಡ ಮೌನ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಬ್ಯಾರಿ ಭವನಕ್ಕೆ ವಿರೋಧವಿಲ್ಲ. ಅರ್ಧ ಕಿ.ಮೀ ದೂರದಲ್ಲಾದರೂ ನಿರ್ಮಿಸಲಿ. ಕಲ್ಲಾಪು, ಉಳ್ಳಾಲ, ಕೋಡಿ ಭಾಗಗಳಲ್ಲಿ ನಿರ್ಮಿಸಲಿ. ಆಧರೆ 9 ವರ್ಷದ…

Read More